ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g00 4/8 ಪು. 31
  • ಒಂದು ಅಪರೂಪದ ಸಮಾಧಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಂದು ಅಪರೂಪದ ಸಮಾಧಿ
  • ಎಚ್ಚರ!—2000
  • ಅನುರೂಪ ಮಾಹಿತಿ
  • ಕೆಲವರು ರಾಜ್ಯ ಸಾರುವ ಕಾರ್ಯಕ್ಕೆ ದಾನಗಳನ್ನು ಮಾಡುವ ವಿಧ
    ಕಾವಲಿನಬುರುಜು—1994
  • ನಮ್ಮ ಶುಶ್ರೂಷೆಯಲ್ಲಿ ಇಂದು ಕಿರುಹೊತ್ತಗೆಗಳು ಇಷ್ಟು ಬೆಲೆಯುಳ್ಳದ್ದಾಗಿರುವ ಕಾರಣ
    1993 ನಮ್ಮ ರಾಜ್ಯದ ಸೇವೆ
  • “ದಯೆಯಿಂದ ಕೊಡುವ ಸುಯೋಗ”ದಲ್ಲಿ ನೀವು ಆನಂದಿಸುತ್ತಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಚಿತ್ರ ಚಿಕ್ಕದಲ್ಲ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಎಚ್ಚರ!—2000
g00 4/8 ಪು. 31

ಒಂದು ಅಪರೂಪದ ಸಮಾಧಿ

ಎಕ್ವಡಾರ್‌ನಲ್ಲಿರುವ ಎಚ್ಚರ! ಸುದ್ದಿಗಾರರಿಂದ

ಎಕ್ವಡಾರ್‌ನ ಉತ್ತರದಿಕ್ಕಿನಲ್ಲಿ ರಾಜಧಾನಿ ನಗರವಾದ ಕ್ವಿಟೊ ಇದೆ. ಅಲ್ಲಿ ಇಬಾರ ಎಂಬ ಸ್ಥಳದಲ್ಲಿ ಒಂದು ಅಪರೂಪದ ಸಮಾಧಿಯಿದೆ. ಅದರ ಮೇಲೆ ಎಲ್‌ ಸಿಮೆನ್‌ಟೆರಿಯೋ ಡಿ ಲೊಸ್‌ ಪೊಬ್ರಸ್‌ (ಅಂದರೆ, ಬಡವನ ಸಮಾಧಿ) ಎಂದು ಬರೆದಿದೆ. ಇದು ಒಂದು ಅಪರೂಪದ ಸಮಾಧಿಯಾಗಿರಲು ಕಾರಣವೇನು? ಸಮಾಧಿಯ ಹೊರಗೋಡೆಯ ಮೇಲಿರುವ ದೊಡ್ಡ ಆವೃತ್ತಿಯ ಚಿತ್ರಗಳು ವಾಚ್‌ ಟವರ್‌ ಸೊಸೈಟಿಯ ಪ್ರಕಾಶನಗಳಿಂದ ನೇರವಾಗಿ ನಕಲುಮಾಡಿದ ದೃಶ್ಯಗಳಾಗಿವೆ!a ಮಧ್ಯದಲ್ಲಿರುವ ಚಿತ್ರವು ಅಪೊಸ್ತಲ ಯೋಹಾನನ ಚಿತ್ರವಾಗಿದೆ. ಇದನ್ನು ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ 7ನೇ ಪುಟದಿಂದ ತೆಗೆದುಕೊಳ್ಳಲಾಗಿದೆ. ಯೋಹಾನನ ಚಿತ್ರದ ಮೇಲೆ, ಸ್ಪ್ಯಾನಿಷ್‌ ಭಾಷೆಯಲ್ಲಿ “ದೇವರ ರಾಜ್ಯವೆಂದರೆ ನೀತಿಯೂ, ಸಮಾಧಾನವೂ ಮತ್ತು ಆನಂದವೂ ಆಗಿದೆ. ರೋಮಾಪುರ 14:17” ಎಂಬ ವಚನವನ್ನೂ ಮತ್ತು ಎಡಕ್ಕೆ, ಮತ್ತಾಯ 11:28ರಲ್ಲಿರುವ “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮ್ಮನ್ನು ಚೈತನ್ಯಗೊಳಿಸುವೆನು” ಎಂಬ ವಚನವು ಬರೆಯಲ್ಪಟ್ಟಿದೆ. ಇವು ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಷನ್‌ನಿಂದ ತೆಗೆಯಲ್ಪಟ್ಟವುಗಳು. ಈ ಸಮಾಧಿಯ ಗೋಡೆಯು ಜನರನ್ನು ದೇವರ ವಾಕ್ಯದ ಕಡೆಗೆ ಮಾರ್ಗದರ್ಶಿಸುವ ಮಾಧ್ಯಮವಾಗಿದೆಯೆಂಬುದೇನೋ ನಿಜ.

[ಪಾದಟಿಪ್ಪಣಿ]

a ಆದರೆ, ವಾಚ್‌ ಟವರ್‌ ಪ್ರಕಾಶನಗಳಿಂದ ಲೇಖನಗಳನ್ನೋ ಅಥವಾ ಚಿತ್ರಗೆಲಸಗಳನ್ನೋ ನಕಲು ಮಾಡುವ ಮುಂಚೆ, ಕಾನೂನಿನ ಆವಶ್ಯಕತೆಗಳನ್ನು ಪೂರೈಸಲು ಅನುಮತಿಯನ್ನು ಪಡೆದುಕೊಳ್ಳಬೇಕು ಮತ್ತು ಅವುಗಳು ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರಾಕ್ಟ್‌ ಸೊಸೈಟಿ ಆಫ್‌ ಪೆನ್‌ಸಿಲ್ವೇನಿಯಾಗೆ ಸೇರಿದವುಗಳೆಂಬ ಹೇಳಿಕೆಯನ್ನು ನೀಡಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ