ತಪ್ಪಿಸಿಕೊಂಡು ಹೋದ ಸ್ಟೀನ್ಬಾಕ್ ಚಿಗರಿ
ಎಚ್ಚರ!ದ ದಕ್ಷಿಣ ಆಫ್ರಿಕದ ಸುದ್ದಿಗಾರರಿಂದ
ಹುಟ್ಟರಿವಿನಿಂದಲೇ ಸ್ಟೀನ್ಬಾಕ್ ಎಂಬ ಒಂದು ಸಣ್ಣ ಆಫ್ರಿಕದ ಜಿಂಕೆ ಆರೋಗ್ಯ ಸೂತ್ರಗಳಲ್ಲಿ ಒಂದು ಆಶ್ಚರ್ಯಕರವಾದ ಮಾದರಿಯನ್ನು ಇಡುತ್ತದೆ. ಪ್ರೊಫೆಸರ್ ಜಾನ್ ಸ್ಕಿನ್ನರ್, ಸೌತ್ ಆಫ್ರಿಕನ್ ಆ್ಯನಿಮಲ್ಸ್ ಇನ್ ದ ವೈಲ್ಡ್ ಪುಸ್ತಕದಲ್ಲಿ ವಿವರಿಸುವುದು: “ಅವು ಮಲ ಯಾ ಮೂತ್ರ ಮಾಡುವ ಮೊದಲು, ಪ್ರಥಮವಾಗಿ ತಮ್ಮ ಮುಂದಿನ ಗೊರಸುಗಳಿಂದ ಒಂದು ಸ್ಥಳವನ್ನು ಸ್ವಚ್ಛ ಮಾಡಿ, ಆ ಬಳಿಕ, ಮಣ್ಣನ್ನು ಕೆರೆದು ಜಾಗರೂಕತೆಯಿಂದ ಆ ಸ್ಥಳದಲ್ಲಿರುವ ವಸ್ತುವನ್ನು ಮುಚ್ಚುತ್ತವೆ.” ಹೌದು, ಈ ಚಿಕ್ಕ ಜೀವಿ ಇಸ್ರಾಯೇಲ್ಯ ಸೈನಿಕರಿಗೆ ಕೊಡಲ್ಪಟ್ಟ ಆಜೆಗ್ಞೂ ಅತೀತವಾಗಿ ಹೋಗುತ್ತದೆ. (ಧರ್ಮೋಪದೇಶಕಾಂಡ 5:1; 23:13, 14) ಅದು ತನ್ನ ಮೂತ್ರವನ್ನೂ ಮುಚ್ಚುತ್ತದೆ.
ಈ ಚಿಗರಿಯ ಅತಿ ನಾಜೂಕಿನ ಮಾರ್ಜನ ಅಭ್ಯಾಸಗಳು ಅದರ ಸೊಬಗಿನ ತೋರಿಕೆಗೆ ಸದೃಶವಾಗಿದೆ. “ನನಗೆ ಸ್ಟೀನ್ಬಾಕ್, ಆಫ್ರಿಕನ್ ಜಿಂಕೆಗಳಲ್ಲಿ ಯಾವಾಗಲೂ ಅತಿ ಸುಂದರವಾದ ಮತ್ತು ಅತಿ ಪ್ರೀತಿಯೋಗ್ಯವಾದ ಒಂದು ಜಿಂಕೆಯಾಗಿದೆ” ಎಂದು ಲಾರೆನ್ಸ್ ವ್ಯಾನ್ಡರ್ಪೋಸ್ಟ್ ಬರೆದರು. ದ ಹಾರ್ಟ್ ಆಫ್ ದ ಹಂಟರ್ ಎಂಬ ಪುಸ್ತಕದಲ್ಲಿ, ಆಫ್ರಿಕದ ಕಾಲಹಾರಿ ಮರುಭೂಮಿಯಲ್ಲಿ ಹಸಿವೆಯಿಂದ ತಪಿಸುತ್ತಿದ್ದ ಕಾಡುಮನುಷ್ಯರ ಒಂದು ಗುಂಪಿಗಾಗಿ ತಾನು ಒಂದು ಸ್ಟೀನ್ಬಾಕ್ ಚಿಗರಿಯನ್ನು ಗುಂಡಿಕ್ಕಿ ಕೊಲ್ಲಲು ಪ್ರಯತ್ನಿಸಿದ್ದನ್ನು ವ್ಯಾನ್ ಡರ್ ಪೋಸ್ಟ್ ವರ್ಣಿಸುತ್ತಾರೆ. “ಅದರ ಕೋಮಲವಾದ ಕಿವಿಗಳು ನನ್ನ ದಿಕ್ಕನ್ನು ಸೂಚಿಸುತ್ತಿದವ್ದು, ಅದರ ಮಹಾ ಕೆನ್ನೀಲಿ ಬಣ್ಣದ ಕಣ್ಣುಗಳು ವಿಶಾಲವಾಗಿ ತೆರೆಯಲ್ಪಟ್ಟಿದ್ದು ತೀರಾ ಭಯವಿಲ್ಲದವುಗಳಾಗಿದ್ದವು, ಮತ್ತು ಈ ದೂರಪ್ರದೇಶದಲ್ಲಿ ಇಂಥ ವಿಚಿತ್ರ ದೃಶ್ಯವನ್ನು ನೋಡಿ ಬೆರಗಿನಿಂದ ಮಾತ್ರ ಬೆಳಗುತ್ತಿದ್ದವು. . . . ಅದಕ್ಕೆ ಭಯದ ಸೂಚನೆ ಬರುವ ಮೊದಲೆ ಯಾ ಈ ಕೋಮಲ ಜೀವಿಯ ನೋಟ ನನ್ನನ್ನು ಬಲಹೀನಗೊಳಿಸುವ ಮೊದಲೇ ನಾನು ಅದಕ್ಕೆ ಗುಂಡು ಹೊಡೆದೆ. ಅಷ್ಟು ಹತ್ತಿರದಲ್ಲಿ ಗುರಿ ತಪ್ಪುವುದು ಸಾಧ್ಯ ಎಂದು ನಾನು ಯೋಚಿಸಿರಲಿಲ್ಲ. ಆದರೂ ಗುರಿ ತಪ್ಪಿದೆ. ನನ್ನ ಹೊಡೆತ, ಆ ಚಿಕ್ಕ ಜಿಂಕೆ ತನ್ನ ಕೋಮಲವಾದ ತಲೆಯನ್ನು, ಅದರ ಕಿವಿಗಳಿಂದ ನನ್ನ ಭಾರವಾದ ಬಂದೂಕಿನ ಸ್ಫೋಟನದ ಧಕ್ಕೆಯ ಜುಮ್ಮನ್ನು ಹೋಗಲಾಡಿಸುವ ಉದ್ದೇಶದಿಂದ ಬಿರುಸಾಗಿ ಕುಲುಕಿತು,” ಎಂದು ಆ ದೇಶ ಪರಿಶೋಧಕರು ಬರೆದರು.
ಇನ್ನೂ ಅನೇಕ ಗುಂಡು ಹೊಡೆತಗಳಾದ ಬಳಿಕ, ಮಾನವ ಒಡನಾಟ ಅಪಾಯಕರವೆಂದು ಆ ಪುಟ್ಟ ಆಸಾಮಿ ನಿರ್ಧರಿಸಿ ಓಡಿದ. ಅಗತ್ಯವಿದ್ದಿದ್ದ ಊಟ ಸಿಕ್ಕದೆ ಹೋದರೂ, ವಾನ್ ಡರ್ ಪೋಸ್ಟ್ನ ಹಸಿದಿದ್ದ ಕಾಡುಮನುಷ್ಯ ಸಂಗಾತಿಗಳು ಸಂತೋಷಪಟ್ಟರು. ಏಕೆ? ಸ್ಟೀನ್ಬಾಕ್ ಚಿಗರಿಯ ವರ್ತನೆಯ ವಿಷಯದಲ್ಲಿ ಕಾಡುಮನುಷ್ಯರಿಗೆ ಹೆಚ್ಚು ಅಭಿಮಾನವಿದೆ, ಮತ್ತು ಈ ಚಿಗರಿ ಅವರು ಎಣಿಸಿದಂತೆಯೇ ವರ್ತಿಸಿತು. ವಾನ್ ಡರ್ ಪೋಸ್ಟ್ ಮುಂದುವರಿಸಿ ಹೇಳುವುದು: “ಕಾವಿನ ಆ ಉದ್ದವಾದ ದಿನದಲ್ಲೆಲ್ಲ ನನ್ನ ಮನಸ್ಸು, ಆ ಚಿಕ್ಕ ಸೌಮ್ಯ ಭಾವದ ಚಿಗರಿ ನನ್ನ ಕೋವಿಯಿಂದ ಗುಂಡುಗಳ ಹಿಂದೆ ಬರುತ್ತಿದ್ದ ಗುಂಡುಗಳ ಸಿಡಿತದ ಮಧ್ಯೆ ಕಳವಳಗೊಳ್ಳದೆ ನಿಂತಿರುವ ದೃಶ್ಯಕ್ಕೆ ಹಿಂದಿರುಗಿತು.” (g93 1/8)