ಸುಸ್ವಾಗತ “ಸ್ವಾತಂತ್ರ್ಯ ಪ್ರಿಯರು” ಜಿಲ್ಲಾ ಅಧಿವೇಶನಗಳಿಗೆ!
ಸ್ವಾತಂತ್ರ್ಯ! ಆ ಶಬ್ದಕ್ಕೆ ಎಂಥಾ ಸುಶ್ರಾವ್ಯ ಧ್ವನಿ ಇದೆ! ಯಾರೊಬ್ಬನೂ ಬಂಧನದಲ್ಲಿರಲು ಯಾ ಗುಲಾಮಗಿರಿಯ ನಿರ್ಬಂಧದಲ್ಲಿರಲು ಸಂತೋಷಿಸುವದಿಲ್ಲ. ಜ್ಞಾಪಕದಲ್ಲಿರಬಹುದಾದ ಬೇರೆ ಯಾವುದೇ ಸಮಯಕ್ಕಿಂತಲೂ ಹೆಚ್ಚಾಗಿ, ನಿರೀಕ್ಷಿಸಿದ ರಾಜಕೀಯ ಸ್ವಾತಂತ್ರ್ಯದ ಕಡೆಗಿನ ಚಳುವಳಿಗಳನ್ನು ಇತ್ತೀಚೆಗಿನ ವರ್ಷಗಳಲ್ಲಿ ಕಂಡಿವೆ.
ಆದಾಗ್ಯೂ, ರಾಜಕೀಯ ಸ್ವಾತಂತ್ರ್ಯವನ್ನು ಅಪೇಕ್ಷಿಸುವಂತೆಯೇ, ಇನ್ನೊಂದು ಹೆಚ್ಚು ಪ್ರಾಮುಖ್ಯವಾದ ಮತ್ತು ಅಪೇಕ್ಷಿಸುವಂಥ ಒಂದು ಸ್ವಾತಂತ್ರ್ಯವು ಇದೆ. ಅವನು ತನ್ನ ಶಿಷ್ಯರಿಗೆ ಮಾತಾಡುವಾಗ, ದೇವರ ಮಗನಾಗಿದ್ದ ಯೇಸು ಕ್ರಿಸ್ತನು ತಿಳಿಸಿದ ಸ್ವಾತಂತ್ರ್ಯವು ಅದಾಗಿತ್ತು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ, ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ. ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು.” (ಯೋಹಾನ 8:31, 32) ಇದು ಸುಳ್ಳು ಧಾರ್ಮಿಕ ನಂಬಿಕೆಗಳಿಂದ ಸ್ವಾತಂತ್ರ್ಯ, ಪಾಪಭರಿತ ಚಟಗಳ ಗುಲಾಮರಾಗಿರುವದರಿಂದ ಸ್ವಾತಂತ್ರ್ಯ, ಮತ್ತು ಅದಕ್ಕಿಂತಲೂ ಹೆಚ್ಚಿನದ್ದು ಆಗಿರುತ್ತದೆ.
1991ರ ಕೊನೆಯ ಅರ್ಧಭಾಗದಿಂದ ಲೋಕವೆಲ್ಲೆಡೆಗಳಲ್ಲಿ ಯೆಹೋವನ ಸಾಕ್ಷಿಗಳಿಂದ ನಡೆಸಲ್ಪಡುವ “ಸ್ವಾತಂತ್ರ್ಯ ಪ್ರಿಯರು” ಜಿಲ್ಲಾ ಅಧಿವೇಶನಗಳ ಮುಖ್ಯ ವಿಷಯವಾಗಿದ್ದು, ಆ ಸ್ವಾತಂತ್ರ್ಯದ ಕುರಿತಾಗಿ ಇರುತ್ತದೆ. ಅವರಲ್ಲಿ ಮುಂದಾಳುತನ ವಹಿಸುತ್ತಿದ್ದವರನ್ನು ಸರಕಾರೀ ನಿರ್ಬಂಧಗಳಿಂದ ಬಿಡುಗಡೆ ಮಾಡಿದ ಆ ಗುರುತಿಸಲ್ಪಟ್ಟ 1919ರ ವರ್ಷದಿಂದ, ಅವರ ಶುದ್ಧಾರಾಧನೆಯ ವಿಷಯದಲ್ಲಿ ದೇವರ ಜನರು ವೃದ್ಧಿಗೊಳ್ಳುತ್ತಿರುವ ಸ್ವಾತಂತ್ರ್ಯದಲ್ಲಿ ಆನಂದಿಸುತ್ತಾ ಇದ್ದಾರೆ.
“ಸ್ವತಂತ್ರ ಜನಾಂಗದ ದೇವಪ್ರಭುತ್ವ ಸಮ್ಮೇಳನ” ಮತ್ತು “ದೇವರ ಸ್ವತಂತ್ರ ಪುತ್ರರ ಜಿಲ್ಲಾ ಸಮ್ಮೇಳನಗಳು“ ಎಂಬಂಥ ಮುಖ್ಯ ವಿಷಯಗಳಿಂದ, ಗತಿಸಿದ ವರ್ಷಗಳಲ್ಲಿ ಸ್ವಾತಂತ್ರ್ಯದ ವಿಷಯಕ್ಕೆ ಹೆಚ್ಚು ಪ್ರಕಾಶವನ್ನು ಬೀರಿರುವದು ಅತಿ ತಕ್ಕದ್ದಾಗಿದೆ. “ಟ್ರುಥ್ ಷಲ್ ಮೇಕ್ ಯು ಫ್ರೀ” ಮತ್ತು ಲೈಫ್ ಎವರ್ಲಾಸ್ಟಿಂಗ್—ಇನ್ ಫ್ರೀಡಮ್ ಆಫ್ ದ ಸನ್ಸ್ ಆಫ್ ಗಾಡ್” ಎಂಬಂಥ ಪ್ರಕಾಶನಗಳು ಸ್ವಾತಂತ್ರ್ಯದ ಕುರಿತು ವಿಸ್ತಾರವಾಗಿ ಚರ್ಚಿಸಿವೆ.
ಯೆಹೋವನ ಸೇವಕರಿಗೆ ಇರುವ ದೇವ-ದತ್ತ ಸ್ವಾತಂತ್ರ್ಯವು ಕೇವಲ ಅವರ ಸ್ವಂತ ಶ್ರೇಯಸ್ಸಿಗಾಗಿ ಮತ್ತು ಆನಂದಕ್ಕಾಗಿ ಇರುವದಿಲ್ಲ. ನಾವು ಗಲಾತ್ಯ 5:13 ನಾವು ಓದುವದು: “ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ದೇವರು ನಿಮ್ಮನ್ನು ಕರೆದನು. ಆದರೆ ನಿಮಗಿರುವ ಸ್ವಾತಂತ್ರ್ಯವನ್ನು ಶರೀರಾಧೀನಸ್ವಭಾವಕ್ಕೆ ಆಸ್ಪದವಾಗಿ ಬಳಸದೆ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.” “ಸ್ವಾತಂತ್ರ್ಯ ಪ್ರಿಯರು” ಜಿಲ್ಲಾ ಅಧಿವೇಶನವು ನಮ್ಮ ಸ್ವಾತಂತ್ರ್ಯದ ಉದ್ದೇಶವನ್ನು ಗಣ್ಯಮಾಡುವಂತೆ, ನಮ್ಮ ಅಮೂಲ್ಯವಾದ ಸ್ವಾತಂತ್ರ್ಯವನ್ನು ನಾವು ಕಾಪಾಡಿಕೊಳ್ಳಲು ಶಕ್ತರಾಗುವಂತೆ, ಮತ್ತು ಅದನ್ನು ನಾವು ಅತ್ಯುತ್ತಮವಾಗಿ ಹೇಗೆ ಉಪಯೋಗಿಸಬಹುದು ಎಂದು ನಮಗೆ ತೋರಿಸಲು ಸಹಾಯಮಾಡುವದು.
ಅಧಿವೇಶನವು ಶುಕ್ರವಾರ ಬೆಳಿಗ್ಯೆ 10:20ಕ್ಕೆ ಒಂದು ಸಂಗೀತದೊಂದಿಗೆ ಆರಂಭಗೊಳ್ಳುವದು, ಇದು ಹಿಂಬಾಲಿಸಿ ಬರುವ ಆತ್ಮಿಕ ಆಹಾರಕ್ಕಾಗಿ ಯೋಗ್ಯ ಮನೋ-ಚೌಕಟ್ಟಿನಲ್ಲಿ ನಮ್ಮನ್ನು ಇಡುವಂತೆ ನೆರವಾಗುವದು. ಮೊದಲನೆಯ ದಿನದ ಮುಖ್ಯ ವಿಷಯವು, “ನಮ್ಮ ಬಿಡುಗಡೆಯನ್ನುಂಟುಮಾಡುವ ಸತ್ಯವನ್ನು ತಿಳಿಯುವದು” ಯೋಹಾನ 8:32ರ ಮೇಲೆ ಆಧರಿಸಿದೆ. ಪೂರ್ವಾಹ್ನದಲ್ಲಿ ಅಧ್ಯಕ್ಷರ ಸುಸ್ವಾಗತಿಸುವ ಹೇಳಿಕೆಗಳು ಮತ್ತು “ದೇವ-ದತ್ತ ನಮ್ಮ ಸ್ವಾತಂತ್ರ್ಯದ ಉದ್ದೇಶ ಮತ್ತು ಉಪಯೋಗ” ಎಂಬ ಪ್ರಮುಖ ಭಾಷಣ ಇರುತ್ತವೆ. ಈ ಭಾಷಣವು ಯೆಹೋವನ ಪರಮ ಶ್ರೇಷ್ಠ ಸ್ವಾತಂತ್ರ್ಯ ಮತ್ತು ದೇವರು ನಮಗೆ ನೀಡುವ ಸಂಬಂಧಿತ ಸ್ವಾತಂತ್ರ್ಯದ ನಡುವಿನ ಭಿನ್ನತೆಯನ್ನು ಎತ್ತಿ ತೋರಿಸುತ್ತದೆ. ನಮಗಿರುವ ಸ್ವಾತಂತ್ರ್ಯದ ಸಾಧ್ಯವಿರುವಷ್ಟು ಅತ್ಯುತ್ತಮ ಉಪಯೋಗವನ್ನು ಮಾಡುವಂತೆ ಅದು ನಮ್ಮನ್ನು ಉತ್ತೇಜಿಸುತ್ತದೆ. ಅಪರಾಹ್ನದ ಕಾರ್ಯಕ್ರಮವು ನಮ್ಮ ಸ್ವಾತಂತ್ರ್ಯದ ಮತ್ತು ನಮ್ಮ ಶುಶ್ರೂಷೆಯ ವಿವಿಧ ರೂಪಗಳ ಕುರಿತು ವ್ಯವಹರಿಸುತ್ತಾ, ಸತ್ಯಾರಾಧನೆಯನ್ನು ಪ್ರವರ್ಧಿಸಲು ಬಿಡುಗಡೆಗೊಳಿಸಲ್ಪಟ್ಟಿದ್ದೇವೆ ಎಂಬ ನಾಟಕದೊಂದಿಗೆ ಮುಕ್ತಾಯಗೊಳ್ಳಲಿರುವದು.
ಎರಡನೆಯ ದಿನದ ಮುಖ್ಯ ವಿಷಯವು “ನಮ್ಮ ದೇವ-ದತ್ತ ಸ್ವಾತಂತ್ರ್ಯದಲ್ಲಿ ಸ್ಥಿರರಾಗಿ ನಿಲ್ಲುವದು,” ಇದು ಗಲಾತ್ಯ 5:1 ಮೇಲೆ ಆಧರಿತವಾಗಿದೆ. ಕುಟುಂಬ ವೃತ್ತದೊಳಗೆ ದೇವ-ದತ್ತ ಸ್ವಾತಂತ್ರ್ಯದಲ್ಲಿ ಕುಟುಂಬದ ವೈಯಕ್ತಿಕ ಸದಸ್ಯರು ಆನಂದಿಸಲು ಹೇಗೆ ಸಾಧ್ಯ ಎಂದು ತೋರಿಸುವ ಭಾಷಣಗೋಷ್ಠಿಗಳು ಬೆಳಿಗ್ಗೆಯ ಕಾರ್ಯಕ್ರಮದಲ್ಲಿ ಇರುವವು. ಸಮರ್ಪಣೆ ಮತ್ತು ದೀಕ್ಷಾಸ್ನಾನದ ಮೂಲಕ ಸ್ವಾತಂತ್ರ್ಯವನ್ನು ಸಂಪಾದಿಸಿದ ವಿಧದ ಕುರಿತಾಗಿರುವ ಹೇಳಿಕೆಗಳನ್ನು, ವಿಶೇಷವಾಗಿ ದೀಕ್ಷಾಸ್ನಾನವಾಗಲು ಸಿದ್ಧರಾಗಿರುವವರು ಗಣ್ಯಮಾಡುವರು. ಮದುವೆಯು ಸಂತೋಷದ ಕೀಲಿಕೈಯೋ, ಅಲ್ಲವೋ ಎಂಬ ಕುತೂಹಲ ಕೆರಳಿಸುವ ಚರ್ಚೆಯು ಅಪರಾಹ್ನದ ಕಾರ್ಯಕ್ರಮದಲ್ಲಿ ಒಳಗೂಡಿರುತ್ತದೆ. ಸ್ವಾತಂತ್ರ್ಯದ ವಿವಿಧ ರೂಪಗಳ ಮೇಲೆ ಅಲ್ಲಿ ಒಂದು ಭಾಷಣ ಗೋಷ್ಠಿ ಇದೆ ಮತ್ತು ಅನಂತರ ಸ್ವಾತಂತ್ರ್ಯವನ್ನು ಮತ್ತು ನಿತ್ಯ ಜೀವವನ್ನು ಒದಗಿಸಲು ದೇವರ ಮುಖ್ಯ ಕಾರ್ಯಭಾರಿಯ ಮೇಲೆ ಕೇಂದ್ರಿತವಾಗಿರುವ ಸಮಾಪ್ತಿಯ ಭಾಷಣವಿರುವದು.
ಭಾನುವಾರದ ಮುಖ್ಯ ವಿಷಯ “ದೇವರ ಆತ್ಮದ ಸಹಮತದೊಂದಿಗೆ ನಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸುವದು,” ಎಂಬದು 2 ಕೊರಿಂಥ 3:17ರ ಮೇಲೆ ಆಧರಿತವಾಗಿದೆ. ಮತ್ತಾಯ 13:47-50ರಲ್ಲಿ ದಾಖಲಿಸಲ್ಪಟ್ಟ ಯೇಸುವಿನ ಸಾಮ್ಯದ ಮೇಲೆ ಆಧರಿತವಾದ ಒಂದು ಅತಿ ಆಸಕ್ತಿಯ ಭಾಷಣ ಗೋಷ್ಠಿಯು ಕಾರ್ಯಕ್ರಮದಲ್ಲಿರುವದು, ಯೆಹೋವನ ಸಾಕ್ಷಿಗಳು ಮನುಷ್ಯರನ್ನು ಹಿಡಿಯುವ ಬೆಸ್ತರಾಗಿರುವದು ಹೇಗೆ ಎಂದು ಪ್ರಕಟಿಸಲಿದೆ. ಮಧ್ಯಾಹ್ನದ ಬಹಿರಂಗ ಭಾಷಣವು “ದೇವರ ಸ್ವಾತಂತ್ರ್ಯದ ನೂತನ ಲೋಕಕ್ಕೆ ಜಯಕಾರ ಮಾಡುವದು!” ಅದರ ನಂತರ, ಜಿಲ್ಲಾ ಅಧಿವೇಶನಕ್ಕೆ ಒಂದು ಹೊಸ ಲಕ್ಷಣದಿಂದ ಹಿಂಬಾಲಿಸುವದು: ಆ ವಾರದ ಕಾವಲಿನಬುರುಜು (ವಾಚ್ಟವರ್) ಪಾಠದ ಸಾರಾಂಶ. ನಮ್ಮ ನಡತೆಯಲ್ಲಿ ಮತ್ತು ನಮ್ಮ ಸಾಕ್ಷಿ ನೀಡುವಿಕೆಯಲ್ಲಿ ದೇವ-ದತ್ತ ನಮ್ಮ ಸ್ವಾತಂತ್ರ್ಯದ ಸದುಪಯೋಗ ಮಾಡುವದರಲ್ಲಿ ಪ್ರಗತಿ ಮಾಡುತ್ತಾ ಇರುವಂತೆ ಒಂದು ಶಾಸ್ತ್ರೀಯ ಹೃತ್ಪೂರ್ವಕ ಬುದ್ಧಿವಾದದೊಂದಿಗೆ ಕಾರ್ಯಕ್ರಮವು ಅಂತ್ಯಗೊಳ್ಳುವದು.
ಸ್ವಾತಂತ್ರ್ಯ ಪ್ರಿಯರೆಲ್ಲರಿಗೆ ಕೀರ್ತನೆಗಾರ ದಾವೀದನ ಮಾತುಗಳಲ್ಲಿ ನಾವು ಹೇಳುವದು: “ಯೆಹೋವನು ಸರ್ವೂತ್ತಮನೆಂದು ಅನುಭವ [ರುಚಿ, NW] ಸವಿದು ನೋಡಿರಿ.” (ಕೀರ್ತನೆ 34:8) ಈ ಅಧಿವೇಶನಕ್ಕೆ ಹಾಜರಾಗಲು ಮಾಡಬೇಕಾದ ಯಾವುದೇ ಪ್ರಯತ್ನವನ್ನು ತಪ್ಪದೇ ಮಾಡಿರಿ. ಶುಕ್ರವಾರ ಬೆಳಿಗ್ಗೆ ಆರಂಭದ ಕಾರ್ಯಕ್ರಮದಿಂದ ಹಿಡಿದು, ಭಾನುವಾರ ಅಪರಾಹ್ನದ ಕೊನೆಯ ಭಾಷಣದ ತನಕ ಹಾಜರಿರುವದನ್ನು ನಿಮ್ಮ ಕರ್ತವ್ಯವನ್ನಾಗಿ ಮಾಡಿರಿ. ಒಂದು ಸ್ವಸ್ಥವಾದ ಆತ್ಮಿಕ ಹಸಿವಿನಿಂದ, ನಿಮ್ಮ ಆತ್ಮಿಕ ಅಗತ್ಯತೆಗಳ ಪೂರ್ಣ ಪ್ರಜ್ಞೆಯುಳ್ಳವರಾಗಿ ನೀವು ಬರುವದಾದರೆ, ನೀವು ಖಂಡಿತವಾಗಿ ಆನಂದಿತರಾಗುವಿರಿ! (ಮತ್ತಾಯ 5:3) ಮತ್ತು ನಾವು ಈ ಸೂತ್ರವನ್ನು ಕಡೆಗೆಣಿಸದೆ ಇರೋಣ, “ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು.” ಹಾಜರಾಗಲು ಮುಂದಾಗಿಯೇ ನಾವು ಎಷ್ಟು ಆತುರತೆಯಿಂದ ತಯಾರಿಸುತ್ತೇವೆ, ಕಾರ್ಯಕ್ರಮವು ಸಾದರಪಡಿಸಲ್ಪಡುವಾಗ ಎಷ್ಟು ಶೃದ್ಧೆಯಿಂದ ನಾವು ಕೇಳುತ್ತೇವೆ, ಮತ್ತು ನಮ್ಮ “ಸ್ವಾತಂತ್ರ್ಯ ಪ್ರಿಯರು” ಜಿಲ್ಲಾ ಅಧಿವೇಶನದ ಸಂಬಂಧದಲ್ಲಿ ನಮಗೆ ಯಾವುದೇ ಸ್ವಯಂ-ಸೇವೆಯ ಸುಯೋಗವು ದೊರೆತಾಗ, ಅದನ್ನು ನಾವು ಎಷ್ಟು ಉಮೇದಿನಿಂದ ಮಾಡುತ್ತೇವೆ ಎಂಬ ಈ ಎಲ್ಲಾ ವಿಷಯಗಳಿಗೂ ಇದು ಅನ್ವಯಿಸುತ್ತದೆ.—2 ಕೊರಿಂಥ 9:6. (w91 5/1)