ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bi7 ಪು. 604-605
  • 3 ಯೇಸು—ದೇವಸದೃಶನು; ದಿವ್ಯನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 3 ಯೇಸು—ದೇವಸದೃಶನು; ದಿವ್ಯನು
  • ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
3 ಯೇಸು—ದೇವಸದೃಶನು; ದಿವ್ಯನು

3 ಯೇಸು—ದೇವಸದೃಶನು; ದಿವ್ಯನು

ಯೋಹಾನ 1:1—“ಆ ವಾಕ್ಯವೆಂಬವನು ಒಬ್ಬ ದೇವನಾಗಿದ್ದನು (ದೇವಸದೃಶನು; ದಿವ್ಯನು)”

ಗ್ರೀಕ್‌, καὶ θεὸς ἦν ὁ λόγος (ಕಾಯ್‌ ಥಿಯಾಸ್‌ ಎನ್‌ ಹೊ ಲೋಗೋಸ್‌)

1808

“ಮತ್ತು ಆ ವಾಕ್ಯವು ಒಬ್ಬ ದೇವನಾಗಿದ್ದನು”

The New Testament, in An Improved Version, Upon the Basis of Archbishop Newcome’s New Translation: With a Corrected Text, London.

1829

“ಮತ್ತು ಲೋಗೋಸ್‌ ಒಬ್ಬ ದೇವನಾಗಿದ್ದನು”

The Monotessaron; or, The Gospel History, According to the Four Evangelists, Vol. 1, by John S. Thompson, Baltimore.

1864

“ಮತ್ತು ಒಬ್ಬ ದೇವನು ವಾಕ್ಯವಾಗಿದ್ದನು”

The Emphatic Diaglott (J21, interlinear reading), by Benjamin Wilson, New York and London.

1879

“ಮತ್ತು ಆ ವಾಕ್ಯವು ಒಬ್ಬ ದೇವನಾಗಿದ್ದನು”a

La Sainte Bible, Segond-Oltramare, Geneva and Paris.

1928

“ಮತ್ತು ಆ ವಾಕ್ಯವು ಒಬ್ಬ ದಿವ್ಯ ಜೀವಿಯಾಗಿದ್ದನು”b

La Bible du Centenaire, Société Biblique de Paris.

1935

“ಮತ್ತು ಆ ವಾಕ್ಯವು ದಿವ್ಯವಾಗಿತ್ತು”

The Bible—An American Translation, by J. M. P. Smith and E. J. Goodspeed, Chicago.

1950

“ಆ ವಾಕ್ಯವೆಂಬವನು ಒಬ್ಬ ದೇವನಾಗಿದ್ದನು”

New World Translation of the Christian Greek Scriptures, Brooklyn.

1975

“ಮತ್ತು ಒಬ್ಬ ದೇವನು (ಅಥವಾ, ದೈವಿಕ ಬಗೆಯವನು) ವಾಕ್ಯವಾಗಿದ್ದನು”c

Das Evangelium nach Johannes, by Siegfried Schulz, Göttingen, Germany.

1978

“ಮತ್ತು ಲೋಗೋಸ್‌ ದೇವಸದೃಶ ವರ್ಗದವನಾಗಿದ್ದನು”d

Das Evangelium nach Johannes, by Johannes Schneider, Berlin.

1979

“ಮತ್ತು ಒಬ್ಬ ದೇವನು ಲೋಗೋಸ್‌ ಆಗಿದ್ದನು”e

Das Evangelium nach Johannes, by Jürgen Becker, Würzburg, Germany.

ಈ ಇಂಗ್ಲಿಷ್‌, ಜರ್ಮನ್‌ ಮತ್ತು ಫ್ರೆಂಚ್‌ ಭಾಷಾಂತರಗಳು “ಒಬ್ಬ ದೇವನು,” “ದಿವ್ಯ” ಅಥವಾ “ದೇವಸದೃಶ” ಎಂಬ ಪದಗಳನ್ನು ಬಳಸಲು ಕಾರಣವೇನೆಂದರೆ, θεός (ಥಿಯಾಸ್‌) ಎಂಬ ಗ್ರೀಕ್‌ ಪದವು ಕ್ರಿಯಾಪದಕ್ಕೆ ಮುಂಚೆ ಬರುವಂಥ ಏಕವಚನ ಅಖ್ಯಾತ ನಾಮಪದವಾಗಿದೆ ಮತ್ತು ಅದಕ್ಕೆ ಮುಂಚೆ ಒಂದು ನಿರ್ದೇಶಕ ಗುಣವಾಚಿಯು ಇರುವುದಿಲ್ಲ. ಇದು ನಿರ್ದೇಶಕವಾಚಿ ಇಲ್ಲದಿರುವಂಥ ಥಿಯಾಸ್‌ ಆಗಿದೆ. ಮೂಲತಃ ವಾಕ್ಯ ಅಥವಾ ಲೋಗೋಸ್‌ ಯಾರೊಂದಿಗೆ ಇದ್ದನೋ ಆ ದೇವರು ಇಲ್ಲಿ ὁ θεός ಎಂಬ ಗ್ರೀಕ್‌ ಅಭಿವ್ಯಕ್ತಿಯಿಂದ ಸೂಚಿಸಲ್ಪಟ್ಟಿದ್ದಾನೆ, ಅಂದರೆ ಥಿಯಾಸ್‌ ಎಂಬ ಪದಕ್ಕೆ ಮುಂಚೆ ಹೊ ಎಂಬ ನಿರ್ದೇಶಕ ಗುಣವಾಚಿ ಇದೆ. ಇದು ಒಂದು ಗುಣವಾಚೀ ಥಿಯಾಸ್‌ ಆಗಿದೆ. ಈ ನಾಮಪದದ ಗುಣವಾಚೀ ರಚನೆಯು ಒಂದು ಗುರುತನ್ನು, ಒಂದು ವ್ಯಕ್ತಿತ್ವವನ್ನು ಸೂಚಿಸುವಾಗ ಕ್ರಿಯಾಪದದ ಮುಂಚೆ ಇರುವ ಏಕವಚನದ ನಿರ್ದೇಶಕವಾಚಿ ಇಲ್ಲದ ಅಖ್ಯಾತ ನಾಮಪದವು ಒಬ್ಬನ ಗುಣವನ್ನು ಸೂಚಿಸುತ್ತದೆ. ಆದುದರಿಂದ, ವಾಕ್ಯ ಅಥವಾ ಲೋಗೋಸ್‌ ಎಂಬವನು ‘ಒಬ್ಬ ದೇವನಾಗಿದ್ದನು’ (a god) ಅಥವಾ ‘ದಿವ್ಯನಾಗಿದ್ದನು’ ಇಲ್ಲವೆ ‘ದೇವಸದೃಶನಾಗಿದ್ದನು’ ಎಂಬ ಯೋಹಾನನ ಹೇಳಿಕೆಯು, ವಾಕ್ಯವೆಂಬವನು ಯಾರೊಂದಿಗೆ ಇದ್ದನೋ ಆ ದೇವರು (the God) ಅವನೇ ಆಗಿದ್ದನು ಎಂಬ ಅರ್ಥವನ್ನು ಕೊಡುವುದಿಲ್ಲ. ಅದು ‘ವಾಕ್ಯ’ ಅಥವಾ ‘ಲೋಗೋಸ್‌’ ಎಂಬವನ ನಿರ್ದಿಷ್ಟ ಗುಣವನ್ನು ವ್ಯಕ್ತಪಡಿಸುತ್ತದೆಯೇ ಹೊರತು ಅವನೂ ದೇವರೂ ಒಂದೇ ಆಗಿದ್ದಾರೆ ಎಂಬುದಾಗಿ ಗುರುತಿಸುವುದಿಲ್ಲ.

ಗ್ರೀಕ್‌ ಗ್ರಂಥಪಾಠದಲ್ಲಿ, ಕ್ರಿಯಾಪದಕ್ಕೆ ಮುಂಚೆ ಬರುವ ನಿರ್ದೇಶಕವಾಚಿ ಇಲ್ಲದ ಏಕವಚನ ಅಖ್ಯಾತ ನಾಮಪದವು ಇರುವಂಥ ಅನೇಕ ವಚನಗಳಿವೆ. ಇಂಥ ಸ್ಥಳಗಳಲ್ಲಿ ಅಖ್ಯಾತ ನಾಮಪದಕ್ಕೆ ಮುಂಚೆ ಅನಿರ್ದೇಶಕ ಗುಣವಾಚಿಯು ಸೇರಿಸಲ್ಪಟ್ಟಿರುವುದರಿಂದ, ಯೋಹಾನ 1:1 ರಲ್ಲಿ ‘ಒಬ್ಬ ದೇವನು’ ಎಂದು ಓದಲ್ಪಡುವಂತೆ ಅಲ್ಲಿ ಕಂಡುಬರುವ ನಿರ್ದೇಶಕವಾಚಿ ಇಲ್ಲದ θεόςಗೆ ಮುಂಚೆ “ಒಬ್ಬ” ಎಂಬ ಅನಿರ್ದೇಶಕ ಗುಣವಾಚಿಯು ಸೇರಿಸಲ್ಪಟ್ಟಿರುವುದು ಸಮರ್ಥನೀಯವಾಗಿದೆ. ಪವಿತ್ರ ಶಾಸ್ತ್ರಗ್ರಂಥವು ಈ ತರ್ಜುಮೆಯ ಯಥಾರ್ಥತೆಯನ್ನು ದೃಢಪಡಿಸುತ್ತದೆ.

ಇಸವಿ 1973ರಲ್ಲಿ ಫಿಲಡೆಲ್ಫಿಯದ ಜರ್ನಲ್‌ ಆಫ್‌ ಬಿಬ್ಲಿಕಲ್‌ ಲಿಟ್‌ರೇಚರ್‌ನ ಸಂಪುಟ 92, ಪುಟ 85ರಲ್ಲಿ ಪ್ರಕಟಿಸಲ್ಪಟ್ಟಿರುವ “ಗುಣಾತ್ಮಕ ನಿರ್ದೇಶಕವಾಚಿ ಇಲ್ಲದ ಅಖ್ಯಾತ ನಾಮಪದ: ಮಾರ್ಕ 15:39 ಮತ್ತು ಯೋಹಾನ 1:1” ಎಂಬ ತಮ್ಮ ಲೇಖನದಲ್ಲಿ ಫಿಲಿಪ್‌ ಬಿ. ಹಾರ್ನರ್‌ ಎಂಬವರು ಹೇಳಿದ್ದೇನೆಂದರೆ, ಯೋಹಾನ 1:1 ರಲ್ಲಿ ಇರುವಂಥ ಉಪವಾಕ್ಯಗಳು “ಕ್ರಿಯಾಪದಕ್ಕೆ ಮುಂಚೆ ಬರುವ ನಿರ್ದೇಶಕವಾಚಿ ಇಲ್ಲದ ಅಖ್ಯಾತ ಪದವುಳ್ಳವುಗಳಾಗಿರುವುದರಿಂದ ಇವು ಪ್ರಧಾನವಾಗಿ ಗುಣಾತ್ಮಕ ಅರ್ಥವುಳ್ಳವುಗಳಾಗಿವೆ. ಇವು ಲೋಗೋಸ್‌ಗೆ ಥಿಯಾಸ್‌ನ ಗುಣಲಕ್ಷಣಗಳಿವೆ ಎಂಬುದನ್ನು ಸೂಚಿಸುತ್ತವೆ. ಅಖ್ಯಾತ ಥಿಯಾಸ್‌ ಪದವನ್ನು ನಿರ್ದೇಶಕ ಗುಣವಾಚಿಯಾಗಿ ಪರಿಗಣಿಸಲು ಯಾವುದೇ ಆಧಾರವಿಲ್ಲ.” ತಮ್ಮ ಲೇಖನದ 87ನೆಯ ಪುಟದಲ್ಲಿ ಹಾರ್ನರ್‌, “ಯೋಹಾನ 1:1 ರಲ್ಲಿ ಅಖ್ಯಾತ ಪದದ ಗುಣಾತ್ಮಕ ಒತ್ತು ಎಷ್ಟು ಎದ್ದುಕಾಣುತ್ತದೆಂದರೆ, ಆ ನಾಮಪದವನ್ನು ನಿರ್ದೇಶಕ ಗುಣವಾಚಿಯಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಮುಕ್ತಾಯಗೊಳಿಸಿದರು.

a ಫ್ರೆಂಚ್‌ ಭಾಷೆಯಿಂದ ಭಾಷಾಂತರಿಸಲ್ಪಟ್ಟದ್ದು.

b ಫ್ರೆಂಚ್‌ ಭಾಷೆಯಿಂದ ಭಾಷಾಂತರಿಸಲ್ಪಟ್ಟದ್ದು.

c ಜರ್ಮನ್‌ ಭಾಷೆಯಿಂದ ಭಾಷಾಂತರಿಸಲ್ಪಟ್ಟದ್ದು.

d ಜರ್ಮನ್‌ ಭಾಷೆಯಿಂದ ಭಾಷಾಂತರಿಸಲ್ಪಟ್ಟದ್ದು.

e ಜರ್ಮನ್‌ ಭಾಷೆಯಿಂದ ಭಾಷಾಂತರಿಸಲ್ಪಟ್ಟದ್ದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ