ಲಾಟರಿಗಳು ಗೆಲ್ಲುವುದು ಯಾರು? ಸೋಲುವುದು ಯಾರು?
ಸರಕಾರಿ ಲಾಟರಿಗಳ ಪರವಾಗಿ ಇರುವ ಮೂಲ ವಾದವು ಅವು ಸರಕಾರಕ್ಕೆ ಕೋಟಿಗಟ್ಟಲೆ ರೂಪಾಯಿಗಳನ್ನು ಒದಗಿಸುತ್ತದೆ, ಇಲ್ಲದಿರುವಲ್ಲಿ ಪ್ರಾಯಶಃ ಇದನ್ನು ತೆರಿಗೆ ಹೆಚ್ಚಿಸಿ ವಸೂಲಿ ಮಾಡಬೇಕಾದೀತು ಎಂಬುದೆ. ‘ಮತ್ತು ಇದೆಷ್ಟು ಸುಲಭ!’ ಎನ್ನುತ್ತಾರೆ ಅದರ ಬೆಂಬಲಿಗರು. ಯಾರಿಂದಲೂ ಕೇಳಿಕೊಳ್ಳಲ್ಪಡದ ತೆರಿಗೆಯಂತೆ ಇದು ಇದೆ; ಇದು ಸ್ವಯಂಪ್ರೇರಿತ. ವಾಸ್ತವವೇನಂದರೆ, ಜನರು ಕೊಡಲು ಹಾತೊರೆಯುತ್ತಾರೆ; ಅವರು ಅದಕ್ಕಾಗಿ ಲೈನಿನಲ್ಲಿ ನಿಂತು ತೆರುತ್ತಾರೆ!
ಆದರೆ ಲಾಟರಿಗಳ ವಿರುದ್ಧವಾಗಿ ಕೆಲವು ಆರೋಪಗಳೇನು?
ಇವುಗಳಲ್ಲಿ ಒಂದು, ಲಾಟರಿ ಜಾಹೀರಾತುಗಳು ಅನೇಕ ವೇಳೆ ಅಬೋಧಪ್ರದ ಯಾ ತಪ್ಪು ಅರ್ಥ ಕೊಡುವಂಥವುಗಳು. ನೀವು ಗೆಲ್ಲಲಿಕ್ಕಿರುವಿರಿ ಎಂಬ ವಿಚಾರವನ್ನು ಅವು ಬೆಳೆಸುತ್ತವೆ. ಒಂದು ಕೆನೇಡಿಯನ್ ಲಾಟರಿ ಜಾಹೀರಾತು ಪ್ರತಿನಿಧಿರೂಪದಲ್ಲಿ ಹೇಳುವುದು: “ನಾವು . . .ಗೆಲ್ಲಲು ಸುಲಭ ಮಾಡಿಕೊಡುತ್ತೇವೆ!!”
ಆದರೆ ಗೆಲ್ಲುವುದು ಎಷ್ಟು ಸುಲಭ? ಆಲಿ ಪಶ್ಚಿಮ ಜರ್ಮನಿಯ ಒಂದು ಲಾಟರಿಯಲ್ಲಿ ಆಡುತ್ತಾನೆ. ಅದರ ಜಾಹೀರಾತು ಭಾವೂದ್ರೇಕದಿಂದ ಹೇಳುವುದು: “ನೀವು ಗೆಲ್ಲುವ ಸಂಭವಪ್ರಮಾಣ ನಂಬಿಕೆಗೆ ಮೀರಿದ್ದಾಗಿದೆ.” ಆದರೂ ಆಲಿ ಪ್ರಲಾಪಿಸುವುದು: “ನಾನು ಹತ್ತು ವರ್ಷ ಲಾಟರಿ ಆಡಿರುತ್ತೇನೆ, ಆದರೆ ಇದುವರೆಗೆ ಗೆದದ್ದೇನ್ದೂ ಇಲ್ಲ. ಏನಾದರೂ ಗೆದ್ದಿರುವ ಇತರರು ಯಾರೆಂದೂ ನನಗೆ ತಿಳಿದಿರುವುದಿಲ್ಲ.”
ಹೆಚ್ಚು ಹಣ ಗೆದ್ದಿರುವ ಒಬ್ಬನಿರುವುದಾದರೆ, ಪ್ರತಿ ವಾರ, ಪ್ರತಿ ವರ್ಷ ಹಣ ಹಾಕುತ್ತಾ ಅದಕ್ಕೆ ಪ್ರತಿಯಾಗಿ ಏನೂ ಪಡೆಯದೆ ಸೋತಿರುವ ಲಕ್ಷಾಂತರ ಜನರು ಇನ್ನೊಂದು ಕಡೆಯಲ್ಲಿದ್ದಾರೆ. ಅಮೆರಿಕದ 9 ಕೋಟಿ 70 ಲಕ್ಷ ಲಾಟರಿ ಆಡುವವರಲ್ಲಿ 10 ಲಕ್ಷ ಡಾಲರು ಗೆಲ್ಲುವವರು ಸೇಕಡ 0.000008.
ದೊಡ್ಡ ಪ್ರಮಾಣದಲ್ಲಿ ಹಣ ಗೆಲ್ಲುವವರ ಸಂಭವ ಪ್ರಮಾಣ ಹತ್ತು ಲಕ್ಷದಲ್ಲಿ ಒಂದು (ಸಾಧಾರಣ, ಒಬ್ಬನಿಗೆ ಸಿಡಿಲು ಬಡಿಯುವ ಸಂಭವ ಪ್ರಮಾಣ) ಎಂದಷ್ಟೇಯಲ್ಲ, ಅನೇಕ ದಶಲಕ್ಷಗಳಲಿಯ್ಲೂ ಒಂದಾಗಬಹುದು. ಉದಾಹರಣೆಗೆ, ಜ್ಯಾಕ್ಪಾಟ್ ಬಹುಮಾನ ದೊಡ್ಡದಾಗಿರುವಷ್ಟಕ್ಕೆ ಹೆಚ್ಚು ಟಿಕೆಟುಗಳು ಮಾರಾಟವಾಗುವುವು ಎಂದು ಸ್ಪಷ್ಟವಾಗಿದಾಗ ನ್ಯೂ ಯಾರ್ಕ್ ಲಾಟೊ ಆಟದಲ್ಲಿ ಗೆಲ್ಲುವ ಸಂಭವ ಪ್ರಮಾಣ 60 ಲಕ್ಷಗಳಲ್ಲಿ 1ರಿಂದ 1 ಕೋಟಿ 29 ಲಕ್ಷಗಳಲ್ಲಿ 1ಕ್ಕೆ ಏರಿತು.
ಹೀಗಿರುವುದರಿಂದ, ಗೆಲ್ಲುವ ಸಂಭವ ಅಷ್ಟು ಕಡಮೆ ಎಂದು ಅರಿಯದಿರುವ ಅಜಾಗರೂಕ ಗಿರಾಕಿಗಳನ್ನು ಲಾಟರಿಗಳು ಬಲಾತ್ಕರಿಸುತ್ತವೆ ಎಂದು ಕೆಲವರು ಆರೋಪ ಹೊರಿಸುವುದು ಆಶ್ಚರ್ಯವೇನೂ ಅಲ್ಲ. ಅಮೆರಿಕದ ನ್ಯಾಷನಲ್ ಸೆಂಟರ್ ಫಾರ್ ಪ್ಯಾಥಲಾಜಿಕಲ್ ಗ್ಯಾಂಬ್ಲಿಂಗ್ ಎಂಬ ಸಂಘದ ಡೈರೆಕ್ಟರ್, ಡಾ. ವ್ಯಾಲರಿ ಲೊರೆಂಸ್ ಸರಳವಾಗಿ ಹೇಳುವುದು: “ಲಾಟರಿಗಳೊ? ಮೋಸ ಮಾಡುವ ಜೂಜುಗಳಲ್ಲಿ ಅದು ಅತಿ ದೊಡ್ಡದು. ನಿಮ್ಮ ಗೆಲ್ಲುವ ಸಂಭವ ಪ್ರಮಾಣ ವಿಪರೀತ ರೀತಿಯಲ್ಲಿ ಚಿಕ್ಕದು.”
ಮತ್ತು ನೀವು ಒಂದು ಮಿಲ್ಯ ಡಾಲರು ಗೆಲ್ಲುವಲ್ಲಿ ಏನು? ಅದು ಎಲ್ಲ ನಿಮಗೆ ದೊರೆಯುವುದಿಲ್ಲ. ತೆರಿಗೆ ಅಧಿಕಾರಿಯು ತನ್ನ ಅಂಶವನ್ನು ತಕ್ಕೊಂಡು ಹೋದ ಬಳಿಕ, ಅಮೆರಿಕದಲ್ಲಿ ಗೆಲ್ಲುವವರು ಮುಂದಿನ 20 ವರ್ಷಗಳಲ್ಲಿ ಪ್ರತಿ ವರ್ಷ 35,000 ಡಾಲರುಗಳನ್ನು ಪಡೆಯುತ್ತಾರೆ. ಅಂದರೆ, ಮಂದಿನ 20 ವರ್ಷಗಳಲ್ಲಿ ಹಣದುಬ್ಬರದಿಂದ ಬೆಲೆ ಕಮ್ಮಿಯಾಗಲಿರುವ 700,000 ಡಾಲರುಗಳನ್ನು ಪಡೆಯುತ್ತಾರೆ.
ಬಡವರ ಮೇಲೆ ಪರಿಣಾಮ
ಇದರ ವಿರುದ್ಧವಾಗಿರುವ ಇನ್ನೊಂದು ಟೀಕೆ, ಇದರಲ್ಲಿ ಹೆಚ್ಚು ಹಣ ವ್ಯಯಿಸುವವರು, ವ್ಯಯಿಸಲು ತೀರಾ ಕಡಮೆ ಸಾಧ್ಯತೆಯಿರುವ ಬಡವರು ಎಂಬುದೆ. ಆದರೆ ಲಾಟರಿ ಪ್ರವರ್ತಕರು ಇದು ಅಸತ್ಯವೆಂದೂ, ಲಾಟರಿಗಳು ಮಧ್ಯಮ-ಆದಾಯವಿರುವ ಜನರಿಗೆ ಪ್ರಿಯವೆಂದು ಸಮೀಕ್ಷೆ ತೋರಿಸುತ್ತದೆಂದೂ ವಾದಿಸುತ್ತಾರೆ. ಲಾಟರಿಗಳು ಸ್ವಯಂಪ್ರೇರಣೆಯಿಂದ ಆಡುವ ಆಟ, ಅದಕ್ಕೆ ಯಾರನ್ನೂ ಬಲಾತ್ಕರಿಸಲಾಗುವುದಿಲ್ಲವೆಂದು ಅವರ ಹೇಳಿಕೆ. ಆದರೂ, ಜಾಹೀರಾತುಗಳು ಬೇಕೆಂದು ಆಟಗಾರರ ಆಶೆಗಳನ್ನು ಉದ್ದೀಪಿಸುತ್ತದೆ, ಮತ್ತು ಇವರಲ್ಲಿ ಅನೇಕರು ಬಡವರು. ದಿನದಲ್ಲಿ ಹೆಚ್ಚು ಕಾಲ ತೆರೆದಿರುವ ಒಂದು ಅನುಕೂಲ ಅಂಗಡಿಯ ನಗದಿ ಗುಮಾಸ್ತನು ಹೇಳಿದ್ದು: “ನಾವು ಪ್ರತಿ ವಾರವೂ ನೋಡುವ ನಿಶ್ಚಿತ ಗಿರಾಕಿಗಳು ನಮಗಿದ್ದಾರೆ. ಕೆಲವರು ಪ್ರತಿ ದಿವಸ ಹತ್ತು ಟಿಕೆಟುಗಳನ್ನು ಕೊಳ್ಳುತ್ತಾರೆ. ಕೆಲವರು ವಾರಕ್ಕೆ 100 ಖರೀದಿಸುತ್ತಾರೆ. ಅವರಲ್ಲಿ ಆಹಾರಕ್ಕೆ ಹಣವಿಲ್ಲ, ಆದರೂ ಅವರು ‘ಲಾಟೊ’ ಆಡುತ್ತಾರೆ.”
ಕಡಮೆ ವಿಕಾಸವಿರುವ ಕೆಲವು ದೇಶಗಳಲ್ಲಿ, ಪರಿಸ್ಥಿತಿ ತೀರಾ ಕೆಟ್ಟದ್ದಾಗಿರುತ್ತದೆ. ಇತ್ತೀಚೆಗೆ, ಇಂಡೊನೇಸ್ಯ ಸರಕಾರ, ಇಡೀ ಹಳ್ಳಿಗಳಿಗೆ “ಪೊರ್ಕಸ್ ಹುಚ್ಚು” ಹಿಡಿದದೆ ಎಂದು ಪತ್ರಿಕೆಗಳು ವರದಿ ಮಾಡಿದಾಗ, ಅದರ ಪೊರ್ಕಸ್ ಫುಟ್ಬಾಲ್ ಲಾಟರಿಯನ್ನು ಪುನಃ ಪರೀಕ್ಷಿಸಿತು. ಏಸ್ಯವೀಕ್ ಪತ್ರಿಕೆ ವರದಿ ಮಾಡಿದ್ದು: “[ಇಂಡೊನೇಸ್ಯದ] ವೃತ್ತಪತ್ರಗಳು ಭಯಂಕರ ಲೇಖನಗಳಿಂದ ತುಂಬಿದ್ದವು: ಪುರುಷರು ತಮ್ಮ ಹೆಂಡತಿಯರನ್ನು ಯಾ ಮಕ್ಕಳನ್ನು ಹೊಡೆಯುತ್ತಿದ್ದರು; ಮಕ್ಕಳು ತಮ್ಮ ಹೆತ್ತವರಿಂದ ಹಣ ಕದಿಯುತ್ತಿದ್ದರು; ಶಾಲಾ ಫೀಸ್ ತೆರಲು ಇಟ್ಟಿರುವ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಮಕ್ಕಳು ಖರ್ಚು ಮಾಡುತ್ತಿದ್ದರು—ಇದೆಲ್ಲ ಪೊರ್ಕಸಿಗಾಗಿ.”
ಲಾಟರಿಗಳ ಲೋಕವ್ಯಾಪಕವಾದ ಬೆಳವಣಿಗೆಯ ಕಾರಣ, ಹೆಚ್ಚೆಚ್ಚು ಜನರಿಗೆ ಲಾಟರಿಯ ಪರಿಚಯವಾಗುತ್ತಿದೆ. ಇವರಲ್ಲಿ ಕೆಲವರು—ಕೇವಲ ಬಡವರೇ ಅಲ್ಲ—ವಶವರ್ತಿ ಜೂದಾಳಿಗಳು, ಲಾಟರಿ ವ್ಯಸನಿಗಳು ಆಗುತ್ತಾರೆ. ಅಮೇರಿಕದ ನ್ಯೂ ಜರ್ಸಿಯಲ್ಲಿ, ಕಂಪಲ್ಸಿವ್ ಗ್ಯಾಂಬ್ಲಿಂಗ್ ಕೌನ್ಸಿಲಿನ ಮುಖ್ಯಸ್ಥ ಆರ್ನಿ ವೆಕ್ಸ್ಲರ್ ಹೇಳುವುದು: “ತಾವು ಹಣವನ್ನು ಒಟ್ಟುಗೂಡಿಸಲು ವೇದನೆರಹಿತವಾದ, ಸುಲಭ ಮಾರ್ಗವನ್ನು ಕಂಡುಹಿಡಿದಿದ್ದೇವೆಂದು ಶಾಸಕರು ಭಾವಿಸುತ್ತಾರೆ; ಆದರೆ ಅವರು ವಾಸ್ತವವಾಗಿ, ಅನೇಕ ಕುಟುಂಬಗಳನ್ನು, ಅನೇಕ ವ್ಯಾಪಾರಗಳನ್ನು, ಅನೇಕ ಮಾನವ ಜೀವಿಗಳನ್ನು, ಮತ್ತು ಅನೇಕ ಜೀವಗಳನ್ನು ನಾಶಮಾಡುತ್ತಿದ್ದಾರೆ.”
ಮೌಲ್ಯಗಳ ಪ್ರಶ್ನೆ
ಸರಕಾರಿ ಲಾಟರಿಗಳು ಜೂಜಾಟದ ಕಡೆಗೆ ಜನರ ಮನೋಭಾವವನ್ನು ಬದಲಾಯಿಸಿದೆ ಎಂಬುದು ಇನ್ನೊಂದು ದೊಡ್ಡ ಚಿಂತೆ. ಇಂದಿನ ಸರಕಾರ ನಡೆಸುವ “ಪ್ಲೇ 3” ಯಾ “ಲಕ್ಕಿ ನಂಬರ್ಸ್” ಲಾಟರಿಗಳು ಸಾವಿರಕ್ಕೆ ಒಂದು ಬಹುಮಾನವನ್ನು ನೀಡುತ್ತೇವೆಂದು ಹೇಳಿದರೂ, ಬಹುಮಾನದ ಹಣದಲ್ಲಿ ಕೇವಲ 50 ಸೇಕಡವನ್ನು ಹಿಂದೆ ಕೊಡುತ್ತವೆ. ಸರಕಾರ ಈ ವ್ಯಾಪಾರದಲ್ಲಿ ಸೇರುವ ಮೊದಲು ಈ ಆಟ “ನೀತಿಭ್ರಷ್ಟ,” ನ್ಯಾಯವಿರುದ್ಧ ವ್ಯಾಪಾರ, ಮತ್ತು ಒಂದು ಕೆಟ್ಟ ಚಾಳಿಯಾಗಿತ್ತು. ಆದರೆ ಅದೇ ಆಟವನ್ನು ಮನೋರಂಜನೆ, ವಿನೋದ, ಪೌರ ಜವಾಬ್ದಾರಿಯ ಒಂದು ಕ್ರಿಯೆ ಎಂದು ಕರೆಯಲಾಗುತ್ತದೆ.
ಹೌದು, ಶಾಸನವಿರುದ್ಧವಾದ ನಂಬರ್ ಆಟ ಮತ್ತು ಸರಕಾರಿ ಲಾಟರಿಗಳ ಮಧ್ಯೆ ಇರುವ ಒಂದು ಪ್ರಾಮುಖ್ಯ ವ್ಯತ್ಯಾಸವು, ಹಣವು ಪಾತಕಿಗಳ ಜೇಬಿಗೆ ಹೋಗುವ ಬದಲಿಗೆ ಈಗ ಅವು ಸರಕಾರಿ ಯೋಜನೆಗಳನ್ನು ಬೆಂಬಲಿಸುತ್ತವೆ ಎಂಬುದು ನಿಶ್ಚಯ. ಆದರೂ, ಅನೇಕ ವೀಕ್ಷಕರು, ಲಾಟರಿಗಳಿಂದ ಯಾವುದಕ್ಕೆ ಪ್ರಯೋಜನವಾಗಬೇಕೊ ಆ ಸಮಾಜದ ನೈತಿಕ ಮೌಲ್ಯಗಳ ಮೇಲಾಗುವ ಪರಿಣಾಮದ ಕುರಿತು ಚಿಂತಿತರಾಗುತ್ತಾರೆ.
ಇದು, ಲಾಟರಿಗಳು ಪ್ರಯತ್ನವಿಲ್ಲದೆ ತಾವು ಐಶ್ವರ್ಯವಂತರಾಗಬೇಕೆಂಬ ಜನರ ನಿರೀಕ್ಷೆ ಮತ್ತು ಪ್ರವೃತ್ತಿಗಳನ್ನು ಪೋಷಿಸುವುದರಿಂದಲೆ. ಗೇಮಿಂಗ್ ಆ್ಯಂಡ್ ವೇಜರಿಂಗ್ ಬಿಸಿನೆಸ್ ಪತ್ರಿಕೆಯ ಸಂಪಾದಕ ಪೌಲ್ ಡ್ವೋರಿನ್ ಹೇಳಿದ್ದು: “ಗತ ಕಾಲದಲ್ಲಿ, ಶ್ರಮಪಟ್ಟು ಕೆಲಸ ಮಾಡುವಲ್ಲಿ ನಿಮಗೆ ಒಳ್ಳೆಯದಾಗುವುದು ಎಂದು ಸರಕಾರ ಹೇಳಿಯದೆ. ಆದರೆ ಈಗ, ‘ಒಂದು ಟಿಕೆಟ್ ಕೊಳ್ಳಿ, ನೀವು ಲಕ್ಷಾಧೀಶರಾಗುತ್ತೀರಿ.’ ಕಳುಹಿಸಲಿಕ್ಕೆ ಯಾವುದೆ ಸರಕಾರಕ್ಕಾದರೂ ಇದೊಂದು ವಿಚಿತ್ರ ಸಂದೇಶ.” ಮತ್ತು ಜಾರ್ಜ್ ವಿಲ್ ನ್ಯೂಸ್ವೀಕ್ ಪತ್ರಿಕೆಯಲ್ಲಿ ಬರೆದುದು: “ವಿಧಿ, ಭಾಗ್ಯ, ಉದ್ದೇಶರಾಹಿತ್ಯ, ಅದೃಷ್ಟ—ಇವುಗಳ ಪ್ರಾಮುಖ್ಯತೆಯಲ್ಲಿ ಜನರು ಎಷ್ಟು ಹೆಚ್ಚು ನಂಬುತ್ತಾರೊ, ಅಷ್ಟೆ ಕಡಮೆಯಾಗಿ ಅವರ ಉದ್ಯೋಗಶೀಲತೆ, ಮಿತವ್ಯಯ, ಸುಖಾನುಭವದ ಮುಂದೂಡುವಿಕೆ, ಶೃದ್ಧೆ, ಪರಿಶ್ರಮ, ಮುಂತಾದ ಕಟ್ಟುನಿಟ್ಟಾದ ಸದ್ಗುಣಗಳನ್ನು ನಂಬುತ್ತಾರೆ.
ಮಾನವ ಸಮಾಜಕ್ಕೆ ಪ್ರಾಮುಖ್ಯವಾಗಿರುವ ಇನ್ನೊಂದು ಚಿಂತನಾರೂಪ ಇದು: ವ್ಯಕ್ತಿಗಳು ಇತರರ ದುರ್ಭಾಗ್ಯದ ಕಾರಣದಿಂದ ಲಾಭ ಪಡೆಯಲು ಪ್ರಯತ್ನಿಸಬಾರದು. ಆದರೆ, ಲಾಟರಿಯ ಪ್ರವರ್ತಕರು, ಇತರರ ನಷ್ಟದ ಕಾರಣ ಒಬ್ಬ ವ್ಯಕ್ತಿಯು ಲಾಭ ಮತ್ತು ಸುಖವನ್ನು ಪಡೆಯವುದು ಯೋಗ್ಯವೆಂಬ ವೀಕ್ಷಣವನ್ನು ಪ್ರೋತ್ಸಾಹಿಸುತ್ತಾರೆ. ಇಂಥ ಚಿಂತನೆ ಸ್ವಾರ್ಥಪರ; “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಬೈಬಲಿನ ಬುದ್ಧಿವಾದವನ್ನು ಇದು ತಳ್ಳಿಹಾಕುತ್ತದೆ.—ಮತ್ತಾಯ 22:39.
ಅನೇಕ ವಿರೋಧ ಧ್ವನಿಗಳ ಎದುರಿನಲ್ಲಿಯೂ ಲಾಟರಿಗಳು ಭೂವ್ಯಾಪಕವಾಗಿ ನಾಟಕೀಯವಾಗಿ ಬೆಳೆಯುತ್ತಾ ಇವೆ. ಪಶ್ಚಿಮ ಆಫ್ರಿಕಕ್ಕೆ ಹೋದ ಭೇಟಿಕಾರನೊಬ್ಬನು, ಸರಕಾರಿ ಲಾಟರಿ ಕಟ್ಟಡದ ಎದುರು ನೂರಾರು ಜನರು ನೆರೆದು ಬಂದಿರುವುದನ್ನು ನೋಡಿದನು. “ಇವರೆಲ್ಲ ತಮ್ಮ ಹಣವನ್ನು ಲಾಟರಿಯಲ್ಲಿ ದುಂದುಮಾಡುವುದೇಕೆ?” ಎಂದು ಅವನು ನಿವಾಸಿಯೊಬ್ಬನನ್ನು ಕೇಳಿದನು.
“ನನ್ನ ಮಿತ್ರ, ಅವರಿಗೆ ಅದೊಂದು ನಿರೀಕ್ಷೆಯನ್ನು ಕೊಡುವುದರಿಂದಲೆ ಅವರು ಲಾಟರಿ ಆಡುತ್ತಾರೆ. ಅವರಲ್ಲಿ ಅನೇಕರಿಗೆ ಜೀವನದಲ್ಲಿರುವ ನಿರೀಕ್ಷೆ ಅದೊಂದೆ,” ಎಂದನು ಆ ನಗರವಾಸಿ.
ಆದರೆ ಲಾಟರಿ ಗೆಲ್ಲುವುದು ನಿಜವಾಗಿಯೂ ಒಂದು ನಿರೀಕ್ಷೆಯೊ? ಅದು ಇದಕ್ಕಿಂತಲೂ ಹೆಚ್ಚಾದ ಒಂದು ಭ್ರಾಂತಿ, ಬಿಸಿಲ್ಗುದರೆ, ಅಸಂಭವನೀಯ ಕನಸು. ಒಬ್ಬ ಶುದ್ಧಾಂತಃಕರಣದ ಕ್ರೈಸ್ತನು ತನ್ನ ಸಮಯ ಮತ್ತು ಸಂಪತ್ತನ್ನು ಜೂಜಿನಿಂದ ದೊರೆಯುವ ಐಶ್ವರ್ಯವನ್ನು ವ್ಯರ್ಥವಾಗಿ ಬೆನ್ನಟಲ್ಟು ಉಪಯೋಗಿಸಿ ಹಾಳುಮಾಡನು. ಬದಲಿಗೆ, ವಿವೇಕಿಗಳು “ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ” ನಿರೀಕ್ಷೆಯನ್ನಿಡಲು ಬರೆದ ಅಪೊಸ್ತಲ ಪೌಲನ ಬುದ್ಧಿವಾದವನ್ನು ಅನುಸರಿಸುವುದು ಎಷ್ಟು ಲೇಸು.—1 ತಿಮೊಥಿ 6:17. (g91 5/8)
[ಪುಟ 8 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ತಾವು ಹಣವನ್ನು ಒಟ್ಟುಗೂಡಿಸಲು ವೇದನೆರಹಿತವಾದ, ಸುಲಭ ಮಾರ್ಗವನ್ನು ಕಂಡುಹಿಡಿದಿದ್ದೇವೆಂದು ಶಾಸಕರು ಭಾವಿಸುತ್ತಾರೆ; ಆದರೆ ಅವರು ವಾಸ್ತವವಾಗಿ, ಅನೇಕ ಕುಟುಂಬಗಳನ್ನು, ಅನೇಕ ವ್ಯಾಪಾರಗಳನ್ನು, ಅನೇಕ ಮಾನವ ಜೀವಿಗಳನ್ನು ಮತ್ತು ಅನೇಕ ಜೀವಗಳನ್ನು ನಾಶಮಾಡುತ್ತಿದ್ದಾರೆ”
[ಪುಟ 9 ರಲ್ಲಿರುವ ಚೌಕ]
ಜೂದಾಳಿಗಳಿಗೆ ಅತ್ಯುತ್ತಮ ಸೂಚನೆಗಳು
ಜೂಜಾಟದ ವ್ಯಾಪಾರಿ ತನ್ನ ಗೆದ್ದಿರುವ ಗಿರಾಕಿಗೆ ತೋರಿಸುವ ನಸುನಗೆಗಿಂತ ಶೀತಲ ನಗೆಯಿಲ್ಲ. . . . ತನ್ನ ಗಿರಾಕಿಯಾದ ಪಂಟರ್ [ಜೂದಾಳಿ] ತುಂಬ ಹಣನಷ್ಟಪಡುತ್ತಿದ್ದಾನೆಂದು ನೋಡಿ ಅವನನ್ನು ತಡೆಯುವ ಜೂಜಾಟದ ವ್ಯಾಪಾರಿ ವಿರಳ. . . . ಸಫಲರಾಗಿರುವ ಪಂಟರ್ಗಳು ಬಡವರಾಗಿರುವ ಜೂಜಾಟದ ವ್ಯಾಪಾರಿಗಳಷ್ಟೆ ವಿರಳವೆಂದೂ ನೆನಪಿಸಿಕೊಳ್ಳಿ.”—ಗ್ರೇಹಮ್ ರಾಕ್, ದ ಟಯಿಮ್ಸ್, ಲಂಡನ್.
“ಈ ರಾತ್ರಿಯ ಲಾಟೊದಲ್ಲಿರುವ 4.5 ಕೋಟಿ ಡಾಲರುಗಳ ಖಾತರಿ ಜ್ಯಾಕ್ಪಾಟ್ ಬಹುಮಾನ ನ್ಯೂ ಯಾರ್ಕ್ ರಾಜ್ಯದ ಇತಿಹಾಸದಲ್ಲಿ ಅತಿ ದೊಡ್ಡದು. ಆದರೆ ಅದನ್ನು 1 ಡಾಲರಿನ ಮೂಲಕ ಗೆಲ್ಲುವ ಸಂಭವ ಪ್ರಮಾಣ 1,29,13,582 ಕ್ಕೆ 1.”—ದ ನ್ಯೂ ಯಾರ್ಕ್ ಟಯಿಮ್ಸ್.
“ಮೂರ್ಖನ ಹಣವು ಅವನಿಂದ ಬೇಗನೆ ಅಗಲಿ ಹೋಗುವುದು.”—16ನೆಯ ಶತಮಾನದಿಂದ ವಾಡಿಕೆಯಲ್ಲಿರುವ ನಾಣ್ಣುಡಿ.—ಫೆಮೀಲಿಯರ್ ಕೊಟೇಷನ್ಸ್, ಜಾನ್ ಬಾರ್ಟ್ಲೆಟ್ ಅವರಿಂದ.
“ಜೂದಾಳಿಯೆ, ಸಂತೋಷಿಸದಿರು; ಇಂದು ಗೆಲ್ಲುವವನು ನಾಳೆ ಸೋಲುವನು.”—ಒಂದು ಸ್ಪಾನಿಷ್ ನಾಣ್ಣುಡಿ.