ಕನೇರಿ ಹಕ್ಕಿಗಳು ಸಾಯುವಾಗ
ಕನೇರಿಗಳು ವಿಷ ಅನಿಲಕ್ಕೆ ಮನುಷ್ಯರಿಗಿಂತ ಹೆಚ್ಚು ಸೂಕ್ಷ್ಮ ಸಂವೇದಿಗಳು. ಈ ಕಾರಣದಿಂದ, ಹಿಂದಿನ ಕಾಲದಲ್ಲಿ ಇದ್ದಲಿನ ಗಣಿಯ ಕೆಲಸಗಾರರು, ಅಪಾಯಕಾರಿಯಾದ ಅನಿಲವಿದೆಯೊ ಎಂದು ಕಂಡು ಹಿಡಿಯಲು ಪಂಜರದಲ್ಲಿರುವ ಕನೇರಿಯನ್ನು ಗಣಿಯೊಳಗೆ ತೆಗೆದುಕೊಂಡು ಹೋಗುತ್ತಿದ್ದರು. ಸತ್ತ ಕನೇರಿಯಿಂದ ಎಚ್ಚರಿಕೆ ಸಿಕ್ಕಿದ ಗಣಿ ಕೆಲಸಗಾರರು, ಗಣಿಯೊಳಗೆ ವಾಯುಸಂಚಾರ ಸರಿಯಾಗುವ ತನಕ ಅಪಾಯದಿಂದ ತಪ್ಪಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ, ಕೆನಡದ ಪ್ರಸಿದ್ಧ ವಿಜ್ಞಾನಿ ಡಾ. ಡೇವಿಡ್ ಸುಝಕಿ ಅವರ ಹೇಳಿಕೆಯನ್ನು ಒಬ್ಬನು ಗ್ರಹಿಸಬಹುದು.
ನಮ್ಮ ಭೂಗ್ರಹದ ಮರಣ ಸನ್ನಿಹಿತವೆಂಬುದನ್ನು ಗ್ರಹಿಸಿ ಚಿಂತಿತರಾದ ಅವರು ಈ ಕೆಳಗಿನ ದೃಷ್ಟಾಂತವನ್ನು ಉಪಯೋಗಿಸಿದರು: “ಇದ್ದಲಿನ ಗಣಿಕೆಲಸದವನು ಕಲ್ಲಿದ್ದಲಿನ ಗಣಿಯೊಳಗೆ ಒಂದು ಕನೇರಿಯನ್ನು ಒಯ್ದಾಗ ಅದು ಸತ್ತರೆ, ಅವನು ‘ಓ, ಆ ಹಕ್ಕಿ ಸತ್ತಿತು, ಆದರೆ ನಾನು ಆ ಹಕ್ಕಿ ಅಲ್ಲ’ ಎಂದು ಹೇಳುವುದಿಲ್ಲ. ಆ ಕನೇರಿ ಸತ್ತದ್ದು ಅದೇ ಗಾಳಿಯನ್ನು ಸೇವಿಸಿದ್ದರಿಂದಲೆ.”
ಅವರು ಆ ಬಳಿಕ ಕೂಡಿಸಿ ಹೇಳಿದ್ದು: “22 ಬೆಲುಗ ತಿಮಿಂಗಿಲಗಳು ಸೆಂಟ್ ಲಾರೆಂಟ್ ಕೊಲಿಯ್ಲಲ್ಲಿ ಸತ್ತದ್ದನ್ನು ನೀವು ನೋಡುವಾಗ ಮತ್ತು ಅವುಗಳಲ್ಲಿ ಎಷ್ಟು ವಿಷ ರಸಾಯನ ಪದಾರ್ಥಗಳು ತುಂಬಿವೆಯೆಂದರೆ ಅವುಗಳನ್ನು ಮುಟ್ಟುವಾಗ ನಿಮಗೆ ಕೈಚೀಲ ಮತ್ತು ಮುಖ ಮಸುಕುಗಳನ್ನು ಹಾಕಬೇಕಾಗುವಾಗ, ಕಿಬ್ವೆಕಿನ ಮೇಪ್‌ಲ್ ಸಕ್ಕರೆಯ ಕಾಡುಗಳು ಹತ್ತು ವರ್ಷಗಳಲ್ಲಿ ಸಾಯುವುವೆಂದು ಜನರು ಹೇಳುವಾಗ, ಮತ್ತು ಪ್ರತಿಯೊಂದು ತಾಸಿಗೆ ಎರಡು ಪ್ರಾಣಿ ಜಾತಿಗಳು ನಿರ್ನಾಮವಾಗುತ್ತವೆಂದೂ 10,000 ಸೀಲ್ ಕಡಲಾನೆಗಳು ಉತ್ತರ ಸಮುದ್ರದಲ್ಲಿ ಸತ್ತವೆಂದೂ, ಇದರ ಕಾರಣ ಗೊತ್ತಿಲ್ಲವೆಂದೂ ಜನರು ಹೇಳುವಾಗ, . . . ಇವೂ ಕನೇರಿಗಳೇ ಮತ್ತು ನಾವೂ ಈ ಶರೀರಿಗಳ ಪರಿಸರದಲ್ಲಿಯೆ ಇಲ್ಲವೆಂದು ಯೋಚಿಸುವಲ್ಲಿ, ನಾವು ಹುಚ್ಚರೇ ಸರಿ.”
ರಾಜಕಾರಣಿಗಳು ಈ “ಕನೇರಿಗಳಿಗೆ” ಕೇವಲ ತುಸು ಗಮನವನ್ನು ಕೊಡುತ್ತಾರೆ ಮತ್ತು ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಸಾಯುವ ತನಕ ಇದನ್ನು ಗುರುತರವಾದ ವಿಷಯವೆಂದು ನೋಡುವುದಿಲ್ಲವೆಂಬ ನಿಜತ್ವಕ್ಕೆ ಡಾ. ಸುಝಕಿ ದುಃಖಪಡುತ್ತಾರೆ. ಅವರು ಕೇಳುವುದು: “ಹಾಗಾದರೆ ನಮ್ಮ ಮಕ್ಕಳು ನಮ್ಮ ಕನೇರಿಗಳಾಗಲು ನಾವು ಬಿಡುತ್ತೇವೊ?”
ನಿಜ ಕ್ರೈಸ್ತರು ಚಿಂತಿತರಾದರೂ ಹತಾಶರಾಗುವುದಿಲ್ಲ. ಭೂಮಿಯನ್ನು “ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ” ರೂಪಿಸಿದ ಸೃಷ್ಟಿಕರ್ತನಾದ ಯೆಹೋವನು, ಸಮೀಪದೃಷ್ಟಿಯ ಲೋಭಿಗಳಾದ ಜನರು ನಮ್ಮ ಪರಿಸರವನ್ನು ಸದಾ ಹಾಳುಮಾಡುವಂತೆ ಅನುಮತಿಸನು. ತನ್ನ ವಾಕ್ಯವಾದ ಬೈಬಲಿನಲ್ಲಿ ತಾನು “ಲೋಕನಾಶಕರನ್ನು ನಾಶ” ಮಾಡುವೆನೆಂದು ವಾಗ್ದಾನ ಮಾಡಿದ್ದಾನೆ.”—ಯೆಶಾಯ 45:18; ಪ್ರಕಟನೆ 11:18. (g91 1/22)