7 ಗ್ರೀಕ್, ನ್ಯೂಮ
ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ ನ್ಯೂಮ ಎಂಬ ಗ್ರೀಕ್ ಪದವು 334 ಬಾರಿ ಕಂಡುಬರುತ್ತದೆ. ಕನ್ನಡ ಬೈಬಲ್‌ಗಳಲ್ಲಿ ಈ ಪದವನ್ನು ಅನೇಕ ಬಾರಿ “ಆತ್ಮ” ಎಂದು ತರ್ಜುಮೆಮಾಡಲಾಗಿದೆ. ಈ ಕನ್ನಡ ನೂತನ ಲೋಕ ಭಾಷಾಂತರ ದಲ್ಲಿ ಇದರ ಅರ್ಥವು ಉದ್ದೇಶಿತ ವಿಚಾರಕ್ಕೆ ಹೊಂದಿಕೆಯಲ್ಲಿರುವಾಗ ಇದೇ ಪದವನ್ನು ಉಪಯೋಗಿಸಲಾಗಿದೆ. ಕೆಲವೊಮ್ಮೆ ನ್ಯೂಮ ಎಂಬ ಪದವನ್ನು ತರ್ಜುಮೆಮಾಡಲಿಕ್ಕಾಗಿ ವಚನದ ಪೂರ್ವಾಪರದಲ್ಲಿ ಅದಕ್ಕಿರುವ ಸರಿಯಾದ ಅರ್ಥಕ್ಕನುಸಾರ ಬೇರೆ ಪದಗಳು ಉಪಯೋಗಿಸಲ್ಪಟ್ಟಿವೆ. ನ್ಯೂಮ ಎಂಬ ಅಭಿವ್ಯಕ್ತಿಯು ಹೆಚ್ಚಾಗಿ ದೇವರ “ಕಾರ್ಯಕಾರಿ ಶಕ್ತಿ” ಯನ್ನು ಸೂಚಿಸುತ್ತದೆ ಮತ್ತು ಆ ಅರ್ಥದಲ್ಲಿ ನಮ್ಮ ಭಾಷಾಂತರವು “ಪವಿತ್ರಾತ್ಮ” ಎಂಬ ಪದವನ್ನು ಉಪಯೋಗಿಸುತ್ತದೆ. “ಪವಿತ್ರಾತ್ಮ” ಎಂಬ ಪದವು ಒಂದು ಪ್ರತ್ಯೇಕ ಜೀವಿಗೆ ಅಥವಾ ವ್ಯಕ್ತಿಗೆ ಸೂಚಿತವಾಗಿರುವುದಿಲ್ಲ.
ನ್ಯೂಮ ಎಂಬ ಗ್ರೀಕ್ ಪದವು ಮೊದಲು ಮತ್ತಾಯ 1:18 ರಲ್ಲಿ ಕಂಡುಬರುತ್ತದೆ; ಅಲ್ಲಿ “ದೇವರ ಪವಿತ್ರಾತ್ಮ” ಎಂಬ ಅಭಿವ್ಯಕ್ತಿಯಲ್ಲಿ ಅದು ಉಪಯೋಗಿಸಲ್ಪಟ್ಟಿದೆ. ಈ ಪದದ ಮೂಲಭೂತ ಅರ್ಥವು “ಉಸಿರು” ಎಂದಾಗಿದೆಯಾದರೂ ಈ ಮೂಲಾರ್ಥಕ್ಕಿಂತಲೂ ವಿಸ್ತೃತವಾದ ಅರ್ಥಗಳು ಇದಕ್ಕಿವೆ. ಈ ಎಲ್ಲ ಅರ್ಥಗಳಲ್ಲಿ ಒಂದು ಸಾಮಾನ್ಯ ಅಂಶವಿದೆ: ಇವೆಲ್ಲವೂ ಮಾನವ ದೃಷ್ಟಿಗೆ ಅಗೋಚರವಾಗಿರುವಂಥದ್ದನ್ನು ಮತ್ತು ಚಲನೆಯಲ್ಲಿರುವ ಶಕ್ತಿಯ ಪುರಾವೆಯನ್ನು ನೀಡುವಂಥದ್ದನ್ನು ಸೂಚಿಸುತ್ತವೆ. ಇಂಥ ಅಗೋಚರ ಶಕ್ತಿಯು ದೃಶ್ಯ ಪರಿಣಾಮಗಳನ್ನು ಉಂಟುಮಾಡಲು ಸಮರ್ಥವಾದದ್ದಾಗಿದೆ. ನ್ಯೂಮ ಎಂಬ ಪದದ ಬೇರೆ ಬೇರೆ ಬಳಕೆಗಳನ್ನು ಉದಾಹರಿಸಲಿಕ್ಕಾಗಿ, ಈ ಪದವು ಉಪಯೋಗಿಸಲ್ಪಟ್ಟಿರುವ ಕೆಲವು ವಚನಗಳನ್ನು ಬೇರೆ ಬೇರೆ ಮೇಲ್ಬರಹಗಳ ಕೆಳಗೆ ನಾವು ವರ್ಗೀಕರಿಸಿದ್ದೇವೆ.
ಗಾಳಿಗೆ ಸೂಚಿತವಾಗಿರುವ ನ್ಯೂಮ
ಪವಿತ್ರಾತ್ಮ ಅಥವಾ ದೇವರಾತ್ಮಕ್ಕೆ ಸೂಚಿತವಾಗಿರುವ ನ್ಯೂಮ
ಮತ್ತಾ 1:18; 28:19; ಮಾರ್ಕ 1:8; ಲೂಕ 1:67; 2:27; ಯೋಹಾ 14:26; ಅಕಾ 1:8; 2:33; ರೋಮ 5:5; 8:15, 16; 2 ಕೊರಿಂ 13:14; ಎಫೆ 3:16; 4:4; 1 ಥೆಸ 5:19; ತೀತ 3:5; ಯೂದ 20
ಜೀವಶಕ್ತಿಗೆ ಸೂಚಿತವಾಗಿರುವ ನ್ಯೂಮ
ಲೂಕ 8:55 (ಪಾದಟಿಪ್ಪಣಿ); 23:46; ಅಕಾ 7:59
ದೇವರನ್ನು ಆತ್ಮಜೀವಿಯಾಗಿ ಅಥವಾ ಆತ್ಮಸ್ವರೂಪಿಯಾಗಿ ಸೂಚಿಸುವ ನ್ಯೂಮ
ಸ್ವರ್ಗೀಯ ದೇಹವನ್ನು ಸೂಚಿಸುವ ನ್ಯೂಮ
ಆತ್ಮಜೀವಿಗಳಿಗೆ ಸೂಚಿತವಾಗಿರುವ ನ್ಯೂಮ
ಮತ್ತಾ 8:16; 10:1; ಮಾರ್ಕ 3:11; 3:30; 1 ಕೊರಿಂ 15:45; ಇಬ್ರಿ 1:7; 1 ಪೇತ್ರ 3:18
ಹುಮ್ಮಸ್ಸು, ಆಂತರ್ಯ, ಮನೋಪ್ರವೃತ್ತಿ, ಭಾವನೆಗಳು, ಮನಸ್ಸು ಮತ್ತು ಹೃದಯಕ್ಕೆ ಸೂಚಿತವಾಗಿರುವ ನ್ಯೂಮ
ಲೂಕ 1:17; ಯೋಹಾ 11:33; 13:21; ಅಕಾ 17:16; 1 ಕೊರಿಂ 16:18; 2 ಕೊರಿಂ 2:13; 7:13; 1 ಥೆಸ 5:23
ಆತ್ಮಜೀವಿಗಳಿಂದ ಎಂದು ನಂಬಲಾಗುವ ಸಂವಾದಗಳಿಗೆ ಸೂಚಿತವಾಗಿರುವ ನ್ಯೂಮ