ಪ್ರಲಾಪ ಮುಖ್ಯಾಂಶಗಳು 1 ವಿಧವೆ ತರ ಇರೋ ಯೆರೂಸಲೇಮ್ ಅವಳು ಒಬ್ಬಳೇ ಕೂತಿದ್ದಾಳೆ, ಅವಳನ್ನ ಕೈಬಿಡಲಾಗಿದೆ (1) ಚೀಯೋನಿನ ಘೋರ ಪಾಪಗಳು (8, 9) ಚೀಯೋನನ್ನ ದೇವರು ತಿರಸ್ಕರಿಸಿದ್ದಾನೆ (12-15) ಚೀಯೋನನ್ನ ಸಮಾಧಾನ ಮಾಡೋಕೆ ಯಾರೂ ಇಲ್ಲ (17) 2 ಯೆರೂಸಲೇಮಿನ ಮೇಲೆ ಯೆಹೋವನ ಕೋಪ ಕನಿಕರ ತೋರಿಸಲಿಲ್ಲ (2) ಯೆಹೋವ ಅವಳಿಗೆ ಶತ್ರು ತರ ಇದ್ದಾನೆ (5) ಚೀಯೋನಿಗಾಗಿ ಕಣ್ಣೀರು (11-13) ದಾರಿಯಲ್ಲಿ ಹೋಗೋರು ಸುಂದರವಾಗಿದ್ದ ಪಟ್ಟಣಕ್ಕೆ ಅವಮಾನ ಮಾಡಿದ್ರು (15) ಶತ್ರು ಚೀಯೋನಿನ ನಾಶನಕ್ಕೆ ಖುಷಿಪಡ್ತಾನೆ (17) 3 ಯೆರೆಮೀಯನ ಭಾವನೆಗಳು ಮತ್ತು ನಿರೀಕ್ಷೆ “ನಿನಗಾಗಿ ತಾಳ್ಮೆಯಿಂದ ಕಾಯ್ತೀನಿ” (21) ದಿನದಿನ ದೇವರ ಕರುಣೆ ಹೊಸದಾಗುತ್ತೆ (22, 23) ದೇವರ ಮೇಲೆ ಭರವಸೆ ಇಡುವವ್ರಿಗೆ ಆತನು ಒಳ್ಳೇದೇ ಮಾಡ್ತಾನೆ (25) ಯುವಕರು ನೊಗ ಹೊರೋದು ಒಳ್ಳೇದು (27) ಪ್ರಾರ್ಥನೆ ತನಗೆ ಮುಟ್ಟಬಾರದು ಅಂತ ದೇವರು ಮೋಡ ಅಡ್ಡ ಇಟ್ಟನು (43, 44) 4 ಯೆರೂಸಲೇಮ್ ಮುತ್ತಿಗೆಯಿಂದ ಘೋರ ಪರಿಣಾಮಗಳು ಆಹಾರದ ಅಭಾವ (4, 5, 9) ಸ್ತ್ರೀಯರು ಹೆತ್ತ ಮಕ್ಕಳನ್ನೇ ಬೇಯಿಸಿದ್ರು (10) ಯೆಹೋವ ಕೋಪಾಗ್ನಿ ಸುರಿಸಿದ್ದಾನೆ (11) 5 ಒಳ್ಳೇ ದಿನಕ್ಕಾಗಿ ಜನ್ರ ಪ್ರಾರ್ಥನೆ “ನಮಗೆ ಬಂದಿರೋ ಕಷ್ಟ ನೆನಪಿಸ್ಕೊ” (1) “ನಮ್ಮ ಗತಿ ಏನಂತ ಹೇಳೋಣ, ನಾವು ಪಾಪ ಮಾಡಿದ್ದೀವಲ್ಲಾ” (16) “ಯೆಹೋವನೇ, ನಮ್ಮನ್ನ ನಿನ್ನ ಹತ್ರ ವಾಪಸ್ ಕರ್ಕೊಂಡು ಹೋಗು” (21) “ಮತ್ತೆ ಒಳ್ಳೇ ದಿನಗಳು ಬರೋ ಹಾಗೆ ಮಾಡು” (21)