ಬೈಬಲ್ ನಿಜವಾಗಿ ದೇವರ ಒಂದು ಕೊಡುಗೆಯೋ?
“ದೇವರು ಮನುಷ್ಯನಿಗೆ ಕೊಟ್ಟಿರುವ ಕೊಡುಗೆಗಳೆಲ್ಲವುಗಳಲ್ಲಿ ಬೈಬಲ್ ಅತ್ಯಂತ ಉತ್ತಮವೆಂದು ನಾನು ನಂಬುತ್ತೇನೆ.” ಈ ಹೇಳಿಕೆಯನ್ನು ನೀಡಿದವರು ಅಮೆರಿಕದ 16 ನೆಯ ಪ್ರೆಸಿಡೆಂಟರಾಗಿದ್ದ ಏಬ್ರಹ್ಯಾಂ ಲಿಂಕನ್ರು.a ಈ ಪುರಾತನ ಪುಸ್ತಕಕ್ಕೆ ತಮ್ಮ ಗಣ್ಯತೆಯನ್ನು ತೋರಿಸಿದವರಲ್ಲಿ ಅವರೊಬ್ಬರೇ ಅಲ್ಲ.
19 ನೆಯ ಶತಮಾನದ ಬ್ರಿಟಿಷ್ ರಾಜನೀತಿಜ್ಞ ವಿಲ್ಯಂ ಇ. ಗ್ಲಾಡ್ಸ್ಟನ್ ಹೇಳಿದ್ದು: “ಬೈಬಲ್ ಮೂಲದಲ್ಲಿ ಒಂದು ವಿಶೇಷತೆಯುಳ್ಳ ವಿಶಿಷ್ಟ್ಯದಿಂದ ಕೂಡಿರುತ್ತದೆ ಮತ್ತು ಒಂದು ಅಗಣಿತ ಅಂತರವು ಅದನ್ನು ಬೇರೆಲ್ಲಾ ಸ್ಪರ್ಧಾತ್ಮಕ ಪುಸ್ತಕಗಳಿಗಿಂತ ಪ್ರತ್ಯೇಕಪಡಿಸುತ್ತದೆ.” ಇದೇ ವಿಚಾರಸರಣಿಯಲ್ಲಿ, 18 ನೆಯ ಶತಮಾನದ ಅಮೆರಿಕನ್ ರಾಜನೀತಿಜ್ಞ ಪ್ಯಾಟ್ರಿಕ್ ಹೆನ್ರಿ ಹೇಳಿದ್ದು: “ಮುದ್ರಿಸಲ್ಪಟ್ಟಿರುವ ಬೇರೆ ಎಲ್ಲಾ ಪುಸ್ತಕಗಳಷ್ಟೆ ಮೌಲ್ಯವು ಬೈಬಲಿಗಿದೆ.” ಶಾಸ್ತ್ರವಚನಗಳಿಂದ ಪ್ರಭಾವಿತನೆಂದು ತೋರಿಬಂದ ಫ್ರೆಂಚ್ ಸಾಮ್ರಾಟ ನೆಪೋಲಿಯನ್ ಬೋನಪಾರ್ಟ್ ಹೇಳಿದ್ದು: “ಬೈಬಲ್ ಬರೇ ಒಂದು ಪುಸ್ತಕವಲ್ಲ, ವಿರೋಧಿಸುವವರೆಲ್ಲರನ್ನು ಜಯಿಸುವ ಒಂದು ಶಕ್ತಿಯುಕ್ತ ಜೀವಂತ ಜೀವಿಯು ಅದಾಗಿದೆ.”
ಕೆಲವರಿಗಾದರೋ ಬೈಬಲ್ ಒಂದು ಸಹಾಯ ಮತ್ತು ಆದರಣೆಯ ಮೂಲವಾಗಿದೆ. ಅಮೆರಿಕನ್ ರಾಜ್ಯ ಒಕ್ಕೂಟದ ಜನರಲ್ ರಾಬರ್ಟ್ ಇ. ಲೀ ಹೇಳಿದ್ದು: “ನನ್ನೆಲ್ಲಾ ಕಳವಳಗಳಲ್ಲಿ ಮತ್ತು ಸಂಕಟಗಳಲ್ಲಿ ನನಗೆ ಬೆಳಕನ್ನೂ ಬಲವನ್ನೂ ಕೊಡುವುದರಲ್ಲಿ ಬೈಬಲ್ ಎಂದೂ ತಪ್ಪಿರುವುದಿಲ್ಲ.” ಮತ್ತು ಅಮೆರಿಕದ ಪ್ರೆಸಿಡೆಂಟ್ ಜಾನ್ ಕ್ವಿನ್ಸೀ ಆ್ಯಡಮ್ಸ್ ಈ ಪುಸ್ತಕಕ್ಕೆ ತನ್ನ ಗಣ್ಯತೆಯಿಂದಾಗಿ ಹೇಳಿದ್ದು: “ಅನೇಕ ವರ್ಷಗಳಿಂದ ನಾನು ಬೈಬಲನ್ನು ವರ್ಷಕ್ಕೆ ಒಮ್ಮೆಯಾದರೂ ಓದಿ ಮುಗಿಸುವ ಹವ್ಯಾಸವನ್ನು ಮಾಡಿರುತ್ತೇನೆ.”
ಮಹೋನ್ನತನು ಬೈಬಲನ್ನು ಮಾನವ ಕುಲಕ್ಕೆ ಕೊಟ್ಟಿರುತ್ತಾನೆ ಎಂದಾದರೆ ಅದು ದೈವಿಕವಾಗಿ ಪ್ರೇರಿಸಲ್ಪಟ್ಟಿದೆ ಎಂಬ ರುಜುವಾತು ಇರಬೇಕು. ಬೇರೆ ಯಾವುದೇ ಪುಸ್ತಕಕ್ಕಿಂತ ಅದು ಹೆಚ್ಚು ಮಹತ್ತಾದದ್ದಾಗಿರಬೇಕು. ಮತ್ತು ಬೈಬಲ್ ನಿಜ ಬಲ ಮತ್ತು ಉಪದೇಶದ ಮೂಲವಾಗಿರಬೇಕಾದರೆ, ಅದು ಪೂರ್ಣವಾಗಿ ನಂಬಲರ್ಹವಾಗಿರಬೇಕು. ಹೀಗಿರಲಾಗಿ ಒಂದು ಪ್ರಶ್ನೆಯು ಉಳಿಯುತ್ತದೆ, ಅದೇನಂದರೆ ಬೈಬಲ್ ನಿಜವಾಗಿ ದೇವರ ಒಂದು ಕೊಡುಗೆಯೋ? ಈ ಪ್ರಶ್ನೆಗೆ ಉತ್ತರವನ್ನು ನಾವು ಮುಂದೆ ಹುಡುಕೋಣ.
[ಅಧ್ಯಯನ ಪ್ರಶ್ನೆಗಳು]
a ನಿಶ್ಚಯವಾಗಿ, ಹೆಚ್ಚು ದೊಡ್ಡದಾದ ಕೊಡುಗೆ—ಯೇಸು ಕ್ರಿಸ್ತನು.—ಯೋಹಾನ 3:16.
[ಪುಟ 3 ರಲ್ಲಿರುವ ಚಿತ್ರಗಳು]
ವಿಲ್ಯಂ ಇ. ಗ್ಲಾಡ್ಸ್ಟನ್
[ಕೃಪೆ]
U.S. National Archives photo
ಏಬ್ರಹ್ಯಾಂ ಲಿಂಕನ್
[ಕೃಪೆ]
U.S. National Archives photo
ಪ್ಯಾಟ್ರಿಕ್ ಹೆನ್ರಿ
[ಕೃಪೆ]
Harper’s U.S. History
ನೆಪೋಲಿಯನ್ ಬೋನಪಾರ್ಟ್
[ಕೃಪೆ]
Drawn by E. Ronjat
ಜಾನ್ ಕ್ವಿನ್ಸೀ ಆ್ಯಡಮ್ಸ್
[ಕೃಪೆ]
Harper’s U.S. History
ರಾಬರ್ಟ್ ಇ. ಲೀ
[ಕೃಪೆ]
U.S. National Archives photo