ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 6/8 ಪು. 20-21
  • ಗೆದ್ದಲು—ಮಿತ್ರನೋ ಶತ್ರುವೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಗೆದ್ದಲು—ಮಿತ್ರನೋ ಶತ್ರುವೋ?
  • ಎಚ್ಚರ!—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಗೆದ್ದಲು ಕೋಟೆ
  • ಗೆದ್ದಲು ಸಮಾಜ
  • ಮಿತ್ರರೋ ಶತ್ರುಗಳೋ?
  • ಪ್ರವೀಣ ಯಂತ್ರಶಿಲ್ಪಿಗಳು
    ಎಚ್ಚರ!—1994
  • ಜಗತ್ತನ್ನು ಗಮನಿಸುವುದು
    ಎಚ್ಚರ!—1997
ಎಚ್ಚರ!—1995
g95 6/8 ಪು. 20-21

ಗೆದ್ದಲು—ಮಿತ್ರನೋ ಶತ್ರುವೋ?

ಕೆನ್ಯದ ಎಚ್ಚರ! ಸುದ್ದಿಗಾರರಿಂದ

“ಕುಂಬೆ! ಮಶ್ವಾ!” ಹೀಗೆ ಒಬ್ಬ ಕ್ರೈಸ್ತ ಶುಶ್ರೂಷಕನು, ಅವನು ಮತ್ತು ಇತರರ ಒಂದು ಗುಂಪು, ಒಯ್ಯಲಾಗುವ ಒಂದು ಮರದ ಕೊಳವನ್ನು ಎತ್ತಿದಾಗ ಉದ್ಗರಿಸಿದನು. ಕೆನ್ಯದಲ್ಲಿನ ಯೆಹೋವನ ಸಾಕ್ಷಿಗಳ ಸರ್ಕಿಟ್‌ ಸಮ್ಮೇಳನವೊಂದರಲ್ಲಿ ಇದನ್ನು ಅವರು, ದೀಕ್ಷಾಸ್ನಾನದ ಕೊಳದೋಪಾದಿ ಉಪಯೋಗಿಸಲು ಆಶಿಸಿದರು. ಅವರ ಹತಾಶೆಗೆ, ಬಹಳಷ್ಟು ಮರವು ತಿನ್ನಲ್ಪಟ್ಟಿರುವುದನ್ನು ಅವರು ಕಂಡುಹಿಡಿದರು. ಆದುದರಿಂದಲೇ ಅವನ ಹತಾಶೆಯ ವಾಕ್ಸರಣಿ. ಭಾಷಾಂತರಿಸುವಾಗ, ಇದು ಅರ್ಥೈಸುವುದು: “ಓ! ಗೆದ್ದಲುಗಳು!”

ಪ್ರಾಯಶಃ ಸ್ವತ್ತಿನ ಹಾನಿಯೊಂದಿಗೆ ಪುಟಾಣಿ ಗೆದ್ದಲಿನಂತೆ ಇನ್ನಾವ ಕೀಟವೂ ಇಷ್ಟು ಬಾರಿ ಜೊತೆಗೂಡಿಸಲ್ಪಟ್ಟಿರುವುದಿಲ್ಲ. ಆದರೆ ಈ ಸಣ್ಣಕೀಟವು ನಿಜವಾಗಿಯೂ ಮನುಷ್ಯನ ಶತ್ರುವಾಗಿದೆಯೋ? ಉತ್ತರಕ್ಕಾಗಿ, ಗೆದ್ದಲಿನ ನಿಕಟವಾದೊಂದು ಅವಲೋಕನವನ್ನು ನಾವು ಮಾಡೋಣ.

ಗೆದ್ದಲು ಕೋಟೆ

ಕೆನ್ಯದಲ್ಲಿ, ಒಬ್ಬನು ಆಗಿಂದಾಗ್ಗೆ ಬಹಳ ಎತ್ತರದ ಗೆದ್ದಲು ಮನೆಗಳನ್ನು ನೋಡುತ್ತಾನೆ. ಇವು ಕೊಳವೆಯಂತಹ ರಚನೆಗಳಾಗಿದ್ದು, ನೆಲದಿಂದ ಮೇಲಕ್ಕೆ 5ರಿಂದ 6 ಮೀಟರುಗಳಷ್ಟು ಎತ್ತರವಾಗಿ ಚಾಚಿಕೊಂಡಿರುತ್ತವೆ. ಒಂದು ಕಾಂಕ್ರೀಟು ಕಿಲ್ಲೆಗೆ ಹೋಲುವ ದಿಬ್ಬಗಳು, ಎಷ್ಟು ನಿಷ್ಕೃಷ್ಟತೆಯೊಂದಿಗೆ ನಿರ್ಮಿಸಲ್ಪಟ್ಟಿವೆಯೆಂದರೆ, ಅದಕ್ಕಾಗಿ ಗೆದ್ದಲುಗಳು ಶ್ರೇಷ್ಠ ವಾಸ್ತುಶಿಲ್ಪಿಗಳು ಎಂದು ಕರೆಯಲ್ಪಟ್ಟಿವೆ. ಈ ಪುಟಾಣಿ ಕೀಟಗಳು ತಮ್ಮ ನಡಿಗೆಯಲ್ಲಿ ತುಂಬ ನಿಧಾನ ಮತ್ತು ಕುರುಡು ಆಗಿರುವುದಾದರೂ ಅಂಥ ಮನತಟ್ಟುವ ಕೋಟೆಗಳನ್ನು ಅವು ಕಟ್ಟಬಲ್ಲವು ಎಂದು ಯೋಚಿಸುವುದು ಕಲ್ಪನೆಯನ್ನು ಅಸಾಧ್ಯವಾಗಿಸುವುದಿಲ್ಲವೋ?

ದಿಬ್ಬದ ಒಳಗೆ ಕೋಣೆಗಳ ಮತ್ತು ಸುರಂಗಗಳ ಒಂದು ವಿಸ್ತಾರವಾದ ಜಾಲವಿದೆ. ಈ ಸಡಗರದ ಕೇಂದ್ರವು ಪರಿಣಾಮಕಾರಿಯಾದ ಚರಂಡಿ ವ್ಯವಸ್ಥೆ, ವಾಯುಸಂಚಾರ, ಮತ್ತು ಹವಾನಿಯಂತ್ರಣವನ್ನು ಕೂಡ ಹೊಂದಿದೆ. ಬಿಸಿಯಾದ ಗಾಳಿಯು ದಿಬ್ಬದ ತುದಿಯಿಂದ ತೆರಪುಗಂಡಿಯ ಮೂಲಕವಾಗಿ ಹೊರಹೋಗುತ್ತದೆ. ತಂಪಾದ ಗಾಳಿಯು ತಳದಿಂದ ಬರುತ್ತದೆ. ಇನ್ನೂ ಹೆಚ್ಚಾಗಿ ತಂಪನ್ನಾಗಿಸುವುದು, ಸರಳವಾದೊಂದು ಬಾಷ್ಪೀಕರಣದ ವ್ಯವಸ್ಥೆಯ ಮೂಲಕ ಮಾಡಲಾಗುತ್ತದೆ: ಗೆದ್ದಲುಗಳು ತಮ್ಮ ಗೋಡೆಗಳ ಮೇಲೆ ಉಗುಳುವ ಮೂಲಕ ಅವುಗಳನ್ನು ನೀರಿನಿಂದ ಚಿಮುಕಿಸುತ್ತವೆ. ನೀರು ಬಾಷ್ಪೀಕರಿಸಿದ ಹಾಗೆ, ಇದು ಗಾಳಿಯನ್ನು ತಂಪಾಗಿಸುತ್ತದೆ ಮತ್ತು ವಾಯುಚಲನೆಗೆ ನೆರವನ್ನೀಯುತ್ತದೆ. ಹೀಗೆ ಗೆದ್ದಲು ಮನೆಯು ಒಂದು ದಿನದ 24 ತಾಸುಗಳಲ್ಲಿ ಹಿತವಾದ 30 ಡಿಗ್ರಿ ಸೆಲಿಯ್ಷಸ್‌ ತಾಪಮಾನದಲ್ಲಿ ಉಳಿಯುತ್ತದೆ!

ಗೆದ್ದಲು ಸಮಾಜ

ಇನ್ನೂ ಹೆಚ್ಚಾಗಿ ಬೆರಗುಗೊಳಿಸುವಂತಹದ್ದು ಗೆದ್ದಲು ಸಮಾಜವಾಗಿದೆ. ಕೆಲವು ಗೆದ್ದಲು ದಿಬ್ಬಗಳು 50 ಲಕ್ಷದಷ್ಟು ನಿವಾಸಿಗಳಿರುವ ದಕ್ಷ ಸಮಾಜ ಅಥವಾ ಕೇರಿಗಳನ್ನು ಒಳಗೂಡುತ್ತವೆ. ಅಸ್ತವ್ಯಸ್ತವಾಗಿರುವುದಕ್ಕೆ ಪ್ರತಿಯಾಗಿ ಕೇರಿಯೊಂದು ಕಾರ್ಯಸಾಧಕತೆಗೆ ಒಂದು ಮಾದರಿಯಾಗಿದೆ. ಗೆದ್ದಲಿನ ಕುಟುಂಬವು ಮೂರು ವರ್ಗಗಳನ್ನು ಒಳಗೊಂಡಿದೆ: ಕೆಲಸಗಾರರು, ಸೈನಿಕರು, ಮತ್ತು ಪುನರ್‌ಉತ್ಪಾದಕಗಳು. ಸಿಮೆಂಟ್‌ಗಾಗಿ ತಮ್ಮ ಜೊಲ್ಲನ್ನು ಉಪಯೋಗಿಸುತ್ತಾ, ದಿಬ್ಬಗಳ ನಿಜವಾದ ನಿರ್ಮಾಣವನ್ನು ಕೆಲಸಗಾರ ಹುಳುಗಳು ಮಾಡುತ್ತವೆ.

ಸೈನಿಕ ಹುಳುಗಳು ಕುಟುಂಬದ ಹೆಚ್ಚಿನ ಆಕ್ರಮಣ ಪ್ರವೃತ್ತಿಯ ಸದಸ್ಯರು. ಬಲವಾದ ದವಡೆಗಳ ಮತ್ತು ಚೂಪಾದ ಹಲ್ಲುಗಳೊಂದಿಗೆ ಶಸ್ತ್ರಸಜ್ಜಿತವಾಗಿರುವ ಇವು, ದಾಳಿಯಿಡುವ ಇರುವೆಗಳಂಥ, ಆಕ್ರಮಣಗಾರರಿಂದ ಕೋಟೆಯನ್ನು ಕಾಪಾಡುತ್ತವೆ. ಕೆಲಸಗಾರ ಹುಳುಗಳು ಆಹಾರವನ್ನು ಅನ್ವೇಷಿಸುತ್ತಾ ದಿಬ್ಬದ ಹೊರಗೆ ಹೋಗುವ ಸಾಹಸವನ್ನು ಕೈಕೊಳ್ಳುವಾಗ, ಅವುಗಳನ್ನು ರಕ್ಷಿಸಲು ಅಂಗರಕ್ಷಕರೋಪಾದಿಯಾಗಿ ಸಹ ಅವು ಕಾರ್ಯ ನಿರ್ವಹಿಸುತ್ತವೆ. ಅಗತ್ಯವಿದ್ದಲ್ಲಿ, ಸೈನಿಕ ವರ್ಗವು ರಾಸಾಯನಿಕ ಯುದ್ಧಕ್ಕೂ ತೊಡಗುತ್ತವೆ; ವಿಶೇಷವಾದ ಒಂದು ರಸಗ್ರಂಥಿಯು, ಮಾರಕವಾದ ಸ್ರಾವವೊಂದನ್ನು ಸ್ರವಿಸುತ್ತಾ, ಪಿಚಕಾರಿ ಪಿಸ್ತೂಲಿನಂತೆ ಕಾರ್ಯ ನಿರ್ವಹಿಸುತ್ತದೆ.

ತಮ್ಮ ಸೇವೆಗಳಿಗಾಗಿ ಸೈನಿಕ ಹುಳುಗಳಿಗೆ ಯಾವ ಪ್ರತಿಫಲವಿದೆ? ಒಳ್ಳೆಯದು, ಇವುಗಳ ದವಡೆಗಳು ಎಷ್ಟು ದೊಡ್ಡದಾಗಿವೆಯೆಂದರೆ, ತಮ್ಮನ್ನು ಉಣಿಸಿಕೊಳ್ಳಲು ಅವುಗಳಿಗೆ ಆಹಾರವನ್ನು ಅಗಿಯುವುದು ಅಸಾಧ್ಯವೆಂಬಂತೆ ತೋರುತ್ತದೆ. ಆದುದರಿಂದ, ಒಂದು ಸೈನಿಕ ಗೆದ್ದಲಿಗೆ ಹಸಿವೆಯಾದಾಗ, ಅದು ತನ್ನ ಸ್ಪರ್ಶಾಂಗದಿಂದ ಕೆಲಸಗಾರನೊಬ್ಬನ ತಲೆಯನ್ನು ಸುಮ್ಮನೆ ಉಜ್ಜುತ್ತದೆ. ಅದರ ಅರ್ಥ, “ನನಗೆ ಉಣಿಸು!” ಎಂದಾಗಿದೆ. ಹೊರಕ್ಕೆ ಕಕ್ಕಿದ ಆಹಾರವನ್ನು ಸೈನಿಕ ಗೆದ್ದಲಿನ ಬಾಯಿಯೊಳಗೆ ಇಡುವ ಮೂಲಕ ಕೆಲಸಗಾರ ಗೆದ್ದಲು ಪ್ರತಿಕ್ರಿಯಿಸುತ್ತದೆ.

ಸಂಪೂರ್ಣ ಅಂಧಕಾರದ ಹೊದಿಕೆಯಲ್ಲಿರುವ, ರಾಜವೈಭವದ ಕೊಠಡಿಯಲ್ಲಿ ಪುನರ್‌ಉತ್ಪಾದಕಗಳು, ಅಂದರೆ ರಾಜ ಮತ್ತು ರಾಣಿ ಜೀವಿಸುತ್ತವೆ. ತನ್ನ ಪುಟ್ಟ ಸಂಗಾತಿಯೊಂದಿಗೆ ಹೋಲಿಸಿದರೆ ರಾಣಿಯು ದೈತ್ಯಾಕಾರದ್ದಾಗಿದೆ. ಮೊಟ್ಟೆಯಿಂದ ಉಬ್ಬಿರುವ ಆಕೆಯ ಹೊಟ್ಟೆ, ಆಕೆಯ ಅಸಾಧಾರಣವಾದ ಪುನರ್‌ಉತ್ಪಾದಕದ ಶಕಿಗ್ತಳಿಗೆ ಪುರಾವೆಯಾಗಿದೆ. ಒಂದು ದಿನದಲ್ಲಿ 4,000ದಿಂದ 10,000ದ ತನಕ ಮೊಟ್ಟೆಗಳನ್ನು ಆಕೆ ಇಡಬಲ್ಲಳೆಂದು ಅಂದಾಜು ಮಾಡಲಾಗುತ್ತದೆ. ಕೆಲವರು ರಾಣಿಯನ್ನು “ಮೊಟ್ಟೆಯಿಡುವ ಒಂದು ಸ್ವಯಂಚಾಲಿತ ಯಂತ್ರ,” ಎಂದು ಕರೆದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಹಾಗಿದ್ದರೂ, ಅವು ಗೆದ್ದಲು ಕೆಲಸಗಾರರ ಒಂದು ತಂಡದಿಂದ ಜತೆಗೂಡಿರುವ ಕಾರಣ, ರಾಜಯೋಗದ ದಂಪತಿಗಳಿಗೆ ಹೆಚ್ಚು ಏಕಾಂತವಿರುವುದಿಲ್ಲ. ರಾಣಿಯ ತತ್‌ಕ್ಷಣದ ಅಗತ್ಯತೆಗಳಿಗಾಗಿ ಕಾಳಜಿ ತೋರಿಸುತ್ತಾ ಮತ್ತು ಆಕೆಗೆ ಆಹಾರವನ್ನು ಒದಗಿಸುತ್ತಾ ಇವು ಆಕೆಯನ್ನು ಸುತ್ತುವರಿಯುತ್ತವೆ. ಮೊಟ್ಟೆಗಳು ಉತ್ಪಾದಿಸಲ್ಪಟ್ಟಂತೆ, ಅವುಗಳನ್ನು ಕೆಲಸಗಾರರು ತಮ್ಮ ದವಡೆಗಳ ನಡುವೆ ಇಟ್ಟುಕೊಂಡು ಕೂಸು ಕೋಣೆಗೆ ತೆಗೆದುಕೊಂಡು ಹೋಗುತ್ತವೆ.

ಮಿತ್ರರೋ ಶತ್ರುಗಳೋ?

ಈ ಕೀಟಗಳು ಮೋಹಕವೆಂಬುದನ್ನು ಕೆಲವರೇ ಅಲ್ಲಗಳೆಯಬಹುದಾದರೂ, ಅಧಿಕಾಂಶ ಜನರು ಅವುಗಳನ್ನು ಇನ್ನೂ ನಾಶಕಾರಕ ಕೀಟಗಳು, ಶತ್ರುಗಳೆಂದು ವೀಕ್ಷಿಸುತ್ತಾರೆ! ಕೆನ್ಯದ ನ್ಯಾಷನಲ್‌ ಮ್ಯುಸೀಯಮ್‌ನ ಅಕಶೇರುಕ ಪ್ರಾಣಿ ವಿಭಾಗದ ಮುಖ್ಯಸ್ಥರಾದ ಡಾ. ರಿಚರ್ಡ್‌ ಬೇಸೀನ್‌ ಎಚ್ಚರ!ಕ್ಕೆ ಹೇಳಿದ್ದು: “ಗೆದ್ದಲುಗಳು ಅತಿ ವಿನಾಶಕಾರಿಯಾದ ಕೀಟಗಳಲ್ಲಿ ಒಂದೆಂದು ಜನರಿಂದ ನೋಡಲ್ಪಡುವುದು ನಿಜವಾಗಿದೆ. ಆದರೆ ವಿಜ್ಞಾನಿಗಳು ಗೆದ್ದಲುಗಳನ್ನು ವಿಭಿನ್ನವಾಗಿ ನೋಡುತ್ತಾರೆ. ತಮ್ಮ ಸ್ವಾಭಾವಿಕ ನೆಲೆಯಲ್ಲಿ, ಗೆದ್ದಲುಗಳು ಸಸ್ಯ ವರ್ಗಕ್ಕೆ ಮತ್ತು ಪ್ರಾಣಿ ಸಮುದಾಯಕ್ಕೆ ಉಪಯುಕ್ತವಾಗಿವೆ.

“ಪ್ರಥಮವಾಗಿ, ಅವು ಸತ್ತ ಸಸ್ಯ ಭಾಗಗಳನ್ನು ಸಾಮಾನ್ಯ ಸಂಯುಕ್ತಗಳಾಗಿ ವಿಘಟಿಸುತ್ತವೆ. ಈ ವಿಧದಲ್ಲಿ, ಸಸ್ಯಗಳಿಗೆ ಅಗತ್ಯವಿರುವ ಪೋಷಣೆಯನ್ನು ಗೆದ್ದಲುಗಳು ಪುನರಾವರ್ತಿಸುತ್ತವೆ. ದ್ವಿತೀಯವಾಗಿ, ಅವು ಒಂದು ಪ್ರಮುಖ ಆಹಾರದ ಆಕರವಾಗಿವೆ. ಬಹುಮಟ್ಟಿಗೆ ಅವು ಎಲ್ಲ ರೀತಿಯ ಹಕ್ಕಿ ಮತ್ತು ಅನೇಕ ಸಸ್ತನಿ, ಸರೀಸೃಪ, ನೆಲಜಲಚರಿ, ಮತ್ತು ಇತರ ಕೀಟಗಳಿಂದ ತಿನ್ನಲ್ಪಡುತ್ತವೆ. ಕೆನ್ಯದ ಪಶ್ಚಿಮ ಮತ್ತು ಉತ್ತರದಲ್ಲಿರುವ ಅನೇಕ ಜನರು ಅವುಗಳ ಮಧುರ ಪುಷ್ಕಲ ಆಸ್ವಾದನೆಯನ್ನು ಸಹ ಆನಂದಿಸುತ್ತಾರೆ; ಅವು ಕೊಬ್ಬು ಮತ್ತು ಪೌಷ್ಟಿಕಾಂಶದಲ್ಲಿ ಬಹಳ ಪುಷ್ಕಲವಾಗಿವೆ. ತೃತೀಯವಾಗಿ, ಮಣ್ಣನ್ನು ಮಾಡಲು ಅವು ಸಹಾಯ ಮಾಡುತ್ತವೆ. ಗೆದ್ದಲುಗಳು ತಮ್ಮ ಗೂಡುಗಳನ್ನು ನಿರ್ಮಿಸಿ ದುರಸ್ತುಗೊಳಿಸುವಾಗ ಒಳ ಮಣ್ಣು ಮತ್ತು ಮೇಲ್ಮೈ ಮಣ್ಣನ್ನು ಬೆರೆಸುತ್ತವೆ. ಅವು ನಿರ್ಜೀವ ಸಸ್ಯದ ವಸ್ತುವಿನ ದೊಡ್ಡ ಚೂರುಗಳನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ವಿಘಟಿಸಿ, ಗೊಬ್ಬರವನ್ನಾಗಿ ಮಾಡುತ್ತವೆ. ಮಣ್ಣಿನ ಮೂಲಕ ಹಾಯ್ದುಹೋಗುವಾಗ, ಅವು ಸಸ್ಯದ ಬೇರುಗಳಿಗೆ ಅಗತ್ಯವಾದ ಗಾಳಿ ಮತ್ತು ನೀರಿಗಾಗಿ ಮಾರ್ಗವನ್ನು ಮಾಡುತ್ತವೆ. ಹೀಗೆ, ಗೆದ್ದಲುಗಳು ಮಣ್ಣಿನ ಹೊರಮೈ ರಚನೆ, ವಿನ್ಯಾಸ, ಮತ್ತು ಫಲ ಶಕ್ತಿಯನ್ನು ಉತ್ತಮಗೊಳಿಸುತ್ತವೆ.”

ಹಾಗಿದ್ದರೂ, ಗೆದ್ದಲುಗಳು ಮಾನವನ ವಾಸಸ್ಥಾನಗಳಿಗೆ ಏಕೆ ದಾಳಿಯಿಡುತ್ತವೆ? ಡ್‌. ಬೇಸೀನ್‌ ಹೇಳುವುದು: “ವಾಸ್ತವವಾಗಿ, ಜನರು ಗೆದ್ದಲಿನ ನೆಲೆಗಳೊಳಗೆ ಹೋಗಿ ಗೆದ್ದಲುಗಳು ಉಪಯೋಗಿಸುತ್ತಿದ್ದ ಸಸ್ಯದ ಮೂಲಸಂಪತ್ತಿನ ಅಧಿಕತಮವನ್ನು ತೆಗೆದುಹಾಕಿದ್ದಾರೆ. ಗೆದ್ದಲುಗಳು ಜೀವಿಸಬೇಕಾದರೆ ತಿನ್ನತಕ್ಕದ್ದು, ಮತ್ತು ಅವು ವಾಡಿಕೆಯಂತೆ ತಿನ್ನುವುದು ಸತ್ತ ಸಸ್ಯಗಳನ್ನು. ಇವನ್ನು ಅವುಗಳಿಂದ ಕಸಿದುಕೊಳ್ಳುವಾಗ, ಗೆದ್ದಲುಗಳು ಮನೆ ಮತ್ತು ಉಗ್ರಾಣಗಳಂಥ, ಮನುಷ್ಯ-ನಿರ್ಮಿತ ರಚನೆಗಳನ್ನು ತಿನ್ನುತ್ತವೆ.”

ಆದುದರಿಂದ ಗೆದ್ದಲು ಕೆಲವೊಮ್ಮೆ ಒಂದು ನಾಶಕಾರಕವಾದ ಕೀಟವಾಗಿ ತೋರುವುದಾದರೂ, ಖಂಡಿತವಾಗಿಯೂ ಅದು ನಮ್ಮ ಶತ್ರುವಾಗಿರುವುದಿಲ್ಲ. ದಿಟವಾಗಿ, ಇದು ಯೆಹೋವನ ಸೃಷ್ಟಿಶೀಲತೆಯ ತೇಜಸ್ಸಿನ ಸ್ತಂಭೀಭೂತಗೊಳಿಸುವ ಒಂದು ಉದಾಹರಣೆಯಾಗಿದೆ. (ಕೀರ್ತನೆ 148:10, 13; ರೋಮಾಪುರ 1:20) ಮತ್ತು ಬರಲಿರುವ ದೇವರ ಹೊಸ ಲೋಕದಲ್ಲಿ, ಪ್ರಾಣಿ ಲೋಕದೊಂದಿಗೆ ಸಾಮರಸ್ಯದಲ್ಲಿ ಜೀವಿಸುವುದನ್ನು ಮಾನವನು ಕಲಿಯುವ ಹಾಗೆಯೇ, ಪುಟಾಣಿ ಗೆದ್ದಲನ್ನು ಒಂದು ಶತ್ರುವೋಪಾದಿಯಲ್ಲ, ಮಿತ್ರನೋಪಾದಿ ಅವನು ಕಾಣಲಿರುವನು ಎಂಬುದು ನಿಸ್ಸಂದೇಹ.—ಯೆಶಾಯ 65:25.

[ಪುಟ 31 ರಲ್ಲಿರುವ ಚಿತ್ರಗಳು]

ದುರ್ಗದಂಥ ಒಂದು ಲಾಕ್ಷಣಿಕ ಗೆದ್ದಲು ದಿಬ್ಬ

ಒಳಚಿತ್ರ: ಕೆಲಸಗಾರ ಗೆದ್ದಲುಗಳು

[ಪುಟ 32 ರಲ್ಲಿರುವ ಚಿತ್ರ]

ಸೈನಿಕ ಗೆದ್ದಲು, ತನ್ನ ದೊಡ್ಡ ತಲೆ ಮತ್ತು ಮಾರಕ ರಾಸಾಯನಿಕಗಳನ್ನು ಉತ್ಪಾದಿಸುವ ರಸಗ್ರಂಥಿಗಳೊಂದಿಗೆ ಗೆದ್ದಲು ಕೇರಿಯನ್ನು ರಕ್ಷಿಸಲು, ಸಜ್ಜಿತವಾಗಿದೆ

[ಪುಟ 32 ರಲ್ಲಿರುವ ಚಿತ್ರ]

ಮೊಟ್ಟೆಗಳಿಂದ ಹೊಟ್ಟೆ ಉಬ್ಬಿರುವ ರಾಣಿ

[ಪುಟ 32 ರಲ್ಲಿರುವ ಚಿತ್ರ]

ಆಕೆಯ ಜತೆಗಾರರ ಸಿಬ್ಬಂದಿ ವರ್ಗದೊಂದಿಗೆ ರಾಣಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ