8 “ಹೇಡೀಸ್,” “ಷೀಓಲ್”—ಮಾನವಕುಲದ ಸಾಮಾನ್ಯ ಸಮಾಧಿ; ಗೋರಿ
ಗ್ರೀಕ್, ᾅδης (ಹೈಡೀಸ್); ಲ್ಯಾಟಿನ್, ಇನ್ಫರ್ನಸ್; ಹೀಬ್ರು, שאול (ಷೀಓಲ್); ಸಿರಿಯನ್, ಷೀಯುಲ್
ತಪ್ಪಾದ ಭಾಷಾಂತರವಾದ “ನರಕ” ಅಲ್ಲ
ಹೇಡೀಸ್ ಎಂಬ ಪದವು ಕಂಡುಬರುವ ಹತ್ತು ಸ್ಥಳಗಳು
ಪ್ರಾಯಶಃ “ಅಗೋಚರ ಸ್ಥಳ” ಎಂದು ಅರ್ಥನೀಡುವ “ಹೇಡೀಸ್” ಎಂಬ ಪದವು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದಲ್ಲಿ ಹತ್ತು ಬಾರಿ ಕಂಡುಬರುತ್ತದೆ. ಆ ಸ್ಥಳಗಳು ಯಾವುವೆಂದರೆ, ಮತ್ತಾಯ 11:23; 16:18; ಲೂಕ 10:15; 16:23; ಅಪೊಸ್ತಲರ ಕಾರ್ಯಗಳು 2:27, 31; ಪ್ರಕಟನೆ 1:18; 6:8; 20:13, 14.
ಅಪೊಸ್ತಲರ ಕಾರ್ಯಗಳು 2:27 ರಲ್ಲಿ ಕೀರ್ತನೆ 16:10 ರ ಪೇತ್ರನ ಉಲ್ಲೇಖವು ಹೇಡೀಸ್ ಎಂಬುದು ಷೀಓಲ್ ಎಂಬ ಪದದ ಸಮಾನಾರ್ಥಕ ಪದವಾಗಿದೆ ಎಂದು ತೋರಿಸುತ್ತದೆ ಮತ್ತು ಅದು ಮಾನವಕುಲದ ಸಾಮಾನ್ಯ ಸಮಾಧಿಗೆ ಅನ್ವಯವಾಗುತ್ತದೆ (ಇದು ಒಬ್ಬೊಬ್ಬ ವ್ಯಕ್ತಿಯ ಸಮಾಧಿಯನ್ನು ಸೂಚಿಸುವ ಗ್ರೀಕ್ ಪದವಾದ ಟೇಫಾಸ್ಗೆ ವ್ಯತಿರಿಕ್ತವಾಗಿದೆ). ಹೇಡೀಸ್ ಎಂಬುದಕ್ಕೆ ಅನುರೂಪವಾಗಿರುವ ಲ್ಯಾಟಿನ್ ಪದವು ಇನ್ಫರ್ನಸ್ (ಕೆಲವೊಮ್ಮೆ ಇನ್ಫರಸ್) ಎಂದಾಗಿದೆ. ಅದರ ಅರ್ಥ, “ಕೆಳಗಿರುವಂಥದ್ದು; ಕೆಳಪ್ರದೇಶ” ಎಂದಾಗಿದೆ ಮತ್ತು ಸೂಕ್ತವಾಗಿಯೇ ಇದು ಗೋರಿಗೆ ಅನ್ವಯವಾಗುತ್ತದೆ. ಆದುದರಿಂದ ಇದು ಗ್ರೀಕ್ ಮತ್ತು ಹೀಬ್ರು ಪದಗಳಿಗೆ ಸರಿಸುಮಾರು ಹತ್ತಿರವಿರುವ ಪದವಾಗಿದೆ.
ಪ್ರೇರಿತ ಶಾಸ್ತ್ರಗ್ರಂಥದಲ್ಲಿ “ಹೇಡೀಸ್” ಮತ್ತು “ಷೀಓಲ್” ಎಂಬ ಪದಗಳನ್ನು ಮರಣ ಮತ್ತು ಮೃತರಿಗೆ ಸಂಬಂಧಿಸಿ ಮಾತಾಡಲಾಗಿದೆಯೇ ಹೊರತು ಜೀವ ಮತ್ತು ಜೀವಿತರಿಗೆ ಸಂಬಂಧಿಸಿ ಅಲ್ಲ. (ಪ್ರಕಟನೆ 20:13) ಸ್ವತಃ ಈ ಪದಗಳಲ್ಲಿ ಸಂತೋಷದ ಅಥವಾ ನೋವಿನ ಯಾವುದೇ ವಿಚಾರವಾಗಲಿ ಸೂಚನೆಯಾಗಲಿ ಇಲ್ಲ.
ಷೀಓಲ್ ಎಂಬ ಪದವು ಕಂಡುಬರುವ ಅರವತ್ತಾರು ಸ್ಥಳಗಳು
ಹೀಬ್ರು ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದಲ್ಲಿ “ಷೀಓಲ್” ಎಂಬ ಪದವು 66 ಬಾರಿ ಕಂಡುಬರುತ್ತದೆ. ಆ ಸ್ಥಳಗಳು ಯಾವುವೆಂದರೆ, ಆದಿಕಾಂಡ 37:35; 42:38; 44:29, 31; ಅರಣ್ಯಕಾಂಡ 16:30, 33; ಧರ್ಮೋಪದೇಶಕಾಂಡ 32:22; 1 ಸಮುವೇಲ 2:6; 2 ಸಮುವೇಲ 22:6; 1 ಅರಸುಗಳು 2:6, 9; ಯೋಬ 7:9; 11:8; 14:13; 17:13, 16; 21:13; 24:19; 26:6; ಕೀರ್ತನೆ 6:5; 9:17; 16:10; 18:5; 30:3; 31:17; 49:14, 14, 15; 55:15; 86:13; 88:3; 89:48; 116:3; 139:8; 141:7; ಜ್ಞಾನೋಕ್ತಿ 1:12; 5:5; 7:27; 9:18; 15:11, 24; 23:14; 27:20; 30:16; ಪ್ರಸಂಗಿ 9:10; ಪರಮಗೀತ 8:6; ಯೆಶಾಯ 5:14; [7:11]; 14:9, 11, 15; 28:15, 18; 38:10, 18; 57:9; ಯೆಹೆಜ್ಕೇಲ 31:15, 16, 17; 32:21, 27; ಹೋಶೇಯ 13:14, 14; ಆಮೋಸ 9:2; ಯೋನ 2:2; ಹಬಕ್ಕೂಕ 2:5.
ಇಸವಿ 1977ರ ಬಿಬ್ಲಿಯ ಹಿಬ್ರೇಕ ಸ್ಟುಟ್ಗಾರ್ಟೆನ್ಸಿಯದಲ್ಲಿ “ಷೀಓಲ್” ಎಂಬ ಪದವು 65 ಬಾರಿ ಮತ್ತು ಸ್ವರಾಕ್ಷರದ ಗುರುತು ಚಿಹ್ನೆಯಲ್ಲಿ ತುಸು ವ್ಯತ್ಯಾಸವಿದ್ದು ಯೆಶಾಯ 7:11 ರಲ್ಲಿ ಒಂದು ಬಾರಿ ಕಂಡುಬರುತ್ತದೆ; ಹೀಬ್ರು ಶಾಸ್ತ್ರಗ್ರಂಥದಲ್ಲಿ ಈ ಎಲ್ಲ ಸ್ಥಳಗಳಲ್ಲಿ “ಷೀಓಲ್” ಎಂಬ ಪದವನ್ನು ಉಪಯೋಗಿಸಲಾಗಿದೆ. ಈ ಎಲ್ಲ ಸ್ಥಳಗಳಲ್ಲಿ ನೂತನ ಲೋಕ ಭಾಷಾಂತರವು ಷೀಓಲ್ ಎಂಬ ಹೀಬ್ರು ಪದವನ್ನು “ಷೀಓಲ್” ಎಂಬುದಾಗಿಯೇ ಉಪಯೋಗಿಸುತ್ತದೆ. ಗ್ರೀಕ್ ಸೆಪ್ಟ್ಯುಅಜಿಂಟ್ ಭಾಷಾಂತರವು ಷೀಓಲ್ ಎಂಬ ಪದವನ್ನು ಸಾಮಾನ್ಯವಾಗಿ ಹೇಡೀಸ್ ಎಂಬುದಾಗಿ ಭಾಷಾಂತರಿಸುತ್ತದೆ.
ಷೀಓಲ್ ಎಂಬ ಹೀಬ್ರು ಪದಕ್ಕೆ ಅನೇಕಾನೇಕ ಮೂಲಗಳನ್ನು ಸೂಚಿಸಲಾಗಿದೆಯಾದರೂ, ಮೂಲತಃ ಅದು “ಕೇಳಿಕೊಳ್ಳಲು” ಅಥವಾ “ವಿನಂತಿಸಲು” ಎಂಬ ಅರ್ಥವಿರುವ ಹೀಬ್ರು ಕ್ರಿಯಾಪದವಾದ שּׁאל (ಶಾಅಲ್)ನಿಂದ ಬಂದದ್ದಾಗಿದೆ. ಆದುದರಿಂದ ಷೀಓಲ್, ಮಾನವಕುಲದಲ್ಲಿ ಸತ್ತವರನ್ನು ತನ್ನೊಳಗೆ ತೆಗೆದುಕೊಳ್ಳುವುದರಿಂದ, ಯಾವುದೇ ಭೇದವಿಲ್ಲದೆ ಎಲ್ಲರನ್ನು ಕೇಳಿಕೊಳ್ಳುವ ಅಥವಾ ತಗಾದೆಮಾಡುವ ಒಂದು ಸ್ಥಳ (ಒಂದು ಸ್ಥಿತಿಯಲ್ಲ) ಎಂಬುದನ್ನು ಇದು ಸೂಚಿಸುತ್ತದೆ. (ನೂತನ ಲೋಕ ಭಾಷಾಂತರದ ರೆಫರೆನ್ಸ್ ಬೈಬಲ್ನಲ್ಲಿ (ಇಂಗ್ಲಿಷ್) ಆದಿಕಾಂಡ 37:35 ಮತ್ತು ಯೆಶಾಯ 7:11 ರ ಪಾದಟಿಪ್ಪಣಿಗಳನ್ನು ನೋಡಿ.) ಆ ಸ್ಥಳವು ಭೂಮಿಯಲ್ಲಿದೆ ಮತ್ತು ಯಾವಾಗಲೂ ಸತ್ತವರಿಗೆ ಸಂಬಂಧಿಸಿದ್ದಾಗಿದೆ; ಸ್ಪಷ್ಟವಾಗಿ ಹೇಳಬೇಕಾದರೆ ಅದು ಮಾನವಕುಲದ ಸಾಮಾನ್ಯ ಸಮಾಧಿಯನ್ನು, ಗೋರಿಯನ್ನು ಅಥವಾ ಮೃತರ ಭೂಕ್ಷೇತ್ರವನ್ನು (ಸಮುದ್ರವನ್ನಲ್ಲ) ಸೂಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಕೀವರ್ ಎಂಬ ಹೀಬ್ರು ಪದವು ಒಬ್ಬೊಬ್ಬ ವ್ಯಕ್ತಿಯ ಸಮಾಧಿಯನ್ನು ಅಥವಾ ಹೂಳುವ ಸ್ಥಳವನ್ನು ಸೂಚಿಸುತ್ತದೆ.—ಆದಿಕಾಂಡ 23:4, 6, 9, 20.