ಜಗತ್ತನ್ನು ಗಮನಿಸುವುದು
ತಣ್ಣೀರಿನ ನಿಮಜ್ಜನವನ್ನು ಪಾರಾಗುವುದು
ಹಿಮನೀರಿನೊಳಗೆ ಬೀಳುವ ಜನರು ಯಾಕೆ ಅಷ್ಟು ಬೇಗನೆ ಸಾಯುತ್ತಾರೆಂದು ತನಿಖೆ ನಡೆಸುವ ವಿಜ್ಞಾನಿಗಳು, ಶೀತಲ ಆಘಾತಕ್ಕೆ ಶರೀರದ ಸ್ವಾಭಾವಿಕ ಪ್ರತಿವರ್ತನೆಯು ಮಿತಿಮೀರಿ ವಾಯು ಸಂಚರಿಸುವಂತೆ ಮಾಡುವುದೇ ಆಗಿದೆ ಎಂದು ಕಂಡುಹಿಡಿದಿದ್ದಾರೆ. “ಉಸಿರಿನ ಹಠಾತ್ತಾದ ಒಳಸೇರಿಸುವಿಕೆಯನ್ನು ನೀರಿನ ಒಳಹರಿವು—ಮತ್ತು ಮುಳುಗಿ ಸಾಯುವಿಕೆಯು ಹಿಂಬಾಲಿಸುತ್ತದೆ,” ಎನ್ನುತ್ತದೆ ನ್ಯೂ ಸೈಎಂಟಿಸ್ಟ್ ಪತ್ರಿಕೆ. ಮಿತಿಮೀರಿದ ವಾಯುಸಂಚಾರವನ್ನು ತಡೆಯಸಾಧ್ಯವಿಲ್ಲ. ಆದುದರಿಂದ ಬದುಕಿ ಉಳಿಯುವಿಕೆಯು, ಗಾಳಿ ನುಂಗುವ ಪ್ರತಿವರ್ತನೆಯು ಶಾಂತವಾಗುವ ತನಕ—ಸಾಮಾನ್ಯವಾಗಿ ಎರಡು ಅಥವಾ ಮೂರು ನಿಮಿಷಗಳೊಳಗೆ—ತಲೆಯನ್ನು ನೀರಿಗಿಂತ ಮೇಲೆ ಇಡುವುದರ ಮೇಲೆ ಹೊಂದಿಕೊಂಡಿದೆ.
ಸತ್ಯವನ್ನು ಹೇಳುವ ಹಂಗಿಲ್ಲ
ಅಮೆರಿಕದ ಇತ್ತೀಚಿನ ಕೋರ್ಟ್ ವಿಚಾರಣೆಗಳು ಲೋಕವ್ಯಾಪಕ ಗಮನವನ್ನು ಆಕರ್ಷಿಸಿ ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸಿವೆ. “ವಾದಿ ವಕೀಲರಿಗೆ ಸತ್ಯವನ್ನು ಪ್ರಕಟಪಡಿಸುವ ಹಂಗು ಇರುವುದಾದರೂ, ಪ್ರತಿವಾದಿ ವಕೀಲರು ಭಿನ್ನವಾದ ಉದ್ದೇಶಗಳನ್ನು ಬೆನ್ನಟ್ಟುತ್ತಾರೆ,” ಎನ್ನುತ್ತದೆ ದ ನ್ಯೂ ಯಾರ್ಕ್ ಟೈಮ್ಸ್. “ಪ್ರತಿವಾದಿ ವಕೀಲನೊಬ್ಬನ ಕೆಲಸವು ತನ್ನ ಕಕ್ಷಿಗಾರನಿಗೆ ಬಿಡುಗಡೆಯನ್ನು ಒದಗಿಸುವುದು, ನ್ಯಾಯದರ್ಶಿಗಳು ತೀರ್ಮಾನವನ್ನು ತಲಪದಂತೆ (ಒಬ್ಬ ನ್ಯಾಯದರ್ಶಿಯ ಮನಸ್ಸಿನಲ್ಲಿಯಾದರೂ ನ್ಯಾಯಸಮ್ಮತವಾದ ಸಂಶಯವನ್ನು ತುಂಬುವ ಮೂಲಕ) ನೋಡುವುದು ಅಥವಾ ಒಂದು ಅತಿ ಕಡಮೆ ಗುರುತರವಾದ ಆರೋಪದ ಮೇಲೆ ಅಪರಾಧಿಯನ್ನಾಗಿ ಮಾಡಿಸುವುದು ಆಗಿದೆ.” “ದೋಷಿಯಲ್ಲವೆಂಬ ತೀರ್ಮಾನವು ಸರಿಯೆಂದು ದೃಢಪಡಿಸಲು ಅವರಿಗೆ ಯಾವ ಹಂಗೂ ಇರುವುದಿಲ್ಲ,” ಎನ್ನುತ್ತಾರೆ ನ್ಯೂ ಯಾರ್ಕ್ ಯೂನಿವರ್ಸಿಟಿ ಲಾ ಸ್ಕೂಲಿನ ಶಾಸನಬದ್ಧ ನೀತಿತತ್ವ ಅಧ್ಯಾಪಕ ಸ್ಟೀಫನ್ ಗಿಲರ್ಸ್. “ನ್ಯಾಯ ವಿಚಾರಣೆಯು ಸತ್ಯಾನ್ವೇಷಣೆಯಾಗಿದೆ ಎಂದು ಹೇಳುವುದಲ್ಲದೆ ಅವರನ್ನು ವಂಚಿಸುವುದು ಪ್ರತಿವಾದಿ ವಕೀಲರುಗಳ ಹಂಗಾಗಿದೆ ಎಂದು ನಾವು ನ್ಯಾಯದರ್ಶಿಗೆ ಹೇಳುವುದಿಲ್ಲ.” “ಕಕ್ಷಿಗಾರನನ್ನು ಗುರುತರವಾಗಿ ದೋಷಾರೋಪಿಸುವ ನಿಜತ್ವಗಳಿಂದ ಎದುರಿಸಲ್ಪಡುವಾಗ, ವಕೀಲರು ಅನೇಕ ವೇಳೆ, ನ್ಯಾಯದರ್ಶಿ ಮಂಡಲಿಯು ಆ ನಿಜತ್ವಗಳನ್ನು ಅಲಕ್ಷ್ಯಮಾಡಿ ದೋಷಮುಕ್ತನೆಂದು ಮತಕೊಡುವ ಕಾರಣಕ್ಕಾಗಿ, ಅದನ್ನು ಪರಿಗಣಿಸಲು ಕಥೆಗಳನ್ನು ಸೃಷ್ಟಿಸಬೇಕಾಗುತ್ತದೆ,” ಎನ್ನುತ್ತದೆ ಟೈಮ್ಸ್. ವಕೀಲನು, ತಮ್ಮ ಕಕ್ಷಿಗಾರನು ದೋಷಿಯೆಂದು ತಿಳಿದ ಮೇಲೆಯೂ ಕಕ್ಷಿಗಾರನು ಮೊಕದ್ದಮೆಯನ್ನು ನ್ಯಾಯದರ್ಶಿ ಮಂಡಲಿಯ ಮುಂದೆ ತರಲು ಪಟ್ಟುಹಿಡಿಯುವುದಾದರೆ ಏನು ಸಂಭವಿಸುತ್ತದೆ? “ಆಗ ವಕೀಲರು ಒಂದು ಕಥೆಯಲ್ಲಿ ಹೇಳಲ್ಪಟ್ಟಿರುವ ಯುರಾಯ ಹೀಪ್‌ನಂತೆ, ಸಂಪೂರ್ಣ ಸುಳ್ಳು ದೈನ್ಯದಿಂದ ಕೋರ್ಟಿಗೆ ಹೋಗಿ, ತಮ್ಮ ಕಕ್ಷಿಗಾರನ ಕಥೆಯು 100 ಪ್ರತಿಶತ ಸುಳ್ಳೆಂದು ತಿಳಿದಿರುವುದಾದರೂ ಅವನ ಸಮಗ್ರತೆಯಲ್ಲಿ ತಮ್ಮ ಗಾಢವಾದ ನಂಬಿಕೆಯನ್ನು ಘೋಷಿಸುತ್ತಾರೆ,” ಎನ್ನುತ್ತಾರೆ ಗಿಲರ್ಸ್.
ಮೊಸಳೆ ಸುದ್ದಿ
ಇತ್ತೀಚೆಗೆ ಅಗೆದು ತೆಗೆದ ಪುರಾತನ ಕಾಲದ ಮೊಸಳೆಯ ಪಳೆಯುಳಿಕೆಯ ದವಡೆಯು ಮೊಸಳೆ ಕುಟುಂಬದ “ಪ್ರಥಮ ಜ್ಞಾತ ಸಸ್ಯಾಹಾರಿ ಸದಸ್ಯನನ್ನು ಪ್ರತಿನಿಧೀಕರಿಸಬಹುದು,” ಎಂದು ನೇಚರ್ ಪತ್ರಿಕೆ ವರದಿಸುತ್ತದೆ. ಇಂದು ಮಾನವರಿಂದ ತೀರ ಭಯಕ್ಕೊಳಗಾಗಿರುವ, ಆಧುನಿಕ ಮೊಸಳೆಯ ಉದ್ದವಾದ ಮೊನಚಾಗಿರುವ ಹಲ್ಲುಗಳಿಗೆ ಬದಲಾಗಿ, ಈ ಪ್ರಾಚೀನ ಪೂರ್ವಿಕನಿಗೆ ಹುಲ್ಲು ಅಗಿಯಲು ಹೆಚ್ಚು ಯೋಗ್ಯವಾದದ್ದೆಂದು ಹೇಳಲಾಗುವ ಚಪ್ಪಟೆ ಹಲ್ಲುಗಳಿದ್ದವು. ಚೈನೀಸ್ ಮತ್ತು ಕೆನೇಡಿಯನ್ ಸಂಶೋಧಕರಿಂದ ಚೈನದ ಹೂಬೇ ಪ್ರಾಂತ್ಯದಲ್ಲಿ, ಯಾಂಗ್ಸೀ ನದಿಯ ದಕ್ಷಿಣ ತೀರಕ್ಕೆ ಸಮೀಪವಿರುವ ಒಂದು ಗುಡ್ಡದಲ್ಲಿ ಕಂಡುಹಿಡಿಯಲ್ಪಟ್ಟ ಈ ಜೀವಿಯು ಉಭಯವಾಸಿಯಲ್ಲ, ಭೂಜೀವಿಯಾಗಿತ್ತೆಂದೂ ಸೂಚನೆಗಳಿವೆ. ಅದರ ಗಾತ್ರ? ಅದು ಸುಮಾರು ಮೂರು ಅಡಿ ಉದ್ದವಿತ್ತು.
ಹೆಚ್ಚುತ್ತಿರುವ ಒತ್ತಡ
ಬ್ರೆಸಿಲ್‌ನ ರೀಓ ಡೇಸನೆರೊದಲ್ಲಿ ಮಾಡಲ್ಪಟ್ಟ ಇತ್ತೀಚಿನ ಒಂದು ಅಧ್ಯಯನವು, ವೈದ್ಯಕೀಯ ಗಮನವನ್ನು ಹುಡುಕುತ್ತಿರುವ ಜನರಲ್ಲಿ 35ಕ್ಕೂ ಹೆಚ್ಚು ಪ್ರತಿಶತ ಮಂದಿ ವಿವಿಧ ರೂಪಗಳ ಮಾನಸಿಕ ತೊಂದರೆಗಳಿಂದ ಬಳಲುತ್ತಿದ್ದರೆಂದು ಕಂಡುಹಿಡಿಯಿತು ಎಂದು ವೇಸಾ ವರದಿಸುತ್ತದೆ. ಆ ಪತ್ರಿಕೆಯು ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಏಚ್‌ಓ)ಯ ಮಾನಸಿಕ ಆರೋಗ್ಯ ನಿರ್ದೇಶಕರಾದ ಡಾ. ಸಾರ್ಸ ಆಲ್ಬರ್ಟೂ ಕಾಸ್ಟ ಈ ಸೀಲ್ವ ಅವರನ್ನು, “ಈ ಸಂಖ್ಯೆಗಳನ್ನು ಹೇಗೆ ವಿವರಿಸುವುದು ಸಾಧ್ಯ? ಲೋಕವು ಹೆಚ್ಚು ಕೆಟ್ಟಿತೊ, ಜನರು ಮನೋವೈಜ್ಞಾನಿಕವಾಗಿ ಬಲಹೀನರಾದರೊ?” ಎಂದು ಕೇಳಿತು. ಅವರ ಉತ್ತರ: “ನಾವು ವಿಪರೀತವಾದ ವೇಗದಲ್ಲಿ ಬದಲಾಗುವ ಸಮಯದಲ್ಲಿ ಜೀವಿಸುತ್ತೇವೆ. ಇದು ಮಾನವ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ಮಟ್ಟಗಳಲ್ಲಿ ವ್ಯಾಕುಲತೆ ಮತ್ತು ಒತ್ತಡವನ್ನು ಆಗಿಸುವುದರಲ್ಲಿ ಕೊನೆಗೊಳ್ಳುತ್ತದೆ.” ಒತ್ತಡದ ಒಂದು ಸಾಮಾನ್ಯ ಮೂಲವು, ರೀಓ ಡೇಸನೆರೊದಲ್ಲಿ ಚಾಲ್ತಿಯಲ್ಲಿರುವ ಹಿಂಸಾಚಾರವೇ ಎಂದು ಅವರು ಪ್ರತಿಪಾದಿಸುತ್ತಾರೆ. ಇದು ಅನೇಕ ವೇಳೆ ಅಗಾಧ ವೇದನೆಯ ತರುವಾಯದ ಒತ್ತಡಕ್ಕೆ ನಡೆಸುತ್ತದೆ. ಇದು “ಜನರನ್ನು ಅವರು ಒಂದಲ್ಲ ಒಂದು ವಿಧದಲ್ಲಿ ಜೀವಾಪಾಯದ ಸ್ಥಿತಿಯಲ್ಲಿದ್ದಾಗ ಬಾಧಿಸುತ್ತದೆ. ದಿನದಲ್ಲಿ ಅವರು ಪ್ರತಿಯೊಂದು ವಿಷಯದ ಸಂಬಂಧದಲ್ಲಿಯೂ ಅಭದ್ರತೆಯನ್ನು ತೋರಿಸುತ್ತಾರೆ. ರಾತ್ರಿಯಲ್ಲಿ ಘೋರ ಸ್ವಪ್ನಗಳಲ್ಲಿ, ತಮ್ಮ ಜೀವವನ್ನು ಯಾವ ಘಟನೆಯು ಅಪಾಯಕ್ಕೊಡ್ಡಿತೊ ಅದು ಪುನರ್ಜೀವಗೊಳ್ಳುತ್ತದೆ,” ಎಂದು ಅವರು ವಿವರಿಸುತ್ತಾರೆ.
ಆರೋಗ್ಯ ಅಂತರ
ಧನಿಕ ಮತ್ತು ಬಡ ರಾಷ್ಟ್ರಗಳ ಮಧ್ಯೆ ಆರೋಗ್ಯಾಂತರವು ವಿಶಾಲಗೊಳ್ಳುತ್ತಿದೆ. ವಿಕಾಸಗೊಂಡಿರುವ ದೇಶಗಳಲ್ಲಿ ಜೀವಿಸುತ್ತ ಅಲ್ಲಿ ಹುಟ್ಟಿರುವವರ ಸರಾಸರಿ ಜೀವ ನಿರೀಕ್ಷಣೆಯು—ಕಡಮೆ ವಿಕಾಸಗೊಂಡಿರುವ ದೇಶಗಳ 54 ವರ್ಷಗಳಿಗೆ ತುಲನೆಮಾಡುವಾಗ—76 ವರ್ಷಗಳು ಎಂದು ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಏಚ್‌ಓ)ಯು ಅಂದಾಜುಮಾಡುತ್ತದೆ. 1950ರಲ್ಲಿ ಬಡ ದೇಶಗಳಲ್ಲಿ ಶಿಶುಮರಣವು ಧನಿಕ ದೇಶಗಳಿಗಿಂತ ಮೂರು ಪಟ್ಟು ಹೆಚ್ಚಾಗಿತ್ತು; ಈಗ ಅದು 15 ಪಟ್ಟು ಹೆಚ್ಚಾಗಿದೆ. 1980ಗಳ ಅಂತ್ಯವರ್ಷಗಳೊಳಗೆ ಬಡ ದೇಶಗಳಲ್ಲಿ ಹೆರಿಗೆಗೆ ಸಂಬಂಧಪಟ್ಟ ತೊಡಕುಗಳಿಂದಾಗಿ ಮರಣ ಪ್ರಮಾಣವು ಧನಿಕ ರಾಷ್ಟ್ರಗಳಿಗಿಂತ 100 ಪಟ್ಟು ಹೆಚ್ಚಾಗಿತ್ತು. ಈ ಸಮಸ್ಯೆಗೆ ಸಹಾಯಮಾಡುವ ನಿಜತ್ವವು ಬಡ ದೇಶಗಳಲ್ಲಿ ಜೀವಿಸುತ್ತಿರುವ ಜನರಲ್ಲಿ ಅರ್ಧಾಂಶಕ್ಕೂ ಕಡಮೆ ಜನರಿಗೆ ಶುದ್ಧನೀರು ಮತ್ತು ನಿರ್ಮಲೀಕರಣಕ್ಕೆ ಹಾದಿಯಿಲ್ಲದೆ ಇರುವುದೇ ಆಗಿದೆ, ಎನ್ನುತ್ತದೆ ಡಬ್ಲ್ಯೂಏಚ್‌ಓ. ವಿಶ್ವ ಸಂಸ್ಥೆಗನುಸಾರ, “ಅತಿ ಕಡಮೆ ವಿಕಾಸಗೊಂಡಿರುವ ದೇಶಗಳು” 1975ರಲ್ಲಿದ್ದ 27ರಿಂದ 1995ರಲ್ಲಿ 48ಕ್ಕೆ ಏರಿದೆ. ಲೋಕವ್ಯಾಪಕವಾಗಿ, 130 ಕೋಟಿ ಬಡಜನರಿದ್ದಾರೆ, ಮತ್ತು ಅವರ ಸಂಖ್ಯೆ ಹೆಚ್ಚುತ್ತಿದೆ.
ಪರಿಪೂರ್ಣವಾದ ಚಳಿಗಾಲದ ಮೇಲಂಗಿ
ಹಿಮಕರಡಿಗಳನ್ನು ವಿಮಾನಗಳಿಂದ ಕಂಡುಹಿಡಿಯಲು ಪ್ರಯತ್ನಿಸುವ ವಿಜ್ಞಾನಿಗಳಿಗೆ ಕೆಲಸವು ತೀರ ಕಷ್ಟಕರವಾಗಿದೆ—ಮತ್ತು ಅದು ಕರಡಿಗಳು ಬಿಳಿಯಾಗಿದ್ದು, ಹಿಮಪ್ರದೇಶಗಳಲ್ಲಿ ಜೀವಿಸುತ್ತವೆಂಬ ಸ್ಪಷ್ಟವಾದ ನಿಜತ್ವದ ಕಾರಣ ಮಾತ್ರವಲ್ಲ. ಪಾಪ್ಯುಲರ್ ಸೈಎನ್ಸ್‌ಗನುಸಾರ, ಈ ಸಮಸ್ಯೆಗೆ ವಿಜ್ಞಾನಿಗಳೊಂದಿಗೆ ಒಂದು ಜಾಣತನದ್ದೆಂದು ತೋರಿಬಂದ ಪರಿಹಾರವಿತ್ತು: ಅವರು ಸಂವೇದನಶೀಲ ರಕ್ತಪಟಲಾತೀತ (ಇನ್‌ಫ್ರರೆಡ್) ಫಿಲ್ಮ್ (ಛಾಯಾಚಿತ್ರಪಟಲ) ಅನ್ನು, ಅದು ಆ ಬೃಹದಾಕಾರದ ಪ್ರಾಣಿಗಳಿಂದ ಹೊರಸೂಸುವ ದೇಹಶಾಖವನ್ನು ಸುಲಭವಾಗಿ ಪತ್ತೆಹಚ್ಚುವುವೆಂದು ತರ್ಕಿಸುತ್ತ, ಉಪಯೋಗಿಸಿದರು. ಆದರೆ ಆ ಛಾಯಾಚಿತ್ರಪಟಲವು ಬರಿದಾದದ್ದಾಗಿ ಹಿಂದೆಬಂತು! ಆ ಹಿಮಕರಡಿಯ ಕವಚವು ಎಷ್ಟು ಕಾರ್ಯಸಾಧಕವಾದ ಶಾಖನಿರೋಧಕವಾಗಿದೆಯೆಂದರೆ, ಆ ಪ್ರಾಣಿಯಿಂದ ಅತಿ ಕಡಮೆ ಶಾಖ ಹೊರಹೋಗುತ್ತದೆಂದು ತೋರುತ್ತದೆ. ಆ ಕವಚದ ಕೂದಲು, ಹೇಗೊ ಅಂತಹ ಬೆಳಕನ್ನು ಕರಡಿಯಲ್ಲಿರಬಹುದಾದ “ಸೂರ್ಯ ಕೋಶಗಳಿಗೆ” ಎಳೆಯುತ್ತ ಅದನ್ನು ಶಾಖವಾಗಿ ಪರಿವರ್ತಿಸಿ ಸೂರ್ಯನ ನೀಲಲೋಹಿತಾತೀತ (ಅಲ್ಟ್ರವಾಯಲೆಟ್) ಕಿರಣಗಳ ವಾಹಕವಾಗಿರುವುದರಲ್ಲಿಯೂ ಉತ್ತಮವಾಗಿದೆಯೆಂದು ಆ ಪತ್ರಿಕೆಯು ಗಮನಿಸುತ್ತದೆ.
ಮೂರ್ಛೆಹೋಗುವ ಅಭಿಮಾನಿಗಳು
ರಾಕ್ ಸಂಗೀತ ಕಚೇರಿಗಳಲ್ಲಿ ಅಷ್ಟೊಂದು ಮಂದಿ ಅಭಿಮಾನಿಗಳು ಮೂರ್ಛೆ ಹೋಗುವುದೇಕೆ? ಜರ್ಮನಿಯ ಬರ್ಲಿನ್‌ನಲ್ಲಿನ ಯೂನಿವರ್ಸಿಟಿ ಆಸ್ಪತ್ರೆಯ ಒಬ್ಬ ನರರೋಗ ತಜ್ಞರು ಇತ್ತೀಚೆಗೆ ಆ ವಿಚಿತ್ರ ಘಟನೆಯನ್ನು ಪರೀಕ್ಷಿಸಿದರು. ಪ್ರಧಾನವಾಗಿ ಯುವತಿಯರು ಹಾಜರಾಗಿದ್ದ ಒಂದು ಬರ್ಲಿನ್ ರಾಕ್ ಸಂಗೀತ ಕಚೇರಿಯಲ್ಲಿ, ಪ್ರದರ್ಶನದ ಸಮಯದಲ್ಲಿ ಸುಮಾರು 400 ಮಂದಿ ಮೂರ್ಛೆಹೋದರು. ಡಿಸ್ಕವರ್ ಎಂಬ ಪತ್ರಿಕೆಗನುಸಾರ, ಮೂರ್ಛೆಹೋದವರಲ್ಲಿ 90 ಪ್ರತಿಶತ ಮಂದಿ ಮೊದಲ ಸಾಲುಗಳಲ್ಲಿ ನಿಂತುಕೊಂಡಿದ್ದುದನ್ನು ಆ ನರರೋಗ ತಜ್ಞರು ಕಂಡುಹಿಡಿದರು. ಈ ಉತ್ತಮ ಆಸನಗಳನ್ನು ಪಡೆಯಲು ಆ ಹುಡುಗಿಯರು ಕ್ಯೂಗಳಲ್ಲಿ ಅನೇಕ ತಾಸುಗಳ ಕಾಲ ಕಾದಿದ್ದರು, ಮತ್ತು ಅನೇಕರು ಇತ್ತೀಚೆಗೆ ಊಟವನ್ನಾಗಲಿ ಹಿಂದಿನ ರಾತ್ರಿ ನಿದ್ದೆಯನ್ನಾಗಲಿ ಮಾಡಿರಲಿಲ್ಲ. ಇತರ ಅಂಶಗಳು—ಅವರ ಸ್ವಂತ ಕಿರಿಚಾಟ ಮತ್ತು ಹಿಂದಿನಿಂದ ಜನಸ್ತೋಮದ ನೂಕುವಿಕೆಯು—ಎದೆಯ ಮೇಲೆ ಒತ್ತಡ ಹಾಕಲಾಗಿ ಅದು ರಕ್ತದೊತ್ತಡವನ್ನು ಕಡಮೆಮಾಡಿತು. ಇದು ಸರದಿಯಾಗಿ ಮಿದುಳಿಗೆ ರಕ್ತದ ಸರಬರಾಯಿಯನ್ನು ಇಲ್ಲದಂತೆ ಮಾಡಿತು. ಮೂರ್ಛೆಯಲ್ಲಿ ಪರಿಣಮಿಸಿತು. ರಾಕ್ ಅಭಿಮಾನಿಗಳು ಮೊದಲಾಗಿಯೇ ತಿಂದು, ಮಲಗಬೇಕು, ಕುಳಿತುಕೊಂಡಿರಬೇಕು ಮತ್ತು ಶಾಂತತೆಯಿಂದ ಆ ಪ್ರದರ್ಶನದ ಸಮಯದಲ್ಲಿ ಜನಸಂದಣಿಯಿಂದ ದೂರವಿರಬೇಕು, ಎಂದು ನರರೋಗಶಾಸ್ತ್ರಜ್ಞರು ಶಿಫಾರಸ್ಸು ಮಾಡಿದರೂ ಕೇವಲ ಕೆಲವೇ ಹದಿವಯಸ್ಕರು ಅದನ್ನು ಅನುಸರಿಸುವುದು ಸಂಭವನೀಯವೆಂದು ಅವರು ಒಪ್ಪಿಕೊಂಡರು.
ಸಮಯವು ಹೋಗುವ ಸ್ಥಳ
ಸಮಯವು ಎಲ್ಲಿಗೆ ಹೋಯಿತು? ಆ ಪ್ರಶ್ನೆಯನ್ನು ಅನೇಕರು ಅಲಂಕಾರಿಕವಾಗಿ ಕೇಳುತ್ತಾರೆ, ಆದರೆ ಇತ್ತೀಚಿನ ಒಂದು ಅಧ್ಯಯನವು ಅದನ್ನು ವೈಜ್ಞಾನಿಕವಾಗಿ ಉತ್ತರಿಸಲು ಪ್ರಯತ್ನಿಸಿತು. ಅಮೆರಿಕದ ಇಲಿನೊಯಿ ನಗರದ ಒಂದು ಸಂಶೋಧನಾ ಸಂಸ್ಥೆಯು ಸುಮಾರು 3,000 ಜನರ ದೈನಂದಿನ ಚಟುವಟಿಕೆಗಳ ಮೂರು ವರ್ಷಗಳ ಅಧ್ಯಯನವನ್ನು ನಡೆಸಿತು. ಅವರು ತಮ್ಮ ಸಮಯವನ್ನು ಹೇಗೆ ಕಳೆಯುತ್ತಾರೆಂಬುದರ ಮುಂದುವರಿಯುವ ದಾಖಲೆಗಳನ್ನು ಇಡುವಂತೆ ಅವರನ್ನು ಕೇಳಿಕೊಳ್ಳಲಾಯಿತು. ಈ ಗುಂಪಿನವರ ವಯಸ್ಸು 18ರಿಂದ 90 ಆಗಿದ್ದು, ಅದು ವಿಸ್ತಾರವಾದ ಹಿನ್ನೆಲೆಗಳ ಶ್ರೇಣಿಯನ್ನು ಆವರಿಸಿತ್ತು. ಮುಖ್ಯ ಸಮಯ ಅನುಭೋಗಿಯು ನಿದ್ರೆಯಾಗಿತ್ತು. ಇದನ್ನು ಅನುಸರಿಸಿ, ದಿನಕ್ಕೆ ಸರಾಸರಿ 184 ನಿಮಿಷಗಳನ್ನು ತೆಗೆದುಕೊಳ್ಳುತ್ತ, ಕೆಲಸವು ಬಂತು. ಆಮೇಲೆ ಬಂದದ್ದು 154 ನಿಮಿಷಗಳ ಟೀವೀ ಮತ್ತು ವಿಡಿಯೊ ಪ್ರೇಕ್ಷಣ. ಮನೆಯ ಕೆಲಸ 66 ನಿಮಿಷಗಳನ್ನೂ, ಪ್ರಯಾಣಿಸುವುದು ಮತ್ತು ಕೆಲಸಕ್ಕೆ ಹೋಗಿ ಬರುವುದು 51, ತಲೆ ಬಾಚಿಕೊಳ್ಳುವಿಕೆ 49, ಮತ್ತು ಮಕ್ಕಳ ಮತ್ತು ಮುದ್ದಿನ ಪ್ರಾಣಿಗಳ ಪಾಲನೆ 25 ನಿಮಿಷಗಳನ್ನೂ ತೆಗೆದುಕೊಂಡಿತು. ಪಟ್ಟಿಯ ಅಂತ್ಯಕ್ಕೆ ಸಮೀಪದಲ್ಲಿ, ದಿನಕ್ಕೆ ಸರಾಸರಿ 15 ನಿಮಿಷಗಳನ್ನು ತೆಗೆದುಕೊಂಡ ಆರಾಧನೆಯಿತ್ತು.
ಉಚಿತ ಶಿಶುಪಾಲನೆಯೊ?
ಉಪನಗರಗಳ ಪೀಡಿತ ಹೆತ್ತವರು, ತಾವು ಖರೀದಿಸಲು ಸ್ವತಂತ್ರರಾಗಿರುವಾಗ ಬೇರೆಯವರು ತಮ್ಮ ಮಕ್ಕಳನ್ನು ಗಮನಿಸುವಂತೆ ಒಂದು ಹೊಸ ದಾರಿಯನ್ನು ಕಂಡುಹಿಡಿದಿದ್ದಾರೆ. ಅವರು ತಮ್ಮ ಮಕ್ಕಳನ್ನು ಒಂದು ಆಟಿಕೆಗಳ ಅಂಗಡಿಯಲ್ಲಿ ಇಲ್ಲವೆ ಒಂದು ಬಹುಮಾಧ್ಯಮ ಕಂಪ್ಯೂಟರ್ ಸ್ಟೋರ್‌ನಲ್ಲಿ ಬಿಡುತ್ತಾರೆ. ಆ ಉನ್ನತ ಯಂತ್ರಕಲೆಯ ಯಂತ್ರಗಳಿಂದ ಆಕರ್ಷಿತರಾಗುವ ಮಕ್ಕಳು, ಹೆತ್ತವರು ಹಿಂದಿರುಗಿ ಬರುವ ತನಕ ಪ್ರದರ್ಶನ ಮಾದರಿಗಳೊಂದಿಗೆ ಆಡುತ್ತಾರೆ. ಮಾರಾಟಗಾರರು ಈ ಪ್ರವೃತ್ತಿಯನ್ನು ಇಷ್ಟಪಡದಿರುವುದು ಆಶ್ಚರ್ಯವಲ್ಲ, ಎಂದು ನ್ಯೂಸ್‌ವೀಕ್ ಪತ್ರಿಕೆ ವರದಿಮಾಡುತ್ತದೆ. ಕಡಿಮೆಪಕ್ಷ ಮಕ್ಕಳು ಭಾವೀ ಗಿರಾಕಿಗಳನ್ನು ಪ್ರದರ್ಶನ ಮಾದರಿಗಳಿಂದ ದೂರವಿರಿಸುತ್ತಾರೆಂದೂ, ಕೆಟ್ಟದೆಂದರೆ ಮಕ್ಕಳು ಅವುಗಳನ್ನು ಹಾಳುಮಾಡುತ್ತಾರೆಂದೂ ಅವರು ದೂರುಕೊಡುತ್ತಾರೆ. ಕೆಲವು ಮಂದಿ ಹೆತ್ತವರು ಹಿಂದೆ ಬಂದು, ಯಾರೂ ತಮ್ಮ ಮಕ್ಕಳ ನಿಗಾ ವಹಿಸದಿರುವಲ್ಲಿ ಅಥವಾ ಅವರನ್ನು ಶೌಚಾಲಯಕ್ಕೆ ಕರೆದುಕೊಂಡುಹೋಗದಿರುವಲ್ಲಿ ಆಪಾದಿಸುತ್ತಾರೆಂದು ಇತರರು ಕಂಡುಕೊಂಡಿದ್ದಾರೆ! ಹೀಗೆ, ಕೆಲವು ಅಂಗಡಿಗಳು—ಪ್ರದರ್ಶನ ಕಂಪ್ಯೂಟರ್‌ಗಳನ್ನು ಸಮೀಪಿಸಲು ಹೆಚ್ಚು ಕಷ್ಟಕರವಾಗುವಂತೆ ಮಾಡಿಯೊ ಇಲ್ಲವೆ ಹೆತ್ತವರಿಲ್ಲದ ಮಕ್ಕಳನ್ನು ಕಂಡುಹಿಡಿಯುವಲ್ಲಿ ಪಹರೆಯವರನ್ನು ಕರೆದೊ ಈ ಪ್ರವೃತ್ತಿಯೊಂದಿಗೆ ಹೋರಾಡುತ್ತಿವೆ.
ಹೊಸ ಮೌಲ್ಯಗಳು
ಸರ್ವಸಾಮಾನ್ಯವಾಗಿ ರಷ್ಯಾದ ಯುವ ಜನರು ಹಾಗೂ ರಷ್ಯಾದ ಸಮಾಜವು ಮೌಲ್ಯಗಳ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಸೆಂಟ್ ಪೀಟರ್ಸ್‌ಬರ್ಗ್, ರಷ್ಯಾದಲ್ಲಿ ತೆಗೆದುಕೊಳ್ಳಲ್ಪಟ್ಟ ಇತ್ತೀಚೆಗಿನ ಸಮೀಕ್ಷೆಯು, ಯುವ ಜನರ ಮನೋಭಾವವು “ಮಾನವತ್ವಕ್ಕೆ ಸಾಮಾನ್ಯವಾದ ಮೌಲ್ಯಗಳು, ಅಂದರೆ, ಆರೋಗ್ಯ, ಜೀವಿತ, ಕುಟುಂಬ, ಮತ್ತು ಪ್ರೀತಿ ಹಾಗೂ ಯಶಸ್ಸು, ಜೀವನೋಪಾಯ, ನೆಮ್ಮದಿ, ಮತ್ತು ಭೌತಿಕ ಭದ್ರತೆಗಳಂತಹ ವೈಯಕ್ತಿಕ ಮೌಲ್ಯಗಳಿಗೆ” ಒತ್ತು ಕೊಡುತ್ತದೆ ಎಂಬುದನ್ನು ಕಂಡುಕೊಂಡಿತೆಂದು, ರಷ್ಯಾದ ವಾರ್ತಾಪತ್ರಿಕೆಯಾದ ಸಾಕ್ಟ್ ಪೀಟರ್‌ಬರ್ಗ್‌ಸ್ಕೀ ವರದಿಸುತ್ತದೆ. ಪ್ರಮುಖವಾದ ಇತರ ಮೌಲ್ಯಗಳು, ಹೆತ್ತವರು, ಹಣ, ಕ್ಷೇಮಾಭಿವೃದ್ಧಿ, ಸಂತೋಷ, ಗೆಳೆತನ, ಮತ್ತು ಜ್ಞಾನದ ಮೇಲೆ ಕೇಂದ್ರೀಕರಿಸುತ್ತವೆ. ಆಸಕ್ತಿಕರವಾಗಿ, ಒಂದು ಒಳ್ಳೆಯ ಸತ್ಕೀರ್ತಿ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳನ್ನು ಆನಂದಿಸುವುದು, ಯುವ ಜನರ ಮನಸ್ಸುಗಳಲ್ಲಿ ಕೊನೆಯ ಸ್ಥಾನಗಳಲ್ಲಿ ಎರಡನ್ನು ಆಕ್ರಮಿಸುತ್ತದೆ. [ಮೌಲ್ಯಗಳ] ಕೊನೆಯ ಸ್ಥಾನದಲ್ಲಿ ಏನಿದೆ? ಪ್ರಾಮಾಣಿಕತೆಯಿದೆ. ಆ ವರದಿಯು ಮುಕ್ತಾಯಗೊಳಿಸುವುದು: “ಸುಳ್ಳು ಹೇಳುವುದು ಇಷ್ಟೊಂದು ಸಾಮಾನ್ಯವಾಗಿರುವುದಾದರೆ, ಬೆಳೆಯುತ್ತಿರುವ ಸಂತತಿಯ ಮನಸ್ಸುಗಳಲ್ಲಿ [ಪ್ರಾಮಾಣಿಕತೆ]ಯು ಮೌಲ್ಯರಹಿತವಾದದ್ದಾಗಿದೆ.”