ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 2/8 ಪು. 17-19
  • ನನಗೆ ಈ ಅನಿಸಿಕೆಗಳೇಕೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನನಗೆ ಈ ಅನಿಸಿಕೆಗಳೇಕೆ?
  • ಎಚ್ಚರ!—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಆನುವಂಶೀಯ ಅಥವಾ ಪೋಷಿಸಿಕೊಂಡ ಪ್ರವೃತ್ತಿಯೊ?
  • ಪರಿಸರೀಯ ಕಾರಣಾಂಶಗಳು
  • ತಂದೆ ಮತ್ತು ಮಗ
  • ನೈತಿಕ ವಾದಾಂಶ
  • ಸಲಿಂಗಿ ಕಾಮ ಅದು ನಿಜವಾಗಿಯೂ ಅಷ್ಟು ಕೆಟದೆ?
    ಎಚ್ಚರ!—1995
  • ಈ ಅನಿಸಿಕೆಗಳು ತೊಲಗುವಂತೆ ನಾನು ಹೇಗೆ ಮಾಡಬಲ್ಲಿ?
    ಎಚ್ಚರ!—1995
  • ಸಲಿಂಗಕಾಮವನ್ನು ಸಮರ್ಥಿಸಸಾಧ್ಯವೇ?
    ಎಚ್ಚರ!—2012
  • ಸಲಿಂಗಕಾಮ ತಪ್ಪಾ?
    ಯುವಜನರ ಪ್ರಶ್ನೆಗಳು
ಇನ್ನಷ್ಟು
ಎಚ್ಚರ!—1995
g95 2/8 ಪು. 17-19

ಯುವ ಜನರು ಪ್ರಶ್ನಿಸುವುದು . . .

ನನಗೆ ಈ ಅನಿಸಿಕೆಗಳೇಕೆ?

“ನನ್ನೊಳಗೆ ಒಂದು ಹೋರಾಟವು ನಡೆಯುತ್ತಿರುವಂತೆ ಭಾಸವಾಗುತ್ತದೆ. ಎಲ್ಲಿಂದ ಸಹಾಯ ಪಡೆಯಬೇಕೆಂದು ನನಗೆ ತಿಳಿಯುವುದಿಲ್ಲ.”—ಬಾಬ್‌.

ಅನೇಕ ಯುವಕರು ತದ್ರೀತಿಯ ಮಾನಸಿಕ ಯಾತನೆಯನ್ನು ಅನುಭವಿಸುತ್ತಾರೆ. ವಿರುದ್ಧ ಲಿಂಗದವರ ಆಸಕ್ತಿಯಲ್ಲಿ ಲೀನವಾಗಿರುವಂತೆ ತೋರುವ ಅವರ ಸಮಾನಸ್ಥರಿಗಿಂತ ಬೇರೆಯಾಗಿ, ತಾವು ತಮ್ಮ ಸ್ವಂತ ಲಿಂಗದ ಸದಸ್ಯರಿಗೆ ಲೈಂಗಿಕವಾಗಿ ಹೆಚ್ಚೆಚ್ಚಾಗಿ ಆಕರ್ಷಿತರಾಗುವುದನ್ನು ಅವರು ಕಾಣುತ್ತಾರೆ. ಅನೇಕರಿಗೆ ಇದೊಂದು ಧ್ವಂಸಕಾರಕ ಅನುಭವವಾಗಿರುತ್ತದೆ.

ಒಬ್ಬ ಸ್ತ್ರೀಯು ತನ್ನ ಮಗಳ ಕುರಿತು ಹೇಳಿದ್ದು: “ಅವಳ ಆರೋಗ್ಯ ಕೆಡತೊಡಗಿತು, ಅವಳು ತಿನ್ನಲು ಅಥವಾ ಮಲಗಲು ಶಕ್ತಳಾಗಲಿಲ್ಲ, ಮತ್ತು ಖಿನ್ನಳೂ ಒಲವಿಲ್ಲದವಳೂ ಆದಳು. ಅವಳು ಆತ್ಮಹತ್ಯೆಯನ್ನೂ ಮಾಡಿಕೊಳ್ಳಲು ಪ್ರಯತ್ನಿಸಿದಳು.” ಈ ಬೇಗುದಿಗೆ ಮುಖ್ಯವಾದ ಕಾರಣ? “ಅವಳಿಗೆ ಸ್ತ್ರೀಗಾಮಿ ಅನಿಸಿಕೆಗಳಿದ್ದವು.” ಕೆಲವರಿಗಾದರೊ ಅಂಥ ಪ್ರವೃತ್ತಿಗಳನ್ನು ಪರಿಹರಿಸಿಕೊಳ್ಳಲು ಸುಲಭವಾಗಿರಲಿಕ್ಕಿಲ್ಲ. ನಾವು ಮಾರ್ಕ್‌ ಎಂದು ಹೆಸರಿಸುವ ಒಬ್ಬ ಯುವಕನು, ಹೀಗೆ ಅರಿಕೆಮಾಡುತ್ತಾನೆ: “ನಾನು ಹದಿಹರೆಯಕ್ಕೆ ಮುಂಚೆ ನನ್ನ ಕೆಲವು ಮಿತ್ರರೊಂದಿಗೆ ಪುರುಷಗಾಮಿ ಕೃತ್ಯಗಳನ್ನು ನಡಿಸತೊಡಗಿದೆ. ನಾನಿದನ್ನು ತಾರುಣ್ಯಾವಸ್ಥೆಗೆ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸ ತೊಡಗುವತನಕ ಮುಂದುವರಿಸಿದೆ. ಆದರೆ ಕೆಲವು ಸಾರಿ ನನ್ನೊಳಗಿನ್ನೂ ತಪ್ಪು ಅನಿಸಿಕೆಗಳು ಬಳಸಾಡುತ್ತಿದ್ದವು.”

ಒಬ್ಬ ಯುವಕ ಯಾ ಯುವತಿಯನ್ನು ಅವನ ಅಥವಾ ಅವಳ ಸ್ವಂತ ಲಿಂಗದವರೆಡೆಗೆ ಆಕರ್ಷಿತರನ್ನಾಗಿ ಮಾಡುವುದು ಯಾವುದು? ಅಂತಹ ಅನಿಸಿಕೆಗಳಿಂದ ಅವನು ಅಥವಾ ಅವಳು ಬಾಧಿಸಲ್ಪಟ್ಟಲ್ಲಿ ಯುವಜನರು ಏನು ಮಾಡಬೇಕು?

ಆನುವಂಶೀಯ ಅಥವಾ ಪೋಷಿಸಿಕೊಂಡ ಪ್ರವೃತ್ತಿಯೊ?

ಸಲಿಂಗೀಕಾಮಿಗಳು ನೈಸರ್ಗಿಕವಾಗಿ ಆ ವಿಧದ ಪ್ರವೃತ್ತಿಯೊಂದಿಗೆ ಹುಟ್ಟುತ್ತಾರೆಂದೂ ಮತ್ತು ಲೈಂಗಿಕ ಸ್ಥಾನವಿನ್ಯಾಸವು ಬದಲಾಗುವುದಿಲ್ಲವೆಂದೂ ಹೇಳುವುದು ಇಂದು ಜನಸಾಮಾನ್ಯ. ಉದಾಹರಣೆಗೆ, ಟೈಮ್‌ ಪತ್ರಿಕೆ ನಾಟಕೀಯವಾಗಿ ಪ್ರಕಟಿಸಿದ್ದು: “ಸಲಿಂಗೀಕಾಮಿ ಮತ್ತು ವಿರುದ್ಧಲಿಂಗಗಾಮಿಗಳಾದ ಪುರುಷರ ಮಿದುಳುಗಳ ಮಧ್ಯೆ ಒಂದು ರಚನಾ ಸಂಬಂಧದ ವ್ಯತ್ಯಾಸವಿದೆಯೆಂದು ಒಂದು ಹೊಸ ಅಧ್ಯಯನವು ಸೂಚಿಸುತ್ತದೆ.” ಆದರೂ, ಈ ಅಧ್ಯಯನ ಮಾಡಲ್ಪಟ್ಟದ್ದು ಏಯ್ಡ್ಸ್‌ನಿಂದ ಸತ್ತಿದ್ದ ಪುರುಷರ ಮಿದುಳುಗಳ ಮೇಲೆ. ನಿಶ್ಚಯವಾಗಿಯೂ ಇದು ವಿಷಯವನ್ನು ರುಜುಪಡಿಸುವುದಿಲ್ಲ!

ಇನ್ನೊಂದು ಕಲ್ಪನೆಯು ಹಾರ್ಮೋನ್‌ (ಅಂತಃಸ್ರಾವಗಳು)ಗಳನ್ನು ಒಳಗೊಂಡಿರುತ್ತದೆ. ಪ್ರಯೋಗಶಾಲೆಯ ಇಲಿಗಳಿಂದ ಗಂಡು ಹಾರ್ಮೋನನ್ನು ಕಿತ್ತುತೆಗೆದಾಗ ಅವು “ಹೆಣ್ಣು”ಗಳ ಸಂಭೋಗ ವರ್ತನೆಗಳನ್ನು ತೋರಿಸಿದವು ಎಂದು ವಿಜ್ಞಾನಿಗಳು ಗಮನಿಸಿದರು. ಸಲಿಂಗೀಕಾಮಿಗಳು ಸಹ ತದ್ರೀತಿಯಲ್ಲಿ ಜೀವವಿಜ್ಞಾನದ “ದುರಂತ”ಕ್ಕೆ—ಜನನಕ್ಕೆ ಮುಂಚೆ ತೀರ ಹೆಚ್ಚು ಅಥವಾ ತೀರ ಕಡಿಮೆ ಗಂಡು ಹಾರ್ಮೋನುಗಳಿಗೆ ಒಡ್ಡುವಿಕೆಯಿಂದಾಗಿ ಬಲಿಪಶುಗಳಾಗಿರಬಹುದು ಎಂದವರು ತೀರ್ಮಾನಿಸಿದರು. ಆದರೂ ಇಲಿಗಳ ಮಧ್ಯೆ ಆ ವಿಲಕ್ಷಣ ವರ್ತನೆಯು ಪ್ರತಿಕ್ರಿಯಾತ್ಮಕ ಪರಿಣಾಮಕ್ಕಿಂತ ತುಸು ಹೆಚ್ಚಲ್ಲದೆ—ನಿಜವಾಗಿಯೂ ‘ಸಲಿಂಗೀಕಾಮ’ವಲ್ಲ ಎಂದು ಅನೇಕ ವಿಜ್ಞಾನಿಗಳು ನಂಬುತ್ತಾರೆ. ಅದಲ್ಲದೆ, ಮನುಷ್ಯರು ಇಲಿಗಳೇನಲ್ಲ. ದ ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ ಮೆಂಟಲ್‌ ಹೆಲ್ತ್‌ ಲೆಟರ್‌ ವಾದಿಸುವುದು: “ಹೆತ್ತವರ ಹಾರ್ಮೋನು . . . ಇಲಿಗಳ ಸಂಭೋಗ ವರ್ತನೆಯಲ್ಲಿ ಒಳಗೊಂಡ ಪ್ರತಿಕ್ರಿಯೆಗಳನ್ನು ಸಂಘಟಿಸಿದ ಅದೇ ನೇರವಾದ ರೀತಿಯಲ್ಲಿ ಮಾನವ ಲೈಂಗಿಕತೆಯನ್ನು ಪ್ರಭಾವಿಸುತ್ತದೆಂಬುದು ಅತ್ಯಂತ ಅಸಂಭವನೀಯ.”

ಆನುವಂಶೀಯ ಅಧ್ಯಯನಗಳಿಗೆ ಸಹ ಹೆಚ್ಚು ಗಮನವು ಕೊಡಲ್ಪಟ್ಟಿದೆ. ಯಾರಿಗೆ ತದ್ರೂಪವಾದ ಅವಳಿಗಳಿದ್ದಾರೊ, ಆ ಸಲಿಂಗೀಕಾಮಿ ಪುರುಷರ ಮತ್ತು ಸ್ತ್ರೀಯರ ಅವಳಿಗಳಲ್ಲಿ ಸುಮಾರು ಅರ್ಧದಷ್ಟು ಅವಳಿಗಳು ಅಂತೆಯೆ ಸಲಿಂಗೀಕಾಮಿಗಳಾಗಿರುತ್ತಾರೆ. ಏಕ ತತ್ತಿಯಿಂದ ಹೊರಬಂದ [ತದ್ರೂಪದ] ಅವಳಿಗಳು ಆನುವಂಶೀಯ ದುಪ್ರತಿಗಳಾಗಿರುವುದರಿಂದ, ಕೆಲವು ನಿಗೂಢ ವಂಶವಾಹಿಯು ದಿಕ್ಚುತಿಯನ್ನು ಆಗಿಸಿತೆಂದು ತೀರ್ಮಾನಿಸುವುದು ನ್ಯಾಯಸಮ್ಮತವೆಂದು ತೋರಿತು. ಆದರೂ, ಅವಳಿಗಳಲ್ಲಿ ಅರ್ಧಪಾಲಷ್ಟು ಮಕ್ಕಳು ಸಲಿಂಗೀಕಾಮಿಗಳು ಆಗಿರಲಿಲ್ಲ ಎಂಬುದನ್ನು ಗಮನಿಸಿರಿ. ಈ ಪ್ರವೃತ್ತಿಯು ನಿಜವಾಗಿ ಆನುವಂಶೀಯವಾಗಿ ಏರ್ಪಡಿಸಲ್ಪಟ್ಟಿದ್ದಲ್ಲಿ, ಎಲ್ಲ ಅವಳಿಗಳೂ ಅದನ್ನು ಹೊಂದದಿರುತ್ತಿದ್ದವೆ? ವಂಶವಾಹಿಗಳು ಮತ್ತು ಹಾರ್ಮೋನ್‌ಗಳು ಸ್ವಲ್ಪ ಪಾತ್ರವನ್ನು ವಹಿಸಬಹುದು ನಿಜ. ಹಾಗಿದ್ದರೂ, ಕೆಲವರ ಕಂಡುಹಿಡಿಯುವಿಕೆಯ ಪುರಾವೆಯು, “ಲೈಂಗಿಕ ಸ್ಥಾನವಿನ್ಯಾಸಕ್ಕೆ ಪರಿಸರವು ಗಮನಾರ್ಹವಾಗಿ ನೆರವಾಗುತ್ತದೆಂದು ದೃಢವಾಗಿ ಸೂಚಿಸುತ್ತದೆ” ಎಂದು ಸೈಎಂಟಿಫಿಕ್‌ ಅಮೆರಿಕನ್‌ ವರದಿಸಿತು.

ಪರಿಸರೀಯ ಕಾರಣಾಂಶಗಳು

ಪುರಾತನ ಗ್ರೀಸಿನ ಪರಿಸರವನ್ನು ಗಮನಕ್ಕೆ ತನ್ನಿರಿ. ಅವರ ಕೆಲವು ಪೌರಾಣಿಕ ದೇವರುಗಳ ಕುರಿತ ಕಾಮುಕ ಕಥೆಗಳಿಂದ, ಪ್ಲೇಟೊನಂತಹ ತತ್ವಜ್ಞಾನಿಗಳ ಬರಹಗಳಿಂದ ಮತ್ತು ಎಲ್ಲಿ ಯುವಕರು ವಿವಸ್ತ್ರರಾಗಿ ಅಂಗಸಾಧನೆ ಮಾಡುತ್ತಿದ್ದರೊ ಆ ವ್ಯಾಯಾಮಶಾಲೆಗಳ ಸಂಸ್ಕೃತಿಯಿಂದಾಗಿ ಪ್ರಚೋದಿತರಾಗಿ, ಗ್ರೀಕ್‌ ಭಾಷೆಯನ್ನಾಡುವ ಜಗತ್ತಿನ ಕುಲೀನರಲ್ಲಿ ಸಲಿಂಗೀಕಾಮವು ಪ್ರಬಲವಾಯಿತು. ಲೌವ್‌ ಇನ್‌ ಏನ್ಷೆಂಟ್‌ ಗ್ರೀಸ್‌ ಎಂಬ ಪುಸ್ತಕಕ್ಕನುಸಾರವಾಗಿ, “ಕ್ರೀಟ್‌ನಲ್ಲಿ ಸಮಾಜದ ಕುಲೀನ ಕುಲದಲ್ಲಿ ಹುಟ್ಟಿದ ಹುಡುಗನೊಬ್ಬನಿಗೆ ಒಬ್ಬ [ಗಂಡು] ಇನಿಯನು ಇಲ್ಲದೆ ಇರುವುದು ಅವಮಾನಕರವೆಂದೆಣಿಸಲ್ಪಡುತ್ತಿತ್ತು.” ಯಾವ ಗೂಢವಾದ ವಂಶವಾಹಿ ಅಥವಾ ಹಾರ್ಮೋನ್‌ ಅಂತಹ ಅವನತಿಯನ್ನು ಆಗಿಸಲಿಲ್ಲ. ಗ್ರೀಕ್‌ ಸಂಸ್ಕೃತಿಯು ಅನುಮತಿಸಿದ್ದರಿಂದ, ಹೌದು ಪ್ರಚೋದಿಸಿದ್ದರಿದ ಅದು ವೃದ್ಧಿಯಾಯಿತು! ಇದು ಪರಿಸರವು ಎಷ್ಟು ಪ್ರಬಲವಾದ ಪಾತ್ರವನ್ನು ವಹಿಸಬಲ್ಲದೆಂದು ಚೆನ್ನಾಗಿ ಚಿತ್ರಿಸುತ್ತದೆ.

ನಿಸ್ಸಂದೇಹವಾಗಿ ಸಲಿಂಗೀಕಾಮವನ್ನು ಪ್ರಚೋದಿಸುವ ಪ್ರಚಾರದ ಸುರಿಮಳೆಯು ಇಂದು ಆ ದೃಷ್ಟಿಕೋನವನ್ನು ವೃದ್ಧಿಸಲು ಹೆಚ್ಚನ್ನು ಮಾಡಿಯದೆ. ಟಿವಿ, ಚಲನ ಚಿತ್ರಗಳು, ಸಂಗೀತ, ಮತ್ತು ಪತ್ರಿಕೆಗಳಲ್ಲಿ ಸಲಿಂಗೀಕಾಮಕ್ಕೆ ಅಪ್ರತ್ಯಕ್ಷ ಸೂಚನೆಗಳು ಬಹಳಷ್ಟಿವೆ. ಕೇಬ್‌ಲ್‌ ಟೆಲಿವಿಷನ್‌ ಕೆಲವು ಯುವಕರಿಗೆ ಕಡು ಲಂಪಟತನಕ್ಕೆ ಸುಲಭ ಪ್ರವೇಶವನ್ನು ಕೊಟ್ಟಿರುತ್ತದೆ. ಉಡುಪು ಮತ್ತು ಕೇಶರಚನೆಯಲ್ಲಿ ದ್ವಿಲಿಂಗ (ಸಮಲಿಂಗ) ಶೈಲಿಗಳು ನೀಟುಗಾರಿಕೆಯಾಗಿ ಪರಿಣಮಿಸಿವೆ. ಕೆಲವು ಸ್ತ್ರೀ ಸ್ವಾತಂತ್ರ್ಯವಾದಿಗಳಿಂದ ಪ್ರವರ್ಧಿಸಲ್ಪಟ್ಟಿರುವ ಪುರುಷ ವಿರೋಧಿ ಪ್ರಚಾರವು ಸ್ತ್ರೀಗಾಮಿಗಳ ವೃದ್ಧಿಗೆ ನೆರವಾಗಿದೆಯೆಂದು ಕೆಲವು ಪರಿಣತರು ಅಭಿಪ್ರಯಿಸುತ್ತಾರೆ ಸಹ. ಪುರುಷಗಾಮಿ ಜೀವನ ಶೈಲಿಯನ್ನು ಮರೆಮಾಜದೆ ಪ್ರತಿಪಾದಿಸುವ ಸಹಪಾಠಿಗಳ ಸಹವಾಸದಿಂದಲೂ ಯುವಕರು ಕೆಟ್ಟ ಸಹವಾಸಗಳಿಗೆ ಒಡ್ಡಲ್ಪಡಬಹುದು.—1 ಕೊರಿಂಥ 15:33.

ತಂದೆ ಮತ್ತು ಮಗ

ಕೆಲವು ಸಲ ನ್ಯೂನ ಕುಟುಂಬ ಪರಿಸರ ಸಹ ಒಂದು ದೊಡ್ಡ ಪಾತ್ರವನ್ನು ವಹಿಸುವಂತೆ ಕಾಣುತ್ತದೆ, ವಿಶೇಷವಾಗಿ ಪುರುಷರಲ್ಲಿ.a ಮಗುವಿನ ಮಾನಸಿಕ ವಿಕಾಸಕ್ಕೆ ತಂದೆಯು ಒಂದು ಪ್ರಾಮುಖ್ಯವಾದ ಸಹಾಯವನ್ನು ಒದಗಿಸುತ್ತಾನೆ. (ಎಫೆಸ 6:4) ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕವು ಹೇಳುವುದು: “ತಂದೆಯ ಪುರುಷ ಗುಣಗಳ ಪ್ರಭಾವವು ಅದನ್ನು ಪೂರ್ತಿ ಬಳಸಿರುವ ಸಮತೂಕದ ವ್ಯಕ್ತಿಯಾಗಿ ಬೆಳೆಯುವುದಕ್ಕೆ ಮಹತ್ವದ ಸಹಾಯವನ್ನೀಯುತ್ತದೆ.”b ಒಬ್ಬ ಹುಡುಗನಿಗೆ ಅವನ ತಂದೆಯ ಒಪ್ಪಿಗೆ, ಪ್ರೀತಿ, ಮತ್ತು ಮೆಚ್ಚಿಗೆಯ ಅಗತ್ಯ ಸಹ ಇದೆ. (ಹೋಲಿಸಿ ಲೂಕ 3:22.) ಈ ಅಗತ್ಯದ ಗಮನವನ್ನು ತನ್ನ ಮಗುವಿಗೆ ಕೊಡಲು ಒಬ್ಬ ತಂದೆಯು ತಪ್ಪುವಾಗ ಏನು ಫಲಿತಾಂಶಿಸಬಲ್ಲದು? ಮಾನಸಿಕ ಬೇಗುದಿ. ಮಾನಸಿಕ-ಆರೋಗ್ಯ ಲೇಖಕ ಜೋಸೆಫ್‌ ನಿಕಲೋಸಿ ಹೇಳುವುದೇನಂದರೆ ಗಂಡಸರ ಸಲಿಂಗೀಕಾಮವು “ಬಹಳ ಮಟ್ಟಿಗೆ ಯಾವಾಗಲೂ ಕುಟುಂಬ ಸಂಬಂಧಗಳ ಸಮಸ್ಯೆಗಳ, ವಿಶೇಷವಾಗಿ ತಂದೆ ಮತ್ತು ಮಗನ ನಡುವಣ ಸಮಸ್ಯೆಗಳ ಫಲಿತಾಂಶವಾಗಿದೆ.”

ಒಬ್ಬ ತಾಯಿಯು ತನ್ನ ಗಂಡನನ್ನು ಹೀನಯಿಸಿ ಮಾತನಾಡುವ ಮೂಲಕ ಅಥವಾ ತನ್ನ ಮಗನ ಮೇಲೆ ಅತಿರೇಕ ಸ್ವಾಮ್ಯವನ್ನು ತೋರಿಸುವ ಮೂಲಕ ಸನ್ನಿವೇಶವನ್ನು ಉದ್ರೇಕಿಸಲೂಬಹುದು. ಪೌರುಷವಿಲ್ಲದ ಹುಡುಗರ ಒಂದು ಅಧ್ಯಯನವು ಈ ಅವಲೋಕನೆಯನ್ನು ಮಾಡಿತು: “ಕೆಲವು ಹೆತ್ತವರು ಹುಡುಗನಿಗಿಂತ ಹುಡುಗಿಯನ್ನು ಹೆಚ್ಚು ಬಯಸಿದ್ದರು ಮತ್ತು ತಮ್ಮ ಎಳೆಯ ಮಗನಿಗೆ ಹುಡುಗಿಯಂತೆ ಉಡುಪುತೊಡಲು ಯುಕ್ತಿಯಿಂದ ಉತ್ತೇಜಿಸಿದ್ದರು ಅಥವಾ ಅವನಿಗೆ ಆ ರೀತಿ ಉಡುಪು ತೊಡಿಸಿದ್ದರು.”

ವಕ್ರವಾದ ಲೈಂಗಿಕ ಭಾವನೆಗಳಿಗಾಗಿ ಯಾಂತ್ರಿಕವಾಗಿಯೆ ಒಬ್ಬನ ಹೆತ್ತವರು ದೋಷಿಗಳಾಗಿದ್ದಾರೆಂದು ಇದರ ಅರ್ಥವಲ್ಲ. ಸ್ವಾಮ್ಯಸ್ವಭಾವದ ತಾಯಂದಿರೊಂದಿಗೆ ಮತ್ತು ನಿರ್ಲಕ್ಷ್ಯ, ಗೈರುಹಾಜರಿಯ, ಅಥವಾ ದೂಷಿಸುವ ತಂದೆಗಳೊಂದಿಗೆ ಬೆಳೆದ ಅನೇಕ ಗಂಡಸರು ಇನ್ನೂ ಪುರುಷತನದ ವ್ಯಕ್ತಿತ್ವಗಳನ್ನು ಬೆಳೆಸಿಕೊಂಡಿದ್ದಾರೆ. ಅಷ್ಟಲ್ಲದೆ, ಸಲಿಂಗೀಕಾಮದ ಪ್ರವೃತ್ತಿಗಳುಳ್ಳ ಎಲ್ಲರೂ ಅನಿವಾರ್ಯವಾಗಿ ಅಸಿದ್ಧ ಕುಟುಂಬಗಳಿಂದಲೆ ಬರುತ್ತಾರೆಂದಲ್ಲ. ಆದರೂ, ಕೆಲವು ಹುಡುಗರು ಅತಿ ವಿಶಿಷ್ಟ ರೀತಿಯಲ್ಲಿ ಘಾಸಿಗೊಂಡಿದ್ದಾರೆಂದು ತೋರಿಬರುತ್ತದೆ. “ತಂದೆಯಿಂದ ತಾನು ನಿರಾಕರಿಸಲ್ಪಟ್ಟಿದ್ದೇನೆಂಬ ಆರಂಭಿಕ ಭಾವನೆಯ ಫಲಿತಾಂಶವಾಗಿ . . . ಸಲಿಂಗೀಕಾಮಿಯು ನಿರ್ಬಲ ಭಾವನೆಯನ್ನು ಮತ್ತು ಪುರುಷತನದಲ್ಲಿ ಜೊತೆಗೂಡಿದ ಗುಣಗಳಾದ ಅಧಿಕಾರ, ದೃಢತೆ, ಮತ್ತು ಶಕ್ತಿಯ ಸಂಬಂಧದಲ್ಲಿ ಅನರ್ಹತೆಯ ಭಾವವನ್ನು ವಹಿಸುತ್ತಾನೆ. ತನ್ನ ಸ್ವಂತ ಪುರುಷತನದೆಡೆಗೆ ಅರಿವಿಲ್ಲದೆ ಯತ್ನಪಡುವ ನಿರ್ಬಂಧದಿಂದಾಗಿ, ಅವನು ಪುರುಷತನದ ಶಕ್ತಿಗೆ ಆಕರ್ಷಿಸಲ್ಪಡುತ್ತಾನೆ” ಎಂದು ಡಾ. ನಿಕಲೋಸಿ ಅಭಿಪ್ರಯಿಸುತ್ತಾರೆ.

ಪೀಟರ್‌ ಎಂಬ ಯುವ ಕ್ರೈಸ್ತ ಪುರುಷನು ಬರೆಯುವುದು: “ನನ್ನ ತಂದೆ ಒಬ್ಬ ಮದ್ಯವ್ಯಸನಿಯಾಗಿದ್ದು ಒಂದೇ ಸಮನಾಗಿ ನನ್ನ ತಾಯಿಯನ್ನು, ಮತ್ತು ಕೆಲವೊಮ್ಮೆ ಮಕ್ಕಳಾದ ನಮ್ಮನ್ನು ಹೊಡೆಯುತ್ತಿದ್ದರು. ನಾನು 12 ವರ್ಪ ಪ್ರಾಯದವನಾಗಿದ್ದಾಗ ಅವರು ಮನೆಬಿಟ್ಟು ಹೋದರು. ತಂದೆಯ ಕೊರತೆಯನ್ನು ನಾನು ತೀವ್ರವಾಗಿ ಅನುಭವಿಸಿದೆ. ಪ್ರತಿ ದಿನ ನಾನು ಅನುಭವಿಸಿದ ಶೂನ್ಯತೆಯನ್ನು ತುಂಬಲು ತಂದೆಯಂತಿರುವ ಒಬ್ಬರಿಗಾಗಿ ನಾನು ಯಾವಾಗಲೂ ಹಂಬಲಿಸಿದೆ. ಆ ಅಗತ್ಯವನ್ನು ತುಂಬಬಲ್ಲನೆಂದು ನಾನೆಣಿಸಿದ ಒಬ್ಬ ಒಳ್ಳೇ ಕ್ರೈಸ್ತನೊಂದಿಗೆ ಕಟ್ಟಕಡೆಗೆ ನಾನು ಸ್ನೇಹವನ್ನು ವಿಕಸಿಸಿದಾಗ, ನಾನು ಅವನೆಡೆಗೆ ಲೈಂಗಿಕ ಭಾವನೆಗಳನ್ನು ಅನುಭವಿಸತೊಡಗಿದೆನು.”

ಸಲಿಂಗೀಕಾಮಿಗಳಲ್ಲಿ ಗಮನಾರ್ಹ ಸಂಖ್ಯೆಯು ಬಾಲ್ಯದ ಅತ್ಯಾಚಾರಕ್ಕೆ ಬಲಿಪಶುಗಳಾಗಿರುವುದು ಕುತೂಹಲಕಾರಿ.c ಅಂಥ ಅತ್ಯಾಚಾರವು ಬಾಳುವ ಶಾರೀರಿಕ ಮತ್ತು ಮಾನಸಿಕ ಹಾನಿಯನ್ನು ಉತ್ಪಾದಿಸಬಲ್ಲದು. ಕೆಲವರಿಗೆ ಅದು ಒಬ್ಬ ಲೇಖಕಿಯು ಏನನ್ನು “ವಿಕೃತರೂಪದ ಲೈಂಗಿಕ ವ್ಯಕ್ತಿತ್ವ” ಎಂದು ಕರೆದಿರುವಳೊ ಅದನ್ನು ಉಂಟುಮಾಡಲೂಬಹುದು. ಇದು ಪ್ರತ್ಯಕ್ಷವಾಗಿ ಪ್ರಾಚೀನ ಸೋದೋಮಿನಲ್ಲಿ ನಡೆಯಿತು, ಅಲ್ಲಿ ಎಳೆಯ ಹುಡುಗರು ವಿಕೃತರೂಪದ ಸಂಗಮಗಳಿಗಾಗಿ ತೀವ್ರಾಭಿಲಾಷೆಯನ್ನು ವ್ಯಕ್ತಪಡಿಸಿದರು. (ಆದಿಕಾಂಡ 19:4, 5) ಅವರು ಪ್ರೌಢರಿಂದ ನಡಿಸಲ್ಪಟ್ಟ ಅಪಪ್ರಯೋಗದ ಉತ್ಪನ್ನವಾಗಿದ್ದರೆಂಬದು ಸ್ಪಷ್ಟ.

ನೈತಿಕ ವಾದಾಂಶ

ಸಮಲಿಂಗ ಆಕರ್ಷಣೆಯಲ್ಲಿ ಆನುವಂಶೀಯ ಮತ್ತು ಪೋಷಿಸಿಕೊಂಡ ಪ್ರವೃತ್ತಿಯು ಎಷ್ಟು ದೊಡ್ಡ ಪಾತ್ರವನ್ನು ವಹಿಸುತ್ತದೆಂದು ಒಂದು ವೇಳೆ ವಿಜ್ಞಾನಿಗಳೆಂದೂ ನಿರ್ಧರಿಸದಿರಬಹುದು. ಆದರೆ ಒಂದು ವಿಷಯವು ಸ್ಪಷ್ಟ: ಸಕಲ ಮಾನವರು ಕೆಟ್ಟ ಯೋಚನೆ ಮತ್ತು ಒಲವುಗಳಿಗೆ ಬಲಿಯಾಗುವ ಪ್ರವೃತ್ತಿಯೊಂದಿಗೆ ಹುಟ್ಟಿದ್ದಾರೆ.—ರೋಮಾಪುರ 3:23.

ಆದುದರಿಂದ ದೇವರನ್ನು ಮೆಚ್ಚಿಸಲು ಬಯಸುವ ಯುವಕನು, ಆತನ ನೈತಿಕ ದರ್ಜೆಗಳಿಗೆ ಹೊಂದಿಕೆಯಾಗಿರಬೇಕು ಮತ್ತು ಅನೈತಿಕ ವರ್ತನೆಯನ್ನು ವಿಸರ್ಜಿಸಬೇಕು, ಹಾಗೆ ಮಾಡುವುದು ಸಂಕಟಪಡಿಸುವಷ್ಟು ಕಷ್ಟಕರವಾಗಿದ್ದರೂ. ಹೇಗೆ ಕೆಲವು ವ್ಯಕ್ತಿಗಳು, ಬೈಬಲಿಗನುಸಾರ “ಕೋಪಕ್ಕೆ ಒಲವುಳ್ಳವರು” ಆಗಿದ್ದಾರೊ ಹಾಗೆ ಕೆಲವು ವ್ಯಕ್ತಿಗಳು ಸಲಿಂಗೀಕಾಮಕ್ಕೆ ಒಲವುಳ್ಳವರಾಗಿದ್ದಾರೆ. (ತೀತ 1:7, NW) ಆದರೆ ಅನೀತಿಯ ಕೋಪ ಪ್ರದರ್ಶನಗಳನ್ನು ಬೈಬಲು ಇನ್ನೂ ಖಂಡಿಸುತ್ತದೆ. (ಎಫೆಸ 4:31) ತದ್ರೀತಿಯಲ್ಲಿ, ತಾನು ‘ಆ ವಿಧವಾಗಿಯೆ ಹುಟ್ಟಿದ್ದೇನೆ’ ಎಂದು ಹೇಳುವ ಮೂಲಕ ಕ್ರೈಸ್ತನೊಬ್ಬನು ಅನೈತಿಕ ವರ್ತನೆಗೆ ನೆಪ ಕೊಡಸಾಧ್ಯವಿಲ್ಲ. ಮಕ್ಕಳ ಅಪಪ್ರಯೋಗಿಗಳು, ಮಕ್ಕಳಿಗಾಗಿ ತಮ್ಮ ಕಡುಬಯಕೆಯು “ಸ್ವಭಾವಸಿದ್ಧವಾದದ್ದು” ಎಂದು ಹೇಳುವಾಗ, ಅದೇ ವಿಧದ ಶೋಚನೀಯ ನೆಪ ನೀಡುತ್ತಾರೆ. ಆದರೆ ಅವರ ಲೈಂಗಿಕ ಅಭಿಲಾಷೆಯು ವಕ್ರತೆಯುಳ್ಳದ್ದಾಗಿದೆಯೆಂಬುದನ್ನು ಯಾರಾದರೂ ಅಲ್ಲಗಳೆಯಬಲ್ಲನೊ? ಸಮಲಿಂಗದ ಒಬ್ಬನೆಡೆಗೆ ಲೈಂಗಿಕ ಬಯಕೆಯನ್ನು ತೋರಿಸುವುದೂ ಹಾಗೆಯೆ ಇದೆ.

ಆದುದರಿಂದ ತಮ್ಮನ್ನು ಸಮಲಿಂಗದವರೆಡೆಗೆ ಆಕರ್ಷಿತರನ್ನಾಗಿ ಕಂಡುಕೊಳ್ಳುವ ಯುವಕರು ತಮ್ಮ ಅನಿಸಿಕೆಗಳಿಗೆ ವಶವಾಗುವುದನ್ನು ವರ್ಜಿಸಬೇಕು. ಆದರೆ ಬೈಬಲು ಅಷ್ಟು ಸ್ಪಷ್ಟವಾಗಿಗಿ ಸಲಿಂಗೀಕಾಮವನ್ನು ಖಂಡಿಸುವುದೇಕೆ? ಆ ಜೀವನ ಶೈಲಿಯು ನಿಜವಾಗಿ ಅಸಹ್ಯವೂ ವಕ್ರವೂ ಆಗಿದೆಯೆ? ಹಾಗಿರುವಲ್ಲಿ ಅದರಿಂದ ದೂರವಾಗಿರಲು ಒಬ್ಬ ಯುವಕನು ಏನು ಮಾಡಬಲ್ಲನು? ಈ ಪ್ರಶ್ನೆಗಳು ಎಚ್ಚರ!ದ ಮುಂದಿನ ಒಂದು ಸಂಚಿಕೆಯಲ್ಲಿ ಚರ್ಚಿಸಲ್ಪಡಲಿವೆ.

[ಅಧ್ಯಯನ ಪ್ರಶ್ನೆಗಳು]

a ಸ್ತ್ರೀ ಸಲಿಂಗೀಕಾಮದ ವಿಕಾಸದ ಮೇಲೆ ತುಲನಾತ್ಮಕವಾಗಿ ಕೊಂಚ ಸಂಶೋಧನೆ ಮಾಡಲಾಗಿದೆ. ಆದರೂ ಕುಟುಂಬ ಪ್ರಭಾವಗಳು ಅಲ್ಲಿಯೂ ಒಂದು ಪಾತ್ರವನ್ನು ವಹಿಸುತ್ತವೆಂಬದಕ್ಕೆ ಸಂದೇಹವಿಲ್ಲ.

b ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದೆ.

c ಮಕ್ಕಳ ಅಪಪ್ರಯೋಗವು ಪ್ರಾಚೀನ ಗ್ರೀಸ್‌ನಲ್ಲಿ ಸಲಿಂಗೀಕಾಮದ ವೃದ್ಧಿಗೆ ಒಂದು ಕಾರಣಾಂಶವಾಗಿತ್ತೆಂದು ತೋರಿಬರುತ್ತದೆ. ಎಳೆಯ ಹುಡುಗರನ್ನು ಭ್ರಷ್ಟಮಾಡುವ ಪ್ರೌಢರನ್ನು ಸಾಮಾನ್ಯವಾಗಿ—“ದುರಾಶೆ ಮತ್ತು ಉದ್ಧತವಾದ ಉಗ್ರತೆಯ ಸೂಚಕವಾದ “ತೋಳಗಳು” ಎಂದು ನಿರ್ದೇಶಿಸಲಾಗಿತ್ತು. ಅವರ ಎಳೆಯ ಬಲಿಪಶುಗಳು “ಕುರಿಮರಿಗಳು” ಎಂದು ಕರೆಯಲ್ಪಟ್ಟರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ