ನಮ್ಮ ವಾಚಕರಿಂದ
ದೇಹದ ಎಚ್ಚರಿಕೆಗಳಿಗೆ ಕಿವಿಗೊಡುವುದು ಕಳೆದ ವರ್ಷ ನಾನು ಅಂಡಾಶಯದ ರೋಗದ ಕಾರಣ ಮೂರು ತಿಂಗಳು ಆಸ್ಪತ್ರೆಯಲ್ಲಿದ್ದೆ. ನನಗೆ ಅನೇಕ ವರ್ಷಗಳಲ್ಲಿ ಎಚ್ಚರಿಕೆಯ ಸೂಚನೆಗಳು ದೊರಕುತ್ತಿದ್ದರೂ ನಾನು ಅದನ್ನು ಹೆಚ್ಚು ಲಕ್ಷ್ಯ ಮಾಡಲಿಲ್ಲ. ಕೊನೆಗೆ ನಾನು ಒಂದು ಆಸ್ಪತ್ರೆಗೆ ಹೋಗಲಾಗಿ ಒಡನೆ ಶಸ್ತ್ರ ಚಿಕಿತ್ಸೆ ಅವಶ್ಯವೆಂದು ತಿಳಿದುಬಂತು. ನಿಮ್ಮ “ಶರೀರದ ಎಚ್ಚರಿಕೆಗಳಿಗೆ ಕಿವಿಗೊಡುವುದು” (ಒಕ್ಟೋಬರ 8, 1992) ಎಂಬ ಲೇಖನ ಆಗ ದೊರೆಯುತ್ತಿದ್ದಿದ್ದರೆ, ನನಗೆ ಈ ಮೊದಲೇ ಡಾಕ್ಟರರ ಬಳಿಗೆ ಹೋಗುವ ಧೈರ್ಯ ಬರುತ್ತಿತ್ತು.
ಎಮ್. ಯು., ಜಪಾನ್
ಹವಾನಿಯಂತ್ರಣ ನಾನು ಹವಾನಿಯಂತ್ರಣ ದುರಸ್ತಿನ ಕೆಲಸದಲ್ಲಿ 35ಕ್ಕೂ ಹೆಚ್ಚು ವರ್ಷಕಾಲ ಕೆಲಸಮಾಡಿರುವುದರಿಂದ “ನಿಮಗೆ ಹವಾನಿಯಂತ್ರಣ ಅವಶ್ಯವೆ?” (ಜುಲೈ 8, 1992) ಎಂಬ ಲೇಖನ ನನಗೆ ಹಿಡಿಸಿತು. ನಾನು 1950ಗಳಲ್ಲಿ ಮೊದಲಾಗಿ ನನ್ನ ಕೆಲಸವನ್ನು ಕಲಿತಾಗ, ನಮಗೆ Btu’s ವಿಷಯದಲ್ಲಿ ಅನೇಕ ದಿನ ಕಲಿಯಲಿಕ್ಕಿತ್ತು. ನೀವು ಈ ವಿಷಯವನ್ನು ಒಂದೇ ಪರಿಚ್ಛೇದದಲ್ಲಿ ಬಹಳ ಸುಲಭವಾಗಿಯೂ ಗ್ರಾಹ್ಯವಾಗಿಯೂ ವಿವರಿಸಿದಿರಿ! ನನಗೆ ಆಗ ಈ ಲೇಖನವಿರುತ್ತಿದ್ದರೆ ಒಳ್ಳೆಯದಾಗುತ್ತಿತ್ತು.
ಎ. ಡಿ., ಯುನೊಯಿಟೆಡ್ ಸ್ಟೇಟ್ಸ್
ಅಸ್ತವ್ಯಸ್ತತೆ “ಅಸ್ತವ್ಯಸ್ತತೆ ನಿಯಂತ್ರಣ ತಪ್ಪುವಾಗ” (ಆಗಸ್ಟ್ 8, 1992) ಎಂಬ ಲೇಖನಕ್ಕೆ ಉಪಕಾರ. ನಾನು ಈ ಹೋರಾಟವನ್ನು ನನ್ನ ಜೀವನದ 44 ವರ್ಷಗಳ ಹೆಚ್ಚಿನಾಂಶದಲ್ಲಿ ಮಾಡಿದ್ದೇನೆ. ಮತ್ತು ದೊರೆಯುವ ಯಾವುದೇ ಸಹಾಯವನ್ನು ನಾನು ಉಪಯೋಗಿಸಬಲ್ಲಿ. ನಿಮ್ಮ ಅತಿ ಪ್ರಾಯೋಗಿಕ ಸೂಚನೆಗಳಿಗೆ ಉಪಕಾರ.
ಸಿ. ಆರ್., ಯುನೊಯಿಟೆಡ್ ಸ್ಟೇಟ್ಸ್
ನನ್ನ ಗಂಡ ಈ ಲೇಖನವನ್ನು ಮೊದಲು ಓದಿ ನಮ್ಮ ಮನೆ ಅಸ್ತವ್ಯಸ್ತವಾಗಿದೆಯೆಂದು ವ್ಯಂಗ್ಯವಾಗಿ ಸೂಚಿಸಿದರು! ನಾವು ಇತ್ತೀಚೆಗೆ ನಮ್ಮ ಸ್ಪ್ರಿಂಗ್ ಕೀನ್ಲಿಂಗ್ ಮುಗಿಸಿದ್ದೆವಾದುದರಿಂದ ನಮ್ಮ ಮನೆ ಇಷ್ಟು ಚೊಕ್ಕಟವಾಗಿ ಹಿಂದೆಂದೂ ಕಂಡಿರಲಿಲ್ಲವೆಂದು ನಾನು ನೆನಸಿದ್ದೆ. ಆ ಬಳಿಕ ಲೇಖನವನ್ನು ಹೀರಲು ನನ್ನ ಸರದಿ ಬಂತು. ನನ್ನ ಮನೆಯ ನಿಜ ಸ್ಥಿತಿಯನ್ನು ಗ್ರಹಿಸಿದಾಗ ನಾನೆಷ್ಟು ನಕ್ಕೆ! ನಿಮ್ಮ ಲೇಖನ ನಾನು ಅಸ್ತವ್ಯಸ್ತತೆಯ ರಾಶಿಯನ್ನೇ ತೆಗೆಯುವಂತೆ ಸಹಾಯ ಮಾಡಿತು. ನಿಮಗೆ ಉಪಕಾರ.
ಎಸ್. ಸಿ., ಯುನೊಯಿಟೆಡ್ ಸ್ಟೇಟ್ಸ್
ಅಂತಾರಾಷ್ಟ್ರೀಯ ಕಟ್ಟಡ ರಚನೆ “ನೀವು ಹೇಗೂ ಅದನ್ನು ಮಾಡಲೇ ಬೇಕು,” ಎಂಬ ನಿಮ್ಮ ಲೇಖನ (ಸೆಪ್ಟೆಂಬರ್ 8, 1992) ವನ್ನು ಪಡೆಯಲು ನಾವು ಸಂತೋಷಪಟ್ಟೆವು. ಅದು, ನನ್ನ ಪತ್ನಿಯೂ ನಾನೂ, ದಕ್ಷಿಣ ಅಮೆರಿಕದ ಕೊಲಂಬಿಯದಲ್ಲಿ ವಾಚ್ ಟವರ್ ಕಟ್ಟಡ ರಚನೆಯ ಯೋಜನೆಯಲ್ಲಿ ಸೇವೆ ಮಾಡಲು ಸ್ವಯಂಸೇವಕರಾಗಿ ಹೋಗುವುದಕ್ಕೆ ಒಂದು ವಾರ ಮುಂಚಿತವಾಗಿ ಬಂತು. ನಾವು ಏನು ನಿರೀಕ್ಷಿಸಬಹುದೆಂಬುದರ ಒಂದು ‘ನುಸುಳು ಪೂರ್ವದೃಶ್ಯ’ವನ್ನು ಆ ಲೇಖನ ಕೊಟ್ಟಿತು. ನಾವು ಹೋಗುವ ಮೊದಲು ಇದರ ಅನೇಕ ಪ್ರತಿಗಳನ್ನು ಕುಟುಂಬದೊಂದಿಗೆ, ಧಣಿಗಳೊಂದಿಗೆ, ಆಸಕ್ತಿಯುಳ್ಳವರೊಂದಿಗೆ ಮತ್ತು ಬೈಬಲ್ ವಿದ್ಯಾರ್ಥಿಗಳೊಂದಿಗೆ ಬಿಟ್ಟು ಹೋಗಲು ಸಾಧ್ಯವಾಯಿತು. ನಮಗೆ ಭಾಗವಹಿಸಲು ಸುಯೋಗವಿದ್ದ ಆ ಕೆಲಸದ ಹೆಚ್ಚಿನ ತಿಳಿವಳಿಕೆ ಅವರಿಗಾಗುವಂತೆ ಇದು ಸಹಾಯ ಮಾಡಿತು.
ಟಿ. ಜಿ., ಯುನೊಯಿಟೆಡ್ ಸ್ಟೇಟ್ಸ್
ಕುಟುಂಬಗಳನ್ನು ಬೆಳೆಸುವುದು “ಲೋಕವ್ಯಾಪಕವಾಗಿ ಕುಟುಂಬಗಳನ್ನು ಬೆಳೆಸುವುದು—ಪ್ರೀತಿ, ಶಿಸ್ತು, ಮಾದರಿ, ಮತ್ತು ಆತ್ಮಿಕ ಮೌಲ್ಯಗಳಿಂದ ಪಾಲನೆ ಮಾಡುವುದು” (ಒಕ್ಟೋಬರ 8, 1992) ಎಂಬ ಲೇಖನ ಹೊಸ ಬೈಬಲ್ ವಿದ್ಯಾರ್ಥಿಯಾದ ನನಗೆ ಬಹಳ ಪ್ರೋತ್ಸಾಹದಾಯಕವಾಗಿತ್ತು. ನಾವು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಆರಂಭ ಮಾಡಿದಾಗ ನನ್ನ ಮಗನು ತಂಟೆಯನ್ನಾರಂಭಿಸಿ ಆವೇಶದಿಂದ ಅಳುತ್ತಿದ್ದನು. ಆದರೆ ನಮ್ಮೊಂದಿಗೆ ಅಭ್ಯಾಸ ಮಾಡುತ್ತಿದ್ದ ಕ್ರೈಸ್ತ ಸ್ತ್ರೀಯ ಸಹಾಯದಿಂದ, ಮತ್ತು ನೀವು ಪ್ರಕಟಿಸುವ ಪತ್ರಿಕೆಗಳ ಪ್ರೋತ್ಸಾಹದಿಂದ, ನಾನೀಗ ಫಲವನ್ನು ಕೊಯ್ಯುತ್ತಿದ್ದೇನೆ. ನನ್ನ ಎರಡೂವರೆ ವಯಸ್ಸಿನ ಮಗನು ಈಗ ಕೂಟಗಳಲ್ಲಿ ಮೌನವಾಗಿ ಕುಳಿತುಕೊಳ್ಳುವುದು ಮಾತ್ರವಲ್ಲ, ಕೆಲವು ಚಿಕ್ಕ ಉತ್ತರಗಳನ್ನೂ ಕೊಡುತ್ತಾನೆ.
ಎಮ್. ಟಿ., ಜಪಾನ್
ಹರಟೆ ನಾನು ಗುರುತರದ ಹರಟೆಮಲ್ಲನಾಗಿದ್ದೆ. ಆದರೆ ಒಂದು ದಿನ ನಾನು ಶಾಲೆಯಿಂದ ಮನೆಗೆ ಬಂದು, “ಹರಟೆ—ನೋವಾಗುವುದರಿಂದ ತಪ್ಪಿಸುವ ವಿಧ” (ಏಪ್ರಿಲ್ 8, 1992) ಎಂಬ ಲೇಖನ ಮಾಲೆಯನ್ನು ಓದಿದೆ. ನಿಮ್ಮ ಸಹಾಯದಿಂದ ಆ ಕೆಟ್ಟ ಅಭ್ಯಾಸವನ್ನು ನಾನು ನಿಲ್ಲಿಸಶಕ್ತನಾದೆ. ಹರಟೆ ಅಷ್ಟು ಗುರುತರದ್ದೆಂದೂ ಅದು ಒಬ್ಬನ ಹೆಸರನ್ನು ಹಾಳುಮಾಡಬಲ್ಲದೆಂದೂ ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ಈ ಮಾಹಿತಿಗಾಗಿ ನಾನು ಎಷ್ಟೋ ಆಭಾರಿ.
ಎಫ್. ಬಿ., ಯುನೊಯಿಟೆಡ್ ಸ್ಟೇಟ್ಸ್
ಈ ಲೇಖನ ನನ್ನ ಕೆಲಸವನ್ನು ಪದಶಃ ಉಳಿಸಿತು. ನಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಯನ್ನು ಮುಚ್ಚಲಾಗುತ್ತದೆ ಎಂಬ ಗಾಳಿಸುದ್ದಿಯನ್ನು ನಾನು ಪುನರಾವರ್ತಿಸಿದೆ. ಅದೇ ದಿನ ಮುಗಿಯುವುದರೊಳಗಾಗಿ ನನ್ನನ್ನು ಸೂಪರ್‌ವೈಸರನ ಆಫೀಸಿಗೆ ಕರೆಯಲಾಯಿತು. ನಾನು ಹರಟೆ ಮಾತಾಡುತ್ತಿದ್ದೇನೆಂದೂ ಹೀಗೆ ಸುದ್ದಿ ಹಬ್ಬಿಸುವುದು, ಕೆಲಸಗಳು ವಿರಳವಾಗಿರುವುದರಿಂದ ಜನರನ್ನು ಹೆದರಿಸುತ್ತದೆಂದೂ ಅವನು ಹೇಳಿದ. ನಾನು ಕೆಲಸ ಮಾಡುತ್ತಿದ್ದಲ್ಲಿ ಜನರನ್ನು ಕೆಲಸದಿಂದ ತೆಗೆಯಲಾಗುತ್ತಿತ್ತು, ಮತ್ತು ಇದು ನನ್ನನ್ನು ಕೆಲಸದಿಂದ ತೆಗೆಯಲು ಒಂದು ನೆವವೆಂದು ನಾನು ಭಾವಿಸಿದೆ. ಹರಟೆಯ ವಿಷಯ ನನಗೆ ಎಚ್ಚರ! ದೊರೆತಾಗ, ಅದು ಮೇಲಣಿಂದ ಬಂದ ಸಲಹೆಯೆಂದು ನಾನು ತಿಳಿದೆ. ನಾನು ಅದನ್ನು ಸೂಪರ್‌ವೈಸರನಿಗೆ ತೋರಿಸಿ, ನಾನು ಕಲಿತ ವಿಷಯಗಳನ್ನು ಅವನಿಗೆ ತಿಳಿಸಿ, ಹರಟೆಯಿಂದ ದೂರವಿರಲು ಸಾಧ್ಯವಿರುವುದನ್ನು ಮಾಡುತ್ತೇನೆಂದು ಹೇಳಿದೆ. ಅವನು ನನಗೆ ಉಪಕಾರ ಹೇಳಿದ—ಮತ್ತು ನನಗೆ ಇನ್ನೂ ಕೆಲಸವಿದೆ.
ಎಲ್. ಜಿ., ಯುನೊಯಿಟೆಡ್ ಸ್ಟೇಟ್ಸ್