ಮಲ-ಹೆತ್ತವರಿಗಾಗಿ ತಕ್ಕ ಸಲಹೆಗಳು
ಇಸವಿ 1995ರೊಳಗಾಗಿ, ಸಾಕುಕುಟುಂಬಗಳು ಸಾಂಪ್ರದಾಯಿಕ ಕುಟುಂಬಗಳನ್ನು ಮೀರುವುವು ಎಂಬುದಾಗಿ ದ ಯು. ಎಸ್. ಬ್ಯೂರೋ ಆಫ್ ದ ಸೆನ್ಸಸ್ ಮುಂತಿಳಿಸುತ್ತದೆ. ಆ ಸಮಯದೊಳಗಾಗಿ, ಅವರು 18 ವರ್ಷ ವಯಸ್ಸನ್ನು ತಲಪುವ ಮುಂಚೆ, ಪ್ರತಿ 100ರಲ್ಲಿ 59 ಮಕ್ಕಳು “ಸಂಯೋಜಿತ ಕುಟುಂಬಗಳಲ್ಲಿ” (ಮಲತಂದೆ ಯಾ ತಾಯಿಯನ್ನು ಹೊಂದಿರುವ ಕುಟುಂಬಗಳಲ್ಲಿ) ಜೀವಿಸುವರು. ಬೆಳೆಯುತ್ತಿರುವ ಮಲಹೆತ್ತವರ ಸಂಖ್ಯೆಗೆ ಸಹಾಯ ಮಾಡಲು ಕೇವಲ ಕೆಲವು ಸಲಹೆಗಳು ಕೆಳಗಿನಂತಿವೆ.
ಅದಕ್ಕೆ ಸಮಯ ಕೊಡಿರಿ: ಒಬ್ಬ ಹೊಸ ಹೆತ್ತವನೊಬ್ಬರನ್ನು ಸ್ವೀಕರಿಸಲು ಮಲಮಕ್ಕಳಿಗೆ ಸಮಯ ಹಿಡಿಯುತ್ತದೆ ಎಂದು ಮಲಹೆತ್ತವರು ನೆನಪಿನಲ್ಲಡಬೇಕು. ಮೊದಲ ಕೆಲವೊಂದು ತಿಂಗಳುಗಳು—ಯಾ ವರ್ಷಗಳು—ಇಷ್ಟು ಕಠಿನವಾಗಿರಲು ಕಾರಣವೇನೆಂದು, ಮಾನಸಿಕ ಆರೋಗ್ಯ ಕಸಬಿನವಳಾದ ಮಾವಿಸ್ ಹೇದರಿಂಗ್ಟನ್ ವಿವರಿಸುತ್ತಾಳೆ: “ಪುನಃ ವಿವಾಹದ ಆದಿ ಭಾಗಗಳಲ್ಲಿ, ಅವರ ಮಲತಂದೆಯ ಮೇಲೆ ಮಾತ್ರವಲ್ಲ ಅವರ ತಾಯಿಯ ಮೇಲೆಯೂ, ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರೂ ಹಗೆತನ, ಮೌನ, ನಕಾರಾತ್ಮಕತೆ ಮತ್ತು ಕೋಪವುಳ್ಳವರಾಗಿರುತ್ತಾರೆ. ಪುನಃ ವಿವಾಹವಾಗಿದ್ದರಿಂದ ಅವರ ತಾಯಿಯ ಮೇಲೆ . . . ಅವರು ಕೋಪಗೊಂಡಿರುತ್ತಾರೆ.” ಅದು ಕಷ್ಟಕರವಾಗಿದ್ದರೂ ಕೂಡ, ಮಲಹೆತ್ತವರು ಮಕ್ಕಳ ಅನಿಸಿಕೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.—ಜ್ಞಾನೋಕ್ತಿ 19:11 ನೋಡಿ.
ಮೊದಲು ಒಂದು ಒಳ್ಳೆಯ ಸಂಬಂಧವನ್ನು ಕಟ್ಟಿರಿ: ಮಲಹೆತ್ತವರು ಅವರ ಮಲಮಕ್ಕಳೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಕಟ್ಟಿದ ಅನಂತರವೇ ಅವರ ವರ್ತನೆಯನ್ನು ಸರಿಪಡಿಸುವ ಉತ್ತಮ ಸ್ಥಾನದಲ್ಲಿರುವರು ಎಂದು ಸೆಪ್ಟ್ಫ್ಯಾಮಿಲೀಸ್ ಎಂಬ ತನ್ನ ಪುಸ್ತಕದಲ್ಲಿ, ಜಾಯ್ ಕಾನೆಲಿ ವಿವೇಕಪೂರ್ಣವಾಗಿ ಎಚ್ಚರಿಸುತ್ತಾಳೆ. ಈ ಮಧ್ಯೆ, ನೈಜವಾದ ಪಾಲಕನೇ ಬೇಕಾದ ಶಿಕ್ಷೆಯನ್ನು ನಿರ್ವಹಿಸುವುದು ಅತ್ಯುತ್ತಮವಾಗಿರುವುದು. (ಜ್ಞಾನೋಕ್ತಿ 27:6 ಹೋಲಿಸಿ.) ಇನ್ನೊಂದು ಕಡೆಯಲ್ಲಿ, ಮಲಹೆತ್ತವರು ತಮ್ಮ ಮಕ್ಕಳಿಗೆ ಅವರು ಈ ಉದ್ದಕ್ಕೂ ಆನಂದಿಸಿದಂಥ—ದೀರ್ಘವಾದ ಗಾಳಿ ಸಂಚಾರಕ್ಕೆ ಹೋಗುವುದು ಯಾ ಒಟ್ಟಾಗಿ ಆಟಗಳನ್ನು ಆಡುವುದು—ಇಂಥ ದಿನಚರಿಗಳನ್ನು ಬೆಂಬಲಿಸುವ ಮೂಲಕ, ಅವರ ಜೀವಿತದಲ್ಲಿ ಏನೋ ನಿರಂತರವಾಗಿದೆ ಎಂಬ ಪ್ರಜ್ಞೆಯನ್ನು ಕೊಡಬಲ್ಲರು. ಮಲತಂದೆಗಳಾದರೊ, ಕುಟುಂಬಕ್ಕೆ ಗದರಿಕೆಯನ್ನು ನೀಡಲು ಊಟದ ಸಮಯಗಳನ್ನು ಉಪಯೋಗಿಸಬಾರದು.
ಸ್ವಪಕ್ಷಪಾತವನ್ನು ತ್ಯಜಿಸಿರಿ: ಸಾಧ್ಯವಾದರೆ, ಕೆಲವು ಸಮಯಗಳಲ್ಲಿ ಇದು ಎಷ್ಟೇ ಕಠಿನವಾಗಿದ್ದರೂ, ಮಲತಂದೆ ಯಾ ಮಲತಾಯಿ, ಅವನ ಯಾ ಅವಳ ಹುಟ್ಟು ಸಂತಾನದ ಕಡೆಗೆ ಸ್ವಪಕ್ಷಪಾತದ ಯಾವುದೇ ರುಜುವಾತನ್ನು ತೊರೆಯಬೇಕು.—ರೋಮಾಪುರ 2:11 ಹೋಲಿಸಿ.
ಎಚ್ಚರಿಕೆಯಿಂದ ಸಮೀಪಿಸಿರಿ: ಅನೇಕ ವೇಳೆ ವಿಶೇಷವಾಗಿ ಮಲತಂದೆಗಳಿಗೆ ಮತ್ತು ಮಲ-ಪುತ್ರಿಯರಿಗೆ ಮುಂದುವರಿಯಲು ಕಠಿನವಾಗಿದೆ ಎಂದು ಮಲಕುಟುಂಬಗಳ ಕುರಿತು ಇತ್ತೀಚೆಗಿನ ಒಂದು ಅಧ್ಯಯನವು ತೋರಿಸುತ್ತದೆ. ಒಬ್ಬ ಗ್ರಂಥಕರ್ತನು ಇದನ್ನು ಈ ರೀತಿಯಲ್ಲಿ ಹೇಳುತ್ತಾನೆ: “ಮಲತಂದೆಗಳು ಮಾತಾಡಲು ಪ್ರಯತ್ನಿಸುತ್ತಾರೆ, ಹುಡುಗಿಯರಿಗೆ ಮಾತಾಡಲು ಮನಸ್ಸಿರುವುದಿಲ್ಲ. ಮಲತಂದೆಗಳು ಸ್ವಲ್ಪ ಶಿಕ್ಷೆಯನ್ನು ಕೊಡಲು ಪ್ರಯತ್ನಿಸುತ್ತಾರೆ, ಹುಡುಗಿಯರು ಪ್ರತಿಭಟಿಸುತ್ತಾರೆ.” ಗ್ರಂಥಕರ್ತನು ಸಾರಾಂಶಿಸುವುದು: “ಈ ಸಮಯದ ಆರಂಭಿಕ ಹಂತದಲ್ಲಿ ಒಬ್ಬ ಮಲತಂದೆಯು ಹುಡುಗಿಯರೊಂದಿಗೆ ಏನನ್ನೂ ಸಫಲಪೂರ್ಣವಾಗಿ ಮಾಡಲು ಇರುವುದಿಲ್ಲ ಎಂದು ತೋರುತ್ತದೆ.” ಆದುದರಿಂದ ಮಹಾ ತಾಳ್ಮೆ ಮತ್ತು ಅನುಭೂತಿಯ ಅಗತ್ಯವಿದೆ. ಹುಡುಗಿಯರು ತಮ್ಮ ಮಲತಂದೆಗಳಿಂದ ಮೌಖಿಕ ಸ್ತುತಿಯನ್ನು ಗಣ್ಯಮಾಡಿದರೂ, ತಬ್ಬಿಕೊಳ್ಳುವಿಕೆಯಂಥ ಶಾರೀರಿಕ ಹಾವಭಾವಗಳು ಅವರಿಗೆ ಅನೇಕ ವೇಳೆ ಅಹಿತಕರವೆನಿಸುತ್ತವೆ. ಹುಡುಗಿಯೊಬ್ಬಳಿಗೆ ಹೀಗೆ ಅನಿಸಬಹುದೆಂದು ಮಲತಂದೆಗೆ ಗೊತ್ತಿರತಕ್ಕದ್ದು. ಹಾಗೆ ಅವಳಿಗೆ ಅನಿಸಿದರೆ, ಮಮತೆಯ ಶಾರೀರಿಕ ಪ್ರದರ್ಶನಗಳಿಗಿಂತ, ಅವನು ಹೆಚ್ಚಿನ ಒತ್ತನ್ನು ಮೌಖಿಕ ಸ್ತುತಿ ಮತ್ತು ಚರ್ಚೆಗೆ ಕೊಡತಕ್ಕದ್ದು.—ಜ್ಞಾನೋಕ್ತಿ 25:11 ಹೋಲಿಸಿರಿ.
ಅಸೂಯೆಯ ಕುರಿತು ಎಚ್ಚರಿಕೆಯಿಂದಿರ್ರಿ: ಅನೇಕ ಮಲಹೆಣ್ಣುಮಕ್ಕಳು ಒಬ್ಬಾಕೆ ಮಲತಾಯಿಯನ್ನು ಪ್ರತಿಸ್ಪರ್ಧಿಯಾಗಿ ಕಾಣುವಂಥ ಪ್ರವೃತ್ತಯುಳ್ಳವರಾಗಿರುತ್ತಾರೆಂದು ಅನುಭವಗಳು ತೋರಿಸುತ್ತವೆ. ಅದನ್ನು ನಿರೀಕ್ಷಿಸುವ ಮತ್ತು ಹುಡುಗಿಯ ಅನಿಸಿಕೆಗಳೊಂದಿಗೆ ಅನುಭೂತಿ ತೋರಿಸುವ ಒಬ್ಬಾಕೆ ಮಲತಾಯಿಯು ಹೀಗೆ ವಿವೇಕಪೂರ್ಣವಾಗಿ ಗಮನಕ್ಕಾಗಿರುವ ಹೋರಾಟಗಳನ್ನು ತಡೆಯಬಹುದು. ಅವನ ಮಗಳಿಗಾಗಿ ಮುಂದುವರಿಯುತ್ತಿರುವ ಅವನ ಪ್ರೀತಿ ಮತ್ತು ಸದಭಿಪ್ರಾಯದಲ್ಲಿ ನಂಬಿಕೆ ಹುಟ್ಟಿಸುವ ಮೂಲಕ, ಬಿಗುಪನ್ನು ನಿವಾರಿಸುವಲ್ಲಿ ತಂದೆಯು ಹೆಚ್ಚನ್ನು ಮಾಡಬಲ್ಲನು. (ಜ್ಞಾನೋಕ್ತಿ 15:1) ಅವರ ಹೊಸ ಮಲ-ಪುತ್ರಿಯರಿಗಾಗಿ ಅನೇಕ ಬಾರಿ ಮಲತಾಯಂದಿರು ತಾಯಿಯಂತೆ ಸ್ವೀಕರಿಸಲ್ಪಡಲು ಬಹಳ ಕಠಿನವಾಗಿ ಮತ್ತು ಬಹಳ ಬೇಗನೆ ಪ್ರಯತ್ನಿಸುತ್ತಾರೆ. ಪುನಃ, ತಾಳ್ಮೆಯು ಕೀಲಿ ಕೈಯಾಗಿದೆ.
ಮಲಹೆತ್ತವರಾಗಿರುವುದು ಸುಲಭವಲ್ಲ. ಆದರೆ ಸಾವಿರಾರು ಸಫಲಪೂರ್ಣ ಉದಾಹರಣೆಗಳು ತೋರಿಸುವಂತೆ, ಅದನ್ನು ಮಾಡಲು ಸಾಧ್ಯವಿದೆ. “ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ,” ಎಂದು ಬೈಬಲ್ ಹೇಳುವಾಗ, ಯಾವುದೇ ಕುಟುಂಬದಲ್ಲಿ ಸಫಲತೆಗಾಗಿ ಅದು ಅತ್ಯುತ್ತಮ ಸಲಹೆಯನ್ನು ಕೊಡುತ್ತದೆ ಎಂಬುದನ್ನು ನೆನಪಿನಲ್ಲಿಡಿ.—ಕೊಲೊಸ್ಸೆ 3:14. (g93 7/8)