ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 8/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1995
  • ಅನುರೂಪ ಮಾಹಿತಿ
  • ಆರ್‌ಏಚ್‌ ಫ್ಯಾಕ್ಟರ್‌ ಮತ್ತು ನೀವು
    ಎಚ್ಚರ!—1994
  • ಮುಂದೆಂದೂ ಒಂದು ಬಂಡೆಯೊ ದ್ವೀಪವೊ ಆಗಿರುವುದಿಲ್ಲ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1995
ಇನ್ನಷ್ಟು
ಎಚ್ಚರ!—1995
g95 8/8 ಪು. 30

ನಮ್ಮ ವಾಚಕರಿಂದ

ನೇರವಾದ ವೃತ್ತಾಂತಕ್ಕೆ ಪ್ರತಿಕ್ರಿಯೆ ಲ್ಯಾರಿ ರೂಬನ್‌ ಅವರ “ಮುಂದೆಂದೂ ಒಂದು ಬಂಡೆಯೊ ದ್ವೀಪವೊ ಆಗಿರುವುದಿಲ್ಲ” (ದಶಂಬರ 8, 1994) ಎಂಬ ಮನೋವೇಧಕ ಕಥೆಗಾಗಿ ನಿಮಗೆ ತುಂಬ ಉಪಕಾರ. ಹೆಚ್ಚಿನವರು ಪೂರ್ವದಲ್ಲಿ ಕಷ್ಟಾನುಭವಿಸಿದವರನ್ನು ಗಣನೆಗೆ ತೆಗೆದುಕೊಳ್ಳಲು ಅನೇಕವೇಳೆ ತಪ್ಪಿಹೋಗುತ್ತಾರೆ. ನನಗೆ ನಿಜವಾಗಿಯೂ ನಂಬಿಕೆಯಿರುವಲ್ಲಿ ನಾನು ಕಳವಳಗೊಳ್ಳಲಾರೆ ಎಂದು ನನ್ನ ಸ್ವಂತ ಮಗನೇ ನನಗೊಮ್ಮೆ ಹೇಳಿದ್ದ! ಆದರೆ ಎಲ್ಲರಿಗೂ ಹಿಂದಿನದನ್ನು ಮರೆತುಬಿಡಲು ಸಾಧ್ಯವಿಲ್ಲ. ಈ ಬಗೆಯ ಮಾನವ ಅನುಭವಗಳನ್ನು ಪ್ರದರ್ಶಿಸುವುದನ್ನು ದಯವಿಟ್ಟು ಮುಂದುವರಿಸಿರಿ. ಅದು ಕೆಲವು ಹೃದಯಗಳನ್ನು ಮೃದುಮಾಡುವುದೆಂದು ನಾನು ಬೇಡಿಕೊಳ್ಳುತ್ತೇನೆ.

ಎಮ್‌. ಎಲ್‌., ಬ್ರಿಟನ್‌

ನನ್ನ ಕೃತಜ್ಞತೆಗಳನ್ನು ವ್ಯಕ್ತಪಡಿಸಲು ಪದಗಳಿಗಾಗಿ ನಾನು ಪ್ರಯಾಸಪಡುತ್ತೇನೆ. ಹಿಂದಿನ ಅಪಪ್ರಯೋಗಗಳಿಂದ ಕಲೆಗೊಂಡಿರುವವರನ್ನು ನಾವು ಎಷ್ಟೋವೇಳೆ ಸಂಧಿಸುತ್ತೇವೆ. ಸಭೆಯೊಳಗೆ ಕಾರ್ಯಮಾಡುವಂತೆ ಮತ್ತು ಯೆಹೋವನೊಂದಿಗೆ ಒಂದು ಸಂಬಂಧವನ್ನು ವಿಕಸಿಸುವಂತೆ ಅವರಿಗೆ ಸಹಾಯ ಮಾಡುವುದು ಒಂದು ಕಷ್ಟಸಾಧ್ಯವಾದ ಪಂಥಾಹ್ವಾನವಾಗಿದೆ. ಅಂಥವರಿಗೆ ಪ್ರೀತಿಯ ಅನಿಸಿಕೆ ಮತ್ತು ಭರವಸೆಯನ್ನು ಕಲಿಯುವುದು ಸಾಧ್ಯವೆಂದು ಲೇಖನವು ತೋರಿಸಿತು.

ಜೆ. ಡಿ., ಕೆನಡ

25 ವರ್ಷಗಳಿಂದ ನಾನು ಒಬ್ಬ ಕ್ರೈಸ್ತಳಾಗಿದ್ದೇನೆ. ನನ್ನ ಬುದ್ಧಿಶಕ್ತಿಯಿಂದ ನಾನು ನಂಬಿಗಸ್ತಳಾಗಿ ದೇವರನ್ನು ಸೇವಿಸಿದ್ದೇನೆ, ಆದರೆ ನನ್ನ ಹೃದಯ ಕಲ್ಲಿನದ್ದೆಂಬ ಅನಿಸಿಕೆ ಉಂಟಾಗಿದೆ. ನಾನು ಒಂದು ಮದ್ಯವ್ಯಸನಿ ಕುಟುಂಬದಲ್ಲಿ ಬೆಳೆದೆ ಮತ್ತು ಹೊಡೆತಗಳನ್ನು, ಲೈಂಗಿಕ ಅಪಪ್ರಯೋಗವನ್ನು, ಹಾಗೂ ಇತರ ಗಾಯಗಳನ್ನು ಅನುಭವಿಸಿದೆ. ಯೆಹೋವನು ನನಗಾಗಿ ಬಹಳಷ್ಟನ್ನು ಮಾಡಿದ್ದಾನೆ, ಆದರೆ ಆತನಿಗಾಗಿ ಪ್ರೀತಿಯ ಅನಿಸಿಕೆ ನನ್ನಲ್ಲಿ ಮೂಡುವುದಿಲ್ಲ. ಬಹುಶಃ ಒಂದು ದಿನ ನಾನು ನನ್ನ ಗತಕಾಲದ ಕುರಿತು ಅಳಲು ಮತ್ತು ಅನಿಸಿಕೆಗಳನ್ನು ಪಡೆದಿರಲು ಸಾಧ್ಯವಾಗುವುದೆಂಬ ಒಂದಿಷ್ಟು ನಿರೀಕ್ಷೆಯನ್ನು ಲ್ಯಾರಿ ರೂಬನ್‌ರ ಕಥೆಯು ನನಗೆ ನೀಡಿತು. ಈಗ ಲ್ಯಾರಿ ರೂಬನ್‌ ಪಡೆದಿರುವ ಪ್ರೀತಿ, ಭರವಸೆ, ಮತ್ತು ಅಂಗೀಕಾರವನ್ನು ಬಹುಶಃ ನಾನು ಸಹ ಪಡೆಯುವೆನು.

ಎ. ಎಫ್‌., ಅಮೆರಿಕ

ಹಿಂದಿನ ಕೆಲವು ಜೀವನ ಕಥೆಗಳು, ಬಲಹೀನತೆಗಳು, ಆಂತರಿಕ ಕ್ಷೋಭೆಗಳಿರದ, ಭಯರಹಿತ ಲೋಕಾತೀತ ಪುರುಷರಂತೆ ತೋರಿದ ಜನರ ಬಗ್ಗೆ ಇದ್ದವು. ಲ್ಯಾರಿ ರೂಬನ್‌ರ ಕಥೆಯನ್ನು ಭಿನ್ನವಾದ ದೃಷ್ಟಿಕೋನದಿಂದ ಹೇಳಲಾಯಿತು. ಅವರು ಪ್ರಾಮಾಣಿಕರಾಗಿದ್ದರು ಮತ್ತು ತಮ್ಮ ಅಂತರಂಗದ ಅನಿಸಿಕೆಗಳನ್ನು ಬಯಲುಪಡಿಸಿದರು. ಈ ರೀತಿಯ ಜೀವನ ಕಥೆಗಳು ನಮಗೆ ನೈಜವಾಗಿವೆ ಯಾಕೆಂದರೆ ಅವು ನಮ್ಮ ಸ್ವಂತ ಜೀವಿತಗಳಲ್ಲಿ ಸಂಭವಿಸುವ ವಿಷಯಗಳ ಕುರಿತಾಗಿವೆ.

ಎಫ್‌. ಡಿ. ಎಸ್‌., ಬ್ರೆಸಿಲ್‌

ಆರ್‌ಏಚ್‌ ಫ್ಯಾಕ್ಟರ್‌ ಇಂತಹ ವಾದಾಸ್ಪದ ವಿಷಯಗಳನ್ನು ಎಚ್ಚರ! ಪತ್ರಿಕೆಯು ಪ್ರತಿಪಾದಿಸುವ ವಿಧ ನಿಜವಾಗಿಯೂ ಪ್ರಶಂಸನೀಯ. “ಆರ್‌ಏಚ್‌ ಫ್ಯಾಕ್ಟರ್‌ ಮತ್ತು ನೀವು” (ದಶಂಬರ 8, 1994) ಎಂಬ ಲೇಖನದಲ್ಲಿ, ತೆಗೆದುಕೊಳ್ಳಲ್ಪಟ್ಟಂತಹ ವಿಷಯಪ್ರವೇಶದ ರೀತಿಯು, ಒಂದು ಧಾರ್ಮಿಕ ಮತಭ್ರಾಂತ ರೀತಿಯದ್ದಾಗಿರಲಿಲ್ಲ. ಕಾಲೋಚಿತವಾದ ವೈದ್ಯಕೀಯ ಪದಪ್ರಯೋಗವನ್ನು ಉಪಯೋಗಿಸಿದರೂ, ಸ್ಪಷ್ಟವಾಗಿದ ಮತ್ತು ಅರ್ಥಮಾಡಿಕೊಳ್ಳಬಹುದಾದ ಮಾತುಗಳಲ್ಲಿ ವಿಷಯವನ್ನು ವೈಜ್ಞಾನಿಕ ನಿಷ್ಕೃಷ್ಟತೆಯಿಂದ ನಿರ್ವಹಿಸಲಾಯಿತು. ಯೆಹೋವನ ಸಾಕ್ಷಿಗಳು ಮಾನವ ಜೀವಕ್ಕೆ ಯಾವುದೇ ಮೌಲ್ಯವನ್ನು ನೀಡದ ವಿಚಾರಹೀನ ಮತಭ್ರಾಂತರೆಂಬ ಆಪಾದನೆಯನ್ನು ಇದು ಸುಳ್ಳುಮಾಡುತ್ತದೆ.

ಐ. ಆರ್‌., ಜರ್ಮನಿ

ನಾನು ಗರ್ಭಿಣಿ, ಮತ್ತು ನನ್ನ ಮಗುವಿನ ರಕ್ತದ ವಿರುದ್ಧ ಪ್ರತಿವಿಷ ವಸ್ತುಗಳನ್ನು ಬೆಳೆಸಿಕೊಳ್ಳುವುದರಿಂದ ನನ್ನನ್ನು ತಡೆಗಟ್ಟಲು, ಸೋಂಕುರಕ್ಷೆಯ ಚುಚ್ಚುಮದ್ದು ಅಗತ್ಯವೆಂದು ವೈದ್ಯರು ನನಗೆ ಹೇಳಿದರು. ಆರ್‌ಏಚ್‌ ಫ್ಯಾಕ್ಟರ್‌ನ ಕುರಿತು ನನಗೆ ಏನೂ ಗೊತ್ತಿರಲಿಲ್ಲ ಮತ್ತು ನಾನು ಆಕ್ಷೇಪಿಸಲಿಲ್ಲ. ಚುಚ್ಚುಮದ್ದನ್ನು ರಕ್ತದಿಂದ ಮಾಡಲಾಗುತ್ತದೆ ಎಂದು ನಾನು ತದನಂತರ ಕಲಿತಾಗ, ರಕ್ತದ ಮೇಲಿನ ದೇವರ ನಿಯಮವನ್ನು ನಾನು ಉಲ್ಲಂಘಿಸಿರಬಹುದೆಂದು ಹೆದರಿದ್ದೆ. ಚುಚ್ಚುಮದ್ದನ್ನು ತೆಗೆದುಕೊಳ್ಳುವುದು ಕೊನೆಯದಾಗಿ ಮನಸ್ಸಾಕ್ಷಿಯ ವಿಷಯವೆಂದು ವಿವರಿಸುವ ಮೂಲಕ, ನಿಮ್ಮ ಲೇಖನವು ನನಗೆ ಸಹಾಯ ಮಾಡಿತು.

ಸಿ. ಡಬ್ಲ್ಯೂ., ಅಮೆರಿಕ

ಅವಿವಾಹಿತ ತಾಯಂದಿರು “ಯುವ ಜನರು ಪ್ರಶ್ನಿಸುವುದು . . . ಅವಿವಾಹಿತ ತಾಯಂದಿರು ತಮ್ಮ ಸನ್ನಿವೇಶವನ್ನು ಅತ್ಯುತ್ತಮವಾದ ವಿಧದಲ್ಲಿ ಹೇಗೆ ನಿರ್ವಹಿಸಬಲ್ಲರು?” (ದಶಂಬರ 8, 1994) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ಗರ್ಭಧಾರಣೆಯು ತಪ್ಪುಮಾಡುವಿಕೆಯಿಂದ ಸಂಭವಿಸಿತೆಂಬುದನ್ನು ನೀವು ಅಂಗೀಕರಿಸುತ್ತೀರಿ. ಆದರೆ ಇದರ ಮೇಲೆ ಗಮನವಿಡುವ ಮತ್ತು ಹುಡುಗಿಗೆ ಇನ್ನೂ ಕೆಟ್ಟದಾಗಿ ಅನಿಸುವಂತೆ ಮಾಡುವ ಬದಲು, ನೀವು ಪ್ರಾಯೋಗಿಕ, ಸಹಾಯಕಾರಿ ಮಾರ್ಗದರ್ಶನಗಳನ್ನು ನೀಡುತ್ತೀರಿ.

ಜೆ. ಡಿ., ಅಮೆರಿಕ

ಹತ್ತು ವರ್ಷಗಳ ಹಿಂದೆ ನಾನೊಬ್ಬ ಒಂಟಿ ಹೆತ್ತವಳಾದೆ. ಆದರೆ ಯೆಹೋವನ ಹಾಗೂ ನನ್ನ ಕ್ರೈಸ್ತ ಹೆತ್ತವರ ಸಹಾಯದಿಂದ ನಾನು ಕಷ್ಟವಿಲ್ಲದೆ ಮುಂದೆ ಸಾಗಿದ್ದೇನೆ. ಶಾಲೆಯಿಂದ ಪದವಿ ಪಡೆದ ಮೇಲೆ, ಆರು ವರ್ಷಗಳ ಕಾಲ ನಾನು ಒಬ್ಬ ಪೂರ್ಣಸಮಯದ ಶುಶ್ರೂಷಕಳೋಪಾದಿ ಸೇವೆ ಮಾಡಿದೆ ಮತ್ತು ಈಗ ಒಬ್ಬ ಹಿರಿಯನೋಪಾದಿ ಸೇವೆ ಮಾಡುವ ಕ್ರೈಸ್ತ ಪುರುಷನನ್ನು ಮದುವೆಯಾದೆ. ಯೆಹೋವನ ಕರುಣೆ ಮತ್ತು ದಯೆಯಿಂದ ನಾನು ಬಹಳವಾಗಿ ಪ್ರಯೋಜನ ಹೊಂದಿದ್ದೇನೆ ಮತ್ತು ಇತರರಿಗೆ ಸಹಾಯ ಮಾಡಲು ನನ್ನ ಅನುಭವವನ್ನು ಉಪಯೋಗಿಸಲು ಶಕ್ತಳಾಗಿದ್ದೇನೆ.

ಎ. ಎಮ್‌., ಅಮೆರಿಕ

ಲೇಖನವನ್ನು ನಾನು ಓದಿದಂತೆ, ಕಣ್ಣೀರನ್ನು ನನಗೆ ತಡೆಯಲಾಗಲಿಲ್ಲ. ನೀವು ವರ್ಣಿಸಿದ ಅದೇ ಸನ್ನಿವೇಶವನ್ನು ನಾನು ಅನುಭವಿಸಿದೆ. ಈಗ ನಾನು ಒಬ್ಬ ಕ್ರೈಸ್ತಳಾಗಿರುವ ಕಾರಣ, ನನ್ನ ಮಗಳನ್ನು ಸೂಕ್ಷ್ಮ ಪರಿಜ್ಞಾನದಿಂದ ಬೆಳೆಸಲು ಶಕ್ತಳಾಗಿರುವುದಕ್ಕೆ ನಾನು ಸಂತೋಷಿಸುತ್ತೇನೆ.

ಸಿ. ಆರ್‌. ಎಸ್‌., ಬ್ರೆಸಿಲ್‌

ಗೊರಕೆ ಹೊಡೆಯುವುದು “ನೀವು ಗೊರಕೆ ಹೊಡೆಯುತ್ತೀರೊ?” (ಸಪ್ಟಂಬರ 8, 1994) ಎಂಬ ಲೇಖನವು, ಗೊರಕೆ ಹೊಡೆಯುವುದರ ಸಂಭವನೀಯ ಅಪಾಯಗಳ ಕುರಿತು ಎಚ್ಚರಿಸಿತು. ಆದರೆ ನೀವು ಗಟ್ಟಿಯಾಗಿ ಗೊರಕೆ ಹೊಡೆಯುವವರಾಗಿರುವಲ್ಲಿ, ನಿಮಗೆ ನಿದ್ರಾ ಶ್ವಾಸ ಬಂಧನವಿದೆ ಎಂದು ನೀವು ಸೂಚಿಸಿದಿರಿ. ಇರಲೇಬೇಕೆಂದೇನಿಲ್ಲ. ಗೊರಕೆ ಹೊಡೆಯುವ ಪ್ರವೃತ್ತಿಯು ನಮಗೆ ವಯಸ್ಸಾದಂತೆ ಹೆಚ್ಚಾಗುತ್ತದೆ. ಅದು ಅಲರ್ಜಿಗಳಿಂದ ಮತ್ತು ಸೈನಸ್‌ ಸಮಸ್ಯೆಗಳಿಂದ ಸಹ ಆಗಬಹುದು. ಆದರೆ ಗಟ್ಟಿಯಾದ ಗೊರಕೆ ಹೊಡೆಯುವಿಕೆಯು ಉಸಿರಾಟವಿಲ್ಲದ ಅವಧಿಗಳಿಂದ ಜೊತೆಗೂಡಿದ್ದು, ಇದನ್ನು ಉಸಿರೆಳೆಯುವುದು ಅಥವಾ ಬುಸುಗುಟ್ಟುವುದು ಹಿಂಬಾಲಿಸುವುದಾದರೆ, ಹಾಗೂ ಹಗಲುಹೊತ್ತಿನ ಮಂಪರ ಇಲ್ಲವೆ ಆಯಾಸವು ಸಂಭವಿಸುವಾಗ, ಶ್ವಾಸ ಬಂಧನವು ಪ್ರಾಯಶಃ ದೋಷಿಯಾಗಿದೆ. ಅತಿ ಸಾಮಾನ್ಯವಾದ ಚಿಕಿತ್ಸೆಯು ಶಸ್ತ್ರಚಿಕಿತ್ಸೆಯಲ್ಲ, ಬದಲಾಗಿ ನಿದ್ರೆಯ ಸಮಯದಲ್ಲಿ ಶ್ವಾಸನಾಳಗಳನ್ನು ತಡೆಯಿಲ್ಲದಂತೆ ಇಡಲು ಸಂಕುಚಿಸಿದ ಗಾಳಿಯನ್ನು ಬಳಸುವ ಸಾಧನಗಳಾಗಿವೆ.

ಸಿ. ಎಸ್‌., ಅಮೆರಿಕ

ಈ ಹೇಳಿಕೆಗಳನ್ನು ನಾವು ಗಣ್ಯಮಾಡುತ್ತೇವೆ ಮತ್ತು ನಮ್ಮ ವಿಷಯವು ಯಾವುದೇ ತಪ್ಪು ತಿಳಿವಳಿಕೆಯನ್ನುಂಟುಮಾಡಿದ್ದರೆ ಅದಕ್ಕಾಗಿ ವ್ಯಥೆಪಡುತ್ತೇವೆ. ಆಗಾಗ ಸಂಭವಿಸುವ ಗೊರಕೆ ಹೊಡೆಯುವಿಕೆಯು ಅಸಾಮಾನ್ಯವಲ್ಲವೆಂದು ವೈದ್ಯಕೀಯ ಅಧಿಕಾರಿಗಳು ಒಪ್ಪುತ್ತಾರೆ. ಎಲ್ಲ ವೈದ್ಯಕೀಯ ಸಮಸ್ಯೆಗಳಂತೆ, ಯೋಗ್ಯವಾದ ಚಿಕಿತ್ಸೆಗೆ ಒಬ್ಬ ವೈದ್ಯನಿಂದ ಸರಿಸುಮಾರಾದ ಅಭಿಪ್ರಾಯವನ್ನು ಪಡೆಯುವುದು ಅಗತ್ಯ.—ಸಂಪಾ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ