ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 10/8 ಪು. 32
  • ಕೋಪದ ಬೆಲೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕೋಪದ ಬೆಲೆ
  • ಎಚ್ಚರ!—1993
ಎಚ್ಚರ!—1993
g93 10/8 ಪು. 32

ಕೋಪದ ಬೆಲೆ

ನೀವು ಕೋಪಗೊಂಡಾಗ, ನಿಮ್ಮ ಹೃದಯವು ಕಷ್ಟವನ್ನು ಅನುಭವಿಸುತ್ತದೆ. ಹೃದಯ ರೋಗಿಗಳಿಗೆ ಅವರನ್ನು ಈಗಲೂ ಕೋಪಗೊಳಿಸುವ ಘಟನೆಗಳನ್ನು ಜ್ಞಾಪಿಸಿಕೊಳ್ಳುವಂತೆ ಕೇಳಿಕೊಳ್ಳಲ್ಪಟ್ಟಾಗ, ರಕ್ತವನ್ನು ಪಂಪ್‌ ಮಾಡುವುದರಲ್ಲಿ ಅವರ ಹೃದಯಗಳ ಕಾರ್ಯ ಸಮರ್ಥತೆಯು 5 ಪ್ರತಿಶತದಿಂದ ಇಳಿಮುಖವಾಯಿತು ಎಂದು ಅಮೆರಿಕದ ಸ್ಟ್ಯಾನ್‌ಫರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆಸಲಾದ ಒಂದು ಅಧ್ಯಯನವು ಕಂಡುಕೊಂಡಿತು. ಕಾರ್ಯ ಸಮರ್ಥತೆಯಲ್ಲಿ ಇಳಿಮುಖವು ಶಾಶ್ವತವಾಗಿರದಿದ್ದರೂ, ಶಾಂತರಾಗಿರುವ ಜನರಿಗಿಂತ ಹಗೆತನ ಇರುವ ಜನರು ಹೃದಯ ರೋಗಗಳನ್ನು ಬೆಳಸಿಕೊಳ್ಳುವ ಸಾಧ್ಯತೆಗಳು ಬಹಳ ಹೆಚ್ಚಾಗಿವೆ ಎಂಬ ಬೆಳೆಯುತ್ತಿರುವ ಪ್ರಮಾಣಗಳ ನೋಟದಲ್ಲಿ, ವೈದ್ಯರು ಅದನ್ನು ಅರ್ಥಪೂರ್ಣವೆಂದು ಪರಿಗಣಿಸುತ್ತಾರೆ.

“ಕೋಪದ ಸಮಯದಲ್ಲಿ ರೋಗಿಗಳ ಹೃದಯದ ಕಾರ್ಯ ಸಮರ್ಥತೆಯಲ್ಲಿ ನಾವು ಕಂಡ ಐದು ಪ್ರತಿಶತ ತಗ್ಗುವಿಕೆಯು, ತೀಕ್ಷೈವಾದ ಇಳಿತವಾಗಿರದಿದ್ದರೂ ಗಮನಾರ್ಹವಾದದ್ದು,” ಎಂದು ಸಂಶೋಧನೆಯನ್ನು ನಡೆಸಿದ ಡಾ. ಗ್ಯೇಲ್‌ ಐಅರ್ನ್‌ಸನ್‌ ಹೇಳಿದರು. “ಘಟನೆಯು ಸಂಭವಿಸಿದಾಗ ಅವರು ಎಷ್ಟು ಕೋಪವುಳ್ಳವರಾಗಿದ್ದರೂ ಅದನ್ನು ಜ್ಞಾಪಿಸಿಕೊಳ್ಳುವಾಗ ಕೇವಲ ಅರ್ಧದಷ್ಟು ಮಾತ್ರ ಕೋಪಗೊಂಡಿದ್ದರೆಂದು ರೋಗಿಗಳು ಹೇಳಿದರು. ಕೋಪಗೊಳ್ಳುವ ನಿಜವಾದ ಒಂದು ಸನ್ನಿವೇಶವನ್ನು ಎದುರಿಸುವಾಗ ಪಂಪ್‌ ಮಾಡುವ ಕಾರ್ಯ ಸಮರ್ಥತೆಯು ಅತಿ ಬಹಳವಾಗಿ ಕಡಿಮೆಯಾಗುವುದು ಎಂಬುದನ್ನು ಎಣಿಸಬಹುದು.”

ಕಾರ್ಯಮಾಡಲು ಇರುವ ಹೃದಯದ ಸಾಮರ್ಥ್ಯದಲ್ಲಿ ಕೋಪವು ನೇರವಾದ ಬದಲಾವಣೆಯನ್ನು ಉಂಟುಮಾಡಬಲ್ಲದು ಎಂದು ತೋರಿಸುವಲ್ಲಿ ಅಧ್ಯಯನವು ಪ್ರಥಮವಾಗಿದೆ. ಹೃದಯ ರೋಗಕ್ಕೆ ಕೋಪವು ಏಕಮಾತ್ರವಾಗಿ ಹೊಣೆಯಾಗಿರದೆ—ಆಹಾರ ಕ್ರಮ, ವ್ಯಾಯಾಮ, ಮತ್ತು ಅನುವಂಶೀಯತೆ ಕೂಡ ಒಂದು ಪಾತ್ರವನ್ನು ವಹಿಸುತ್ತವೆಯಾದರೂ—ಕೋಪವು ಒಂದು ಪ್ರಮುಖ ದಾತವಾಗಿರಬಹುದೆಂದು ಸಂಶೋಧಕರು ನಂಬುತ್ತಾರೆ.

ಮಾನವ ದೇಹದ ಮೇಲೆ ಕೋಪವು ಹಾವಳಿ ಮಾಡುತ್ತದೆ ಎಂದು ವೈದ್ಯರಿಗೆ ಬಹಳ ಸಮಯದಿಂದಲೂ ಗೊತ್ತಿದೆ. ಅದು ರಕ್ತದ ಒತ್ತಡದಲ್ಲಿ ಏರಿಕೆಯನ್ನು, ಅಪಧಮನಿಯ ಬದಲಾವಣೆಗಳನ್ನು, ಉಸಿರಾಟದ ತೊಂದರೆಗಳನ್ನು, ಪಿತ್ತಜನಕಾಂಗದಲ್ಲಿ ಕ್ಷೋಭೆಗಳನ್ನು, ಪಿತ್ತಕೋಶದ ಸ್ರಾವದಲ್ಲಿ ಬದಲಾವಣೆಗಳನ್ನು ಮತ್ತು ಮೇದೋಜೀರಕ ಗ್ರಂಥಿಗೆ ಹಾನಿಯನ್ನು ಉಂಟುಮಾಡಬಲ್ಲದು. ದಮ್ಮು, ಕಣ್ಣಿನ ವೇದನೆಗಳು, ಚರ್ಮ ರೋಗಗಳು, ಗುಳ್ಳೆಗಳು, ಮತ್ತು ಹುಣ್ಣುಗಳು ಅಷ್ಟೇ ಅಲ್ಲದೆ ದಂತದ ಹಾಗೂ ಜೀರ್ಣಕಾರಿ ತೊಂದರೆಗಳಂಥ ಅಸ್ವಸ್ಥತೆಗಳನ್ನು ಕೋಪವು ತೀವ್ರಗೊಳಿಸುತ್ತದೆ ಎಂದು ಕೂಡ ಯೋಚಿಸಲಾಗಿದೆ.

ಹೀಗೆ, “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು,” ಮತ್ತು “ನಿನ್ನ ಮನಸ್ಸನ್ನು ರೇಗಿಸಲು ಆತುರಪಡದಿರು” [ಯಾ, “ಕೋಪಕ್ಕೆ,” ಕಿಂಗ್‌ ಜೇಮ್ಸ್‌ ವರ್ಷನ್‌] ಎಂಬ ಬೈಬಲಿನ ಸಲಹೆಗೆ ಕಿವಿಗೊಡುವುದರಿಂದ, ಆತ್ಮಿಕ ಮತ್ತು ಸಾಮಾಜಿಕ ಪ್ರಯೋಜನಗಳ ಹೊರತಾಗಿ, ಶಾರೀರಿಕ ಪ್ರಯೋಜನಗಳೂ ಕೂಡ ಇವೆ. ಒಬ್ಬನನ್ನು “ದೀರ್ಘಶಾಂತನಾಗಿ” ಮಾಡುವ “ವಿವೇಚನಾಶಕ್ತಿಯನ್ನು” ಬೆಳಸಿಕೊಳ್ಳುವುದು ಎಷ್ಟೊಂದು ಸಮಂಜಸವಾಗಿದೆ. ನಿಜವಾಗಿಯೂ, “ಶಾಂತಿಗುಣವು ದೇಹಕ್ಕೆ ಜೀವಾಧಾರವು.”—ಕೀರ್ತನೆ 37:8; ಪ್ರಸಂಗಿ 7:9 (NW); ಜ್ಞಾನೋಕ್ತಿ 14:29, 30 (NW).

ನೀವು ಇನ್ನೂ ಹೆಚ್ಚಿನ ಮಾಹಿತಿಯನ್ನು ಅಥವಾ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರೊಂದಿಗೆ ಒಂದು ಉಚಿತವಾದ ಮನೆ ಬೈಬಲ್‌ ಅಧ್ಯಯನವನ್ನು ಹೊಂದಿರಲು ಇಷ್ಟಪಡುವುದಾದರೆ, Watch Tower, H-58 Old Khandala Road, Lonavla 410401, Mah., ಅಥವಾ ಪುಟ 5ರಲ್ಲಿ ಕೊಟ್ಟಿರುವ ತಕ್ಕ ವಿಳಾಸಕ್ಕೆ ದಯಮಾಡಿ ಬರೆಯಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ