ಬೈಬಲಿನ ದೃಷ್ಟಿಕೋನ
ಧರ್ಮಾರ್ಥವಾದ ಕಾಣಿಕೆಗಳು ಕ್ರೈಸ್ತ ಹಂಗೋ?
ಹತ್ತಕ್ಕಿಂತ ಕಡಿಮೆ ವರ್ಷಗಳ ಹಿಂದೆ, ಅಮೆರಿಕದ ಆಗ್ನೇಯ ದಿಕ್ಕಿನಲ್ಲಿ ಕೇಂದ್ರ ಸ್ಥಾನವಿದ್ದ, ಪಿಟಿಎಲ್ (ಪ್ರೆಯ್ಸ್ ದ ಲೊರ್ಡ್) ಕ್ಲಬ್, ಒಂದು ಧರ್ಮಸಂಸ್ಥೆಯಂತೆ ದಾನಗಳನ್ನು ಕೇಳಿಕೊಂಡಿತು. ಸ್ಯಾಟೆಲೈಟ್ ಟಿವಿ ನೆಟ್ವರ್ಕ್ ಮತ್ತು ಅಂಚೆ ವ್ಯವಸ್ಥೆಯನ್ನು ಉಪಯೋಗಿಸುತ್ತಾ, ಅವರ—ಸುವಾರ್ತೆಯನ್ನು ಹರಡಿಸುವ ತೋರಿಕೆಯಿಂದ—ಖಜಾನೆಗಳನ್ನು ತುಂಬಲು ರಾಶಿಯಾಗಿ ಬಂದ ಕೋಟ್ಯಾಂತರ ಡಾಲರುಗಳನ್ನು ಅವರು ಶೇಖರಿಸಿದರು.
ಪಿಟಿಎಲ್ನ ಹಿಂದಿನ ಅಧ್ಯಕ್ಷರಾದ ಜಿಮ್ ಬೇಕರ್, ಅವನ ಪತ್ನಿ ಟ್ಯಾಮಿಯೊಂದಿಗೆ, “1986ರಲ್ಲಿ, ವೇತನವಾಗಿಯೂ ಇನಾಮಾಗಿಯೂ 16 ಲಕ್ಷ ಡಾಲರುಗಳನ್ನು ಪಡೆದರೆಂದು ವರದಿಸಿದ,” ಅಸೋಷಿಯೇಟೆಡ್ ಪ್ರೆಸ್ಸ್ನ ಸಂದೇಶಗಳಂಥಾ ವಾರ್ತಾ ವರದಿಗಳನ್ನು ಅವರು ಓದಿದಾಗ, ಪಿಟಿಎಲ್ ಕ್ಲಬ್ಗೆ ಹಣವನ್ನು ಕಳುಹಿಸಿದ ಸಾವಿರಾರು ಜನರಿಗೆ ಹೇಗೆ ಅನಿಸಿರಬಹುದೆಂದು ಊಹಿಸಿಕೊಳ್ಳಿ. ಇನ್ನೂ ಕೀಳಾಗಿ ಆ ವರದಿಯು ಕೂಡಿಸಿದ್ದು: “ಪೌರೋಹಿತ್ಯವು ಕಡಿಮೆ ಪಕ್ಷ 5 ಕೋಟಿ ಡಾಲರುಗಳಷ್ಟು ಸಾಲದಲ್ಲಿರುವಾಗಲೂ ಆ ಪಾವತಿಗಳು ಮಾಡಲ್ಪಟ್ಟವು . . . ಪಿಟಿಎಲ್ನ 2,65,000 ಡಾಲರ್ಗಳಷ್ಟು ಹಣವನ್ನು ಬೆಕರ್ನೊಂದಿಗೆ ಅವಳ [ಲೈಂಗಿಕ] ಅಕ್ರಮ ಪ್ರಣಯದ ಕುರಿತು ಅವಳ ಮೌನವನ್ನು ನಿಶ್ಚಿತಪಡಿಸಲು [ಜೆಸಿಕ] ಹ್ಯಾನ್ಗಾಗಿ ಬದಿಗಿರಿಸಲಾಗಿತ್ತು.”
ಅವನ ಅನುಯಾಯಿಗಳನ್ನು ಮೋಸಗೊಳಿಸಿದಕ್ಕಾಗಿ ಬೆಕರ್ಗೆ ಕಾರಾಗೃಹ ಶಿಕ್ಷೆಯನ್ನು ವಿಧಿಸುವ ಮುಂಚೆ ಅವನ ವಿಚಾರಣೆಯಲ್ಲಿ ನ್ಯಾಯಾಧೀಶನು ಹೇಳಿದ್ದು: “ಧರ್ಮವೊಂದು ಇರುವ ನಮಗೆ, ಶೇಖರಿಸುವ ಸುವಾರ್ತಿಕರಿಗೆ ಮತ್ತು ಪಾದ್ರಿಗಳಿಗೆ ಅಂತಸ್ಸಾರಗಳಾಗಿರುವುದಕ್ಕಾಗಿ ಅಸಹ್ಯಪಡುತ್ತೇವೆ.” ವಂತಿಗೆದಾರರ ಭಾವನಾತ್ಮಕ ಗುಂಡಿಗಳನ್ನು ಹುರುಪಿನಿಂದ ಒತ್ತುವುದಕ್ಕೆ ಮತ್ತು ಅನಂತರ ಬಹುತೇಕ ಹಣವನ್ನು ಜೇಬಿಗಿಳಿಸುವುದಕ್ಕೆ ಧರ್ಮ ಒಂದೇ ಆಗಿಲ್ಲ. ಕೆಲವು ವಂತಿಕೆ ಎತ್ತುವವರು ಅವರು ಕೋರಿ ಪಡಕೊಂಡಿರುವ ದಾನಗಳಲ್ಲಿ 90 ಪ್ರತಿಶತಕ್ಕಿಂತ ಹೆಚ್ಚಿನದನ್ನು ಇಟ್ಟುಕೊಳ್ಳುವುದು ಅಸಾಮಾನ್ಯವಾದುದಲ್ಲ.
ಹಾಗಿರುವಲ್ಲಿ, ಅಂಥ ಧರ್ಮಕಾರ್ಯಗಳಲ್ಲಿ ಜನರಿಗೆ ಸಾಕಾಗಿಹೋಗುವುದೇನು ಆಶ್ಚರ್ಯಕರವಾದದ್ದೊ? ಆದಾಗ್ಯೂ, ಕ್ರೈಸ್ತರು ಏನು ಮಾಡಬೇಕು? ಸಂಘಟಿತ ಧರ್ಮಕಾರ್ಯಗಳಿಗೆ ಕೊಡಲು ಅವರು ಹಂಗುಳ್ಳವರೊ? ಇತರರಿಗೆ ಸಹಾಯ ಮಾಡುವಲ್ಲಿ ಹಣ ಸಂಗ್ರಹಣದ ವಿವೇಕಪ್ರದ ಉಪಯೋಗವನ್ನು ಖಚಿತಪಡಿಸಲು ಬೈಬಲು ಯಾವ ಮಾರ್ಗದರ್ಶನಗಳನ್ನು ಕೊಡುತ್ತದೆ? ಇತರರಿಗೆ ಸಹಾಯ ಮಾಡುವಲ್ಲಿ ಯಾವುದು ಅತ್ಯುತ್ತಮ ಮತ್ತು ಅತ್ಯಂತ ಹೆಚ್ಚು ಪ್ರಾಯೋಗಿಕ ಮಾರ್ಗವಾಗಿದೆ?
ಕೊಡುವಿಕೆ—ಹೌದು ಮತ್ತು ಅಲ್ಲ
ಅಗತ್ಯದಲ್ಲಿರುವವರ ಕಡೆಗೆ ದಯಾಪರರಾಗಿರಲು ಮತ್ತು ಉದಾರಿಗಳಾಗಿರಲು ಬೈಬಲಿನ ಸಲಹೆಯಾಗಿರುವುದು ಖಚಿತ. “ದಾನ ಧರ್ಮಗಳನ್ನು ಮಾಡುವವರೂ ಪರೋಪಕಾರಮಾಡುವವರೂ” ಆಗಿರಬೇಕೆಂದು ಪ್ರಾಚೀನ ಸಮಯದಿಂದಲೂ ದೇವರ ಜನರು ಪ್ರೋತ್ಸಾಹಿಸಲ್ಪಟ್ಟಿದ್ದಾರೆ. (1 ತಿಮೊಥೆಯ 6:18; ಧರ್ಮೋಪದೇಶಕಾಂಡ 15:7, 10, 11) ನಿಜತ್ವದಲ್ಲಿ, 1 ಯೋಹಾನ 3:17ರಲ್ಲಿ ಕ್ರೈಸ್ತರಿಗೆ ಹೇಳಲ್ಪಟ್ಟಿರುವುದು: “ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿ ಬಿದ್ದಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವುದುಂಟೇ?”
ಹೌದು, ಕೊಡಿರಿ; ಆದರೆ ಎಚ್ಚರದಿಂದಿರ್ರಿ! ನಾವು ಕ್ರಮವಾಗಿ ವಿಶ್ವಸ್ಥಗಳಿಂದ, ಮತಗಳಿಂದ, ಮತ್ತು ವಾರ್ಷಿಕ ಸಮಾಜ ಸೇವಾ ಚಳುವಳಿಗಳಿಂದ ಸತತ ದಾಳಿಗೊಳಗಾಗುತ್ತೇವೆ; ಅನೇಕರು ಒತ್ತಾಯದ ವಿನಂತಿಗಳನ್ನು ಮಾಡುತ್ತಾರೆ. ಆದಾಗ್ಯೂ, ಅವುಗಳ ಮೌಲ್ಯ ಮಾಪನ ಮಾಡುವಲ್ಲಿ ಬೈಬಲಿನ ಜ್ಞಾನೋಕ್ತಿಯನ್ನು ನೆನಪಿಸುವುದು ಒಳ್ಳೆಯದು: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” (ಜ್ಞಾನೋಕ್ತಿ 14:15) ಬೇರೆ ಮಾತುಗಳಲ್ಲಿ, ಮುಖ ಮೂಲ್ಯದಲ್ಲಿ ಧರ್ಮಕಾರ್ಯಗಳ ಹೇಳಿಕೆಗಳನ್ನು ಯಾ ವಾಗ್ದಾನಗಳನ್ನು ಸ್ವೀಕರಿಸುವುದರ ಬಗ್ಗೆ ಎಚ್ಚರದಿಂದಿರ್ರಿ. ಒಟ್ಟುಗೂಡಿಸಲ್ಪಟ್ಟ ಹಣವು ನಿಜವಾಗಿಯೂ ಹೇಗೆ ಬಳಸಲ್ಪಡುತ್ತದೆ? ನಿಧಿ ಕೊಡಲ್ಪಟ್ಟ ಸಂಸ್ಥೆಗಳು ಕ್ರೈಸ್ತರು ಬೆಂಬಲಿಸುವಂಥದ್ದಾಗಿವೆಯೊ? ರಾಜಕೀಯದೊಂದಿಗೆ, ರಾಷ್ಟ್ರೀಯತೆಯೊಂದಿಗೆ, ಯಾ ಸುಳ್ಳು ಧರ್ಮದೊಂದಿಗೆ ಅವರ ಕಾರ್ಯಗಳು ಸಂಬಂಧಿಸಿವೆಯೊ? ಘೋಷಿತ ಉದ್ದೇಶವು ವ್ಯಾವಹಾರ್ಯ ಮತ್ತು ಶಾಸ್ತ್ರೀಯ ಸೂತ್ರಗಳೊಂದಿಗೆ ಘರ್ಷಣೆಯಾಗದಿರುವಂತಹದ್ದಾಗಿದೆಯೊ?
ಕೆಲವು ಧರ್ಮಕಾರ್ಯಗಳು ಅಗತ್ಯದಲ್ಲಿರುವ ಜನರಿಗೆ ಬಹಳಷ್ಟು ಒಳ್ಳೇದನ್ನು ಮಾಡಲು ಸಾಧ್ಯವಾಗಿವೆ. ನೈಸರ್ಗಿಕ ವಿಪತ್ತುಗಳ ಮತ್ತು ದುರಂತಮಯ ಅನಾರೋಗ್ಯತೆಯ ಮೂಲಕ ಬಾಧಿತವಾದಾಗ, ಅನೇಕ ಸಮಯಗಳಲ್ಲಿ ಕ್ರೈಸ್ತರು ತಾವೇ ಅಂತಹ ಧರ್ಮಕಾರ್ಯಗಳಿಂದ ಪ್ರಯೋಜನಗಳನ್ನು ಪಡೆದಿರುತ್ತಾರೆ. ಇತರ ಧರ್ಮಕಾರ್ಯಗಳಾದರೊ, ನಿಜತ್ವದಲ್ಲಿ ಸಂಗ್ರಹಿಸಿದ ಹಣದ ಸ್ವಲ್ಪ ಭಾಗವನ್ನು ಮಾತ್ರ ಪ್ರಕಟಿಸಿದ ಉದ್ದೇಶಕ್ಕಾಗಿ ಬಳಸಲ್ಪಡುವ ಫಲಿತಾಂಶದೊಂದಿಗೆ, ಹೆಚ್ಚು ಆಡಳಿತಾ ವೆಚ್ಚಗಳನ್ನು ಯಾ ಹೆಚ್ಚು ಹಣಸಂಗ್ರಹ ವೆಚ್ಚಗಳನ್ನು ಹೊಂದಿವೆ. ಉದಾಹರಣೆಗಾಗಿ, ಅಮೆರಿಕದ ಧರ್ಮಕಾರ್ಯಗಳನ್ನು ಸೇರಿಸಿ, 117 ಅತಿ ದೊಡ್ಡ ಲಾಭಾಂಶವಿಲ್ಲದ ಸಂಸ್ಥೆಗಳ ಇತ್ತೀಚೆಗಿನ ಸಮೀಕ್ಷೆಯು, ಕಾಲುಭಾಗಕ್ಕಿಂತಲೂ ಹೆಚ್ಚಿನವುಗಳು ಅವರ ಉಚ್ಛ ಕಾರ್ಯನಿರ್ವಾಹಕರಿಗೆ ವಾರ್ಷಿಕ 2,00,000 ಡಾಲರುಗಳಿಗಿಂತಲೂ ಹೆಚ್ಚು ಸಂಬಳ ಪಾವತಿ ಮಾಡುವುದನ್ನು ಕಂಡುಹಿಡಿಯಿತು. ಲೆಕ್ಕ ಪರಿಶೋಧನೆಗಳು ಆಗಾಗ್ಗೆ ಆಡಂಬರದ ವಸ್ತುಗಳಿಗಾದ ವೆಚ್ಚವನ್ನು ಮತ್ತು ಒಂದು ಸಿರಿವಂತ ಜೀವನ ಶೈಲಿಗೆ ಹಣಕಾಸು ಒದಗಿಸುವಿಕೆಯನ್ನು ಬಹಿರಂಗ ಪಡಿಸುತ್ತವೆ. ಧರ್ಮಕಾರ್ಯಕ್ಕೆ ಯಾವುದೇ ಹೆಸರಿರಲಿ, ಅಗತ್ಯವಿರುವವರಿಗೆ ಸಹಾಯ ಮಾಡಲು ಅಂಥ ಯೋಜನೆಗಳಿಗೆ ವಂತಿಗೆಯನ್ನೀಯುವುದು ಬೈಬಲಿನ ಆಜ್ಞೆಯನ್ನು ನೆರವೇರಿಸುವುದೆಂದು ನಂಬಲು ಆಲೋಚನೆಯ ಒಂದು ಉದ್ದ ಚಾಚುವಿಕೆ ಮಾಡಬೇಕಾಗುವುದು.
ಒಂದು ಸಮತೂಕ ದೃಷ್ಟಿಕೋನ
ಯಾವನೂ ತನ್ನ ಹಣವನ್ನು ಹಾಳು ಮಾಡಲು—ಯಾ ಅದಕ್ಕಿಂತ ಕೀಳಾಗಿ, ಸ್ವ ಸೇವೆ ಮಾಡುವ ಪುರುಷರನ್ನು ಐಶ್ವರ್ಯವಂತರನ್ನಾಗಿ ಮಾಡುವ ಹಾಗೆ ಅದು ಬಳಸಲ್ಪಡುವುದನ್ನು ನೋಡಲು—ಬಯಸುವುದಿಲ್ಲವಾದರೂ, ಕೊಡುವ ವಿಷಯದಲ್ಲಿ ನಿಷ್ಠುರರಾಗುವ ವಿರುದ್ಧ ಕಾಪಾಡಿಕೊಳ್ಳುವ ಅಗತ್ಯತೆಯು ಕೂಡ ಇದೆ. ಕೆಲವು “ಧರ್ಮಕಾರ್ಯಗಳ” ಅಸಾಮರ್ಥ್ಯವನ್ನು ಯಾ ಅಪ್ರಾಮಾಣಿಕತೆಯನ್ನು ಅಗತ್ಯವಿರುವವರನ್ನು ಲಘುವಾಗಿ ಕಾಣಲು ಯಾ ಅನುಕಂಪದ ಭಾವನೆಗಳನ್ನು ನಿರ್ನಾಮ ಮಾಡಲು ಒಂದು ನೆವನವನ್ನಾಗಿ ಬಳಸಬೇಡಿರಿ. ಜ್ಞಾನೋಕ್ತಿ 3:27, 28 ಸೂಚನೆಯನ್ನೀಯುವುದು: “ಉಪಕಾರ ಮಾಡಲು ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ. ಕೊಡತಕ್ಕದ್ದು ನಿನ್ನಲ್ಲಿದ್ದರೆ ನೆರೆಯವನಿಗೆ—ಹೋಗಿ ಬಾ, ನಾಳೆ ಕೊಡುತ್ತೇನೆ ಎಂದು ಹೇಳಬೇಡ.” (ಹೋಲಿಸಿ 1 ಯೋಹಾನ 3:18.) ಎಲ್ಲ ಸಂಘಟಿತ ಧರ್ಮಕಾರ್ಯಗಳು ವ್ಯರ್ಥವೆಂದಾಗಲಿ ಯಾ ವಂಚನೆಯವುಗಳೆಂದು ಭಾವಿಸಬೇಡಿರಿ. ನಿಜತ್ವಗಳನ್ನು ಪರಿಶೀಲಿಸಿರಿ, ಅನಂತರ ಕೊಡಬೇಕೊ ಯಾ ಬೇಡವೊ ಎಂದು ವೈಯಕ್ತಿಕ ನಿರ್ಣಯವನ್ನು ಮಾಡಿರಿ.
ಅಗತ್ಯವಿರುವ ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ಅನೇಕರು ವೈಯಕ್ತಿಕ, ನೇರ ಕೊಡುಗೆಗಳನ್ನು ಮಾಡುವುದರ ಮೂಲಕ ಸಹಾಯ ಮಾಡಲು ಆಯ್ದುಕೊಳ್ಳುತ್ತಾರೆ. ಹೀಗೆ, ಅವರ ಕಾಣಿಕೆಗಳು ವ್ಯಾವಹಾರಿಕ ಮತ್ತು ಒಡನೇ ಯಾವ ಉಪಯೋಗಕ್ಕೆ ಹಾಕಲ್ಪಡಬಹುದೆಂಬುದರ ಕುರಿತು ಕೊಡುವವರು ಖಚಿತದಿಂದಿರುತ್ತಾರೆ. ಇದು ಪ್ರೋತ್ಸಾಹಿಸಲು ಮತ್ತು ಮಾತುಗಳಲ್ಲಿ ಮತ್ತು ಕ್ರಿಯೆಗಳಲ್ಲಿ ದಯೆಯನ್ನು ವ್ಯಕ್ತಪಡಿಸಲು ಒಂದು ಸಂದರ್ಭವನ್ನು ಕೂಡ ಒದಗಿಸುತ್ತದೆ. ಕೊಡಲು ಭೌತಿಕವಾಗಿ ಬಹಳಷ್ಟು ನಿಮ್ಮಲ್ಲಿ ಇಲ್ಲದಿರುವುದಾದರೂ, ಕೊಡುವ ಸಂತೋಷವು ನಿಮ್ಮದಾಗಿರಬಹುದು. ಮತ್ತೊಮ್ಮೆ ಅಂಥ ಸಹಾಯಕ್ಕಾಗಿ ಯಥಾರ್ಥ ಅಗತ್ಯತೆಯ ಕುರಿತಾಗಿ ನೀವು ಕೇಳುವಾಗ, 2 ಕೊರಿಂಥ 8:12ರ ಹುರುಪಿನಲ್ಲಿ ನಿಮ್ಮಿಂದಾಗುವುದನ್ನು ಕೊಡಿರಿ: “ಒಬ್ಬನು ಕೊಡುವದಕ್ಕೆ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನಲ್ಲಿ ಇರುವುದಕ್ಕೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವದು; ಅವನಿಗೆ ಇಲ್ಲದ್ದನ್ನು ದೇವರು ಕೇಳಿಕೊಳ್ಳುವದಿಲ್ಲ.”
ಕೆಲವೊಮ್ಮೆ ಹಣಕ್ಕಿಂತ ಬೇರೆಯಾದದ್ದು ಕೂಡ ಹೆಚ್ಚು ಒಳ್ಳೇದು ಮಾಡಬಹುದೆಂಬದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಯೇಸು ತನ್ನ ಶಿಷ್ಯರಿಗಂದದ್ದು, “ಪರಲೋಕ ರಾಜ್ಯವು ಸಮೀಪವಾಯಿತೆಂದು ಸಾರಿಹೇಳುತ್ತಾ ಹೋಗಿರಿ. . . . ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.” (ಮತ್ತಾಯ 10:7, 8) ಹಾಗೆಯೆ ಇಂದು, ಜೀವನಗಳನ್ನು ಪ್ರಗತಿಗೊಳಿಸುವ ಮತ್ತು ನಿರೀಕ್ಷೆಯನ್ನೀಯುವ—ರಾಜ್ಯದ ಸಾಕ್ಷಿಯನ್ನು ಬೆಂಬಲಿಸುವುದರಲ್ಲಿ ಕಳೆಯುವ ಸಮಯ, ಶಕ್ತಿ, ಮತ್ತು ಹಣವು ಉತ್ತಮ ವಿಧದ ಧರ್ಮಕಾರ್ಯದ ಕೊಡುಗೆಯಾಗಿರುತ್ತದೆಂದು ಕ್ರೈಸ್ತರು ಅರಿಯುತ್ತಾರೆ.
ಹಾಗಾದರೆ, ದಯಾಪರ, ಉದಾರಿ, ಮತ್ತು ವ್ಯಾವಹಾರ್ಯವಾಗಿರುವುದು ಬೈಬಲಿನ ದೃಷ್ಟಿಕೋನವಾಗಿದೆ. ಭೌತಿಕ ಸಹಾಯವು ಅನೇಕಬಾರಿ ಅಗತ್ಯವಿದೆ, ಮತ್ತು ಆ ಅಗತ್ಯವನ್ನು ನಿರ್ಲಕ್ಷಿಸಬಾರದು ಎಂದು ಅದು ಜ್ಞಾಪಕ ಕೊಡುತ್ತದೆ. ಅದೇ ಸಮಯದಲ್ಲಿ ನಿಮ್ಮ ಹಣವನ್ನು ಕೋರುವ ಯಾವುದೆ ಯಾ ಎಲ್ಲರಿಗೆ ಕೊಡುವ ಹಂಗಿನ ಭಾವವುಳ್ಳವರಾಗಬೇಡಿರಿ. ದೇವರನ್ನು ಮೆಚ್ಚಿಸಲು ಮತ್ತು ನಿಮ್ಮ ಸ್ವಂತ ಕುಟುಂಬಕ್ಕೆ ಮತ್ತು ನಿಮ್ಮ ಜೊತೆ ಮಾನವರಿಗೆ ಮಹತ್ತಾದ ವ್ಯಾವಹಾರಿಕ ಸಹಾಯವನ್ನು ಕೊಡಲು ನಿಮ್ಮಲ್ಲಿರುವ ಹಣವನ್ನು ಉತ್ತಮವಾಗಿ ಹೇಗೆ ಉಪಯೋಗಿಸುವುದೆಂದು ಗಮನಿಸಿರಿ. (1 ತಿಮೊಥೆಯ 5:8; ಯಾಕೋಬ 2:15, 16) ಆತ್ಮಿಕವಾಗಿ ಮತ್ತು ಶಾರೀರಿಕವಾಗಿ ಇತರರ ಅಗತ್ಯತೆಗಳನ್ನು ಲಕ್ಷ್ಯವಿಟ್ಟು ಗಮನಿಸುವುದರಲ್ಲಿ ಮತ್ತು ಪ್ರತಿಕ್ರಿಯಿಸುವುದರಲ್ಲಿ ಯೇಸುವನ್ನು ಅನುಕರಿಸಿರಿ. ಇಬ್ರಿಯ 13:16ರ ಮಾತುಗಳಲ್ಲಿ: “ಪರೋಪಕಾರವನ್ನೂ ಧರ್ಮಮಾಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.” (g93 6/8)