ಹಸುಗಳು ಹಾರುವ ಸ್ಥಳ
ಷೆಟ್ಲಂಡ್ ದ್ವೀಪದ ಚಂಡ ಮಾರುತಗಳು ಜನವರಿ 5, 1993ರಂದು ಲೋಕದ ಗಮನಕ್ಕೆ ಬಂದಿತು. ಅವರು ಅದನ್ನು ಬಲಾತ್ಕಾರವಾಗಿ ತಡೆದುನಿಲ್ಲಿಸಲಿಕ್ಕಾಗಿ 243 ಮೀಟರ್, 45,000-ಟನ್ ಇರುವ ಬ್ರೇರ್ ಎಂಬ ಒಂದು ಎಣ್ಣೆ ತೊಟ್ಟಿಯುಳ್ಳ ಹಡಗನ್ನು ತೆಗೆದುಕೊಂಡರು ಮತ್ತು ಉತ್ತರ ಸ್ಕಾಟ್ಲೆಂಡ್‌ನ ಶಿಲಾಮಯ ಗಡಿಪ್ರದೇಶಕ್ಕೆ ಎದುರಾಗಿ ಅದನ್ನು ರಭಸದಿಂದ ತಳ್ಳಿದರು. ಒಂದು ವಾರದೊಳಗೆ ಬಿರುಗಾಳಿ ಮತ್ತು ಅಲೆಗಳು ಈ ಭಾರಿ ಹಡಗನ್ನು ನಾಲ್ಕು ಭಾಗಗಳಾಗಿ ತುಂಡುಮಾಡಿದವು.
ಷೆಟ್ಲಂಡ್‌ನ ನಿವಾಸಿಗಳಿಗೆ ಹುಯ್ಯಲಿಡುವ ಚಂಡ ಮಾರುತಗಳು ಹೊಸತೇನೂ ಇಲ್ಲ. ಬಹು ದೂರದ ಸುಮಾರು 100 ದ್ವೀಪಗಳ ಗುಂಪು, ಅವುಗಳಲ್ಲಿ 20ಕ್ಕಿಂತಲೂ ಕಡಿಮೆ ದ್ವೀಪಗಳಲ್ಲಿ ಜನರು ವಾಸಿಸುತ್ತಿದ್ದು, ಐಸ್‌ಲ್ಯಾಂಡ್‌ನ ಸಮೀಪದ ಸಮುದ್ರದ ಆಚೇಕಡೆಯಿಂದ ಅಪ್ಪಳಿಸಿ ಹೊಡೆಯುವ ಕೊರೆಯುವ ಶೀತದ ಬಿರುಗಾಳಿಯನ್ನು ಎದುರಿಸಲು ಹಿಂಜರಿಯದೇ ಪ್ರಥಮವಾಗಿ ನಿಲ್ಲುತ್ತಾರೆ.
ಯಾವುದೇ ಆಶ್ವರ್ಯವಿಲ್ಲದೇ, ಆ ನಿವಾಸಿಗಳು ಸೋಜಿಗದ ದೃಶ್ಯಗಳಿಗೆ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ. ದ ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಉದ್ಧರಿಸಲ್ಪಟ್ಟ, ಒಬ್ಬ ಮನುಷ್ಯನು, ಹೇಳಿದ್ದು: “ಬಹುಶಃ ಹಾರುವ ಹಸುಗಳ ಕುರಿತು ಎಚ್ಚರಿಕೆ, ಎಂಬ ರಸ್ತೆ ಸೂಚನೆಗಳು ಷೆಟ್ಲಂಡ್‌ನಲ್ಲಿದ್ದಿರಬಹುದು.” ಅವರ ಪರಿಚಯಸ್ಥರೊಬ್ಬರ ಹಸುಗಳಲ್ಲಿ ಒಂದು ಕೆಲವು ವರ್ಷಗಳ ಹಿಂದೆ ಹುಲ್ಲುಗಾವಲಿನಿಂದ ಪೂರ್ತಿಯಾಗಿ ಹಾರಿಸಿಕೊಂಡೊಯ್ಯಲ್ಪಟ್ಟಿತು. ವಿಜ್ಞಾನಿಯಾಗಿರುವ ಇನ್ನೊಬ್ಬ ನಿವಾಸಿಯು ಅವರ ಮುದ್ದಿನ ಬೆಕ್ಕು ಸುಮಾರು 5 ಮೀಟರ್‌ಗಳ ವರೆಗೆ ಗಾಳಿಯಲ್ಲಿ “ಹಾರು”ವುದನ್ನು—ನಿಸ್ಸಂದೇಹವಾಗಿ, ಯಾವಾಗಲೂ ಅದರ ಪಾದಗಳ ಮೇಲೆ ಕೆಳಗಿಳಿಯುವುದನ್ನು ಕಂಡು ವರದಿಮಾಡಿದರು. ಅವುಗಳು ರಸ್ತೆಗಳಿಂದ ಹಾರಿಸಲ್ಪಡುವುದನ್ನು ತಡೆಯಲಿಕ್ಕಾಗಿ, ಚಾಲಕರು ಸಾಮಾನ್ಯವಾಗಿ ತಮ್ಮ ವಾಹನಗಳನ್ನು ಕಲ್ಲಿದ್ದಲಿನಂತಹ ಭಾರವಾದ ಪದಾರ್ಥಗಳಿಂದ ತುಂಬಿಸುತ್ತಿದ್ದರು. ಜನರೂ ಕೂಡ ನೆಲದಿಂದ ಹಾರಿಸಲ್ಪಟ್ಟಿರುತ್ತಾರೆ, ಮತ್ತೆ ಕೆಲವರು ಕೊಲ್ಲಲ್ಪಟ್ಟಿರುತ್ತಾರೆ. ಒಂದು ಬಿರುಗಾಳಿಯು, ತಾಸೊಂದಕ್ಕೆ 323 ಕಿಲೊಮೀಟರ್ ಅನಧಿಕೃತ ವೇಗವನ್ನು ತಲುಪಿ ಸ್ತ್ರೀಯೊಬ್ಬಳನ್ನು ಕೊಂದುಹಾಕಿತು—ಅನಧಿಕೃತ ಯಾಕಂದರೆ ಅಧಿಕೃತ ವಾಯುಬಲ ಮಾಪಕವು ಅದೇ ಚಂಡ ಮಾರುತದಲ್ಲಿ ಹಾರಿಸಲ್ಪಟ್ಟಿತ್ತು! (g93 6/22)