ಗೊವಾಹಿರೊ ಇಂಡಿಯನರು ಒಳ್ಳೆಯ ಪ್ರತಿಕ್ರಿಯೆ ತೋರಿಸುತ್ತಾರೆ
ಒಂದು ದೊಡ್ಡ ಮರದ ನೆರಳಲ್ಲಿ ಕೂತುಕೊಂಡಿದ್ದು, ನೆಲಮುಟ್ಟುವ ಕಪ್ಪಂಗಿಯನ್ನು ಧರಿಸಿದ್ದ ಒಬ್ಬ ವೃದ್ಧ ಮಹಿಳೆಯು ಒಂದು ಪೂರಾ ಬೇರೆಯಾದ ಸಂಸ್ಕೃತಿಯಿಂದ ಬಂದವಳಂತೆ ತೋರುತ್ತಿದ್ದಳು. ನಮ್ಮ ಕಿವಿಗಳಿಗೆ ವಿಚಿತ್ರವಾಗಿ ಕೇಳಿಸಿದ ಒಂದು ಭಾಷೆಯಲ್ಲಿ ಸಹ ಅವಳು ಮಾತಾಡುತ್ತಿದ್ದಳು. “ಪುನಃ ಬನ್ನಿರಿ,” ಎಂದಳವಳು ಉತ್ಸಾಹದಿಂದ. ತನ್ನ ಸುತ್ತಲೂ ಕೂತಿದ್ದ ಅವಳ ಗೋತ್ರದ ಇನ್ನು 50 ಮಂದಿಗೆ ಕೈತೋರಿಸುತ್ತಾ, ಆಕೆ ಮತ್ತೂ ಅಂದದ್ದು: “ನಾವೆಲ್ಲರು ನೀವು ಪುನಃ ಬರುವಂತೆ ಬಯಸುತ್ತೇವೆ. ಪ್ರತೀ ವಾರ ಬನ್ನಿರಿ!”
ಈ ಜನರು ಯಾರು? ನಾವು ಹಿಂದೆ ಅವರನ್ನೆಂದೂ ಭೇಟಿಯಾಗಿರದ್ದಿರ್ದೂ, ನಾವು ಪುನಃ ಬರುವಂತೆ ಅವರು ಅಷ್ಟು ಆತುರದಿಂದ ಇದದ್ದೇಕ್ದೆ? ಈಶಾನ್ಯ ಕೊಲಂಬಿಯದ ಲಾ ಗ್ವಾಹಿರ ದ್ವೀಪಕಲ್ಪದಲ್ಲಿ ಮತ್ತು ಸಮೀಪದ ವಾಯುವ್ಯ ವೆನಿಜುವೆಲಾದಲ್ಲಿ ನಿವಾಸಿಸುವ ಗೊವಾಹಿರೊ ಇಂಡಿಯನರ ನಡುವೆ ನಾವು ಕಳೆದ ಒಂದು ದಿನದ ಕುರಿತು ನಿಮಗೆ ತಿಳಿಸುವಂತೆ ಅವಕಾಶಕೊಡಿರಿ.
ಮೊದಲ ತೋಚಿಕೆಗಳು
ವೆನಿಜುವೆಲಾದ ಪ್ರಧಾನ ಪಟ್ಟಣವಾದ ಕಾರಕ್ಕಾಸ್ನಿಂದ ಹೊರಟ ನಮ್ಮ ಮೊದಲನೆಯ ನಿಲ್ಲೆಡೆಯು ಮರಾಕೈಬೋ ಆಗಿತ್ತು. ಪಟ್ಟಣದ ಕಡೆಗೆ ನಾವು ವಾಹನ ನಡಿಸಿದಾಗ, ಉದನ್ದೆಯ ವರ್ಣರಂಜಿತ ಅಂಗಿಗಳನ್ನು ತೊಟ್ಟ ಮೂವರು ಯುವತಿಯರು ದಾರಿಯಲ್ಲಿ ನಡೆಯುತ್ತಾ ಹೋಗುವುದನ್ನು ಗಮನಿಸಿದೆವು. ವೆನಿಜುವೆಲಾದ ಜನರ ಸಾಮಾನ್ಯ ಮುಖಲಕ್ಷಣಗಳಿಗಿಂತ ಇವರದ್ದು ಬೇರೆಯಾಗಿತ್ತು—ಎತ್ತರವಾದ ಕೆನ್ನೆಯೆಲುಬು, ಕಂದು ಮೈಬಣ್ಣ, ನೇರವಾದ ಕಪ್ಪು ಕೂದಲು. ಅವರ ಹಾಯಾದ ಸೊಬಗಿನ ನಡಿಗೆಯನ್ನು ಗಮನಿಸಿದ ನಮ್ಮ ಕುತೂಹಲವು, ಗೊವಾಹಿರೊ ಇಂಡಿಯನರ ಮೊದಲ ದರ್ಶನದಿಂದ ಕೆರಳಿಸಲ್ಪಟ್ಟಿತು.
ಲಾ ಗ್ವಾಹಿರ ದ್ವೀಪಕಲ್ಪಕ್ಕೆ ನಮ್ಮ ಸಂದರ್ಶನದ ದಿನದಾರಂಭವು ಶುಭ್ರ ಹಾಗೂ ಸ್ತಬ್ಧವಾಗಿತ್ತು. ಬೆಳಗ್ಗಿನ ಸೂರ್ಯನು ತೀರಾ ಬಿಸಿಯಾಗುವ ಮೊದಲು, ಇಲ್ಲಿ ವೆನಿಜುವೆಲಾದಲ್ಲಿ ಬಹುಮೂಲೆಯ ಕ್ಷೇತ್ರಗಳಿಗೆ ಬೈಬಲ್ ಸಂದೇಶವನ್ನೊಯ್ಯುವ ರಾಷ್ಟ್ರವ್ಯಾಪಕ ವಿಶೇಷ ಚಟುವಟಿಕೆಯಲ್ಲಿ, ಒಂದು ಪಾಲನ್ನು ತಕ್ಕೊಳ್ಳುವ ಆತುರದಿಂದಿದ್ದ ನಾವು 50 ಮಂದಿ ಒಂದು ಬಸ್ಸನ್ನು ಏರಿದೆವು. ನಾವು ಕೊಲಂಬಿಯದ ಗಡಿನಾಡಿನ ಪರಾಗಚ್ವಾನ್ ಊರಿಗೆ ಹೊರಟಿದ್ದೆವು.
ಮರಕೈಬೋ ಪಟ್ಟಣವನ್ನು ಬಿಟ್ಟು, ಪ್ರತಿಯೊಂದರಲ್ಲಿ ಒಂದು ಮಾರ್ಕೆಟ್ ಮತ್ತು ನೇಯ್ದ ಕೆರಗಳನ್ನು ಮತ್ತು ಮಂಟಸ್ ಎಂದು ಕರೆಯಲ್ಪಡುವ ಬಣ್ಣಬಣ್ಣದ ಉದ್ದ ನಿಲುವಂಗಿಗಳನ್ನು ಮಾರುತ್ತಿದ್ದ ಕೆಲವು ಅಂಗಡಿಗಳಿದ್ದ ಅನೇಕ ಚಿಕ್ಕ ಊರುಗಳನ್ನೂ ಹಳ್ಳಿಗಳನ್ನೂ ನಾವು ದಾಟಿಹೋದೆವು. ಪ್ರತಿಯೊಂದು ಹಳ್ಳಿಗೆ ಒಂದು ನೀಟಾದ, ಕೇಂದ್ರೀಯ ಪೇಟೆ ಚೌಕವೂ ನೀಲವರ್ಣಗಳ ಒಂದು ಚರ್ಚೂ ಇದ್ದು ಒಂದು ಆಹ್ಲಾದಕರ ದೃಶ್ಯವನ್ನು ಕೊಟ್ಟಿತ್ತು. ಎಲ್ಲಾ ಜನರಲ್ಲಿ ಇಂಡಿಯನರ ವಿಶೇಷ ಲಕ್ಷಣಗಳಿದ್ದವು. ಅವರು ನಮಗೆ ಅಷ್ಟು ಬೇರೆಯಾಗಿ ಕಂಡರೂ, ಇವರು ವೆನಿಜುವೆಲಾದ ಮೂಲನಿವಾಸಿಗಳಲ್ಲಿ ಕೆಲವರು ಎಂಬದನ್ನು ನಾವು ನಮಗೆ ಜ್ಞಾಪಕಕೊಡಿಸಬೇಕಾಯಿತು.
ಮನೆಗಳ ಹುಡುಕಾಟದಲ್ಲಿ
ಕೊನೆಗೆ ನಾವು ನಮ್ಮ ಗಮ್ಯಸ್ಥಾನಕ್ಕೆ ಆಗಮಿಸಿದೆವು. ನಮ್ಮ ಬಸ್ಸು ದಾರಿಯ ಪಕ್ಕಕ್ಕೆ ಸರಿದು, ಒಂದು ತಗ್ಗಾದ ಗೋಡೆಯ ಬಳಿ ವಿಸ್ತಾರವಾಗಿ ಚಾಚಿದ್ದ ಒಂದು ದೊಡ್ಡ ವೃಕ್ಷದ ನೆರಳಿನಲ್ಲಿ ನಿಂತಿತು. ಗೋಡೆಯ ಆಚೇಕಡೆಯಲ್ಲಿ ಸ್ಥಳೀಕ ಗ್ರಾಮೀಣ ಶಾಲೆಯಿತ್ತು—ಅದು ಮುಚ್ಚಿತ್ತು ಯಾಕಂದರೆ ಅದು ಭಾನುವಾರವಾಗಿತ್ತು.
ಎರಡು ಗುಂಪುಗಳಾಗಿ ವಿಂಗಡಿಸಿ, ನಾವು ಮನೆಗಳಿಗಾಗಿ ಹುಡುಕುತ್ತಾ ವಿರುದ್ಧ ದಿಕ್ಕುಗಳಿಗೆ ಹೊರಟೆವು. ಆ ದಿನ ಮೂರು ಗಂಟೆಗೆ ಶಾಲಾ ವಠಾರದಲ್ಲಿ ಗೊವಾಹಿರೊ ಭಾಷೆಯಲ್ಲಿ ಕೊಡಲ್ಪಡುವ ಒಂದು ಬೈಬಲ್ ಭಾಷಣಕ್ಕಾಗಿ ಪ್ರತಿಯೊಬ್ಬನನ್ನು ನಾವು ಆಮಂತ್ರಿಸಲಿಕ್ಕಿದ್ದೆವು. ಗೊವಾಹಿರೊ ಇಂಡಿಯನ್ ನಾಡಿಗಳಾಗಿದ್ದ ಎವೆಲಿಂಡ ನಮ್ಮ ಸಂಗಡಿಗಳಾಗಿದ್ದಳು. ಇದು ನಮ್ಮನ್ನು ಹೆಚ್ಚು ಸ್ವೀಕರಣೀಯವಾಗಿ ಮಾಡುವದೆಂದು ನಾವು ನಿರೀಕ್ಷಿಸಿದೆವು ಯಾಕಂದರೆ ನಮಗೆ ಸ್ಪಾನಿಷ್ ಭಾಷೆ ಬರುತ್ತಿದ್ದರೂ ಗೊವಾಹಿರೊ ಭಾಷೆಯ ಕುರಿತು ನಮಗೇನೂ ತಿಳಿದಿರಲಿಲ್ಲ.
ಹಳ್ಳಿಯ ಹೊರಗೆ ಹೋದ ಮೇಲೆ, ಮನೆ-ಮನೆಗಳ ನಡುವೆ ನಮಗೆ ತುಂಬಾ ನಡಿಯಲಿಕ್ಕಿತ್ತು. ಇಕ್ಕಡೆಗಳಲ್ಲಿ ದಟ್ಟವಾದ ಪೊದೆಗಳಿಂದ ಕೂಡಿದ ಒಂದು ಉದ್ದವಾದ ನೇರ ದಾರಿಯನ್ನು ನಾವು ನಡೆಯುತ್ತಾ ಇದ್ದಾಗ, ಸುಮಾರು ಹತ್ತು ವರ್ಷದ ಬಾಲಕನೊಬ್ಬನು ಬಂದು ನಮ್ಮ ಪಕ್ಕದಲ್ಲಿ ನಡೆಯುತ್ತಾ ಪ್ರತ್ಯಕ್ಷ ಕುತೂಹಲದಿಂದ ನಮ್ಮನ್ನು ಎವೆಯಿಕ್ಕದೆ ನೋಡತೊಡಗಿದನು. ಎವೆಲಿಂಡ ಅವನನ್ನು ನೋಡಿ ನಸುನಗುತ್ತಾ, ಆ ಕ್ಷೇತ್ರಕ್ಕೆ ನಮ್ಮ ಸಂದರ್ಶನದ ಉದ್ದೇಶವನ್ನು ಗೋವಾಹಿರೊ ಭಾಷೆಯಲ್ಲಿ ತಿಳಿಸಿದಳು. ಅವನ ಹೆಸರು ಓಮರ್, ಮತ್ತು ನಾವು ಅವನನ್ನು ಭಾಷಣಕ್ಕೆ ಆಮಂತ್ರಿಸಿದ ಬಳಿಕ ಅವನು ಅಲ್ಲಿಂದ ಓಟಕಿತ್ತ.
ದಾರಿಯನ್ನು ಬಿಟ್ಟುಹೊರಟು, ಇತ್ತೀಚಿನ ಮಳೆಯಿಂದಾಗಿ ಇನ್ನೂ ಒದೆಯ್ದಾಗಿದ್ದ ಒಂದು ಕಾಲುದಾರಿಗೆ ನಾವಿಳಿದೆವು. ಇದು ಕೊಲಂಬಿಯ ಮತ್ತು ವೆನುಜುವೆಲದ ನಡುವಣ ಕಳ್ಳಸಾಗಣೆಗಾರರ ಹಾದಿಗಳೆಂದು ನಮಗೆ ತಿಳಿಯಿತು. ಹುಲುಸಾಗಿ ಬೆಳೆದ ಸಸ್ಯದ ಸುವಾಸನೆಯಿಂದ ವಾಯುವು ಜಡವಾಗಿತ್ತು. ಒದೆಯ್ದಾದ ಸೆಕೆಯು ತುಸು ದುಃಸಹನೀಯವಾಗಿದ್ದರೂ, ಅದು ನಮ್ಮ ಉತ್ಸಾಹಭಂಗ ಮಾಡಲಿಲ್ಲ. ಹೇಗಿದ್ದರೂ, ಉಷ್ಣವಲಯದ ದಟ್ಟ ಹಸುರುಸಸ್ಯಗಳಿಂದ ತುಂಬಿದ ಹಾದಿಯು ದಿಢೀರನೇ ಒಂದು ವಿಶಾಲವಾದ ತೆರಪು ಪ್ರದೇಶಕ್ಕೆ—ಲಾಕ್ಷಣಿಕ ಗೊವಾಹಿರೊ ಹೊಲಮನೆಗೆ ತೆರೆದಾಗ, ಎಲ್ಲಾ ಅನಾನುಕೂಲತೆಗಳು ಮರೆತುಹೋದವು.
ಗೊವಾಹಿರೊದೊಡನೆ ಮುಖಾಮುಖಿಯಾಗಿ
ಸುಂದರವಾದ ಬಿಳಿ, ಕಪ್ಪು ಮತ್ತು ಬಿಸಿಲುಗಂದು ಚುಕ್ಕೆಗಳಿಂದ ಕೂಡಿದ ಸುಮಾರು ಒಂದು ಡಜನು ಆಡುಗಳು ನೆರಳಿನಲ್ಲಿ ಮಲಗಿದ್ದು, ಸಂತೃಪ್ತಿಯಿಂದ ಮೆಲುಕಾಡುತ್ತಿದ್ದವು. ಎರಡು ಮರಗಳ ನಡುವೆ ಚಾಚಲ್ಪಟ್ಟ ಜೋಲೆಯಲ್ಲಿ ಮಲಗಿದ್ದ ಒಬ್ಬ ಹೆಂಗಸು ತನ್ನ ಮಗುವಿಗೆ ಉಣ್ಣಿಸುತ್ತಿದ್ದಳು. ಹಲವು ಪುಟ್ಟ ಮಕ್ಕಳು ಬಳಿಯಲ್ಲೇ ಆಟವಾಡುತ್ತಿದ್ದರು. ಅವಳು ಹಸಿಮಣ್ಣು ಮತ್ತು ಬೆತ್ತದಿಂದ ಮಾಡಿದ್ದ ಒಂದು ಹುಲ್ಲುಮಾಡಿನ ಮನೆಯನ್ನು ಸುತ್ತುವರಿದಿದ್ದ ಕಡ್ಡಿ ಮತ್ತು ಸರಿಗೆಯ ಬೇಲಿಯ ತುಸು ಹೊರಗಿದ್ದಳು. ಅಲ್ಲಿ ಕೆಲವು ತೆರೆದ ಕೊಟ್ಟಿಗೆಗಳಿದ್ದವು. ಅಡಿಗೆಮನೆಯಂತೆ ಕಂಡ ಒಂದರಲ್ಲಿ ಕಡಾಯಿಯಂಥ ದೊಡ್ಡ ಪಾತ್ರೆಗಳ ನಡುವೆ ಒಂದು ಕಟ್ಟಿಗೆಯ ಒಲೆಯು ಉರಿಯುತ್ತಿತ್ತು. ಒಣಗಲಿಕ್ಕೆ ಹಾಕಿದ್ದ ಆಡಿನ ಚರ್ಮಗಳು ಸಮೀಪದಲ್ಲಿ ನೇತಾಡುತ್ತಿದ್ದವು.
ನಾವು ಬರುವುದನ್ನು ನೋಡಿದಾಗ ಗೇಟಿನ ಬಳಿಯಲ್ಲಿ ನಿಂತಿದ್ದ ಒಬ್ಬ ಮನುಷ್ಯನು ಓಡಿ ಹೋಗಿ ಎರಡು ಸ್ಟೂಲ್ಗಳನ್ನು ತಂದು ಜೋಲಿಯಲ್ಲಿದ್ದ ಆ ಸ್ತ್ರೀಯ ಸಮೀಪ ನಮಗಾಗಿ ಇಟ್ಟನು. ಎವೆಲಿಂಡ ಆ ಪುರುಷನನ್ನು ಮತ್ತು ಹೆಂಗಸನ್ನು ಅವರ ಭಾಷೆಯಲ್ಲಿ ವಂದಿಸಿ, ಭೂಮಿಯಲ್ಲಿ ಸದಾ ಜೀವನವನ್ನು ಆನಂದಿಸಿರಿ! ಸಚಿತ್ರ ಬ್ರೋಷರನ್ನುಪಯೋಗಿಸಿ ಭವಿಷ್ಯಕ್ಕಾಗಿರುವ ಶಾಸ್ತ್ರೀಯ ನಿರೀಕ್ಷೆಯನ್ನು ಅವರಿಗೆ ವಿವರಿಸಿದಳು. ಅಂತರ್ರಾಷ್ಟ್ರೀಯ ಬಿಕ್ಕಟ್ಟುಗಳು ಮತ್ತು ಜನನಿಬಿಡ ಕೇರಿಗಳಲ್ಲಿ ಪಾತಕಗಳ ವೃದ್ಧಿಯ ಚರ್ಚೆಯು ಇಲ್ಲಿ ಯುಕ್ತವಾದ ವಿಷಯಗಳಲ್ಲವೆಂದು ಆ ಕ್ಷೇತ್ರದಲ್ಲಿದ್ದ ಶಾಂತಿಯುಕ್ತ ಪರಿಸ್ಥಿತಿಗಳು ನಮಗೆ ತಿಳಿಸಿದವು. ಗೊವಾಹಿರೊ ಇಂಡಿಯನರು ಸ್ವಾಭಾವಿಕವಾಗಿ ಸಂಕೋಚ ಪ್ರಕೃತಿಯವರಾಗಿರುವುದರಿಂದ ಆರಂಭದಿಂದಲೇ ಬೆಚ್ಚನೆಯ ಮತ್ತು ನೈಜವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸಬೇಕೆಂದು ಗುಂಪಿನ ಒಬ್ಬ ಸಾಕ್ಷಿ ವಿವರಿಸಿದ್ದಳು. “ಕುಟುಂಬದ ಕ್ಷೇಮದ ಕುರಿತು, ಬೆಳೆಯ ಕುರಿತಾಗಿ, ಇತ್ತೀಚಿಗೆ ಮಳೆಬಂದಿತ್ತೋ ಮುಂತಾದವುಗಳನ್ನು ನಾವು ಆಗಾಗ್ಯೆ ಕೇಳುತ್ತೇವೆ” ಎಂದು ಹೇಳಿದ್ದಳು ಆಕೆ. “ಇದು, ದೇವರ ರಾಜ್ಯದ ಕುರಿತು ಮಾತಾಡಲು ಮತ್ತು ಯೆಹೋವನು ಬೇಗನೇ ಎಲ್ಲಾ ಕಷ್ಟಾನುಭವವನ್ನು, ಮತ್ತು ಅವರು ವಿಶೇಷವಾಗಿ ಯಾರಿಗೆ ಹೆದರುತ್ತಾರೋ ಆ ಪಿಶಾಚನಾದ ಸೈತಾನನನ್ನೂ ತೆಗೆದುಹಾಕಲಿದ್ದಾನೆ ಎಂದು ಅವರಿಗೆ ತೋರಿಸಲು ದಾರಿಯನ್ನು ತೆರೆಯುತ್ತದೆ.”
ಎವೆಲಿಂಡ ಮಾತಾಡಿದಷ್ಟಕ್ಕೆ ಆಕೆಗೆ ಕಿವಿಗೊಡುತ್ತಿದ್ದವರು ಸಹಮತವನ್ನು ವ್ಯಕ್ತಪಡಿದರು, ಮತ್ತು ಬೇಗನೇ ಇನ್ನೊಂದು ಹೆಂಗಸು ಮತ್ತು ಹಲವಾರು ಮಕ್ಕಳು ನಮ್ಮನ್ನು ಜತೆಗೂಡಿದರು. ಗೊವಾಹಿರೊ ನಿಯಮವು ಒಬ್ಬ ಪುರುಷನಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರಿರುವುದನ್ನು ಅನುಮತಿಸುತ್ತದೆಂದು ನಮಗೆ ಮುಂಚೆಯೇ ತಿಳಿದಿತ್ತು. ಇಲಿಯ್ಲೂ ವಿಷಯವು ಹಾಗಿರಬಹುದೋ? ಇದು ನಮ್ಮನ್ನು ಮರಕೈಬೋದಲ್ಲಿ ವಾಸಿಸುತ್ತಿದ್ದ 21 ವರ್ಷ ವಯಸ್ಸಿನ ಆಕರ್ಷಕ ಗೊವಾಹಿರೊ ಯೆನ್ನಿಯ ಕುರಿತು ಯೋಚಿಸುವಂತೆ ಮಾಡಿತು. ಒಬ್ಬ ಐಶ್ವರ್ಯವಂತ ಗೊವಾಹಿರೊ ಪುರುಷನು ಅವಳಿಗಾಗಿ ಒಳ್ಳೇ ವಧೂದಕಿಣ್ಷೆಯನ್ನು ಕೊಡಲು ಸಿದ್ಧನಿದ್ದನು. ಆದರೆ ಯೆಹೋವನ ಸಾಕ್ಷಿಗಳಲ್ಲದ ಅವಳ ಹೆತ್ತವರಿಗೆ, ಭಿನ್ನಾಭಿಪ್ರಾಯಗಳಿದ್ದವು. ತಾಯಿಯು ವಿವಾಹ ಸಂಬಂಧವನ್ನು ಒಪ್ಪಿದರೂ ಯೆನ್ನಿಯ ತಂದೆಯು ಬೇಡವೆಂದನು. ಮದುವೆಗಾಗಿ ಕೇಳಿದವನಿಗೆ ಯೆನ್ನಿಯ ಸಹೋದರಿಯೊಂದಿಗೆ ಈ ಮೊದಲೇ ಮದುವೆಯಾಗಿತ್ತು!
ಎವೆಲಿಂಡ ತನ್ನ ಪ್ರಸಂಗವನ್ನು ಮುಗಿಸಿದ ಅನಂತರ, ಆ ಪುರುಷನು ಒಂದು ಬ್ರೋಷರನ್ನು ತಕ್ಕೊಂಡನು. ಅವನ ಹಿಂದೆ ನಿಂತಿದ್ದ ಹೆಂಗಸು ಸಹ ಒಂದು ಬೇಕೆಂದಳು, ನಾವದನ್ನು ನೀಡಲು ಸಂತೋಷಿಸಿದೆವು. ಅಷ್ಟರೊಳಗೆ ನಮ್ಮ ಉಳಿದ ಮಿತ್ರರು ಕಾಯದೆ ಹೊರಟುಹೋಗಿದ್ದರು. ಆದ್ದರಿಂದ ನಾವು ಈ ಅಪರಿಚಿತ ಹಳ್ಳಿಗಾಡಿನಲ್ಲಿ ಕಾಣೆಯಾಗಲು ಬಯಸದೆ, ಕುಟುಂಬವನ್ನು ಮಧ್ಯಾಹ್ನದ ಭಾಷಣಕ್ಕೆ ಆಮಂತ್ರಿಸಿ ಅಲ್ಲಿಂದ ಹೊರಟೆವು.
ಗುಂಪಿನಲ್ಲಿದ್ದ ಒಬ್ಬ ಸಾಕ್ಷಿ ತನಗೇನು ಸಂಭವಿಸಿತ್ತೆಂದು ವಿವರಿಸಿದನು. ಜೋಲಿಯಲ್ಲಿದ್ದ ಒಬ್ಬ ಮನುಷ್ಯನು ಅವನಿಗೆ ಕಿವಿಗೊಟ್ಟು ಕೇಳುತ್ತಿದ್ದಾಗ ಅವನ ಹೆಂಡತಿಯು ಅರೆದ ಜೋಳದಿಂದ ಮಾಡಲ್ಪಟ್ಟ ಎರಡು ಗ್ಲಾಸು ಚೀಚಾ ಪಾನೀಯವನ್ನು ತಂದುಕೊಟ್ಟಳು. ವಿನಯದಿಂದ ನಮ್ಮ ಸಹೋದರರು ಅದನ್ನು ಸ್ವೀಕರಿಸಿ ಕುಡಿದರು. ತದನಂತರ ಅವನ ಗೊವಾಹಿರೊ ಸಂಗಡಿಗಳಾದ ಮಗಲಿ ಆ ಪಾನೀಯವು ಮಾಡಲ್ಪಟ್ಟ ವಿಧಾನವನ್ನು ವಿವರಿಸಿದಳು. ಸಾಮಾನ್ಯವಾಗಿ ಜೋಳವನ್ನು ಹಲಿನ್ಲಿಂದ ಜಗಿದು ಪುಡಿಮಾಡುತ್ತಾರೆ! ಅವನ ಮುಖವು ನಿಸೇಜ್ತಗೊಳ್ಳುವುದನ್ನು ಕಂಡಾಗ ಅವಳಿಗೆ ನಗೆಯ ಬಿರಿಯನ್ನು ತಡೆಯಲಾಗಲಿಲ್ಲ.
ಬೈಬಲ್ ಸಂದೇಶದೊಂದಿಗೆ ತನ್ನ ಮನೆಯನ್ನು ತಲಪಲು ನಮ್ಮ ಸಹೋದರನು ಮಾಡಿದ ಪ್ರಯತ್ನದಿಂದ ಪ್ರತ್ಯಕ್ಷವಾಗಿ ಪ್ರಭಾವಿತನಾದ ಇನ್ನೊಬ್ಬ ಇಂಡಿಯನ್ ಗೃಹಸ್ಥನು, ತನ್ನ ಜೋಲಿಯಿಂದ ಕೆಳಗಿಳಿದು ಬಂದನು. ಒಂದು ಶರ್ಟನ್ನು ಧರಿಸಿ, ಅವನು ವೈಯಕ್ತಿಕವಾಗಿ ಅವರನ್ನು ದೃಷ್ಟಿಗೆ ಬೀಳದೆ ಹೋಗಿದ್ದ ಮರೆಯಾದ ಒಂದು ವಸತಿಗೆ ನಡಿಸಿದನು.
ಕುಟುಂಬದ ಪ್ರೌಢರೊಂದಿಗೆ ಎಲ್ಲಿ ನಮ್ಮ ಮಿತ್ರರು ಸಂಭಾಷಿಸುತ್ತಿದ್ದರೋ ಆ ಇನ್ನೊಂದು ತೆರಪು ಜಾಗವನ್ನು ಹಾದುಹೋಗುವಾಗ, ಒಂದು ಮರದ ಕೆಳಗೆ ಮೌನವಾಗಿ ನಿಂತಿದ್ದ ಉಬ್ಬಿದ ಹೊಟ್ಟೆಗಳ ನಗ್ನ ಮಕ್ಕಳು ನಮ್ಮ ದೃಷ್ಟಿಗೆ ಬಿದ್ದರು. ಈ ಪರಿಸ್ಥಿತಿಗೆ ನ್ಯೂನಪೋಷಣೆ ಮತ್ತು ಪರೋಪಜೀವಿಗಳ ಸಂಯೋಗವು ಕಾರಣವೆಂದು ನಮಗೆ ತಿಳಿಯಿತು. ಇವರಲ್ಲಿ ಹೆಚ್ಚಿನ ಜನರಿಗೆ ಕೊಳವೆಯ ನೀರು ಸರಬರಾಯಿ ಇಲ್ಲ ಮತ್ತು ವಿದ್ಯುಚ್ಛಕ್ತಿಯೂ ಇಲ್ಲ. ಅಂದರೆ ರೆಫ್ರಿಜೆರೇಟರ್, ಫ್ಯಾನ್ ಮತ್ತು ಲೈಟುಗಳೂ ಇಲ್ಲ ನಿಶ್ಚಯ.
ಒಂದು ಅನಿರೀಕ್ಷಿತ ಹಾಜರಿ
ಬೆಳಗ್ಗೆ ಬೇಗ ದಾಟಿಹೋಯಿತು. ನಮ್ಮ ಮಧ್ಯಾಹ್ನದೂಟ ಮಾಡಲು ಬಸ್ಸಿಗೆ ಹಿಂದೆ ಹೋದಾಗ, ಅಪರಾಹ್ನದ ಬೈಬಲ್ ಭಾಷಣಕ್ಕೆ ಆಮಂತ್ರಿಸಲ್ಪಟ್ಟವರಲ್ಲಿ ಎಷ್ಟು ಮಂದಿ ಬಂದಾರು ಎಂದು ನಾವು ಯೋಚಿಸಿದೆವು.
ಅಪರಾಹ್ನ 2:45 ಕ್ಕೆ, ನಮ್ಮ ಗೊವಾಹಿರೊ ಸಹೋದರನು ಸ್ಥಳೀಕ ಭಾಷೆಯಲ್ಲಿ ತಯಾರಿಸಿದ್ದ 45 ನಿಮಿಷಗಳ ಭಾಷಣಕ್ಕೆ ನಮ್ಮ ಬಸ್ಸಿನ ಗುಂಪು ಮಾತ್ರವೇ ಸಭಿಕರೋ ಏನೋ ಎಂದು ನಾವು ಯೋಚಿಸತೊಡಗಿದೆವು. ಆದರೆ ಅಲ್ಲ! ಮೊದಲನೆಯ ಆ ಚಿಕ್ಕ ಕುಟುಂಬವು ಸಂಕೋಚದಿಂದ ಶಾಲಾ ವಠಾರವನ್ನು ಪ್ರವೇಶಿಸಿತು. ಪ್ರತಿಯೊಬ್ಬರು ಅವರನ್ನು ಆದರದಿಂದ ಬರಮಾಡಿಕೊಂಡಾಗ ಅವರಿಗೆ ಆಚ್ಚರಿಯಾಗಿದ್ದಿರಲೇ ಬೇಕು. ಮುಂದಿನ ಕೆಲವು ನಿಮಿಷಗಳಲ್ಲಿ ಇನ್ನು ಅನೇಕರು ಆಗಮಿಸಿದರು, ಕೆಲವರು ಬಹುದೂರದಿಂದ ನಡೆದು ಬಂದಿರಬೇಕೆಂಬದು ವ್ಯಕ್ತ. ತೆರಪು ಜಾಗದಲ್ಲಿ ವಾಸಿಸುತ್ತಿದ್ದ ಒಂದು ಡಜನು ಆಡುಗಳಿದ್ದ ಆ ಕುಟುಂಬವು ಸಹ ಬಂದಿತ್ತು! ಜೋಲಿಯಲ್ಲಿದ್ದ ಆ ಹೆಂಗಸು ಅವಳ ನೀಟಾದ ಕಪ್ಪು ಮಂಟದಲ್ಲಿ ಎಷ್ಟು ಬೇರೆಯಾಗಿ ಕಾಣುತ್ತಿದ್ದಳು! ನಾವು ದಾರಿಯಲ್ಲಿ ಮಾತಾಡಿದ್ದ ಆ ಚಿಕ್ಕ ಓಮರ್ ಕೂಡ ಬಂದಿದ್ದ, ಒಬ್ಬಂಟಿಗನಾಗಿಯೇ. ಬೇರೆಯವರು ಬಂದ ಹಾಗೆ ಬೆಂಚು ಆಗಿ ಕಾರ್ಯನಡಿಸಿದ ಶಾಲಾ ವಠಾರದ ಒಂದು ಉದ್ದ, ಸಿಮೆಂಟಿನ ಮೆಟ್ಟಲು ತುಂಬಿಹೋಯಿತು. ಮತ್ತು ಭಾಷಣದ ಸಮಯ ಜನರು ಕೂತುಕೊಳ್ಳುವಂತೆ ನಮ್ಮ ಬಸ್ ಡ್ರೈವರ್ ಮಿತ್ರನು ಬಸ್ಸಿನ ಸೀಟುಗಳನ್ನು ಹೊರಗೆಳೆಯಲಾರಂಭಿಸಿದನು.
ಒಟ್ಟಿಗೆ 55 ಮಂದಿ ಗೊವಾಹಿರೊ ಇಂಡಿಯನರು, ಎಡರ್ಡ್ವೊ ಬೈಬಲ್ ಭಾಷಣ ಕೊಟ್ಟಾಗ ಕಿವಿಗೊಡುತ್ತಾ ಕುಳಿತರು. ಆದರೂ ಪೂರಾ ಮೌನವಾಗಿ ಅವರು ಕೂಡ್ರಲಿಲ್ಲ. ಭಾಷಣಕಾರನು ಹೇಳಿದ ಒಂದು ವಿಷಯಕ್ಕೆ ಅವರು ಸಹಮತದಿಂದಿದ್ದರೆ, ಮರ್ಮರ ದ್ವನಿಯಲ್ಲಿ ಅಥವಾ ಗುರುಗುಟ್ಟಿ ಅವರು ತಮ್ಮ ಸಮ್ಮತಿ ಸೂಚಿಸುತ್ತಿದ್ದರು. ಬರಲಿರುವ ದುಷ್ಟತೆಯ ಅಂತ್ಯದ ಕುರಿತು ಅವನು ಮಾತಾಡಿದಾಗ, ಆರಂಭದಲ್ಲಿ ತಿಳಿಸಲಾದ ಆ ವೃದ್ಧ ಮಹಿಳೆಯು ದ್ವನಿಗೂಡಿಸಿದಳು. “ಹೌದು, ದುಷ್ಟತನವು ಬಹಳವಿದೆ,” ಎಂದಳವಳು, ಎಲ್ಲರಿಗೂ ಕೇಳುವಂತೆ ಸಾಕಷ್ಟು ಗಟ್ಟಿಯಾಗಿ. “ವಾಸ್ತವದಲ್ಲಿ ಕೆಲವು ದುಷ್ಟರು ಈಗ ಇಲಿಯ್ಲೂ ಕೂತಿದ್ದಾರೆ. ಅವರು ಕಿವಿಗೊಡುತ್ತಿದ್ದಾರೆಂದು ನಾನು ನಿರೀಕ್ಷಿಸುತ್ತೇನೆ!” ಎಡರ್ಡ್ವೊ ಜಾಣ್ಮೆಯಿಂದ ಹೇಳಿಕೆಯನ್ನು ಅಂಗೀಕರಿಸಿದನು ಮತ್ತು ತನ್ನ ಭಾಷಣವನ್ನು ಮುಂದುವರಿಸಿದನು.
ಭಾಷಣ ಮುಗಿದ ನಂತರ ಒಬ್ಬನು ನಮ್ಮ ಗುಂಪಿನ ಫೋಟೋ ತೆಗೆದನು. ಗೊವಾಹಿರೊ ಜನರಿಗೆ ಅದು ಇಷ್ಟವಾಯಿತು ಮತ್ತು ಇನ್ನೊಂದು ಫೋಟೋಗಾಗಿ ತಾವು ತಮ್ಮ ಸದಾ ಜೀವನವನ್ನು ಆನಂದಿಸಿರಿ! ಬ್ರೋಷರನ್ನು ಎತ್ತಿಹಿಡಿಯಬೇಕೋ ಎಂದು ಕೇಳಿದರು. ಕೆಲವರು ಕ್ರಮೇಣ ಹೊರಟು ಹೋದರು, ಆದರೆ ಸುಮಾರು ಅರ್ಧದಷ್ಟು ಜನರು ಅಲ್ಲಿಯೇ ನಿಂತು ನಾವು ಬಸ್ಸು ಹತ್ತುವುದನ್ನು ನೋಡಿದರು. ನಾವು ಪುನಃ ಬರುವಂತೆ ನಮ್ಮಿಂದ ವಚನ ಪಡಕೊಂಡರು ಮತ್ತು ಬಸ್ಸು ಕಣ್ಮರೆಯಾಗಿ ಹೋಗುವ ತನಕ ಕೈಬೀಸಿ ಬೀಳ್ಕೊಡುತ್ತಾ ನಿಂತರು.
ನಾವು ಹಿಂತಿರುಗಿ ಹೋಗುತ್ತಿದ್ದಾಗ, ದೇವರ ರಾಜ್ಯದ ಸುವಾರ್ತೆಯನ್ನು ಈ ಜನರಿಗೆ ಕೊಂಡೊಯ್ದದ್ದು ಒಂದು ಸುಯೋಗ ಎಂಬ ಅನಿಸಿಕೆಯು ನಿಶ್ಚಯವಾಗಿಯೂ ಆಯಿತು. ಹೆಚ್ಚಿನ ಸಂದರ್ಭಗಳಲ್ಲಿ ಅವರದನ್ನು ಕೇಳಿದ್ದು ಅದು ಮೊದಲನೆಯ ಸಲ. ಮರಕೈಬೋದಲ್ಲಿ ಸಾಕ್ಷಿಗಳು ಈವಾಗಲೆ ತಮ್ಮ ಮುಂದಿನ ಸಂದರ್ಶನದ ಕುರಿತು ಮಾತಾಡುತ್ತಿದ್ದರು. ಈ ಕಥೆಗೆ ಒಂದು ಫಲಿತಾಂಶವು ಇರಲಿದೆಯೇ?
ಒಂದು ಸಾಫಲ್ಯಯುಕ್ತ ಫಲಿತಾಂಶ
ಎರಡು ವಾರಗಳ ಅನಂತರ ಸಹೋದರರು ಹಿಂತಿರುಗಿ ಬಂದರು. ಬೈಬಲ್ ಸಾಹಿತ್ಯಗಳ ತುಂಬಾ ನೀಡುವಿಕೆಯಾಯಿತು, ಆಸಕ್ತ ಜನರನ್ನು ಪುನಃಸಂದರ್ಶಿಸಲಾಯಿತು, ಮನೆ ಬೈಬಲ್ ಅಧ್ಯಯನಗಳು ಪ್ರಾರಂಭಿಸಲ್ಪಟ್ಟವು. ಅದಲ್ಲದೆ, 79 ಇಂಡಿಯನರು ಎರಡನೆಯ ಬಹಿರಂಗ ಕೂಟಕ್ಕೆ ಹಾಜರಾದರು. ಒಂದು ಸರ್ಕಿಟ್ ಸಮ್ಮೇಳನದ ಕಾರಣ ತಾವು ಎರಡು ವಾರಗಳ ಬದಲಿಗೆ ಮೂರು ವಾರಗಳ ಅನಂತರ ಹಿಂದೆ ಬರುತ್ತೇವೆಂದು ಆ ಸಂದರ್ಭದಲ್ಲಿ ಸಹೋದರರು ವಿವರಿಸಿದರು. ಇಂಡಿಯನರು ಗಾಬರಿಗೊಂಡರು. “ಅದಕ್ಕೆ ಮುಂಚೆ ನಾವು ಸತ್ತುಹೋಗಲೂ ಬಹುದು!” ಎಂದನು ಅವರಲ್ಲೊಬ್ಬನು. ಸರ್ಕಿಟ್ ಸಮ್ಮೇಳನ ಎಂದರೇನೆಂದು ಅವರು ಕೇಳಿದರು. ಅದು ಅವರಿಗೆಷ್ಟು ಉತ್ತಮವಾಗಿ ಹಿಡಿಸಿತ್ತೆಂದರೆ ತಾವೂ ಅಲ್ಲಿಗೆ ಹೋಗಲು ಅವರು ನಿರ್ಧರಿಸಿದರು! ಏರ್ಪಾಡುಗಳು ಮಾಡಲ್ಪಟ್ಟವು, ಮತ್ತು ಅವರಲ್ಲಿ 34 ಮಂದಿ ಮರಕೈಬೋದಲ್ಲಿ ಸಮ್ಮೇಳನಕ್ಕೆ ಹಾಜರಾಗಲು ಶಕ್ತರಾದರು. ಅಲ್ಲಿ ನಡೆದ ಸ್ಪಾನಿಷ್ ಕಾರ್ಯಕ್ರಮವನ್ನು ತಿಳುಕೊಳ್ಳಲು ಗೊವಾಹಿರೊ ಭಾಷೆಯನ್ನಾಡುವ ಸಹೋದರರು ಅವರಿಗೆ ಸಹಾಯಮಾಡಿದರು.
“ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ [ನಿಷ್ಕೃಷ್ಟ, NW] ಜ್ಞಾನಕ್ಕೆ ಬರಬೇಕು” ಎಂಬದು ಯೆಹೋವನ ಚಿತ್ತವಾಗಿದೆ. (1 ತಿಮೊಥಿ 2:3, 4) ಅಂಥ ಒಂದು ಒಳ್ಳೆಯ ಪ್ರತಿಕ್ರಿಯೆಯನ್ನು ಲಾ ಗ್ವಾಹಿರ ದ್ವೀಪಕಲ್ಪದಲ್ಲಿ ಈ ಸತ್ಯಾನೇಷ್ವಕರಾದ ಇಂಡಿಯನರ ನಡುವೆ ಕಾಣುವುದು ಅದೆಷ್ಟು ಸಂತೋಷಕರವು!
[ಪುಟ 26 ರಲ್ಲಿರುವ ಚೌಕ]
ಬೈಬಲ್ ಸತ್ಯದಿಂದ ಜೀವಿತಗಳು ಅಭಿವರ್ಧಿಸಲ್ಪಟ್ಟದ್ದು
ಐರಿಸ್ ಮತ್ತು ಮಾರ್ಗರೀಟ, ಇಬ್ಬರು ಗೊವಾಹಿರೊ ಹದಿವಯಸ್ಕರು, ಭೂಮಿಯಲ್ಲಿ ಸದಾ ಜೀವನವನ್ನು ಆನಂದಿಸಿರಿ! ಬ್ರೋಷರನ್ನು ಕಾಣಲು ಸಂತೋಷಪಟ್ಟರು. ಆದರೆ ಅವರಿಗೊಂದು ಸಮಸ್ಯೆಯಿತ್ತು. ಅವರಿಗೆ ಓದಲು ಗೊತ್ತಿರಲಿಲ್ಲ. ಅವರನ್ನು ಸಂದರ್ಶಿಸಿದ ಸಾಕ್ಷಿಯು ಲರ್ನ್ ಟು ರೀಡ್ ಆ್ಯಂಡ್ ರೈಟ್ ಕಿರುಪುಸ್ತಕದ ಮೂಲಕ ಅವರಿಗೆ ಸಹಾಯ ಮಾಡುತ್ತೇನೆಂದು ಹೇಳಿದಳು. ಬೇಗನೇ ಆ ಹುಡುಗಿಯರು ಬರೆಯಲು ಮತ್ತು ಯೆಹೋವನ ಹೆಸರನ್ನು ಸರಿಯಾಗಿ ಉಚ್ಚರಿಸಲು ಶಕ್ತರಾದದ್ದಕ್ಕಾಗಿ ಅತ್ಯಾನಂದಪಟ್ಟರು.
ಅವರು ಪ್ರಗತಿ ಮಾಡಿದಷ್ಟಕ್ಕೆ, ಬೈಬಲ್ನಲ್ಲಿ ನೀಡಲ್ಪಟ್ಟಿರುವ ಆಶ್ಚರ್ಯಕರ ನಿರೀಕ್ಷೆಯಿಂದಾಗಿ ವಿಸ್ಮಯಗೊಂಡರು. ಮಾನವ ಕುಲದವರೆಲ್ಲರು ಸ್ವಾತಂತ್ರ್ಯದಲ್ಲಿ ಆನಂದಿಸುವರೆಂಬ ವಾಗ್ದಾನದಿಂದ ಅವರು ಪ್ರಭಾವಿತರಾದರು. “ಹದಿವಯಸ್ಕರಾದ ನಮಗೆ ಇಲ್ಲಿ ಜೀವನವು ಅತಿ ಖೇಧಕರವು,” ಎಂದು ವಿವರಿಸಿದರವರು. “ಸಾಮಾನ್ಯವಾಗಿ ಅತಿ ಚಿಕ್ಕ ಪ್ರಾಯದಲ್ಲೇ ನಮಗೆ ಮದುವೆ ಮಾಡಿಬಿಡುತ್ತಾರೆ, ಮತ್ತು ಬಲಾತ್ಕಾರ ಸಂಭೋಗವು ಯಾವಾಗಲೂ ಇರುವ ಅಪಾಯವಾಗಿದೆ.”
ಮರಕೈಬೋದಲ್ಲಿ ಸರ್ಕಿಟ್ ಸಮ್ಮೇಳನವನ್ನು ಹಾಜರಾದದ್ದು ಐರಿಸ್ ಮತ್ತು ಮಾರ್ಗರೀಟರಿಗೆ ಅತ್ಯುಜಲ್ವ ವಿಷಯವಾಗಿತ್ತು. ಅವರ ಹೃದಯದಲ್ಲಾದ ಸಂತೋಷವನ್ನು, ವಿಶೇಷವಾಗಿ ಸಂಗೀತಗಳನ್ನು ಹಾಡುವ ಸಮಯದಲ್ಲಿ, ಅವರ ಮುಖಗಳು ಪ್ರತಿಬಿಂಬಿಸಿದವು. ಸಾಕ್ಷಿಗಳು ಅವರ ಮನೆಗೆ ಬೈಬಲಭ್ಯಾಸಕ್ಕಾಗಿ ಬರುವಾಗ, ಅವರು ಯಾವಾಗಲೂ ಆತುರದಿಂದ ಬಾಗಲಲ್ಲಿ ಕಾಯುತ್ತಾ ಇರುತ್ತಿದ್ದರು, ಮತ್ತು ಅವರ ಹಳ್ಳಿಯಲ್ಲಿ ನಡೆದ ಒಂದು ಬಹಿರಂಗ ಭಾಷಣವನ್ನಾದರೂ ಅವರೆಂದೂ ತಪ್ಪಿಸಿರಲಿಲ್ಲ. ಯೆಹೋವನ ಮತ್ತು ಆತನ ಉದ್ದೇಶಗಳ ಜ್ಞಾನದಿಂದ ತಮ್ಮ ಜೀವಿತಗಳು ನಿಜವಾಗಿಯೂ ಅಭಿವರ್ಧಿಸಲ್ಪಟ್ಟಿವೆಯೆಂದು ಈ ಎಳೆಯ ಹುಡುಗಿಯರ ಅನಿಸಿಕೆಯಾಗಿದೆ.