ನಿಮ್ಮ ಗ್ಯಾರಂಟಿಯನ್ನು ತಿಳಿಯುವುದು ಲಾಭಕರ
“ಗ್ಯಾರಂಟಿಯ ತೃಪ್ತಿ.” “ಹಣ ವಾಪಾಸಿನ ಗ್ಯಾರಂಟಿ.” “ಅಪರಿಮಿತ ಗ್ಯಾರಂಟಿ.” ಖರೀದಿಸುವವರು ವಸ್ತುಗಳನ್ನು ಯಾ ಉತ್ಪನ್ನಗಳನ್ನು ಕೊಳ್ಳುವಂತೆ ಜಾಹೀರಾತುಗಾರರು ಉಪಯೋಗಿಸುವವುಗಳಲ್ಲಿ ಇವು ಕೆಲವು ಗುರಿನುಡಿಗಳು. ಇಂಥ ಭರವಸೆಗಳು ನಿಮ್ಮ ಮನತಟ್ಟಿವೆಯೆ? ಹಾಗಿರುವಲ್ಲಿ ಜಾಗ್ರತೆ!
ದ ಕನ್ಸೂಮರ್ಸ್ ಹ್ಯಾಂಡ್ಬುಕ್ ಪತ್ರಿಕೆಯಲ್ಲಿ ಲಿನ್ ಗೋರ್ಡನ್ ಇದು ಏಕೆಂದು ತಿಳಿಸುತ್ತಾರೆ: “ಆ ಪದಗಳಿಗೆ ಎಂಥ ಶಿಲಾಶಕ್ತಿಯ ಸುಭದ್ರತೆಯಿದೆಯೆಂದರೆ, ಒಂದು ನಿರ್ದಿಷ್ಟ ವಸ್ತುವನ್ನು ಕೊಳ್ಳುವಾಗ ಅವುಗಳ ನಿಜಾರ್ಥವನ್ನು ತಿಳಿದುಕೊಳ್ಳುವ ಗಿರಾಕಿಗಳು ವಿರಳ. ಮತ್ತು ಅದನ್ನು ಅವರು ಆ ಬಳಿಕ ಅಂದರೆ ಆ ಗ್ಯಾರಂಟಿಯ ಲಾಭವನ್ನು ಪಡೆಯಲು ಪ್ರಯತ್ನಿಸುವಾಗ, ಅಂಥ ಗ್ಯಾರಂಟಿಯೆ ಇಲ್ಲ, ಯಾ ಅದು ಅಗತ್ಯವಿರುವ ರಿಪೇರಿ ಯಾ ಭರ್ತಿಯನ್ನು ಆವರಿಸುವುದಿಲ್ಲವೆಂದು ಕಂಡುಹಿಡಿಯುತ್ತಾರೆ.” ನೀವು ಆ ಗೆರೆಯ ಮೇಲೆ ಹಸ್ತಾಕ್ಷರ ಮಾಡುವ ಮೊದಲು ನಿಮ್ಮ ಗ್ಯಾರಂಟಿಯನ್ನು ತಿಳಿಯವುದರಿಂದ ಆ ಬಳಿಕ ಬರುವ ವ್ಯಾಕುಲತೆ, ಹೃದೇದ್ವನೆ ಮತ್ತು ಹಣ ಖರ್ಚಿನಿಂದ ಅದು ನಿಮ್ಮನ್ನು ರಕ್ಷಿಸಬಲ್ಲದು.
ವಾರಂಟಿ ಅಂದರೇನು?
“ಗ್ಯಾರಂಟಿ” ಎಂಬ ಪದ ಜನಪ್ರಿಯವಾಗಿರುವುದಾದರೂ, ಅದು ನಿಜವಾಗಿ ವಾರಂಟಿಯ ವಿಷಯ ಮಾತಾಡುತ್ತದೆ. ವೆಬ್ಸ್ಟರ್ಸ್ ತರ್ಡ್ ನ್ಯೂ ಇಟರ್ನ್ಯಾಶನಲ್ ಅನೆಬ್ರಿಜ್ಡ್ ಡಿಕ್ಷನೆರಿ ಇದಕ್ಕೆ ಈ ಅರ್ಥ ಕೊಡುತ್ತದೆ: “ಖರೀದಿಸುವವನಿಗೆ ಕೊಡಲ್ಪಡುವ ವಸ್ತುವಿನ ಭದ್ರತೆ ಮತ್ತು ಉತ್ಪನ್ನಕಾರನ ಸದ್ಭಾವದ ಮತ್ತು ಸಾಮಾನ್ಯವಾಗಿ ಒಂದು ಸಮಯಾವಧಿಯ ತನಕ ಉತ್ಪನ್ನಕಾರನು ನ್ಯೂನತೆಯ ಭಾಗಗಳಿಗೆ ಯಾ ವಸ್ತುಭರ್ತಿ ಮಾಡಲು ಮತ್ತು ಕೆಲವು ಸಲ ನಿಯತಕಾಲಿಕವಾದ ವಸ್ತುವನ್ನು ರಿಪೇರಿಯಲ್ಲಿಡಲು ಜವಾಬ್ದಾರನು ಎಂಬುದನ್ನು ತಿಳಿಸುವ ಲಿಖಿತ ಗ್ಯಾರಂಟಿ.”
ವಾರಂಟಿಗಳು ನಿಮ್ಮನ್ನು ಗುಪ್ತ ಯಾ ಠಕ್ಕಿನ ವ್ಯಾಪಾರ ರೀತಿಗಳಿಂದ ಮತ್ತು ಅಪ್ರಾಮಾಣಿಕ ಮಾರಾಟಗಾರರಿಂದ ರಕ್ಷಿಸಬಲ್ಲದು. ಉದಾಹರಣೆಗೆ, ಒಬ್ಬ ಕಾರ್ ವ್ಯಾಪಾರಿ, ಉಪಯೋಗಿಸಿದ್ದ ಮತ್ತು ತೀರಾ ಕೆಟ್ಟುಹೋಗಿದ್ದ ಕಾರನ್ನು ಅದು ಅತ್ಯುತ್ತಮ ಸ್ಥಿತಿಯಲ್ಲಿದೆ ಎಂದು ಹೇಳಿ ಮಾರಿದಾಗ, ಖರೀದಿಸಿದವನು ವ್ಯಾಪಾರಿಯನ್ನು ಕೋರ್ಟಿಗೆ ಕೊಂಡೊಯ್ದನು. ಗಿರಾಕಿ ಸೂಚಿತ ವಾರಂಟಿಯಿಂದ ರಕ್ಷಿಸಲ್ಪಟ್ಟದರ್ದಿಂದ ನ್ಯಾಯಾಧೀಶನು ಈ ಉಪಯೋಗಿಸಲ್ಪಟ್ಟ ಕಾರಿನ ವ್ಯಾಪಾರಿ ಗಿರಾಕಿಗೆ ಖರೀದಿಸಿದ ಬೆಲೆಗಿಂತ ಇಮ್ಮಡಿಯನ್ನು ವಾಪಾಸು ಮಾಡುವಂತೆ ತೀರ್ಮಾನಿಸಿದನು.
ನಿಮ್ಮ ವಾರಂಟಿಯನ್ನು ತಿಳಿದುಕೊಳ್ಳಿರಿ!
ವಾರಂಟಿ ಯಾ ಗ್ಯಾರಂಟಿಯು ವಸ್ತುವಿನ ಬಿಲ್ಲೆ ಯಾ ಲೇಬಲಿನಲ್ಲಿ ಕಂಡು ಬರಬಹುದು ಯಾ ಆ ವಸ್ತುವಿನೊಂದಿಗೆ ಬರುವ ಇತರ ಸಾಮಾನುಗಳಲ್ಲಿ ಮುದ್ರಿಸಲ್ಪಟ್ಟಿರಬಹುದು. ಸಾಧಾರಣವಾಗಿ ಉಪಯೋಗಿಸಲ್ಪಡುವ ಕೆಲವು ಪದ ಸಮೂಹಗಳು ಹೀಗಿವೆ:
ಬಾಯಿ ಮಾತಿನ ವಾರಂಟಿ ಯನ್ನು ಜಾರಿಗೆ ತರುವುದು ಲಿಖಿತ ವಾರಂಟಿಗಿಂತ ಹೆಚ್ಚು ಕಷ್ಟಕರ. ಆದುದರಿಂದ, ವ್ಯಾಪಾರಿ ತನ್ನ ಪ್ರಾಮಾಣಿಕತೆಗೆ ಪ್ರಸಿದ್ಧನಾಗಿರುವಾಗಲೂ ಎಲ್ಲ ಗ್ಯಾರಂಟಿಗಳನ್ನು ಬರೆವಣಿಗೆಯಲ್ಲಿ ತೆಗೆದುಕೊಳ್ಳುವುದು ಅತ್ಯುತ್ತಮ.
ಮಾರಾಟಗಾರನ ವಾರಂಟಿ ವ್ಯಾಪಾರಿಯು ಮಾರುವ ವಸ್ತುವಿನ ಕೆಲಸ ಮತ್ತು ಗುಣಮಟ್ಟಕ್ಕೆ ಜವಾಬ್ದಾರಿ ವಹಿಸುವ ವಚನವನ್ನು ಒದಗಿಸುತ್ತದೆ. ಈ ಗ್ಯಾರಂಟಿಗಳು ಸಾಮಾನ್ಯವಾಗಿ ಸೂಚಿತ ಯಾ ಅಭಿವ್ಯಕ್ತಿಕ ವಾರಂಟಿಗಳು.
ಸೂಚಿತ ವಾರಂಟಿಗಳು ಬಳಕೆದಾರರ ಎಲ್ಲ ಕರಾರುಗಳಲ್ಲಿರುತ್ತವೆಂಬ ಪೂರ್ವ ಭಾವನೆಯಿದೆ. ಯು ಎಂಡ್ ದ ಲಾ ಎಂಬ ಪುಸ್ತಕಕ್ಕನುಸಾರ, ಸೂಚಿತ ವಾರಂಟಿ “ವ್ಯಾಪಾರಿಗೆ ಮಾರುವ ಹಕ್ಕಿದೆಯೆಂದೂ, ಕೊಡಲ್ಪಟ್ಟಿರುವ ವರ್ಣನೆಗೆ ವಸ್ತುಗಳು ಸಾಧಾರಣವಾಗಿ ಹೊಂದಿಕೊಂಡಿವೆಯೆಂದೂ ಅವು ಒಳ್ಳೆಯ ಸ್ಥಿತಿಯಲ್ಲಿವೆಯೆಂದೂ ಮತ್ತು ಮೂಲತಃ ಅವು ಹೇಳಲ್ಪಟ್ಟಿರುವ ಉದ್ದೇಶಕ್ಕೆ ಯೋಗ್ಯವಾಗಿವೆಯೆಂದೂ ಭರವಸೆ ಕೊಡುತ್ತದೆ.” ಉದಾಹರಣೆಗೆ, ಒಂದು ಟೋಸ್ಟರು, ಬೆಡ್ಡನ್ನು ಟೋಸ್ಟ್ ಮಾಡಬೇಕು. ಇಂಥ ಭರವಸೆ ಸೂಚಿತವಾಗಿರುವುದರಿಂದ ಅವು ಇವೆಯೊ ಎಂಬುದು ಬಳಕೆದಾರನಿಗೆ ತಿಳಿದಿರಲಿಕ್ಕಿಲ್ಲ. “ಇರುವ ಸ್ಥಿತಿಯಲ್ಲಿ” ಮಾರಲ್ಪಟ್ಟ ವಸ್ತುವಿಗೆ ಸೂಚಿತ ವಾರಂಟಿಯಿಲ್ಲ.
ಎಕ್ಸ್ಪ್ರೆಸ್ ವಾರಂಟಿ ಎಂಬುದು ವಸ್ತುಗಳ ಕೆಲಸ ಮತ್ತು ಗುಣಮಟ್ಟದ ಕುರಿತು ನಿರ್ದಿಷ್ಟ ಭರವಸೆಯನ್ನು ನೀಡುತ್ತದೆ. ಇದನ್ನು ಸಾಮಾನ್ಯವಾಗಿ ಬರೆದು ಮಾಡಲಾಗುತ್ತದೆ. ನಿಯಮ ಸೂಚಿತ ವಾರಂಟಿಗಳನ್ನು ಎಕ್ಸ್ಪ್ರೆಸ್ ವಾರಂಟಿ ರದ್ದು ಮಾಡುವುದಿಲ್ಲ. ಕನ್ಸೂಮರ್ ರೈಟ್ಸ್ ಎಂಡ್ ರೆಸ್ಪಾನ್ಸಿಬಿಲಿಟೀಸ್ ಎಂಬ ಪುಸ್ತಕ ಹೇಳುವಂತೆ, “ಎಕ್ಸ್ಪ್ರೆಸ್ ಕರಾರು ಯಾ ವಾರಂಟಿ ಉತ್ಪಾದಕನನ್ನು ಯಾ ಮಾರಾಟಗಾರನನ್ನು(ಇವರಲ್ಲಿ ವಚನ ಕೊಟ್ಟವನನ್ನು) ಆ ವಚನಕ್ಕೆ⁄ಗ್ಯಾರಂಟಿಗೆ ಹಾಗೂ ಆಗಲೆ ನಿಯಮವು ಕೇಳಿಕೊಳ್ಳುವ ವಚನಗಳ ಬದಲಿಗಲ್ಲ, ಆ ವಚನಗಳಿಗೆ ಬದ್ಧನಾಗಿ ಮಾಡುತ್ತದೆ.”
ತಯಾರಕರ ವಾರಂಟಿ ವಸ್ತುವಿನ ಸಾಮಾನ್ಯ ಸ್ಥಿತಿಗೆ ಖಾತರಿ ಕೊಟ್ಟು ಒಂದು ನಿರ್ದಿಷ್ಟ ವಸ್ತುವಿಗೆ ಉಂಟಾಗುವ ಕುಂದುಗಳನ್ನು ತಯಾರಕನ ಖರ್ಚಿನಲ್ಲಿ ರಿಪೇರಿ ಮಾಡಿಕೊಡುವ ಒಪ್ಪಂದ ಇದರಲ್ಲಿ ಸಾಮಾನ್ಯವಾಗಿ ಸೇರಿರುತ್ತದೆ. ಯು ಎಂಡ್ ದ ಲಾ ಪುಸ್ತಕದಲ್ಲಿ ಹೇಳಿರುವಂತೆ, “ಲಿಖಿತ ವಾರಂಟಿಯಲ್ಲಿ ನಿರ್ದಿಷ್ಟವಾಗಿ ಮತ್ತು ಸ್ಪಷ್ಟವಾಗಿ ಬರೆದಿರದ ಯಾವ ಕೊರತೆ ಯಾ ರಿಪೇರಿಗೂ ತಯಾರಕರನ್ನು ಜವಾಬ್ದಾರರಾಗಿ ಮಾಡಲು ಕೋರ್ಟುಗಳು ಅನಿಚ್ಫೆ ತೋರಿಸುತ್ತವೆ” ಎಂಬುದನ್ನು ನೆನಪಿನಲ್ಲಿಟ್ಟು ಕೊಳ್ಳುವುದು ಪ್ರಾಮುಖ್ಯ. ಇದಲ್ಲದೆ, ಅಧಿಕಾಂಶ ವಸ್ತುಗಳಲ್ಲಿ ಅವುಗಳ ಬಾಳಿಕೆ ಬರುವ ಭಾಗಗಳಿಗೆ ಅತ್ಯುತ್ತಮ ಗ್ಯಾರಂಟಿ ಇದೆ ಎಂಬುದೂ ಜ್ಞಾಪಕದಲ್ಲಿರಲಿ. ಸವೆದು ಹೋಗುವ ಸಂಭವ ಹೆಚ್ಚಿರುವ ಭಾಗಗಳಿಗೆ ಸಾಮಾನ್ಯವಾಗಿ ಗ್ಯಾರಂಟಿ ಇರುವುದಿಲ್ಲ. ನಿಜವಾಗಿಯೂ ಯಾವುದು ಇದರಲ್ಲಿ ಸೇರಿದೆ ಎಂದು ನಿಶ್ಚಯ ಮಾಡಿಕೊಳ್ಳಿರಿ.
ಕೆಲವರು ಷರತ್ತಿಲ್ಲದ ಗ್ಯಾರಂಟಿ ಅತ್ಯುತ್ತಮ ಗ್ಯಾರಂಟಿ ನೀಡುತ್ತದೆಂದು ಅಭಿಪ್ರಯಿಸುತ್ತಾರೆ. ಈ ಗ್ಯಾರಂಟಿಗೆ “ಯಾವ ಶರ್ತಗಳೂ ಇಲ್ಲ”ವೆಂದು ಭಾವನೆ. ಇತರರು, ಎಲ್ಲ ಗ್ಯಾರಂಟಿಗಳಲ್ಲಿಯೂ ಕೆಲವು ಶರ್ತಗಳಿವೆ ಎಂದು ನಂಬುತ್ತಾರೆ.
ಪೂರ್ವಸಿದ್ಧರಾಗಿರಿ
ಒಂದು ಗ್ಯಾರಂಟಿಯನ್ನು ಸುಲಭವಾಗಿ ತಪ್ಪುತಿಳಿಯಬಹುದು. ಉದಾಹರಣೆಗೆ, “ಜೀವಾವಧಿಯ ಗ್ಯಾರಂಟಿ” ನಿಮ್ಮ ಜೀವಾವಧಿಗೆ ಸಂಬಂಧಿಸಿರುವುದಿಲ್ಲ. ನೀವು ಒಂದು ನಿರ್ದಿಷ್ಟ ವಸ್ತುವಿನ ಒಡೆಯರಾಗಿರುವಾಗ ಅದರ ಜೀವಾವಧಿಯನ್ನು ಇದು ಸಾಮಾನ್ಯವಾಗಿ ಸೂಚಿಸುತ್ತದೆ. “ತೃಪ್ತಿ ಗ್ಯಾರಂಟಿ” ಎಂಬ ಪದಗಳ ವಿಷಯವೇನು? ಅದು ನಿಜವಾದ ಗ್ಯಾರಂಟಿಯಾಗಿರಲು ತೀರಾ ಅನಿಶ್ಚಿತವಾಗಿದೆ.
ಹಸ್ತಾಕ್ಷರ ಮಾಡುವ ಮೊದಲು ಸೂಕ್ಷ್ಮವಾಗಿ ಮುದ್ರಿಸಲ್ಪಟ್ಟಿರುವುದನ್ನು ಓದಿರಿ. ಅನೇಕ ವೇಳೆ, ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆದಿರುವ ಕರಾರನ್ನು ಹಿಂಬದಿಯಲ್ಲಿ ಬರೆದಿರುವ ಚಿಕ್ಕ ಅಕ್ಷರಗಳು ರದ್ದುಗೊಳಿಸುತ್ತವೆ ಯಾ ನವೀಕರಿಸುತ್ತವೆ. ಹೌದು, ನಿಮ್ಮ ಗ್ಯಾರಂಟಿಯ ಬಗ್ಗೆ ತಿಳಿವಳಿಕೆ ಲಾಭದಾಯಕ. ಏಕೆಂದರೆ, ದ ಕನ್ಸೂಮರ್ಸ್ ಹ್ಯಾಂಡ್ಬುಕ್ ಎಚ್ಚರಿಸುವಂತೆ, “ದಪ್ಪ ಅಕ್ಷರಗಳು ಕೊಡುವುದನ್ನು ಸೂಕ್ಷ್ಮ ಅಕ್ಷ ರಗಳು ಕೊಂಡೊ ಯ್ಯುತ್ತವೆ.” (g90 6/8)
[Box on page ]
ನಿಮ್ಮ ಗ್ಯಾರಂಟಿಯನ್ನು ಪರೀಕ್ಷಿಸಿರಿ
▫ ಅದು ಬಾಯಿಮಾತಿನದ್ದೊ ಯಾ ಲಿಖಿತವೊ?
▫ ನಿರ್ದಿಷ್ಟವಾಗಿ ಅದರಲ್ಲಿ ಏನು ಒಳಗೊಂಡಿದೆ?
▫ ಸಮಯಾವಧಿ ಎಷ್ಟು?
▫ ಅದರ ಬೆಂಬಲಿಗರು ಯಾರು, ಮತ್ತು ಅವರ ಖ್ಯಾತಿ ಏನು?
▫ ರಿಪೇರಿಯ ಖರ್ಚು ಕೊಡುವವರಾರು?
▫ ಸಮಸ್ಯೆ ಇರುವಲ್ಲಿ ನೀವು ಯಾರನ್ನು ಸಂಪರ್ಕಿಸುವಿರಿ?
▫ ಗ್ಯಾರಂಟಿಯಿಂದ ಪ್ರಯೋಜನ ಪಡೆಯಲು ಯಾವ ಕ್ರಮವಾದರೂ ಅಗತ್ಯವಿದೆಯೆ?
▫ ದುರುಸ್ತು ಮತ್ತು ಸಂರಕ್ಷಣೆಯ ಸಂಬಂಧದಲ್ಲಿ ನಿಮ್ಮ ಜವಾಬ್ದಾರಿ ಏನು?