ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bi7 ಪು. 608-610
  • 6 “ಯಾತನಾ ಕಂಬ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 6 “ಯಾತನಾ ಕಂಬ”
  • ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
6 “ಯಾತನಾ ಕಂಬ”

6 “ಯಾತನಾ ಕಂಬ”

ಗ್ರೀಕ್‌, σταυρός (ಸ್ಟಾರೋಸ್‌); ಲ್ಯಾಟಿನ್‌, ಕ್ರಕ್ಸ್‌

ಮತ್ತಾಯ 27:40 ರಲ್ಲಿ ತಿಳಿಸಲ್ಪಟ್ಟಿರುವ “ಯಾತನಾ ಕಂಬ”ವು, ಕ್ಯಾಲ್ವರಿಯಲ್ಲಿ ಅಂದರೆ ಕಪಾಲ ಸ್ಥಳದಲ್ಲಾದ ಯೇಸುವಿನ ವಧೆಯ ಸಂಬಂಧದಲ್ಲಿ ಉಪಯೋಗಿಸಲ್ಪಟ್ಟಿದೆ. ಇಲ್ಲಿ ಸ್ಟಾರೋಸ್‌ ಎಂಬ ಗ್ರೀಕ್‌ ಪದವು, ಕ್ರಿಸ್ತನಿಗೆ ಮುಂಚೆ ಅನೇಕ ಶತಮಾನಗಳಿಂದ ಒಂದು ಧಾರ್ಮಿಕ ಸಂಕೇತವಾಗಿ ವಿಧರ್ಮಿಗಳು ಬಳಸುತ್ತಿದ್ದಂಥ ಶಿಲುಬೆಯನ್ನು ಸೂಚಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.

ಪ್ರಾಚೀನ ಗ್ರೀಕ್‌ ಭಾಷೆಯಲ್ಲಿ ಸ್ಟಾರೋಸ್‌ ಎಂಬ ಪದವು, ನೇರವಾದ ಒಂದು ಕಂಬ ಅಥವಾ ಮರದ ಚೂಪುಗಂಬ ಇಲ್ಲವೆ ತಳಪಾಯಕ್ಕಾಗಿ ಉಪಯೋಗಿಸಲ್ಪಡುವಂಥ ಒಂದು ಆಸರೆಗಂಬ ಎಂಬ ಅರ್ಥವನ್ನು ಮಾತ್ರ ಕೊಡುತ್ತದೆ. ಸ್ಟಾರೋ ಎಂಬ ಕ್ರಿಯಾಪದವು, ಮರದ ಚೂಪುಗಂಬಗಳಿಂದ ಬೇಲಿಹಾಕುವುದು, ದಸಿಗೋಡೆಹಾಕುವುದು ಅಥವಾ ದಸಿಬೇಲಿಹಾಕುವುದು ಎಂಬ ಅರ್ಥವನ್ನು ಕೊಡುತ್ತದೆ. ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ಪ್ರೇರಿತ ಬರಹಗಾರರು ಸಾಮಾನ್ಯ (ಕೊಯಿನೆ) ಗ್ರೀಕ್‌ ಭಾಷೆಯಲ್ಲಿ ಬರೆದರು ಮತ್ತು ಪ್ರಾಚೀನ ಗ್ರೀಕ್‌ ಭಾಷೆಯಲ್ಲಿರುವುದನ್ನೇ ಸೂಚಿಸಲಿಕ್ಕಾಗಿ ಅಂದರೆ ಯಾವುದೇ ಕೋನದಲ್ಲಿ ಯಾವುದೇ ರೀತಿಯ ಅಡ್ಡತೊಲೆಯಿಲ್ಲದ ಬರೀ ಒಂದು ಕಂಬವನ್ನು ಅಥವಾ ಮರದ ಚೂಪುಗಂಬವನ್ನು ಸೂಚಿಸಲಿಕ್ಕಾಗಿ ಸ್ಟಾರೋಸ್‌ ಎಂಬ ಪದವನ್ನು ಉಪಯೋಗಿಸಿದರು. ಅದಕ್ಕೆ ವಿರುದ್ಧವಾದ ಪುರಾವೆ ಇಲ್ಲ. ಯಾವುದರ ಮೇಲೆ ಯೇಸುವನ್ನು ಮೊಳೆಯಿಂದ ಜಡಿಯಲಾಗಿತ್ತೋ ಆ ಯಾತನೆಯ ಸಲಕರಣೆಯನ್ನು ಸೂಚಿಸಲಿಕ್ಕಾಗಿ ಅಪೊಸ್ತಲ ಪೇತ್ರ ಮತ್ತು ಪೌಲರು ಸೈಲಾನ್‌ ಎಂಬ ಪದವನ್ನು ಸಹ ಉಪಯೋಗಿಸಿದರು ಮತ್ತು ಇದು ತಾನೇ ಅದು ಅಡ್ಡತೊಲೆಯಿಲ್ಲದ ನೇರವಾದ ಒಂದು ಕಂಬವಾಗಿತ್ತು ಎಂಬುದನ್ನು ತೋರಿಸುತ್ತದೆ. ಏಕೆಂದರೆ ಈ ವಿಶೇಷ ಅರ್ಥದಲ್ಲಿ ಸೈಲಾನ್‌ ಎಂಬ ಪದದ ಅರ್ಥವು ಇದೇ ಆಗಿದೆ. (ಅ. ಕಾರ್ಯಗಳು 5:30; 10:39; 13:29; ಗಲಾತ್ಯ 3:13; 1 ಪೇತ್ರ 2:24) LXX ಭಾಷಾಂತರದಲ್ಲಿ ಎಜ್ರ 6:11 ರಲ್ಲಿ (2 ಎಸ್‌ಡ್ರಾಸ್‌ 6:11) ನಾವು ಸೈಲಾನ್‌ ಎಂಬ ಪದವನ್ನು ಕಂಡುಕೊಳ್ಳುತ್ತೇವೆ ಮತ್ತು ಈ ವಚನದಲ್ಲಿ ಅದನ್ನು ನಿಯಮೋಲ್ಲಂಘನೆ ಮಾಡುವವನನ್ನು ಯಾವುದರ ಮೇಲೆ ತೂಗುಹಾಕಬೇಕಾಗಿತ್ತೋ ಆ ಒಂದು ತೊಲೆಯಾಗಿ ಮಾತಾಡಲಾಗಿದೆ; ಅಪೊಸ್ತಲರ ಕಾರ್ಯಗಳು 5:30; 10:39 ರಲ್ಲಿಯೂ ಈ ಪದವನ್ನೇ ಉಪಯೋಗಿಸಲಾಗಿದೆ.

ಸ್ಟಾರೋಸ್‌ ಎಂಬ ಪದದ ಅರ್ಥದ ಕುರಿತು ಆ್ಯನ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ (1966ರ ಪುನರ್ಮುದ್ರಣ) ಎಂಬ ತಮ್ಮ ಪುಸ್ತಕದ ಸಂಪುಟ 1, ಪುಟ 256ರಲ್ಲಿ ಡಬ್ಲ್ಯೂ. ಇ. ವೈನ್‌ ತಿಳಿಸಿದ್ದು: “ಸ್ಟಾರೋಸ್‌ (σταυρός) ಎಂಬ ಪದವು ಮೂಲತಃ ನೇರವಾದ ಒಂದು ಚೂಪುಗಂಬ ಅಥವಾ ಕಂಬವನ್ನು ಸೂಚಿಸುತ್ತದೆ. ವಧಿಸಲ್ಪಡಲಿಕ್ಕಾಗಿ ಇಂಥವುಗಳ ಮೇಲೆ ಅಪರಾಧಿಗಳಿಗೆ ಮೊಳೆಯನ್ನು ಜಡಿಯಲಾಗುತ್ತಿತ್ತು. ಈ ನಾಮಪದವು ಹಾಗೂ ಸ್ಟಾರೋ (ಕಂಬಕ್ಕೆ ಅಥವಾ ಮರದ ಚೂಪುಗಂಬಕ್ಕೆ ಕಟ್ಟುವುದು) ಎಂಬ ಕ್ರಿಯಾಪದವು, ಚರ್ಚಿಗೆ ಸಂಬಂಧಿಸಿದ ಎರಡು ತೊಲೆಗಳುಳ್ಳ ಶಿಲುಬೆಯ ರೂಪದಿಂದ ಮೂಲತಃ ಭಿನ್ನವಾಗಿ ಗುರುತಿಸಲ್ಪಡತಕ್ಕದ್ದು. ಚರ್ಚಿನ ಶಿಲುಬೆಯ ಆಕಾರವು ಪುರಾತನ ಕಸ್ದೀಯ ಮೂಲದಿಂದ ಬಂದದ್ದಾಗಿತ್ತು ಮತ್ತು ಆ ದೇಶದಲ್ಲಿ ಹಾಗೂ ಈಜಿಪ್ಟನ್ನೂ ಸೇರಿಸಿ ಅದರ ಪಕ್ಕದ ಪ್ರದೇಶಗಳಲ್ಲಿ ತಮ್ಮೂಜ್‌ (Tammuz) ದೇವನ (ರಹಸ್ಯಾರ್ಥಕ ‘ಟೌ’ನ ಆಕಾರದಲ್ಲಿದ್ದು, ಅವನ ಹೆಸರಿನ ಮೊದಲ ಅಕ್ಷರ) ಸಂಕೇತವಾಗಿ ಉಪಯೋಗಿಸಲ್ಪಡುತ್ತಿತ್ತು. ಸಾ.ಶ. 3ನೆಯ ಶತಮಾನದ ಮಧ್ಯಭಾಗದಷ್ಟಕ್ಕೆ ಚರ್ಚುಗಳು ಕ್ರೈಸ್ತ ನಂಬಿಕೆಯ ಕೆಲವು ಸಿದ್ಧಾಂತಗಳನ್ನು ತ್ಯಜಿಸಿಬಿಟ್ಟಿದ್ದವು ಅಥವಾ ಅವುಗಳನ್ನು ವಿಕೃತಗೊಳಿಸಿದ್ದವು. ಧರ್ಮಭ್ರಷ್ಟ ಚರ್ಚಿನ ವ್ಯವಸ್ಥೆಯ ಘನತೆಯನ್ನು ಹೆಚ್ಚಿಸಲಿಕ್ಕಾಗಿ, ನಂಬಿಕೆಯನ್ನು ರೂಢಿಸಿಕೊಂಡವರನ್ನು ಮಾತ್ರವಲ್ಲದೆ ವಿಧರ್ಮಿಗಳನ್ನು ಚರ್ಚುಗಳೊಳಗೆ ಅಂಗೀಕರಿಸಲಾಯಿತು ಮತ್ತು ಅವರು ಬಹುಮಟ್ಟಿಗೆ ತಮ್ಮ ವಿಧರ್ಮಿ ಗುರುತುಗಳನ್ನು ಹಾಗೂ ಸಂಕೇತಗಳನ್ನು ಉಳಿಸಿಕೊಳ್ಳುವಂತೆ ಅನುಮತಿಸಲಾಯಿತು. ಆದುದರಿಂದ ‘ಟೌ’ ಅಥವಾ ‘ಟಿ’ [T] ಅದರ ಅತಿ ಸಾಮಾನ್ಯ ರೂಪದಲ್ಲಿ ಅಡ್ಡತೊಲೆಯು ಸ್ವಲ್ಪಮಟ್ಟಿಗೆ ಕೆಳತರಲ್ಪಟ್ಟು ಕ್ರಿಸ್ತನ ಶಿಲುಬೆಯ ಸಂಕೇತವಾಗಿ ಹೊಂದಿಸಿಕೊಳ್ಳಲ್ಪಟ್ಟಿತು.”

ಲುವಿಸ್‌ ಮತ್ತು ಶಾರ್ಟ್‌ರಿಂದ ಬರೆಯಲ್ಪಟ್ಟ ಲ್ಯಾಟಿನ್‌ ಶಬ್ದಕೋಶವು, ಕ್ರಕ್ಸ್‌ ಎಂಬ ಪದಕ್ಕೆ “ದುಷ್ಕರ್ಮಿಗಳನ್ನು ಯಾವುದರ ಮೇಲೆ ಶೂಲಕ್ಕೇರಿಸಲಾಗುತ್ತಿತ್ತೋ ಅಥವಾ ನೇತುಹಾಕಲಾಗುತ್ತಿತ್ತೋ ಅಂಥ ಒಂದು ಮರ, ಚೌಕಟ್ಟು ಅಥವಾ ವಧೆಗಾಗಿ ಉಪಯೋಗಿಸಲ್ಪಡುವ ಮರದ ಇತರ ಸಲಕರಣೆಗಳು” ಎಂಬ ಮೂಲಭೂತ ಅರ್ಥವನ್ನು ಕೊಡುತ್ತದೆ. “ಕ್ರಾಸ್‌” ಎಂಬುದು ಕ್ರಕ್ಸ್‌ ಎಂಬುದರ ಅನಂತರದ ಅರ್ಥವಾಗಿದೆಯಷ್ಟೆ. ಒಬ್ಬ ದುಷ್ಕರ್ಮಿಯನ್ನು ಶೂಲಕ್ಕೇರಿಸಲಿಕ್ಕಾಗಿರುವ ಒಂದೇ ಒಂದು ಕಂಬವನ್ನು ಲ್ಯಾಟಿನ್‌ ಭಾಷೆಯಲ್ಲಿ ಕ್ರಕ್ಸ್‌ ಸಿಂಪ್ಲೆಕ್ಸ್‌ ಎಂದು ಕರೆಯಲಾಗುತ್ತಿತ್ತು. ಯಾತನೆಯ ಇಂಥ ಒಂದು ಸಲಕರಣೆಯು, 1629ರಲ್ಲಿ ಆ್ಯಂಟ್‌ವರ್ಪ್‌ನಲ್ಲಿ ಜಸ್ಟಸ್‌ ಲಿಪ್ಸಿಯುಸ್‌ರ (1547-1606) ಡಿ ಕ್ರೂಸ್‌ ಲಿಬ್ರಿ ಟ್ರೆಸ್‌ ಎಂಬ ಪುಸ್ತಕದ ಪುಟ 19ರಲ್ಲಿ ದೃಷ್ಟಾಂತಿಸಲ್ಪಟ್ಟಿದೆ ಮತ್ತು ನಾವು ಅದನ್ನು ಇಲ್ಲಿ ತೋರಿಸಿದ್ದೇವೆ.

ಇಸವಿ 1878ರಲ್ಲಿ ಬ್ರೆಸ್‌ಲೌನಲ್ಲಿ ಹರ್ಮಾನ್‌ ಫುಲ್ಡರಿಂದ ಬರೆಯಲ್ಪಟ್ಟ ಡಾಸ್‌ ಕ್ರಾಯಿಟ್ಸ್‌ ಉಂಟ್‌ ಡಾಯಿ ಕ್ರಾಯಿಟ್ಸೀಗುಂಗ್‌ (ಶಿಲುಬೆ ಮತ್ತು ಶೂಲಕ್ಕೇರಿಸುವಿಕೆ) ಎಂಬ ಪುಸ್ತಕವು ಪುಟ 109ರಲ್ಲಿ ತಿಳಿಸಿದ್ದು: “ಬಹಿರಂಗ ವಧೆಗಾಗಿ ಆಯ್ಕೆಮಾಡಲ್ಪಟ್ಟ ಸ್ಥಳಗಳಲ್ಲಿ ಎಲ್ಲ ಕಡೆಗಳಲ್ಲಿ ಮರಗಳು ಲಭ್ಯವಿರುತ್ತಿರಲಿಲ್ಲ. ಆದಕಾರಣ ಒಂದು ಸಾಮಾನ್ಯ ಕಂಬವನ್ನು ನೆಲದೊಳಕ್ಕೆ ಹೂಳಲಾಗುತ್ತಿತ್ತು. ಅದರ ಮೇಲೆ ದುಷ್ಕರ್ಮಿಗಳ ಕೈಗಳನ್ನು ಮೇಲಕ್ಕೆತ್ತಿ ಮತ್ತು ಅನೇಕವೇಳೆ ಅವರ ಕಾಲುಗಳನ್ನು ಸಹ ಬಿಗಿಯಲಾಗುತ್ತಿತ್ತು ಅಥವಾ ಮೊಳೆಯಿಂದ ಜಡಿಯಲಾಗುತ್ತಿತ್ತು.” ಹೆಚ್ಚಿನ ಪುರಾವೆಯನ್ನು ಒದಗಿಸಿದ ಬಳಿಕ, 219 ಮತ್ತು 220ನೆಯ ಪುಟಗಳಲ್ಲಿ ಫುಲ್ಡರು ಹೀಗೆ ಮುಕ್ತಾಯಗೊಳಿಸಿದರು: “ಯೇಸು ಸಾಮಾನ್ಯವಾದ ಒಂದು ಮರಣ-ಕಂಬದ ಮೇಲೆ ಸತ್ತನು: ಇದಕ್ಕೆ ಬೆಂಬಲವಾಗಿ (ಎ) ಪೂರ್ವದೇಶಗಳಲ್ಲಿ ಆಗ ವಾಡಿಕೆಯಾಗಿ ಬಳಕೆಯಲ್ಲಿದ್ದ ವಧೆಯ ಈ ವಿಧಾನ, (ಬಿ) ಪರೋಕ್ಷವಾಗಿ ಯೇಸುವಿನ ಕಷ್ಟಾನುಭವಗಳ ಕುರಿತಾದ ಇತಿಹಾಸವು ತಾನೇ, ಮತ್ತು (ಸಿ) ಆರಂಭದ ಚರ್ಚ್‌ ಫಾದರ್‌ಗಳ ಅನೇಕ ಅಭಿವ್ಯಕ್ತಿಗಳು ಮಾತಾಡುತ್ತವೆ.”

ಬಾಸೆಲ್‌ನ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರರಾಗಿದ್ದ ಪೌಲ್‌ ವಿಲ್‌ಹೆಲ್ಮ್‌ ಶ್ಮಿಟ್‌ರವರು 1904ರಲ್ಲಿ ಟೂಬಿಂಗನ್‌ ಮತ್ತು ಲೈಪ್ಸಿಗ್‌ನಲ್ಲಿ ಡೀ ಗೆಶಿಕ್‌ಟಿ ಜೆಸು (ಯೇಸುವಿನ ಇತಿಹಾಸ) ಎಂಬ ತಮ್ಮ ಕೃತಿಯ ಸಂಪುಟ 2, ಪುಟ 386-394ರಲ್ಲಿ ಸ್ಟಾರೋಸ್‌ ಎಂಬ ಗ್ರೀಕ್‌ ಪದದ ಕುರಿತು ವಿಸ್ತೃತವಾದ ವಿಶ್ಲೇಷಣೆಯನ್ನು ಬರೆದರು. ತಮ್ಮ ಕೃತಿಯ 386ನೆಯ ಪುಟದಲ್ಲಿ ಅವರು ಹೇಳಿದ್ದು: “σταυρός [ಸ್ಟಾರೋಸ್‌] ಅಂದರೆ ನೇರವಾಗಿ ನಿಲ್ಲಿಸಿರುವ ಪ್ರತಿಯೊಂದು ಚೂಪುಗಂಬ ಅಥವಾ ಮರದ ಕಾಂಡ.” ಯೇಸುವಿನ ಮೇಲೆ ವಿಧಿಸಲ್ಪಟ್ಟ ಶಿಕ್ಷೆಯ ಕುರಿತು ಪಿ. ಡಬ್ಲ್ಯೂ. ಶ್ಮಿಟ್‌ರವರು ಪುಟ 387-389ರಲ್ಲಿ ಬರೆದದ್ದು: “ಸುವಾರ್ತಾ ವೃತ್ತಾಂತಗಳಿಗನುಸಾರ, ಯೇಸುವಿನ ಮೇಲೆ ಹೇರಿದ ಶಿಕ್ಷೆಯಲ್ಲಿ ಕೊರಡೆಯ ಹೊಡೆತಗಳಲ್ಲದೆ, ಬರಿಮೈಯ ದೇಹವನ್ನು ಶೂಲದಲ್ಲಿ ತೂಗುಹಾಕಿದ ಅತಿ ಸರಳವಾದ ರೋಮನ್‌ ಶೂಲಕ್ಕೇರಿಸುವಿಕೆಯು ಪರಿಗಣನೆಗೆ ಬರುತ್ತದೆ. ಈ ಶೂಲವನ್ನು ಯೇಸು, ತನ್ನ ಅವಮಾನಕರವಾದ ಶಿಕ್ಷೆಯನ್ನು ತೀಕ್ಷ್ಣಗೊಳಿಸಲಿಕ್ಕಾಗಿ ವಧೆಯ ಸ್ಥಳಕ್ಕೆ ಹೊತ್ತುಕೊಂಡು ಇಲ್ಲವೆ ಎಳೆದುಕೊಂಡು ಹೋಗಬೇಕಾಗಿತ್ತು. . . . ಈ ವಧೆಯು ಅನೇಕಬಾರಿ ನಡೆಸಲ್ಪಟ್ಟಿರುವ ಒಟ್ಟುಗಟ್ಟಲೆ ರೀತಿಯು, ಈ ಸರಳ ತೂಗುಹಾಕುವಿಕೆಯಲ್ಲದೆ ಬೇರೆ ಎಲ್ಲವನ್ನೂ ತಳ್ಳಿಹಾಕುತ್ತದೆ: ವಾರಸ್‌ನಿಂದ (ಜೋಸ್‌. ಆ್ಯಂಟ್‌. XVII 10, 10), ಕ್ವಾಡ್ರೇಟಸ್‌ನಿಂದ (ಯೆಹೂದಿ ಯುದ್ಧಗಳು II 12. 6), ಬೊಕ್ಕಸದ ಅಧಿಕಾರಿಯಾದ ಫೆಲಿಕ್ಸನಿಂದ (ಯೆಹೂದಿ ಯುದ್ಧಗಳು II 15. 2 [13.2]), ಟೈಟಸನಿಂದ (ಯೆಹೂದಿ ಯುದ್ಧಗಳು VII. 1 [V 11. 1]) ಒಂದೇ ಬಾರಿಗೆ 2000 ಮಂದಿ ವಧಿಸಲ್ಪಟ್ಟರು.”

ಆದುದರಿಂದ, ಯೇಸು ಕ್ರಿಸ್ತನು ಲಂಬಕೋನಗಳಲ್ಲಿ ಇಡಲ್ಪಟ್ಟ ಮರದ ಎರಡು ತುಂಡುಗಳ ಮೇಲೆ ಶಿಲುಬೆಗೇರಿಸಲ್ಪಟ್ಟನು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಪ್ರೇರಿತ ಶಾಸ್ತ್ರಗ್ರಂಥದೊಳಗೆ ಶಿಲುಬೆಯ ವಿಧರ್ಮಿ ವಿಚಾರಧಾರೆಯನ್ನು ಸೇರಿಸುವ ಮೂಲಕ ನಾವು ದೇವರ ಲಿಖಿತ ವಾಕ್ಯಕ್ಕೆ ಏನನ್ನೂ ಕೂಡಿಸಲು ಬಯಸುವುದಿಲ್ಲ, ಬದಲಾಗಿ ಸ್ಟಾರೋಸ್‌ ಮತ್ತು ಸೈಲಾನ್‌ ಎಂಬ ಪದಗಳನ್ನು ಅತ್ಯಂತ ಸರಳವಾದ ಅರ್ಥಗಳಿಗನುಸಾರ ತರ್ಜುಮೆಮಾಡುತ್ತೇವೆ. ತನ್ನ ಹಿಂಬಾಲಕರ ಕಷ್ಟಾನುಭವವನ್ನು ಮತ್ತು ಅವಮಾನವನ್ನು ಅಥವಾ ಯಾತನೆಯನ್ನು ಚಿತ್ರಿಸಲಿಕ್ಕಾಗಿ ಯೇಸು ಸ್ಟಾರೋಸ್‌ ಎಂಬ ಪದವನ್ನು ಉಪಯೋಗಿಸಿರುವುದರಿಂದ (ಮತ್ತಾಯ 16:24), ಸೈಲಾನ್‌ ಎಂಬ ಪದದಿಂದ ಇದನ್ನು ಪ್ರತ್ಯೇಕವಾಗಿ ಗುರುತಿಸಲಿಕ್ಕಾಗಿ ನಾವು ಸ್ಟಾರೋಸ್‌ ಎಂಬ ಪದವನ್ನು “ಯಾತನಾ ಕಂಬ” ಎಂಬುದಾಗಿ ಭಾಷಾಂತರಿಸಿದ್ದೇವೆ ಮತ್ತು ಸೈಲಾನ್‌ ಎಂಬ ಪದವನ್ನು “ಕಂಬ” ಎಂದು ಭಾಷಾಂತರಿಸಿದ್ದೇವೆ.

[ಪುಟ 609ರಲ್ಲಿರುವ ಚಿತ್ರ]

ದೃಷ್ಟಾಂತಿಸಲ್ಪಟ್ಟಿರುವ ಕ್ರಕ್ಸ್‌ ಸಿಂಪ್ಲೆಕ್ಸ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ