ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 5/8 ಪು. 28
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಚರ್ನೊಬಿಲ್‌ನ ಇತ್ತೀಚೆಗಿನ ವಾರ್ತೆ
  • ಸೂರ್ಯ ಪ್ರಕಾಶಿಸುವಾಗ
  • ಬಡ ಮಕ್ಕಳು
  • ಖಾಲಿ ಚರ್ಚುಗಳು
  • ಸೂಕ್ಷ್ಮಾತಿಸೂಕ್ಷ್ಮಜೀವಿ
  • ಗಲಿಬಿಲಿಗೊಂಡಿರುವ ಹುಲಿಗಳು
  • ಕತ್ತಲಲ್ಲಿ ಕಣ್ಣಾಗಿರೋ ಬಾವಲಿಯ ಕಿವಿ!
    ವಿಕಾಸವೇ? ವಿನ್ಯಾಸವೇ?
  • ಜಗತ್ತನ್ನು ಗಮನಿಸುವುದು
    ಎಚ್ಚರ!—2004
ಎಚ್ಚರ!—1991
g91 5/8 ಪು. 28

ಜಗತ್ತನ್ನು ಗಮನಿಸುವುದು

ಚರ್ನೊಬಿಲ್‌ನ ಇತ್ತೀಚೆಗಿನ ವಾರ್ತೆ

ರಷ್ಯಾದ ಚರ್ನೊಬಿಲ್‌ನಲ್ಲಿ ನ್ಯೂಕ್ಲಿಯರ್‌ ಅಪಘಾತವಾಗಿ ನಾಲ್ಕುವರೆ ವರ್ಷಗಳ ಬಳಿಕ, ಸ್ಥಳೀಯರು, “ವಿಶೇಷವಾಗಿ ಮಕ್ಕಳು, ಥೈರಾಯ್ಡ್‌ ಗ್ರಂಥಿಗಳ ಊತ, ಆಲಸ್ಯ ಮನೋಭಾವ, ಕಣ್ಣಿನ ಪೊರೆ ಮತ್ತು ಕ್ಯಾನ್ಸರ್‌ ರೋಗದ ವೃದ್ಧಿಯಿಂದ ಬಾಧೆ ಪಡುತ್ತಿದ್ದಾರೆ” ಎನ್ನುತ್ತದೆ ಮೆಂಚೆಸ್ಟರ್‌ ಗಾರ್ಡಿಯನ್‌ ವೀಕ್ಲಿ. ಒಂದು ಸ್ಥಳದಲ್ಲಿ, ಹತ್ತಾರು ಸಾವಿರ ಜನರು ರಶ್ಮಿ ವಿಕಿರಣದಿಂದಾದ ಕ್ಯಾನ್ಸರ್‌ದಿಂದ ಸಾಯಲಿದ್ದಾರೆ ಎಂದು ವೈದ್ಯಕೀಯ ಪರಿಣಿತರು ಮುಂತಿಳಿಸುತ್ತಾರೆ. ಪಶುಪಾಲನೆಯ ಅಧಿಕಾರಿಗಳು, ಪಶುಗಳಲ್ಲಿ ಹೆಚ್ಚುತ್ತಿರುವ ಜನ್ಮದೋಷಗಳನ್ನು ವರದಿ ಮಾಡುತ್ತಾರೆ: “ತಲೆ, ಕಾಲು, ಪಕ್ಕೆಲುಬು ಮತ್ತು ಕಣ್ಣುಗಳಿಲ್ಲದ ಕರುಗಳು, ವಿಕಾರ ತಲೆಬುರುಡೆಯ ಹಂದಿಗಳು.” ಈ ಸ್ಥಳದಲ್ಲಿ ವಿಕಿರಣ ಶಕ್ತಿಯ ಮಟ್ಟ ಸಾಮಾನ್ಯಕ್ಕಿಂತ ಮೂವತ್ತು ಪಾಲು ಹೆಚ್ಚಿದೆ. ಬೀಲೊರಷ್ಯಾದ ಮೋಗಿಲೆವ್‌ ಪ್ರದೇಶದ ಆಸ್ಪತ್ರೆಯ ಡೈರೆಕ್ಟರ್‌ ಸೋಯ ಕಚೋನ ಹೇಳಿದ್ದು: “ಈ ಮಲಿನತೆಯ ಪ್ರದೇಶದ ಜನರಿಗೆ ಆರೋಗ್ಯಕರ ಜೀವನದ ಯಾವ ಖಾತರಿಯನ್ನೂ ನಾವು ಕೊಡಲಾರೆವು.” (g90 3/8)

ಸೂರ್ಯ ಪ್ರಕಾಶಿಸುವಾಗ

ಫೆಡರಲ್‌ ರಿಪಬ್ಲಿಕ್‌ ಆಫ್‌ ಜರ್ಮನಿಯ ವಾಸ್ತುಶಿಲ್ಪಿಯೊಬ್ಬನು ಗಮನಾರ್ಹವಾಗಿ ಕಾರ್ಯಸಾಧಕವಾದ ಆದರೂ ವಿಚಿತ್ರವಾಗಿ ಕಾಣುವ ಸೂರ್ಯ ಶಕ್ತಿಯ ಕಾರನ್ನು ರಚಿಸಿದ್ದಾನೆ. ಡೈ ಸೀಯಟ್‌ ಪತ್ರಿಕೆಗನುಸಾರ, ಈ ವಾಸ್ತುಶಿಲ್ಪಿಯ ಸ್ವಂತ ಊರಿನಲ್ಲಿ ಈ ಕಾರು ಮಕ್ಕಳಿಂದ ಹರ್ಷೋದಾರ್ಗಗಳನ್ನು ಪಡೆಯುವಾಗ ವಯಸ್ಕರು, ಇದೇನೋ ಪಿಂಗ್‌ಪಾಂಗ್‌ ಮೇಜು ಅಥವಾ ಚಪ್ಪಟೆ ಮೀನಿನಂತೆ ಕಾಣುತ್ತದೆ ಎಂದು ಚರ್ಚಿಸುತ್ತಾರೆ. ಆದರೆ ರೂಪವನ್ನು ಬಿಟ್ಟರೆ, ಈ ಕಾರು ಯಶಸ್ವಿಯೇ ಸರಿ. ಅದು ಸೂರ್ಯ ಶಕ್ತಿಯ ವಾಹನಗಳಿಗೆ ವರ್ಲ್ಡ್‌ ಚ್ಯಾಂಪಿಯನ್‌ಶಿಪ್‌ ಗೆದ್ದಿರುವುದು ಮಾತ್ರವಲ್ಲ ತಾಸಿಗೆ 80 ಮೈಲು ವೇಗವನ್ನೂ ಮುಟ್ಟಿದೆ. ಬ್ಯಾಟರಿ ಪೂರ್ತಿ ಚಾರ್ಜ್‌ ಆಗಿರುವಾಗ ಅದು ಇಷ್ಟು ವೇಗವಾಗಿ ಹೋಗುತ್ತದೆ. ಆದರೆ ನೇರವಾಗಿ ಸೂರ್ಯ ಬೆಳಕಿನಲ್ಲಿ ಚಲಿಸುವಾಗ—ಸೂರ್ಯನು ಪ್ರಕಾಶಿಸುವಾಗ ಮಾತ್ರ— ಅದು ತಾಸಿಗೆ 20 ಮೈಲಿಗಿಂತ ಹೆಚ್ಚು ವೇಗವಾಗಿ ಓಡದು. (g90 3/8)

ಬಡ ಮಕ್ಕಳು

ಅಮೇರಿಕವು ಸಂಪತ್ತು ಮತ್ತು ಸಮೃದ್ಧಿಗೆ ಪ್ರಸಿದ್ಧವಾದರೂ ಸರಕಾರದ ಸಂಸ್ಥೆಗಳು ನಡಿಸಿದ ಅಧ್ಯಯನಗಳು ಆ ದೇಶದಲ್ಲಿ ಮಿಲ್ಯಾಂತರ ಮಂದಿ ಅನಾರೋಗ್ಯ ಮತ್ತು ವಿದ್ಯಾಹೀನರಾದ ಮಕ್ಕಳಿದ್ದಾರೆಂದು ತಿಳಿಸಿದವು. ಸೆನ್ಸಸ್‌ ಬ್ಯೂರೋ ಸರ್ವೇಗನುಸಾರ, ಅಮೇರಿಕದಲ್ಲಿ 18ಕ್ಕಿಂತ ಕಡಿಮೆ ವಯಸ್ಸಿನವರಾದ 1 ಕೋಟಿ 26 ಲಕ್ಷ ಮಕ್ಕಳು ಅಂದರೆ 5ರಲ್ಲಿ ಒಂದು ಮಗು ದರಿದ್ರ ರೇಖೆಯ ಕೆಳಗೆ ಜೀವಿಸುತ್ತದೆ. ಮಕ್ಕಳಲ್ಲಿ ಬಡತನದ ವರ್ಧನಕ್ಕೆ ಅಂಶಿಕವಾಗಿ ಏಕ ಹೆತ್ತವರಿರುವ ಕುಟುಂಬಗಳ ಹೆತ್ತವರೇ ಕಾರಣವೆಂದು ಅರ್ಥ ಶಾಸ್ತ್ರಜ್ಞ ಡಿ. ಲೀ. ಬಾಡೆನ್‌ ಆರೋಪ ಹೊರಿಸುತ್ತಾರೆ. ಅಮೆರಿಕದಲ್ಲಿ ಒಂದು ಕೋಟಿ 70 ಲಕ್ಷ ಮಕ್ಕಳು ಒಂಟಿಗ ಹೆತ್ತವರೊಂದಿಗೇ ಜೀವಿಸುತ್ತಾರೆಂದು ಅಂದಾಜು ಮಾಡಲಾಗುತ್ತದೆ. (g90 3/8)

ಖಾಲಿ ಚರ್ಚುಗಳು

ಫೆಡರಲ್‌ ರಿಪಬ್ಲಿಕ್‌ ಆಫ್‌ ಜರ್ಮನಿಯ ಇತ್ತೀಚೆಗಿನ ಒಂದು ಸರ್ವೇಗನುಸಾರ 70 ಸೇಕಡಾ ಜರ್ಮನರು ದೈವ ವಿಶ್ವಾಸಿಗಳು ಮತ್ತು ಕೇವಲ 13 ಸೇಕಡಾ ನಾಸ್ತಿಕರು, ಎನ್ನುತ್ತದೆ ಜರ್ಮನ್‌ ಪತ್ರಿಕೆ ಷ್ವೈನ್‌ಫರ್ಟರ್‌ ಟ್ಯಾಗ್‌ಬ್ಲಾಟ್‌. ಆದರೆ ಆ್ಯಲನ್ಸ್‌ಬ್ಯಾಕ್‌ ಓಪಿನ್ಯನ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ ನಡೆಸಿದ ಜನಮತ, ಫೆಡರಲ್‌ ರಿಪಬ್ಲಿಕ್‌ ಆಫ್‌ ಜರ್ಮನಿಯಲ್ಲಿ 5 ಸೇಕಡಾ ಲೂಥರನರು ಮತ್ತು 25 ಸೇಕಡಾ ಕಥೋಲಿಕರು ಮಾತ್ರ ಚರ್ಚ್‌ ಆರಾಧನೆ ಕ್ರಮವಾಗಿ ಉಪಸ್ಥಿತರೆಂದು ತೋರಿಸಿತು. ಇವರಲ್ಲಿ 50 ಸೇಕಡಾ 60ಕ್ಕಿಂತ ಹೆಚ್ಚು ವಯಸ್ಸಿನವರು. (g90 3/8)

ಸೂಕ್ಷ್ಮಾತಿಸೂಕ್ಷ್ಮಜೀವಿ

ಜಲಚರಗಳಲಿ ಸೂಕ್ಷ್ಮಾತಿಸೂಕ್ಷ ಜೀವಾಣುಗಳ ಒಂದು ಹೊಸ ಕ್ಷೇತ್ರವು ಸಂಶೋಧಿಸಲ್ಪಟ್ಟಿದೆ: 0.000008 ಇಂಚು ಸುತ್ತಳತೆಗಿಂತ ದೊಡ್ಡದಿರದ ಕೀಟಗಳು. ಹಿಂದೆ ಕಂಡು ಹಿಡಿದ ಅತ್ಯಂತ ಸೂಕ್ಷ್ಮ ಜೀವಾಣುಗಳು 0.0004 ಇಂಚು ಅಳತೆಯ ನ್ಯಾನೊಪ್ಲಾಂಕ್‌ಟನ್‌, ಮತ್ತು 0.0008ಕ್ಕಿಂತಲೂ ಕಡಿಮೆ ಸುತ್ತಳತೆಯ ಪಿಕೊಪ್ಲಾಂಕ್‌ಟನ್‌. ಒಂದು ಏಕ ಘನ ಇಂಚು ಅಮಾಲಿನ್ಯ ಜಲದಲ್ಲಿ 160 ಮಿಲಿಯದಿಂದ 1,600 ಮಿಲಿಯ ಕೀಟಗಳು—ಏಕಾಣುಜೀವಿಗಿಂತ ಸಂಖ್ಯೆಯಲ್ಲಿ ಹತ್ತು ಪಾಲಷ್ಟು ಹೆಚ್ಚು—ಅಸ್ತಿತ್ವದಲ್ಲಿವೆಂದು ಅಂದಾಜು ಮಾಡಲಾಗಿದೆ. ಇದು ಅವನ್ನು “ಭೂಮಿಯಲ್ಲಿರುವ ಅತಿಸಂಖ್ಯಾತ ಜೀವಜಂತುಗಳಾಗಿ ಮಾಡುತ್ತದೆ” ಎನ್ನುತ್ತದೆ ಸೈಂಟಿಫಿಕ್‌ ಅಮೆರಿಕನ್‌. (g90 3/22)

ಗಲಿಬಿಲಿಗೊಂಡಿರುವ ಹುಲಿಗಳು

ಭಾರತದ ಸುಂದರ್‌ಬನ್‌ ಹುಲಿ ಅಭಯಾರಣ್ಯದಲ್ಲಿ ಸುಮಾರು 500 ಬಂಗಾಳ ಹುಲಿಗಳು ವರ್ಷಕ್ಕೆ ಸುಮಾರು 60 ಜನರನ್ನು ಕೊಲ್ಲುತ್ತವೆಂದು ನ್ಯೂ ಯೋರ್ಕ್‌ ಟೈಮ್ಸ್‌ ಹೇಳುತ್ತದೆ. ಮನುಷ್ಯ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಭಾರತದ ಅರಣ್ಯ ಇಲಾಖೆ ಹೊಸ ಕ್ರಮವನ್ನು ಜಾರಿಗೆ ತಂದಿದೆ. ಹುಲಿಗಳು ಹಿಂದಿನಿಂದ ಮಾತ್ರ ಜನರ ಮೇಲೆ ಬೀಳುತ್ತವೆಂದು ಹೇಳಲಾಗುವುದರಿಂದ, ಕೆಲಸಗಾರರಿಗೆ ತಲೆಯ ಹಿಂಭಾಗದಲ್ಲಿ ಹಾಕುವ ಮೊಗವಾಡಗಳನ್ನು ಕೊಡಲಾಗಿದೆ. ಮೂರು ವರ್ಷಗಳಲ್ಲಿ ಮೊಗವಾಡ ಹಾಕಿರುವ ಯಾವನೂ ಕೊಲ್ಲಲ್ಪಟ್ಟಿರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಆ ಮೂರು ವರ್ಷಗಳ ಅವಧಿಯ ಕಡೇ 18 ತಿಂಗಳುಗಳಲ್ಲಿ ಹುಲಿಗಳು ಕೊಂದ 29 ಜನರಲ್ಲಿ ಯಾವನೂ ಮೊಗವಾಡ ಹಾಕಿಕೊಂಡಿರಲಿಲ್ಲ. ಮರಕಡಿಯುತ್ತಿದ್ದ ಒಬ್ಬನು ಊಟಕ್ಕೆ ಕೂತು ತನ್ನ ಮೊಗವಾಡವನ್ನು ತೆಗೆದಿಟ್ಟಾಗ ಹುಲಿ ಹಿಂದಿನಿಂದ ನೆಗೆಯಿತು. ಸ್ಥಳೀಕ ನಿವಾಸಿಗಳಲ್ಲಿ ಕೆಲವರು, “ಈ ಜಾಣ ಹುಲಿಗಳನ್ನು ದೀರ್ಘ ಸಮಯದ ತನಕ ವಂಚಿಸ ಸಾಧ್ಯವಿಲ್ಲ” ಎಂದು ವಾದಿಸುತ್ತಾರೆ. (g90 3/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ