ಯುವ ಜನರು ಪ್ರಶ್ನಿಸುವುದುರು . . .
ಇಷ್ಟೊಂದು ಅಸ್ವಸ್ಥನಾಗಿರುವುದರೊಂದಿಗೆ ನಾನು ಹೇಗೆ ನಿಭಾಯಿಸಸಾಧ್ಯವಿದೆ?
ಜೇಸನ್ ಕೇವಲ 18 ವರ್ಷ ಪ್ರಾಯದವನಾಗಿದ್ದನು. ಆದರೆ ಅವನ ಜೀವಿತದ ಎಲ್ಲ ಗುರಿಗಳು ಈಗ ಎಟಕಲಸಾಧ್ಯವಾದವುಗಳೊ ಎಂಬಂತೆ ಕಂಡುಬಂದವು. ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗಿ ಸೇವೆಸಲ್ಲಿಸಲು ಅವನು ನಿರೀಕ್ಷಿಸಿದ್ದನು. ಆದರೆ ತನಗೆ ಕ್ರೋನ್ಸ್ ರೋಗ—ಒಂದು ತೀವ್ರವಾದ, ವೇದನಾಮಯ ಕರುಳು ಬೇನೆ—ಇದೆ ಎಂದು ಅವನು ಅನಂತರ ತಿಳಿದುಕೊಂಡನು. ಹಾಗಿದ್ದರೂ, ಇಂದು ಜೇಸನ್ ತನ್ನ ಪರಿಸ್ಥಿತಿಗಳೊಂದಿಗೆ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾನೆ.
ನೀವು ಸಹ ಒಂದು ಗಂಭೀರವಾದ ಕಾಯಿಲೆಯೊಂದಿಗೆ ವ್ಯವಹರಿಸುತ್ತಿರಬಹುದು. ಹಿಂದಿನ ಸಂಚಿಕೆಯೊಂದರಲ್ಲಿ, ನಿಮ್ಮಂತಹ ಯುವ ಜನರಿಂದ ಎದುರಿಸಲ್ಪಟ್ಟ ಪಂಥಾಹ್ವಾನಗಳನ್ನು ಎಚ್ಚರ! ಪತ್ರಿಕೆಯು ಪರಿಗಣಿಸಿತು.a ನಿಮ್ಮ ಸನ್ನಿವೇಶದೊಂದಿಗೆ ಯಶಸ್ವಿಯಾಗಿ ವ್ಯವಹರಿಸಲು ಹೇಗೆ ಸಾಧ್ಯವಿದೆ ಎಂಬುದನ್ನು ನಾವು ಈಗ ನೋಡೋಣ.
ಒಂದು ಸಕಾರಾತ್ಮಕವಾದ ಮಾನಸಿಕ ಮನೋಭಾವ
ಯಾವುದೇ ಕಾಯಿಲೆಯೊಂದಿಗೆ ಯಶಸ್ವಿಯಾಗಿ ನಿಭಾಯಿಸುವುದರಲ್ಲಿ ಒಂದು ಸಕಾರಾತ್ಮಕವಾದ ಮಾನಸಿಕ ಮನೋಭಾವವು ಒಳಗೊಂಡಿರುತ್ತದೆ. ಬೈಬಲ್ ತಿಳಿಸುವುದು: “ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು, ಆತ್ಮವೇ ನೊಂದರೆ ಸಹಿಸುವವರು ಯಾರು?” (ಜ್ಞಾನೋಕ್ತಿ 18:14) ಮಬ್ಬು ಮುಸುಕಿದ, ನಿರಾಶಾವಾದದ ಆಲೋಚನೆಗಳು ಮತ್ತು ಭಾವನೆಗಳು, ಗುಣವಾಗುವುದನ್ನು ಹೆಚ್ಚು ಕಷ್ಟಕರವಾಗಿ ಮಾಡುತ್ತವೆ. ಇದು ಸತ್ಯವಾಗಿದೆ ಎಂಬುದನ್ನು ಜೇಸನ್ ಕಂಡುಕೊಂಡನು.
ಮೊದಲು, ಕೋಪದಂತಹ ನಕಾರಾತ್ಮಕ ಭಾವನೆ—ಯಾವುದು ಅವನನ್ನು ಬಹಳ ಖಿನ್ನನಾಗಿ ಮಾಡುತ್ತಿತ್ತೋ—ಗಳೊಂದಿಗೆ ಜೇಸನ್ ಕಾದಾಡಬೇಕಿತ್ತು. ಯಾವುದು ಸಹಾಯ ಮಾಡಿತು? ಅವನು ವಿವರಿಸುವುದು: “ಖಿನ್ನತೆಯ ಕುರಿತಾದ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯಲ್ಲಿನ ಲೇಖನಗಳು, ಒಂದು ಸಕಾರಾತ್ಮಕವಾದ ಮನೋಭಾವವನ್ನು ಕಾಪಾಡಿಕೊಳ್ಳಲು ನನಗೆ ನಿಜವಾಗಿಯೂ ಸಹಾಯ ಮಾಡಿದವು. ಈಗ ನಾನು ಒಂದು ಸಮಯಕ್ಕೆ ಕೇವಲ ಒಂದು ದಿನವನ್ನು ಎದುರಿಸಲು ಪ್ರಯತ್ನಿಸುತ್ತೇನೆ.”b
ಹದಿನೇಳು ವರ್ಷ ಪ್ರಾಯದ ಕಾರ್ಮೆನ್, ಅಂತೆಯೇ ವಿಷಯಗಳನ್ನು ಸಕಾರಾತ್ಮಕವಾಗಿ ನೋಡಲು ಕಲಿತಳು. ಅವಳು ಸಿಕ್ಲ್-ಸೆಲ್ ಅನೀಮಿಅದಿಂದ ನರಳುವುದಾದರೂ, ಅವಳು ತನ್ನ ಆಶೀರ್ವಾದಗಳ ಕುರಿತು ಯೋಚಿಸುತ್ತಾಳೆ. “ನನಗಿಂತಲೂ ಕೆಟ್ಟದ್ದಾದ ಸ್ಥಿತಿಯಲ್ಲಿರುವ ಮತ್ತು ನಾನು ಮಾಡಬಹುದಾದ ವಿಷಯಗಳನ್ನು ಮಾಡಲು ಅಶಕ್ತರಾದ ಇತರರ ಕುರಿತು ನಾನು ಆಲೋಚಿಸುತ್ತೇನೆ. ಮತ್ತು ನಾನು ನನ್ನ ಸ್ಥಿತಿಗಾಗಿ ಮರುಗುವ ಬದಲಿಗೆ ಕೃತಜ್ಞಳಾಗಿರುತ್ತೇನೆ,” ಎಂಬುದಾಗಿ ಅವಳು ಹೇಳುತ್ತಾಳೆ.
ಜ್ಞಾನೋಕ್ತಿ 17:22 ಹೇಳುವುದು: “ಹರ್ಷಹೃದಯವು ಒಳ್ಳೇ ಔಷಧ.” ಗಂಭೀರವಾದ ಕಾಯಿಲೆಯ ಮುಂದೆ ನಗೆಯು ಉಚಿತವಲ್ಲವೆಂದು ಅನೇಕರು ಭಾವಿಸಬಹುದು. ಆದರೆ ಒಳ್ಳೆಯ ರೀತಿಯ ಹಾಸ್ಯ ಮತ್ತು ಹಿತಕರವಾದ ಒಡನಾಟವು, ನಿಮ್ಮ ಮನಸ್ಸನ್ನು ಚೈತನ್ಯಗೊಳಿಸುತ್ತದೆ ಮತ್ತು ಬದುಕಬೇಕೆಂಬ ನಿಮ್ಮ ಇಚ್ಛೆಯನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ, ಸಂತೋಷವು ಒಂದು ದೈವಿಕ ಗುಣವಾಗಿದೆ, ದೇವರ ಆತ್ಮದ ಫಲಗಳಲ್ಲಿ ಒಂದಾಗಿದೆ. (ಗಲಾತ್ಯ 5:22) ನೀವು ಒಂದು ಕಾಯಿಲೆಯೊಂದಿಗೆ ಕಾದಾಡುತ್ತಿರುವುದಾದರೂ, ಆ ಆತ್ಮವು ನಿಮಗೆ ಸಂತೋಷವನ್ನು ಅನುಭವಿಸಲು ಸಹಾಯ ಮಾಡಸಾಧ್ಯವಿದೆ.—ಕೀರ್ತನೆ 41:3.
ಅರ್ಥಮಾಡಿಕೊಳ್ಳುವಂಥ ವೈದ್ಯನನ್ನು ಕಂಡುಕೊಳ್ಳುವುದು
ಯುವ ಜನರನ್ನು ಅರ್ಥಮಾಡಿಕೊಳ್ಳುವ ಒಬ್ಬ ವೈದ್ಯನನ್ನು ಪಡೆದಿರುವುದು ಬಹಳ ಸಹಾಯಕವಾಗಿದೆ. ಒಬ್ಬ ಯುವ ವ್ಯಕ್ತಿಯ ಮಾನಸಿಕ ಮತ್ತು ಭಾವನಾತ್ಮಕ ಅಗತ್ಯತೆಗಳು, ಒಬ್ಬ ಪ್ರಾಯಸ್ಥನ ಮಾನಸಿಕ ಮತ್ತು ಭಾವನಾತ್ಮಕ ಅಗತ್ಯತೆಗಳಿಗಿಂತ ಬೇರೆಯಾಗಿರುತ್ತವೆ. ಆ್ಯಷ್ಲೀ, ಅತ್ಯುಗ್ರವಾದ ಮಿದುಳಿನ ಟ್ಯೂಮರ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕಾದಾಗ, ಕೇವಲ ಹತ್ತು ವರ್ಷ ಪ್ರಾಯದವಳಾಗಿದ್ದಳು. ಆ್ಯಷ್ಲೀಯ ವೈದ್ಯನು ಅವಳೊಂದಿಗೆ ಸಹಾನುಭೂತಿಯಿಂದ ಮತ್ತು ಅವಳು ಅರ್ಥಮಾಡಿಕೊಳ್ಳಸಾಧ್ಯವಿರುವ ಪದಗಳಲ್ಲಿ ವ್ಯವಹರಿಸಿದನು. ತನ್ನ ಸ್ವಂತ ಬಾಲ್ಯದ ಕಾಯಿಲೆಯು ಹೇಗೆ ತನಗೆ ವೈದ್ಯನಾಗುವಂತೆ ಪ್ರೇರೇಪಿಸಿತ್ತು ಎಂಬುದನ್ನು ಅವನು ಅವಳಿಗೆ ಹೇಳಿದನು. ಅವನು, ಪ್ರಸ್ತಾಪಿಸಿದ ಚಿಕಿತ್ಸೆಯನ್ನು ಅವಳಿಗೆ ಮೃದುವಾಗಿ ಆದರೆ ಸ್ಪಷ್ಟವಾಗಿ ವಿವರಿಸಿದನು. ಆದುದರಿಂದ ಏನನ್ನು ನಿರೀಕ್ಷಿಸಬೇಕೆಂದು ಅವಳಿಗೆ ತಿಳಿದಿತ್ತು.
ನಿಮ್ಮನ್ನು ಗೌರವಿಸುವ ಹಾಗೂ ನಿಮ್ಮ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವ ವೈದ್ಯಕೀಯ ಸಿಬ್ಬಂದಿಯನ್ನು ನೀವು ಮತ್ತು ನಿಮ್ಮ ಹೆತ್ತವರು ಕಂಡುಕೊಳ್ಳಲು ಬಯಸುವಿರಿ. ನೀವು ಪಡೆಯುತ್ತಿರುವ ಗಮನದೊಂದಿಗೆ ಯಾವುದೊ ಕಾರಣದಿಂದಾಗಿ ನಿಮಗೆ ನ್ಯಾಯಸಮ್ಮತವಾಗಿ ತೃಪ್ತಿಯ ಭಾವನೆಯಾಗದಿದ್ದರೆ, ನಿಮ್ಮ ಹೆತ್ತವರಿಗೆ ನಿಮ್ಮ ಚಿಂತೆಗಳನ್ನು ವ್ಯಕ್ತಪಡಿಸಲು ಬಿಚ್ಚುಮನಸ್ಸುಳ್ಳವರಾಗಿರಿ.
ನಿಮ್ಮ ಆರೋಗ್ಯಕ್ಕಾಗಿ ಹೋರಾಡಿರಿ!
ನಿಮಗೆ ಸಾಧ್ಯವಿರುವ ಎಲ್ಲ ವಿಧದಲ್ಲಿ ನೀವು ನಿಮ್ಮ ಕಾಯಿಲೆಯ ವಿರುದ್ಧ ಹೋರಾಡುವುದು ಸಹ ಅವಶ್ಯವಾಗಿದೆ. ಉದಾಹರಣೆಗಾಗಿ, ನಿಮ್ಮ ಪರಿಸ್ಥಿತಿಯ ಕುರಿತು ನಿಮ್ಮಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ತಿಳಿದುಕೊಳ್ಳಿರಿ. “ಬಲ್ಲವನಿಗೆ ಬಹು ಬಲ,” ಎಂಬುದಾಗಿ ಬೈಬಲಿನ ಒಂದು ಜ್ಞಾನೋಕ್ತಿ ತಿಳಿಸುತ್ತದೆ. (ಜ್ಞಾನೋಕ್ತಿ 24:5) ಅಜ್ಞಾತ ವಿಷಯಗಳ ಕುರಿತ ಭಯವನ್ನು ಜ್ಞಾನವು ತೆಗೆದುಹಾಕುತ್ತದೆ.
ಇದಕ್ಕೆ ಕೂಡಿಕೆಯಾಗಿ, ವಿಷಯವನ್ನು ಬಲ್ಲಾತ ಯುವಕನು, ಅವನ ಚಿಕಿತ್ಸೆಯಲ್ಲಿ ಹೆಚ್ಚು ಒಳಗೊಂಡಿರಲು ಸಾಧ್ಯವಿದೆ ಮತ್ತು ಅದರೊಂದಿಗೆ ಸಹಕರಿಸಲು ಅವನು ಒಂದು ಉತ್ತಮ ಸ್ಥಾನದಲ್ಲಿ ಇರುತ್ತಾನೆ. ಉದಾಹರಣೆಗಾಗಿ, ಗೊತ್ತು ಮಾಡಿದ ಔಷಧ ತೆಗೆದುಕೊಳ್ಳುವುದನ್ನು ಅವನ ವೈದ್ಯನ ಒಪ್ಪಿಗೆಯಿಲ್ಲದೆ ನಿಲ್ಲಿಸಬಾರದು ಎಂಬುದನ್ನು ಅವನು ತಿಳಿದುಕೊಳ್ಳಬಹುದು. ಮೇಲೆ ತಿಳಿಸಲ್ಪಟ್ಟ ಕಾರ್ಮೆನ್, ತನ್ನ ಹೆತ್ತವರು ಮಾಡಿದಂತೆ, ಸಿಕ್ಲ್-ಸೆಲ್ ಅನೀಮಿಅದ ಕುರಿತ ಪುಸ್ತಕಗಳನ್ನು ಓದಿದಳು. ಅವರು ಏನನ್ನು ಕಲಿತರೋ ಅದು, ಕಾರ್ಮೆನ್ಗೆ ಬಹಳವಾಗಿ ಸಹಾಯ ಮಾಡಸಾಧ್ಯವಾಗಿದ್ದ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ಅವರಿಗೆ ಸಹಾಯ ಮಾಡಿತು.
ಕೆಲವು ವಿಷಯವು ನಿಮಗೆ ಸ್ಪಷ್ಟವಾಗಿರದಿದ್ದರೆ, ನಿಮ್ಮ ವೈದ್ಯನಲ್ಲಿ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಿರಿ—ಅವಶ್ಯವಿದ್ದರೆ ಒಂದಕ್ಕಿಂತ ಹೆಚ್ಚು ಬಾರಿ. ವೈದ್ಯನು ನಿಮ್ಮಿಂದ ಏನನ್ನು ಕೇಳಲು ಬಯಸುತ್ತಾನೆಂದು ನೀವು ನೆನಸುತ್ತೀರೋ ಅದನ್ನು ಹೇಳುವ ಬದಲಿಗೆ, ನೀವು ಏನನ್ನು ಆಲೋಚಿಸುತ್ತೀರೋ ಮತ್ತು ಭಾವಿಸುತ್ತೀರೋ ಅದನ್ನು ಪ್ರಾಮಾಣಿಕವಾಗಿ ವಿವರಿಸಿರಿ. ಬೈಬಲ್ ತಿಳಿಸುವಂತೆ, “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು.”—ಜ್ಞಾನೋಕ್ತಿ 15:22.
ಒಂದು ಸಮಯದಲ್ಲಿ ಆ್ಯಷ್ಲೀ ತನ್ನ ಕಾಯಿಲೆಯ ಕುರಿತು ಸಂಪೂರ್ಣವಾಗಿ ಮೌನವಾಗಿರುವಂತೆ ಕಾಣುತ್ತಿತ್ತು. ಅವಳ ತಾಯಿಯೊಂದಿಗೆ ಮಾತ್ರ ಅವಳು ಇದರ ಕುರಿತು ಮಾತಾಡುತ್ತಿದ್ದಳು. ಒಬ್ಬ ಬುದ್ಧಿವಂತ ಸಮಾಜ ಸೇವಕಿ ಅವಳನ್ನು ವೈಯಕ್ತಿಕವಾಗಿ ಕೇಳಿದಳು: “ಪ್ರಾಯಶಃ ನಿನಗೆ ಎಲ್ಲವೂ ಹೇಳಲ್ಪಟ್ಟಿರುವುದಿಲ್ಲ ಎಂಬುದಾಗಿ ನೀನು ಭಾವಿಸುತ್ತಿಯೋ?” ಹೌದೆಂದು, ಆ್ಯಷ್ಲೀಯು ಒಪ್ಪಿಕೊಂಡಳು. ಆದುದರಿಂದ, ಆ ಸ್ತ್ರೀಯು ಆ್ಯಷ್ಲೀಗೆ ತನ್ನ ವೈದ್ಯಕೀಯ ದಾಖಲೆಗಳನ್ನು ತೋರಿಸಿ, ಅದನ್ನು ಅವಳಿಗೆ ವಿವರಿಸಿದಳು. ಆ್ಯಷ್ಲೀಯೊಂದಿಗೆ ನೇರವಾಗಿ ಮಾತಾಡುತ್ತಾ—ಅವಳ ಕುರಿತು ಅವಳ ಹೆತ್ತವರೊಂದಿಗೆ ಮಾತಾಡುವ ಬದಲಿಗೆ—ಹೆಚ್ಚಿನ ಸಮಯವನ್ನು ಕಳೆಯುವಂತೆ ವೈದ್ಯರಲ್ಲಿಯೂ ಅವಳು ಕೇಳಿಕೊಂಡಳು. ಕಟ್ಟಕಡೆಗೆ ತನ್ನನ್ನು ತಾನೇ ವ್ಯಕ್ತಪಡಿಸಿಕೊಳ್ಳುವ ಮೂಲಕ, ಆ್ಯಷ್ಲೀಯು ತನಗೆ ಬೇಕಾಗಿದ್ದ ಸಹಾಯವನ್ನು ಪಡೆದುಕೊಳ್ಳಶಕ್ತಳಾದಳು.
ನಿಮ್ಮ ಸುತ್ತಲಿರುವವರಿಂದ ಬೆಂಬಲ
ಕುಟುಂಬದ ಯಾವನೇ ಸದಸ್ಯನು ಗಂಭೀರವಾಗಿ ಅಸ್ವಸ್ಥನಾಗಿರುವಾಗ, ಅದು ಕುಟುಂಬಕ್ಕೆ ಸಂಬಂಧಪಟ್ಟ ಒಂದು ವಿಷಯವಾಗುತ್ತದೆ ಮತ್ತು ಐಕ್ಯಮತ್ಯದ ಪ್ರಯತ್ನವನ್ನು ಕೇಳಿಕೊಳ್ಳುತ್ತದೆ. ಆ್ಯಷ್ಲೀಯ ಕುಟುಂಬ ಹಾಗೂ ಕ್ರೈಸ್ತ ಸಭೆಯು ಅವಳಿಗೆ ಬೆಂಬಲ ನೀಡಲು ಒಟ್ಟುಗೂಡಿತು. ಅವಳು ಆಸ್ಪತ್ರೆಯಲ್ಲಿ ಇದ್ದಾಳೆಂದು ಸಭೆಯು ನಿಯತಕಾಲಿಕವಾಗಿ ಜ್ಞಾಪಿಸಲ್ಪಟ್ಟಿತು. ಸಭೆಯ ಸದಸ್ಯರು ಕ್ರಮವಾಗಿ ಅವಳನ್ನು ಆಸ್ಪತ್ರೆಯಲ್ಲಿ ಭೇಟಿಮಾಡಿದರು, ಮತ್ತು ಕುಟುಂಬವು ಪುನಃ ತನ್ನ ನಿತ್ಯದ ದಿನಚರಿಗೆ ಬರಸಾಧ್ಯವಾಗುವ ತನಕ ಅವರು ಊಟ ತಯಾರಿಸುವುದರೊಂದಿಗೆ ಹಾಗೂ ಮನೆಗೆಲಸದೊಂದಿಗೆ ಕುಟುಂಬಕ್ಕೆ ಸಹಾಯ ಮಾಡಿದರು. ಆ್ಯಷ್ಲೀಯು ಸಹವಾಸಕ್ಕೆ ತೀರ ಅಸ್ವಸ್ಥಳಾಗಿರದಿದ್ದಾಗ, ಸಭೆಯಲ್ಲಿರುವ ಮಕ್ಕಳು ಅವಳನ್ನು ಭೇಟಿಮಾಡಿದರು. ಇದು ಆ್ಯಷ್ಲೀಗೆ ಮಾತ್ರವಲ್ಲ ಅವಳ ಯುವ ಸ್ನೇಹಿತರಿಗೂ ಒಳ್ಳೆಯದಾಗಿತ್ತು.
ಆದರೂ, ಇತರರು ನಿಮಗೆ ಸಹಾಯ ಮಾಡಸಾಧ್ಯವಿರುವ ಮೊದಲು, ನಿಮಗೆ ಸಹಾಯ ಬೇಕಾಗಿದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಭಾವನಾತ್ಮಕ ಹಾಗೂ ಆತ್ಮಿಕ ಬೆಂಬಲಕ್ಕಾಗಿ ಕಾರ್ಮೆನ್, ತನ್ನ ಹೆತ್ತವರ ಕಡೆಗೆ ಮತ್ತು ಸಭೆಯ ಹಿರಿಯರೆಡೆಗೆ ನೋಡುತ್ತಾಳೆ. ಶಾಲೆಯಲ್ಲಿರುವ ಅವಳ ಕ್ರೈಸ್ತ ನಂಬಿಕೆಗಳಲ್ಲಿ ಭಾಗಿಗಳಾಗಿರುವವರು ಸಹ ಬೆಂಬಲಿಗರಾಗಿರುವಂತೆ ಅವಳು ಎದುರುನೋಡುತ್ತಾಳೆ. “ಅವರು ನನ್ನ ವಿಷಯದಲ್ಲಿ ಆಸಕ್ತಿಯನ್ನು ವಹಿಸುತ್ತಾರೆ ಮತ್ತು ನಾನು ಗಮನಿಸಲ್ಪಡುತ್ತಿದ್ದೇನೆಂಬ ಅನಿಸಿಕೆಯಾಗುತ್ತದೆ,” ಎಂಬುದಾಗಿ ಕಾರ್ಮೆನ್ ಹೇಳುತ್ತಾಳೆ.
ನಿಮ್ಮ ಶಾಲೆಯು, ಸಹಾಯಕ ವೈದ್ಯಕೀಯ ಹಾಗೂ ಹಣಕಾಸಿನ ಕುರಿತಾದ ಸಲಹೆಯನ್ನು ಒದಗಿಸಲು ಶಕ್ತವಾಗಿರಬಹುದು ಮತ್ತು ಕೆಲವು ವೈಯಕ್ತಿಕ ಬೆಂಬಲವನ್ನೂ ಕೊಡಬಹುದು. ಉದಾಹರಣೆಗಾಗಿ, ಆ್ಯಷ್ಲೀಯ ಅಧ್ಯಾಪಕಿ, ಅವಳ ತರಗತಿಯ ಮಕ್ಕಳನ್ನು ಆ್ಯಷ್ಲೀಗೆ ಕಾಗದ ಬರೆಯುವಂತೆ ಮತ್ತು ಅವಳನ್ನು ಭೇಟಿಮಾಡುವಂತೆ ಉತ್ತೇಜಿಸಿದಳು. ನೀವು ಎದುರಿಸುತ್ತಿರುವ ಕಷ್ಟಗಳನ್ನು ನಿಮ್ಮ ಅಧ್ಯಾಪಕರು ಅರ್ಥಮಾಡಿಕೊಳ್ಳದಿದ್ದಲ್ಲಿ, ಶಾಲಾ ಅಧಿಕಾರಿಗಳೊಂದಿಗೆ ನಿಮ್ಮ ಹೆತ್ತವರು ಗೌರವಾನಿತ್ವವಾಗಿ ನಿಮ್ಮ ಪರಿಸ್ಥಿತಿಯ ಬಗ್ಗೆ ಚರ್ಚಿಸುವುದು ಅವಶ್ಯವಾಗಿರಬಹುದು.
ಮನಸ್ಸನ್ನು ಮತ್ತು ದೇಹವನ್ನು ವಿವೇಕಯುತವಾಗಿ ಉಪಯೋಗಿಸಿರಿ
ನೀವು ಬಹಳ ಅಸ್ವಸ್ಥರಾಗಿರುವಾಗ, ನಿಮಗಿರುವ ಶಕ್ತಿಯನ್ನೆಲ್ಲ ಗುಣಹೊಂದುವುದರ ಮೇಲೆ ಕೇಂದ್ರೀಕರಿಸುವ ಹೊರತು ಬೇರೇನನ್ನೂ ಮಾಡಶಕ್ತರಿರಲಿಕ್ಕಿಲ್ಲ. ನೀವು ಸಂಪೂರ್ಣವಾಗಿ ನಿಶ್ಶಕ್ತರಾಗಿರದಿದ್ದರೆ, ನೀವು ಮಾಡಸಾಧ್ಯವಿರುವ ಅನೇಕ ರಚನಾತ್ಮಕ ವಿಷಯಗಳಿವೆ. ಲೇಖಕಿ ಜಿಲ್ ಕ್ರೆಮೆಂಟ್ಸ್, ನಿಮ್ಮ ಜೀವಕ್ಕಾಗಿ ಹೋರಾಡುವಾಗ ಹೇಗನಿಸುತ್ತದೆ, (ಇಂಗ್ಲಿಷ್) ಎಂಬ ತನ್ನ ಪುಸ್ತಕದ ಸಂಶೋಧನೆಮಾಡುವಾಗ ಕಂಡುಕೊಂಡ ವಿಷಯದ ಮೇಲೆ ಹೇಳಿಕೆ ನೀಡಿದ್ದು: “ಆಸ್ಪತ್ರೆಯ ಹೊರದಾರಿಗಳಲ್ಲಿ ನಡೆದಾಡುತ್ತಾ ಎರಡು ವರುಷಗಳನ್ನು ಕಳೆಯಲು ಹಾಗೂ ಅನೇಕ ಮಕ್ಕಳು ಟಿವಿಗಳನ್ನು ದುರುಗುಟ್ಟಿ ನೋಡುತ್ತಿರುವುದನ್ನು ನೋಡಲು ನನಗೆ ದುಃಖವಾಗಿತ್ತು. ಈ ಯುವ ಜನರಿಗೆ ಹೆಚ್ಚು ಓದುವಂತೆ ನಾವು ಉತ್ತೇಜನ ನೀಡುವ ಅಗತ್ಯವಿದೆ. ಒಬ್ಬನ ಮಿದುಳನ್ನು ಚುರುಕುಗೊಳಿಸಲು ಆಸ್ಪತ್ರೆಯ ಮಂಚವು ಒಂದು ಅತ್ಯುತ್ತಮವಾದ ಸ್ಥಳವಾಗಿದೆ.”
ನೀವು ಮನೆಯಲ್ಲಿರಲಿ ಅಥವಾ ಆಸ್ಪತ್ರೆಯಲ್ಲಿರಲಿ, ನಿಮ್ಮ ಮಾನಸಿಕ ಸಾಮರ್ಥ್ಯಗಳನ್ನು ಚುರುಕುಗೊಳಿಸುವುದು, ಅನೇಕ ವೇಳೆ ಸ್ವಸ್ಥವಾಗಿದ್ದೇನೆಂದು ಭಾವಿಸುವಂತೆ ನಿಮಗೆ ಸಹಾಯ ಮಾಡಸಾಧ್ಯವಿದೆ. ಕಾಗದಗಳನ್ನು ಅಥವಾ ಕವಿತೆಗಳನ್ನು ಬರೆಯಲು ನೀವು ಪ್ರಯತ್ನಿಸಿದ್ದೀರೋ? ಚಿತ್ರಬಿಡಿಸಲು ಅಥವಾ ಬಣ್ಣ ಹಚ್ಚಲು ನೀವು ಪ್ರಯತ್ನಿಸಿದ್ದೀರೋ? ನಿಮ್ಮ ಪರಿಸ್ಥಿತಿಯು ಅದನ್ನು ಅನುಮತಿಸುವುದಾದರೆ, ಒಂದು ಸಂಗೀತದ ಉಪಕರಣವನ್ನು ಬಾರಿಸಲು ಕಲಿಯುವುದರ ಕುರಿತಾಗಿ ಏನು? ಆರೋಗ್ಯದ ಸೀಮಿತಗಳಲ್ಲಿಯೂ ಅನೇಕ ಸಾಧ್ಯತೆಗಳಿವೆ. ನಿಶ್ಚಯವಾಗಿಯೂ, ನೀವು ಮಾಡಸಾಧ್ಯವಿರುವ ಉತ್ತಮವಾದ ವಿಷಯವು, ದೇವರಿಗೆ ಪ್ರಾರ್ಥನೆ ಮಾಡುವುದು ಮತ್ತು ಆತನ ವಾಕ್ಯವಾದ ಬೈಬಲನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದೇ ಆಗಿದೆ.—ಕೀರ್ತನೆ 63:6.
ನಿಮ್ಮ ಪರಿಸ್ಥಿತಿಯು ಅದನ್ನು ಅನುಮತಿಸುವುದಾದರೆ, ಯೋಗ್ಯವಾದ ಶಾರೀರಿಕ ಚಟುವಟಿಕೆಯು ಸಹ ನೀವು ಸ್ವಸ್ಥವಾಗಿದ್ದೀರೆಂದು ಭಾವಿಸುವಂತೆ ನಿಮಗೆ ಸಹಾಯ ಮಾಡಸಾಧ್ಯವಿದೆ. ಈ ಕಾರಣದಿಂದ ಯುವ ರೋಗಿಗಳಿಗಾಗಿ, ವೈದ್ಯಕೀಯ ಸೌಲಭ್ಯಗಳಲ್ಲಿ ಅನೇಕ ವೇಳೆ ಶಾರೀರಿಕ ಚಿಕಿತ್ಸಾ ಕಾರ್ಯಕ್ರಮಗಳು ಇರುತ್ತವೆ. ಅನೇಕ ಸಂದರ್ಭಗಳಲ್ಲಿ, ಯೋಗ್ಯವಾದ ವ್ಯಾಯಾಮವು ಶಾರೀರಿಕ ಸ್ವಸ್ಥಪಡಿಸುವಿಕೆಯನ್ನು ಪ್ರವರ್ಧಿಸುತ್ತದೆ ಮಾತ್ರವಲ್ಲ, ನಿಮ್ಮ ಉತ್ಸಾಹವನ್ನೂ ಮೇಲಕ್ಕೆತ್ತಲು ಸಹಾಯ ಮಾಡುತ್ತದೆ.
ಬಿಟ್ಟುಕೊಡಬೇಡಿರಿ!
ಮಹಾ ಕಷ್ಟಾನುಭವದ ಎದುರಿನಲ್ಲಿಯೂ ಯೇಸು ದೇವರಿಗೆ ಪ್ರಾರ್ಥಿಸಿದನು, ಆತನಲ್ಲಿ ಭರವಸೆಯಿಟ್ಟನು ಮತ್ತು ಯಾತನೆಯ ಬದಲಿಗೆ ತನ್ನ ಸ್ವಂತ ಆನಂದಮಯ ಭವಿಷ್ಯತ್ತಿನ ಮೇಲೆ ಕೇಂದ್ರೀಕರಿಸಿದನು. (ಇಬ್ರಿಯ 12:2) ಅವನು ತನ್ನ ಕಠಿನವಾದ ಅನುಭವಗಳಿಂದ ಕಲಿತುಕೊಂಡನು. (ಇಬ್ರಿಯ 4:15, 16; 5:7-9) ಅವನು ಸಹಾಯ ಮತ್ತು ಉತ್ತೇಜನವನ್ನು ಸ್ವೀಕರಿಸಿದನು. (ಲೂಕ 22:43) ಅವನು, ತನ್ನ ಸ್ವಂತ ಅನಾನುಕೂಲತೆಯ ಬದಲಿಗೆ ಇತರರ ಒಳಿತಿನ ಮೇಲೆ ಗಮನವಿಟ್ಟನು.—ಲೂಕ 23:39-43; ಯೋಹಾನ 19:26, 27.
ನೀವು ಬಹಳ ಅಸ್ವಸ್ಥರಾಗಿರಬಹುದಾದರೂ, ನೀವು ಇತರರಿಗೆ ಒಂದು ಉತ್ತೇಜನವಾಗಿಯೂ ಸೇವೆಸಲ್ಲಿಸಬಹುದು. ಶಾಲೆಯ ವರದಿಗಾಗಿ, ಆ್ಯಷ್ಲೀಯ ಅಕ್ಕ ಅಬೀಗೈಲ್ ಬರೆದದ್ದು: “ನಾನು ಬಹಳವಾಗಿ ಮೆಚ್ಚುವ ವ್ಯಕ್ತಿಯು ನನ್ನ ತಂಗಿಯಾಗಿದ್ದಾಳೆ. ಅವಳು ಆಸ್ಪತ್ರೆಗೆ ಹೋಗಿ, ಐವಿಗಳನ್ನು (ಅಭಿಧಮನಿಯೊಳಕ್ಕೆ ಮದ್ದುಗಳನ್ನು ಕಳುಹಿಸುವುದು) ಹೊಂದಿ, ಅನೇಕ ಸೂಜಿಮದ್ದುಗಳನ್ನು ಪಡೆದುಕೊಳ್ಳಬೇಕಾದರೂ, ಅವಳು ಇನ್ನೂ ನಗುತ್ತಲೇ ಹೊರಬರುತ್ತಾಳೆ!”c
ಜೇಸನ್, ತನ್ನ ಗುರಿಗಳನ್ನು ಬಿಟ್ಟುಕೊಟ್ಟಿರುವುದಿಲ್ಲ, ಅದನ್ನು ಹೇಗಾದರೂ ಮಾಡಿ ಹೊಂದಿಸಿಕೊಂಡಿದ್ದಾನೆ. ಈಗ ಅವನ ಗುರಿಯು, ಎಲ್ಲಿ ದೇವರ ರಾಜ್ಯದ ಪ್ರಚಾರಕರ ಹೆಚ್ಚಿನ ಅಗತ್ಯವಿದೆಯೊ ಅಲ್ಲಿ ಸೇವೆಸಲ್ಲಿಸುವುದೇ ಆಗಿದೆ. ಜೇಸನ್ನ ವಿಷಯದಲ್ಲಿ ಆದಂತೆ, ನೀವು ಆಶಿಸಿದ್ದೆಲ್ಲವನ್ನು ಮಾಡಲು ನಿಮಗೆ ಸಾಧ್ಯವಾಗಲಿಕ್ಕಿಲ್ಲ. ಮುಖ್ಯ ವಿಷಯವೇನೆಂದರೆ, ಅತಿಯಾಗಿ ರಕ್ಷಿಸಿಕೊಳ್ಳುವವರಾಗಿ ಅಥವಾ ನಿರ್ಲಕ್ಷ್ಯಭಾವದವರಾಗಿ ಇರದೆ, ನಿಮ್ಮ ಸ್ವಂತ ಮಿತಿಗಳಿಗನುಸಾರ ಜೀವಿಸಲು ಕಲಿಯುವುದೇ ಆಗಿದೆ. ನೀವು ಮಾಡಸಾಧ್ಯವಿರುವ ಉತ್ತಮವಾದದ್ದನ್ನು ಮಾಡುವರೆ, ನಿಮಗೆ ವಿವೇಕ ಹಾಗೂ ಶಕ್ತಿಯನ್ನು ದಯಪಾಲಿಸಲು ಯೆಹೋವನ ಮೇಲೆ ಆತುಕೊಳ್ಳಿರಿ. (2 ಕೊರಿಂಥ 4:16; ಯಾಕೋಬ 1:5) ನೆನಪಿನಲ್ಲಿಡಿರಿ, ಈ ಭೂಮಿಯು ಪ್ರಮೋದವನವಾಗುವಾಗ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳ”ದ ಕಾಲವು ಬರುವುದು. (ಯೆಶಾಯ 33:24) ಹೌದು, ಒಂದು ದಿನ ನೀವು ಪುನಃ ಆರೋಗ್ಯವಂತರಾಗಿರುವಿರಿ!
[ಅಧ್ಯಯನ ಪ್ರಶ್ನೆಗಳು]
a ಮೇ 8, 1997ರ ಎಚ್ಚರ! ಪತ್ರಿಕೆಯ, ಪುಟಗಳು 22-24ನ್ನು ನೋಡಿರಿ.
b ದ ವಾಚ್ಟವರ್, ಅಕ್ಟೋಬರ್ 1, 1991, ಪುಟ 15; ಮಾರ್ಚ್ 1, 1990, ಪುಟಗಳು 3-9; ಮತ್ತು ಅವೇಕ್!, ಅಕ್ಟೋಬರ್ 22, 1987, ಪುಟಗಳು 2-16; ನವೆಂಬರ್ 8, 1987, ಪುಟಗಳು 12-16ನ್ನು ನೋಡಿರಿ.
c ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ, ಕುಟುಂಬ ಸಂತೋಷದ ರಹಸ್ಯ ಪುಸ್ತಕದ ಪುಟಗಳು 116-27ನ್ನೂ ನೋಡಿರಿ.
[ಪುಟ 37 ರಲ್ಲಿರುವ ಚಿತ್ರ]
ಹಿರಿಯ ಸಹೋದರಿಯಾದ ಅಬೀಗೈಲ್, ಆ್ಯಷ್ಲೀಯ ಧೈರ್ಯವನ್ನು ಮೆಚ್ಚುತ್ತಾಳೆ