ಬೈಬಲಿನ ದೃಷ್ಟಿಕೋನ
ನೀವು ಏನು ನಂಬುತ್ತೀರೆಂಬುದು ಪ್ರಾಮುಖ್ಯವಾಗಿದೆಯೋ?
“ಸತ್ಯವಾಗಿರಬೇಕೆಂದು ಮನುಷ್ಯನು ಇಷ್ಟಪಡುವಂತಹದ್ದನ್ನೇ ಆತನು ನಂಬಲು ಇಷ್ಟಪಡುತ್ತಾನೆ.”—ಫ್ರಾನ್ಸಿಸ್ ಬೇಕನ್, 1561-1626, ಇಂಗ್ಲಿಷ್ ಪ್ರಬಂಧ ಲೇಖಕ ಮತ್ತು ರಾಜನೀತಿಜ್ಞ.
ಧಾರ್ಮಿಕ ತತ್ತಗ್ವಳ ಸಂಬಂಧದಲ್ಲಿ, ‘ಮೇಲೆ ಯಾರೋ ಒಬ್ಬನಿದ್ದಾನೆಂದು’ ಒಬ್ಬನು ಪ್ರಾಮಾಣಿಕವಾಗಿ ನಂಬುವಲ್ಲಿ ಮತ್ತು ತನ್ನ ಜೊತೆಮಾನವನನ್ನು ಪ್ರೀತಿಸುವಲ್ಲಿ, ಒಬ್ಬನು ಬೇರೇನನ್ನು ನಂಬುತ್ತಾನೋ ಅದು ನಿಜವಾಗಿಯೂ ಪ್ರಾಮುಖ್ಯವಲ್ಲವೆಂದು ಅನೇಕ ಜನರಿಗೆ ಅನಿಸುತ್ತದೆ. ದೇವರ, ಆತನ ಉದ್ದೇಶ ಮತ್ತು ಆತನನ್ನು ಆರಾಧಿಸುವ ವಿಧದ ಕುರಿತಾಗಿ ಧಾರ್ಮಿಕ ಗುಂಪುಗಳು ಸಮರ್ಥಿಸುವ ಪರಸ್ಪರ ವಿರುದ್ಧವಾದ ಕಲ್ಪನೆಗಳನ್ನು ನೋಡಿ, ಒಂದೇ ಮನುಷ್ಯನಿಂದ ಧರಿಸಲ್ಪಟ್ಟ ವಿಭಿನ್ನ ಶೈಲಿಗಳ ಉಡುಪುಗಳಂತೆ ವ್ಯತ್ಯಾಸಗಳು ಕೇವಲ ಬಾಹ್ಯವೆಂದು ಕೆಲವರು ತೀರ್ಮಾನಿಸಬಹುದು. ಅಂತಹ ಭಿನ್ನತೆಗಳ ವಿಷಯದಲ್ಲಿ ಒಂದು ದೊಡ್ಡ ವಾದಾಂಶವನ್ನು ಮಾಡುವವರು ನಿಜ ಕ್ರೈಸ್ತತ್ವದ ಆಶಯವನ್ನು ಪೂರ್ಣವಾಗಿ ತಪ್ಪಿದ್ದಾರೆಂದೂ ಅವರು ಭಾವಿಸಬಹುದು.
ಧಾರ್ಮಿಕ ಬೋಧನೆಗಳ ಎಲ್ಲಾ ಚರ್ಚೆಗಳು ಪ್ರಯೋಜನಕರವಲ್ಲವೆಂದು ಶಾಸ್ತ್ರವಚನಗಳು ಅಂಗೀಕರಿಸುತ್ತವೆ. ಉದಾಹರಣೆಗಾಗಿ, ತಿಮೊಥೆಯನಿಗೆ ಬರೆದ ತನ್ನ ಪ್ರೇರಿತ ಪತ್ರಗಳಲ್ಲಿ, ಅಪೊಸ್ತಲ ಪೌಲನು “ನಿತ್ಯವಾದ ಕಚಾಟ್ಚ”ಗಳನ್ನು ಕೆರಳಿಸುತ್ತಿದ್ದ ಮನುಷ್ಯರನ್ನು ಸೂಚಿಸಿ ಬರೆದನು. ಪೌಲನು ಅವರನ್ನು “ಕುತರ್ಕ ವಾಗ್ವಾದಗಳನ್ನು ಮಾಡುವ ಭ್ರಾಂತಿ”ಯುಳ್ಳವರೆಂದು ವರ್ಣಿಸಿದನು. (1 ತಿಮೊಥೆಯ 6:4, 5) ಅವನು ತಿಮೊಥೆಯನಿಗೆ “ಮೂಢರ ಬುದ್ಧಿಯಿಲ್ಲದ ವಿಚಾರಗಳು ಜಗಳಗಳಿಗೆ ಕಾರಣವಾಗಿವೆ ಎಂದು ತಿಳಿದು ಅವುಗಳ ಗೊಡವೆಗೆ ಹೋಗ”ದಂತೆ ಮತ್ತು ಸಭೆಗಳಿಗೆ “ಯಾವ ಪ್ರಯೋಜನಕ್ಕೂ ಬಾರದ ವಾಗ್ವಾದಗಳನ್ನು ಮಾಡ”ದಿರಲು ಉಪದೇಶಿಸುವಂತೆ ಸಲಹೆ ನೀಡಿದನು. (2 ತಿಮೊಥೆಯ 2:14, 23) ನಮ್ಮ ಸಮಯದ ಹೆಚ್ಚಿನ ಧಾರ್ಮಿಕ ವಾಗ್ವಾದವು ಈ ವರ್ಣನೆಯನ್ನು ಹೋಲುತ್ತದೆ ಮತ್ತು ಅರ್ಥವಿಲ್ಲದ ಸಮಯನಷ್ಟವಾಗಿ ಪರಿಣಮಿಸಿದೆ.
ಧಾರ್ಮಿಕ ನಂಬಿಕೆಗಳ ಎಲ್ಲಾ ಚರ್ಚೆಗಳು ಅರ್ಥವಿಲ್ಲದವುಗಳೆಂದು ಇದು ಅರ್ಥೈಸುತ್ತದೋ? ಒಳ್ಳೇದು, ಕೇವಲ ಕೆಲವು ಬಟ್ಟೆಗೆಳು ಧರಿಸಲು ಅಯೋಗ್ಯವಾಗಿರುವದರಿಂದ, ನಾವು ಬಟ್ಟೆ ತೊಡುವುದನ್ನೇ ಬಿಟ್ಟುಬಿಡುವುದಿಲ್ಲ, ಅಲ್ಲವೇ? ಹೀಗಿರುವಾಗ ಕೇವಲ ಕೆಲವು ತಾತ್ತಿಕ್ವ ಪ್ರಶ್ನೆಗಳು ಪರಿಗಣನೆಗೆ ಅನರ್ಹವಾಗಿರುವದರಿಂದ ಧಾರ್ಮಿಕ ನಂಬಿಕೆಗಳ ಇಡೀ ವಿಷಯವನ್ನೇ ಅಪ್ರಾಮುಖ್ಯವಾದದ್ದೆಂದು ಏಕೆ ಬಿಟ್ಟುಕೊಡಬೇಕು? ತತ್ತಗ್ವಳ ವಿಷಯವು, ಚಿಂತೆಯ ಒಂದು ಅತಿ ಪ್ರಾಮುಖ್ಯ ವಿಷಯವಾಗಿ ಪೌಲನು ಪರಿಗಣಿಸಿದನೆಂದು ಮೇಲೆ ಉಲ್ಲೇಖಿಸಲ್ಪಟ್ಟಿರುವ ಆತನ ಮಾತುಗಳ ಪೂರ್ವಾಪರವು ತೋರಿಸುತ್ತದೆ. ಸುಳ್ಳು ಬೋಧನೆಗಳು ಒಬ್ಬನು ನಂಬಿಕೆಯಿಂದ ತಿರುಗಿಬೀಳುವುದರಲ್ಲಿ ಪರಿಣಮಿಸಸಾಧ್ಯವಿದೆಯೆಂದು ಆತನು ಪದೇ ಪದೇ ಎಚ್ಚರಿಸಿದನು, ಮತ್ತು ತಿಮೊಥೆಯನು “ಕೆಲವರಿಗೆ—ನೀವು ಬೇರೆ ಉಪದೇಶವನ್ನು ಮಾಡಬಾರದೆಂತಲೂ . . . ಆಜ್ಞಾಪಿಸಬೇಕೆಂಬದಾಗಿ” ಅವನು ಉಪದೇಶಿಸಿದನು. (1 ತಿಮೊಥೆಯ 1:3-7; 4:1; 6:3-5; 2 ತಿಮೊಥೆಯ 2:14-18, 23-26; 4:3, 4) ಆ ಪ್ರಥಮ ಶತಮಾನದ ಕ್ರೈಸ್ತರು ಏನನ್ನು ನಂಬಿದರೋ ಅದು ಪ್ರಾಮುಖ್ಯವಾಗಿರದಿದ್ದಲ್ಲಿ ಅವನು ನಿಶ್ಚಯವಾಗಿಯೂ ಅಂತಹ ಅರ್ಥವತಾದ್ತ ಹೇಳಿಕೆಗಳನ್ನು ಮಾಡುತ್ತಿರಲಿಲ್ಲ.
ಹಾಗಿರುವಲ್ಲಿ, ತತ್ತಗ್ವಳ ಮೇಲಿನ ಪ್ರಶ್ನೆಗಳನ್ನು ತಳ್ಳಿಹಾಕುವ ಸಲಹೆ ಯಾಕೆ? ಅದು ಯಾಕಂದರೆ ಪೌಲನ ದಿನದಲ್ಲಿ ನಿರ್ದಿಷ್ಟ ಮನುಷ್ಯರು—ಅವನಿಂದ “ಬುದ್ಧಿಗೆಟ್ಟು ಸತ್ಯಹೀನ”ರಾಗಿರುವವರಾಗಿ ವರ್ಣಿಸಲ್ಪಟ್ಟವರು—ಇತರರ ನಂಬಿಕೆಯನ್ನು ಉರುಳಿಸಬೇಕೆಂಬ ಏಕಮಾತ್ರ ಉದ್ದೇಶದಿಂದ ಸೈದ್ಧಾಂತಿಕ ವಿವಾದಗಳನ್ನು ಎಬ್ಬಿಸುತ್ತಿದ್ದರು. (1 ತಿಮೊಥೆಯ 4:5) ಆ ಭ್ರಷ್ಟ ಮನುಷ್ಯರಿಂದ ಎಬ್ಬಿಸಲ್ಪಟ್ಟ ಪ್ರಶ್ನೆಗಳ ಕುರಿತಾಗಿಯೇ ಪೌಲನು ತಿಮೊಥೆಯನಿಗೆ ಧಾರ್ಮಿಕ ನಂಬಿಕೆಗಳ ಕುರಿತಾದ ಚರ್ಚೆಗಳನ್ನು ಹೋಗಲಾಡಿಸಲು ಸಲಹೆಕೊಟ್ಟನು.
ನಂಬಿಕೆಗಳು ನಡತೆಯನ್ನು ಪ್ರಭಾವಿಸುತ್ತವೊ?
ಆದರೂ ಕೆಲವರು, ನಾವು ಯಾವ ರೀತಿಯ ಜನರಾಗುತ್ತೇವೊ—ನಮ್ಮ ವೈಯಕ್ತಿಕ ಗುಣಗಳು ಮತ್ತು ನಡತೆಯ ಮೇಲೆ—ನಮ್ಮ ಧಾರ್ಮಿಕ ನಂಬಿಕೆಗಳು ಹೆಚ್ಚು ಪ್ರಭಾವವನ್ನು ಬೀರುತ್ತವೊ ಎಂದು ಪ್ರಶ್ನಿಸಬಹುದು. ಅವರು ನಂಬಿಕೆಗಳನ್ನು ಮತ್ತು ನಡತೆಯನ್ನು, ಧರಿಸುವವನ ಇಷ್ಟಕ್ಕನುಸಾರ ಮಿಶ್ರ ಮಾಡಬಹುದಾದ ಅಥವಾ ಸರಿಹೊಂದಿಸಬಹುದಾದ ಒಂದು ಕೋಟು ಮತ್ತು ಪ್ಯಾಂಟ್ಗಳಂತೆ ಎರಡು ಪ್ರತ್ಯೇಕ ಮತ್ತು ಸಂಬಂಧವಿಲ್ಲದ ವಸ್ತುಗಳಾಗಿ ವೀಕ್ಷಿಸಬಹುದು. ಬೈಬಲಿನಲ್ಲಿಯಾದರೋ, ನಂಬಿಕೆಗಳು ಮತ್ತು ನಡತೆಯು ಹೆಚ್ಚಿನಂಶ ಸರಿಹೊಂದಿಸುವ ಒಂದೇ ಜೋಡಿಯಾಗಿ ಬರುವ ಒಂದು ಕೋಟಿನಂತೆ ಇವೆ.
ನಾವೇನನ್ನು ನಂಬುತ್ತೇವೊ ಮತ್ತು ನಾವು ಯಾವ ರೀತಿಯ ವ್ಯಕ್ತಿಗಳಾಗುತ್ತೇವೊ ಅದರ ನಡುವೆ ಒಂದು ನೇರವಾದ ಸಂಬಂಧವನ್ನು ಬೈಬಲ್ ಪ್ರಕಟಪಡಿಸುತ್ತದೆ. ಯೇಸುವಿನ ದಿನದ ಸ್ವ-ನೀತಿಯ ಫರಿಸಾಯರು, ನಡತೆಯನ್ನು ಪ್ರಭಾವಿಸುವ ತಪ್ಪುದಾರಿಗೆಳೆಯುವ ನಂಬಿಕೆಗಳ ಒಂದು ಉದಾಹರಣೆಯಾಗಿದ್ದರು. (ಮತ್ತಾಯ 23:1-33; ಲೂಕ 18:9-14) ಇನ್ನೊಂದು ಕಡೆಯಲ್ಲಿ, ಕೊಲೊಸ್ಸೆ 3:10 (NW) ಬುದ್ಧಿ ಹೇಳುವುದು: “ನಿಷ್ಕೃಷ್ಟ ಜ್ಞಾನದ ಮೂಲಕ, ಅದನ್ನು ಸೃಷ್ಟಿಸಿದಾತನ ಸ್ವರೂಪಕ್ಕನುಸಾರವಾಗಿ ಹೊಸದಾಗಿ ಮಾಡಲ್ಪಡುತ್ತಿರುವ ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ.” ಒಂದು ದೇವಭಕ್ತಿಯ ಜೀವನವನ್ನು ನಡಿಸುವುದು ದೇವರ ಕುರಿತಾದ ನಿಷ್ಕೃಷ್ಟ ಜ್ಞಾನದೊಂದಿಗೆ ಜೋಡಿಸಲ್ಪಟ್ಟಿರುವುದನ್ನು ಗಮನಿಸಿರಿ.
ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ 20 ಸಲ ತೋರಿಬರುವ “ನಿಷ್ಕೃಷ್ಟ ಜ್ಞಾನ”ವೆಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು, ನಿಖರ, ನಿಷ್ಕೃಷ್ಟ ಅಥವಾ ಪೂರ್ಣ ಜ್ಞಾನಕ್ಕೆ ಸೂಚಿಸುತ್ತದೆ. ಗ್ರೀಕ್ ವಿದ್ವಾಂಸ ನತಾನೇಲ್ ಕಲ್ವರ್ವೆಲ್ ಅದನ್ನು “ನಾನು ಈ ಮುಂಚೆ ತಿಳಿದಿದ್ದ ಒಂದು ವಿಷಯದೊಂದಿಗೆ ಹೆಚ್ಚು ಪರಿಚಿತನಾಗುವುದು; ದೂರದಿಂದ ನಾನು ಈ ಮುಂಚೆ ನೋಡಿದ್ದಂತಹ ಒಂದು ವಸ್ತುವಿನ ಹೆಚ್ಚು ನಿಖರವಾದ ದೃಷ್ಟಿಸುವಿಕೆ”ಯಾಗಿ ವರ್ಣಿಸುತ್ತಾನೆ. ಒಬ್ಬ ಅಕ್ಕಸಾಲಿಗನು ಒಂದು ಅಮೂಲ್ಯ ರತ್ನವನ್ನು ಅದರ ಗುಣಗಳ ಮತ್ತು ಮೌಲ್ಯದ ಬೆಲೆಕಟ್ಟಲಿಕ್ಕಾಗಿ ಅದನ್ನು ಪರಿಶೀಲಿಸುವಂತೆಯೇ, ಒಬ್ಬ ಕ್ರೈಸ್ತನು ತಾನು ಸೇವಿಸುತ್ತಿರುವ ದೇವರ ಕುರಿತಾದ ನಿಖರವಾದ, ನಿಷ್ಕೃಷ್ಟ ಮತ್ತು ಪೂರ್ಣ ಜ್ಞಾನವನ್ನು ಪಡೆಯಲಿಕ್ಕಾಗಿ ದೇವರ ವಾಕ್ಯವನ್ನು ಪರಿಶೀಲಿಸತಕ್ಕದ್ದು. ದೇವರ ವ್ಯಕ್ತಿತ್ವ, ಆತನ ಉದ್ದೇಶಗಳು, ಆತನ ಮಟ್ಟಗಳು, ಮತ್ತು “ಸ್ವಸ್ಥಬೋಧನಾವಾಕ್ಯಗಳ ಮಾದರಿ”ಯನ್ನು ಉಂಟುಮಾಡುವ ಎಲ್ಲಾ ಬೋಧನೆಗಳನ್ನು ತಿಳಿಯುವುದನ್ನು ಇದು ಒಳಗೊಳ್ಳುತ್ತದೆ. ಇದು ‘ಮೇಲೆ ಯಾರೋ ಒಬ್ಬನು ಇದ್ದಾನೆ’ ಎಂಬದನ್ನು ಕೇವಲ ನಂಬುವುದಕ್ಕಿಂತ ತುಂಬ ಭಿನ್ನವಾಗಿದೆ.—2 ತಿಮೊಥೆಯ 1:13.
ದೇವರನ್ನು ಕೇವಲ ದೂರದಿಂದಲೇ ತಿಳಿದಿರುವಾಗ ಪರಿಣಮಿಸುವ ಫಲದ ವಿಧದ ಕುರಿತಾದ ಒಂದು ಉದಾಹರಣೆಯು ರೋಮಾಪುರದವರಿಗೆ ಬರೆಯಲ್ಪಟ್ಟ ಪ್ರೇರಿತ ಪತ್ರದ ಮೊದಲನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿದೆ. ಅಲ್ಲಿ, “ದೇವರನ್ನು ತಿಳಿದರೂ, . . . ನಿಷ್ಕೃಷ್ಟ ಜ್ಞಾನದಲ್ಲಿ ದೇವರನ್ನು ಹಿಡಿದುಕೊಂಡಿರಲು ಸಮ್ಮತಿ”ಸದಿದ್ದ ನಿರ್ದಿಷ್ಟ ಮನುಷ್ಯರಿಗೆ ಸೂಚಿಸಲಾಗಿದೆ. ಅವರ ದೋಷಯಕ್ತ ನಂಬಿಕೆಗಳ ಫಲಿತಾಂಶಗಳು ಅಪೊಸ್ತಲ ಪೌಲನಿಂದ ತಿಳಿಸಲ್ಪಟ್ಟಿದೆ: “ಅಲ್ಲದ ಕೃತ್ಯಗಳನ್ನು ನಡಿಸುವವರಾಗುವಂತೆ ದೇವರು ಅವರನ್ನು ಅನಿಷ್ಟಭಾವಕ್ಕೆ ಒಪ್ಪಿಸಿದನು. ಹೇಗಂದರೆ ಅವರು ಸಕಲವಿಧವಾದ ಅನ್ಯಾಯ ದುರ್ಮಾರ್ಗತನ ಲೋಲುಪ್ತಿ ದುಷ್ಟತ್ವಗಳಿಂದಲೂ ಹೊಟ್ಟೇಕಿಚ್ಚು ಕೊಲೆ ಜಗಳ ಮೋಸ ಹಗೆತನಗಳಿಂದಲೂ ತುಂಬಿದವರಾದರು. ಅವರು ಕಿವಿ ಊದುವವರೂ ಚಾಡಿಹೇಳುವವರೂ ದೇವರನ್ನು ದ್ವೇಷಿಸುವವರೂ ಸೊಕ್ಕಿನವರೂ ಅಹಂಕಾರಿಗಳೂ ಬಡಾಯಿಕೊಚ್ಚುವವರೂ ಕೇಡನ್ನು ಕಲ್ಪಿಸುವವರೂ ತಂದೆತಾಯಿಗಳ ಮಾತನ್ನು ಕೇಳದವರೂ ವಿವೇಕವಿಲ್ಲದವರೂ ಮಾತಿಗೆ ತಪ್ಪುವವರೂ ಮಮತೆಯಿಲ್ಲದವರೂ ಕರುಣೆಯಿಲ್ಲದವರೂ ಆದರು.”—ರೋಮಾಪುರ 1:21, 28-31.
ಪ್ರಶ್ನಾತೀತವಾಗಿ, ಆ ಮನುಷ್ಯರಿಂದ ಎತ್ತಿಹಿಡಿಯಲ್ಪಟ್ಟಿದ್ದ ನಂಬಿಕೆಗಳು, ಕ್ರೈಸ್ತ ಜೀವಿತಗಳನ್ನು ನಡಿಸುವ ಅವರ ಸಾಮರ್ಥ್ಯವನ್ನು ನೇರವಾಗಿ ಪ್ರಭಾವಿಸಿದವು. ಅಂತೆಯೇ ಇಂದು, ನಂಬಿಕೆಗಳು ಮತ್ತು ನಡತೆಯು ಹೊಲಿಗೆ ಜೋಡಣೆಗಳಿಲದ್ಲ ಒಂದು ಉಡುಪಿಗೆ ಹೋಲಿಸಸಾಧ್ಯವಿದೆ, ಅವು ವಿಂಗಡಿಸಲಾರದಂತಹ ರೀತಿಯಲ್ಲಿ ಹೆಣೆಯಲ್ಪಟ್ಟಿವೆ. ಈ ಕಾರಣದಿಂದ, ದೇವರ ಅನುಗ್ರಹವನ್ನು ಗಳಿಸಲು ಆಶಿಸುವವರೆಲ್ಲರು ತಮ್ಮ ಧಾರ್ಮಿಕ ನಂಬಿಕೆಗಳು ನಿಜವಾಗಿಯೂ ಸತ್ಯ, ದೇವರ ವಾಕ್ಯದ ಮೇಲೆ ಭದ್ರವಾಗಿ ಆಧರಿಸಿವೆಯೆಂಬದನ್ನು ಖಚಿತಪಡಿಸಬೇಕು. ಯಾಕಂದರೆ “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ನಿಷ್ಕೃಷ್ಟ ಜ್ಞಾನಕ್ಕೆ ಸೇರಬೇಕೆಂಬದು [ದೇವರ] ಚಿತ್ತವಾಗಿದೆ.”—1 ತಿಮೊಥೆಯ 2:4, NW.
[ಪುಟ 36 ರಲ್ಲಿರುವ ಚಿತ್ರ]
ಫರಿಸಾಯನ ಸ್ವನೀತಿಯು ಆತನ ನಂಬಿಕೆಗಳನ್ನು ಪ್ರತಿಬಿಂಬಿಸಿತು