2 ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ ದೇವರ ಹೆಸರನ್ನು ಪುನಸ್ಸ್ಥಾಪಿಸುವುದು
“ಯೆಹೋವ.” ಹೀಬ್ರು, יהוה (YHWH ಅಥವಾ JHVH)
ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದ ಮುಖ್ಯ ಗ್ರಂಥಪಾಠದಲ್ಲಿ “ಯೆಹೋವ” ಎಂಬ ಹೆಸರು ಪುನಸ್ಸ್ಥಾಪಿಸಲ್ಪಟ್ಟಿರುವ 237 ಸ್ಥಳಗಳ ಒಂದು ಪಟ್ಟಿಯು ಇಲ್ಲಿ ಕೊಡಲ್ಪಟ್ಟಿದೆ. ಆಧಾರಕ್ಕಾಗಿ NW ರೆಫರೆನ್ಸ್ ಬೈಬಲ್ನ ಪುಟ 1565, 1566ನ್ನು ನೋಡಿ.
ಮತ್ತಾಯ 1:20, 22, 24; 2:13, 15, 19; 3:3; 4:4, 7, 10; 5:33; 21:9, 42; 22:37, 44; 23:39; 27:10; 28:2 ಮಾರ್ಕ 1:3; 5:19; 11:9; 12:11, 29, 29, 30, 36; 13:20; ಲೂಕ 1:6, 9, 11, 15, 16, 17, 25, 28, 32, 38, 45, 46, 58, 66, 68, 76; 2:9, 9, 15, 22, 23, 23, 24, 26, 39; 3:4; 4:8, 12, 18, 19; 5:17; 10:27; 13:35; 19:38; 20:37, 43; ಯೋಹಾನ 1:23; 6:45; 12:13, 38, 38; ಅ. ಕಾರ್ಯಗಳು 1:24; 2:20, 21, 25, 34, 39, 47; 3:19, 22; 4:26, 29; 5:9, 19; 7:31, 33, 50, 60; 8:22, 24, 25, 26, 39; 9:31; 10:33; 11:21; 12:7, 11, 17, 23, 24; 13:2, 10, 11, 12, 44, 47, 48, 49; 14:3, 23; 15:17, 17, 35, 36, 40; 16:14, 15, 32; 18:21, 25; 19:20; 21:14; ರೋಮನ್ನರಿಗೆ 4:3, 8; 9:28, 29; 10:13, 16; 11:3, 34; 12:11, 19; 14:4, 6, 6, 6, 8, 8, 8, 11; 15:11; 1 ಕೊರಿಂಥ 1:31; 2:16; 3:20; 4:4, 19; 7:17; 10:9, 21, 21, 22, 26; 11:32; 14:21; 16:7, 10; 2 ಕೊರಿಂಥ 3:16, 17, 17, 18, 18; 6:17, 18; 8:21; 10:17, 18; ಗಲಾತ್ಯ 3:6; ಎಫೆಸ 2:21; 5:17, 19; 6:4, 7, 8; ಕೊಲೊಸ್ಸೆ 1:10; 3:13, 16, 22, 23, 24; 1 ಥೆಸಲೊನೀಕ 1:8; 4:6, 15; 5:2; 2 ಥೆಸಲೊನೀಕ 2:2, 13; 3:1; 2 ತಿಮೊಥೆಯ 1:18; 2:19, 19; 4:14; ಇಬ್ರಿಯ 2:13; 7:21; 8:2, 8, 9, 11, 12; 10:16, 30; 12:5, 6; 13:6; ಯಾಕೋಬ 1:7, 12; 2:23, 23; 3:9; 4:10, 15; 5:4, 10, 11, 11, 14, 15; 1 ಪೇತ್ರ 1:25; 3:12, 12; 2 ಪೇತ್ರ 2:9, 11; 3:8, 9, 10, 12; ಯೂದ 5, 9, 14; ಪ್ರಕಟನೆ 1:8; 4:8, 11; 11:17; 15:3, 4; 16:7; 18:8; 19:6; 21:22; 22:5, 6.
“ಯಾಹು” ಎಂಬ ದೇವರ ಹೆಸರಿನ ಸಂಕ್ಷಿಪ್ತ ರೂಪವು “ಜನರೇ, ಯಾಹುವನ್ನು ಸ್ತುತಿಸಿರಿ!” ಎಂಬ ಅರ್ಥವಿರುವ ಹಲ್ಲೆಲೂಯಾ ಎಂಬ ಹೀಬ್ರು ಪದದ ಲಿಪ್ಯಂತರಣವಾದ ಹಲ್ಲೆಲೊಯಾ ಎಂಬ ಗ್ರೀಕ್ ಅಭಿವ್ಯಕ್ತಿಯಲ್ಲಿ ಕಂಡುಬರುತ್ತದೆ.—ಪ್ರಕಟನೆ 19:1, 3, 4, 6; NW ರೆಫರೆನ್ಸ್ ಬೈಬಲ್ನಲ್ಲಿ ಕೀರ್ತನೆ 104:35 ರ ಪಾದಟಿಪ್ಪಣಿಯನ್ನು ಹೋಲಿಸಿರಿ.
ಒಬ್ಬ ಭಾಷಾಂತರಕಾರನ ಮಿತಿಯನ್ನು ದಾಟಿ ಅರ್ಥನಿರೂಪಣೆಯ ಕ್ಷೇತ್ರಕ್ಕೆ ಕಾಲಿಡುವುದನ್ನು ತಡೆಗಟ್ಟಲಿಕ್ಕಾಗಿ, ಯಾವಾಗಲೂ ಜಾಗರೂಕತೆಯಿಂದ ಹೀಬ್ರು ಶಾಸ್ತ್ರಗ್ರಂಥವನ್ನು ಒಂದು ಹಿನ್ನೆಲೆಯಾಗಿ ಪರಿಗಣಿಸುತ್ತಾ ನಾವು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ ದೇವರ ಹೆಸರನ್ನು ಒಳಗೂಡಿಸುವ ವಿಷಯದಲ್ಲಿ ಅತ್ಯಧಿಕ ಜಾಗ್ರತೆಯನ್ನು ವಹಿಸಿದ್ದೇವೆ. ನಾವು ತುಲನೆಮಾಡಿ ನೋಡಿದ ಹೀಬ್ರು ಭಾಷಾಂತರಗಳಲ್ಲಿ ಸಹಮತವಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದೇವೆ. ನಮ್ಮ ಭಾಷಾಂತರದಲ್ಲಿ ನಾವು 237 ಕಡೆಗಳಲ್ಲಿ ಯೆಹೋವನ ಹೆಸರನ್ನು ಪುನಸ್ಸ್ಥಾಪಿಸಿದ್ದು, ಹೀಗೆ ಪುನಸ್ಸ್ಥಾಪಿಸಲ್ಪಟ್ಟ ಪ್ರತಿಯೊಂದು ಬಾರಿ ಅದಕ್ಕೆ ಈ ಹೀಬ್ರು ಭಾಷಾಂತರಗಳಲ್ಲಿ ಒಂದು ಅಥವಾ ಹೆಚ್ಚು ಭಾಷಾಂತರಗಳಿಂದ ಬೆಂಬಲವಿತ್ತು.
ಆರಂಭದ ಕ್ರೈಸ್ತರು ಸೆಪ್ಟ್ಯುಅಜಿಂಟ್ ಭಾಷಾಂತರದಿಂದ ಉಲ್ಲೇಖಿಸಿದಾಗ ಅವರು ಆ ಉಲ್ಲೇಖದಿಂದ ದೇವರ ಹೆಸರನ್ನು ತೆಗೆದಿರುವುದು ತೀರ ಅಸಂಭವನೀಯ. ಈ ತೀರ್ಮಾನಕ್ಕೆ ಬರಲು, ಪ್ರೊಫೆಸರ್ ಜಾರ್ಜ್ ಹವರ್ಡ್ರವರು ಮಾರ್ಚ್ 1978ರ ಬಿಬ್ಲಿಕಲ್ ಆರ್ಕಿಯಾಲಜಿ ರಿವ್ಯೂ ಎಂಬ ಪ್ರಕಾಶನದಲ್ಲಿ ಕಂಡುಬಂದ ಒಂದು ಲೇಖನದಲ್ಲಿ ಬಲವಾದ ತರ್ಕಾಂಶಗಳನ್ನು ನೀಡಿದ್ದಾರೆ. ಉದಾಹರಣೆಗೆ, “ಪಾಷಂಡಮತಕ್ಕೆ ಸಂಬಂಧಪಟ್ಟ ಗ್ರಂಥಪಾಠಗಳನ್ನು (ಬಹುಶಃ ಯೆಹೂದಿ ಕ್ರೈಸ್ತರ ಪುಸ್ತಕಗಳೂ ಸೇರಿವೆ) ನಾಶಗೊಳಿಸುವ ಸಮಸ್ಯೆಯನ್ನು ಚರ್ಚಿಸುವ ರಬ್ಬಿಗಳ ಪ್ರಸಿದ್ಧವಾದ ಒಂದು ಭಾಗದ (ಟಾಲ್ಮುಡ್ ಶಬಾತ್ 13.5)” ಕುರಿತು ಅವರು ತಿಳಿಸುತ್ತಾರೆ. ಆ ಸಮಸ್ಯೆಯು ಏನಾಗಿತ್ತು? “ಪಾಷಂಡಮತಕ್ಕೆ ಸಂಬಂಧಪಟ್ಟ ಗ್ರಂಥಪಾಠಗಳಲ್ಲಿ ದೇವರ ಹೆಸರು ಇತ್ತು ಮತ್ತು ಆ ಗ್ರಂಥಪಾಠಗಳ ಒಟ್ಟುಗಟ್ಟಲೆ ನಾಶಗೊಳಿಸುವಿಕೆಯಲ್ಲಿ ದೇವರ ಹೆಸರಿನ ನಾಶಗೊಳಿಸುವಿಕೆಯೂ ಒಳಗೂಡಲಿತ್ತು.”
ಇದಕ್ಕೆ ಕೂಡಿಸಿ ಪ್ರೊಫೆಸರ್ ಹವರ್ಡ್ರವರು ಹೇಳಿದ್ದು: “ಚತುರಕ್ಷರಿಯ ತೆಗೆದುಹಾಕುವಿಕೆಯು ಪ್ರಥಮ ಶತಮಾನದ ಹೊಸ ಒಡಂಬಡಿಕೆಯ ಕಾಲಾವಧಿಯಲ್ಲಿದ್ದ ದೇವತಾಶಾಸ್ತ್ರೀಯ ವಾತಾವರಣಕ್ಕಿಂತ ಭಿನ್ನವಾದ ವಾತಾವರಣವನ್ನು ಸೃಷ್ಟಿಸಿದ್ದಿರಬಹುದು. ಹೀಬ್ರು ಹೆಸರಿನ ಉಪಯೋಗದ ಮೂಲಕ ಯಾವಾಗಲೂ ಇತರ ಎಲ್ಲ ದೇವರುಗಳಿಗಿಂತ ಜಾಗರೂಕತೆಯಿಂದ ಪ್ರತ್ಯೇಕವಾಗಿ ಗುರುತಿಸಲ್ಪಟ್ಟಿದ್ದ ಯೆಹೂದ್ಯರ ದೇವರು, ಚತುರಕ್ಷರಿಯ ತೆಗೆದುಹಾಕಲ್ಪಡುವಿಕೆಯ ಮೂಲಕ ತನ್ನ ವಿಶಿಷ್ಟತೆಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡನು.”