ಮೇ
ಗುರುವಾರ, ಮೇ 1
ಇಡೀ ಭೂಮಿಯಲ್ಲಿ ಬರ ಬರುತ್ತೆ.—ಅ. ಕಾ. 11:28.
ಒಂದು ಸಲ “ಇಡೀ ಭೂಮಿಯಲ್ಲಿ” ಬರ ಬಂತು. ಆಗ ಒಂದನೇ ಶತಮಾನದ ಕ್ರೈಸ್ತರಿಗೂ ತುಂಬ ಕಷ್ಟ ಆಯ್ತು. ಆಗ ಅಪ್ಪ-ಅಮ್ಮಂದಿರಿಗೆ ಕುಟುಂಬನ ಹೇಗಪ್ಪಾ ಸಾಕೋದು ಅಂತ ಚಿಂತೆ ಆಗಿರುತ್ತೆ. ಬೇರೆಬೇರೆ ಕಡೆ ಹೋಗಿ ಸಿಹಿಸುದ್ದಿ ಸಾರಬೇಕು ಅಂತ ಅಂದ್ಕೊಂಡಿರೋ ಯುವ ಜನ್ರಿಗೆ ಬರ ಮುಗಿಯೋ ತನಕ ಕಾಯಬೇಕಾ ಅಥವಾ ಹೋಗಬೇಕಾ ಅಂತ ಯೋಚ್ನೆ ಆಗಿರುತ್ತೆ. ಆದ್ರೂ ಅವರು ಅಲ್ಲೇ ಇದ್ಕೊಂಡು ಆದಷ್ಟು ಜನ್ರಿಗೆ ಸಿಹಿಸುದ್ದಿ ಸಾರಿದ್ರು. ಅಷ್ಟೇ ಅಲ್ಲ, ಯೂದಾಯದಲ್ಲಿದ್ದ ಸಹೋದರ ಸಹೋದರಿಯರಿಗೆ ತಮ್ಮ ಹತ್ರ ಇದ್ದಿದ್ದನ್ನ ಕೊಟ್ಟು ಸಹಾಯ ಮಾಡಿದ್ರು. (ಅ. ಕಾ. 11:29, 30) ಯೂದಾಯದಲ್ಲಿದ್ದ ಕ್ರೈಸ್ತರಿಗೆ ಸಹೋದರ ಸಹೋದರಿಯರಿಂದ ಸಹಾಯ ಸಿಕ್ಕಿದಾಗ ಅವರು ಯೆಹೋವನ ಆಶೀರ್ವಾದನ ಕಣ್ಣಾರೆ ನೋಡಿದ್ರು. (ಮತ್ತಾ. 6:31-33) ಅವರು ಒಬ್ರಿಗೊಬ್ರು ಇನ್ನೂ ಹತ್ರ ಆದ್ರು. ಅವ್ರಲ್ಲಿ ಕೆಲವರು ಹಣ ಕೊಟ್ಟು ಸಹಾಯ ಮಾಡಿದ್ರು. ಇನ್ನು ಕೆಲವರು ಬೇರೆಬೇರೆ ರೀತಿಯಲ್ಲಿ ಸಹಾಯ ಮಾಡಿದ್ರು. ಹೀಗೆ ಅವರು ಕೊಡೋದ್ರಲ್ಲಿ ಸಿಗೋ ಸಂತೋಷನ ಅನುಭವಿಸಿದ್ರು.—ಅ. ಕಾ. 20:35. w23.04 16 ¶12-13
ಶುಕ್ರವಾರ, ಮೇ 2
ನಾವು ಈಗಾಗ್ಲೇ ಬೇಡಿರೋದು ಸಿಕ್ಕೇ ಸಿಗುತ್ತೆ ಅಂತ ನಮಗೆ ಗೊತ್ತು.—1 ಯೋಹಾ. 5:15.
ನೆಹೆಮೀಯನ ಉದಾಹರಣೆ ನೋಡಿ. ಅವನು ಯೆರೂಸಲೇಮಿನ ಗೋಡೆಗಳನ್ನ ಕಟ್ಟಬೇಕು ಅಂತ ಯೋಚ್ನೆ ಮಾಡ್ತಿದ್ದ. ಅದಕ್ಕೆ ರಾಜ ಅರ್ತಶಸ್ತನ ಹತ್ರ ಹೋಗಿ ಮಾತಾಡಿದ. ರಾಜ ಒಪ್ಕೊಂಡ, ನೆಹೆಮೀಯನನ್ನ ಯೆರೂಸಲೇಮಿಗೆ ಕಳಿಸ್ಕೊಟ್ಟ. ರಾಜನಿಗೆ ಆ ಒಳ್ಳೇ ಮನಸ್ಸು ಕೊಟ್ಟಿದ್ದು ಯೆಹೋವನೇ. (ನೆಹೆ. 2:3-6) ಈಗ್ಲೂ ಕೂಡ ತನ್ನನ್ನ ಆರಾಧನೆ ಮಾಡದಿರೋ ಜನ್ರಿಂದ ನಮಗೆ ಸಹಾಯ ಸಿಗೋ ಹಾಗೆ ಯೆಹೋವ ಮಾಡ್ತಾನೆ. ಈ ರೀತಿಯಲ್ಲೂ ಆತನು ನಮ್ಮ ಪ್ರಾರ್ಥನೆಗಳಿಗೆ ಉತ್ರ ಕೊಡ್ತಾನೆ. ಯೆಹೋವ ದೇವರು ನಾವು ಬೇಡ್ಕೊಂಡಿದ್ದನ್ನ ನಮ್ಮ ಕಣ್ಮುಂದೆನೇ ನಡೆಯೋ ತರ ಮಾಡಿ ನಮ್ಮ ಪ್ರಾರ್ಥನೆಗಳಿಗೆ ಉತ್ರ ಕೊಡ್ತಾನೆ ಅಂತ ಹೇಳಕ್ಕಾಗಲ್ಲ. ಆದ್ರೆ ನಾವು ಆತನಿಗೆ ನಿಯತ್ತಾಗಿ ಇರೋಕೆ ಏನು ಸಹಾಯ ಬೇಕೋ ಅದನ್ನ ಮಾಡೇ ಮಾಡ್ತಾನೆ. ಹಾಗಾಗಿ ಆತನು ನಮ್ಮ ಪ್ರಾರ್ಥನೆಗಳಿಗೆ ಹೇಗೆ ಉತ್ರ ಕೊಡ್ತಾನೆ ಅಂತ ತಿಳ್ಕೊಳ್ಳೋಕೆ ಪ್ರಯತ್ನ ಮಾಡಬೇಕು. ನಮ್ಮ ಪ್ರಾರ್ಥನೆಗಳಿಗೆ ಯೆಹೋವ ಹೇಗೆಲ್ಲ ಉತ್ರ ಕೊಟ್ಟಿದ್ದಾನೆ ಅಂತ ಆಗಾಗ ಯೋಚ್ನೆ ಮಾಡೋದು ಒಳ್ಳೇದು. (ಕೀರ್ತ. 66:19, 20) ನಾವು ಪ್ರಾರ್ಥನೆ ಮಾಡಿದಾಗ ಮಾತ್ರ ಅಲ್ಲ, ಮಾಡಿದ ಮೇಲೂ ಯೆಹೋವನ ಮೇಲೆ ನಂಬಿಕೆ ಇದೆ ತೋರಿಸ್ಕೊಡಬೇಕು. ಹೇಗೆ? ಯೆಹೋವ ಹೇಗೇ ಉತ್ರ ಕೊಟ್ರೂ ಅದನ್ನ ಒಪ್ಕೊಬೇಕು.—ಇಬ್ರಿ. 11:6. w23.05 11 ¶13; 12 ¶15-16
ಶನಿವಾರ, ಮೇ 3
ನನ್ನ ದೇವರೇ, ನಿನ್ನ ಇಷ್ಟವನ್ನ ಮಾಡೋದೇ ನನ್ನ ಆಸೆ.—ಕೀರ್ತ. 40:8.
ನಾವು ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡಾಗ ‘ನಿನ್ನನ್ನೇ ಆರಾಧಿಸ್ತೀವಿ, ನಿನ್ನ ಇಷ್ಟಾನೇ ಮಾಡ್ತೀವಿ’ ಅಂತ ಮಾತು ಕೊಟ್ವಿ. ಅದ್ರ ಪ್ರಕಾರ ಜೀವನ ಮಾಡ್ತಾ ಆ ಮಾತನ್ನ ಉಳಿಸ್ಕೊಬೇಕು. ಇದು ಒಂದು ದೊಡ್ಡ ಜವಾಬ್ದಾರಿ. ಆದ್ರೆ ಭಾರ ಅಲ್ಲ. ಯಾಕಂದ್ರೆ ಯೆಹೋವ ನಮ್ಮನ್ನ ಸೃಷ್ಟಿ ಮಾಡಿರೋ ರೀತಿಯಿಂದ ಇದು ಗೊತ್ತಾಗುತ್ತೆ. (ಪ್ರಕ. 4:11) ಆತನ ಬಗ್ಗೆ ತಿಳ್ಕೊಬೇಕು, ಆತನನ್ನ ಆರಾಧನೆ ಮಾಡಬೇಕು ಅನ್ನೋ ಆಸೆಯನ್ನ ಆತನು ನಮ್ಮಲ್ಲಿ ಇಟ್ಟಿದ್ದಾನೆ. ಅದಕ್ಕೆ ನಾವು ಆತನ ಜೊತೆ ಒಳ್ಳೇ ಸ್ನೇಹ ಬೆಳೆಸ್ಕೊಳ್ಳೋಕೆ ಆಗಿದೆ. ಆತನ ಸೇವೆ ಮಾಡಿದಾಗ ನಮಗೆ ಖುಷಿ ಸಿಕ್ತಿದೆ. ಅಷ್ಟೇ ಅಲ್ಲ ದೇವರಿಗೆ ಏನಿಷ್ಟನೋ ಅದೇ ತರ ನಡ್ಕೊಂಡ್ರೆ, ಆತನ ಮಗನ ಮಾತನ್ನ ಕೇಳಿದ್ರೆ ಜೀವದ ಓಟ ಓಡೋಕೆ “ಹೊಸಬಲ” ಸಿಗುತ್ತೆ. (ಮತ್ತಾ. 11:28-30) ಹಾಗಾಗಿ ಯೆಹೋವನ ಮೇಲಿರೋ ಪ್ರೀತಿನ ಜಾಸ್ತಿ ಮಾಡ್ಕೊಬೇಕು. ಆತನು ಇಲ್ಲಿ ತನಕ ನಮಗೆ ಏನೆಲ್ಲಾ ಒಳ್ಳೇದು ಮಾಡಿದ್ದಾನೋ ಅದ್ರ ಬಗ್ಗೆ ಮತ್ತು ಮುಂದೆ ಕೊಡೋ ಆಶೀರ್ವಾದಗಳ ಬಗ್ಗೆ ಯೋಚ್ನೆ ಮಾಡಬೇಕು. ಆಗ ನಮಗೆ ಆತನ ಮೇಲಿರೋ ಪ್ರೀತಿ ಜಾಸ್ತಿ ಆಗುತ್ತೆ. ಅಷ್ಟೇ ಅಲ್ಲ, ಆತನ ಮಾತು ಕೇಳೋಕೆ ಇನ್ನೂ ಸುಲಭ ಆಗುತ್ತೆ. (1 ಯೋಹಾ. 5:3) ಯೇಸು ಕ್ರಿಸ್ತ, ‘ಸಹಾಯ ಮಾಡಪ್ಪಾ’ ಅಂತ ಯೆಹೋವನಿಗೆ ಪ್ರಾರ್ಥನೆ ಮಾಡ್ತಿದ್ದನು. ಜೊತೆಗೆ, ಮುಂದೆ ಸಿಗೋ ಬಹುಮಾನದ ಮೇಲೆ ಮನಸ್ಸಿಟ್ಟನು. ಇದ್ರಿಂದ ಯೇಸುಗೆ ಯೆಹೋವ ಇಷ್ಟ ಪಡೋ ತರಾನೇ ಜೀವನ ಮಾಡಕ್ಕಾಯ್ತು. (ಇಬ್ರಿ. 5:7; 12:2) ಅದೇ ತರ ನಾವೂ ಪ್ರಾರ್ಥನೆ ಮಾಡಬೇಕು. ಜೊತೆಗೆ, ನಮಗೆ ಮುಂದೆ ಯೆಹೋವ ಶಾಶ್ವತ ಜೀವ ಕೊಟ್ಟೇ ಕೊಡ್ತಾನೆ ಅನ್ನೋದನ್ನ ಮನಸ್ಸಲ್ಲಿ ಇಡಬೇಕು w23.08 27-28 ¶4-5
ಭಾನುವಾರ, ಮೇ 4
ದೇವರ ಅಪಾರ ದಯೆ, ಸಹನೆ, ತಾಳ್ಮೆಯನ್ನ ನೀನು ಕೀಳಾಗಿ ನೋಡ್ತೀಯಾ? ನೀನು ಪಶ್ಚಾತ್ತಾಪ ಪಡಬೇಕಂತ ದೇವರು ನಿನಗೆ ದಯೆ ತೋರಿಸ್ತಿದ್ದಾನೆ ಅಂತ ನಿನಗೆ ಗೊತ್ತಿಲ್ವಾ?—ರೋಮ. 2:4.
ತಾಳ್ಮೆ ತೋರಿಸುವವ್ರನ್ನ ನೋಡಿದ್ರೆ ನಮಗೆ ತುಂಬ ಇಷ್ಟ. ಯಾಕಂದ್ರೆ ಅವರು ಎಷ್ಟು ಹೊತ್ತು ಕಾಯಬೇಕಾಗಿ ಬಂದ್ರೂ ಒಂಚೂರೂ ಬೇಜಾರ್ ಮಾಡ್ಕೊಳ್ಳಲ್ಲ. ನಾವೇನಾದ್ರೂ ತಪ್ಪು ಮಾಡಿದ್ರೆ ಅವರು ತಕ್ಷಣ ಕೋಪ ಮಾಡ್ಕೊಳ್ಳಲ್ಲ. ನಿಮಗೆ ಬೈಬಲ್ ಕಲಿಸಿದವ್ರನ್ನ ಸ್ವಲ್ಪ ನೆನಪಿಸ್ಕೊಳ್ಳಿ. ಕೆಲವೊಂದು ವಿಷ್ಯಗಳು ನಿಮಗೆ ಅರ್ಥ ಆಗದೇ ಇದ್ದಾಗ ಅವರು ಮತ್ತೆ-ಮತ್ತೆ ಹೇಳ್ಕೊಟ್ಟಿದ್ದಾರೆ. ಕಲ್ತಿದ್ದನ್ನ ನೀವು ಪಾಲಿಸದೇ ಇದ್ದಾಗ ತಾಳ್ಮೆ ತೋರಿಸಿದ್ದಾರೆ. ಯೆಹೋವ ದೇವರನ್ನೂ ನೆನಪಿಸ್ಕೊಳ್ಳಿ. ಆತನು ನಮಗೆ ತೋರಿಸಿರೋ ತಾಳ್ಮೆಗೆ ಜೀವನಪೂರ್ತಿ ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ! ಬೇರೆಯವರು ನಮಗೆ ತಾಳ್ಮೆ ತೋರಿಸಬೇಕು ಅಂತ ನಾವು ಆಸೆಪಡ್ತೀವಿ. ಆದ್ರೆ ನಾವೇ ಕೆಲವೊಮ್ಮೆ ತಾಳ್ಮೆ ಕಳ್ಕೊಂಡುಬಿಡ್ತೀವಿ. ಉದಾಹರಣೆಗೆ, ನೀವು ಎಲ್ಲೋ ಹೋಗಬೇಕಾಗಿರುತ್ತೆ, ಆದ್ರೆ ಈಗಾಗ್ಲೇ ಲೇಟ್ ಆಗಿಬಿಟ್ಟಿದೆ ಅಂದ್ಕೊಳಿ. ಅದ್ರಲ್ಲೂ ಟ್ರಾಫಿಕಲ್ಲಿ ಸಿಕ್ಕಿಹಾಕೊಂಡಿದ್ದೀರ. ಆಗ ಮೈಯೆಲ್ಲಾ ಪರಚ್ಕೊಳ್ಳೋ ತರ ಆಗುತ್ತೆ ಅಲ್ವಾ? ಕೆಲವೊಮ್ಮೆ ಯಾರಾದ್ರೂ ನಮಗೆ ಕಿರಿಕಿರಿ ಮಾಡಿದಾಗ ತುಂಬ ಕೋಪ ಬರುತ್ತೆ. ಇನ್ನು ಕೆಲವೊಮ್ಮೆ ಹೊಸ ಲೋಕಕ್ಕೋಸ್ಕರ ಕಾದು-ಕಾದು ಸಾಕಾಗಿಹೋಗುತ್ತೆ. ಆದ್ರೂ ಇಂಥ ಸಂದರ್ಭಗಳಲ್ಲಿ ಸಹ ನಾವು ತಾಳ್ಮೆ ತೋರಿಸಬೇಕು. w23.08 20 ¶1-2
ಸೋಮವಾರ, ಮೇ 5
ಗಿದ್ಯೋನ ಆ 300 ಗಂಡಸ್ರನ್ನ ಬಿಟ್ಟು ಮಿಕ್ಕಿದವ್ರನ್ನ ಮನೆಗೆ ಕಳಿಸಿದ.—ನ್ಯಾಯ. 7:8.
ಸೈನಿಕರನ್ನ ಕಡಿಮೆ ಮಾಡು ಅಂತ ಯೆಹೋವ ಗಿದ್ಯೋನನಿಗೆ ಹೇಳಿದನು. ಇದ್ರಿಂದ ಅವನು 99 ಪರ್ಸೆಂಟ್‌ಗಿಂತ ಜಾಸ್ತಿ ಜನ್ರನ್ನ ಮನೆಗೆ ಕಳಿಸಬೇಕಾಯ್ತು. ಆಗ ಅವನಿಗೆ ‘ಈ ಟೈಮಲ್ಲಿ ಇದನ್ನ ಮಾಡಬೇಕಾ? ಇಷ್ಟು ಕಡಿಮೆ ಸೈನಿಕರನ್ನ ಇಟ್ಕೊಂಡು ನಾನೇನು ಮಾಡಲಿ?’ ಅಂತ ಅನಿಸಿರಬಹುದು. ಆದ್ರೂ ಅವನು ಯೆಹೋವನ ಮಾತು ಕೇಳಿದ. ಹಿರಿಯರು ಗಿದ್ಯೋನನ ತರ ಇರಬೇಕು. ಸಂಘಟನೆ ಏನೇ ಬದಲಾವಣೆ ಮಾಡ್ಕೊಳ್ಳೋಕೆ ಹೇಳಿದ್ರೂ ಅದನ್ನ ಮಾಡಬೇಕು. ಈಗಾಗ್ಲೇ ಹಿರಿಯರು ಇದನ್ನ ಮಾಡ್ತಿದ್ದಾರೆ. (ಇಬ್ರಿ. 13:17) ಯೆಹೋವ ಹೇಳಿದ್ದನ್ನ ಮಾಡೋಕೆ ಭಯ ಆದ್ರೂ, ಕಷ್ಟ ಆದ್ರೂ ಯೆಹೋವನ ಮಾತನ್ನ ಗಿದ್ಯೋನ ಕೇಳಿದ. (ನ್ಯಾಯ. 9:17) ಯೆಹೋವ ದೇವರು ಗಿದ್ಯೋನನಿಗೆ ಧೈರ್ಯ ತುಂಬಿದ ಮೇಲೆ ಅವನಿಗೆ ಯೆಹೋವನ ಮೇಲೆ ನಂಬಿಕೆ ಜಾಸ್ತಿ ಆಯ್ತು. ಆತನ ಜನ್ರನ್ನ ಕಾಪಾಡೋಕೆ ತನಗೆ ಸಹಾಯ ಮಾಡ್ತಾನೆ ಅಂತ ಗೊತ್ತಾಯ್ತು. ಯೆಹೋವನ ಕೆಲಸವನ್ನ ನಿಷೇಧ ಮಾಡಿರೋ ದೇಶಗಳಲ್ಲಿ ಹಿರಿಯರು ಗಿದ್ಯೋನನ ತರ ಇರಬೇಕು. ಅವರು ಈಗಾಗ್ಲೇ ಇಂಥ ಧೈರ್ಯನ ತೋರಿಸ್ತಾ ಇದ್ದಾರೆ. ಕೆಲಸ ಹೋಗಬಹುದು, ತಮ್ಮನ್ನ ಜೈಲಿಗೆ ಹಾಕಬಹುದು, ವಿಚಾರಣೆ ಮಾಡಬಹುದು, ಹೊಡಿಬಹುದು ಅಂತೆಲ್ಲ ಅವ್ರಿಗೆ ಗೊತ್ತು. ಆದ್ರೂ ಕೂಟಗಳನ್ನ ನಡಿಸೋಕೆ, ಸಿಹಿಸುದ್ದಿ ಸಾರೋಕೆ ಬೇಕಾದ ಏರ್ಪಾಡುಗಳನ್ನ ಮಾಡ್ತಾ ಇದ್ದಾರೆ. ಮಹಾ ಸಂಕಟದ ಸಮಯದಲ್ಲೂ ಅವರು ಇದೇ ತರ ಧೈರ್ಯ ತೋರಿಸಬೇಕಾಗುತ್ತೆ. ಯಾಕಂದ್ರೆ ಆಗ ಬರೋ ನಿರ್ದೇಶನಗಳು ಇನ್ನೂ ಕಷ್ಟ ಇರುತ್ತೆ. w23.06 5-6 ¶12-13
ಮಂಗಳವಾರ, ಮೇ 6
ನನಗೆ ಗೌರವ ಕೊಡುವವರಿಗೆ ನಾನೂ ಗೌರವ ಕೊಡ್ತೀನಿ. —1 ಸಮು. 2:30.
ಯೆಹೋವ ತಾನು ಮಾತು ಕೊಟ್ಟ ಹಾಗೆ ಯೆಹೋಯಾದನನ್ನ ಗೌರವಿಸಿದನು. ಹೇಗಂದ್ರೆ, ಯೆಹೋಯಾದನಿಂದ ಎಲ್ರೂ ಕಲಿಬೇಕಂತ ಯೆಹೋವ ದೇವರು ಅವನ ಬಗ್ಗೆ ಬೈಬಲಲ್ಲಿ ಬರೆಸಿದನು. (ರೋಮ. 15:4) ಅಷ್ಟೇ ಅಲ್ಲ, ಯೆಹೋಯಾದ ತೀರಿಕೊಂಡ ಮೇಲೆ “ಅವನನ್ನ ದಾವೀದಪಟ್ಟಣದಲ್ಲಿ ರಾಜರ ಸಮಾಧಿಯಲ್ಲಿ ಹೂಣಿಟ್ರು. ಯಾಕಂದ್ರೆ ಅವನು ಇಸ್ರಾಯೇಲಲ್ಲಿ ಒಳ್ಳೇ ಕೆಲಸಗಳನ್ನ ಮಾಡಿದ್ದ. ಅದ್ರಲ್ಲೂ ಸತ್ಯ ದೇವರ ವಿಷ್ಯದಲ್ಲಿ, ಆತನ ಆಲಯದ ವಿಷ್ಯದಲ್ಲಿ ಒಳ್ಳೇ ಕೆಲಸಗಳನ್ನ ಮಾಡಿದ್ದ.” ಹೀಗೆ ಯೆಹೋವ ಅವನಿಗೆ ರಾಜ ಮರ್ಯಾದೆ ಕೊಟ್ಟು ಸನ್ಮಾನಿಸಿದನು. (2 ಪೂರ್ವ. 24:15, 16) ಯೆಹೋಯಾದನ ತರ ನಾವು ಕೂಡ ಯೆಹೋವನ ಮೇಲೆ ಭಯ ಬೆಳೆಸ್ಕೊಬೇಕು. ಯೆಹೋಯಾದನ ತರ ಹಿರಿಯರು ಸಭೆಯನ್ನ ಕಾಪಾಡಬೇಕು. (ಅ. ಕಾ. 20:28) ವಯಸ್ಸಾದವರು ಯೆಹೋವನ ಮೇಲೆ ಭಯ ಬೆಳೆಸ್ಕೊಬೇಕು, ಆತನಿಗೆ ನಿಯತ್ತಾಗಿ ಇರಬೇಕು. ಆಗ ಯೆಹೋವ ಅವ್ರನ್ನ ತನ್ನ ಸೇವೆಯಲ್ಲಿ ಉಪಯೋಗಿಸ್ತಾನೆ. ಯೆಹೋವ ಯೆಹೋಯಾದನನ್ನ ಗೌರವಿಸಿದ ತರ ಯುವಕರು ವಯಸ್ಸಾದವರನ್ನ ಅದ್ರಲ್ಲೂ ತುಂಬ ವರ್ಷಗಳಿಂದ ಯೆಹೋವನ ಸೇವೆ ಮಾಡ್ತಾ ಇರೋರನ್ನ ಗೌರವಿಸಬೇಕು. (ಜ್ಞಾನೋ. 16:31) ನಾವು ಕೂಡ ‘ಮುಂದೆ ನಿಂತು ನಮ್ಮನ್ನ ನಡಿಸುವವ್ರಿಗೆ ಸಹಕಾರ ಕೊಟ್ಟು ಅವ್ರ ಮಾತನ್ನ ಕೇಳಬೇಕು.’—ಇಬ್ರಿ. 13:17. w23.06 17 ¶14-15
ಬುಧವಾರ, ಮೇ 7
ನೀತಿವಂತನ ಮಾತು ಅನೇಕರನ್ನ ನೋಡ್ಕೊಳ್ಳುತ್ತೆ.—ಜ್ಞಾನೋ. 10:21.
ಕೂಟಗಳಲ್ಲಿ ನಾವು ಎಷ್ಟು ಸಲ ಕೈ ಎತ್ತುತ್ತೀವಿ ಅಂತನೂ ಯೋಚ್ನೆ ಮಾಡಬೇಕು. ನಾವು ಯಾವಾಗ್ಲೂ ಕೈ ಎತ್ತುತ್ತಾ ಇದ್ರೆ ಕೂಟ ನಡೆಸ್ತಿರೋ ಸಹೋದರನಿಗೆ ನಮ್ಮನ್ನೇ ಕೇಳಬೇಕು ಅಂತ ಒತ್ತಾಯ ಮಾಡಿದ ಹಾಗಿರುತ್ತೆ. ಇದ್ರಿಂದ ನಮಗೆ ಜಾಸ್ತಿ ಅವಕಾಶಗಳು ಸಿಗುತ್ತೆ. ಬೇರೆಯವ್ರಿಗೆ ಅವಕಾಶನೇ ಸಿಗಲ್ಲ. ಆಗ ಅವ್ರಿಗೆ ಬೇಜಾರಾಗಿ ಕೈ ಎತ್ತೋದನ್ನೇ ನಿಲ್ಲಿಸಿಬಿಡ್ತಾರೆ. (ಪ್ರಸಂ. 3:7) ತುಂಬ ಜನ ಉತ್ರ ಹೇಳೋಕೆ ಕೈ ಎತ್ತಿದಾಗ ನಮಗೆ ಜಾಸ್ತಿ ಅವಕಾಶ ಸಿಗದೇ ಹೋಗಬಹುದು. ಕೆಲವೊಮ್ಮೆ ಒಂದು ಅವಕಾಶನೂ ಸಿಗದೇ ಹೋಗಬಹುದು. ಆಗ ನಾವು ಬೇಜಾರ್ ಮಾಡ್ಕೊಬಾರದು. ಅವರು ಬೇಕುಬೇಕು ಅಂತಾನೇ ನನ್ನನ್ನ ಕೇಳ್ತಿಲ್ಲ ಅಂತ ಅಂದ್ಕೊಬಾರದು. (ಪ್ರಸಂ. 7:9) ನಿಮಗೆ ಉತ್ರ ಹೇಳೋಕೆ ಅವಕಾಶ ಸಿಕ್ಕಿಲ್ಲ ಅಂದ್ರೆ ಏನು ಮಾಡಬೇಕು? ಬೇರೆಯವರು ಉತ್ರ ಹೇಳುವಾಗ ಚೆನ್ನಾಗಿ ಕೇಳಿಸ್ಕೊಳ್ಳಿ. ಅವರು ಕೊಟ್ಟ ಉತ್ರ ಚೆನ್ನಾಗಿತ್ತು ಅಂತ ಕೂಟ ಮುಗಿದ ಮೇಲೆ ಅವ್ರ ಹತ್ರ ಹೇಳಿ. ನೀವು ಉತ್ರ ಹೇಳಿದಾಗ ಮಾತ್ರ ಅಲ್ಲ, ಅವ್ರನ್ನ ಹೊಗಳಿದಾಗಲೂ ಅವ್ರಿಗೆ ಪ್ರೋತ್ಸಾಹ ಸಿಗುತ್ತೆ. w23.04 23-24 ¶14-16
ಗುರುವಾರ, ಮೇ 8
ದೇವರೇ, ನನ್ನ ಹೃದಯ ಸ್ಥಿರವಾಗಿದೆ.—ಕೀರ್ತ. 57:7.
ಬೈಬಲನ್ನ ಓದಿ ಅದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿ. ಒಂದು ಮರದ ಬೇರು ಆಳವಾಗಿ ಇಳಿದ್ರೆನೇ ಆ ಮರ ಗಟ್ಟಿಯಾಗಿ ನಿಲ್ಲುತ್ತೆ. ಅದೇ ತರ ನಾವು ಬೈಬಲನ್ನ ಚೆನ್ನಾಗಿ ಓದಿ ಅಧ್ಯಯನ ಮಾಡಿದ್ರೆನೇ ನಮ್ಮ ನಂಬಿಕೆ ಗಟ್ಟಿಯಾಗಿ ಇರುತ್ತೆ. ಒಂದು ಮರ ಬೆಳೀತಾ ಹೋದ ಹಾಗೆ ಅದ್ರ ಬೇರು ಇನ್ನೂ ಆಳಕ್ಕೆ ಇಳೀತಾ, ಹರಡ್ತಾ ಹೋಗುತ್ತೆ. ಅದೇ ತರ ನಾವು ಬೈಬಲನ್ನ ಓದಿ ಅದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿದ್ರೆ ಯೆಹೋವನ ಮೇಲೆ ನಂಬಿಕೆ ಜಾಸ್ತಿ ಆಗ್ತಾ ಹೋಗುತ್ತೆ. ಅಷ್ಟೇ ಅಲ್ಲ, ಆತನು ಮಾಡೋದೆಲ್ಲ ನಮ್ಮ ಒಳ್ಳೇದಕ್ಕೆ ಅಂತ ಅರ್ಥ ಮಾಡ್ಕೊಳ್ತೀವಿ. (ಕೊಲೊ. 2:6, 7) ಹಿಂದಿನ ಕಾಲದಲ್ಲಿ ಯೆಹೋವ ತನ್ನ ಜನ್ರಿಗೆ ಹೇಗೆ ದಾರಿ ತೋರಿಸಿದ್ದಾನೆ, ಅವ್ರನ್ನ ಹೇಗೆ ಕಾಪಾಡಿದ್ದಾನೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿ. ಉದಾಹರಣೆಗೆ ಯೆಹೆಜ್ಕೇಲ ಒಂದು ದರ್ಶನದಲ್ಲಿ ಒಬ್ಬ ದೇವದೂತ ಆಲಯನ ಅಳತೆ ಮಾಡ್ತಾ ಇರೋದನ್ನ ನೋಡಿದ. ಅದನ್ನ ಯೆಹೆಜ್ಕೇಲ ಗಮನ ಕೊಟ್ಟು ನೋಡಿದ್ರಿಂದ ಅವನಿಗೆ ತುಂಬ ಪ್ರಯೋಜನ ಆಯ್ತು. ನಾವು ಕೂಡ ಈ ದರ್ಶನದ ಬಗ್ಗೆ ಓದಿ ಅಧ್ಯಯನ ಮಾಡೋದ್ರಿಂದ ಯೆಹೋವ ದೇವರಿಗೆ ಇಷ್ಟ ಆಗೋ ತರ ಆರಾಧನೆ ಮಾಡೋದು ಹೇಗೆ ಅಂತ ಕಲಿತೀವಿ. (ಯೆಹೆ. 40:1-4; 43:10-12) ನಾವು ಬೈಬಲಲ್ಲಿರೋ ಆಳವಾದ ವಿಷ್ಯಗಳ ಬಗ್ಗೆ ಓದಿ ಅಧ್ಯಯನ ಮಾಡಬೇಕು. ಹೀಗೆ ಮಾಡಿದ್ರೆ ನಾವು ತುಂಬ ಪ್ರಯೋಜನ ಪಡ್ಕೊಳ್ತೀವಿ. ಅಷ್ಟೇ ಅಲ್ಲ, ಮನಸ್ಸು ಚಂಚಲ ಆಗದ ಹಾಗೆ ನೋಡ್ಕೊಳ್ಳಿ, ಯೆಹೋವ ದೇವರನ್ನ ಪೂರ್ತಿಯಾಗಿ ನಂಬಿ.—ಕೀರ್ತ. 112:7. w23.07 18 ¶15-16
ಶುಕ್ರವಾರ, ಮೇ 9
ಯೋಚ್ನೆ ಮಾಡೋ ಶಕ್ತಿಯನ್ನ ಕಾಪಾಡ್ಕೊ.—ಜ್ಞಾನೋ. 3:21.
ಒಳ್ಳೇ ಮಾದರಿ ಇಟ್ಟ ಎಷ್ಟೋ ವ್ಯಕ್ತಿಗಳ ಉದಾಹರಣೆ ಬೈಬಲಲ್ಲಿದೆ. ಅವರು ಯೆಹೋವನನ್ನ ತುಂಬ ಪ್ರೀತಿಸ್ತಿದ್ರು ಮತ್ತು ಮುಂದೆ ನಿಂತು ಆತನ ಜನ್ರನ್ನ ಚೆನ್ನಾಗಿ ನೋಡ್ಕೊಳ್ತಿದ್ರು. ಯುವ ಸಹೋದರರೇ, ನೀವೂ ಇವ್ರ ತರ ಇರಬಹುದು. ಇವ್ರಷ್ಟೇ ಅಲ್ಲ, ಒಳ್ಳೆ ಮಾದರಿ ಇಟ್ಟಿರೋ ಕ್ರೈಸ್ತರು ನಿಮ್ಮ ಕುಟುಂಬದಲ್ಲಿ ಮತ್ತು ಸಭೆಲಿ ಇರಬಹುದು. ಅವ್ರನ್ನ ನೋಡಿ ಕಲಿರಿ. (ಇಬ್ರಿ. 13:7) ಅಷ್ಟೇ ಅಲ್ಲ, ಮುಖ್ಯವಾಗಿ ಯೇಸು ಕ್ರಿಸ್ತ ನಮ್ಮೆಲ್ರಿಗೂ ಒಂದು ಒಳ್ಳೇ ಮಾದರಿ. (1 ಪೇತ್ರ 2:21) ಇವ್ರೆಲ್ರ ಬಗ್ಗೆ ಯೋಚಿಸುವಾಗ ಇವ್ರಲ್ಲಿದ್ದ ಒಳ್ಳೇ ಗುಣಗಳ ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ. (ಇಬ್ರಿ. 12:1, 2) ಆಮೇಲೆ ನೀವೂ ಅವ್ರ ತರ ಇರೋಕೆ ಏನು ಮಾಡಬೇಕು ಅಂತ ಯೋಚ್ನೆ ಮಾಡಿ. ಚೆನ್ನಾಗಿ ಯೋಚ್ನೆ ಮಾಡೋ ವ್ಯಕ್ತಿ ದುಡುಕಿ ತೀರ್ಮಾನ ತಗೊಳ್ಳಲ್ಲ. ಚೆನ್ನಾಗಿ ಯೋಚ್ನೆ ಮಾಡೋ ಸಾಮರ್ಥ್ಯನ ಬೆಳೆಸ್ಕೊಳ್ಳೋದು ಪ್ರಾಮುಖ್ಯ. ಬೈಬಲಿಂದ ಯೆಹೋವನ ಯೋಚ್ನೆಗಳೇನು ಅಂತ ತಿಳ್ಕೊಳ್ಳಿ ಮತ್ತು ಆ ತತ್ವಗಳನ್ನ ಅನ್ವಯಿಸೋದ್ರಿಂದ ನಿಮಗೇನು ಪ್ರಯೋಜನ ಅಂತ ಯೋಚಿಸಿ. ಆಗ ಯೆಹೋವನಿಗೆ ಇಷ್ಟ ಆಗೋ ತರ ನಿಮಗೆ ತೀರ್ಮಾನಗಳನ್ನ ಮಾಡೋಕಾಗುತ್ತೆ. (ಕೀರ್ತ. 119:9) ಹೀಗೆ ನೀವು ಯೋಚಿಸೋ ಸಾಮರ್ಥ್ಯ ಬೆಳೆಸ್ಕೊಂಡ್ರೆ ಪ್ರೌಢ ಕ್ರೈಸ್ತರಾಗ್ತೀರ.—ಜ್ಞಾನೋ. 2:11, 12; ಇಬ್ರಿ. 5:14. w23.12 24-25 ¶4-5
ಶನಿವಾರ, ಮೇ 10
ನಿಮಗಿರೋ ನಿರೀಕ್ಷೆ ಬಗ್ಗೆ ಕೇಳೋ ಪ್ರತಿಯೊಬ್ರಿಗೂ ಉತ್ರ ಕೊಡೋಕೆ ಯಾವಾಗ್ಲೂ ಸಿದ್ಧವಾಗಿರಿ. ಆದ್ರೆ ಕೋಪ ಮಾಡ್ಕೊಳ್ಳದೆ ಮೃದುವಾಗಿ, ತುಂಬ ಗೌರವದಿಂದ ಉತ್ರ ಕೊಡಿ.—1 ಪೇತ್ರ 3:15.
ಸ್ಕೂಲಲ್ಲಿ ಯಾರಾದ್ರೂ ಪ್ರಶ್ನೆ ಕೇಳಿದಾಗ ಮೃದುವಾಗಿ ಉತ್ರ ಕೊಡೋದು ಹೇಗೆ ಅಂತ ಅಪ್ಪಅಮ್ಮ ಮಕ್ಕಳಿಗೆ ಕಲಿಸಬೇಕು. (ಯಾಕೋ. 3:13) ಇದನ್ನ ಹೇಗೆ ಮಾಡೋದು ಅಂತ ಕೆಲವು ಹೆತ್ತವರು ತಮ್ಮ ಕುಟುಂಬ ಆರಾಧನೆಯಲ್ಲಿ ಪ್ರ್ಯಾಕ್ಟೀಸ್ ಮಾಡಿಸ್ತಾರೆ. ತಮ್ಮ ಮಕ್ಕಳ ಹತ್ರ ಬೇರೆಯವರು ಯಾವ್ಯಾವ ಪ್ರಶ್ನೆಗಳನ್ನ ಕೇಳಬಹುದು ಅಂತ ಮುಂಚೆನೇ ಯೋಚ್ನೆ ಮಾಡ್ತಾರೆ. ಅದ್ರ ಬಗ್ಗೆ ಚರ್ಚೆ ಮಾಡ್ತಾರೆ. ಆಮೇಲೆ ಮಕ್ಕಳ ಬಾಯಿಂದ ಉತ್ರ ಹೇಳಿಸ್ತಾರೆ. ಹೀಗೆ ತಮ್ಮ ಮಕ್ಕಳಿಗೆ ಮೃದುವಾಗಿ ಉತ್ರ ಕೊಡೋಕೆ ಕಲಿಸ್ತಾರೆ. ಈ ತರ ಪ್ರ್ಯಾಕ್ಟೀಸ್ ಮಾಡಿಸೋದ್ರಿಂದ ಮಕ್ಕಳು ಬೈಬಲಲ್ಲಿ ಇರೋ ವಿಷ್ಯಗಳು ಸತ್ಯನಾ ಅಂತ ತಾವಾಗೇ ತಿಳ್ಕೊಳ್ತಾರೆ ಮತ್ತು ಬೇರೆಯವ್ರಿಗೆ ಅದನ್ನ ವಿವರಿಸೋಕೂ ಕಲಿತಾರೆ. jw.orgನ “ಯುವಜನರ ಪ್ರಶ್ನೆಗಳು” ವಿಭಾಗದಲ್ಲಿ ಹದಿವಯಸ್ಕರಿಗೆ ವರ್ಕ್‌ಶೀಟ್‌ಗಳು ಇವೆ. ಇದು ಮಕ್ಕಳಿಗೆ ತಮ್ಮ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಮತ್ತು ಯಾರಾದ್ರೂ ಪ್ರಶ್ನೆ ಕೇಳಿದಾಗ ತಾವೇ ಯೋಚ್ನೆ ಮಾಡಿ ಉತ್ರ ಕೊಡೋಕೆ ಸಹಾಯ ಮಾಡುತ್ತೆ. ಈ ವರ್ಕ್‌ಶೀಟ್‌ಗಳು, ಮೃದುವಾಗಿ ಉತ್ರ ಕೊಡೋಕೆ ಕುಟುಂಬದಲ್ಲಿ ಎಲ್ರಿಗೂ ಸಹಾಯ ಮಾಡುತ್ತೆ. w23.09 17 ¶10; 18 ¶15-16
ಭಾನುವಾರ, ಮೇ 11
ಹಾಗಾಗಿ ಒಳ್ಳೇದು ಮಾಡೋದನ್ನ ಬಿಡೋದು ಬೇಡ. ನಾವು ಸುಸ್ತಾಗದೆ ಇದ್ರೆ ತಕ್ಕ ಸಮಯಕ್ಕೆ ಫಲ ಕೊಯ್ತೀವಿ.—ಗಲಾ. 6:9.
ಯೆಹೋವನ ಆರಾಧನೆಗೆ ಸಂಬಂಧಪಟ್ಟ ಒಂದು ಗುರಿಯಿಟ್ಟು ಅದನ್ನ ಮುಟ್ಟೋಕೆ ಕಷ್ಟ ಪಡ್ತಿದ್ದೀರಾ? ನಿಮ್ಮ ತರಾನೇ ಕೆಲವರಿಗೆ ಕಷ್ಟ ಆಗ್ತಿತ್ತು. ಉದಾಹರಣೆಗೆ ಫಿಲಿಪ್ ಚೆನ್ನಾಗಿ ಪ್ರಾರ್ಥನೆ ಮಾಡಬೇಕು, ತುಂಬ ಸಲ ಪ್ರಾರ್ಥಿಸಬೇಕು ಅನ್ನೋ ಗುರಿ ಇಟ್ಕೊಂಡಿದ್ದ. ಆದ್ರೆ ಪ್ರಾರ್ಥನೆ ಮಾಡೋಕೆ ಅವನಿಗೆ ಸಮಯನೇ ಸಿಕ್ತಾ ಇರಲಿಲ್ಲ. ಎರಿಕಾ, ಕ್ಷೇತ್ರ ಸೇವಾ ಕೂಟಕ್ಕೆ ಯಾವಾಗ್ಲೂ ಬೇಗ ಬರಬೇಕು ಅನ್ನೋ ಗುರಿ ಇಟ್ಕೊಂಡಿದ್ದಳು. ಆದ್ರೆ ಯಾವಾಗ್ಲೂ ಲೇಟ್ ಆಗ್ತಿತ್ತು. ನಿಮ್ಮಿಂದ ಒಂದು ಗುರಿನ ಮುಟ್ಟೋಕೆ ಆಗ್ತಿಲ್ಲ ಅಂದ್ರೆ ಅದರರ್ಥ ನೀವು ಕೈಲಾಗದವರು, ನೀವು ಸೋತುಹೋದ್ರಿ ಅಂತ ಅಲ್ಲ. ಯಾಕಂದ್ರೆ ಒಂದು ಚಿಕ್ಕ ಗುರಿನ ಮುಟ್ಟೋಕೂ ಸಮಯ ಕೊಡಬೇಕಾಗುತ್ತೆ, ತುಂಬ ಶ್ರಮ ಹಾಕಬೇಕಾಗುತ್ತೆ. ಹಾಗಾಗಿ ಕಷ್ಟ ಆದ್ರೂ ನೀವು ಪ್ರಯತ್ನ ಮಾಡಿದಾಗ ಯೆಹೋವನ ಮೇಲೆ ನಿಮಗೆ ತುಂಬ ಪ್ರೀತಿ ಇದೆ, ಆತನ ಸೇವೆನ ಇನ್ನೂ ಚೆನ್ನಾಗಿ ಮಾಡಬೇಕು ಅನ್ನೋ ಆಸೆ ಇದೆ ಅಂತ ನೀವು ತೋರಿಸ್ತೀರ. ಇದನ್ನ ನೋಡಿದಾಗ ಯೆಹೋವ ದೇವರಿಗೆ ತುಂಬ ಖುಷಿ ಆಗುತ್ತೆ. ಹಾಗಂತ ನಿಮ್ಮಿಂದ ಮಾಡಕ್ಕಾಗದೆ ಇರೋದನ್ನ ಯೆಹೋವ ಯಾವತ್ತೂ ಕೇಳಲ್ಲ. (ಕೀರ್ತ. 103:14; ಮೀಕ 6:8) ಹಾಗಾಗಿ ನಿಮ್ಮ ಪರಿಸ್ಥಿತಿನ ನೋಡ್ಕೊಂಡು ನಿಮ್ಮಿಂದ ಮುಟ್ಟೋಕೆ ಆಗೋ ಗುರಿಗಳನ್ನ ಇಡಿ. w23.05 26 ¶1-2
ಸೋಮವಾರ, ಮೇ 12
ದೇವರು ನಮ್ಮ ಕಡೆ ಇದ್ರೆ ನಮ್ಮನ್ನ ಎದುರಿಸೋಕೆ ಯಾರಿಂದಾಗುತ್ತೆ?—ರೋಮ. 8:31.
ಧೈರ್ಯಶಾಲಿಗಳಿಗೂ ಕೆಲವೊಮ್ಮೆ ಭಯ ಆಗುತ್ತೆ. ಆದ್ರೆ ಅವ್ರಿಗೆ ಭಯ ಇದ್ರೂ ಸರಿಯಾಗಿ ಇರೋದನ್ನೇ ಮಾಡ್ತಾರೆ. ದಾನಿಯೇಲ ಕೂಡ ಎರಡು ಸಂಧರ್ಭದಲ್ಲಿ ಧೈರ್ಯ ತೋರಿಸಿದ. ಯೆರೆಮೀಯ ಮತ್ತು ಇನ್ನೂ ಬೇರೆ ಪ್ರವಾದಿಗಳು ಬರೆದಿದ್ದ ಭವಿಷ್ಯವಾಣಿಗಳನ್ನ ದಾನಿಯೇಲ ಚೆನ್ನಾಗಿ ಓದಿ ಅರ್ಥ ಮಾಡ್ಕೊಂಡಿದ್ದ. ಇದ್ರಿಂದಾನೇ ಅವನಿಗೆ ಯೆಹೂದ್ಯರು ಬಾಬೆಲಿಂದ ಆದಷ್ಟು ಬೇಗ ಬಿಡುಗಡೆ ಆಗ್ತಾರೆ ಅಂತ ಗೊತ್ತಾಯ್ತು. (ದಾನಿ. 9:2) ಆ ಭವಿಷ್ಯವಾಣಿ ನಿಜ ಆಗಿದ್ದನ್ನ ದಾನಿಯೇಲ ಕಣ್ಣಾರೆ ನೋಡಿದಾಗ ಅವನಿಗೆ ಯೆಹೋವನ ಮೇಲಿದ್ದ ನಂಬಿಕೆ ಇನ್ನೂ ಜಾಸ್ತಿ ಆಯ್ತು. ದೇವರ ಮೇಲೆ ನಂಬಿಕೆ ಇದ್ರೆ ಯಾರಿಗೇ ಆಗಲಿ ಖಂಡಿತ ಧೈರ್ಯ ತೋರಿಸೋಕೆ ಆಗುತ್ತೆ. (ರೋಮನ್ನರಿಗೆ 8:31, 32, 37-39 ಹೋಲಿಸಿ.) ಎಲ್ಲಕ್ಕಿಂತ ಹೆಚ್ಚಾಗಿ ದಾನಿಯೇಲ ಯೆಹೋವನಿಗೆ ಯಾವಾಗ್ಲೂ ಪ್ರಾರ್ಥನೆ ಮಾಡ್ತಿದ್ದ. (ದಾನಿ. 6:10) ತನ್ನ ತಪ್ಪುಗಳನ್ನ, ತನಗೆ ಏನು ಅನಿಸ್ತಿದೆ ಅನ್ನೋದನ್ನ ಯೆಹೋವನ ಹತ್ರ ಹೇಳ್ಕೊಳ್ತಾ ಇದ್ದ. ಆತನ ಹತ್ರ ಸಹಾಯ ಕೇಳ್ತಿದ್ದ. (ದಾನಿ. 9:4, 5, 19) ದಾನಿಯೇಲ ನಮ್ಮ ತರಾನೇ ಮನುಷ್ಯನಾಗಿದ್ದ. ಅವನಿಗೂ ಹುಟ್ತಾನೇ ಧೈರ್ಯ ಬಂದುಬಿಡಲಿಲ್ಲ. ಅದನ್ನ ಅವನು ಬೆಳೆಸ್ಕೊಂಡ. ಹೇಗೆ? ಅವನು ಭವಿಷ್ಯವಾಣಿಗಳನ್ನ ಓದಿ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದ, ಪ್ರಾರ್ಥನೆ ಮಾಡ್ತಿದ್ದ, ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದ. w23.08 3 ¶4; 4 ¶7
ಮಂಗಳವಾರ, ಮೇ 13
ನಿಮ್ಮ ಬೆಳಕು ಜನ್ರ ಮುಂದೆ ಬೆಳಗಬೇಕು. ಆಗ ಅವರು ನಿಮ್ಮ ಒಳ್ಳೇ ಕೆಲಸ ನೋಡಿ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಗೌರವ ಕೊಡ್ತಾರೆ.—ಮತ್ತಾ. 5:16.
ಅಧಿಕಾರಿಗಳ ಮಾತು ಕೇಳೋದ್ರಿಂದ ನಮಗಷ್ಟೇ ಅಲ್ಲ, ಬೇರೆಯವ್ರಿಗೂ ಪ್ರಯೋಜನ ಆಗುತ್ತೆ. ನಿಯಮ ಮುರಿದ್ರೆ ಸರ್ಕಾರ ದಂಡ ಹಾಕುತ್ತೆ, ಶಿಕ್ಷೆ ಕೊಡುತ್ತೆ. ಆದ್ರೆ ನಾವು ನಿಯಮವನ್ನ ಪಾಲಿಸೋದ್ರಿಂದ ಅನಾವಶ್ಯಕವಾಗಿ ಸಮಸ್ಯೆಯಲ್ಲಿ ಸಿಕ್ಕಿ ಹಾಕೊಳ್ಳಲ್ಲ. (ರೋಮ. 13:4) ಅಷ್ಟೇ ಅಲ್ಲ, ನಾವು ಅಧಿಕಾರಿಗಳ ಮಾತು ಕೇಳಿದ್ರೆ ಅವ್ರಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ಒಳ್ಳೆ ಅಭಿಪ್ರಾಯ ಇರುತ್ತೆ. ಉದಾಹರಣೆಗೆ, ನೈಜೀರಿಯದಲ್ಲಿ ಕೆಲವು ವರ್ಷಗಳ ಹಿಂದೆ ಏನಾಯ್ತು ಅಂತ ನೋಡಿ. ಯಾರೆಲ್ಲ ತೆರಿಗೆ ಕಟ್ಟಲ್ಲ ಅಂತ ಧಿಕ್ಕಾರ ಹಾಕ್ತಿದ್ರೋ ಅಂಥವ್ರನ್ನ ಹಿಡ್ಕೊಂಡು ಹೋಗೋಕೆ ಸೈನಿಕರು ರಾಜ್ಯ ಸಭಾಗೃಹದ ಒಳಗೆ ಬಂದ್ರು. ಆಗ ಅವ್ರ ಆಫೀಸರ್ “ಯೆಹೋವನ ಸಾಕ್ಷಿಗಳು ತೆರಿಗೆ ಕಟ್ತಾರೆ ಇವ್ರನ್ನ ಬಿಟ್ಟುಬಿಡಿ” ಅಂತ ಹೇಳಿದ್ರು. ನಾವು ಅಧಿಕಾರಿಗಳ ಮಾತು ಕೇಳೋದ್ರಿಂದ ನಮಗೆ ಒಳ್ಳೇ ಹೆಸ್ರು ಇರುತ್ತೆ. ನಮ್ಮ ಸಹೋದರ ಸಹೋದರಿಯರಿಗೆ ಏನಾದ್ರೂ ಅಪಾಯ ಆದಾಗ ಈ ಹೆಸ್ರು ಅವ್ರನ್ನ ಕಾಪಾಡುತ್ತೆ. w23.10 9 ¶13
ಬುಧವಾರ, ಮೇ 14
ನೀವು ದೇವರ ಇಷ್ಟದ ಪ್ರಕಾರ ಮಾಡಿದ ಮೇಲೆ ಆತನು ಮಾತುಕೊಟ್ಟಿದ್ದನ್ನ ಪಡಿಬೇಕಾದ್ರೆ ನೀವು ಸಹಿಸ್ಕೊಬೇಕು.—ಇಬ್ರಿ. 10:36.
ಕೆಲವರು ಈ ಕೆಟ್ಟ ಲೋಕ ನಾಶ ಆಗುತ್ತೆ ಅಂತ ತುಂಬ ವರ್ಷಗಳಿಂದ ಕಾಯ್ತಾ ಇದ್ದಾರೆ. ಆದ್ರೆ ‘ಅಂತ್ಯ ಯಾಕೆ ಇನ್ನೂ ಬಂದಿಲ್ಲ, ಇನ್ನೂ ಎಷ್ಟು ದಿನ ಕಾಯಬೇಕಪ್ಪಾ!’ ಅಂತ ಕೆಲವೊಮ್ಮೆ ಅನಿಸುತ್ತೆ. ಹಬಕ್ಕೂಕನಿಗೂ ಹೀಗೇ ಅನಿಸ್ತು. ಅದಕ್ಕೇ ಯೆಹೋವ ಅವನಿಗೆ “ಆ ದರ್ಶನ ನಿರ್ಧರಿಸಿದ ಸಮಯಕ್ಕೆ ನಿಜ ಆಗುತ್ತೆ, ಆ ಸಮಯ ತುಂಬ ಬೇಗ ಬರ್ತಿದೆ. ಆ ದರ್ಶನ ಸುಳ್ಳಾಗಲ್ಲ. ಅದು ನಿಜ ಆಗೋದು ತಡ ಆಗ್ತಿದೆ ಅಂತ ಅನಿಸಿದ್ರೂ ಅದಕ್ಕಾಗಿ ಕಾದಿರು! ಯಾಕಂದ್ರೆ ಅದು ಖಂಡಿತ ನೆರವೇರುತ್ತೆ. ತಡವಾಗಲ್ಲ!” ಅಂದನು. (ಹಬ. 2:3) ಇದನ್ನ ಯೆಹೋವ ಹಬಕ್ಕೂಕನಿಗಷ್ಟೇ ಅಲ್ಲ ನಮಗೂ ಹೇಳ್ತಿದ್ದಾನೆ. ಒಂದನೇ ಶತಮಾನದ ಕ್ರೈಸ್ತರು ಕೂಡ ಹೊಸಲೋಕ ಬರುತ್ತೆ ಅಂತ ಕಾಯ್ತಾ ಇದ್ರು. ಅವ್ರಿಗೂ ಅಪೊಸ್ತಲ ಪೌಲ ಇದನ್ನೇ ಹೇಳಿದ. (ಇಬ್ರಿ. 10: 37) ಹೊಸಲೋಕ ಬರೋಕೆ ತಡ ಆಗ್ತಿದೆ ಅಂತ ನಮಗನಿಸ್ತಿದೆ ಅಷ್ಟೇ. ಆದ್ರೆ ಯೆಹೋವ ಹೇಳಿರೋ ಮಾತು ಖಂಡಿತ ನೆರವೇರುತ್ತೆ, ತಡ ಆಗಲ್ಲ. w23.04 30 ¶16
ಗುರುವಾರ, ಮೇ 15
[ಇಸ್ರಾಯೇಲ್ಯರು] ಮೋಶೆ, ಆರೋನರ ವಿರುದ್ಧ ಗೊಣಗೋಕೆ ಶುರು ಮಾಡಿದ್ರು.—ಅರ. 14:2.
ಎಷ್ಟೋ ಇಸ್ರಾಯೇಲ್ಯರು ಯೆಹೋವ ಮೋಶೆ ಮೂಲಕನೇ ತಮಗೆ ನಿರ್ದೇಶನ ಕೊಡ್ತಿದ್ದಾನೆ ಅನ್ನೋದನ್ನ ಒಪ್ಕೊಳ್ಳಲಿಲ್ಲ. (ಅರ. 14:10, 11) ಅವರು ಆ ತಪ್ಪನ್ನ ಪದೇಪದೇ ಮಾಡಿದ್ರು. ಹಾಗಾಗಿ ಆ ಪೀಳಿಗೆಯವರು ದೇವರು ಮಾತು ಕೊಟ್ಟ ದೇಶಕ್ಕೆ ಹೋಗೋ ಅವಕಾಶ ಕಳ್ಕೊಂಡ್ರು. (ಅರ. 14:30) ಆದ್ರೆ ಕೆಲವು ಇಸ್ರಾಯೇಲ್ಯರು ಯೆಹೋವ ಕೊಟ್ಟ ನಿರ್ದೇಶನ ಪಾಲಿಸಿದ್ರು. ಅವ್ರಲ್ಲೊಬ್ಬ ಕಾಲೇಬ. ಅವನು ಯೆಹೋವ “ಹೇಳಿದ ಹಾಗೇ ಮನಸ್ಸಾರೆ ನಡೀತಾ” ಇದ್ದ. (ಅರ. 14:24) ಅದಕ್ಕೇ ಕಾನಾನ್ ದೇಶದಲ್ಲಿ ಅವನಿಗೆ ಇಷ್ಟ ಆದ ಜಾಗವನ್ನ ಆಸ್ತಿಯಾಗಿ ಕೊಟ್ಟನು. (ಯೆಹೋ. 14:12-14) ಇಸ್ರಾಯೇಲ್ಯರ ಮುಂದಿನ ಪೀಳಿಗೆಯವರೂ ಯೆಹೋವ ಕೊಟ್ಟ ನಿರ್ದೇಶನ ಪಾಲಿಸಿದ್ರು. ಅದಕ್ಕೇ ಅವರು ಯೆಹೋಶುವ ನಾಯಕನಾದಾಗ, ಅವನು “ಬದುಕಿರೋ ತನಕ ಅವನಿಗೆ ತುಂಬಾ ಗೌರವ ಕೊಟ್ರು.” (ಯೆಹೋ. 4:14) ಹೀಗೆ ಯೆಹೋವನ ಮಾತು ಕೇಳಿದ್ರಿಂದ ಆತನು ಅವ್ರನ್ನ ಕಾನಾನ್ ದೇಶಕ್ಕೆ ಕರ್ಕೊಂಡು ಹೋದನು.—ಯೆಹೋ. 21:43, 44. w24.02 21 ¶6-7
ಶುಕ್ರವಾರ, ಮೇ 16
ದೇವರನ್ನ ಪ್ರೀತಿ ಮಾಡೋ ವ್ಯಕ್ತಿ ತನ್ನ ಸಹೋದರನನ್ನೂ ಪ್ರೀತಿಸಬೇಕು.—1 ಯೋಹಾ. 4:21.
ಒಬ್ಬ ಡಾಕ್ಟರ್ ನಿಮ್ಮ ಹೃದಯ ಆರೋಗ್ಯವಾಗಿ ಇದ್ಯಾ ಇಲ್ವಾ ಅಂತ ತಿಳ್ಕೊಳ್ಳೋಕೆ ಏನ್ ಮಾಡ್ತಾನೆ? ಮೊದಲು ನಿಮ್ಮ ಕೈ ಹಿಡಿದು ನಾಡಿಬಡಿತ ಚೆಕ್ ಮಾಡ್ತಾನೆ ಅಲ್ವಾ? ಅದೇ ತರ ನಮಗೆ ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದ್ಯಾ ಅಂತ ಪರೀಕ್ಷಿಸ್ಕೊಂಡ್ರೆ ಯೆಹೋವನ ಮೇಲೆ ನಮಗೆ ಎಷ್ಟು ಪ್ರೀತಿ ಇದೆ ಅಂತ ಗೊತ್ತಾಗುತ್ತೆ. ಒಂದುವೇಳೆ ನಮ್ಮ ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಕಮ್ಮಿಯಾಗಿದೆ ಅಂತ ನಮಗೆ ಅನಿಸಿದ್ರೆ ಯೆಹೋವ ದೇವರ ಮೇಲಿರೋ ಪ್ರೀತಿನೂ ಕಮ್ಮಿಯಾಗಿದೆ ಅಂತ ಅರ್ಥ. ಹಾಗಾಗಿ ನಮ್ಮ ಸಹೋದರ ಸಹೋದರಿಯರಿಗೆ ಯಾವಾಗ್ಲೂ ಪ್ರೀತಿ ತೋರಿಸ್ತಾ ಇರ್ಬೇಕು. ಆಗ ಯೆಹೋವನ ಮೇಲಿರೋ ಪ್ರೀತಿನೂ ಜಾಸ್ತಿ ಆಗ್ತಾ ಹೋಗುತ್ತೆ. ಸಹೋದರ ಸಹೋದರಿಯರ ಮೇಲೆ ನಮಗಿರೋ ಪ್ರೀತಿ ಕಮ್ಮಿಯಾಗ್ತಾ ಇದೆ ಅಂದ್ರೆ ಯೆಹೋವನ ಜೊತೆ ಇರೋ ನಮ್ಮ ಫ್ರೆಂಡ್‌ಶಿಪ್‌ಗೆ ಅಪಾಯ ಇದೆ ಅಂತ ಅರ್ಥ. ಇದನ್ನ ಅಪೊಸ್ತಲ ಯೋಹಾನ ತುಂಬ ಸ್ಪಷ್ಟವಾಗಿ ಹೇಳಿದ್ದಾನೆ. “ಕಣ್ಣಿಗೆ ಕಾಣೋ ಸಹೋದರನನ್ನ ಪ್ರೀತಿ ಮಾಡಿಲ್ಲಾಂದ್ರೆ ಕಣ್ಣಿಗೆ ಕಾಣದ ದೇವರನ್ನ ಹೇಗೆ ಪ್ರೀತಿ ಮಾಡಕ್ಕಾಗುತ್ತೆ?” ಅಂತ ಅವನು ಕೇಳಿದ. (1 ಯೋಹಾ. 4:20) ಇದ್ರಿಂದ ನಮಗೇನು ಗೊತ್ತಾಗುತ್ತೆ? ನಾವು ‘ಒಬ್ರನ್ನೊಬ್ರು ಪ್ರೀತಿಸಿದ್ರೆ’ ಮಾತ್ರನೇ ಯೆಹೋವ ನಮ್ಮನ್ನ ಮೆಚ್ಕೊಳ್ತಾನೆ.—1 ಯೋಹಾ. 4:7-9, 11.w23.11 8 ¶3; 9 ¶4-6
ಶನಿವಾರ, ಮೇ 17
ನಿನ್ನ ಅಪ್ಪಅಮ್ಮ ಸಂತೋಷ ಪಡ್ತಾರೆ.—ಜ್ಞಾನೋ. 23:25.
ಯೆಹೋವಾಷನಿಗೆ ಅಪ್ಪ ಇರ್ಲಿಲ್ಲ. ಮಹಾ ಪುರೋಹಿತನಾದ ಯೆಹೋಯಾದ ಅವನನ್ನ ಸ್ವಂತ ಮಗನ ತರ ಬೆಳೆಸಿದ. ಯೆಹೋಯಾದನಿಗೆ ಯೆಹೋವ ದೇವರ ಮೇಲೆ ತುಂಬ ನಂಬಿಕೆ ಇತ್ತು. ಅವನು ಯೆಹೋವಾಷನಿಗೆ ಚೆನ್ನಾಗಿ ತರಬೇತಿ ಕೊಟ್ಟು ಸಹಾಯ ಮಾಡಿದ. ಆಗ ಯೆಹೋವಾಷ ಏನು ಮಾಡಿದ? ಆ ಸಹಾಯನ ಪಡ್ಕೊಂಡು ತುಂಬ ಚಿಕ್ಕ ವಯಸ್ಸಲ್ಲೇ ಒಳ್ಳೇ ತೀರ್ಮಾನಗಳನ್ನ ಮಾಡಿದ. ತಾನು ಯೆಹೋವನನ್ನ ಆರಾಧಿಸೋದಷ್ಟೇ ಅಲ್ಲ, ತನ್ನ ಪ್ರಜೆಗಳಿಗೂ ಯೆಹೋವನನ್ನ ಆರಾಧಿಸೋಕೆ ಸಹಾಯ ಮಾಡಿದ. ಅಷ್ಟೇ ಅಲ್ಲ, ಯೆಹೋವನ ಆಲಯದ ದುರಸ್ತಿ ಕೆಲಸನೂ ಕೈಗೆತ್ಕೊಂಡ. (2 ಪೂರ್ವ. 24:1, 2, 4, 13, 14) ಅಪ್ಪಅಮ್ಮ ಅಥವಾ ಯಾರಾದ್ರು ನಿಮಗೆ ಯೆಹೋವನನ್ನ ಪ್ರೀತಿಸೋಕೆ, ಆತನ ನೀತಿ-ನಿಯಮಗಳ ಪ್ರಕಾರ ಜೀವಿಸೋಕೆ ಕಲಿಸ್ತಿದ್ದಾರಾ? ಹಾಗಿದ್ರೆ ನೀವು ತುಂಬ ಖುಷಿಪಡಬೇಕು. ಯಾಕಂದ್ರೆ ಆ ನಿಯಮಗಳು ನಿಮಗೆ ಸಿಕ್ಕಿರೋ ಒಂದು ದೊಡ್ಡ ಆಸ್ತಿ. (ಜ್ಞಾನೋ. 2:1, 10-12) ನಿಮ್ಮ ಅಪ್ಪಅಮ್ಮ ನಿಮಗೆ ಬೇರೆಬೇರೆ ವಿಧಾನಗಳನ್ನ ಬಳಸಿ ತರಬೇತಿ ಕೊಡ್ತಾರೆ. ಬೈಬಲಲ್ಲಿ ಇರೋ ಬುದ್ಧಿವಾದಗಳನ್ನ ನೀವು ಪಾಲಿಸಿದ್ರೆ ಅಪ್ಪಅಮ್ಮಗೆ ಖುಷಿ ಆಗುತ್ತೆ. ಅವ್ರಿಗಿಂತ ಯೆಹೋವ ದೇವರಿಗೆ ಜಾಸ್ತಿ ಖುಷಿ ಆಗುತ್ತೆ. ಅಷ್ಟೇ ಅಲ್ಲ, ಆತನ ಜೊತೆಗಿರೋ ಸ್ನೇಹ ಕೂಡ ಜಾಸ್ತಿ ಆಗುತ್ತೆ. (ಜ್ಞಾನೋ. 22:6; 23:15, 24) ಹಾಗಾಗಿ ಮಕ್ಕಳೇ, ಯೆಹೋವಾಷ ಹೇಗಿದ್ದನೋ ಅದೇ ತರ ನೀವೂ ಇರೋಕೆ ಇದಕ್ಕಿಂತ ಒಳ್ಳೇ ಕಾರಣ ಬೇಕಾ? w23.09 8-9 ¶3-5
ಭಾನುವಾರ, ಮೇ 18
ನಿಮ್ಮ ಪ್ರಾರ್ಥನೆ ಕೇಳ್ತೀನಿ.—ಯೆರೆ. 29:12.
ನಮ್ಮ ಪ್ರಾರ್ಥನೆಗಳನ್ನ ಕೇಳ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. ಯೆಹೋವ ದೇವರಿಗೆ ನಾವಂದ್ರೆ ತುಂಬ ಇಷ್ಟ. ಹಾಗಾಗಿ ನಾವು ಮಾಡೋ ಪ್ರಾರ್ಥನೆಗಳನ್ನ ಕೇಳೇ ಕೇಳ್ತಾನೆ. (ಕೀರ್ತ. 10:17; 37:28) ಆದ್ರೆ ಅದ್ರ ಅರ್ಥ ನಾವು ಕೇಳಿದ್ದನ್ನೆಲ್ಲ ಆತನು ಕೊಡ್ತಾನೆ ಅಂತಲ್ಲ. ಕೆಲವೊಂದು ವಿಷ್ಯಗಳನ್ನ ಆತನು ಹೊಸ ಲೋಕದಲ್ಲಿ ನಮಗೆ ಕೊಡ್ತಾನೆ. ಅಲ್ಲಿ ತನಕ ನಾವು ಕಾಯಬೇಕು. ನಾವು ಮಾಡೋ ಪ್ರಾರ್ಥನೆ ಆತನ ಇಷ್ಟದ ಪ್ರಕಾರ ಇದ್ಯಾ ಅಂತ ಯೆಹೋವ ಗಮನಿಸ್ತಾ ಇರ್ತಾನೆ. (ಯೆಶಾ. 55:8, 9) ಮನುಷ್ಯರು ಈ ಭೂಮಿಯಲ್ಲಿ ತುಂಬ್ಕೊಬೇಕು, ಅವರು ತನ್ನ ಆಳ್ವಿಕೆಯಲ್ಲಿ ಯಾವಾಗ್ಲೂ ಖುಷಿಖುಷಿಯಾಗಿ ಇರ್ಬೇಕು ಅನ್ನೋದೇ ಯೆಹೋವನ ಉದ್ದೇಶ. ಆದ್ರೆ ಸೈತಾನ, ಮನುಷ್ಯರಿಗೆ ದೇವರು ಬೇಕಾಗಿಲ್ಲ ಅವರು ತಮ್ಮನ್ನ ತಾವೇ ಆಳ್ಕೊಬಹುದು ಅಂತ ಹೇಳಿದ್ದಾನೆ. (ಆದಿ. 3:1-5) ಅದನ್ನ ಸುಳ್ಳು ಅಂತ ಸಾಬೀತು ಮಾಡೋಕೆ ಯೆಹೋವ, ಮನುಷ್ಯರಿಗೆ ತಮ್ಮನ್ನ ತಾವೇ ಆಳ್ಕೊಳ್ಳೋಕೆ ಬಿಟ್ಟಿದ್ದಾನೆ. ಆದ್ರೆ ಇದ್ರಿಂದ ಇವತ್ತು ಎಲ್ರಿಗೂ ತೊಂದ್ರೆ ಆಗಿದೆ. (ಪ್ರಸಂ. 8:9) ಯೆಹೋವ ಇದನ್ನೆಲ್ಲ ಈಗ್ಲೇ ಸರಿ ಮಾಡದೆ ಸರಿಯಾದ ಸಮಯಕ್ಕೆ ಕಾಯ್ತಿದ್ದಾನೆ. w23.11 21 ¶4-5
ಸೋಮವಾರ, ಮೇ 19
ನಾನು ನಿನ್ನನ್ನ ಎಷ್ಟೋ ಜನಾಂಗಗಳಿಗೆ ತಂದೆಯಾಗಿ ಮಾಡಿದ್ದೀನಿ.—ರೋಮ. 4:17.
ನಾವು ನಂಬಿರೋದು ಮುಂದೆ ನಡೆದೇ ನಡಿಯುತ್ತೆ ಅಂತ ನಿರೀಕ್ಷೆ ಇಟ್ಕೊಬೇಕು. ಯೆಹೋವ ಅಬ್ರಹಾಮನಿಗೆ, ನೀನು “ಅನೇಕ ಜನಾಂಗಗಳಿಗೆ” ತಂದೆ ಆಗ್ತೀಯ ಅಂತ ಮಾತುಕೊಟ್ಟಿದ್ದನು. ಆದ್ರೆ ಅಬ್ರಹಾಮನಿಗೆ 100 ವರ್ಷ ಮತ್ತು ಸಾರಗೆ 90 ವರ್ಷ ಆದ್ರೂ ಅವ್ರಿಗಿನ್ನೂ ಮಕ್ಕಳೇ ಆಗಿರ್ಲಿಲ್ಲ. ಆ ವಯಸ್ಸಲ್ಲಿ ಮಕ್ಕಳಾಗಲ್ಲ ಅಂತ ಮನುಷ್ಯರಿಗೆ ಅನಿಸಬಹುದು. ಹಾಗಂತ ಅಬ್ರಹಾಮನೂ ಹಾಗೇ ಅಂದ್ಕೊಂಡ್ನಾ? ಇಲ್ಲ. “ಅವನು ತುಂಬ ಜನಾಂಗಗಳಿಗೆ ತಂದೆ ಆಗೋಕೆ ಆಗಲ್ಲ ಅಂತ ಅನಿಸಿದ್ರೂ ಆ ಮಾತು ನಿಜ ಆಗುತ್ತೆ ಅಂತ ಅವನು ಬಲವಾಗಿ ನಂಬಿದ” ಅಂದ್ರೆ ನಿರೀಕ್ಷೆ ಇಟ್ಕೊಂಡಿದ್ದ. (ರೋಮ. 4:18, 19) ಅವನು ಇಟ್ಕೊಂಡಿದ್ದ ನಿರೀಕ್ಷೆ ನಿಜ ಆಯ್ತು. ಅವನಿಗೊಬ್ಬ ಮಗ ಹುಟ್ಟಿದ, ಅವನಿಗೆ ಇಸಾಕ ಅಂತ ಹೆಸರಿಟ್ಟ. (ರೋಮ. 4:20-22) ಅಬ್ರಹಾಮನ ತರ ನಾವೂ ಯೆಹೋವನ ಫ್ರೆಂಡ್ ಆಗಬಹುದು, ನೀತಿವಂತರಾಗಬಹುದು ಮತ್ತು ಆತನ ಮೆಚ್ಚಿಗೆ ಪಡ್ಕೊಬಹುದು. ಯಾಕಂದ್ರೆ ಪೌಲ ಹೀಗೆ ಹೇಳ್ತಾನೆ: “‘ದೇವರು ಅವನನ್ನ ನೀತಿವಂತನಾಗಿ ನೋಡಿದನು’ ಅನ್ನೋ ಮಾತುಗಳನ್ನ ಅವನಿಗೋಸ್ಕರ [ಅಬ್ರಹಾಮನಿಗೋಸ್ಕರ] ಮಾತ್ರ ಅಲ್ಲ, ನಮಗೋಸ್ಕರನೂ ಬರೆದಿದೆ. ನಮ್ಮನ್ನೂ ದೇವರು ನೀತಿವಂತರಾಗಿ ನೋಡ್ತಾನೆ. ಯಾಕಂದ್ರೆ ನಮ್ಮ ಪ್ರಭು ಯೇಸುವನ್ನ ಜೀವಂತವಾಗಿ ಎಬ್ಬಿಸಿದ ದೇವರಲ್ಲಿ ನಾವು ನಂಬಿಕೆ ಇಟ್ಟಿದ್ದೀವಿ.” (ರೋಮ. 4:23, 24) ಅಬ್ರಹಾಮನ ತರ ನಾವೂ ನಂಬಿಕೆ ಇಡಬೇಕು. ಆ ನಂಬಿಕೆನ ಕೆಲಸದಲ್ಲಿ ತೋರಿಸಬೇಕು. ಅಷ್ಟೇ ಅಲ್ಲ, ನಿರೀಕ್ಷೆನೂ ಇಟ್ಕೊಬೇಕು. w23.12 7 ¶16-17
ಮಂಗಳವಾರ, ಮೇ 20
ನನ್ನ ಸಂಕಟವನ್ನ ನೀನು ನೋಡಿದ್ದೀಯ, ನನ್ನ ಮನದಾಳದ ಯಾತನೆಯನ್ನ ನೀನು ತಿಳ್ಕೊಂಡಿದ್ದೀಯ.—ಕೀರ್ತ. 31:7.
ನಮಗೆ ಕಷ್ಟ ಬಂದಾಗ ನಮ್ಮ ಪರಿಸ್ಥಿತಿಯನ್ನ ಮಾತ್ರ ಅಲ್ಲ ನಮಗಾಗ್ತಿರೋ ನೋವನ್ನೂ ಯೆಹೋವ ಅರ್ಥಮಾಡ್ಕೊಳ್ತಾನೆ. ಉದಾಹರಣೆಗೆ, ಈಜಿಪ್ಟಿನಲ್ಲಿ ಇಸ್ರಾಯೇಲ್ಯರು ಕಷ್ಟಪಡ್ತಿದ್ದಾಗ ಅವ್ರ “ನೋವು ನರಳಾಟವನ್ನ” ಯೆಹೋವ ಅರ್ಥಮಾಡ್ಕೊಂಡನು. (ವಿಮೋ. 3:7) ಕೆಲವೊಮ್ಮೆ ನೀವು ಕಷ್ಟದಲ್ಲಿ ಮುಳುಗಿಹೋದಾಗ ಯೆಹೋವ ಹೇಗೆ ಸಹಾಯ ಮಾಡ್ತಿದ್ದಾನೆ ಅನ್ನೋದು ಗೊತ್ತಾಗದೆ ಹೋಗಬಹುದು. ಆಗ ಏನು ಮಾಡಬಹುದು? ‘ನೀನು ಹೇಗೆ ಸಹಾಯ ಮಾಡ್ತಿದ್ದೀಯ ಅನ್ನೋದನ್ನ ತೋರಿಸ್ಕೊಡಪ್ಪಾ’ ಅಂತ ಯೆಹೋವನ ಹತ್ರ ಕೇಳಿ. (2 ಅರ. 6:15-17) ಆಮೇಲೆ ಹೀಗೆ ಕೇಳ್ಕೊಳ್ಳಿ: ‘ಕೂಟದಲ್ಲಿ ಕೇಳಿಸ್ಕೊಂಡಿರೋ ಯಾವುದಾದ್ರೂ ಭಾಷಣ ಅಥವಾ ಉತ್ರ ನನಗೆ ಸಹಾಯ ಮಾಡಿದ್ಯಾ?’ ‘ಯಾವುದಾದ್ರೂ ವಿಡಿಯೋ ಅಥವಾ ಬ್ರಾಡ್‌ಕಾಸ್ಟಿಂಗ್ ಹಾಡು ನನಗೆ ಪ್ರೋತ್ಸಾಹ ಕೊಟ್ಟಿದ್ಯಾ?’ ‘ಯಾರಾದ್ರೂ ತೋರಿಸಿರೋ ಒಂದು ವಚನದಿಂದ ನನಗೆ ಧೈರ್ಯ ಸಿಕ್ಕಿದ್ಯಾ?’ ಅಂತ ಯೋಚ್ನೆ ಮಾಡಿ. ಬೈಬಲಿಂದ ಮತ್ತು ನಮ್ಮ ಸಹೋದರ ಸಹೋದರಿಯರಿಂದ ಸಿಗೋ ಸಹಾಯವನ್ನ ಕೆಲವೊಮ್ಮೆ ನಾವು ಮರೆತು ಬಿಡ್ತೀವಿ. ಆದ್ರೆ ಇದೆಲ್ಲಾ ಯೆಹೋವನಿಂದ ಬಂದಿರೋ ಗಿಫ್ಟ್‌ಗಳು. (ಯೆಶಾ. 65:13; ಮಾರ್ಕ 10:29, 30) ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ಇದ್ರಿಂದ ಗೊತ್ತಾಗುತ್ತೆ. (ಯೆಶಾ. 49:14-16) ಆತನ ಮೇಲೆ ನಂಬಿಕೆ ಇಡಬಹುದು ಅಂತನೂ ಗೊತ್ತಾಗುತ್ತೆ. w24.01 4-5 ¶9-10
ಬುಧವಾರ, ಮೇ 21
ನಿನ್ನ ಸೇವಕರು ನಿನ್ನ ಮಾತನ್ನ ಧೈರ್ಯವಾಗಿ ಹೇಳ್ತಾ ಇರೋಕೆ ಸಹಾಯ ಮಾಡು.—ಅ. ಕಾ. 4:29.
ಯೇಸುವಿನ ಶಿಷ್ಯರ ಉದಾಹರಣೆ ನೋಡಿ. ತನ್ನ ಬಗ್ಗೆ ಸಾಕ್ಷಿ ಕೊಡಬೇಕು ಅಂತ ಯೇಸು ಅವ್ರಿಗೆ ಹೇಳಿದ್ದನು. ಆತನು ಸ್ವರ್ಗಕ್ಕೆ ಹೋಗೋ ಮುಂಚೆ “ನೀವು ಯೆರೂಸಲೇಮ್, ಯೂದಾಯ, ಸಮಾರ್ಯ ಮತ್ತು ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ” ಅಂದನು. (ಅ. ಕಾ. 1:8; ಲೂಕ 24:46-48) ಶಿಷ್ಯರು ಸಾರೋಕೆ ಶುರುಮಾಡಿದ ಸ್ವಲ್ಪ ದಿನದಲ್ಲೇ ಅಪೊಸ್ತಲ ಪೇತ್ರ ಮತ್ತು ಯೋಹಾನನನ್ನ ಯೆಹೂದಿ ಧರ್ಮಗುರುಗಳು ಬಂಧಿಸಿದ್ರು. ಹಿರೀಸಭೆ ಮುಂದೆ ತಂದು ವಿಚಾರಣೆ ಮಾಡಿದ್ರು. ಇನ್ಮೇಲೆ ಯೇಸು ಬಗ್ಗೆ ಮಾತಾಡಲೇಬಾರದು ಅಂತ ಹೇಳಿ ಬೆದರಿಕೆ ಹಾಕಿದ್ರು. (ಅ. ಕಾ. 4:18, 21) ಪೇತ್ರ ಮತ್ತು ಯೋಹಾನ “ದೇವರ ಮಾತನ್ನ ಬಿಟ್ಟು ನಿಮ್ಮ ಮಾತು ಕೇಳೋದು ದೇವರ ದೃಷ್ಟಿಯಲ್ಲಿ ಸರಿನಾ? ನೀವೇ ಯೋಚನೆ ಮಾಡಿ. ನಾವಂತೂ ನೋಡಿದ್ದನ್ನ, ಕೇಳಿದ್ದನ್ನ ಮಾತಾಡದೆ ಇರಲ್ಲ” ಅಂದ್ರು. (ಅ. ಕಾ. 4:19, 20) ಪೇತ್ರ, ಯೋಹಾನ ಬಿಡುಗಡೆ ಆದ್ಮೇಲೆ ಶಿಷ್ಯರು ಯೆಹೋವನಿಗೆ ಪ್ರಾರ್ಥನೆ ಮಾಡಿದ್ರು. ಯೆಹೋವ ಅವ್ರ ಪ್ರಾರ್ಥನೆಗೆ ಉತ್ರ ಕೊಟ್ಟನು.—ಅ. ಕಾ. 4:31. w23.05 5 ¶11-12
ಗುರುವಾರ, ಮೇ 22
ಇವನು ನನ್ನ ಪ್ರೀತಿಯ ಮಗ.—ಮತ್ತಾ. 17:5.
ಯೆಹೋವ ಮತ್ತು ಯೇಸು ಮಧ್ಯ ಇರೋ ಪ್ರೀತಿ ನಿನ್ನೆ ಮೊನ್ನೆಯಿಂದ ಬಂದಿದ್ದಲ್ಲ. ಕೊಟ್ಯಾಂತರ ವರ್ಷಗಳಿಂದ ಇದೆ. ಅವರು ಒಬ್ರನ್ನೊಬ್ರು ತುಂಬ ಪ್ರೀತಿಸ್ತಾರೆ. ಯೆಹೋವ ಯೇಸುನ ತುಂಬ ಪ್ರೀತಿಸ್ತಾನೆ. ಅದನ್ನ ನಾವು ಹೇಗೆ ಹೇಳಬಹುದು? ಇವತ್ತಿನ ದಿನದ ವಚನದಲ್ಲಿ “ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ” ಅಂತಷ್ಟೇ ಹೇಳದೇ “ಇವನು ನನ್ನ ಪ್ರೀತಿಯ ಮಗ” ಅಂತಾನೂ ಹೇಳಿದನು. ಇದ್ರಿಂದ ನಮಗೇನು ಗೊತ್ತಾಗುತ್ತೆ? ಯೆಹೋವನಿಗೆ ಯೇಸು ಮೇಲೆ ತುಂಬ ಪ್ರೀತಿ ಇತ್ತು. ಅದ್ರಲ್ಲೂ ಯೇಸು ತನ್ನ ಜೀವ ಕೊಡೋಕೆ ಮುಂದೆ ಬಂದಿದ್ದನ್ನ ನೋಡಿದಾಗ ಯೆಹೋವನಿಗೆ ಆತನ ಬಗ್ಗೆ ಹೆಮ್ಮೆ ಅನಿಸ್ತು. (ಎಫೆ. 1:7) ಯೆಹೋವ ತನ್ನನ್ನ ಪ್ರೀತಿಸ್ತಾನೆ ಅನ್ನೋದು ಯೇಸುಗೆ ಗೊತ್ತಿತ್ತು. ಅದಕ್ಕೇ ಆತನು ಭೂಮಿಯಲ್ಲಿ ಇದ್ದಾಗ ಅದ್ರ ಬಗ್ಗೆ ತುಂಬ ಸಲ ಹೇಳಿದನು.—ಯೋಹಾ. 3:35; 10:17; 17:24. w24.01 28 ¶8
ಶುಕ್ರವಾರ, ಮೇ 23
ಹೆಚ್ಚು ಆಸ್ತಿಪಾಸ್ತಿಗಿಂತ ಒಳ್ಳೇ ಹೆಸ್ರು ಸಂಪಾದಿಸೋದು ಒಳ್ಳೇದು.—ಜ್ಞಾನೋ. 22:1.
ನೀವು ಇಷ್ಟಪಡ್ತಿರೋ ಒಬ್ಬ ವ್ಯಕ್ತಿ ನಿಮ್ಮ ಬಗ್ಗೆ ಸುಳ್ಳು ಹೇಳ್ತಿದ್ದಾನೆ ಅಂದ್ಕೊಳ್ಳಿ. ಅದನ್ನ ಕೆಲವು ಜನ್ರು ನಂಬ್ತಾರೆ. ಆದ್ರೆ ಅದು ಅಲ್ಲಿಗೇ ನಿಲ್ಲಲ್ಲ, ಅವನು ಇನ್ನೂ ಕೆಲವು ಜನ್ರಿಗೆ ಹೇಳ್ತಾನೆ. ಅವರೂ ಅದನ್ನ ನಂಬ್ತಾರೆ. ಆಗ ನಿಮಗೆ ಹೇಗನಿಸುತ್ತೆ? ನಿಮ್ಮ ಹೆಸ್ರು ಹಾಳಾಗ್ತಿರೋದ್ರಿಂದ ನಿಮಗೆ ತುಂಬ ನೋವಾಗುತ್ತಲ್ವಾ? ಬೇಜಾರಾಗುತ್ತಲ್ವಾ? ಯೆಹೋವ ದೇವರ ಹೆಸ್ರು ಹಾಳಾಗಿದ್ದೂ ಹೀಗೇನೇ. ಸ್ವರ್ಗದಲ್ಲಿದ್ದ ಒಬ್ಬ ದೇವದೂತ ಹವ್ವಳ ಹತ್ರ ಯೆಹೋವ ದೇವರ ಬಗ್ಗೆ ಸುಳ್ಳು ಹೇಳಿದ. ಅದನ್ನ ಅವಳು ನಂಬಿದಳು. ಇದ್ರಿಂದ ಮೊದಲನೇ ಮಾನವರಾದ ಆದಾಮ ಹವ್ವ ದೇವರ ವಿರುದ್ಧ ತಪ್ಪು ಮಾಡಿದ್ರು. ಹೀಗೆ ಎಲ್ಲ ಮನುಷ್ಯರಿಗೆ ಪಾಪ-ಮರಣ ಬಂತು. (ಆದಿ. 3:1-6; ರೋಮ. 5:12) ಅವನು ಹೇಳಿದ ಸುಳ್ಳುಗಳಿಂದ ಈಗ ಇಡೀ ಲೋಕದಲ್ಲಿ ಯುದ್ಧ, ಮರಣ ಮತ್ತು ಕೆಟ್ಟ ವಿಷ್ಯಗಳು ತುಂಬಿ ತುಳುಕ್ತಿದೆ. ಇದ್ರಿಂದ ಯೆಹೋವನಿಗೆ ಬೇಜಾರಾಯ್ತು. ಆದ್ರೆ ಆತನು ಅದನ್ನೇ ಮನಸ್ಸಲ್ಲಿಟ್ಟು ಕೊರಗ್ತಾ ಇಲ್ಲ. ಯಾಕಂದ್ರೆ ಯೆಹೋವ ‘ಖುಷಿಯಾಗಿರೋ ದೇವರು’ ಅಂತ ಬೈಬಲ್ ಹೇಳುತ್ತೆ.—1 ತಿಮೊ. 1:11. w24.02 8 ¶1-2
ಶನಿವಾರ, ಮೇ 24
ಈ ಮಹಾ ಕೆಟ್ಟ ಕೆಲಸ ಮಾಡಿ ದೇವರ ವಿರುದ್ಧ ಪಾಪ ಮಾಡೋಕೆ ನನ್ನಿಂದ ಸಾಧ್ಯನೇ ಇಲ್ಲ.—ಆದಿ. 39:9.
ಯೋಸೇಫನ ತರ ಇರೋಕೆ ನಾವೇನು ಮಾಡಬೇಕು? ಕೆಟ್ಟ ಆಸೆಗಳು ಬಂದಾಗ ಏನು ಮಾಡಬೇಕು ಅಂತ ಈಗ್ಲೇ ಯೋಚ್ನೆ ಮಾಡಬೇಕು. ಯೆಹೋವನಿಗೆ ಇಷ್ಟ ಇಲ್ಲದೆ ಇರೋದನ್ನ ಯಾರಾದ್ರೂ ಮಾಡೋಕೆ ಹೇಳಿದ್ರೆ, ‘ಮಾಡಲ್ಲ’ ಅಂತ ಹೇಳಿ. ಅದ್ರ ಬಗ್ಗೆ ಯೋಚ್ನೆ ಮಾಡೋಕೂ ಹೋಗಬೇಡಿ. (ಕೀರ್ತ. 97:10; 119:165) ಆಗ ಕೆಟ್ಟ ಆಸೆಗಳಿಗೆ ಬಲಿಯಾಗಿ ತಪ್ಪು ಮಾಡೋಕೆ ಹೋಗಲ್ಲ. ಬೈಬಲಲ್ಲಿ ಇರೋದು ಸತ್ಯ ಅಂತ ನಿಮಗೆ ಈಗಾಗ್ಲೇ ಮನವರಿಕೆ ಆಗಿರಬಹುದು. ಅಷ್ಟೇ ಅಲ್ಲ, ಯೆಹೋವನ ಸೇವೆ ಮಾಡಬೇಕು ಅನ್ನೋ ಆಸೆನೂ ಇರಬಹುದು. ಆದ್ರೂ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಳ್ಳೋಕೆ ಹಿಂಜರಿತಿದ್ದೀರಾ? ಹಾಗಿದ್ರೆ ದಾವೀದನ ತರ “ದೇವರೇ, ನನ್ನನ್ನ ಪರಿಶೋಧಿಸಿ ನನ್ನ ಮನಸ್ಸನ್ನ ತಿಳ್ಕೊ. ನನ್ನನ್ನ ಪರೀಕ್ಷಿಸಿ ನನ್ನ ಚಿಂತೆಗಳನ್ನ ಅರ್ಥ ಮಾಡ್ಕೊ. ಕೆಟ್ಟ ದಾರಿಗೆ ನಡಿಸೋ ವಿಷ್ಯ ಏನಾದ್ರೂ ನನ್ನಲ್ಲಿ ಇದ್ಯಾ ಅಂತ ನೋಡು, ಶಾಶ್ವತವಾಗಿ ಉಳಿಯೋ ದಾರಿಯಲ್ಲಿ ನನ್ನನ್ನ ನಡಿಸು” ಅಂತ ಪ್ರಾರ್ಥಿಸಿ. (ಕೀರ್ತ. 139:23, 24) ಯಾಕಂದ್ರೆ ಯೆಹೋವ ತನ್ನನ್ನ “ಶ್ರದ್ಧೆಯಿಂದ ಆರಾಧಿಸೋರನ್ನ” ಆಶೀರ್ವದಿಸ್ತಾನೆ. ಹಾಗಾಗಿ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಳ್ಳೋಕೆ ನಿಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಿದಾಗ ಯೆಹೋವನನ್ನ ಶ್ರದ್ಧೆಯಿಂದ ಆರಾಧಿಸ್ತಿದ್ದೀರ ಅಂತ ತೋರಿಸ್ಕೊಡ್ತೀರ.—ಇಬ್ರಿ. 11:6 w24.03 6 ¶13-15.
ಭಾನುವಾರ, ಮೇ 25
ಆತನು . . . ಬಲಿಗಳನ್ನ ಪ್ರತಿದಿನ ಕೊಡಬೇಕಾಗಿಲ್ಲ.—ಇಬ್ರಿ. 7:27.
ಎಲ್ಲ ಜನ್ರಿಗೋಸ್ಕರ ದೇವರ ಹತ್ರ ಬೇಡ್ಕೊಳ್ಳೋ ಜವಾಬ್ದಾರಿ ಮಹಾ ಪುರೋಹಿತನಿಗಿತ್ತು. ಪವಿತ್ರ ಡೇರೆ ಏರ್ಪಾಡು ಶುರು ಆದಾಗ ಯೆಹೋವ ದೇವರು ಆರೋನನನ್ನ ಇಸ್ರಾಯೇಲ್ಯರ ಮೊದಲನೇ ಮಹಾ ಪುರೋಹಿತನಾಗಿ ನೇಮಿಸಿದನು. ಆದ್ರೆ ಇಸ್ರಾಯೇಲ್ಯರ ಮಹಾ ಪುರೋಹಿತರಿಗೂ ನಮ್ಮ ಶ್ರೇಷ್ಠ ಮಹಾ ಪುರೋಹಿತನಾದ ಯೇಸು ಕ್ರಿಸ್ತನಿಗೂ ತುಂಬ ವ್ಯತ್ಯಾಸ ಇದೆ. ಇಸ್ರಾಯೇಲ್ಯರ ಮಹಾ ಪುರೋಹಿತರಿಗೆ “ಮರಣ ಇದ್ದಿದ್ರಿಂದ . . . ತಮ್ಮ ಸೇವೆ ಮುಂದುವರಿಸ್ಕೊಂಡು ಹೋಗೋಕೆ ಆಗ್ತಿರಲಿಲ್ಲ. ಅದಕ್ಕೇ ಒಬ್ರಾದ ಮೇಲೆ ಒಬ್ರು ಅಂತ ತುಂಬ ಪುರೋಹಿತರು ಆಗಬೇಕಾಯ್ತು.” (ಇಬ್ರಿ. 7:23-26) ಅಷ್ಟೇ ಅಲ್ಲ, ಈ ಪುರೋಹಿತರು ಅಪರಿಪೂರ್ಣರಾಗಿದ್ರಿಂದ ತಮ್ಮ ಪಾಪಗಳಿಗೆ ಬಲಿ ಅರ್ಪಿಸಬೇಕಿತ್ತು. ನಮ್ಮ ಮಹಾ ಪುರೋಹಿತನಾಗಿರೋ ಯೇಸು ಕ್ರಿಸ್ತ, “ನಿಜವಾದ ಡೇರೆಯಲ್ಲಿ ಸೇವಕನಾಗಿದ್ದಾನೆ. ಆ ಡೇರೆ ಹಾಕಿರೋದು ಮನುಷ್ಯನಲ್ಲ ಯೆಹೋವ” ಅಂತ ಪೌಲ ಹೇಳಿದ. (ಇಬ್ರಿ. 8:1, 2) ಅವನು ಯಾಕೆ ಹಾಗೆ ಹೇಳಿದ? ಯಾಕಂದ್ರೆ ಯೇಸು “ಯಾವಾಗ್ಲೂ ಜೀವಂತವಾಗಿ ಇರೋದ್ರಿಂದ ಆತನಾದ್ಮೇಲೆ ಬೇರೆಯವರು ಪುರೋಹಿತರಾಗಬೇಕಿಲ್ಲ.” ಅಷ್ಟೇ ಅಲ್ಲ, ಆತನು “ಕಳಂಕ ಇಲ್ಲದ, ಪಾಪಿಗಳ ತರ ಇಲ್ಲದ” ವ್ಯಕ್ತಿ. “ಬೇರೆ ಮಹಾ ಪುರೋಹಿತರ ಹಾಗೆ ಆತನು . . . ತನ್ನ ಪಾಪಗಳಿಗಾಗಿ . . . ಬಲಿಗಳನ್ನ ಪ್ರತಿದಿನ ಕೊಡಬೇಕಾಗಿಲ್ಲ.” w23.10 26 ¶8-9
ಸೋಮವಾರ, ಮೇ 26
ಮುಂಚೆ ಇದ್ದ ಆಕಾಶ, ಭೂಮಿ ಇಲ್ಲದೆ ಹೋಗಿತ್ತು.—ಪ್ರಕ. 21:1.
“ಮುಂಚೆ ಇದ್ದ ಆಕಾಶ” ಅಂದ್ರೆ ಸೈತಾನ ಮತ್ತು ಅವನ ಕೆಟ್ಟ ದೇವದೂತರ ಕೈ ಕೆಳಗಿರೋ ಸರ್ಕಾರಗಳು. (ಮತ್ತಾ. 4:8, 9; 1 ಯೋಹಾ. 5:19) ‘ಮುಂಚೆ ಇದ್ದ ಭೂಮಿ’ ಅಂದ್ರೆ ಏನು? ಬೈಬಲಲ್ಲಿ “ಭೂಮಿ” ಅಂತ ಹೇಳಿರೋದು ಮನುಷ್ಯರನ್ನ ಸೂಚಿಸುತ್ತೆ. (ಆದಿ. 11:1; ಕೀರ್ತ. 96:1) ಹಾಗಾಗಿ ಕೆಟ್ಟ ಜನ್ರಿಂದ ತುಂಬಿರೋ ಈ ಸಮಾಜನೇ ‘ಮುಂಚೆ ಇದ್ದ ಭೂಮಿ.’ ಈಗಿರೋ ‘ಆಕಾಶ ಮತ್ತು ಭೂಮಿ’ ಅಂದ್ರೆ ಮಾನವ ಸರ್ಕಾರ ಮತ್ತು ಕೆಟ್ಟ ಜನ್ರಿರೋ ಸಮಾಜವನ್ನ ಯೆಹೋವ ದೇವರು ರಿಪೇರಿ ಮಾಡಲ್ಲ, ಬದ್ಲಿಗೆ ಅದನ್ನೆಲ್ಲ ನಾಶ ಮಾಡಿ “ಹೊಸ ಆಕಾಶ, ಹೊಸ ಭೂಮಿಯನ್ನ” ತರ್ತಾನೆ. ಅಂದ್ರೆ ಒಂದು ಹೊಸ ಸರ್ಕಾರ ತರ್ತಾನೆ ಮತ್ತು ಅದ್ರಲ್ಲಿ ಬರೀ ಒಳ್ಳೇ ಜನ್ರಿರೋ ಹಾಗೆ ಮಾಡ್ತಾನೆ. ಯೆಹೋವ ಈಗಿರೋ ಭೂಮಿಯನ್ನ ಸುಂದರ ತೋಟ ಮಾಡ್ತಾನೆ. ಮನುಷ್ಯರು ಪರಿಪೂರ್ಣರಾಗೋ ತರ ಮಾಡ್ತಾನೆ. ಅಷ್ಟೇ ಅಲ್ಲ, ಯೆಶಾಯ ಹೇಳಿದ ಹಾಗೆ ಕುಂಟರಿಗೆ ಕಾಲು ಬರುತ್ತೆ, ಕಣ್ಣು ಕಾಣದವ್ರಿಗೆ ಕಾಣಿಸುತ್ತೆ, ಕಿವಿ ಕೇಳದವ್ರಿಗೆ ಕೇಳಿಸುತ್ತೆ. ಅಷ್ಟೇ ಯಾಕೆ? ಸತ್ತಿರುವವರು ಕೂಡ ಜೀವಂತವಾಗಿ ಬರ್ತಾರೆ.—ಯೆಶಾ. 25:8; 35:1-7. w23.11 4 ¶9-10
ಮಂಗಳವಾರ, ಮೇ 27
ಸಿದ್ಧವಾಗಿರಿ.—ಮತ್ತಾ. 24:44.
ಕೆಲವು ವಿಪತ್ತುಗಳಾದಾಗ ನಮಗೆ ತುಂಬ ಭಯ ಆಗುತ್ತೆ, ಗಾಬರಿಯಾಗುತ್ತೆ. ಯಾಕಂದ್ರೆ ಅದು ಬರೋದೇ ಗೊತ್ತಾಗಲ್ಲ. ಆದ್ರೆ ಮಹಾ ಸಂಕಟ ಬಂದಾಗ ಯೆಹೋವನ ಜನ್ರಿಗೆ ಅಷ್ಟು ಭಯ ಆಗಲ್ಲ. ಯಾಕಂದ್ರೆ ಆ ದಿನಕ್ಕೆ ಸಿದ್ಧವಾಗಿರಿ ಅಂತ ಯೇಸು 2,000 ವರ್ಷಗಳ ಮುಂಚೆನೇ ಹೇಳಿದ್ದನು. “ಮಹಾ ಸಂಕಟ” ದಿಢೀರಂತ ಬರುತ್ತೆ. (ಮತ್ತಾ. 24:21) ಹಾಗಾಗಿ ನಾವು ಈಗಿಂದಾನೇ ತಯಾರಾಗಿದ್ರೆ ಆ ದಿನ ಬಂದಾಗ ಕಷ್ಟನ ಸಹಿಸ್ಕೊಳ್ಳೋಕೆ ಆಗುತ್ತೆ, ಬೇರೆಯವ್ರಿಗೂ ಸಹಾಯ ಮಾಡೋಕಾಗುತ್ತೆ. (ಲೂಕ 21:36) ನಮಗೆ ತಾಳ್ಮೆ ಇದ್ರೆ ಯೆಹೋವ ನಮ್ಮನ್ನ ಕಾಪಾಡೇ ಕಾಪಾಡ್ತಾನೆ ಅಂತ ನಂಬಿ ನಾವು ಸಾರುತ್ತಾ ಇರ್ತೀವಿ. ಮಹಾ ಸಂಕಟದ ಸಮಯದಲ್ಲಿ ನಮ್ಮ ಸಹೋದರರು ಅವ್ರ ಹತ್ರ ಇರೋದನ್ನೆಲ್ಲ ಕಳ್ಕೊಬಹುದು. (ಹಬ. 3:17, 18) ನಮಗೆ ಅನುಕಂಪ ಇದ್ರೆ ನಮ್ಮ ಹತ್ರ ಇರೋದನ್ನ ಹಂಚ್ಕೊಳ್ತೀವಿ. ಜನಾಂಗಗಳ ಗುಂಪು ನಮ್ಮ ಮೇಲೆ ಆಕ್ರಮಣ ಮಾಡಿದಾಗ ನಾವೆಲ್ರೂ ಒಟ್ಟಿಗೆ ಇರಬೇಕಾದ ಪರಿಸ್ಥಿತಿ ಬರುತ್ತೆ. (ಯೆಹೆ. 38:10-12) ಆಗ ನಮ್ಮಲ್ಲಿ ಪ್ರೀತಿ ಇದ್ರೆ ಒಗ್ಗಟ್ಟಿಂದ ಕಷ್ಟಗಳನ್ನ ಸಹಿಸ್ಕೊಳ್ತೀವಿ. w23.07 2 ¶2-3
ಬುಧವಾರ, ಮೇ 28
ನೀವು ಹೇಗೆ ನಡ್ಕೊಳ್ತಿದ್ದೀರ ಅಂತ ಚೆನ್ನಾಗಿ ಗಮನಿಸಿ. ಬುದ್ಧಿ ಇಲ್ಲದವ್ರ ತರ ಅಲ್ಲ, ಬುದ್ಧಿ ಇರುವವ್ರ ತರ ನಡ್ಕೊಳ್ಳಿ . . . ಹಾಗಾಗಿ ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.—ಎಫೆ. 5:15, 16.
ಅಕ್ವಿಲ ಮತ್ತು ಪ್ರಿಸ್ಕಿಲ್ಲ ಅವ್ರ ಉದಾಹರಣೆ ನೋಡಿ. ಆಗಿದ್ದ ಕ್ರೈಸ್ತರಿಗೆ ಅವರಂದ್ರೆ ತುಂಬ ಇಷ್ಟ. (ರೋಮ. 16:3, 4) ಅವರು ಕೆಲಸ ಮಾಡುವಾಗ, ಸಿಹಿಸುದ್ದಿ ಸಾರುವಾಗ, ಬೇರೆಯವ್ರಿಗೆ ಸಹಾಯ ಮಾಡುವಾಗ ಅವರು ಜೊತೆಯಾಗಿ ಇರ್ತಿದ್ರು. (ಅ. ಕಾ. 18:2, 3, 24-26) ಅದಷ್ಟೇ ಅಲ್ಲ, ಬೈಬಲಲ್ಲೂ ಅವ್ರ ಹೆಸ್ರು ಯಾವಾಗ್ಲೂ ಜೊತೆಯಾಗೇ ಇರುತ್ತೆ. ಅಕ್ವಿಲ ಮತ್ತು ಪ್ರಿಸ್ಕಿಲ್ಲರಿಂದ ಗಂಡ ಹೆಂಡತಿ ಏನು ಕಲಿಬಹುದು? ಅವರು ತುಂಬ ಕೆಲಸಗಳನ್ನ ಜೊತೆಜೊತೆಯಾಗಿ ಮಾಡ್ತಿದ್ರು. ಅದೇ ತರ ನೀವು ಜೊತೆಯಾಗಿ ಏನೆಲ್ಲ ಮಾಡಬಹುದು ಅಂತ ಯೋಚ್ನೆ ಮಾಡಿ. ಅವ್ರಿಬ್ರು ಜೊತೆಯಾಗಿ ಸಿಹಿಸುದ್ದಿ ಸಾರ್ತಾ ಇದ್ರು. ನೀವು ಕೂಡ ಆಗಾಗ ಅವ್ರ ತರಾನೇ ಸಿಹಿಸುದ್ದಿ ಸಾರಬಹುದಲ್ವಾ? ಅಷ್ಟೇ ಅಲ್ಲ, ಅವ್ರಿಬ್ರು ಕೆಲಸನೂ ಒಟ್ಟಿಗೆ ಮಾಡ್ತಿದ್ರು. ಅದರರ್ಥ ನೀವು ಕೂಡ ಒಂದೇ ಕಡೆ ಕೆಲಸಕ್ಕೆ ಹೋಗಬೇಕಂತಲ್ಲ. ಆದ್ರೆ ಮನೆಕೆಲಸನ ಇಬ್ರೂ ಸೇರಿ ಮಾಡಬಹುದಲ್ವಾ? (ಪ್ರಸಂ. 4:9) ಈ ರೀತಿ ಜೊತೆಯಾಗಿ ಕೆಲಸ ಮಾಡಿದಾಗ ಮಾತಾಡೋಕೆ ನಿಮಗೆ ತುಂಬ ಟೈಮ್ ಸಿಗುತ್ತೆ. ನೀವಿಬ್ರು ಫ್ರೆಂಡ್ಸ್ ತರ ಆಗ್ತಿರ. w23.05 22-23 ¶10-12
ಗುರುವಾರ, ಮೇ 29
ನನಗೆ ಭಯ ಆದಾಗ ನಾನು ನಿನ್ನ ಮೇಲೆ ಭರವಸೆ ಇಡ್ತೀನಿ.—ಕೀರ್ತ. 56:3.
ನಾವೆಲ್ರೂ ಕೆಲವೊಮ್ಮೆ ಭಯಪಡ್ತೀವಿ. ದಾವೀದನಿಗೂ ಕೆಲವೊಮ್ಮೆ ಭಯ ಆಯ್ತು. ರಾಜ ಸೌಲ, ದಾವೀದನನ್ನ ಸಾಯಿಸಬೇಕು ಅಂತ ಹುಡುಕ್ತಾ ಇದ್ದಾಗ ದಾವೀದ ಭಯಪಟ್ಟು ಗತ್ ಅನ್ನೋ ಫಿಲಿಷ್ಟಿಯರ ಊರಿಗೆ ಓಡಿ ಹೋದ. ಆದ್ರೆ ಆ ಊರಿನ ರಾಜ ಆಕೀಷನಿಗೆ “ಹತ್ತು ಸಾವಿರಗಟ್ಟಲೆ” ಫಿಲಿಷ್ಟಿಯರನ್ನ ಕೊಂದ ವ್ಯಕ್ತಿ ಬೇರೆ ಯಾರೂ ಅಲ್ಲ ದಾವೀದನೇ ಅಂತ ಗೊತ್ತಾಯ್ತು. ಆಗ ದಾವೀದ “ತುಂಬ ಹೆದರಿದ.” (1 ಸಮು. 21:10-12) ಆ ರಾಜ ತನಗೇನು ಮಾಡಿಬಿಡ್ತಾನೋ ಅಂತ ದಾವೀದ ಚಿಂತೆ ಮಾಡ್ತಿದ್ದ. ಆದ್ರೂ ದಾವೀದ ಹೇಗೆ ಭಯನ ಮೆಟ್ಟಿನಿಂತ? ದಾವೀದ ಗತ್ ಊರಲ್ಲಿ ಇದ್ದಾಗ ತನಗೆ ಹೇಗೆ ಅನಿಸ್ತು ಅಂತ 56ನೇ ಕೀರ್ತನೆಯಲ್ಲಿ ಬರೆದಿದ್ದಾನೆ. ಅದ್ರಲ್ಲಿ ಅವನು ತನಗೆ ಯಾಕೆ ಭಯ ಆಯ್ತು ಅಂತಷ್ಟೇ ಅಲ್ಲ ಆ ಭಯದಿಂದ ಹೊರಗೆ ಬರೋಕೆ ಯಾವುದು ಸಹಾಯ ಮಾಡ್ತು ಅಂತಾನೂ ಹೇಳಿದ್ದಾನೆ. ಹಾಗಾದ್ರೆ ದಾವೀದ ತನಗೆ ಭಯ ಆದಾಗ ಏನು ಮಾಡಿದ? ಅವನು ಯೆಹೋವನ ಮೇಲೆ ನಂಬಿಕೆ ಇಟ್ಟ. (ಕೀರ್ತ. 56:1-3, 11) ಯೆಹೋವ ದಾವೀದನಿಗೆ ಸಹಾಯ ಮಾಡಿದನು. ಅವನಿಗೆ ಒಂದು ಉಪಾಯ ಹೊಳೆಯೋ ತರ ಮಾಡಿದನು. ಆಗ ದಾವೀದ ಆಕೀಷನ ಮುಂದೆ ಹುಚ್ಚನ ತರ ನಾಟಕ ಮಾಡಿದ. ಅದಕ್ಕೆ ರಾಜ ತನ್ನ ಸೇವಕರಿಗೆ ‘ಇವನನ್ನ ಮೊದ್ಲು ಇಲ್ಲಿಂದ ಓಡಿಸಿ’ ಅಂತ ಹೇಳಿದ. ಹೀಗೆ ದಾವೀದ ತನ್ನ ಜೀವ ಉಳಿಸ್ಕೊಂಡ.—1 ಸಮು. 21:13–22:1. w24.01 2 ¶1-3
ಶುಕ್ರವಾರ, ಮೇ 30
ದೇವರು ಯಾರನ್ನ ಕರೆದಿದ್ದಾನೋ ಯಾರನ್ನ ಆರಿಸ್ಕೊಂಡಿದ್ದಾನೋ ದೇವರಿಗೆ ಯಾರು ನಂಬಿಗಸ್ತರಾಗಿ ಇದ್ದಾರೋ ಅವರೂ . . . ಗೆಲ್ತಾರೆ.—ಪ್ರಕ. 17:14.
ಇವತ್ತಿನ ದಿನವಚನದಲ್ಲಿ ಹೇಳಿರೋ ವ್ಯಕ್ತಿಗಳು ಯಾರು? ಸ್ವರ್ಗಕ್ಕೆ ಹೋದ ಅಭಿಷಿಕ್ತ ಕ್ರೈಸ್ತರು! ಅಲ್ಲಿಗೆ ಅವರು ಹೋದ ತಕ್ಷಣ ಅವ್ರಿಗೆ ಸಿಗೋ ಮೊದಲನೇ ನೇಮಕನೇ ಯುದ್ಧ ಮಾಡೋದು. ಅವರು ಸ್ವರ್ಗಕ್ಕೆ ಹೋಗಿದ್ದೇ ಯೇಸು ಮತ್ತು ದೇವದೂತರ ಜೊತೆ ಸೇರ್ಕೊಂಡು ಯೆಹೋವನ ಶತ್ರುಗಳ ವಿರುದ್ಧ ಯುದ್ಧ ಮಾಡೋಕೆ. ಈಗ ಭೂಮಿ ಮೇಲಿರೋ ಕೆಲವು ಅಭಿಷಿಕ್ತರಿಗೆ ವಯಸ್ಸಾಗಿರೋದ್ರಿಂದ ಅಷ್ಟು ಶಕ್ತಿ ಇಲ್ಲ ನಿಜ. ಆದ್ರೆ ಅವರು ಸ್ವರ್ಗಕ್ಕೆ ಹೋದ್ಮೇಲೆ ಅವರು ಬಲಿಷ್ಠರಾಗ್ತಾರೆ, ಅಮರ ಆತ್ಮಜೀವಿಗಳಾಗ್ತಾರೆ, ಯೇಸು ಕ್ರಿಸ್ತನ ಜೊತೆ ಸೇರ್ಕೊಂಡು ಯುದ್ಧ ಮಾಡ್ತಾರೆ. ಅಷ್ಟೇ ಅಲ್ಲ, ಹರ್ಮಗೆದೋನ್ ಯುದ್ಧ ಆದ್ಮೇಲೆ ಭೂಮಿ ಮೇಲಿರೋ ಜನ್ರಿಗೆ ಪರಿಪೂರ್ಣರಾಗೋಕೆ ಸಹಾಯ ಮಾಡ್ತಾರೆ. ಆಗ ಅವರು ಭೂಮಿಲಿದ್ದಾಗ ಸಹೋದರ ಸಹೋದರಿಯರಿಗೆ ಸಹಾಯ ಮಾಡಿದ್ದಕ್ಕಿಂತ ಜಾಸ್ತಿ ಸಹಾಯ ಮಾಡಕ್ಕಾಗುತ್ತೆ! w24.02 6-7 ¶15-16
ಶನಿವಾರ, ಮೇ 31
ಪವಿತ್ರಶಕ್ತಿಯ ಮಾರ್ಗದರ್ಶನಕ್ಕೆ ತಕ್ಕ ಹಾಗೆ ನಡಿತಾ ಇರಿ. ಆಗ ನೀವು ದೇಹದ ಆಸೆಗಳ ಪ್ರಕಾರ ನಡ್ಕೊಳಲ್ಲ.—ಗಲಾ. 5:16.
ಕೆಲವರು ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಳ್ಳೋಕೆ ರೆಡಿ ಇದ್ರೂ ಹಿಂಜರಿತಾರೆ. ಯಾಕಂದ್ರೆ ‘ನಾನೆಲ್ಲಿ ಮುಂದೆ ದೊಡ್ಡ ತಪ್ಪು ಮಾಡಿಬಿಡ್ತಿನೋ, ಬಹಿಷ್ಕಾರ ಆಗಿಬಿಡುತ್ತೋ’ ಅನ್ನೋ ಭಯ ಅವ್ರಿಗಿರಬಹುದು. ಆದ್ರೆ ನೀವು ಭಯ ಪಡಬೇಡಿ. ‘ತನ್ನನ್ನ ಆರಾಧಿಸುವವರು ಹೇಗಿರಬೇಕೋ ಹಾಗೆ ನಡ್ಕೊಳ್ಳೋಕೆ ಮತ್ತು ತನ್ನನ್ನ ಖುಷಿಪಡಿಸೋಕೆ’ ಯೆಹೋವನೇ ನಿಮಗೆ ಸಹಾಯ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. (ಕೊಲೊ. 1:10) ಯಾವಾಗ್ಲೂ ಸರಿಯಾಗಿರೋದನ್ನೇ ಮಾಡೋಕೆ, ತನಗೆ ನಿಯತ್ತಾಗಿರೋಕೆ ಯೆಹೋವ ನಿಮಗೆ ಶಕ್ತಿನೂ ಕೊಡ್ತಾನೆ. ಆತನು ಈಗಾಗ್ಲೆ ತುಂಬ ಜನ್ರಿಗೆ ಸಹಾಯ ಮಾಡಿದ್ದಾನೆ. (1 ಕೊರಿಂ. 10:13) ಅದಕ್ಕೇ ಬಹಿಷ್ಕಾರ ಆಗುವವ್ರ ಸಂಖ್ಯೆನೂ ಕಮ್ಮಿ ಆಗಿದೆ. ನಾವೆಲ್ರೂ ಅಪರಿಪೂರ್ಣರಾಗಿರೋದ್ರಿಂದ ನಮ್ಮ ಮನಸ್ಸಿಗೆ ಕೆಟ್ಟ ವಿಷ್ಯಗಳು ಬರೋದು ಸಹಜನೇ. (ಯಾಕೋ. 1:14) ಆದ್ರೆ ಅದನ್ನ ಮಾಡೋದು ಬಿಡೋದು ನಿಮಗೆ ಬಿಟ್ಟಿದ್ದು. ಯಾಕಂದ್ರೆ ನಿಮ್ಮ ಜೀವನ ಹೇಗಿರಬೇಕು, ಏನು ಮಾಡಬೇಕು ಅನ್ನೋದು ನಿಮ್ಮ ಕೈಯಲ್ಲಿದೆ. ಕೆಲವರು ತಮ್ಮ ಮನಸ್ಸಿಗೆ ಕೆಟ್ಟ ಆಸೆಗಳು ಬಂದಾಗ ‘ನಾವೇನೂ ಮಾಡಕ್ಕಾಗಲ್ಲ’ ಅಂತ ಹೇಳ್ತಾರೆ. ಆದ್ರೆ, ನೀವು ಆ ಆಸೆಗಳನ್ನ ಹತೋಟಿಯಲ್ಲಿ ಇಟ್ಕೊಬಹುದು. w24.03 5 ¶11-12