ಜಗತ್ತನ್ನು ಗಮನಿಸುವುದು
ಮಾರಕವಲ್ಲದ ಶಸ್ತ್ರಗಳು
ದ ವಾಲ್ ಸ್ಟ್ರೀಟ್ ಜರ್ನಲ್‌ಗನುಸಾರ, ಯುದ್ಧದಲ್ಲಿ ಉಪಯೋಗಿಸಲು ಮಾರಕವಲ್ಲದ ಶಸ್ತ್ರಗಳ ಪರಿಚಯಿಸುವಿಕೆಯ ಸಾಧ್ಯತೆಯನ್ನು ಅಮೆರಿಕ ಸರಕಾರವು ಶೋಧಿಸುತ್ತಿದೆ. ಆಧುನಿಕ ಯಂತ್ರಕಲಾಶಾಸ್ತ್ರವು ಜನರನ್ನು ಸಾಯಿಸದೇ ವೈರಿಗಳ ರೇಡಾರ್, ಟೆಲಿಫೋನ್, ಕಂಪ್ಯೂಟರ್, ಮತ್ತು ಇತರ ಅಗತ್ಯ ಉಪಕರಣಗಳನ್ನು ನಿಶ್ಶಕ್ತಿಗೊಳಿಸುವ ವಿದ್ಯುತ್ಕಾಂತೀಯ ಮಿಡಿತ ಉತ್ಪಾದನಾ ಯಂತ್ರಗಳನ್ನು ಭವಿಷ್ಯದ ಸೈನಿಕರು ಉಪಯೋಗಿಸುವಂತೆ ಸಾಧ್ಯಮಾಡಬಹುದು. “ಚಲಿಸುವ ವಾಹನಗಳ ಯಂತ್ರಗಳನ್ನು ನಿಲ್ಲಿಸುವ ‘ದಹನ ಅವರೋಧನಗಳ’ ಮೇಲೆಯೂ, ಮತ್ತು ನಿರ್ದಿಷ್ಟ ಬಗೆಗಳ ಚಕ್ರಗಳನ್ನು ಸ್ಫಟಿಕೀಕರಿಸುವ ಮತ್ತು ನಾಶಪಡಿಸುವ ರಸಾಯನಗಳ” ಮೇಲೆಯೂ ಪ್ರಯೋಗಶಾಲೆಗಳು ಕಾರ್ಯನಡಿಸುತ್ತವೆ ಎಂದು ಜರ್ನಲ್ ಹೇಳುತ್ತದೆ. ಹೇಗೂ, ಇವುಗಳಲ್ಲಿ ಕೆಲವು ಶಸ್ತ್ರಗಳು ಮಾನವ ಜೀವಕ್ಕೆ ಗಂಭೀರ ಅಪಾಯವನ್ನೊಡ್ಡುವವು. ಜರ್ನಲ್ ಕೂಡಿಸುವುದೇನಂದರೆ, “ವೈರಿ ಫಿರಂಗಿ ರಥದ ದೃಷ್ಟಿಯನ್ನು ನಾಶಪಡಿಸಲು ರಚಿಸಲಾದ ಶಕ್ತಿಯುತ ಲೇಸರ್‌ಗಳು ಸೈನಿಕನ ಕಣ್ಣು ಗುಡ್ಡೆಗಳನ್ನು ಕೂಡ ಸಿಡಿಸಬಹುದು. ಅಮೆರಿಕದ ಮೂಲಕ ಸಾಗಿಸಸಾಧ್ಯವಿರುವ ಸೂಕ್ಷ್ಮ ತರಂಗ ಶಸ್ತ್ರಗಳ, ಕ್ಷೇತ್ರ ಪರೀಕ್ಷೆಗಳು ಮಾಡಲ್ಪಡುತ್ತಿವೆ. ವಿಶೇಷ ಪಡೆಗಳು ಪ್ರಶಾಂತವಾಗಿ ವೈರಿ ಸಂಸರ್ಗಗಳನ್ನು ಕಡಿದು ಹಾಕಬಲ್ಲದು ಆದರೆ ಆಂತರಿಕ ಅವಯವಗಳನ್ನು ಕೂಡ ಹಾಳುಮಾಡಬಲ್ಲದು.” (g93 6/8)
ಸುನ್ನತಿ ಮತ್ತು ಏಯ್ಡ್ಸ್
ಗಂಡು ಸುನ್ನತಿಯ ಆಚರಣೆಯು ಏಯ್ಡ್ಸ್‌ನಂಥ ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟುವುದರಲ್ಲಿ ಒಂದು ಅನುಕೂಲವಾಗಿರುವಂತೆ ಕಂಡುಬರುತ್ತದೆ, ಎಂದು ಲ ರವ್ಯೂ ಫ್ರೊನ್ಸೆಜ್ ಡ್ಯೂ ಲಾಬೊರಾಟ್ವಾರ್ ಫ್ರೆಂಚ್ ಪತ್ರಿಕೆಯು ಹೇಳುತ್ತದೆ. ಗಂಡು ಸುನ್ನತಿಯು (ಮುಂದೊಗಲಿನ ತೆಗೆಯುವಿಕೆ) ಏಯ್ಡ್ಸ್‌ನ ಹರಡುವಿಕೆಯನ್ನು ನಿಗ್ರಹಿಸುವಲಿನ್ಲ ಅಂಶವಾಗಿರುವುದೆಂದು ತೋರಿಸುವ ಮೂರು ಸ್ವತಂತ್ರ ವೈದ್ಯಕೀಯ ಅಧ್ಯಯನಗಳನ್ನು ಆ ಪತ್ರಿಕೆಯು ನಮೂದಿಸುತ್ತದೆ. ಇತರ ಅಂಗಸ್ತತ್ವಗಳಿಗಿಂತಲೂ ಏಯ್ಡ್ಸ್ ವಿಷಾಣುವಿನ ಮೂಲಕ ಸೋಂಕಿಸಲ್ಪಡಲು ಪರಿಣಾಮಕಾರಿಯಾದ ಹೆಚ್ಚಿನ ಸಂಖ್ಯೆಯ ಜೀವ ಕಣಗಳನ್ನು ಗಂಡು ಮುಂದೊಗಲಿನ ಅಂಗಸ್ತತ್ವಗಳು ಹೊಂದಿರುತ್ತದೆಂದು ಪ್ರಯೋಗಶಾಲೆಯ ಮಂಗಗಳ ಮೇಲಿನ ಸಂಶೋಧನೆಯು ತೋರಿಸಿಕೊಟ್ಟಿದೆ. ಇನ್ನೂ, ಆಫ್ರಿಕದ 140 ವಿವಿಧ ಪ್ರದೇಶಗಳಲ್ಲಿ ನಡೆಸಲ್ಪಟ್ಟ ಕೆನಡಿಯನ್ ಅಧ್ಯಯನವು, ಸುನ್ನತಿಯನ್ನು ಆಚರಿಸುವವರಲ್ಲಿ ಇರುವುದಕ್ಕಿಂತಲೂ ಏಯ್ಡ್ಸ್‌ನ ಹೆಚ್ಚಿನ ಸಂಭವಗಳು ಅದನ್ನು ಆಚರಿಸದಿರುವವರಲ್ಲಿ ತೋರಿಸಿಕೊಟ್ಟಿತು. ಸುನ್ನತಿಗೊಂಡ ಅಮೆರಿಕದ ಅಕ್ರಮಲೈಂಗಿಕ ಪುರುಷರೊಳಗೆ ಸೋಂಕಿನ ಕೆಲವೇ ಸಂದರ್ಭಗಳನ್ನು ಕಂಡುಕೊಂಡಿತು. (g93 6/8)
ಅಶಿಕ್ಷಿತ ಮಕ್ಕಳು
ಬೊಲಿವಿಯದ ಸಾವಿರಾರು ಮಕ್ಕಳು ಯೋಗ್ಯ ಶಿಕ್ಷಣವನ್ನು ಪಡೆಯುತ್ತಿಲ್ಲ. ಬೊಲಿವಿಯಾ ವಾರ್ತಾಪತ್ರಿಕೆ ಪ್ರೆಜೆನ್‌ಸ್ಯಾಗನುಸಾರ, 1992ರ ಜನಗಣತಿಯು, 22,68,605 ಶಾಲಾ ವಯಸ್ಸಿನ ಮಕ್ಕಳು ಬೊಲಿವಿಯಾದಲ್ಲಿದ್ದರೆಂದು ವ್ಯಕ್ತಿಗೊಳಿಸಿತು. ಆದಾಗ್ಯೂ, ಅದೇ ಸಮಯದಲ್ಲಿ ಕೇವಲ 16,68,791 ಮಕ್ಕಳು ರಾಷ್ಟ್ರದ ಶಾಲೆಗಳಿಗೆ ಸೇರಿಸಲ್ಪಟ್ಟರೆಂದು ಶಿಕ್ಷಣಾ ಖಾತೆಯ ದಾಖಲೆಗಳು ತೋರಿಸುತ್ತವೆ. ಇದರ ಅರ್ಥ, 6,00,000 ಮಕ್ಕಳು ತಕ್ಕ ಶಿಕ್ಷಣವನ್ನು ಹೊಂದಲಿಲ್ಲವೆಂದಾಗಿದೆ. ಆ ವರ್ಷ ಶಾಲೆಗಳಲ್ಲಿ ದಾಖಲಾಗಲು ಸಾಧ್ಯವಾದವರಲ್ಲಿ, 1,02,652 ವಿದ್ಯಾರ್ಥಿಗಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದರು ಎಂದು ಪ್ರೆಜೆನ್‌ಸ್ಯಾ ಕೂಡಿಸುತ್ತದೆ. (g93 6/8)
ಮಕ್ಕಳು ಮತ್ತು ಸೀಸೆಯಿಂದುಣಿಸುವಿಕೆ
ಜಪಾನಿನ 25 ಪ್ರತಿಶತ ಮಕ್ಕಳು ಆಹಾರ ಸೇವನೆಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸೀಸೆಯಿಂದುಣಿಸುವಿಕೆಯು ಕಾರಣವಾಗಿರಬಹುದು. ಆಶಾಹಿ ಈವ್ನಿಂಗ್ ನ್ಯೂಸ್ ವರದಿಸುವುದೇನಂದರೆ, ಕೆಲವು ಮಕ್ಕಳಿಗೆ ಜಗಿಯಲು ಕಷ್ಟವಾಗುವ ಆಹಾರದೊಂದಿಗೆ ತೊಂದರೆಯುಂಟೆಂದು ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ಶಿಶುವಿಹಾರ ಶಾಲಾ ಉಪಾಧ್ಯಾಯಿನಿಯರು ಗಮನಿಸಿದರು. ಕೆಲವು ಮಕ್ಕಳಿಗೆ ಅದನ್ನು ನುಂಗಲು ಸಮಸ್ಯೆ ಇದೆ, ಇತರರು ಅದನ್ನು ಉಗುಳುತ್ತಾರೆ, ಮತ್ತು ಇನ್ನೂ ಕೆಲವರು ಅವರ ಅಪರಾಹ್ಣ ನಸುನಿದ್ದೆಯ ಬಳಿಕವೂ ಅದನ್ನು ತಮ್ಮ ಬಾಯಲ್ಲಿಟ್ಟಿರುತ್ತಾರೆ. ಈ ಮಕ್ಕಳ ದವಡೆಗಳು ಮತ್ತು ಅವರ ಗದ್ದಗಳು ನಿರ್ಬಲವಾಗಿರುವುದನ್ನು ವೈದ್ಯರು ಗಮನಿಸಿದ್ದಾರೆ. ದಂತವೈದ್ಯ ನೋಹಿಕೊ ಇನ್ಯೊಇ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ರೆಕೊ ಸೊಕೊಸ್ಟರು ಶೈಶವಾವಸ್ಥೆಗೆ ಕಾರಣದ ಪತ್ತೆ ಹಚ್ಚಿದರೆಂದು ಹೇಳಿಕೊಳ್ಳುತ್ತಾರೆ ಮತ್ತು ಸೀಸೆಯಿಂದುಣಿಸುವಿಕೆಯನ್ನು ದೂರುತ್ತಾರೆ. ಕೂಸುಗಳಿಗೆ ಸೀಸೆಗಳಿಂದ ಉಣಿಸುವಾಗ, ಅವುಗಳು ತಮ್ಮ ದವಡೆಗಳನ್ನು ಚಲಿಸದೆ ಕೇವಲ ಚೀಪಬೇಕಾಗುವುದೆಂದು ತೋರುತ್ತದೆ. ಆದಾಗ್ಯೂ, ಕೂಸುಗಳು ಮೊಲೆಯುಣಿಸಲ್ಪಡುವಾಗ, ಅವು ತಮ್ಮ ದವಡೆಗಳನ್ನು ಬಲವಾಗಿ ಉಪಯೋಗಿಸುತ್ತವೆ ಮತ್ತು ಅನಂತರ ತಮಗೆ ಆಹಾರ ಜಗಿಯಲು ಬೇಕಾಗಿರುವ ಸ್ನಾಯುಗಳನ್ನೇ ಬಲಪಡಿಸುತ್ತವೆ. (g93 5/22)
ಮಹಾಗನಿ ಬೆದರಿಕೆ
ಆ್ಯಮೆಜಾನ್ ಕಾಡಿನಲ್ಲಿನ ಎರಡುವರೆ ಲಕ್ಷ ಬ್ರೆಸೀಲ್‌ನ ಇಂಡಿಯನ್ನರು ಅವರ ಸಾಂಪ್ರದಾಯಿಕ ಮನೆಗಳನ್ನು ಕಳಕೊಳ್ಳುವ ಅಪಾಯದಲ್ಲಿರುತ್ತಾರೆ. ಸರಕಾರದ ಇಂಡಿಯನ್ ಖಾತೆಯ ಮುಖ್ಯಸ್ಥನ ಪ್ರಕಾರ, “ಅತಿ ದೊಡ್ಡ ಬೆದರಿಕೆ”ಯು ಮಹಾಗನಿ ವ್ಯಾಪಾರದಿಂದ ಬರುತ್ತದೆ. ಮಹಾಗನಿ ಮರಗಳನ್ನು ಅಧಿಕಾರವಿಲ್ಲದೆ ಉರುಳಿಸುವುದು ಪೆರಾ ಸ್ಟೇಟ್‌ನ ದಕ್ಷಿಣದೊಳಗೆ ಸಾಧಾರಣ 3,000 ಕಿಲೊಮೀಟರ್‌ಗಳಷ್ಟು ಕಾನೂನುಬಾಹಿರ ರಸ್ತೆಮಾರ್ಗಗಳನ್ನು ಕಟ್ಟುವುದರಲ್ಲಿ ಫಲಿಸಿತು ಎಂದು ಲಂಡನ್ನಿನ ದ ಗಾರ್ಡಿಯನ್ ವರದಿಸುತ್ತದೆ. ಒಂದು ಮಹಾಗನಿ ಮರವು ಕತ್ತರಿಸಲ್ಪಟ್ಟ ಪ್ರತಿಯೊಂದು ಬಾರಿ, ಇತರ ಜಾತಿಯಿಂದ 20 ಮರಗಳಷ್ಟು ಹಾನಿಗೊಳಗಾಗುತ್ತವೆ. ಲೋಭಿ ವ್ಯಾಪಾರಿಗಳು ಕಾಡನ್ನು ಖಾಲಿಮಾಡುತ್ತಿರುವಾಗ ವಸಾಹತುಗಾರರಿಗೆ ಮತ್ತು ಚಿನ್ನದ ಗಣಿ ಕೆಲಸಗಾರರಿಗೆ, ಮತ್ತು ಸಾವಿರಾರು ಮರ ಕೊಯ್ಯುವ ಕಾರ್ಖಾನೆಗಳಿಗೆ ದಾರಿಯನ್ನು ತೆರೆಯುತ್ತಾರೆ. ಪ್ರಸ್ತುತ ಬಳಕೆಯ ದರದಲ್ಲಿ ಕೇವಲ 32 ವರುಷಗಳ ಸರಬರಾಯಿ ಉಳಿದಿರುವದರೊಂದಿಗೆ ಇಂಡಿಯನ್ನರಂತೆ, ಮಹಾಗನಿಯು, ಸದ್ಯಕ್ಕೆ ಅನಿಶ್ಚಿತ ಭವಿಷ್ಯತ್ತನ್ನು ಎದುರಿಸುತ್ತದೆ. (g93 6/8)
ವಿಷಭರಿತ ಕಚಡವನ್ನು ರಫ್ತು ಮಾಡುವುದು
ಕಚಡ ಉಪಚಾರದ ಅಧಿಕತಮ ವೆಚ್ಚದ ಕಾರಣ, “ಶ್ರೀಮಂತ ದೇಶಗಳು ತಮ್ಮ ವಿಷಭರಿತ ಕಚಡವನ್ನು ಬಡ ರಾಷ್ಟ್ರಗಳಿಗೆ ರಫ್ತು ಮಾಡುತ್ತವೆ,” ಎಂದು ಬ್ರೆಜೀಲ್ಯನ್ ಇಸಿಟ್ಟ್ಯೂಟ್ ಆಫ್ ಎನ್‌ವೈರನ್‌ಮೆಂಟ್ ಆ್ಯಂಡ್ ರಿನ್ಯೂವೆಬಲ್ ನ್ಯಾಟ್ಯುರಲ್ ರಿಸೋರ್ಸಸ್‌ನ ಸೆಬ್ಯಾಸಿಯ್ಟ್ಯೊನ್ ಪಿನ್ಯೆರೊ ಹೇಳುತ್ತಾರೆ. ವೆಜಾ ಪತ್ರಿಕೆಯು ವರದಿಸಿದಂತೆ, “ತೃತೀಯ ಜಗತ್ತಿನ ದೇಶಗಳಿಗೆ ವಾರ್ಷಿಕವಾಗಿ ಒಂದು ಮಿಲಿಯ ಟನ್‌ಗಳಷ್ಟು ಅಪಾಯಕರ ಕಚಡವು ರಫ್ತು ಮಾಡಲಾಗುತ್ತದೆ,” ಎಂದು ಒಂದು ಅಧ್ಯಯನವು ತೋರಿಸಿಕೊಟ್ಟಿತು. ಆಮದು ಮಾಡಲ್ಪಟ್ಟ ವಿಷಭರಿತ ಕಚಡದೊಂದಿಗೆ ಏನು ಮಾಡಲಾಗುತ್ತದೆ? ಹೊಸ ವಿದ್ಯುತ್ ಶಕ್ತಿಯ ಕಾರ್ಖಾನೆಗಳಲ್ಲಿ ಇಂಧನವಾಗಿ ಅವನ್ನು ಉರಿಸಬಹುದು. “ಎಷ್ಟೇ ವೆಚ್ಚದಲ್ಲಿ ಇಲ್ಲಿ ಕೆಲಸಗಳನ್ನು ಸೃಷ್ಟಿಸುವುದು ಅತ್ಯಗತ್ಯವೆಂಬ ಪ್ರಬಂಧವನ್ನು ವಿಕಾಸಶೀಲ ದೇಶಗಳು ಪ್ರತಿಪಾದಿಸುತ್ತವೆ,” ಎಂದು ಬ್ರೆಜೀಲಿನ ಪರಿಸರದ ನಿಯೋಗಕ್ಕೆ ಒಬ್ಬ ಸಲಹೆಗಾರನು ಹೇಳುತ್ತಾನೆ. ಇನ್ನೂ, ಲೋಕ ವ್ಯಾಪಕವಾಗಿ ಪ್ರಶ್ನೆಗಳು ಎಬ್ಬಿಸಲ್ಪಡುತ್ತಿವೆ. ಲಂಡನ್ನಿನ ಫಿನ್ಯಾನಲ್ಷ್ ಟೈಮ್ಸ್ ಕೇಳುವುದು: “ಮಾನವ ಜೀವವು ಎಲ್ಲಿ ಕಡಿಮೆಯಾಗಿ ತೂಗುತ್ತದೋ ಅದರ ಅಂದಾಜುಗಳ ಮೂಲಕ ಕಾರ್ಖಾನೆಗಳ ಸ್ಥಳದ ಕುರಿತು ನಿರ್ಣಯಗಳು ನಿರ್ಧರಿಸಲ್ಪಡಬೇಕೊ?” ವೆಜಾ ವ್ಯಂಗ್ಯವಾಗಿ ಕೂಡಿಸಿದ್ದು: “ಉತ್ತರವು ಹೌದೆಂಬಂತೆ ತೋರುತ್ತದೆ.” (g93 6/8)
ಗುಣಪಡಿಸುವ—ಜೇನು
ಪ್ರಾಚೀನ ಕಾಲದಿಂದಲೂ, ಜೇನನ್ನು ಅದರ ಗುಣಪಡಿಸುವ ಗುಣಲಕ್ಷಣಗಳಿಗಾಗಿ ಬಳಸಲಾಗುತ್ತದೆ. ಜೇನಿನ ಗುಣಪಡಿಸುವ ಶಕ್ತಿಯನ್ನು ಅಧುನಿಕ ವೈದ್ಯಕೀಯ ವಿಜ್ಞಾನವು ಈಗ ಮರುಕಂಡುಹಿಡಿಯಲು ಆರಂಭಿಸಿದೆ, ಎಂದು ಫ್ರೆಂಚ್ ಪತ್ರಿಕೆಯಾದ ಲ ಪ್ರೆಸ್ ಮೆಡಿಕಲ್ ವರದಿಸುತ್ತದೆ. ಇತ್ತೀಚಿನ ಅಧ್ಯಯನದಲ್ಲಿ, ವೈದ್ಯರು ಸುಟ್ಟ ಗಾಯಗಳ ಮತ್ತು ವಿವಿಧ ನಮೂನೆಯ ಮಾಂಸದ ಗಾಯಗಳ ಚಿಕಿತ್ಸೆಗಾಗಿ ಶುದ್ಧ ಸ್ವಾಭಾವಿಕ ಜೇನನ್ನು ಉಪಯೋಗಿಸುವುದರೊಂದಿಗೆ ಪ್ರಯೋಗ ನಡೆಸಿದರು. ಜೇನನ್ನು ನೇರವಾಗಿ ಗಾಯಗಳಿಗೆ ಹಚ್ಚಲಾಯಿತು ಮತ್ತು ಒಣ ಕ್ರಿಮಿ ಶುದ್ಧಿಮಾಡಿದ ಪಟ್ಟಿಗಳಿಂದ ಮುಚ್ಚಲಾಯಿತು. ಈ ಕಟ್ಟುವಿಕೆಯು ಪ್ರತಿ 24 ತಾಸುಗಳಿಗೆ ಬದಲಾಯಿಸಲಾಯಿತು. ಜೇನು ಶುದ್ಧೀಕರಿಸುವ ಮತ್ತು ಗುಣಪಡಿಸುವ ಅಂಶವಾಗಿ ಪ್ರಮುಖವಾಗಿ ಪರಿಣಾಮಕಾರಿಯಾಗಿರುವುದನ್ನು ಫಲಿತಾಂಶಗಳು ತೋರಿಸಿಕೊಡುತ್ತವೆ. ಸಂಪರ್ಕದಲ್ಲಿರುವ ಹೆಚ್ಚಿನ ಜೀವಾಣುಗಳನ್ನು ಅದು ಕೊಲ್ಲುತ್ತದೆ ಮತ್ತು ನವೀನ ಅಂಗಸ್ತತ್ವಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಲ ಪ್ರೆಸ್ ಮೆಡಿಕಲ್ ಕೊನೆಗೊಳಿಸುವುದು: “ಜೇನು ಸಾಮಾನ್ಯ ಮತ್ತು ಅಗವ್ಗಾಗಿರುವುದರಿಂದಾಗಿ, ಅದನ್ನು ಅತ್ಯುತ್ತಮವಾಗಿ ತಿಳಿದುಕೊಳ್ಳಬೇಕು ಮತ್ತು ಸಾಮಾನ್ಯವಾಗಿ ಬಳಸಲ್ಪಡುವ ಪೂತಿ ನಾಶಕ ಉತ್ಪಾದನೆಗಳ ಪಟ್ಟಿಗೆ ಕೂಡಿಸಲ್ಪಡಬೇಕು.” (g93 5/22)
ಜಡ ಮಿದುಳು ತುಕ್ಕು ಹಿಡಿಯುತ್ತದೆ
ದೀರ್ಘ ಕಾಲಾವಧಿಯ ಚಟುವಟಿಕಾಹೀನತೆ ಮಿದುಳಿಗೆ ಪ್ರಯೋಜನಕರವೋ? ನಿಶ್ಚಯವಾಗಿಯೂ ಇಲ್ಲ, ಎಂದು ಜರ್ಮನಿ, ಡುಸೆಲ್‌ಡ್ರೊಫ್‌ನಲ್ಲಿನ ಮೆಡಿಕಲ್ ಟ್ರೇಡ್ ಫೇರ್‌ನ ಪ್ರೊಫೆಸರ್ ಬರ್‌ನ್ಟ್ ಫಿಶ್ಚರ್ ಅಂದರು. ಡೆರ್ ಶ್ಟಯಿಗೆರ್‌ವಾಲ್ಟ್-ಬೊಟೆ ವರದಿಸಿದಂತೆ, “ಪ್ರಚೋದನೆಯ ಪೂರ್ಣ ಅನುಪಸ್ಥಿತಿಯ ಕೆಲವೇ ತಾಸುಗಳ ಬಳಿಕ ವ್ಯಕ್ತಿಯ ಆಲೋಚನಾ ಸಾಮರ್ಥ್ಯವು ಬಹುಮಟ್ಟಿಗೆ ಕಡಮೆಯಾದುದನ್ನು ಪ್ರಯೋಗಗಳು ತೋರಿಸಿವೆ,” ಎಂದಾತನ ಕಂಡುಹಿಡಿಯುವಿಕೆಗಳು ತೋರಿಸಿದವು. ಪುನಃ ಆಲೋಚಿಸುವಲ್ಲಿ, ಯಾರ ರಜೆಯು ಆದರ್ಶಪ್ರಾಯವಾಗಿದೆಯೋ ಅದು ಮೈಗಳ್ಳತನದ ಕ್ರಿಯಾಹೀನತೆಯಂತಿರುತ್ತದೆ ಎಂದು ಪ್ರೊಫೆಸರರು ಸಲಹೆಯ ಕೊಟ್ಟರು. ವಾರ್ತಾಪತ್ರಿಕೆಯು ಹೇಳಿಕೆಯನ್ನಿತ್ತದ್ದು, “ತರಬೇತಾಗದ ಸ್ನಾಯುವಿನಂತೆ ಕ್ರಿಯಾಹೀನತೆಯ ದೀರ್ಘ ರಜೆಯ ಅನಂತರ, ಕೆಲವು ಸಂದರ್ಭಗಳ ಕೆಳಗೆ ಕಾರ್ಯನಿರ್ವಹಣೆಯ ಮುಂಚಿನ ಮಟ್ಟವನ್ನು ತಲುಪಲು ಮಿದುಳಿಗೆ ಮೂರು ವಾರಗಳು ಬೇಕಾಗಿತ್ತು.” ಕ್ರೀಡೆ, ಆಟ, ಮತ್ತು ಅಭಿರುಚಿಕರ ವಾಚನ ವಿಷಯ ರಜೆಯಲ್ಲಿ ಮಿದುಳು ತುಕ್ಕು ಹಿಡಿಯದಂತೆ ತಡೆಯುತ್ತದೆಂದು ಹೇಳಲಾಯಿತು. (g93 6/8)
ಕಡಲಾಮೆಗಳ ಸಮಸ್ಯೆ
ನೀರು ಕಡಲಾಮೆಗಳ ಮನೆಯಾಗಿರುವುದಾದರೂ, ಒಣ ನೆಲದ ಮೇಲೆಯೆ ಅವುಗಳು ಮೊಟ್ಟೆಗಳನ್ನಿಡುತ್ತವೆ. ಲೋಕದ ಸಾಗರಗಳಲ್ಲಿ ವಿಸ್ತಾರ ದೂರಗಳನ್ನು ಅಲೆದಾಡಿದ ಅನಂತರ, ಸಂತಾನೋತ್ಪತ್ತಿಗಾಗಿ ಕಡಲಾಮೆಗಳು ನಿರ್ದಿಷ್ಟ ಕಡಲ ತೀರಗಳಿಗೆ ಮರಳಿಬರುತ್ತವೆ. ದಡದ ಪಕ್ಕದಲ್ಲಿ ಕೂಡಿದ ಅನಂತರ, ಹೆಣ್ಣು ಅಡ್ಡಾದಿಡಿಯ್ಡಾಗಿ ತಡವರಿಸುತ್ತಾ ನಡೆದು ನೀರಿನಿಂದ ದಡದ—ಪ್ರಾಯಶಃ ಅವಳು ಹುಟ್ಟಿದ ಅದೇ ಕಡಲ ತೀರವಿರಬಹುದು—ಮೇಲಕ್ಕೆ ಬರುತ್ತದೆ ಮತ್ತು ಜಾಗರೂಕತೆಯಿಂದ ಆರಿಸಲ್ಪಟ್ಟ ಸ್ಥಳದಲ್ಲಿ ಪ್ರಶಾಂತವಾಗಿ ಅವಳ ಮೊಟ್ಟೆಗಳನ್ನಿಡುತ್ತದೆ. ಇದು ಕೆಲವು ದಿನಗಳ ವರೆಗೆ, ಎಲ್ಲ ಮೊಟ್ಟೆಗಳು—ಸಾಮಾನ್ಯವಾಗಿ ಸಾವಿರದಷ್ಟು—ಇಡಲ್ಪಟ್ಟು, ಶ್ರಮಪೂರ್ವಕವಾಗಿ ಮುಚ್ಚಲ್ಪಡುವವರೆಗೆ, ಪುನರಾವೃತ್ತಿತವಾಗಿ ಮಾಡಲ್ಪಡುತ್ತದೆ. ಆದರೆ ಅನಂತರ ಸಮಸ್ಯೆಯು ಬರುತ್ತದೆ. ದಕ್ಷಿಣ ಆಫ್ರಿಕದ ಪತ್ರಿಕೆ ಪ್ರಿಸ್ಮಾ ಅದನ್ನು ಮಾನವನಿಂದ ಆತನ “ಅಸಮಾನ ಲೋಭ ಮತ್ತು ಪರಿಸರಕ್ಕಾಗಿ ಅಪಕೀರ್ತಿಕಾರಕ ಅಲಕ್ಷ್ಯದಿಂದಾಗಿ ಕಡಲಾಮೆಗಳ ಸಂತಾನೋತ್ಪತ್ತಿಗೆ ಗಂಭೀರವಾಗಿ ಅಡ್ಡ ಬಂದಿರುವ ಗೂಡುಗಳ ಕ್ರಮಬದ್ಧವಾದ ಬರಿದುಮಾಡುವಿಕೆ” ಎಂದು ಕರೆಯುತ್ತದೆ. ಕೆಲವು ಆಮೆ ಜಾತಿಗಳು ಈಗ ನಿರ್ನಾಮವನ್ನು ಎದುರಿಸುತ್ತಿವೆ. (g93 5/22)
ದೂರದರ್ಶನವನ್ನು ಮುಂಚಿತವಾಗಿ ಸಿದ್ಧಪಡಿಸಿಡಬೇಕೊ?
“ಮಕ್ಕಳಿಗೆ, ಕಡಿಮೆ ಟಿವಿ ಉತ್ತಮ, ವಿಶೇಷವಾಗಿ ಹಿಂಸಾಚಾರದ ಟಿವಿ,” ಎಂದು ದ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌ನಲ್ಲಿ ಪ್ರಕಟಿಸಲಾದ ಒಂದು ಅಧ್ಯಯನದಲ್ಲಿ ಅಮೆರಿಕನ್ ಎಕ್ಯಾಡೆಮಿ ಆಫ್ ಪೆಡಿಯಾಟ್ರಿಕ್ಸ್ ಹೇಳುತ್ತದೆ. ಆ ಲೇಖನವು ವರದಿಸಿದ್ದು, “ಹದಿನಾಲ್ಕು ತಿಂಗಳಷ್ಟೇ ಪ್ರಾಯದ ಶಿಶುಗಳು ಪ್ರತ್ಯಕ್ಷಾಭಿನಯದಿಂದೊಡಗೂಡಿ ವೀಕ್ಷಿಸುತ್ತಾರೆ ಮತ್ತು ದೂರದರ್ಶನದಲ್ಲಿ ನೋಡಲಾದ ನಡೆವಳಿಯನ್ನು ತಮ್ಮೊಳಗೆ ತಕ್ಕೊಳ್ಳುತ್ತಾರೆ.” ಅವರು ವೀಕ್ಷಿಸುವ ಬಹಳಷ್ಟು ಆಕ್ರಮಣಕಾರಿ ಮತ್ತು ಹಿಂಸಾತ್ಮಕ ಪ್ರಕೃತಿಯದ್ದಾಗಿದೆ. ಹೆತ್ತವರ ಅಧಿಕಾರವನ್ನು ಪುನಃಸ್ಥಾಪಿಸುವ ಪ್ರಯತ್ನದಲ್ಲಿ ಕಾರ್ಯಕ್ರಮಗಳು, ಚ್ಯಾನೆಲ್‌ಗಳು, ಮತ್ತು ಸಮಯಗಳನ್ನು ಪ್ರಸ್ತುತಪಡಿಸಲಾಗುವಂತೆ ದೂರದರ್ಶನದ ಮೇಲೆ ಇಲೆಕ್ಟ್ರೋನಿಕ್ ಟಯಿಮ್ ಚ್ಯಾನೆಲ್ ಲಾಕ್‌ನ ಆಧುನಿಕ ಯಂತ್ರಕಲಾವಿಜ್ಞಾನವನ್ನು ಬಳಸುವಂತೆ ವರದಿಯು ಸಲಹೆಯನ್ನೀಯುತ್ತದೆ. ಈ ವಿಧಾನದಲ್ಲಿ ಹೆತ್ತವರು ಮನೆಯಲ್ಲಿ ಇಲ್ಲದಿರುವಾಗಲೂ, ದೂರದರ್ಶನದಲ್ಲಿ ತಮ್ಮ ಮಕ್ಕಳು ಏನನ್ನು ವೀಕ್ಷಿಸುತ್ತಾರೆಂಬುದನ್ನು ಮತ್ತು ಯಾವಾಗ ಅದನ್ನು ವೀಕ್ಷಿಸುತ್ತಾರೆಂಬುದನ್ನು ಅವರು ಹತೋಟಿಯಲ್ಲಿಡಬಹುದು. (g93 5/22)
ನಿಮ್ಮ ಕೈಗಳನ್ನು ತೊಳೆದುಕೊಳ್ಳಿರಿ!
ಆಧುನಿಕ ವೈದ್ಯಕಿಯ ವಿಜ್ಞಾನದ ತಂತ್ರೀಯತೆಯ ಮುಂದುವರಿಯುವಿಕೆಯು ರೋಗಗಳನ್ನು ಪ್ರತಿಭಟಿಸಲು ಬಹಳಷ್ಟನ್ನು ಮಾಡಿರುವುದಾದರೂ, ಸಾಮಾನ್ಯ ಸಾಬೂನು ಮತ್ತು ನೀರಿನಿಂದ ನಿಮ್ಮ ಕೈಗಳನ್ನು ತೊಳೆದುಕೊಳ್ಳುವುದು ಇನ್ನು ಕೂಡ ಅನೇಕ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯುವ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಫ್ರೆಂಚ್ ವಾರ್ತಾಪತ್ರಿಕೆ ಲ ಫಿಗಾರೊ ವರದಿಸುವುದು, ಫ್ರಾನ್ಸ್, ಜರ್ಮನಿ, ನೆದರ್ಲೆಂಡ್ಸ್, ಮತ್ತು ಸ್ವಿಟ್ಸರ್ಲೆಂಡ್‌ನಲ್ಲಿ ಆರೋಗ್ಯ ಹವ್ಯಾಸಗಳ ಇತ್ತೀಚೆಗಿನ ಅಧ್ಯಯನದಲ್ಲಿ ಹೋಟೆಲು, ಫಲಹಾರ ಮಂದಿರ, ಕಚೇರಿ, ಶಾಲೆ, ಮತ್ತು ಕಾರ್ಖಾನೆಗಳ ಸಾರ್ವಜನಿಕ ಪಾಯಿಖಾನೆಗಳಲ್ಲಿ ಸಂಶೋಧಕರು ರಿಪೇರಿ ಮಾಡುವವರಂತೆ ಯಾ ನೈರ್ಮಲ್ಯತೆಯ ಸಿಬ್ಬಂದಿಯೋಪಾದಿ ಸೋಗನ್ನು ಹಾಕಿದರು. ನಾಲ್ಕು ವ್ಯಕ್ತಿಗಳಲ್ಲಿ ಒಬ್ಬನು ಪಾಯಿಖಾನೆಯನ್ನು ಬಳಸಿದ ಅನಂತರ ತನ್ನ ಕೈಗಳನ್ನು ತೊಳೆದುಕೊಳ್ಳುವುದಿಲ್ಲ ಮತ್ತು ತೊಳೆದುಕೊಳ್ಳುವವರಲ್ಲಿ ನಾಲ್ಕನೆಯವನು ಸಾಬೂನನ್ನು ಬಳಸಿ ಕೈ ತೊಳೆದುಕೊಳ್ಳುವುದಿಲ್ಲ ಎಂಬುದನ್ನು ಅವರು ಕಂಡುಹಿಡಿದರು. ರೋಗಗಳನ್ನು ಹರಡಿಸುವುದರಲ್ಲಿ ಲೋಕವ್ಯಾಪಕವಾಗಿ ಮಾನವ ಕೈಗಳು ಅತಿ ಸಾಮಾನ್ಯ ಸಾಧನವಾಗಿ ಉಳಿದಿರುವಂತೆ ತೋರುತ್ತದೆಂದು ವಿಜ್ಞಾನಿಗಳು ಹೇಳುತ್ತಾರೆ. (g93 6/8)
ಖಗೋಳಶಾಸ್ತ್ರಜ್ಞರ ನಿರೀಕ್ಷೆ
ಅಮೆರಿಕದ ನ್ಯಾಷನಲ್ ಏರೊನಾಟಿಕ್ ಆ್ಯಂಡ್ ಸ್ಪೇಸ್ ಆ್ಯಡ್‌ಮಿನಿಸ್ಟ್ರೇಷನ್ ಮೂಲಕ ನಿಭಾಯಿಸಲ್ಪಡುವ ಹತ್ತು ವರ್ಷಗಳ ಕಾರ್ಯಕ್ರಮದಲ್ಲಿ, ಇತರ ಗ್ರಹಗಳ ಮೇಲಿನ ಬುದ್ಧಿಜೀವಿಗಳಿಂದ ಮಾಡಲ್ಪಡುವ ರೇಡಿಯೋ ಪ್ರಸಾರಗಳನ್ನು ಕಂಡುಹಿಡಿಯವ ಪ್ರಯತ್ನದಲ್ಲಿ ಖಗೋಳಶಾಸ್ತ್ರಜ್ಞರು 10 ಕೋಟಿ ಡಾಲರುಗಳನ್ನು ವ್ಯಯಿಸಲು ಯೋಜಿಸುತ್ತಿದ್ದಾರೆ. ಇಂಟರ್‌ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್‌ಗನುಸಾರ, ಆರ್ಜೆಂಟಿನ, ಆಸ್ಟ್ರೇಲಿಯ, ಇಂಡಿಯ, ರಷ್ಯ, ಪೋರ್ಟೊ ರಿಕೊ, ಮತ್ತು ಅಮೆರಿಕದಲ್ಲಿನ ರೇಡಿಯೋ ದೂರದರ್ಶನಗಳಲ್ಲಿ ಏಕಕಾಲದಲ್ಲಿ ಲಕ್ಷಗಟ್ಟಲೆ ಸೂಕ್ಷ್ಮತರಂಗ ಚ್ಯಾನೆಲ್‌ಗಳನ್ನು ನಿರ್ವಹಿಸುವುದು ಅವರ ಯೋಜನೆಯಾಗಿರುತ್ತದೆ. ಕೆಲವು ವಿಜ್ಞಾನಿಗಳು ಆಶಾದಾಯಕವಾಗಿ ಶೀಘ್ರ ಯಶಸ್ಸನ್ನು ಮುನ್‌ಸೂಚಿಸುವಾಗ, ಇತರರು 1960ರಿಂದ ನಡೆಸಲ್ಪಟ್ಟ 50 ಸಂಶೋಧನೆಗಳು ನಿಷ್ಫಲವಾಗಿರುವುದನ್ನು ತೋರಿಸಿರುತ್ತಾರೆ. (g93 5/22)