“ಮಿದುಳಿನ ಮೇಲೆ ಇಲೆಕ್ಟಾನ್ರಿಕ್ ದಾಳಿ”
ಟೆಲಿವಿಷನ್, ಮನೋರಂಜನೆ ನೀಡುವಂತಹದ್ದೂ ತಿಳಿವಳಿಕೆ ಕೊಡುವಂತಹದ್ದೂ ಆಗಿರಬಲ್ಲದು. ಹಾಗಿದ್ದರೂ, ಟೆಲ್ಅವೀವ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮೋಶೆ ಏರಾನ್ಸನ್ ಎಚ್ಚರಿಸುವುದೇನೆಂದರೆ, ಅತಿಯಾದ ಟಿವಿ ವೀಕ್ಷಣೆಯು ನಿಮ್ಮ ಆರೋಗ್ಯಕ್ಕೆ ಅಪಾಯಕರವಾಗಿರಬಲ್ಲದು. ಹೇಗೆ?
ನಿಷ್ಕ್ರಿಯ ವೀಕ್ಷಕನು ಟೆಲಿವಿಷನ್ ಸೆಟ್ನ ಮುಂದೆ ಕುಳಿತುಕೊಂಡಿರುವಾಗ ಹೊರಸೂಸಲಸಾಧ್ಯವಾದ ಬಿಗುಪಿನ ಶೇಖರಣೆಯನ್ನು ಅನುಭವಿಸುತ್ತಾನೆಂದು ಏರಾನ್ಸನ್ ವಾದಿಸುತ್ತಾರೆ. ಇದು ಜ್ಞಾಪಕಶಕ್ತಿಗೆ ನಿರ್ಣಾಯಕವಾಗಿರುವ ಮಿದುಳಿನ ಒಂದು ಕ್ಷೇತ್ರವಾದ ಹಿಪೊಕ್ಯಾಂಪಸ್ನಲ್ಲಿರುವ ನರಕೋಶಗಳನ್ನು, ಉನ್ನತ ಮಟ್ಟಗಳಲ್ಲಿ ನಷ್ಟಪಡಿಸಬಲ್ಲ ಒತ್ತಡದ ಚೋದಕಸ್ರಾವವನ್ನು ಉತ್ಪಾದಿಸುತ್ತದೆ. ಹೆಚ್ಚಿನ ಸಂಶೋಧನೆಗಳ ಅಗತ್ಯ ಇದೆ ಎಂಬುದನ್ನು ಗಮನದಲ್ಲಿಡುತ್ತಾ, ಈ ಕುಸಿತವು ಬಹುಶಃ ಒಬ್ಬನನ್ನು ಆಲ್ಟ್ಸ್ಹೈಮರ್ಸ್ ರೋಗಕ್ಕೆ ಸುಲಭವಾಗಿ ವಶವಾಗುವಂತೆ ಮಾಡುತ್ತಾ, ಚಿತ್ತವೈಕಲ್ಯಕ್ಕೂ ನೆರವು ನೀಡಬಲ್ಲದೆಂದು ಏರಾನ್ಸನ್ ಭಾವಿಸುತ್ತಾರೆ. ಅಂತೂ ಅತಿಯಾದ ಟೆಲಿವಿಷನ್ ವೀಕ್ಷಣೆಯನ್ನು ನ್ಯೂ ಸೈಎನ್ಟಿಸ್ಟ್ ಪತ್ರಿಕೆಯು, “ಮಿದುಳಿನ ಮೇಲೆ ಇಲೆಕ್ಟಾನ್ರಿಕ್ ದಾಳಿ” ಎಂದು ಕರೆಯುತ್ತದೆ.
ಟಿವಿ ವೀಕ್ಷಣೆಗೆ ವ್ಯತಿರಿಕ್ತವಾಗಿ ಓದುವಿಕೆಯು ಕಲ್ಪನೆಯನ್ನು ಪ್ರಚೋದಿಸುತ್ತದೆ ಮತ್ತು ವಿವೇಚನಾ ಸಾಮರ್ಥ್ಯಗಳನ್ನು ಕೆರಳಿಸುತ್ತದೆ. ಇದೊಂದು ನಿಷ್ಕ್ರಿಯ ಚಟುವಟಿಕೆಯಾಗಿರುವುದೇ ಇಲ್ಲ! ಟಿವಿ ವೀಕ್ಷಕನಿಗೆ ಪ್ರತಿಯೊಂದು ದೃಶ್ಯ ಹಾಗೂ ಧ್ವನಿಯ ಅರ್ಥವಿವರಣೆ ನೀಡಲ್ಪಡುವಾಗ, ಓದುಗನು ತನ್ನ ಸ್ವಂತ ರಂಗದೃಶ್ಯವನ್ನು ಮತ್ತು ಧ್ವನಿಹೊಂದಿಕೆಗಳನ್ನು ಸೃಷ್ಟಿಸುತ್ತಾನೆ. ಮಾನಸಿಕ ಶಕ್ತಿಗಳ ಈ ರಚನಾತ್ಮಕ ಉಪಯೋಗವು ಮಾನಸಿಕ ಜಡತೆಯನ್ನು ವಿಘ್ನಗೊಳಿಸುತ್ತದೆ, ಹೀಗೆ ಒಬ್ಬನ ಆರೋಗ್ಯಕ್ಕೆ ಪ್ರಯೋಜನವನ್ನು ತರುತ್ತದೆ. ಇದರ ನೋಟದಲ್ಲಿ, ಟೆಲಿವಿಷನ್ ಸೆಟ್ನ ಮುಂದೆ ನೀವು ವ್ಯಯಿಸುವ ಸಮಯದ ಪ್ರಮಾಣವನ್ನು ಸೀಮಿತಗೊಳಿಸುವುದು ವಿವೇಕಪ್ರದವಾಗಿರದೊ?