ನಂಬಿಕೆಯನ್ನು ಬಲಗೊಳಿಸುವ ರೋಮಾಂಚಕಾರಿ ದರ್ಶನಗಳು
ಪ್ರಕಟನೆಯಿಂದ ಅತ್ಯುಜಲ್ವ ಭಾಗಗಳು
ಯೆಹೋವನ ಸೇವಕ, ಯೋಹಾನನು ಏಶ್ಯಾ ಮೈನರಿನ ಪಶ್ಚಿಮ ಕರಾವಳಿಯಿಂದ ದೂರದ ಪತ್ಮೋಸ್ ಎಂಬ ಚಿಕ್ಕ ದ್ವೀಪವೊಂದರಲ್ಲಿ ಇದ್ದನು. ಅಲ್ಲಿ ವಯೋವೃದ್ಧ ಅಪೊಸ್ತಲನು ಅದ್ಭುತಕರವಾದ ಸಂಗತಿಗಳನ್ನು ನೋಡುತ್ತಾನೆ—ಸಾಂಕೇತಿಕ, ಕೆಲವೊಮ್ಮೆ ಬೆರಗುಗೊಳಿಸುತ್ತದೆ, ಮತ್ತು ಖಂಡಿತವಾಗಿಯೂ ಅರ್ಥಗರ್ಭಿತವಾಗಿದೆ! ಅವನು ಕರ್ತನ ದಿನದಲ್ಲಿ ಆಗಮಿಸುತ್ತಾನೆ, ಅದು 1914ರಲ್ಲಿ ಯೇಸುವು ಸಿಂಹಾಸನವನ್ನೇರಿದಂದಿನಿಂದ ಹಿಡಿದು ಅವನ ಸಾವಿರ ವರ್ಷದ ಆಳಿಕ್ವೆಯ ಅಂತ್ಯದ ತನಕ ಮುಂದುವರಿಯುತ್ತದೆ. ಮಾನವ ಕುಲದ ಅತಿ ಅಂಧಕಾರದ ಕಾಲದಲ್ಲಿ ಯೋಹಾನನು ನೋಡಿದ ಘಟನೆಗಳು ನಡೆಯಲಿರುವದಾದರೂ, ಕ್ರಿಸ್ತನ ಸಾವಿರ ವರ್ಷದ ಆಳಿಕ್ವೆಯ ಮುನ್ನೋಟವು ಎಷ್ಟೊಂದು ಉಜ್ವಲಮಯವಾಗಿದೆ! ಆಗ ವಿಧೇಯ ಮಾನವಕುಲವು ಎಂಥಾ ಆಶೀರ್ವಾದಗಳಲ್ಲಿ ಆನಂದಿಸಲಿರುವದು!
ಯೋಹಾನನು ಈ ದರ್ಶನಗಳನ್ನು ಬೈಬಲಿನ ಪ್ರಕಟನೆ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಸಾ.ಶ. 96ರಲ್ಲಿ ಬರೆಯಲ್ಪಟ್ಟದ್ದಾಗಿದೆ, ಅದು ಪ್ರವಾದನೆಗಳ ದೇವರಾದ ಯೆಹೋವನ ಮೇಲೆ ಮತ್ತು ಆತನ ಪುತ್ರನಾದ ಯೇಸು ಕ್ರಿಸ್ತನ ಮೇಲೆ ನಮ್ಮ ನಂಬಿಕೆಯನ್ನು ಬಲಗೊಳಿಸಶಕ್ತವಾಗಿದೆ.—ವಿವರಣೆಗೆ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿ ಆಫ್ ನ್ಯೂ ಯೋರ್ಕ್, Inc. ಇವರಿಂದ ಪ್ರಕಾಶಿತವಾದ ರೆವಲೇಶನ್—ಇಟ್ಸ್ ಗ್ರ್ಯಾಂಡ್ ಕ್ಲೈಮಾಕ್ಷ್ ಎಟ್ ಹ್ಯಾಂಡ್ ಪುಸ್ತಕವನ್ನು ನೋಡಿರಿ.
ಕ್ರಿಸ್ತನು ಪ್ರೀತಿಯ ಬುದ್ಧಿವಾದವನ್ನು ಕೊಡುತ್ತಾನೆ
ಕ್ರಿಸ್ತನ ಮೂಲಕ ದೇವರಿಂದ ಬರುವ ಪ್ರಕಟನೆಯ ಆರಂಭದಲ್ಲಿ ಯೇಸುವಿನ ಸಹ ರಾಜ್ಯಬಾಧ್ಯಸ್ಥರ ಏಳು ಸಭೆಗಳಿಗೆ ಪತ್ರಗಳು ತೋರುತ್ತವೆ. (1:1–3:22) ಸಮಗ್ರವಾಗಿ ಪತ್ರಗಳು, ಮೆಚ್ಚಿಕೆಯನ್ನು ನೀಡುತ್ತವೆ, ಸಮಸ್ಯೆಗಳನ್ನು ಗುರುತಿಸುತ್ತವೆ, ತಿದ್ದುವಿಕೆ ಮತ್ತು ⁄ ಯಾ ಪ್ರೋತ್ಸಾಹವನ್ನು ಒದಗಿಸುತ್ತವೆ, ಮತ್ತು ನಂಬಿಕೆಯ ವಿಧೇಯತೆಯ ಫಲವಾಗಿ ಬರುವ ಆಶೀರ್ವಾದಗಳನ್ನು ತಿಳಿಸುತ್ತವೆ. ಎಫೆಸ್ಯದವರು ತಾಳಿಕೊಂಡಿದ್ದರೂ, ಅವರಲ್ಲಿದ್ದ ಮುಂಚಿನ ಪ್ರೀತಿಯು ಈಗ ಬಿಟ್ಟಿರುತ್ತಾರೆ. ಆತ್ಮಿಕವಾಗಿ ಸಮೃದ್ಧವಾಗಿದ್ದ ಸ್ಮುರ್ನ ಸಭೆಯು ಸಂಕಟದ ನಡುವೆ ನಂಬಿಕೆಯಲ್ಲಿ ನಿಲ್ಲಲು ಪ್ರೋತ್ಸಾಹಿಸಲ್ಪಟ್ಟಿದೆ. ಪೆರ್ಗಮದ ಸಭೆಯಲ್ಲಿ ಹಿಂಸೆಯು ಜಯಪ್ರದವಾಗಲಿಲ್ಲ, ಆದರೆ ಅದು ಗುಂಪುಪಂಗಡಗಳನ್ನು ಸಹಿಸಿಕೊಂಡಿದೆ. ಥುವಥೈರದಲ್ಲಿ ಕ್ರೈಸ್ತರ ಕಾರ್ಯಚಟುವಟಿಕೆಯು ಅಭಿವೃದ್ಧಿಗೊಂಡಿರುವದಾದರೂ, ಯೆಜೆಬೇಲಳ ಪ್ರಭಾವವು ಅಲ್ಲಿ ಅಸ್ತಿತ್ವದಲ್ಲಿದೆ. ಸಾರ್ದಿಸ್ನ ಸಭೆಯು ಆತ್ಮಿಕವಾಗಿ ಎಚ್ಚರಗೊಳ್ಳುವ ಅಗತ್ಯವಿದೆ, ಫಿಲದೆಲ್ಫಿಯದಲ್ಲಿರುವಂಥಾದ್ದು ಅದರಲ್ಲಿರುವದನ್ನು ಕಾಪಾಡಿಕೊಂಡಿರುವದಕ್ಕೆ ಮತ್ತು ಉಗುರುಬೆಚ್ಚಗೆನ ಲವೊದಿಕೀಯಕ್ಕೆ ಆತ್ಮಿಕ ವಾಸಿಪಡಿಸುವಿಕೆಯು ಬೇಕಾಗಿದೆ.
ಭಾವೀ ಸ್ವರ್ಗೀಯ ರಾಜರುಗಳಿಗೆ— ವಾಸ್ತವದಲ್ಲಿ ಎಲ್ಲಾ ಕ್ರೈಸ್ತರಿಗೆ ತರಬೇತಿಗಾಗಿ ಎಂಥ ಉತ್ತಮ ಮಾತುಗಳು! ಉದಾಹರಣೆಗೆ, ನಮ್ಮಲ್ಲಿ ಯಾರಾದರೂ ಉಗುರುಬೆಚ್ಚಗೆನವರು ಆಗಿದ್ದೇವೋ? ಹಾಗಿದ್ದರೆ ಈಗಲೇ ಕ್ರಿಯೆಗೈಯಿರಿ! ಉಷ್ಣತಾಪದ ದಿನದಲ್ಲಿ ಒಂದು ತಣ್ಣಗಿನ ಚೆಂಬು ನೀರಿನಂತೆ ಉಲ್ಲಸಿತರಾಗಿರಿ, ಆದರೆ ಯೆಹೋವನಿಗಾಗಿ ಮತ್ತು ಅವನ ಸೇವೆಗಾಗಿ ಬಿಸಿ ಉತ್ಸಾಹವನ್ನು ಪ್ರದರ್ಶಿಸಲು ಕೂಡ ಆರಂಭಿಸಿರಿ.—ಮತ್ತಾಯ 11:28, 29ನ್ನು ಹೋಲಿಸಿರಿ; ಯೋಹಾನ 2:17.
ಕುರಿಮರಿಯು ಸುರುಳಿಯನ್ನು ಒಡೆಯುತ್ತಾನೆ
ವೈಭವದ ಅವನ ಸಿಂಹಾಸನದಲ್ಲಿ ನಂತರ ಯೆಹೋವನನ್ನು ನಾವು ಕಾಣುತ್ತೇವೆ. (4:1–5:14) ಅವನು 24 ಹಿರಿಯರುಗಳಿಂದ ಮತ್ತು ನಾಲ್ಕು ಜೀವಿಗಳಿಂದ ಸುತ್ತುವರಿಯಲ್ಪಟ್ಟಿದ್ದಾನೆ. ಅವನ ಕೈಯಲ್ಲಿ ಏಳು ಮುದ್ರೆಗಳಿರುವ ಒಂದು ಸುರುಳಿಯಿತ್ತು. ಈ ಸುರುಳಿಯನ್ನು ಯಾರು ಒಡೆಯುವನು? ಯಾಕೆ, ಕುರಿಮರಿಯಾದ ಯೇಸು ಕ್ರಿಸ್ತನು ಅದನ್ನು ಮಾಡಲು ಯೋಗ್ಯನಾಗಿರುತ್ತಾನೆ!
ಮುದ್ರೆಗಳಲ್ಲಿ ಆರನ್ನು ತೆರೆಯುವಾಗ ನಾಟಕೀಯ ಘಟನೆಗಳು ಬಿಚ್ಚಲ್ಪಡುತ್ತವೆ. (6:1–7:17) ಮೊದಲನೆಯ ಮುದ್ರೆಯನ್ನು ಒಡೆದಾಗ, ಕ್ರಿಸ್ತನು ಒಂದು ಬಿಳೀಕುದುರೆಯ ಮೇಲೆ ಇದ್ದು, ಕಿರೀಟವನ್ನು ಪಡೆಯುತ್ತಾನೆ (1914ರಲ್ಲಿ), ಮತ್ತು ಜಯಿಸಲು ಹೊರಡುತ್ತಾನೆ. ಇನ್ನು ಮೂರು ಮುದ್ರೆಗಳು ಒಡೆಯಲ್ಪಟ್ಟಂತೆ, ಇತರ ಕುದುರೆ ಸವಾರರು ಯುದ್ಧ, ಕ್ಷಾಮ ಮತ್ತು ಮೃತ್ಯುವನ್ನು ಮಾನವಕುಲಕ್ಕೆ ತರುತ್ತಾರೆ. ಐದನೆಯ ಮುದ್ರೆಯನ್ನು ಒಡೆಯುವದರೊಂದಿಗೆ, ಕ್ರಿಸ್ತನಿಗೋಸ್ಕರ ಹತರಾದವರು ಅವರ ರಕ್ತದ ಪ್ರತಿದಂಡನೆಗಾಗಿ ಕೂಗುತ್ತಾರೆ ಮತ್ತು ಪ್ರತಿಯೊಬ್ಬನಿಗೆ “ಒಂದು ಬಿಳಿ ನಿಲುವಂಗಿಯು” ಕೊಡಲ್ಪಟ್ಟಿತು, ಅಂದರೆ ರಾಜವೈಭವದ ಸುಯೋಗಗಳೊಂದಿಗೆ ಅಮರತ್ವವುಳ್ಳ ಆತ್ಮ ಜೀವಿಗಳಾಗಿ ಅವರು ಪುನರುತ್ಥಾನಗೊಳ್ಳುವದಕ್ಕೆ ಸಂಬಂಧಿಸಿದ ಅವರ ನೀತಿಯ ನಿಲುವನ್ನು ಸೂಚಿಸುತ್ತದೆ. (ಪ್ರಕಟನೆ 3:5; 4:4ನ್ನು ಹೋಲಿಸಿರಿ.) ಆರನೆಯ ಮುದ್ರೆಯನ್ನು ಒಡೆದಾಗ, ದೇವರ ಮತ್ತು ಕುರಿಮರಿಯಾದಾತನ ಕ್ರೋಧದ ದಿನವು, ಒಂದು ಭೂಕಂಪದ ಮೂಲಕ ಘೋಷಿಸಲ್ಪಡುತ್ತದೆ. ಆದರೆ ನಾಶನದ ನ್ಯಾಯದಂಡನೆಯನ್ನು ಸೂಚಿಸುವ “ಭೂಮಿಯ ಚರ್ತುದಿಕ್ಕುಗಳ ಗಾಳಿಗಳು” 1,44,000 ದೇವರ ದಾಸರ ಮುದ್ರೆ ಒತ್ತುವ ತನಕ, ತಡೆಹಿಡಿಯಲ್ಪಡುತ್ತವೆ. ದೇವರಾತ್ಮನಿಂದ ಅವರನ್ನು ಅಭಿಷೇಕಿಸಿದಾಗ ಮತ್ತು ಅವನ ಆತ್ಮಿಕ ಪುತ್ರರುಗಳಾಗಿ ಸ್ವೀಕರಿಸಿದಾಗ, ಅವರು —ಒಂದು ಮುದ್ರೆ ಯಾ ಪ್ರತಿಜ್ಞೆಯನ್ನು—ಅವರ ಸ್ವರ್ಗೀಯ ಬಾಧ್ಯತೆಯ ಮೊದಲ ಗುರುತನ್ನು ಪಡೆಯುತ್ತಾರೆ. ಪರೀಕ್ಷಿಸಲ್ಪಟ್ಟ ನಂತರವೇ ಅವರ ಮುದ್ರೆಯು ಶಾಶ್ವತವಾಗುತ್ತದೆ. (ರೋಮಾಪುರ 8:15-17; 2 ಕೊರಿಂಥ 1:21, 22) ಎಲ್ಲಾ ಜನಾಂಗಗಳಿಂದ ಒಂದು “ಮಹಾ ಸಮೂಹವನ್ನು”—ಭೂಮಿಯ ಪರದೈಸದ ಮೇಲೆ ನಿತ್ಯ ಜೀವದ ನಿರೀಕ್ಷೆಯಿರುವ ಜನಸ್ತೋಮವನ್ನು ಯೋಹಾನನು ಕಾಣುವಾಗ ಎಷ್ಟೊಂದು ಅಚ್ಚರಪಟ್ಟಿರಬೇಕು! ಅವರು “ಮಹಾ ಸಂಕಟದಿಂದ” ಬರುತ್ತಾರೆ, ಮಾನವ ಕುಲದ ಸರಿಸಾಟಿಯಿಲ್ಲದ ಸಂಕಟಗಳ ಸಮಯವು ಅದಾಗಿರುವದು.
ಎಂಥಾ ಬೆರಗುಗೊಳಿಸುವ ಘಟನೆಗಳು ಏಳನೆಯ ಮುದ್ರೆಯನ್ನು ಒಡೆದಾಗ ಸಂಭವಿಸುತ್ತವೆ! (8:1–11:14) ಅರ್ಧ ತಾಸಿನ ನಿಶ್ಶಬ್ದತೆಯ ನಂತರ, ಪವಿತ್ರ ಜನರ ಪ್ರಾರ್ಥನೆಗಳು ಆಲಿಸಲ್ಪಡುವಂತೆ ಆಯಿತು, ಅದರ ನಂತರ ವೇದಿಯಿಂದ ಬೆಂಕಿಯು ಭೂಮಿಗೆ ಬಿಸಾಡಲ್ಪಟ್ಟಿತು. ಅನಂತರ, ಏಳು ದೇವದೂತರುಗಳು ಕ್ರೈಸ್ತ ಧರ್ಮಗಳ ಮೇಲೆ ದೇವರ ವಿಪತ್ತುಗಳನ್ನು ಘೋಷಿಸುವ ತುತೂರಿಗಳನ್ನು ಊದಲು ಸಿದ್ಧರಾದರು. ಮಹಾ ಸಂಕಟದ ತನಕ ಅಂತ್ಯದ ಎಲ್ಲಾ ಸಮಯದಲ್ಲಿ ತುತೂರಿಗಳು ಊದಲ್ಪಟ್ಟವು. ನಾಲ್ಕು ತುತೂರಿಗಳು ವಿಪತ್ತನ್ನು ಭೂಮಿಯ, ಸಮುದ್ರದ, ನದಿ ಒರತೆಗಳ ಮತ್ತು ಸೂರ್ಯ, ಚಂದ್ರ, ನಕ್ಷಾತ್ರಾದಿಗಳ ಮೇಲೆ ಊದಿದವು. ಐದನೆಯ ತುತೂರಿಯು ಮಿಡತೆಗಳನ್ನು ಹೊರತರಲಾಯಿತು, ಅಂದರೆ 1919 ರಿಂದ ಯುದ್ಧವನ್ನು ಮಾಡಲು ಹೊರ ಬರುವ ಅಭಿಷಿಕ್ತ ಕ್ರೈಸ್ತರನ್ನು ಚಿತ್ರಿಸುತ್ತದೆ. ಆರನೆಯ ತುತೂರಿಯ ಊದುವಿಕೆಯೊಂದಿಗೆ, ಕುದುರೇದಂಡಿನವರ ಆಕ್ರಮಣವು ನಡೆಯುತ್ತದೆ. ನೆರವೇರಿಕೆಯಲ್ಲಿ ಅಭಿಷಿಕ್ತರು, 1935ರಿಂದ “ಮಹಾ ಸಮೂಹದಿಂದ” ಮತ್ತಷ್ಟು ಬಲಗೊಳಿಸಲ್ಪಟ್ಟು, ಕ್ರೈಸ್ತ ಧರ್ಮಗಳ ಧಾರ್ಮಿಕ ಮುಖಂಡರುಗಳ ವಿರುದ್ಧ ನ್ಯಾಯತೀರ್ಪಿನ ಸಂದೇಶಗಳಿಂದ ಯಾತನೆ ಕೊಡುವದನ್ನು ಘೋಷಿಸಿದರು.
ಯೋಹಾನನು ಅನಂತರ ಒಂದು ಚಿಕ್ಕ ಸುರುಳಿಯನ್ನು ತಿನ್ನುತ್ತಾನೆ, ಅಂದರೆ ಅಭಿಷಿಕ್ತರ ತಮ್ಮ ನೇಮಕವನ್ನು ಸ್ವೀಕರಿಸುತ್ತಾರೆ ಮತ್ತು ಕ್ರೈಸ್ತ ಧರ್ಮಗಳ ವಿರುದ್ಧ ಅವರು ಘೋಷಿಸುವ ದೈವಿಕ ನ್ಯಾಯತೀರ್ಪುಗಳಲ್ಲಿ ಸೇರಿರುವ ಹೇಳಿಕೆಗಳಲ್ಲಿರುವ ದೇವರ ವಾಕ್ಯದಿಂದ ಪೋಷಕಾಹಾರವನ್ನು ಪಡೆಯುತ್ತಾರೆ. ದೇವರ ಪವಿತ್ರಾಲಯವನ್ನು ಅಳೆಯುವಂತೆ ಅಪೊಸ್ತಲನಿಗೆ ಆಜ್ಞಾಪಿಸಲಾಯಿತು, ಅಂದರೆ ದೇವಾಲಯದ ಏರ್ಪಾಡಿನ ಕುರಿತಾಗಿರುವ ಯೆಹೋವನ ಉದ್ದೇಶಗಳ ಕೆಲವು ನಿರ್ದಿಷ್ಟ ನೆರವೇರಿಕೆಯನ್ನು ಸೂಚಿಸುತ್ತಿತ್ತು. ಅನಂತರ ದೇವರ ಅಭಿಷಿಕ್ತ “ಇಬ್ಬರು ಸಾಕ್ಷಿಗಳು” ಗೋಣೀತಟ್ಟುಗಳನ್ನು ಹೊದ್ದುಕೊಂಡು ಸಾಕ್ಷಿ ಕೊಡುವಾಗ ಕೊಲ್ಲಲ್ಪಟ್ಟರು, ಆದರೆ ಎಬ್ಬಿಸಲ್ಪಟ್ಟರು. ಇದು 1918-19ಕ್ಕೆ ಸೂಚಿಸುತ್ತದೆ, ಆಗ ವಿರೋಧಿಗಳಿಂದ ಅವರ ಸಾರುವ ಕೆಲಸವು ಹೆಚ್ಚುಕಡಿಮೆ ಸತ್ತ ಸ್ಥಿತಿಗೆ ತರಲ್ಪಟ್ಟಿತು, ಆದರೆ ಅವರ ಶುಶ್ರೂಷೆಗಾಗಿ ಯೆಹೋವನು ಸೇವಕರು ಅದ್ಭುತಕರವಾಗಿ ಪುನಃ ಚೇತರಿಸಲ್ಪಟ್ಟರು.
ರಾಜ್ಯವು ಜನಿಸುತ್ತದೆ!
ಏಳನೆಯ ತುತೂರಿಯ ಶಬ್ದವು ರಾಜ್ಯದ ಜನಿಸುವಿಕೆಯನ್ನು ಪ್ರಕಟಿಸುತ್ತದೆ. (11:15–12:17) ಪರಲೋಕದಲ್ಲಿ ಸಾಂಕೇತಿಕ ಸ್ತ್ರೀಯು (ಯೆಹೋವ ದೇವರ ಸ್ವರ್ಗೀಯ ಸಂಸ್ಥೆ) ಒಬ್ಬ ಗಂಡು ಮಗುವಿಗೆ (ಕ್ರಿಸ್ತನು ರಾಜನಾಗಿರುವ ದೇವರ ರಾಜ್ಯ) ಜನ್ಮವನ್ನೀಯುತ್ತಾಳೆ, ಆದರೆ ಘಟಸರ್ಪನು (ಸೈತಾನನು) ಅದನ್ನು ವ್ಯರ್ಥವಾಗಿ ನುಂಗಲು ಪ್ರಯತ್ನಿಸುತ್ತಾನೆ. 1914 ರಲ್ಲಿ ರಾಜ್ಯದ ಜನನವನ್ನು ಹಿಂಬಾಲಿಸಿ ಪರಲೋಕದಲ್ಲಿ ಒಂದು ಯುದ್ಧವು ನಡೆಯುತ್ತದೆ ಮತ್ತು ವಿಜೇತ ಮೀಕಾಯೇಲನು (ಯೇಸು ಕ್ರಿಸ್ತನು) ಘಟಸರ್ಪನನ್ನೂ ಅವನ ದೆವ್ವಗಳನ್ನೂ ಭೂಮಿಗೆ ದೊಬ್ಬುತ್ತಾನೆ. ಅಲ್ಲಿ ಘಟಸರ್ಪನು ಪರಲೋಕದ ಸ್ತ್ರೀಯ ಸಂತಾನದವರಲ್ಲಿ ಅಭಿಷಿಕ್ತ ಉಳಿಕೆಯವರ ಮೇಲೆ ಯುದ್ಧ ಮಾಡುವದನ್ನು ಮುಂದರಿಸುತ್ತಾನೆ.
ಅನಂತರ ಯೋಹಾನನು ಅದಕ್ಕೆ ಒಂದು ಅಸಹ್ಯ ವಿಗ್ರಹವನ್ನು ಮಾಡಿರುವ ಕಾಡುಮೃಗವೊಂದನ್ನು ಕಾಣುತ್ತಾನೆ. (13:1-18) ಏಳು ತಲೆಗಳು, ಹತ್ತು ಕೊಂಬುಗಳ ಈ ರಾಜಕೀಯ ಕಾಡುಮೃಗವು, ಎಲ್ಲಿಂದ ಮಾನವ ಸರಕಾರಗಳು ಉದ್ಭವಿಸುತ್ತವೋ, ಆ ಮಾನವಕುಲದ ಅವಿಶ್ರಾಂತ ಜನಸ್ತೋಮಗಳೆಂಬ “ಸಮುದ್ರದಿಂದ” ಬರುತ್ತದೆ. (ದಾನಿಯೇಲ 7:2-8; 8:3-8, 20-25ನ್ನು ಹೋಲಿಸಿರಿ.) ಈ ಸಾಂಕೇತಿಕ ಜೀವಿಯ ಅಧಿಕಾರದ ಮೂಲವು ಎಲ್ಲಿಂದ? ಯಾಕೆ, ಘಟಸರ್ಪನಾದ ಸೈತಾನನು ಅಲ್ಲದೇ ಬೇರೆ ಯಾರೂ ಅಲ್ಲ! ಮತ್ತು ಸ್ವಲ್ಪ ಯೋಚಿಸಿರಿ! ಈ ರಾಜಕೀಯ ವಿಲಕ್ಷಣತೆಗೆ ಎರಡು ಕೊಂಬುಗಳ ಮೃಗವು (ಆಂಗ್ಲೋ-ಅಮೆರಿಕನ್ ಲೋಕಶಕ್ತಿಯು) ಒಂದು “ವಿಗ್ರಹ”ವನ್ನು,—ಈಗ ಅಂದು ಸಂಯುಕ್ತ ರಾಷ್ಟ್ರ ಸಂಘವಾಗಿದೆ— ಮಾಡುವದನ್ನು ಕಾಣಲಾಗುತ್ತದೆ. ಅನೇಕರು ಈ ಕಾಡುಮೃಗವನ್ನು ಆರಾಧಿಸುವಂತೆ ಮತ್ತು ಅದರ ರೀತಿಗಳಲ್ಲಿ ವಿಷಯಗಳನ್ನು ಮಾಡುವದರಿಂದ ಮತ್ತು ಅದು ಅವರ ಜೀವಿತಗಳಲ್ಲಿ ಪ್ರಭುತ್ವ ನಡಿಸಲು ಬಿಡುವದರಿಂದ ಅದರ “ಗುರುತನ್ನು” ಪಡೆಯುತ್ತಾರೆ. ಆದರೆ ಯೆಹೋವನ ಸಾಕ್ಷಿಗಳು ಕಾಡುಮೃಗದ ಪೈಶಾಚಿಕ ಗುರುತನ್ನು ದೃಢತೆಯಿಂದ ನಿರಾಕರಿಸುತ್ತಾರೆ!
ಯೆಹೋವನ ಸೇವಕರು ಕ್ರಿಯೆಗೈಯುತ್ತಾರೆ
ಏಳು ಪಾತ್ರೆಗಳಿಂದ ಅವನ ರೌದ್ರವನ್ನು ಸುರಿಯುವಾಗ ವಿವಿಧ ದೇವರ ಸೇವಕರು ಕ್ರಿಯೆಗೈಯುವದನ್ನು ಕಾಣಬಹುದು. (14:1–16:21) ಆಲಿಸಿರಿ! ಪರಲೋಕದ ಚೀಯೋನ್ ಪರ್ವತದ ಮೇಲೆ, ಯೋಹಾನನು ಒಂದು ಹೊಸ ಹಾಡನ್ನು 1,44,000 ಮಂದಿ ಹಾಡುವದನ್ನು ಕೇಳಶಕ್ತನಾಗಿದ್ದಾನೆ. ಭೂನಿವಾಸಿಗಳಿಗೆ ಒಂದು ನಿತ್ಯವಾದ ಶುಭವರ್ತಮಾನವಿರುವ ಒಬ್ಬ ದೇವದೂತನು ಮಧ್ಯ ಆಕಾಶದಲ್ಲಿ ಹಾರುತ್ತಾ ಇದ್ದನು. ಅದು ಏನನ್ನು ತೋರಿಸುತ್ತದೆ? ರಾಜ್ಯದ ಸಂದೇಶವನ್ನು ಸಾರುವದರಲ್ಲಿ ಯೆಹೋವನ ಸಾಕ್ಷಿಗಳಿಗೆ ದೇವದೂತರ ಸಹಾಯವು ಇದೆ.
ಭೂಮಿಯ ದ್ರಾಕ್ಷೆಯನ್ನು (ಪೈರನ್ನು) ಕೊಯ್ಯುವದನ್ನು ಮತ್ತು ದೇವರ ರೌದ್ರವೆಂಬ ದೊಡ್ಡ ತೊಟ್ಟಿಯಲ್ಲಿ ಎಲ್ಲಾ ಜನಾಂಗಗಳು ತುಳಿಯಲ್ಪಡುವದನ್ನು ನೋಡುವದರಲ್ಲಿ ಯೋಹಾನನು ಅಚ್ಚರಪಟ್ಟಿರಬೇಕು. (ಯೆಶಾಯ 63:3-6; ಯೋವೇಲ 3:12-14 ಹೋಲಿಸಿರಿ.) ಯೆಹೋವನು ಆಜ್ಞಾಪಿಸಿದಾಗ, ಏಳು ದೇವದೂತರು ದೇವರ ರೌದ್ರದ ಏಳು ಪಾತ್ರೆಗಳನ್ನು ಸುರಿಯುವರು. ಭೂಮಿ, ಸಮುದ್ರ, ಮತ್ತು ನದಿಗಳು ನೀರಿನ ಬುಗ್ಗೆಗಳು ಮತ್ತು ಸೂರ್ಯನು, ಕಾಡುಮೃಗದ ಸಿಂಹಾಸನ ಮತ್ತು ಯೂಫ್ರೇಟೀಸ್ ನದಿ ಇವೆಲ್ಲವುಗಳ ಮೇಲೆ ಮೊದಲ ಆರು ಪಾತ್ರೆಗಳಿಂದ ಹೊಯ್ಯಲಾಗಿ ಅವು ಬಾಧಿತವಾದವು. ಹರ್ಮ-ಗೆದ್ದೋನಿನ ದೇವರ ಯುದ್ಧಕ್ಕೆ ಮಾನವ ರಾಜರುಗಳನ್ನು ಒಟ್ಟುಗೂಡಿಸುವ ಪೈಶಾಚಿಕ ಪ್ರಚಾರ ಕಾರ್ಯವನ್ನು ಅವನು ಗಮನಿಸುತ್ತಿರುವಾಗ ಯೋಹಾನನ ಉದ್ರೇಕವನ್ನು ಊಹಿಸಿರಿ. ಮತ್ತು ವಾಯು ಮಂಡಲದ ಮೇಲೆ ಏಳನೆಯ ಪಾತ್ರೆಯನ್ನು ಹೊಯ್ದಾಗ ಉಂಟಾದ ಫಲಿತಾಂಶವು ಧ್ವಂಸ ಮಾಡುವದಾಗಿತ್ತು.
ಇಬ್ಬರು ಸಾಂಕೇತಿಕ ಸ್ತ್ರೀಯರು
ಮಹಾ ಬಾಬೆಲ್, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯದ ಅಂತ್ಯಕ್ಕೆ ಸಾಕ್ಷಿಯಾಗುವದರಿಂದ, ಮತ್ತು ಅವಳ ನಾಶನವನ್ನು ಹಿಂಬಾಲಿಸುವ ಸಂತೋಷದ ಘಟನೆಗಳನ್ನು ಅವಲೋಕಿಸುವದರಿಂದ, ಯೋಹಾನನು ಖಂಡಿತವಾಗಿಯೂ ಪುಳಕಿತನಾಗಿರಬೇಕು. (17:1–19:10) ದೇವ ಜನರ ರಕ್ತವನ್ನು ಕುಡಿದು, ಅವಳು ಏಳು ತಲೆಗಳೂ, ಹತ್ತು ಕೊಂಬುಗಳೂ ಇರುವ ರಕ್ತವರ್ಣದ ಕಾಡು ಮೃಗದ (ಜನಾಂಗ ಸಂಘ ಮತ್ತು ಅದರ ಉತ್ತರಾಧಿಕಾರಿ, ಸಂಯುಕ್ತ ರಾಷ್ಟ್ರ ಸಂಘ) ಮೇಲೆ ಕುಳಿತಿದ್ದಳು. ಆಹಾ, ಅವಳ ವಿರುದ್ಧ ಕೊಂಬುಗಳು ತಿರುಗಿಬಿದ್ದಾಗ ಎಂಥ ವಿಧ್ವಂಸಕತೆಯಿಂದ ಅವಳು ಸಂಕಟಪಡುವಳು!
ಮಹಾ ಬಾಬೆಲಿನ ನಾಶನಕ್ಕಾಗಿ ಪರಲೋಕದಿಂದ ಸ್ತುತಿಗಾನ ಮಾಡುತ್ತಾ ಶಬ್ದಗಳು ಕೇಳಲ್ಪಟ್ಟವು. ಮತ್ತು ಕುರೀಮರಿಯ ಮತ್ತು ಅವನ ಮದಲಗಿತ್ತಿಯ, ಪುನರುತಿತ್ಥ ಅಭಿಷಿಕ್ತರ ವಿವಾಹವನ್ನು ಘೋಷಿಸುವ ಎಂಥಾ ಗುಡುಗಿನಂಥ ಸ್ತುತಿಯು!
ಕ್ರಿಸ್ತನು ವಿಜೇತನಾಗುತ್ತಾನೆ ಮತ್ತು ಆಳುತ್ತಾನೆ
ಯೋಹಾನನು ತದನಂತರ, ರಾಜಾಧಿರಾಜನು ಸೈತಾನನ ವಿಷಯಗಳ ವ್ಯವಸ್ಥೆಯ ನಾಶನ ಮಾಡುವದರಲ್ಲಿ ಪರಲೋಕದ ಸೈನ್ಯದ ಮುಂದಾಳುತನವನ್ನು ವಹಿಸುವದನ್ನು ಕಾಣುತ್ತಾನೆ. (19:11-21) ಹೌದು, “ದೇವರ ವಾಕ್ಯ”ವಾದ ಕ್ರಿಸ್ತನು ಜನಾಂಗಗಳ ವಿರುದ್ಧ ಯುದ್ಧವನ್ನು ಗೈಯುವನು. ಕಾಡು ಮೃಗವೂ (ಸೈತಾನನ ರಾಜಕೀಯ ಸಂಸ್ಥಾಪನೆ) ಮತ್ತು ಸುಳ್ಳು ಪ್ರವಾದಿಯೂ (ಆಂಗ್ಲೋ-ಅಮೆರಿಕನ್ ಲೋಕ ಶಕ್ತಿ) “ಬೆಂಕಿಯ ಕೆರೆಗೆ” ಅಂದರೆ ಸಾಂಕೇತಿಕವಾಗಿ ಪೂರ್ಣ, ನಿತ್ಯ ನಾಶನಕ್ಕೆ ದೊಬ್ಬಲ್ಪಡುವದನ್ನು ಅಪೊಸ್ತಲನು ಕಾಣುತ್ತಾನೆ.
ಅನಂತರ ಏನು? ಯಾಕೆ, ಸೈತಾನನನ್ನು ಅಧೋಲೋಕಕ್ಕೆ ಹಾಕುವದನ್ನು ಯೋಹಾನನು ಕಾಣುತ್ತಾನೆ. ಅದರ ನಂತರ ಕ್ರಿಸ್ತನ ಸಾವಿರ ವರ್ಷಗಳ ಆಳಿಕ್ವೆಯ ಒಂದು ಮುನ್ನೋಟ, ಆ ಸಮಯದಲ್ಲಿ ಯೇಸುವು ಮತ್ತು ಅವನ ಪುನರುತಿತ್ಥ ಸಹ-ರಾಜರು ಮಾನವ ವರ್ಗದ ತೀರ್ಪು ಮಾಡುವರು, ವಿಧೇಯರಾಗಿರುವವರನ್ನು ಮಾನವ ಪರಿಪೂರ್ಣತೆಗೆ ಏರಿಸುವರು! (20:1-10) ಈಗ ಕೊನೆಯ ಪರೀಕೆಗ್ಷೆ ಸಮಯವಾಗಿರುವದು. ಅಧೋಲೋಕದಿಂದ ಬಿಡುಗಡೆ ಮಾಡಲ್ಪಟ್ಟ ಸೈತಾನನು ಪರಿಪೂರ್ಣರಾಗಿರುವ ಮಾನವ ಕುಲವನ್ನು ತಪ್ಪು ದಾರಿಗೆ ನಡಿಸಲು ಸಿದ್ಧನಾಗಿರುತ್ತಾನೆ, ಆದರೆ ಎಲ್ಲಾ ದೆವ್ವಗಳ ಮತ್ತು ದೇವರ ವಿರುದ್ಧವಾದ ಮಾನವ ದಂಗೆಕೋರರ ಜೀವನೋದ್ಯೋಗಗಳು ನಾಶನದಲ್ಲಿ ಅಂತ್ಯಗೊಳ್ಳಲಿರುವವು.
ಸಮಯದ ಹಿಮ್ಮುಖವಾಗಿ ಹೋಗುವದಾದರೆ, ಮರಣದಲ್ಲಿ, ಹೇಡಿಸ್ನಲ್ಲಿ (ಮಾನವಕುಲದ ಸಾಮಾನ್ಯ ಸಮಾಧಿ) ಮತ್ತು ಸಮುದ್ರದಲ್ಲಿರುವ ಸತ್ತವರೆಲ್ಲರೂ, ಪುನರುತ್ಥಾನಗೊಳಿಸಲ್ಪಟ್ಟು, ಮಹಾ ಬಿಳಿ ಸಿಂಹಾಸನವೊಂದರ ಮೇಲೆ ಕುಳಿತಿದ್ದ ದೇವರಿಂದ ನ್ಯಾಯ ತೀರ್ಪನ್ನು ಹೊಂದುವದನ್ನು ಕಾಣುವಾಗ ಯೋಹಾನನು ಎಷ್ಟೊಂದು ಸಂತೋಷಪಟ್ಟಿರಬೇಕು! (20:11-15) ಬೆಂಕಿಯ ಕೆರೆಗೆ ಮರಣ ಮತ್ತು ಹೇಡಿಸನ್ನು ದೊಬ್ಬುವಾಗ ನೀತಿವಂತರು ಎಂಥಾ ಬಿಡುಗಡೆಯಲ್ಲಿ ಆನಂದಿಸಲಿರುವರು, ಆಗ ಅವು ಪುನಃ ಎಂದಿಗೂ ಬಲಿಗಳನ್ನು ಕೇಳವು!
ಯೋಹಾನನ ದರ್ಶನಗಳು ಕೊನೆಗೊಳ್ಳುತ್ತಿದ್ದಂತೆಯೇ, ಅವನು ಹೊಸ ಯೆರೂಸಲೇಮನ್ನು ನೋಡುತ್ತಾನೆ. (21:1–22:21) ಆ ಸರಕಾರೀ ಪಟ್ಟಣವು ಪರಲೋಕದಿಂದ ಇಳಿದು ಬರುವದು ಮತ್ತು ಜನಾಂಗಗಳಿಗೆ ಜ್ಞಾನೋದಯವನ್ನು ತರುವದು. ಹೊಸ ಯೆರೂಸಲೇಮಿನಿಂದ “ಜೀವಜಲದ ನದಿಯೊಂದು” ಹರಿಯುತ್ತದೆ, ಪಾಪ ಮತ್ತು ಮರಣದಿಂದ ವಿಧೇಯ ಮಾನವರನ್ನು ಪುನಃ ಪಡೆಯಲಿಕ್ಕಾಗಿ ಮತ್ತು ಅವರಿಗೆ ನಿತ್ಯ ಜೀವವನ್ನು ನೀಡಲ್ಪಟ್ಟ, ಶಾಸ್ತ್ರೀಯ ಸತ್ಯತೆ ಮತ್ತು ಯೇಸುವಿನ ಯಜ್ಞದ ಆಧಾರದ ಮೇಲೆ ದೇವರಿಂದ ಕೊಡಲ್ಪಟ್ಟ ಬೇರೆ ಎಲ್ಲಾ ಒದಗಿಸುವಿಕೆಗಳನ್ನು ಚಿತ್ರಿಸುತ್ತದೆ. (ಯೋಹಾನ 1:29; 17:3; 1 ಯೋಹಾನ 2:1, 2) ಈ ನದಿಯ ಉಭಯ ಪಾರ್ಶ್ವಗಳಲ್ಲಿ ಯೋಹಾನನು ವಾಸಿ ಮಾಡುವ ಎಲೆಗಳಿದ್ದ ಮರಗಳನ್ನು ಕಾಣುತ್ತಾನೆ, ವಿಧೇಯ ಮಾನವಕುಲಕ್ಕೆ ನಿತ್ಯ ಜೀವವನ್ನು ಕೊಡಲಿಕ್ಕಾಗಿ ಯೆಹೋವನ ಒದಗಿಸುವಿಕೆಯ ಒಂದು ಭಾಗವನ್ನು ಚಿತ್ರಿಸುತ್ತದೆ. ದೇವರಿಂದ ಮತ್ತು ಕ್ರಿಸ್ತನಿಂದ ಸಮಾಪ್ತಿಯ ಸಂದೇಶಗಳನ್ನು ಹಿಂಬಾಲಿಸಿ, ಒಂದು ಆಮಂತ್ರಣವು ಕೊಡಲ್ಪಡುತ್ತದೆ. ‘ಬಂದು ಜೀವಜಲವನ್ನು ಉಚಿತವಾಗಿ ಕ್ರಯವಿಲ್ಲದೆ ತೆಗೆದುಕೊಳ್ಳಲಿ’ ಎಂದು ಬಾಯಾರಿದ ಪ್ರತಿಯೊಬ್ಬನಿಗೆ ಆತ್ಮನೂ ಮದಲಗಿತ್ತಿಯೂ ಅಮಂತ್ರಿಸುವದನ್ನು ಕೇಳುವದು ಎಂಥಾ ಆಶ್ಚರ್ಯಕರ ಸಂಗತಿ! ಮತ್ತು ನಾವು ಪ್ರಕಟನೆಯ ಸಮಾಪ್ತಿಯ ಮಾತುಗಳನ್ನು ಓದುವಾಗ, ಯೋಹಾನನ ಉದ್ಘೋಷದ ಹುರುಪಿನಲ್ಲಿ ನಿಸ್ಸಂದೇಹವಾಗಿ ನಾವು ಪಾಲಿಗರಾಗುತ್ತೇವೆ: “ಆಮೆನ್! ಕರ್ತನಾದ ಯೇಸುವೇ, ಬಾ.” (w91 5/1)
[ಪುಟ 28 ರಲ್ಲಿರುವ ಚೌಕ/ಚಿತ್ರಗಳು]
ಎಚ್ಚರವಾಗಿ ಇರುವದು: ದೇವರ ಯುದ್ಧವಾದ ಹರ್ಮಗೆದೋನ್ನ (ಅರ್ಮಗೆದೋನ್) ಕುರಿತು ಪ್ರವಾದನಾ ಮಾತುಗಳ ನಡುವೆ, ಇದನ್ನು ಹೇಳಲಾಗಿದೆ: “ಇಗೋ, ನಾನು [ಯೇಸು ಕ್ರಿಸ್ತನು] ಕಳ್ಳನು ಬರುವಂತೆ ಬರುತ್ತೇನೆ; ತಾನು ನಿರ್ವಾಣನಾಗಿ ತಿರುಗಾಡಿ ಅವಮಾನಕ್ಕೆ ಗುರಿಯಾದೇನೆಂದು ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು.” (ಪ್ರಕಟನೆ 16:15) ಯೆರೂಸಲೇಮಿನ ಪರ್ವತದಲ್ಲಿದ್ದ ದೇವಾಲಯದಲ್ಲಿನ ಮೇಲ್ವಿಚಾರಕನ, ಯಾ ಅಧಿಕಾರಿಯ ಕರ್ತವ್ಯಗಳಿಗೆ ಅಪ್ರತ್ಯಕ್ಷವಾಗಿ ಸೂಚಿಸುವದಾಗಿರಬಹುದು. ರಾತ್ರಿಕಾಲದ ಅವನ ಕಾವಲುಗಳಲ್ಲಿ, ಅವರ ಸ್ಥಾನಗಳಲ್ಲಿ ಲೇವ್ಯ ಕಾವಲುಗಾರರು ಎಚ್ಚರವಾಗಿದ್ದಾರೋ, ಯಾ ನಿದ್ರಿಸುತ್ತಾರೋ ಎಂದು ನೋಡಲು ಅವನು ದೇವಾಲಯದ ಮೂಲಕ ಹೋಗುತ್ತಿದ್ದನು. ನಿದ್ರಿಸುವ ಯಾವನೇ ಕಾವಲುಗಾರನಿಗೆ ಒಂದು ದಂಡದಿಂದ ಹೊಡೆಯಲಾಗುತ್ತಿತ್ತು ಮತ್ತು ಅವನಿಗೆ ಅವಮಾನಿಸುವ ಶಿಕ್ಷೆಯೋಪಾದಿ, ಅವನ ಹೊರ ಉಡುಪುಗಳನ್ನು ತೆಗೆದು ಸುಡಲಾಗುತ್ತಿತ್ತು. ಈಗ ಅರ್ಮಗೆದೋನ್ ಅಷ್ಟೊಂದು ಸನ್ನಿಹಿತವಾಗಿರುವಾಗ, “ರಾಜಯಾಜಕತ್ವದ” ಯಾ “ಆತ್ಮಿಕ ಮನೆಯ” ಅಭಿಷಿಕ್ತ ಉಳಿಕೆಯವರು, ಆತ್ಮಿಕವಾಗಿ ಎಚ್ಚರವಾಗಿ ನಿಲ್ಲಲು ದೃಢನಿರ್ಧಾರ ಮಾಡಿರುತ್ತಾರೆ. ಅದರಂತೆಯೇ, ಅವರ ಸಹವಾಸಿಗಳು, ಐಹಿಕ ನಿರೀಕ್ಷೆಯೊಂದಿಗೆ “ಮಹಾ ಸಮೂಹವು” ಕೂಡ, ಯಾಕಂದರೆ ಅವರು ಕೂಡ ದೇವಾಲಯದಲ್ಲಿ ಪವಿತ್ರ ಸೇವೆಯನ್ನು ದೇವರಿಗೆ ಸಲ್ಲಿಸುತ್ತಾ ಇದ್ದಾರೆ. (1 ಪೇತ್ರ 2:5, 9; ಪ್ರಕಟನೆ 7:9-17) ಸಭೆಯಲ್ಲಿ ಕೆಟ್ಟ ಪರಿಸ್ಥಿತಿಗಳು ಬೆಳೆಯುವದರ ವಿರುದ್ಧ ಕ್ರೈಸ್ತ ಮೇಲ್ವಿಚಾರಕರು ವಿಶೇಷವಾಗಿ ಎಚ್ಚರವಾಗಿ ಇರತಕ್ಕದ್ದು. ಅವರು ಎಚ್ಚರವಾಗಿ ಇರುವ ಕಾರಣ, ದೇವರ ಆತ್ಮಿಕ ದೇವಾಲಯದಲ್ಲಿ ನಿಷ್ಠೆಯ ಎಲ್ಲಾ ಆರಾಧಕರು, ಯೆಹೋವನ ಸಾಕ್ಷಿಗಳೋಪಾದಿ ಅವರ ಗೌರವಾನಿತ್ವ ಸೇವೆಯನ್ನು ಸೂಚಿಸುವ, ಅವರ “ಹೊರ ವಸ್ತ್ರಗಳನ್ನು” ಕಾಪಾಡಿ ಕೊಳ್ಳುತ್ತಾರೆ.