ಜಗತ್ತನ್ನು ಗಮನಿಸುವುದು
ಟಿವಿಯ ಭೌಗೋಲಿಕ ಪ್ರಭಾವ
ಭೂವ್ಯಾಪಕವಾಗಿ ಟೆಲಿವಿಷನ್ ಎಷ್ಟು ಜನಪ್ರಿಯವಾಗಿದೆ? ಇಂಟರ್‌ನ್ಯಾಷನಲ್ ಹೆರಲ್ಡ್ ಟ್ರೈಬ್ಯೂನ್‌ಗೆ ಅನುಸಾರ, ಭೂವ್ಯಾಪಕವಾಗಿ ಒಂದು ನೂರು ಕೋಟಿ ಟಿವಿ ಸೆಟ್ಟುಗಳು ಇವೆ, ಇದು ಐದು ವರ್ಷಗಳ ಹಿಂದೆ ಇದ್ದಂತಹ ಟಿವಿಗಳಿಗಿಂತ 50 ಸೇಕಡ ಹೆಚ್ಚು. ಜಪಾನಿಯರ ಮನೆಗಳಲ್ಲಿ, ಫ್ಲಷ್ ಟ್ಲಾಯೆಟ್‌ಗಳಿಗಿಂತ ಟಿವಿ ಸೆಟ್ಟುಗಳು ಬಹಳ ಸಾಮಾನ್ಯವಾಗಿವೆ. ಮೆಕ್ಸಿಕನ್ ಮನೆಗಳಲ್ಲಿ ಕೇವಲ ಅರ್ಧದಷ್ಟು ಮಾತ್ರ ಒಂದು ದೂರವಾಣಿಯನ್ನು ಪಡೆದಿವೆಯಾದರೂ ಪ್ರತಿಯೊಂದು ಮನೆವಾರ್ತೆಯು ಹೆಚ್ಚು ಕಡಿಮೆ ಒಂದು ಟಿವಿಯನ್ನು ಹೊಂದಿದೆ. ಮತ್ತು ಅನೇಕ ಅಮೆರಿಕನರಿಗೆ ಆಯ್ಕೆ ಮಾಡಿಕೊಳ್ಳಲು 25 ಯಾ 30 ಟಿವಿ ಚ್ಯಾನೆಲ್‌ಗಳಿವೆ. ಟ್ರೈಬ್ಯೂನ್ ವರದಿಸುವುದು: “ಈ ಭೌಗೋಲಿಕ ಟೆಲಿವಿಷನ್ ಕ್ರಾಂತಿಯ ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳು ಪ್ರಚಂಡವಾಗಿವೆ. . . ಏನಂದರೆ ಇಷ್ಟೆಲ್ಲಾ ಟಿವಿ ವೀಕ್ಷಣವು ಈಗಾಗಲೇ ಅಮೆರಿಕನರ ಎರಡು ಸಂತತಿಗಳಿಗೆ ಮಾಡಿರುವಂತೆ ಲೋಕದ ಉಳಿದ ಭಾಗವೂ ಓದುವಿಕೆಗಾಗಿ ಇರುವ ತನ್ನ ಅಭಿಲಾಷೆಯನ್ನು ಕಳೆದುಕೊಳ್ಳುವಂತೆ ಮಾಡುವುದು ಎಂದು ಕೆಲವರು ಚಿಂತಿಸುತ್ತಾರೆ.” (g93 5/8)
ಯಾರಿಗೆ ಬೇಕು ಈ ಮಕ್ಕಳು?
“ನನ್ನ ಪ್ರೀತಿಯ ಗಂಡನೆ, ನೀನು ಮಕ್ಕಳನ್ನು ತೆಗೆದುಕೊ, ನಾನು ಹಣವನ್ನು ಇಟ್ಟುಕೊಳ್ಳುತ್ತೇನೆ.” ಮೈನೀಚಿ ಡೇಲಿ ನ್ಯೂಜ್‌ನಲ್ಲಿ ಕಂಡುಬಂದ ಈ ತಲೆಬರಹವು, ಅವರು ಎಂದಾದರೂ ವಿವಾಹ ವಿಚ್ಛೇದವನ್ನು ಪಡೆಯುವದಾದರೆ ಅವರು ಏನನ್ನು ಇಟ್ಟುಕೊಳ್ಳಲು ಬಯಸುತ್ತಾರೆಂಬ ಅನೇಕ ಜಪಾನಿ ಹೆಂಗಸರ ಉತ್ತರಗಳನ್ನು ಸಾರಾಂಶಿಸಿತು. ಹಾಕುಹೋಡೊ ಎಂಬ ಒಂದು ಜಾಹೀರಾತು ಕಂಪನಿಯ ಇತ್ತೀಚಿಗಿನ ಸಮೀಕ್ಷೆಗನುಸಾರ, ಬ್ಯಾಂಕ್ ಉಳಿತಾಯಗಳು, ಹಣ, ಮತ್ತು ವಿರಾಮ ಕಾಲದ ಮನೆಗಳು, ಪ್ರಥಮ ಮೂರು ಆದ್ಯತೆಗಳಾಗಿವೆ. ನಾಲ್ಕನೆಯ ಸ್ಥಾನ ಗಂಡು ಮಕ್ಕಳಿಗೆ, ಹೆಣ್ಣು ಮಕ್ಕಳು ಅವರನ್ನು ಹಿಂಬಾಲಿಸಿದರು, ಆಮೇಲೆ ಮನೆಗಳು, ಟೆಲಿವಿಷನ್ ಸೆಟ್ಟುಗಳು, ಕಲಾಕೃತಿಗಳು, ಮತ್ತು ಕೈಚೀಲಗಳು. ತಂದೆಗಳಿಗೆ ಕೂಡ ಅವರ ಮಕ್ಕಳಿಗಾಗಿ ಬಹಳ ಕಡಿಮೆ ಸಮಯ ಇದೆ. ತಮ್ಮ ಮಕ್ಕಳೊಂದಿಗೆ ಮಾತಾಡುವುದರಲ್ಲಿ ಸಮಯವನ್ನು ವ್ಯಯಿಸಲು ಅವರು ತಮ್ಮ ಕೆಲಸದಲ್ಲಿ ತುಂಬ ಕಾರ್ಯಮಗ್ನರಾಗಿದ್ದಾರೆಂದು 69 ಸೇಕಡ ಜಪಾನಿ ತಂದೆಗಳು ಹೇಳುವುದನ್ನು ಟುಕೈ ಬ್ಯಾಂಕಿನ ಮೂಲಕ ಮಾಡಲಾದ ಒಂದು ಭಿನ್ನವಾದ ಸಮೀಕ್ಷೆಯು ಕಂಡುಕೊಂಡಿತು. ವಾಸ್ತವದಲ್ಲಿ, ತಮ್ಮ ಮಕ್ಕಳೊಂದಿಗೆ ಚರ್ಚಿಸಲು ಅವರಿಗೆ ಯಾವ ಪರಸ್ಪರ ಅಭಿರುಚಿಗಳು ಇಲ್ಲವೆಂದು 22 ಸೇಕಡ ತಂದೆಗಳು ಹೇಳುತ್ತಾರೆ. (g93 4/22)
ಭೂಗೃಹವನ್ನು ಅಂಚಿಗೆ ತಳ್ಳುವುದು
ಲೋಕದ ಪ್ರಚಲಿತ ವಾರ್ಷಿಕ ಜನಸಂಖ್ಯಾ ಬೆಳವಣಿಗೆ ಬಹುಮಟ್ಟಿಗೆ 10 ಕೋಟಿ, ಮತ್ತು 2050ನೆಯ ವರ್ಷದೊಳಗಾಗಿ ಭೂಮಿಯ ಜನಸಂಖ್ಯೆಯು 1,000 ಕೋಟಿ ಇರುವುದೆಂದು ಅಂದಾಜುಮಾಡಲಾಗುತ್ತದೆ, ಎಂಬುದಾಗಿ ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಒಂದು ವರದಿಯು ಹೇಳುತ್ತದೆ. ದ ರಾಯಲ್ ಸೊಸೈಟಿ ಆಫ್ ಲಂಡನ್ ಮತ್ತು ಯು. ಎಸ್. ನ್ಯಾಷನಲ್ ಅಕ್ಯಾಡಮಿ ಆಫ್ ಸೈಎನ್ಸ್, ಇಂತಹ ಬೆಳವಣಿಗೆ ಪರಿಸರವನ್ನು ವಿಪರ್ಯಯಗೊಳಿಸಲಾಗದ ಹಾನಿಯಿಂದ ಬೆದರಿಸುತ್ತದೆ ಎಂಬುದಾಗಿ ಹೇಳುವ ಒಂದು ಅಪೂರ್ವ ಸಂಯುಕ್ತ ಹೇಳಿಕೆಯನ್ನು ಪ್ರಕಟಿಸಿದವು. ಹೆಚ್ಚಿನ ಬೆಳವಣಿಗೆ ಆಗುತ್ತಿರುವ ವಿಕಾಸಶೀಲ ರಾಷ್ಟ್ರಗಳು, ವಿಕಾಸಗೊಂಡ ಲೋಕದಂತೆಯೇ ಅದೇ ಪ್ರಮಾಣದಲ್ಲಿ, ಸಂಪನ್ಮೂಲಗಳನ್ನು ವ್ಯಯಿಸುವದಾದರೆ, ಇದು ವಿಶೇಷವಾಗಿ ಸತ್ಯವಾಗಿರುವುದು. ಅಕ್ಯಾಡಮಿಗಳು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಒಂದು ಮುಖ್ಯ ಪಾತ್ರವನ್ನು ಸೂಚಿಸಿದವು, ಆದರೆ “ತೀವ್ರ ಜನಸಂಖ್ಯಾ ಬೆಳವಣಿಗೆ, ನಿಷ್ಪಯ್ರೋಜಕ ಸಂಪನ್ಮೂಲ ಬಳಕೆ, ಮತ್ತು ಹಾನಿಕಾರಕ ಮಾನವ ಆಚಾರಗಳಿಂದ ಸೃಷ್ಟಿಸಲ್ಪಟ್ಟ ಸಮಸ್ಯೆಗಳನ್ನು ಪರಿಹರಿಸಲು” ಅವುಗಳ ಮೇಲೆಯೇ ಮಾತ್ರ ಆತುಕೊಳ್ಳುವುದು ಯುಕ್ತವಲ್ಲ ಎಂದು ಹೇಳಿದವು. ಯಾವುದೂ ಬದಲಾಗದಿದ್ದರೆ, “ಲೋಕದ ಹೆಚ್ಚಿನ ಜನರಿಗಾಗಿ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಪರಿಸರದ ವಿಪರ್ಯಯಗೊಳಿಸಲಾಗದ ಪತನವನ್ನಾಗಲಿ ಯಾ ಮುಂದುವರಿದ ಬಡತನವನ್ನಾಗಲಿ ತಡೆಯಲು ಸಾಧ್ಯವಾಗಲಿಕ್ಕಿಲ್ಲ” ಎಂಬುದಾಗಿ ಹೇಳಿಕೆಯು ಹೇಳಿತು. “ಜನಸಂಖ್ಯೆಯನ್ನು ನಿಯಂತ್ರಿಸಲು ನಾವು ಗಂಭೀರ ಪ್ರಯತ್ನಗಳನ್ನು ಮಾಡದಿದ್ದರೆ, ಬೇರೆ ಎಲ್ಲವೂ ಅಪ್ರಧಾನವಾಗುತ್ತದೆ,” ಎಂದು ದ ರಾಯಲ್ ಸೊಸೈಟಿ ಆಫ್ ಲಂಡನ್‌ನ ಅಧ್ಯಕ್ಷರಾದ, ಸರ್ ಮೈಕಲ್ ಅಟೀಯಾ ಹೇಳಿದರು. (g93 5/8)
ಎಂದೂ ತಲಪದ ನೆರವು
ಆಫ್ರಿಕದಲ್ಲಿ ಹಸಿವು ಮತ್ತು ಬಡತನವನ್ನು ಶಮನಗೊಳಿಸಲು ದಾನಮಾಡಿದ ಅಂತಾರಾಷ್ಟ್ರೀಯ ನೆರವು ಸಂಕಲ್ಪಿತ ಫಲಾನುಭವಿಗಳಲ್ಲಿ ಕೇವಲ 7 ಸೇಕಡ ಜನರಿಗೆ ಮಾತ್ರ ಸೇರುತ್ತದೆ, ಎಂದು ಫರತ್ ಯುನಸ್, ಆಫ್ರಿಕದ ವಿಕಾಸ ಬ್ಯಾಂಕಿನ ಉಪಾಧ್ಯಕ್ಷರು, ಒಪ್ಪಿಕೊಳ್ಳುತ್ತಾರೆ. ಈ ದುರಂತವು ಲಕ್ಷಾಂತರ ಆಫ್ರಿಕನ್ ಮಕ್ಕಳ ಹತಾಶ ಸನ್ನಿವೇಶದ ಮೂಲಕ ಜಟಿಲವಾಗಿದೆ. ಆಫ್ರಿಕ ಭೂಖಂಡದ ಉದ್ದಕ್ಕೂ, ಮೂರು ಕೋಟಿ ನ್ಯೂನ ಪೋಷಣೆ ಹೊಂದಿದ ಮಕ್ಕಳಿದ್ದಾರೆ ಮತ್ತು ನ್ಯೂನ ಆಹಾರಕ್ರಮದ ಮೂಲಕ ಬೆಳವಣಿಗೆ ನಿಧಾನಗೊಂಡ ಇನ್ನೂ ನಾಲ್ಕು ಕೋಟಿ ಮಕ್ಕಳಿದ್ದಾರೆಂದು ಸ್ಪ್ಯಾನಿಷ್ ಸಮಾಚಾರ ಪತ್ರಿಕೆ ಎಲ್ ಪಾಯಿಸ್ ವರದಿಸುತ್ತದೆ. ನಾಲ್ವತ್ತು ನಾಲ್ಕು ಆಫ್ರಿಕನ್ ದೇಶಗಳ ಪ್ರತಿನಿಧಿಗಳು, ಸೆನೆಗಲ್‌ನ ಡಾಕಾರ್‌ನಲ್ಲಿ ಕೂಡುತ್ತಾ, ಈ ಮಕ್ಕಳ ಸ್ಥಿತಿಯನ್ನು ಉತ್ತಮಗೊಳಿಸುವಿಕೆಯಲ್ಲಿ, ನೆರವು ಹಂಚಿಕೆಯ ವಿಕೇಂದ್ರೀಕರಣ ಮತ್ತು ರಕ್ಷಣಾ ವೆಚ್ಚದಲ್ಲಿ ಕಡಿತವು ಎರಡು ಪ್ರಾಮುಖ್ಯ ಹೆಜ್ಜೆಗಳೆಂದು ಶಿಫಾರಸ್ಸು ಮಾಡಿದರು. (g93 5/8)
ಆಫ್ರಿಕನ್ ಧೂಳು
ಸಮಶೀತೋಷ್ಣವಲಯದ ಹುಲ್ಲುಗಾವಲು ಪ್ರದೇಶ ಮತ್ತು ಕುರುಚಲು ಪ್ರದೇಶದಿಂದ, ಬಿಸಿ ಒಣ ಗಾಳಿಗಳಿಂದ ತೋಡಿಕೊಂಡು ಒಯ್ಯಲ್ಪಟ್ಟ ಆಫ್ರಿಕನ್ ಧೂಳು, ಭೂಗ್ರಹದ ಬೇರೆ ಭಾಗಗಳನ್ನು ಪ್ರಯೋಜನಪಡಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ದಕ್ಷಿಣ ಆಫ್ರಿಕದಲ್ಲಿ ಲಂಬಿಸಿದ ಶುಷ್ಕತೆಯಿಂದಾಗಿ , 1992ರಲ್ಲಿ ಮಾತ್ರವೇ ಲಕ್ಷಾಂತರ ಟನ್‌ಗಳಷ್ಟು ಆಫ್ರಿಕನ್ ಮೇಲ್ಮಣ್ಣು ದಪ್ಪದಾದ ಧೂಳು ಕಂಬಗಳಾಗಿ ಪರಿವರ್ತಿಸಿಲ್ಪಟ್ಟವೆಂದು ಇಂಟರ್‌ನ್ಯಾಷ್‌ನಲ್ ಹೆರಲ್ಡ್ ಟ್ರೈಬ್ಯೂನ್ ವರದಿಸುತ್ತದೆ. ಧೂಳಿನ ಹೆಚ್ಚಿನ ಭಾಗವು ಅಟ್ಲ್ಯಾಂಟಿಕ್ ಸಾಗರದೊಳಗೆ ಬೀಳುತ್ತಾ ಖನಿಜವಸ್ತುಗಳನ್ನು—ವಿಶೇಷವಾಗಿ ಹೆಚ್ಚಾಗಿ ಅಗತ್ಯವಿರುವ ಕಬ್ಬಿಣವನ್ನು—ಆಹಾರ ಸರಪಳಿಯ ಆರಂಭದಲ್ಲಿರುವ ಪ್ಲ್ಯಾಂಕ್ಟನ್ ಮತ್ತು ಕ್ರಿಲ್‌ಗೆ ಒದಗಿಸುತ್ತದೆ. ಉಳಿದ ಧೂಳು ಅಮೆರಿಕ ಭೂಖಂಡಕ್ಕೆ ಕೊಚ್ಚಿಕೊಂಡು ಹೋಗುತ್ತದೆ. ಅಲ್ಲಿಯ ಕಡಿಮೆ ಸತ್ವವಿರುವ ಮಣ್ಣನ್ನು ಪುನಃ ಸತಯ್ವುತಗೊಳಿಸಲು ಆಫ್ರಿಕನ್ ಧೂಳು ಸಹಾಯ ಮಾಡುತ್ತದೆ ಎಂದು ಆ್ಯಮೆಜಾನ್ ಮಳೆ ಕಾಡುಗಳಲ್ಲಿನಡೆಸಲಾದ ಅಧ್ಯಯನಗಳು ಸೂಚಿಸುತ್ತವೆ. “ದೊಡ್ಡ ಮತ್ತು ದೂರದ ಪರಿಸರಕ್ರಮಗಳು ಪರಸ್ಪರವಾಗಿ ಅವಲಂಬಿತವಾಗಿವೆ ಎಂದು ಅಟ್ಲ್ಯಾಂಟಿಕ್ ಮತ್ತು ಅಮೆರಿಕಗಳನ್ನು ಉಣಿಸುವ ಈ ಆಫ್ರಿಕನ್ ಧೂಳು ತೋರಿಸುತ್ತದೆ,” ಎಂದು ಯೂನಿವರ್ಸಿಟಿ ಆಫ್ ವರ್ಜೀನಿಯದ, ಡಾ. ಮೈಕಲ್ ಗಾರ್‌ಸ್ಟಂಗ್ ಹೇಳುತ್ತಾರೆ. “ಸಂದೇಶವು ಏನಂದರೆ, ನಮ್ಮ ಭೂಗ್ರದಲ್ಲಿ ನಮಗೆ ತಿಳಿಯದೆ ಇರುವ ಅನೇಕ ಅನ್ಯೋನ್ಯವಾಗಿ ಸಂಬಂಧಿತ ಮತ್ತು ಪರಸ್ಪರವಾಗಿ ಆಶ್ರಿತ ವ್ಯವಸ್ಥೆಗಳಿವೆ. ಈ ವಿಷಯಗಳ ಬಗ್ಗೆ ಸ್ವಲ್ಪವನ್ನು ತಿಳಿದುಕೊಳ್ಳಲು ನಾವೀಗ ಆರಂಭಿಸುತ್ತಿದ್ದೇವೆ.” (g93 5/8)
ಧಾರ್ಮಿಕ ಪತ್ರಿಕೆಗಳ ಪ್ರಕಟನೆ ಸಗ್ಥಿತವಾಗುತ್ತದೆ
“ದೇಶದ ಅತಿ ಹಳೆಯ ಎರಡು ಧಾರ್ಮಿಕ ಪತ್ರಿಕೆಗಳಾದ, ಅಮೆರಿಕನ್ ಬ್ಯಾಪ್‌ಟಿಸ್ಟ್ ಮತ್ತು ಕ್ರಿಸಿಯ್ಟನ್ ಹೆರಲ್ಡ್, ತಮ್ಮ ಪ್ರಕಟನೆಯನ್ನು ನಿಲ್ಲಿಸಿವೆ,” ಎಂದು ಎಸೋಸಿಯೇಟೆಡ್ ಪ್ರೆಸ್‌ನ ಒಂದು ಸಮಾಚಾರವು ವರದಿಸುತ್ತದೆ. “ಚ್ಯಾಪಕ್ವ, ನ್ಯೂಯಾರ್ಕ್‌ನಲ್ಲಿ ಕಾರ್ಯಕೇಂದ್ರವಿರುವ 115 ವರ್ಷ ಪ್ರಾಯದ ಕ್ರಿಸಿಯ್ಟನ್ ಹೆರಲ್ಡ್ ಮತ್ತು ಯಾವುದರ ಪೂರ್ವಚರಿತ್ರೆ 1803ರಲ್ಲಿ ಆರಂಭವಾಯಿತೋ ಆ 189 ವರ್ಷ ಪ್ರಾಯದ ಅಮೆರಿಕನ್ ಬ್ಯಾಪ್‌ಟಿಸ್ಟ್—ಇವೆರಡೂ ಇಳಿಮುಖವಾಗುತ್ತಿರುವ ಪ್ರಸರಣವನ್ನು ನಮೂದಿಸಿದವು.” ಪೆನ್‌ಸಿಲೇನ್ವಿಯದ ವ್ಯಾಲಿ ಫಾರ್ಜ್‌ನಲ್ಲಿ ಕಾರ್ಯಕೇಂದ್ರವಿರುವ, ಅಮೆರಿಕನ್ ಬ್ಯಾಪ್‌ಟಿಸ್ಟ್ ಮಾಸಿಕವನ್ನು ಒಂದು ಸುದ್ದಿಪತ್ರದಿಂದ ಭರ್ತಿಮಾಡಲಾಗುವುದು. ಹಾಗಿದ್ದರೂ, ಅದೇ ಶಕದ ಇನ್ನೊಂದು ಧಾರ್ಮಿಕ ಪತ್ರಿಕೆಯಾದ, ದ ವಾಚ್‌ಟವರ್, ಬೆಳೆಯುತ್ತ ಮುಂದುವರಿಯುತ್ತಿದೆ. ಪೆನ್‌ಸಿಲೇನ್ವಿಯದ ಪಿಟ್ಟ್ಸ್‌ಬರ್ಗ್‌ನಲ್ಲಿ 1879ರಲ್ಲಿ, 6,000 ಇಂಗ್ಲಿಷ್ ಪ್ರತಿಗಳ ವಿತರಣೆಯೊಂದಿಗೆ ಪ್ರಥಮವಾಗಿ ಪ್ರಕಟಿಸಲಾದ ಮಾಸಿಕ ದ ವಾಚ್‌ಟವರ್ ಈಗ ಪಾಕ್ಷಿಕವಾಗಿ 112 ಭಾಷೆಗಳಲ್ಲಿ ಪ್ರಕಟಿಸಲ್ಪಡುತ್ತದೆ ಮತ್ತು ಪ್ರತಿ ಸಂಚಿಕೆಗೆ 1,64,00,000 ಪ್ರತಿಗಳ ವಿತರಣೆ ಇದೆ. (g93 5/8)
ಕುಷ್ಟರೋಗಕ್ಕೆ ಒಂದು ಚಿಕಿತ್ಸೆ
ಕುಷ್ಟರೋಗಿಗಳು ವರ್ಜಿಸಲ್ಪಡಬೇಕೊ ಯಾ ಅವರಿಗೆ ಉದ್ಯೋಗವನ್ನು ನಿರಾಕರಿಸತಕ್ಕದ್ದೊ? ದಕ್ಷಿಣ ಆಫ್ರಿಕದ ಪತ್ರಿಕೆ ಫಾರ್ಮರ್ಸ್ ವೀಕ್‌ಲಿಯಲ್ಲಿದ್ದ ಒಂದು ಲೇಖನಕ್ಕನುಸಾರ ಇಲ್ಲ. ಲೆಪ್ರಸಿ ಮಿಷನ್‌ನ ಆಕಿ ಕ್ರೂಗರ್ ವರದಿಸಿದ್ದು: “ಚಿಕಿತ್ಸೆಯನ್ನು ಆರಂಭಿಸಿ ಕೆಲ ಗಂಟೆಗಳೊಳಗೆ, ಅವರು ಇನ್ನು ಮುಂದೆ ರೋಗವನ್ನು ಅಂಟಿಸುವವರಾಗಿರುವುದಿಲ್ಲ ಮತ್ತು ತಮ್ಮ ಕುಟುಂಬಗಳೊಂದಿಗೆ ಸಾಮಾನ್ಯ ಜೀವಿತಗಳನ್ನು ನಡೆಸಬಲ್ಲರು.” ಬಹುಔಷಧಿ (ಮಲ್ಟಿಡ್ರಗ್) ಚಿಕಿತ್ಸೆಯಿಂದಾಗಿ “ಕಳೆದ ದಶಕದಲ್ಲಿ ರೋಗವನ್ನು ಗುಣಪಡಿಸುವುದರಲ್ಲಿ ಗಣನೀಯ ಪ್ರಗತಿ ಆಗಿರುವುದರಿಂದ,” ರೋಗಿಗಳು ಸಾಕಷ್ಟು ಬೇಗನೆ ಚಿಕಿತ್ಸೆಯನ್ನು ಪಡೆಯುವುದಾದರೆ ಅವರು ಶಾಶ್ವತವಾಗಿ ಅಂಗವಿಕಲರಾಗುವುದಿಲ್ಲ. ಲೋಕ ಆರೋಗ್ಯ ಸಂಸ್ಥೆಗನುಸಾರ, ಲೋಕದಲ್ಲಿ ಸುಮಾರು ಒಂದು ಕೋಟಿಯಿಂದ ಹಿಡಿದು ಒಂದೂವರೆ ಕೋಟಿಯಷ್ಟು ಜನರು ಕುಷ್ಟರೋಗದಿಂದ ಪೀಡಿತರು ಎಂದು ಫಾರ್ಮರ್ಸ್ ವೀಕಲಿ ವರದಿಸಿತು. (g93 4/22)
ಸ್ಥೂಲಕಾಯದ ಮಕ್ಕಳು—ಯಾಕೆ?
“ಇಂದಿನ ಮಕ್ಕಳು ಹಿಂದೆಂದೂ ಇಲ್ಲದ ರೀತಿಯಲ್ಲಿ ಸ್ಥೂಲಕಾಯದವರು ಮತ್ತು ಹೆಚ್ಚು ಚಟುವಟಿಕೆಯಿಲ್ಲದವರು ಆಗಿದ್ದಾರೆ,” ಎಂದು ದ ಟೊರಾಂಟೊ ಸ್ಟಾರ್ ವರದಿಸುತ್ತದೆ. “ಮಕ್ಕಳಲ್ಲಿ ಬೊಜ್ಜುಕಾಯವು ಕಳೆದ 20 ವರ್ಷಗಳಲ್ಲಿ ನಾಟಕೀಯವಾಗಿ ಹೆಚ್ಚಿದೆ,” ಎಂದು ಕೆನಡದ, ಹ್ಯಾಮಿಲ್‌ಟನ್‌ನಲ್ಲಿರುವ ಶೆಡೆಲಕ್ ಮೆಕ್ಮಾಸರ್ಟ್ ಆಸ್ಪತ್ರೆಗಳಲ್ಲಿ, ಮಕ್ಕಳ ಪೋಷಣೆಯ ನಿರ್ದೇಶಕರಾದ, ಡಾ. ಓಡೆಡ್ ಬಾರರ್ ಹೇಳುತ್ತಾರೆ. ವ್ಯಾಯಾಮ ಮತ್ತು ಸಮತೂಕ ಆಹಾರದ ಕೊರತೆ ಇದಕ್ಕೆ ಹೊಣೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ಪ್ರವೃತ್ತಿಯು ಮುಂದುವರಿಯುವದಾದರೆ, ಮಕ್ಕಳ ಆರೋಗ್ಯಸ್ಥಿತಿಯ ಮಟ್ಟದಲ್ಲಿ ತೀಕ್ಷೈವಾದ ಇಳಿತವಾಗುವುದು ಎಂದು, ವೈದ್ಯರು ಭಯಪಡುತ್ತಾರೆ. ಸ್ಟಾರ್‌ಗನುಸಾರ, ವೈದ್ಯರು ಈಗಾಗಲೇ, “ವ್ಯಾಯಾಮದ ಕೊರತೆಯನ್ನು ಪರಿಧಮನಿ ಹೃದಯ ರೋಗ, ಏರಿದ ರಕ್ತದೊತ್ತಡ, ಮಧುಮೂತ್ರ ವ್ಯಾಧಿ ಮತ್ತು ಆಸಿಯ್ಟೊಪರೋಸಿಸ್‌ಗೆ . . . ಕೇಡಿನ ಅಂಶವೆಂದು” ಗುರುತಿಸಿದ್ದಾರೆ. “ಒಂದು ಕ್ರಿಯಾಹೀನ ಮಗುವು ಬಹುಶಃ ಒಬ್ಬ ಬೊಜ್ಜು ಬೆಳೆದ ವಯಸ್ಕನಾಗಬಹುದು,” ಎಂದು ಡಾ. ಬಾರರ್ ಕೊನೆಗೊಳಿಸುತ್ತಾರೆ. ಒಂದು ಕ್ರಿಯಾಶೀಲ ಜೀವನ ಶೈಲಿಯನ್ನು ಅವರು ಶಿಫಾರಸ್ಸು ಮಾಡುತ್ತಾರೆ. (g93 4/22)
ಅವಿತುಕೊಂಡಿರುವ ಗಂಡಾಂತರ
“ಒಂದು ಹೃದಯಾಘಾತವನ್ನು ಅನುಭವಿಸುವ ಹೆಚ್ಚಾದ ಗಂಡಾಂತರವನ್ನು ಎದುರಿಸುವಾಗ, ಅವರು ಆರೋಗ್ಯವಂತರಾಗಿದ್ದಾರೆಂದು ಹೊಗೆಕುಡುಕರಿಗೆ ತಪ್ಪಾಗಿ ಹೇಳಲಾಗಬಹುದು,” ಎಂದು ದ ನ್ಯೂ ಯಾರ್ಕ್ ಟೈಮ್ಸ್‌ನಲ್ಲಿನ ಒಂದು ಲೇಖನವು ಹೇಳುತ್ತದೆ. ಯಾಕೆ? ಯಾಕಂದರೆ ಧೂಮಪಾನದ ಮೂಲಕ ಹೃದಯದ ಕಿರು ರಕ್ತನಾಳಗಳಿಗೆ (ಅಪಧಮನಿಗಳಿಗೆ) ಉಂಟಾದ ಹಾನಿಯು ವಾಡಿಕೆಯ ಹೃದಯ ಪರೀಕ್ಷೆಗಳಲ್ಲಿ ಕಂಡುಬರುವದಿಲ್ಲ. ಆದುದರಿಂದ ಹೊಗೆಕುಡುಕರು ಶಾರೀರಿಕ ಯಾ ಮಾನಸಿಕ ಒತ್ತಡದ ಕೆಳಗೆ ಇರುವಾಗ, ಅವರ ಹೃದಯಾಘಾತದ ಗಂಡಾಂತರವನ್ನು ಇನ್ನೂ ಹೆಚ್ಚು ಮಾಡುತ್ತಾ, ಅವರ ಹೃದಯಗಳು ರಕ್ತಕ್ಕಾಗಿ ಹಾತೊರೆಯುತ್ತವೆ. ಡಿಮೊಯಿನ್, ಐಅವದಲ್ಲಿರುವ ಹೃದಯ ಸಂಸ್ಥೆಯಲ್ಲಿ ನಡೆಸಿದ ಒಂದು ಅಭ್ಯಾಸವು ತೋರಿಸಿದ್ದೇನಂದರೆ, ಹೊಗೆಕುಡುಕನು ಧೂಮಪಾನ ಮಾಡದೆ ಇರುವಾಗಲೂ ಇದು ಸತ್ಯವಾಗಿದೆ ಮತ್ತು ಧೂಮಪಾನ ಮಾಡುವಾಗ ಸಮಸ್ಯೆಯು ಹೆಚ್ಚುತ್ತದೆ. ಒತ್ತಡದ ಕೆಳಗೆ, ಹೃದಯದ ಅಪಧಮನಿಗಳು ತೆರೆದುಕೊಳ್ಳುತ್ತವೆ ಮತ್ತು ಸಾಮಾನ್ಯಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ರಕ್ತವನ್ನು ಹೃದಯಕ್ಕೆ ಸಾಗಿಸಲು ಅವುಗಳಿಗೆ ಸಾಧ್ಯವಿದೆ. ಆದರೆ ಹೊಗೆಕುಡುಕರ ಹೃದಯಗಳಲ್ಲಿ ಆ ಹರಿವು 30 ಸೇಕಡದಷ್ಟು ಕಡಿಮೆಯಾಗಿರುತ್ತದೆ. (g93 5/8)
ಗರ್ಭಪಾತಗಳು ತಾಯಂದಿರನ್ನೂ ಕೊಲ್ಲುತ್ತವೆ
“ಪ್ರತಿ ನಿಮಿಷ ಗರ್ಭಧಾರಣೆ ಮತ್ತು ಪ್ರಸವದ ಪರಿಣಾಮವಾಗಿ ಒಬ್ಬ ಹೆಂಗಸು ಸಾಯುತ್ತಾಳೆ,” ಎಂದು ಅಂದಾಜುಮಾಡಲಾಗಿದೆಯಂದು ಚಾಯ್ಸೆಸ್ ಪತ್ರಿಕೆ ವರದಿಸುತ್ತದೆ. “ಪ್ರತಿ ವರ್ಷ ಗರ್ಭಧಾರಣೆಗೆ ಸಂಬಂಧಿತ ಕಾರಣಗಳಿಂದಾಗಿ ಐದು ಲಕ್ಷಕ್ಕಿಂತಲೂ ಅಧಿಕ ತಾಯಂದಿರು ಸಾಯುತ್ತಾರೆ. ಸಾಯುವ ಪ್ರತಿ ಹೆಂಗಸಿಗೆ, ಬೇರೆ 100 ಹೆಂಗಸರು ರೋಗಗ್ರಸ್ತರಾಗಿಯೂ ಯಾ ಅಶಕ್ತರಾಗಿಯೂ ಉಳಿಯುತ್ತಾರೆ” ಎಂದು ಪತ್ರಿಕೆ ಕೂಡಿಸುತ್ತದೆ. ಲ್ಯಾಟಿನ್ ಅಮೆರಿಕದಲ್ಲಿ, ಪ್ರತಿ 73 ಹೆಂಗಸರಲ್ಲಿ ಸುಮಾರು ಒಬ್ಬಾಕೆ ಗರ್ಭಧಾರಣೆಯ ಜಟಿಲತೆಗಳಿಂದಾಗಿ ಸಾಯುತ್ತಾಳೆ. ಏಷಿಯದಲ್ಲಿ, ಪ್ರತಿ 54 ಹೆಂಗಸರಲ್ಲಿ ಒಬ್ಬಾಕೆ ಸಾಯುತ್ತಾಳೆಂದು ಅಂದಾಜುಮಾಡಲಾಗಿದೆ; ಮತ್ತು ಆಫ್ರಿಕದಲ್ಲಿ 21ರಲ್ಲಿ ಒಂದು. ಪಶ್ಚಿಮ ಯುರೋಪ್‌ನಲ್ಲಿ ಪ್ರತಿ ಸಾವಿರಕ್ಕೆ ಒಂದು ಎಂಬ ಪ್ರಮಾಣದೊಂದಿಗೆ ಹೋಲಿಸಿದಾಗ, ಈ ಸಂಖ್ಯೆಗಳು ಅಧಿಕವಾಗಿವೆ. ಗರ್ಭಧಾರಣೆಗೆ ಸಂಬಂಧಿಸಿದ ಮರಣಗಳಿಗಿರುವ ಕಾರಣಗಳಲ್ಲಿ, “ಪ್ರತಿ ವರ್ಷ ಲೋಕಾದ್ಯಂತ ನಡೆಯುವ ತಾಯ್ತನದ 5,00,000 ಮರಣಗಳಲ್ಲಿ ಯಾವುದು ಮಾತ್ರ 2,00,000ಕ್ಕೂ ಹೆಚ್ಚು ಮರಣಗಳಿಗೆ ಕಾರಣವಾಗಿದೆಯೋ ಆ ಗರ್ಭಪಾತವು,” ಸೇರಿದೆ ಎಂದು ಚಾಯ್ಸೆಸ್ ಗಮನಿಸಿತು. (g93 4/22)