“‘ಯೆಹೋವ’ ನನ್ನು ನಾಸಿಗಳು ಉಜ್ಜಿ ಹಾಕುತ್ತಾರೆ”
ಈ ಪದಗಳು, ನವಂಬರ 20, 1938ರ ನ್ಯೂ ಯಾರ್ಕ್ ಹೆರಾಲ್ಡ್ ಟ್ರೈಬ್ಯೂನ್ನ ಪ್ರಥಮ ಪುಟದ ತಲೆಬರಹವಾಗಿದ್ದವು. ಲೇಖನವು ವರದಿಸಿದ್ದು: “ಹೀಬ್ರೂವಿನಲ್ಲಿ ದೇವರಿಗೆ ‘ಯಾವೇ’ ಎಂಬ ಪದದಿಂದ ತೆಗೆಯಲಾದ ‘ಯೆಹೋಫಾ’—ಯೆಹೋವ ಎಂಬ ಪದದ ಜರ್ಮನ್ ಅಕ್ಷರ ಜೋಡಣೆಯನ್ನು—ಮತ್ತು ಯೆಹೂದಿ ಪ್ರವಾದಿಗಳ ಹಳೆಯ ಒಡಂಬಡಿಕೆಯ ಹೆಸರುಗಳನ್ನು ಕೂಡ ತೆಗೆದುಹಾಕಲು [ಜರ್ಮನಿ] ದೇಶದ ಕೆಲವು ಭಾಗಗಳಲ್ಲಿದ್ದ ಪ್ರಾಟೆಸ್ಟಂಟ್ ಚರ್ಚುಗಳಿಗೆ ಆಜ್ಞಾಪಿಸಲಾಗಿತ್ತು.”
ಇದೆಲ್ಲವೂ ಯೆಹೂದಿಯರ ಹಿಂಸೆಗಾಗಿ ನಾಜಿಗಳ ಕಾರ್ಯಾಚರಣೆಯ ಭಾಗವಾಗಿತ್ತು. ಅದೇ ಸಮಯದಲ್ಲಿ, ಸಂದೇಹವಿಲ್ಲದೆ, 1933ರಿಂದ ನಿಷೇಧಿಸಲಾಗಿದ್ದ ಮತ್ತು ಶಿಬಿರಗಳಿಗೆ ಕಳುಹಿಸಲಾಗುತ್ತಿದ್ದ ಯೆಹೋವನ ಸಾಕ್ಷಿಗಳ ವಿರುದ್ಧ ಆಘಾತವೊಂದನ್ನು ತರುವುದು ಇದರ ಉದ್ದೇಶವಾಗಿತ್ತು.
ಜರ್ಮನಿಯಲ್ಲಿ 1933ರಲ್ಲಿ 19,268 ಸಕ್ರಿಯ ಸಾಕ್ಷಿಗಳಿದ್ದರು. ಇಂದು, ನಾಜಿಗಳ ಮತ್ತು ಇತ್ತೀಚಿನ ವರೆಗೆ, ಪೂರ್ವ ಜರ್ಮನಿಯಲ್ಲಿರುವ ಸಮತಾವಾದಿಗಳ ಕೈಗಳಿಂದ ಸತತವಾದ ಕಾಟದ ಅನಂತರವೂ, 1,938 ಸಭೆಗಳೊಂದಿಗೆ ಸಹವಸಿಸುವ 1,63,000 ಸಾಕ್ಷಿಗಳಿದ್ದಾರೆ. ಮತ್ತು ಜರ್ಮನ್ ಶಬ್ದಕೋಶದಿಂದ ಯೆಹೋವ ಎಂಬ ಹೆಸರು ಅಳಿಸಲ್ಪಟ್ಟಿಲ್ಲ. ಜರ್ಮನಿಯ ಎಲ್ಲೆಡೆಯೂ, ಸೊಯಿಗನ್ ಯೆಹೋಫಾಸ್, ಯೆಹೋವನ ಸಾಕ್ಷಿಗಳು ಪ್ರಖ್ಯಾತರಾಗಿದ್ದಾರೆ.
ಸಾಕ್ಷಿಗಳ ಬಗ್ಗೆ ಅಧಿಕ ಮಾಹಿತಿಯನ್ನು ನೀವು ಸ್ವಾಗತಿಸುವುದಾದರೆ, ನಿಮ್ಮ ಸ್ಥಳಿಕ ರಾಜ್ಯ ಸಭಾಗೃಹದೊಂದಿಗೆ ದಯವಿಟ್ಟು ಸಂಪರ್ಕಿಸಿರಿ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ಪಟ್ಟಿಯನ್ನು ಉಪಯೋಗಿಸುತ್ತಾ ನಿಮಗೆ ಹತ್ತಿರವಿರುವ ವಿಳಾಸಕ್ಕೆ ಬರೆಯಿರಿ. (g93 5/8)
[ಪುಟ 32 ರಲ್ಲಿರುವ ಚಿತ್ರ]
ಜರ್ಮನಿಯಲ್ಲಿ ಸೆಲ್ಟರ್ಸ್⁄ಟಾವುನಸ್ನಲ್ಲಿ ಯೆಹೋವನ ಸಾಕ್ಷಿಗಳ ಶಾಖಾ ಮುಖ್ಯ ಕಾರ್ಯಾಲಯ