ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 8/1 ಪು. 32
  • ವಾರ್ತೆಗಳ ಒಳನೋಟ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾರ್ತೆಗಳ ಒಳನೋಟ
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಅತ್ಯಂತ ಅಪಾಯಕರ ದ್ರವ್ಯ”
  • ಕಳೆದ ಫೆಬ್ರವರಿಯಲ್ಲಿ ಜರ್ಮನಿಯ
  • ರಕ್ತಪೂರಣಗಳು—ಅವೆಷ್ಟು ಅಪಾಯರಹಿತ?
    ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು ಬ್ರೋಷರ್‌
  • ಜೀವದ ದಾನವೋ ಅಥವಾ ಸಾವಿನ ಚುಂಬನವೋ?
    ಎಚ್ಚರ!—1991
  • ರಕ್ತದಿಂದ ಜೀವವನ್ನು ರಕ್ಷಿಸುವುದು—ಹೇಗೆ?
    ಕಾವಲಿನಬುರುಜು—1992
  • ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಬ್ರೋಷರಿನ ಅಭ್ಯಾಸದ ಪ್ರಶ್ನೆಗಳು
    2001 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಕಾವಲಿನಬುರುಜು—1991
w91 8/1 ಪು. 32

ವಾರ್ತೆಗಳ ಒಳನೋಟ

“ಅತ್ಯಂತ ಅಪಾಯಕರ ದ್ರವ್ಯ”

ರಕ್ತಪೂರಣಗಳಿಂದಾಗಿ ಒಂದು ಮಾರಕ ರೋಗವನ್ನು ತಗಲಿಸಿಕೊಂಡ ರೋಗಿಗಳಿಂದ ಹೂಡಲ್ಪಟ್ಟ ಖಟೆಗ್ಲಳು, ಅನೇಕ ರಕ್ತಬ್ಯಾಂಕ್‌ಗಳಿಗೆ ಚಿಂತೆಯ ಒಂದು ಹೊಸ ಮಟ್ಟವನ್ನು ಮುಂತಂದಿವೆ. 1989ರ ಪೂರ್ವಾರ್ಧದೊಳಗೆ ಅಮೆರಿಕದಲ್ಲಿ ಸುಮಾರು 300ರಷ್ಟು ದಾವೆಗಳು ರಕ್ತಬ್ಯಾಂಕ್‌ಗಳ ವಿರುದ್ಧ ಹೂಡಲ್ಪಟ್ಟಿವೆ ಎಂದು ವರದಿಯಾಗಿದೆ. ಅಮೆರಿಕನ್‌ ಎಸೋಸಿಯೇಶನ್‌ ಆಫ್‌ ಬ್ಲಡ್‌ ಬ್ಯಾಂಕ್ಸ್‌ನ ಡೈರೆಕ್ಟರರಾದ ಗಿಲ್ಬರ್ಟ್‌ ಕಾರ್ಕ್ಲ್‌ ಅಂಗೀಕರಿಸಿದ್ದೇನೆಂದರೆ, “ಸಾರ್ವಜನಿಕರಿಗೆ ಸಂಪೂರ್ಣವಾಗಿ ಸುರಕ್ಷಿತವಾದ ರಕ್ತಬೇಕು” ಆದರೆ, ಅದಕ್ಕೆ ಖಾತ್ರಿಯನ್ನು ಕೊಡಸಾಧ್ಯವಿಲ್ಲ.

ತದ್ರೀತಿಯಲ್ಲಿ ಪರೇಡ್‌ ಮ್ಯಾಗ್‌ಜಿನ್‌ ವರದಿಸಿದ್ದೇನಂದರೆ ರಕ್ತವು, “ತಪ್ಪಿಸಲಾಗದ ರೀತಿಯಲ್ಲಿ ಅಸುರಕ್ಷಿತವೆಂಬದನ್ನು ಪರಿಗಣಿಸಲೇ ಬೇಕೆಂದು” ರಕ್ತತಜ್ಞ ಡಾ. ಚಾರ್ಲ್ಸ್‌ ಹಗ್ಗಿನ್ಸ್‌ ಒಪ್ಪುತ್ತಾರೆ. “ನಾವು ಚಿಕಿತ್ಸೆಯಲ್ಲಿ ಉಪಯೋಗಿಸುವ ಅತ್ಯಂತ ಅಪಾಯಕರ ದ್ರವ್ಯವು” ರಕ್ತವೆಂದು ಅವರು ವಿವರಿಸುತ್ತಾರೆ. 1989ರ ಆರಂಭದಿಂದ ರಕ್ತ ಬ್ಯಾಂಕುಗಳು ಸಹಜವಾಗಿ ಯಾವ ಸೋಂಕು ರೋಗಗಳಿಗಾಗಿ ಪರೀಕ್ಷಿಸುತ್ತವೋ ಅವುಗಳ ಸಂಖ್ಯೆಯು ಐದಕ್ಕೇರಿದೆ. (HTLV-1, ಪ್ರೌಢ ಟಿ-ಕಣದ ಲ್ಯುಕೇಮಿಯಕ್ಕೆ ಸಂಬಂಧಿಸಿದ್ದು, ಸಿಫಿಲಿಸ್‌, ಹೆಪಟೈಟಿಸ್‌ ಬಿ, ಏಡ್ಸ್‌, ಮತ್ತು ಹೆಪಟೈಟಿಸ್‌ ಸಿ) ಆದರೂ, ಅಮೆರಿಕನ್‌ ರೆಡ್‌ ಕ್ರಾಸ್‌ ಅಧಿಕಾರಿ ಎಸ್‌. ಜೆರಾಲ್ಡ್‌ ಸ್ಯಾಂಡ್ಲರ್‌ಗೆ ಅನುಸಾರವಾಗಿ, “ರಕ್ತ ಪೂರಣದಿಂದ ಹರಡಲ್ಪಡುವ ಇನ್ನೊಂದು ಅಸಾಮಾನ್ಯ ರೋಗವನ್ನು ನಾವು ಕಂಡುಹಿಡಿಯುವರೇ ಹೆಚ್ಚು ಸಮಯ ಬೇಕಾಗಿಲ್ಲವೆಂತ ಕಾಣುತ್ತದೆ.” ಅಂಥ ಮಾರಕ ಸಂಭಾವ್ಯತೆ ಇದ್ದರೂ, ಸುಮಾರು ನಾಲ್ಕು ಮಿಲ್ಯ ಉತ್ತರ ಅಮೆರಿಕಾನರು 1990ರಲ್ಲಿ ರಕ್ತಪೂರಣಗಳನ್ನು ಪಡೆಯಲಿದ್ದಾರೆಂದು ನಿರೀಕ್ಷಿಸಲಾಗಿದೆ. ವಾರ್ತಾಪತ್ರ ಅಂಕಣಗಾರ ಡಬ್ಲ್ಯೂ. ಗಿಲ್ಪರ್ಡ್‌-ಜೋನ್ಸ್‌ಗೆ ಅನುಸಾರ, “ಯೆಹೋವನ ಸಾಕ್ಷಿಗಳ ಹೊರತು ಹೆಚ್ಚಿನ ರೋಗಿಗಳು ರಕ್ತ ಪೂರಣದ ಸಂಭಾವ್ಯತೆಯನ್ನು ಎಂದೂ ಚರ್ಚಿಸುವುದಿಲ್ಲ.”

ದಶಮಾನಗಳಿಂದ ಯೆಹೋವನ ಸಾಕ್ಷಿಗಳು, ಅಪೋಸ್ತಲರ ಕೃತ್ಯ 15:28, 29; 21:25ರಲ್ಲಿ ದೇವರ ವಾಕ್ಯವು ಆಜ್ಞಾಪಿಸಿದ ಪ್ರಕಾರ ಯಾವುದೇ ರೂಪದಲ್ಲಿ ರಕ್ತವನ್ನು ವರ್ಜಿಸಿದ್ದಾರೆ.’ ರಕ್ತ ಪೂರಣಗಳಿಂದ ಹರಡುವ ಭೀಕರ ರೋಗಗಳಿಂದ ಇದು ಅವರಿಗೆ ನೀಡಿರುವ ಸುರಕ್ಷೆಯು, ಯೆಹೋವ ದೇವರ ನಿಯಮಕ್ಕೆ ಅವರ ವಿಧೇಯತೆಯ ಔಚಿತ್ಯವನ್ನು ಚೆನ್ನಾಗಿ ದೃಷ್ಟಾಂತಿಸುತ್ತದೆ.

ಕಳೆದ ಫೆಬ್ರವರಿಯಲ್ಲಿ ಜರ್ಮನಿಯ

ಕೊಲೊನ್‌ನ ಹೊಸ ಆರ್ಚ್‌ಬಿಶಪಂಗಿ ನೇಮಕ ಹೊಂದಿದಾಗ ಒಬ್ಬ ವಾದಾಸ್ಪದ ವ್ಯಕ್ತಿಯಾಗಿದ್ದ ಜೊವಾಕಿಮ್‌ ಕಾರ್ಡಿನಲ್‌ ಮೈಸ್ನರ್‌ ಇತ್ತೀಚೆಗೆ ಹೇಳಿದ್ದೇನಂದರೆ, ಒಂದಾನೊಂದು ದಿನ ಚರ್ಚು “ಒಂದುವೇಳೆ ಸಮಾಜದಿಂದ ಗಮನಿಸಲ್ಪಡದೇ—ಮಾಯವಾಗಿ ಹೋಗಬಹುದು.” ಜರ್ಮನ್‌ ವಾರ್ತಾಪತ್ರ ರೈನಿಚ್‌ ಪೋಸ್ಟ್‌ ಅನುಸಾರವಾಗಿ, ಮೈಸ್ನರ್‌ ಹೇಳಿದ್ದು: “ಸಮಾಜವು ಚರ್ಚನ್ನು ನಿಕೃಷ್ಟವಾಗಿ ವೀಕ್ಷಿಸಲು ತೊಡಗಿರುವುದನ್ನು ಕಂಡು ನನ್ನಾತ್ಮವು ಕುಗ್ಗಿಹೋಗಿದೆ.” ಇದಕ್ಕೊಂದು ಸಂಭಾವ್ಯ ಕಾರಣವು ಯಾವದೆಂದರೆ “ನಾವು ಸ್ವರ್ಗದ ಕುರಿತು ಸಾಕಷ್ಟು ಮಾತಾಡದೆ ಭೂಮಿಯ ಕುರಿತಾಗಿ ಅತಿರೇಕ ಮಾತಾಡುವುದೇ; ನಮ್ಮ ಮಾತುಗಳು ಪ್ರಚಲಿತ ವಿಷಯಗಳ ಕುರಿತು ತೀರಾ ಹೆಚ್ಚು, ಶಾಶ್ವತತೆಯ ಕುರಿತು ತೀರಾ ಕಡಿಮೆ.”

ಲೋಕದ ಸಮಸ್ಯೆಗಳನ್ನು ಪರಿಹರಿಸಲು ಸ್ವರ್ಗೀಯ ಶಕ್ತಿಯಲ್ಲಿ ಭರವಸವಿಡುವ ಬದಲಾಗಿ ಭೂಮಿಯ ರಾಜಕೀಯ ಮತ್ತು ವ್ಯಾಪಾರಿ ಘಟಕಗಳ ಮೈತ್ರಿಯನ್ನು ಮಾಡಿಕೊಂಡ ಮೂಲಕ ಕ್ರೈಸ್ತ ಪ್ರಪಂಚದ ಚರ್ಚುಗಳು ದೇವರ ಅಭಿರುಚಿಗಳ ಪ್ರತಿನಿಧಿಗಳು ತಾವೆಂಬ ವಾದವನ್ನು ಸುಳ್ಳುಮಾಡಿವೆ. ಇದು ಗಂಭೀರವಾದ ಫಲಿತಾಂಶಗಳನ್ನು ತರಲಿವೆ. ಬೈಬಲಿಗೆ ಅನುಸಾರವಾಗಿ, ಎಲ್ಲಾ ಸುಳ್ಳು ಧರ್ಮಗಳು ಬೇಗನೇ ಮಾಯವಾಗಲಿವೆ—ಈ ವಿಕಸನದ ಫಲಿತಾಂಶವಾಗಿ ಅತ್ತು ಗೋಳಾಡುವ “ಭೂರಾಜರುಗಳಿಂದ” ಮತ್ತು “ಭೂಲೋಕದ ವರ್ತಕರಿಂದ,” ಈ ಘಟನೆಯು ಗಮನಿಸಲ್ಪಡದೆ ಹೋಗಲಾರದು. ಆದ್ದರಿಂದ ನೀತಿಪ್ರಿಯರು ಈ ಮಾತುಗಳನ್ನು ಕೇಳುವ ಅಗತ್ಯವಿದೆ: “ಅವಳನ್ನು [ಸುಳ್ಳು ಧರ್ಮವನ್ನು] ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು.”—ಪ್ರಕಟನೆ 18:4, 9, 11. (w90 7/15)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ