5 ಕ್ರಿಸ್ತನ ಸಾನ್ನಿಧ್ಯ (ಪರೂಸೀಯ)
ಮತ್ತಾಯ 24:3—ಗ್ರೀಕ್, τὸ σημεῖον τῆς σῆς παρουσίας (ಟು ಸಿಮಿಯೊನ್ ಟೆಸ್ ಸೆಸ್ ಪರೂಸೀಯಸ್)
1864 |
|
The Emphatic Diaglott (J21), by Benjamin Wilson, New York and London. |
1897 |
|
The Emphasised Bible, by J. B. Rotherham, Cincinnati. |
1903 |
|
The Holy Bible in Modern English, by F. Fenton, London. |
1950 |
|
New World Translation of the Christian Greek Scriptures, Brooklyn. |
ಪರೂಸೀಯ ಎಂಬ ಗ್ರೀಕ್ ನಾಮಪದಕ್ಕೆ ಅಕ್ಷರಾರ್ಥವಾಗಿ “ಪಕ್ಕದಲ್ಲಿರುವುದು” ಎಂಬ ಅರ್ಥವಿದೆ. ಈ ಅಭಿವ್ಯಕ್ತಿಯು ಪಾರಾ (ಪಕ್ಕದಲ್ಲಿ) ಮತ್ತು ಊಸಿಯ (ಇರುವುದು) ಎಂಬ ಉಪಸರ್ಗದಿಂದ ತೆಗೆಯಲ್ಪಟ್ಟಿದೆ. ಪರೂಸೀಯ ಎಂಬ ಪದವು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ 24 ಬಾರಿ ಕಂಡುಬರುತ್ತದೆ. ಆ ಸ್ಥಳಗಳು ಯಾವುವೆಂದರೆ: ಮತ್ತಾಯ 24:3, 27, 37, 39; 1 ಕೊರಿಂಥ 15:23; 16:17; 2 ಕೊರಿಂಥ 7:6, 7; 10:10; ಫಿಲಿಪ್ಪಿ 1:26; 2:12; 1 ಥೆಸಲೊನೀಕ 2:19; 3:13; 4:15; 5:23; 2 ಥೆಸಲೊನೀಕ 2:1, 8, 9; ಯಾಕೋಬ 5:7, 8; 2 ಪೇತ್ರ 1:16; 3:4, 12; 1 ಯೋಹಾನ 2:28. ಈ 24 ಸ್ಥಳಗಳಲ್ಲಿ ನೂತನ ಲೋಕ ಭಾಷಾಂತರವು ಪರೂಸೀಯ ಎಂಬ ಪದವನ್ನು “ಸಾನ್ನಿಧ್ಯ” ಅಥವಾ ‘ಉಪಸ್ಥಿತ’ ಇಲ್ಲವೆ ‘ಬಂದಾಗ’ ಎಂದು ಭಾಷಾಂತರಿಸುತ್ತದೆ.
ಇದಕ್ಕೆ ಸಂಬಂಧಿಸಿದ ಪೇರೀಮೀ ಎಂಬ ಕ್ರಿಯಾಪದಕ್ಕೆ ಅಕ್ಷರಾರ್ಥವಾಗಿ “ಪಕ್ಕದಲ್ಲಿರು” ಎಂಬ ಅರ್ಥವಿದೆ. ಇದು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ 24 ಬಾರಿ ಕಂಡುಬರುತ್ತದೆ. ಆ ಸ್ಥಳಗಳು ಯಾವುವೆಂದರೆ: ಮತ್ತಾಯ 26:50; ಲೂಕ 13:1; ಯೋಹಾನ 7:6; 11:28; ಅ. ಕಾರ್ಯಗಳು 10:21, 33; 12:20 (ಪಾದಟಿಪ್ಪಣಿ); 17:6; 24:19; 1 ಕೊರಿಂಥ 5:3, 3; 2 ಕೊರಿಂಥ 10:2, 11; 11:9; 13:2, 10; ಗಲಾತ್ಯ 4:18, 20; ಕೊಲೊಸ್ಸೆ 1:6; ಇಬ್ರಿಯ 12:11; 13:5; 2 ಪೇತ್ರ 1:9, 12; ಪ್ರಕಟನೆ 17:8. ಈ ಸ್ಥಳಗಳಲ್ಲಿ ನೂತನ ಲೋಕ ಭಾಷಾಂತರವು ಪೇರೀಮೀ ಎಂಬ ಪದವನ್ನು “ಉಪಸ್ಥಿತ” ಅಥವಾ “ಹಾಜರು” ಮುಂತಾದ ಪದಗಳಿಂದ ಭಾಷಾಂತರಿಸುತ್ತದೆ.
“ಸಾನ್ನಿಧ್ಯ” ಎಂಬ ಅರ್ಥವಿರುವ ಪರೂಸೀಯ ಎಂಬ ಪದವು “ಆಗಮನ” ಎಂಬ ಅರ್ಥವಿರುವ ಇಲ್ಯೂಸಿಸ್ ಎಂಬ ಗ್ರೀಕ್ ಪದಕ್ಕಿಂತ ಭಿನ್ನವಾಗಿದೆ. ಇದು ಗ್ರೀಕ್ ಗ್ರಂಥಪಾಠದಲ್ಲಿ ಒಂದೇ ಬಾರಿ ಅಪೊಸ್ತಲರ ಕಾರ್ಯಗಳು 7:52 ರಲ್ಲಿ ಇಲ್ಯೂಸಿಯೋಸ್ (ಲ್ಯಾಟಿನ್, ಎಡ್-ವೆನ್ಟು) ಎಂಬುದಾಗಿ ಕಂಡುಬರುತ್ತದೆ. ಪರೂಸೀಯ ಮತ್ತು ಇಲ್ಯೂಸಿಸ್ ಎಂಬ ಪದಗಳು ಅದಲು ಬದಲಾಗಿ ಉಪಯೋಗಿಸಲ್ಪಟ್ಟಿಲ್ಲ. “[ಪೇರೀಮೀ ಮತ್ತು ಪರೂಸೀಯ] ಎಂಬ ಪದಗಳು, ಕ್ರಿಸ್ತನು ಶರೀರಧಾರಿಯಾಗಿ ಆಗಮಿಸುವುದಕ್ಕೆ ಸೂಚಿತವಾಗಿ ಎಂದೂ ಉಪಯೋಗಿಸಲ್ಪಟ್ಟಿಲ್ಲ. παρουσία ಎಂಬ ಪದವು ಹಿಂದಿರುಗುವ ಅರ್ಥವನ್ನು ಕೊಡುವುದೇ ಇಲ್ಲ. ಒಂದಕ್ಕಿಂತ ಹೆಚ್ಚು ಪರೂಸೀಯದ ವಿಚಾರವು ಕೇವಲ ತದನಂತರದ ಚರ್ಚಿನಲ್ಲಿ ಮೊದಲಾಗಿ ಕಂಡುಬಂತು [ಸಾ.ಶ. ಎರಡನೆಯ ಶತಮಾನದಲ್ಲಿದ್ದ ಜಸ್ಟಿನ್ಗಿಂತ ಮುಂಚೆ ಅಲ್ಲ] . . . ಪ್ರಾಚೀನ ಕ್ರೈಸ್ತತ್ವದ ಚಿಂತನಾ ವಿಧಾನವನ್ನು ಅರ್ಥಮಾಡಿಕೊಳ್ಳಲು ಅಗತ್ಯವಿರುವ ಮೂಲಭೂತ ವಿಷಯವು [ಒಂದಕ್ಕಿಂತ ಹೆಚ್ಚು ಪರೂಸೀಯದ] ವಿಚಾರದಿಂದ ನಮ್ಮನ್ನು ನಾವು ಸಂಪೂರ್ಣವಾಗಿ ಮುಕ್ತರನ್ನಾಗಿಸಿಕೊಳ್ಳುವುದೇ ಆಗಿದೆ” ಎಂಬುದಾಗಿ ಥಿಯೊಲಾಜಿಕಲ್ ಡಿಕ್ಷನೆರಿ ಆಫ್ ದ ನ್ಯೂ ಟೆಸ್ಟಮೆಂಟ್ನ ಸಂಪುಟ V, ಪುಟ 865ರಲ್ಲಿ ತಿಳಿಸಲಾಗಿದೆ.
ಈ ಪದದ ಅರ್ಥದ ಕುರಿತಾಗಿ ಮೇನ್ನ ಪೋರ್ಟ್ಲ್ಯಾಂಡ್ನಲ್ಲಿ (1879), ಇಸ್ರೇಲ್ ಪಿ. ವಾರೆನ್, ಡಿ.ಡಿ., ಎಂಬವರು ದ ಪರೂಸೀಯ ಎಂಬ ತಮ್ಮ ಪುಸ್ತಕದ ಪುಟ 12-15ರಲ್ಲಿ ಬರೆದದ್ದು: “ನಾವು ಅನೇಕವೇಳೆ ‘ಎರಡನೆಯ ಬರುವಿಕೆ,’ ‘ಎರಡನೆಯ ಆಗಮನ’ ಮುಂತಾದವುಗಳ ಕುರಿತು ಮಾತಾಡುತ್ತೇವೆ. ಆದರೆ ಶಾಸ್ತ್ರಗ್ರಂಥವು ಎಲ್ಲಿಯೂ ‘ಎರಡನೆಯ ಪರೂಸೀಯದ’ ಕುರಿತು ಮಾತಾಡುವುದಿಲ್ಲ. ಪರೂಸೀಯವು ಯಾವುದೇ ರೀತಿಯದ್ದಾಗಿರಲಿ, ಅದು ವಿಶಿಷ್ಟವಾದದ್ದಾಗಿತ್ತು, ಹಿಂದೆಂದೂ ಸಂಭವಿಸಿರದ ಮತ್ತು ಪುನಃ ಎಂದೂ ಸಂಭವಿಸದಂಥದ್ದಾಗಿತ್ತು. ಮನುಷ್ಯರ ಮುಂದಿನ ಅವನ ಬೇರೆಲ್ಲ ಪ್ರತ್ಯಕ್ಷತೆಗಳಿಗಿಂತ ಇದು ಭಿನ್ನವಾಗಿಯೂ ಶ್ರೇಷ್ಠವಾಗಿಯೂ ಇರುವಂಥ ಒಂದು ಸಾನ್ನಿಧ್ಯವಾಗಿರಲಿತ್ತು. ಹೀಗೆ ಅದರ ಹೆಸರು ನಿರ್ದೇಶಕ ಗುಣವಾಚಿಯನ್ನು ಬಿಟ್ಟು, ಇನ್ನಾವ ಉಪನಾಮವು ಕೊಡಲ್ಪಡದ ರೀತಿಯಲ್ಲಿ ಪ್ರತ್ಯೇಕವಾಗಿ ‘ದ ಪ್ರೆಸೆನ್ಸ್’ ಎಂಬುದಾಗಿ ನಿಲ್ಲಬೇಕು.”
ಇದಲ್ಲದೆ, ಪರೂಸೀಯ ಎಂಬುದು “ಉನ್ನತ ದರ್ಜೆಯ ವ್ಯಕ್ತಿಯ ಭೇಟಿಯನ್ನು, ಮುಖ್ಯವಾಗಿ ಒಂದು ಪ್ರಾಂತಕ್ಕೆ ಭೇಟಿ ನೀಡುವ ರಾಜರನ್ನು ಮತ್ತು ಸಾಮ್ರಾಟರನ್ನು ಸೂಚಿಸುವ ಒಂದು ಅಧಿಕೃತ ಪದವಾಯಿತು” ಎಂದು ಡಬ್ಲ್ಯೂ. ಬಾವರ್ರವರ ಎ ಗ್ರೀಕ್-ಇಂಗ್ಲಿಷ್ ಲೆಕ್ಸಿಕನ್ ಆಫ್ ದ ನ್ಯೂ ಟೆಸ್ಟಮೆಂಟ್ ಆ್ಯಂಡ್ ಅದರ್ ಅರ್ಲಿ ಕ್ರಿಶ್ಚಿಯನ್ ಲಿಟ್ರೇಚರ್ ಎಂಬ ಪುಸ್ತಕದ ಎಫ್. ಡಬ್ಲ್ಯೂ. ಗಿಂಗ್ರಿಚ್ ಮತ್ತು ಎಫ್. ಡಬ್ಲ್ಯೂ. ಡ್ಯಾಂಕರ್, ಶಿಕಾಗೋ ಮತ್ತು ಲಂಡನ್ (1979)ರ ಎರಡನೆಯ ಇಂಗ್ಲಿಷ್ ಮುದ್ರಣವು ಪುಟ 630ರಲ್ಲಿ ತಿಳಿಸುತ್ತದೆ. ಮತ್ತಾಯ 24:3 ರಲ್ಲಿ ಮತ್ತು 1 ಥೆಸಲೊನೀಕ 3:13 ಹಾಗೂ 2 ಥೆಸಲೊನೀಕ 2:1 ರಂಥ ಇತರ ವಚನಗಳಲ್ಲಿ ಪರೂಸೀಯ ಎಂಬ ಪದವು, ಈ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಲ್ಲಿ ರಾಜನಾಗಿ ಸಿಂಹಾಸನಾರೂಢನಾದಂದಿನಿಂದ ಯೇಸು ಕ್ರಿಸ್ತನ ರಾಜಯೋಗ್ಯ ಸಾನ್ನಿಧ್ಯಕ್ಕೆ ಸೂಚಿತವಾಗಿದೆ.