ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 8/1 ಪು. 4-6
  • ಶಾಂತಿ ಸಂಭವನೀಯತೆಗಳು ಏನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶಾಂತಿ ಸಂಭವನೀಯತೆಗಳು ಏನು?
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಧರ್ಮದ ಮತ್ತು ನಿಯಮದ ಮೂಲಕ ಶಾಂತಿ
  • ಶಾಂತಿಗಾಗಿ ಅಧಿಕ ಪ್ರಯತ್ನಗಳು
  • ಶಾಂತಿ ತಡೆಗಟ್ಟುವ ಗುಪ್ತ ಶಕ್ತಿ
  • ನಿಜ ಶಾಂತಿ—ಯಾವ ಮೂಲದಿಂದ?
    ಕಾವಲಿನಬುರುಜು—1997
  • ಯಾರು ಮಾನವಕುಲವನ್ನು ಶಾಂತಿಗೆ ನಡಿಸುವರು?
    ಕಾವಲಿನಬುರುಜು—1991
  • ‘ಶಾಂತಿಯ ಸಮಯ’ ಸಮೀಪವಿದೆ!
    ಕಾವಲಿನಬುರುಜು—1999
  • ಶಾಂತಿ—ನೀವು ಹೇಗೆ ಪಡಕೊಳ್ಳಬಹುದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಇನ್ನಷ್ಟು
ಕಾವಲಿನಬುರುಜು—1991
w91 8/1 ಪು. 4-6

ಶಾಂತಿ ಸಂಭವನೀಯತೆಗಳು ಏನು?

ವಾರ್ತಾಪತ್ರಗಳ ಮೇಲ್ಬರಹಗಳ ನಡುವೆಯೂ, ನಮ್ಮಲ್ಲಿ ಹೆಚ್ಚಿನವರು ಮನಗಾಣುವ ಪ್ರಕಾರ, ನಿಜ ಶಾಂತಿಯಿಂದ ಮಾನವ ಕುಲವು ಬಹುದೂರದಲ್ಲಿದೆ ಎಂಬದು ಸತ್ಯಸಂಗತಿ. ಅಫಘಾನಿಸ್ಥಾನದಿಂದ ಪರಕೀಯ ಸೇನೆಗಳ ಹಿಂತೆಗೆಯುವಿಕೆಯು, ಆ ದೇಶಕ್ಕೆ ಶಾಂತಿಯನ್ನು ತರಲಿಲ್ಲ. ಫಿಲಿಪ್ಪೀನ್ಸ್‌, ಸೂಡಾನ್‌, ಇಸ್ರೇಲ್‌, ಉತ್ತರ ಅಯರ್ಲೆಂಡ್‌, ಲೆಬನನ್‌ ಮತ್ತು ಶ್ರೀಲಂಕಾ ಮುಂತಾದ ಕೆಲವೇ ದೇಶಗಳನ್ನು ಹೆಸರಿಸಿದರೂ, ಅಲ್ಲಿ ಇನ್ನೂ ಒಂದಲ್ಲ ಒಂದು ತರದ ಹೋರಾಟವು ನಡಿಯುತ್ತಾ ಇದೆ.

ಸ್ವಸ್ಥ ಬುದ್ಧಿಯ ಹೆಚ್ಚಿನ ಜನರು ಶಾಂತಿಯನ್ನು ಬಯಸುವಾಗ, ಶಾಂತಿಯಾದರೂ ಕೈಗೆ ಎಟಕಿಸದಿರುವುದೇಕೆ? ರಾಜನೀತಿಜ್ಞರು ಅನೇಕ ಶತಮಾನಗಳಿಂದ ಅನೇಕಾನೇಕ ವಿಧಗಳಲಿ ಶಾಂತಿಯನ್ನು ತರಲು ಪ್ರಯತ್ನಿಸಿದ್ದಾರೆ, ಆದರೆ ಅವರ ಪ್ರಯತ್ನಗಳು ಯಾವಾಗಲೂ ವೈಫಲ್ಯಗೊಂಡಿವೆ. ಯಾಕೆ? ಕೆಲವು ಉದಾಹರಣೆಗಳನ್ನು ನಾವು ಅವಲೋಕಿಸಿ ನೋಡೋಣ.

ಧರ್ಮದ ಮತ್ತು ನಿಯಮದ ಮೂಲಕ ಶಾಂತಿ

ಶಾಂತಿಕರ್ತತೆಯಲ್ಲಿ ರೋಮನ್‌ ಸಾಮ್ರಾಜ್ಯವು ಒಂದು ಸಾಫಲ್ಯ ಪ್ರಯತ್ನವೆಂದು ಕೆಲವರು ವೀಕ್ಷಿಸುತ್ತಾರೆ. ಅದರ ಕೈಕೆಳಗೆ, ವ್ಯವಸ್ಥಾಪಿತ ನಿಯಮ, ನಮನೀಯ ಆಡಳಿತ, ದುರ್ದಮ ಸೇನೆ ಮತ್ತು ಸು-ರಚಿತ ರಸ್ತೆಗಳ ಒಂದು ಸಂಯೋಗವು, ಕೆಲವು ಶತಮಾನಗಳ ತನಕ, ಪ್ಯಾಕ್ಸ್‌ ರೊಮಾನ (ರೋಮನ್‌ ಶಾಂತಿಸ್ಥಿತಿ) ಎಂದು ಹೆಸರುಗೊಂಡ ಒಂದು ಅಂತರ್ರಾಷ್ಟ್ರೀಯ ಸ್ಥಿರತೆಯನ್ನು ಪಶ್ಚಿಮ ಆಸ್ಯಾ, ಆಫ್ರಿಕಾ ಮತ್ತು ಯುರೋಪಿನ ವಿಸ್ತಾರ್ಯ ಕ್ಷೇತ್ರಗಳಲ್ಲಿ ಕಾಪಾಡಿತ್ತು. ಕಟ್ಟಕಡೆಗಾದರೋ, ರೋಮನ್‌ ಸಾಮ್ರಾಜ್ಯವು ಅಂತರಿಕ ಭ್ರಷ್ಟಾಚಾರ ಮತ್ತು ಪರಕೀಯ ಧಾಳಿಗಳಿಗೆ ಬಲಿಯಾಯಿತು ಮತ್ತು ರೋಮನ್‌ ಶಾಂತಿ ಕುಸಿದುಬಿತ್ತು.

ಮಾನವ ಪ್ರಯತ್ನಗಳ ವಿಷಾಧಕರ ಸತ್ಯವನ್ನು ಇದು ಚಿತ್ರಿಸುತ್ತದೆ. ಮೊದಲಿನ ಆಶಾಯುಕ್ತ ಪ್ರಾರಂಭದ ಅನಂತರ, ಸಾಮಾನ್ಯವಾಗಿ ಅವು ಇಳಿಗುಂದುತ್ತವೆ. ದೇವರು ತಾನೇ ಹೇಳಿದ್ದು: “ಮನುಷ್ಯನ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು.” ಮತ್ತು ಈ ಕೆಟ್ಟ ಮನಸ್ಸಂಕಲ್ಪವು ಕಾಲಾವಧಿಯಲ್ಲಿ ಜಯಿಸಿತೀರುತ್ತದೆ. (ಆದಿಕಾಂಡ 8:21) ಅಷ್ಟಲ್ಲದೆ, ಪ್ರವಾದಿ ಯೆರೆಮೀಯನು ಹೇಳಿದ್ದು: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ. ಅದನ್ನು ಯಾರು ತಿಳಿದಾರು?” (ಯೆರೆಮೀಯ 17:9) ಮಾನವ ಸ್ವಭಾವಗಳ ಕುರಿತು ಹೇಳ ಸಾಧ್ಯವಿಲ್ಲ. ಒಬ್ಬನ ಸದುದ್ದೇಶಗಳು ಇನ್ನೊಬ್ಬನ ಅಸೂಯೆ ಅಥವಾ ಹೆಬ್ಬಯಕೆಗಳಿಂದ ದೊಬ್ಬಲ್ಪಡಬಹುದು. ಅಥವಾ ಉಚ್ಛ ತತ್ವಗಳನ್ನು ಅನುಸರಿಸುವ ಅಧಿಪತಿಯು ತಾನೇ ಭ್ರಷ್ಟನಾಗಲೂ ಬಹುದು. ವಿಷಯವು ಹೀಗಿರುವಲ್ಲಿ, ಮಾನವರು ಎಂದಾದರೂ ಶಾಂತಿಯನ್ನು ತರಶಕ್ತರಾಗುವುದು ಹೇಗೆ?

ಸಾ.ಶ.ಪೂ. ಮೂರನೆಯ ಶತಮಾನದಲ್ಲಿ ಭಾರತದ ಉಪಖಂಡದಿಂದ ಒಂದು ಗಮನಾರ್ಹವಾದ ಶಾಂತಿಕರ್ತ ಪ್ರಯತ್ನವು ವರದಿಯಾಗಿತ್ತು. ಅಲ್ಲಿ, ಅಶೋಕನೆಂಬ ಪ್ರಬಲ ಅರಸನು ಸಂಗ್ರಾಮ ಮತ್ತು ರಕ್ತಪಾತಗಳ ಮೂಲಕ ಒಂದು ಮಹಾ ಸಾಮ್ರಾಜ್ಯವನ್ನು ಸ್ವಾಧೀನಪಡಿಸಿಕೊಂಡನು. ಅನಂತರ, ದಾಖಲೆಗನುಸಾರವಾಗಿ, ಬೌದ್ಧ ತತ್ವಗಳಿಗೆ ಅವನು ಮತಾಂತರವಾದನು. ಹೋರಾಟಗಳನ್ನು ಪರಿತ್ಯಜಿಸುತ್ತಾ ಅವನು, ತನ್ನ ಪ್ರಜೆಗಳು ಒಳ್ಳೇ ಜೀವಿತವನ್ನು ನಡಿಸುವರೇ ಸಹಾಯಕ್ಕಾಗಿ ಸೂಕ್ತನುಡಿಗಳನ್ನು ಕೊರೆದ ಸ್ಮಾರಕಸ್ತಂಭಗಳನ್ನು ತನ್ನ ಸಾಮ್ರಾಜ್ಯದ ಸುತ್ತಲೂ ಕಟ್ಟಿಸಿದನು. ಮತ್ತು ಅವನ ಸಾಮ್ರಾಜ್ಯವು ಶಾಂತಿಯುಕ್ತವೂ ಸಮೃದ್ಧವೂ ಆಗಿತ್ತೆಂದು ವ್ಯಕ್ತವಾಗಿತ್ತು.

ಅಶೋಕನ ಮಾರ್ಗವು ಶಾಂತಿಗೆ ನಡಿಸುವಂಥಾದಾಗಿತ್ತೋ? ಅಸಂತೋಷಕರವಾಗಿ, ಇಲ್ಲವೆನ್ನಲೇಬೇಕು. ಸಾಮ್ರಾಟನು ಮೃತನಾದಾಗ, ಅವನ ಶಾಂತಿಯೂ ಅವನೊಂದಿಗೆ ಮೃತಿಸಿತು ಮತ್ತು ಅವನ ಸಾಮ್ರಾಜ್ಯವು ಮುರಿದುಬಿತ್ತು. ಸದುದ್ದೇಶ ಹಾಗೂ ದಕ್ಷತೆಯುಳ್ಳ ಒಬ್ಬ ಅರಸನ ಪ್ರಯತ್ನಗಳು ಸಹಾ ಕೊನೆಗೆ ಭಗ್ನಗೊಳ್ಳುತ್ತವೆ ಯಾಕಂದರೆ ಅವನು ಮರ್ತ್ಯನು. ಪ್ರಸಂಗಿ ಪುಸ್ತಕದ ಲೇಖಕನು ಈ ಸಮಸ್ಯೆಯನ್ನು ತಿಳಿಸುತ್ತಾ ಬರೆದದ್ದು: “ನನ್ನ ಪ್ರಯಾಸದ ಫಲವನ್ನು ಮುಂದಿನವನಿಗೆ ಬಿಟ್ಟುಬಿಡಬೇಕೆಂದು ನಾನು ಲೋಕದಲ್ಲಿ ಪಟ್ಟ ಪ್ರಯಾಸಕ್ಕೆಲ್ಲಾ ಬೇಸರಗೊಂಡೆನು. ಅವನು ಜ್ಞಾನಿಯೋ ಮೂಢನೋ ಯಾರಿಗೆ ಗೊತ್ತು? ಎಂಥವನಾದರೂ ನಾನು ಲೋಕದೊಳಗೆ ಯಾವದರಲ್ಲಿ ಜ್ಞಾನವನ್ನೂ ಪ್ರಯಾಸವನ್ನೂ ವ್ರಯ ಮಾಡಿದ್ದೇನೋ ಅದರ ಮೇಲೆ ದೊರೆತನ ಮಾಡುವನು. ಇದೂ ವ್ಯರ್ಥ.”—ಪ್ರಸಂಗಿ 2:18, 19.

ಹೌದು, ಮನುಷ್ಯನ ಮರ್ತ್ಯತೆಯು ಬಾಳುವ ಶಾಂತಿಯನ್ನು ತರಲಿರುವ ಅವನ ಪ್ರಯತ್ನಕ್ಕೆ ದುಸ್ತರವಾದ ಅಡ್ಡಿಯಾಗಿದೆ. ಈ ವಿಷಯದಲ್ಲಿ ಕೀರ್ತನೆಗಾರನ ಸೂಚನೆಯು ನಿಜವಾಗಿಯೂ ವಿವೇಕಪ್ರದ: “ಪ್ರಭುಗಳಲ್ಲಿ ಭರವಸವಿಡಬೇಡಿರಿ. ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡಶಕ್ತನಲ್ಲ. ಅವನು ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ. ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.”—ಕೀರ್ತನೆ 146:3, 4.

ಶಾಂತಿಗಾಗಿ ಅಧಿಕ ಪ್ರಯತ್ನಗಳು

ಇತರ ಮಾನವ ಪ್ರಯತ್ನಗಳು ತದ್ರೀತಿಯಲ್ಲಿ, ಮಾನವನು ಶಾಂತಿ ತರುವ ತನ್ನ ಪ್ರಯತ್ನದಲ್ಲಿ ಏಕೆ ವಿಫಲನಾಗುತ್ತಾನೆಂದು ಚಿತ್ರಿಸುತ್ತವೆ. ಉದಾಹರಣೆಗೆ, ಹತ್ತನೆಯ ಶತಮಾನದಲ್ಲಿ, ದೇವರ ಶಾಂತಿ ಎಂದು ಕರೆಯಲ್ಪಟ್ಟ ಒಂದು ಚಳವಳಿಯು ಯುರೋಪಿನಲ್ಲಿ ಆರಂಭಗೊಂಡಿತು. ಚರ್ಚ್‌ ಆಸ್ತಿಯ ಭದ್ರತೆಗಾಗಿ ರಚಿಸಲ್ಪಟ್ಟ ಇದು, ಹನ್ನೆರಡನೆಯ ಶತಮಾನದ ಮಧ್ಯದೊಳಗೆ ಒಂದು ರೀತಿಯ ಅಹಿಂಸಾ ಚಟುವಟಿಕೆಯಾಗಿ ಮಾರ್ಪಟ್ಟು ಯುರೋಪಿನ ಹೆಚ್ಚಿನ ಭಾಗಗಳಿಗೆ ಹಬ್ಬಿತು.

ಇನ್ನೊಂದು ಕಲ್ಪನೆಯು, “ಶಕ್ತಿಯಲ್ಲಿ ಸಮತೆ” ಎಂಬ ಹೆಸರಿಂದ ಕರೆಯಲ್ಪಟ್ಟಿತ್ತು. ಈ ಧೋರಣೆಯನ್ನು ಹಿಂಬಾಲಿಸುತ್ತಾ, ಯುರೋಪಿನಂಥಾ—ರಾಷ್ಟ್ರಗಳ ಸಮೂಹವು— ರಾಜ್ಯಗಳ ನಡುವೆ ಹೆಚ್ಚು ಕಡಿಮೆ ಮಿತವಾದ ಶಕ್ತಿ ಹಂಚುವಿಕೆಯನ್ನು ಕಾಪಾಡುವ ಮೂಲಕ ಯುದ್ಧವನ್ನು ನಿರುತ್ತೇಜಿಸಿತು. ಒಂದು ಬಲಾಡ್ಯ ರಾಷ್ಟ್ರವು ನಿರ್ಬಲ ರಾಷ್ಟ್ರವನ್ನು ಬೆದರಿಸಿದರೆ, ಇನ್ನೊಂದು ಬಲಾಡ್ಯ ರಾಷ್ಟ್ರ ತಾತ್ಕಾಲಿಕವಾಗಿ ತನ್ನನ್ನು ನಿರ್ಬಲ ರಾಷ್ಟ್ರದೊಂದಿಗೆ ಜತೆಗೂಡಿಸಿಕೊಂಡು ಭಾವೀ ಆಕ್ರಮಣಗಾರನನ್ನು ನಿರುತ್ತೇಜಿಸುತಿತ್ತು. ಈ ಧೋರಣೆಯು ನೆಪೋಲಿಯನನ ಸಮರಗಳ ಅಂತ್ಯದಿಂದ ಹಿಡಿದು 1914ರಲ್ಲಿ ಪ್ರಾರಂಭವಾದ 1ನೇ ಲೋಕ ಯುದ್ಧದ ತನಕ ಯುರೋಪಿಯನ್‌ ಸಂಬಂಧಗಳನ್ನು ಮಾರ್ಗದರ್ಶಿಸಿತು.

ಆ ಯುದ್ಧದ ನಂತರ, ರಾಷ್ಟ್ರಗಳು ತಮ್ಮ ಮನಸ್ತಾಪಗಳ ಬಗ್ಗೆ ಸಂಘರ್ಷಿಸುವ ಬದಲಾಗಿ ಮಾತುಕತೆಯಿಂದ ಪರಿಹರಿಸಿಕೊಳ್ಳುವರೇ ಜನಾಂಗ ಸಂಘವನ್ನು ಒಂದು ನ್ಯಾಯಸಭಾ ರೂಪದಲ್ಲಿ ಸ್ಥಾಪಿಸಲಾಯಿತು. ಎರಡನೆಯ ಲೋಕ ಯುದ್ಧವು ಪ್ರಾರಂಭಿಸಿದಾಗ, ಜನಾಂಗ ಸಂಘದ ಕಾರ್ಯವೂ ನಿಂತು ಹೋಯಿತು. ಆದರೆ ಯುದ್ಧಾನಂತರ, ಅದೇ ಧ್ಯೇಯವು, ಈಗ ಅಸ್ತಿತ್ವದಲ್ಲಿರುವ ಸಂಯುಕ್ತ ರಾಷ್ಟ್ರ ಸಂಘದ ರೂಪದಲ್ಲಿ ಪುನರ್ಜೀವಿತ ಮಾಡಲ್ಪಟ್ಟಿತು.

ಆದರೂ ಈ ಎಲ್ಲಾ ಪ್ರಯತ್ನಗಳು ನೈಜ ಯಾ ಬಾಳುವ ಶಾಂತಿಯನ್ನು ತರಲು ವಿಫಲಗೊಂಡವು. ದೇವರ ಶಾಂತಿ ಚಳುವಳಿ ಯುರೋಪಿನಲ್ಲಿ ಅಸ್ತಿತ್ವದಲ್ಲಿದ್ದಾಗ ಯುರೋಪಿಯನರು, ರಕ್ತಮಯ ಧರ್ಮಯುದ್ಧಗಳಲ್ಲಿ ಮುಸ್ಲಿಮರ ವಿರುದ್ಧ ಹೋರಾಡಿದರು. ಮತ್ತು ಶಕ್ತಿಯ ಸಮತೆಯ ಮೂಲಕ ಯುರೋಪಿನಲ್ಲಿ ಶಾಂತಿಯನ್ನು ಕಾಪಾಡಲು ರಾಜನೀತಿಜ್ಞರು ಪ್ರಯತ್ನಿಸುತ್ತಿದ್ದಾಗ, ಯುರೋಪಿನ ಹೊರಗೆ ಅವರೇ ಸಮರಗಳನ್ನು ನಡಿಸುತ್ತಲೂ ಸಾಮ್ರಾಜ್ಯಗಳನ್ನು ಕಟ್ಟುತ್ತಲೂ ಇದ್ದರು. ಜನಾಂಗ ಸಂಘವು ಎರಡನೆಯ ಲೋಕಯುದ್ಧವನ್ನು ನಿಲ್ಲಿಸಲು ಶಕ್ತವಾಗಲಿಲ್ಲ, ಮತ್ತು ಸಂಯುಕ್ತ ರಾಷ್ಟ್ರ ಸಂಘವು ಸಹಾ ಕಂಪೂಚಿಯದ ಕಗ್ಗೊಲೆಯನ್ನಾಗಲಿ, ಕೊರಿಯ, ನೈಜೀರಿಯ, ವಿಯೆಟ್ನಾಮ್‌ ಮತ್ತು ಜೈರೆ ಮುಂತಾದ ಸ್ಥಳಗಳ ಹೋರಾಟಗಳನ್ನಾಗಲಿ ತಡೆಯಶಕ್ತವಾಗಲಿಲ್ಲ.

ಹೌದು, ಈ ತನಕವೂ ರಾಜನೀತಿಜ್ಞರ ಶಾಂತಿಕರ್ತತೆಯ ಅತ್ಯುತ್ತಮ ಪ್ರಯತ್ನಗಳು ವಿಫಲಗೊಂಡಿವೆ. ಬಾಳುವ ಶಾಂತಿಯನ್ನು ತರುವುದು ಹೇಗೆಂಬದನ್ನು ಅಧಿಪತಿಗಳು ತಿಳಿಯದೇ ಇದ್ದಾರೆ, ಅವರ ಸ್ವಂತ ಹಾಗೂ ಬೇರೆಯವರ ಮರ್ತ್ಯತೆ ಮತ್ತು ಮಾನುಷ ನಿರ್ಬಲತೆಗಳು ಅದನ್ನು ತಡೆಗಟ್ಟುತ್ತಲೇ ಇವೆ. ಒಂದುವೇಳೆ ವಿಷಯವು ಹಾಗಿರದಿದ್ದರೂ ಹೋಗಾದರೂ, ರಾಜಕೀಯಸ್ಥರು ಶಾಂತಿಯನ್ನು ತರಶಕ್ತಲಾರರು. ಯಾಕೆ ತರಲಾರರು? ನಿಜವಾಗಿಯೂ ದುರ್ದಮವಾದ ಇನ್ನೊಂದು ಅಡಿಯ್ಡು ಅಲ್ಲಿರುವ ಕಾರಣದಿಂದಲೇ.

ಶಾಂತಿ ತಡೆಗಟ್ಟುವ ಗುಪ್ತ ಶಕ್ತಿ

ಈ ತಡೆಗಟ್ಟಿನ ಕುರಿತು ಬೈಬಲು ಮಾತಾಡುವಾಗ ಅನ್ನುವುದು: “ಲೋಕವೆಲ್ಲವು ಕೆಡಕನ ಕೈಯಲ್ಲಿ ಬಿದದ್ದೆ.” (1 ಯೋಹಾನ 5:19) ಆ ಕೆಡುಕನು ನಮಗಿಂತಲೂ ಎಷ್ಟೋ ಹೆಚ್ಚು ಶಕ್ತಿಯುಕ್ತನಾದ ಅತಿಮಾನುಷ ಆತ್ಮಿಕ ಜೀವಿಯಾದ ಪಿಶಾಚನಾದ ಸೈತಾನನೇ. ಆರಂಭದಿಂದಲೇ ಸೈತಾನನು ದಂಗೆ, ಸುಳ್ಳು ಮತ್ತು ಕೊಲೆಪಾತದಲ್ಲಿ ಒಳಗೂಡಿದ್ದನು. (ಆದಿಕಾಂಡ 3:1-6; ಯೋಹಾನ 8:44) ಗುಪ್ತವಾಗಿದ್ದರೂ, ಲೋಕದ ಕಾರ್ಯಾಧಿಗಳ ಮೇಲೆ ಅವನಿಗಿರುವ ಪ್ರಬಲ ಪ್ರಭಾವವು ಇತರ ಪ್ರೇರಿತ ವಾಖ್ಯಾನಕಾರರಿಂದ ದೃಢೀಕರಿಸಲ್ಪಟ್ಟಿದೆ. ಪೌಲನು ಅವನನ್ನು “ಈ ಪ್ರಪಂಚದ ದೇವರು,” “ವಾಯುಮಂಡಲದ ಮೇಲೆ ಅಧಿಕಾರ ನಡಿಸುವ ಅಧಿಪತಿ” ಎಂದು ಕರೆದಿದ್ದಾನೆ. (2 ಕೊರಿಂಥ 4:4; ಎಫೆಸ 2:2) ಯೇಸು ಒಂದಕ್ಕಿಂತಲೂ ಹೆಚ್ಚು ಸಾರಿ ಅವನನ್ನು, “ಇಹಲೋಕಾಧಿಪತಿ” ಎಂದು ಕರೆದಿದ್ದಾನೆ.—ಯೋಹಾನ 12:31; 14:30; 16:11.

ಲೋಕವು ಸೈತಾನನ ಶಕ್ತಿಯ ಕೆಳಗೆ ಇದೆಯಾದರ್ದಿಂದ ಮಾನವ ರಾಜನೀತಿಜ್ಞರು ಬಾಳುವ ಶಾಂತಿಯನ್ನು ತರುವರೆಂಬದಕ್ಕೆ ಯಾವ ಸಂಭವನೀಯತೆಯೂ ಇಲ್ಲ. ಇದರ ಅರ್ಥವು ಶಾಂತಿ ಎಂದಿಗೂ ಬರಲಾರದು ಎಂದೋ? ಮಾನವ ಕುಲವನ್ನು ಶಾಂತಿಗೆ ನಡಿಸಲು ಯಾರಾದರೂ ಶಕ್ತನೊ? (w90 4/1)

[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಅಧಿಪತಿಯೊಬ್ಬನು ಎಷ್ಟೇ ಜ್ಞಾನಿಯೂ ನ್ಯಾಯಪರನೂ ಆಗಿದ್ದರೂ, ಕಟ್ಟಕಡೆಗೆ ಅವನು ಸಾಯುತ್ತಾನೆ ಮತ್ತು ಕಡಿಮೆ ದಕ್ಷರೂ ಕಡಿಮೆ ನೀತಿಪರರೂ ಆದವರು ಅವನ ಪದ ವಹಿಸುತ್ತಾರೆ.

[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಶಾಂತಿಗೆ ಇರುವ ಅತಿ ದೊಡ್ಡದಾದ ಏಕ ತಡೆಗಟ್ಟು ಪಿಶಾಚನಾದ ಸೈತಾನನೇ.

ಸಂಭವನೇಯತೆಗಳು ವಿನು?

[ಪುಟ 5 ರಲ್ಲಿರುವ ಚಿತ್ರ ಕೃಪೆ]

U.S. National Archives photo

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ