ಡೈಯಕೀಶ್ಲನ್ನು ಕ್ರೈಸ್ತತವನ್ನು ಆಕ್ರಮಿಸುತ್ತಾನೆ
ಸಾ.ಶ. 303 ರ ಫೆಬ್ರವರಿ 23 ರಂದು ರೋಮನ್ ದೇವರಾದ ಟರ್ಮಿನಸ್ನ ಉತ್ಸವದಲ್ಲಿ, ಸಾಮ್ರಾಜ್ಯದ ಹೊಸ ರಾಜಧಾನಿಯಾದ ಏಷ್ಯಾ ಮೈನರಿನ ನಿಕೊಮೀಡಿಯದಲ್ಲಿ ಜನರು ತಮ್ಮ ದೇಶಭಕ್ತಿಯನ್ನು ತೋರಿಸಲು ಒಬ್ಬರಿಂದೊಬ್ಬರು ಮುಂದಾಗುತ್ತಿದ್ದರು. ಆದರೆ ಕ್ರೈಸ್ತ ಸಮಾಜದ ದೊಡ್ಡ ಗುಂಪು ಗಮನಾರ್ಹವಾಗಿ ಗೈರುಹಾಜರಿತ್ತು.
ತಮ್ಮ ಅರಮನೆಯ ಅನುಕೂಲ ಸ್ಥಳದಿಂದ, ಸಾಮ್ರಾಟ ಡೈಯಕೀಶ್ಲನ್ ಮತ್ತು ಅವನ ಕೈಕೆಳಗಿನ ಗೆಲೀರಿಯಸ್ ಸೀಜರ್ ಸ್ಥಳೀಕ ಕ್ರೈಸ್ತ ಕೂಟದ ಸ್ಥಳವನ್ನು ಅವಲೋಕಿಸಿದ್ದರು. ಸಂಜ್ಞೆಯು ನೀಡಲ್ಪಟ್ಟಾಗ, ಸೈನಿಕರು ಮತ್ತು ಸರಕಾರಿ ಅಧಿಕಾರಿಗಳು ಕ್ರೈಸ್ತರ ಕಟ್ಟಡಕ್ಕೆ ಬಲಾತ್ಕಾರದಿಂದ ನುಗ್ಗಿ ಅದನ್ನು ಸೂರೆಮಾಡಿದರು, ತಾವು ಕಂಡುಕೊಂಡ ಬೈಬಲಿನ ಪ್ರತಿಗಳನ್ನು ಸುಟ್ಟುಹಾಕಿದರು. ಕೊನೆಗೆ, ಇಡೀ ಕಟ್ಟಡವನ್ನು ನೆಲಸಮಗೊಳಿಸಿದರು.
ಹೀಗೆ ಡೈಯಕೀಶ್ಲನ್ನ ಆಳಿಕೆಯನ್ನು ಮಲಿನಗೊಳಿಸಿದ ಹಿಂಸೆಯ ಒಂದು ಕಾಲಾವಧಿಯು ಪ್ರಾರಂಭಿಸಿತು. ಇತಿಹಾಸಕಾರರು ಅದನ್ನು “ಕೊನೆಯ ಮಹಾ ಹಿಂಸೆ,” “ಅತ್ಯಂತ ಕ್ರೂರ ಹಿಂಸೆ,” “ಕ್ರೈಸ್ತ ಹೆಸರಿನ ನಿರ್ಮೂಲನೆಗಿಂತ ಏನೂ ಕಡಿಮೆಯಲ್ಲದ್ದು” ಎಂತಲೂ ವರ್ಗೀಕರಿಸಿದ್ದಾರೆ. ಈ ಮನಮುಟ್ಟುವ ಘಟನೆಗಳ ಹಿನ್ನೆಲೆಯ ಪರೀಕ್ಷೆಯು ಬಹಳಷ್ಟನ್ನು ಹೊರಗೆಡಹುವುದಾಗಿ ಕಂಡುಬಂದಿದೆ.
ವಿಧರ್ಮಕ್ಕೆದುರಾಗಿ ಕ್ರೈಸ್ತತ್ವ
ಈಗ ಯಾವುದು ಯುಗೊಸ್ಲಾವಿಯವಾಗಿ ಪರಿಣಮಿಸಿದೆಯೋ ಆ ಪ್ರದೇಶವಾದ ಡಾಲ್ಮೇಶಿಯದಲ್ಲಿ ಜನಿಸಿದ ಡೈಯಕೀಶ್ಲನ್, ರೋಮನ್ ಸೇನಾ ದರ್ಜೆಗಳ ಮೂಲಕವಾಗಿ ಪ್ರಾಧಾನ್ಯತೆಗೆ ಏರಿದನು. ಸಾ.ಶ. 284 ರಲ್ಲಿ ಸಾಮ್ರಾಟನಾಗಿ ಘೋಷಿಸಿಕೊಂಡ ಇವನು, ಸಾಮ್ರಾಜ್ಯದ ತಲೆಯಾಗಿ ನಾಲ್ಕು ಮಂದಿಯ ಸಂಘಟಿತ ನಾಯಕತ್ವವಾದ ಒಂದು ಚತುರ್ಥಾಂಶಾಧಿಪತ್ಯವನ್ನು ಸ್ಥಾಪಿಸಿದಾಗ, ರಾಜಕೀಯ ಸುಧಾರಣೆಗಾಗಿ ಪ್ರಖ್ಯಾತನಾದನು. ಡೈಯಕೀಶ್ಲನ್ನ ಹಳೆಯ ಜೊತೆ ಸೈನಿಕನಾಗಿದ್ದ ಮ್ಯಾಕ್ಸಿಮಿಯನ್ನನ್ನು ತನ್ನೊಂದಿಗೆ ಎರಡನೆಯ ಸಾಮ್ರಾಟನಾಗಿ, ಎರಡನೆಯ ಆಗಸಸ್ಟ್ನಾಗಿ, ಸಾಮ್ರಾಜ್ಯದ ಪಶ್ಚಿಮ ಭಾಗಕ್ಕೆ ವಿಶೇಷ ಜವಾಬ್ದಾರಿಕೆಯೊಂದಿಗೆ ನೇಮಿಸಿದನು. ಡೈಯಕೀಶ್ಲನ್ ಮತ್ತು ಮ್ಯಾಕ್ಸಿಮಿಯನ್ ಇಬ್ಬರ ಕೈಕೆಳಗೂ ಉತ್ತರಾಧಿಕಾರದ ಹಕ್ಕುಗಳು ಕೊಡಲ್ಪಟ್ಟ ಒಬ್ಬ ಕೈಸರನಿದ್ದನು. ಕಾನ್ಸಂಟೆಯಸ್ ಕ್ಲೋರಸ್ ಮ್ಯಾಕ್ಸಿಮಿಯನ್ಗೆ ಕೈಸರನಾಗಿ ಸೇವೆ ಮಾಡಿದಾಗ, ತ್ರೇಸಿನ ಗೆಲೀರಿಯಸನು ಡೈಯಕೀಶ್ಲನ್ ಕೈಕೆಳಗೆ ಅಧಿಕಾರ ನಡಿಸಿದನು.
ಗೆಲೀರಿಯಸ್ ಸೀಜರನು ಡೈಯಕೀಶ್ಲನ್ನಂತೆ ವಿಧರ್ಮಿ ದೇವತೆಗಳ ಗಾಢ ಭಕ್ತನಾಗಿದ್ದನು. ಸಾಮ್ರಾಟನ ಉತ್ತರಾಧಿಕಾರಿಯಾಗುವ ಹೆಬ್ಬಯಕೆಯಿಂದ, ಗೆಲೀರಿಯಸನು ಸೇನೆಯಲ್ಲಿ ಒಳಸಂಚಿನ ಭಯದ ಸೋಗನ್ನು ಹಾಕಿದನು. ಕ್ರೈಸ್ತರೆನಿಸಿಕೊಳ್ಳುತ್ತಿದ್ದ ಸೈನಿಕರ ಬೆಳೆಯುತ್ತಿದ್ದ ವರ್ಚಸ್ವವನ್ನು ಅವನು ಮೆಚ್ಚಲಿಲ್ಲ. ಸಾಮ್ರಾಟನ ದೃಷ್ಟಿಕೋನದಿಂದ, ವಿಧರ್ಮಿ ಆರಾಧನೆಯಲ್ಲಿ ಭಾಗವಹಿಸಲು ಅವರ ನಿರಾಕರಣೆಯು ಅವನ ಅಧಿಕಾರಕ್ಕೆ ಒಂದು ಪಂಥಾಹ್ವಾನದಂತಿತ್ತು. ಆದ್ದರಿಂದ ಕ್ರೈಸ್ತತ್ವದ ನಿರ್ಮೂಲನೆಗೆ ಹೆಜ್ಜೆಗಳನ್ನು ತಕ್ಕೊಳ್ಳುವಂತೆ ಗೆಲೀರಿಯಸನು ಡೈಯಕೀಶ್ಲನ್ನನ್ನು ಪ್ರೇರೇಪಿಸಿದನು. ಕೊನೆಗೆ, ಸಾ.ಶ. 302⁄303 ರ ಚಳಿಗಾಲದಲ್ಲಿ ಸಾಮ್ರಾಟನು ಕೈಸರನ ಕ್ರೈಸ್ತ-ವಿರೋಧಿ ಭಾವನೆಗೆ ಮಣಿದು, ಸೈನ್ಯದಿಂದ ಮತ್ತು ತನ್ನ ಅರಮನೆಯಿಂದ ಆ ವ್ಯಕ್ತಿಗಳನ್ನು ಹೊರಗಟ್ಟಲು ಒಪ್ಪಿದನು. ಆದರೆ ಕ್ರೈಸ್ತ ಹೇತುವಿಗಾಗಿ ಹುತಾತ್ಮರಾಗುವಿಕೆಯು ಇತರರನ್ನು ಉದಟ್ಧ ಪ್ರತಿಭಟನೆಗೆ ಪ್ರೇರಿಸುವುದೆಂದು ಡೈಯಕೀಶ್ಲನ್ ಹೆದರಿ ರಕ್ತಪಾತಕ್ಕೆ ಮಾತ್ರ ಒಪ್ಪಲಿಲ್ಲ.
ಆದರೂ, ಸಮಸ್ಯೆಗೆ ಈ ರೀತಿಯ ಗೋಚರದಿಂದ ಅಸಂತುಷ್ಟನಾದ ಡೈಯಕೀಶ್ಲನ್ ಮಿಲಿಟರಿ ಸೇನಾನಿಗಳನ್ನು ಮತ್ತು ಅಧಿಕಾರಿಗಳನ್ನು, ಬಿಥಿನ್ಯದ ಗವರ್ನರನಾದ ಹಯರೊಕೆಸ್ಲ್ನನ್ನು ಸಹ ಸಂಪರ್ಕಿಸಿದನು. ಈ ಹುರುಪಿನ ಗ್ರೀಕನು ಕ್ರೈಸ್ತರೆಲ್ಲರ ವಿರುದ್ಧವಾಗಿ ಕ್ರೂರ ಕ್ರಮವನ್ನು ಬೆಂಬಲಿಸಿದನು. ರೋಮಿನ ಸಾಂಪ್ರದಾಯಿಕ ದೇವತೆಗಳಿಗೆ ಡೈಯಕೀಶ್ಲನ್ನ ಬೆಂಬಲವು ಕ್ರೈಸ್ತತ್ವದೊಂದಿಗೆ ಹೋರಾಟಕ್ಕೆ ನಡಿಸಿತು. ಫಲಿತಾಂಶವು, ಸೀವ್ಟನ್ ವಿಲ್ಯಮ್ಸ್ನಿಂದ ಬರೆಯಲ್ಪಟ್ಟ ಡೈಯಕೀಶ್ಲನ್ ಆ್ಯಂಡ್ ರೋಮನ್ ರಿಕವರಿ ಗೆ ಅನುಸಾರವಾಗಿ, “ರೋಮಿನ ದೇವರುಗಳ ಮತ್ತು ಕ್ರೈಸ್ತತ್ವದ ದೇವರ ನಡುವಣ ಅನಿರ್ಬಂಧಿತವಾದ ಕೊನೆಯ ತನಕದ ಯುದ್ಧ” ವಾಗಿತ್ತು.
ರಾಜ ಶಾಸನಗಳು
ಹಿಂಸೆಯ ತನ್ನ ಚಟುವಟಿಕೆಯನ್ನು ನಿರ್ವಹಿಸಲು ಡೈಯಕೀಶ್ಲನ್ ನಾಲ್ಕು ಅನುಕ್ರಮ ರಾಜ ಶಾಸನಗಳನ್ನು ಜಾರಿಗೆ ತಂದನು. ನಿಕೊಮೀಡಿಯದ ಆಕ್ರಮಣದ ಮಾರಣೆಯ ದಿನ, ಅವನು ಎಲ್ಲಾ ಕ್ರೈಸ್ತ ಕೂಟದ ಸ್ಥಳಗಳನ್ನು ಮತ್ತು ಆಸ್ತಿಯನ್ನು ಧ್ವಂಸ ಮಾಡುವಂತೆ ಆಜ್ಞಾಪಿಸಿದನು ಮತ್ತು ಪವಿತ್ರ ಗ್ರಂಥಗಳನ್ನು ಒಪ್ಪಿಸಿಕೊಡಬೇಕು ಮತ್ತು ಸುಡಬೇಕು ಎಂದು ವಿಧಿಸಿದನು. ಸರಕಾರಿ ಅಧಿಕಾರ ಸ್ಥಾನದಲ್ಲಿರುವ ಕ್ರೈಸ್ತರನ್ನು ಕೆಳದರ್ಜೆಗೆ ಇಳಿಸಬೇಕಿತ್ತು.
ಸಾಮ್ರಾಟನ ಅರಮನೆಯೊಳಗೇ ಎರಡು ಸಾರಿ ಬೆಂಕಿ ಹಿಡಿದಾಗ, ದೋಷಾರೋಪವು ಅಲ್ಲಿ ಕೆಲಸಕ್ಕಿದ್ದ ಕ್ರೈಸ್ತರ ಮೇಲೆ ಬಿತ್ತು. ಇದು ಇನ್ನೊಂದು ರಾಜ ಶಾಸನವನ್ನು ಪ್ರೇರೇಪಿಸಿತು, ಅದು ಎಲ್ಲಾ ಬಿಷಪರುಗಳನ್ನು, ಪ್ರೆಸ್ಬಿಟರುಗಳನ್ನು ಮತ್ತು ಡೀಕನ್ಗಳನ್ನು ಕೈದು ಮಾಡಿ ಸೆರೆಮನೆಗೆ ಹಾಕುವಂತೆ ಅಪ್ಪಣೆಮಾಡಿತು. ಅವಶ್ಯಬಿದ್ದಲ್ಲಿ ಚಿತ್ರಹಿಂಸೆಯನ್ನು ಕೊಡುವ ಅಧಿಕಾರವನ್ನಿತ್ತ ಮೂರನೆಯ ರಾಜ ಶಾಸನವು ಈ ಜನರನ್ನು ರೋಮನ್ ದೇವತೆಗಳಿಗೆ ಯಜ್ಞ ಅರ್ಪಿಸುವಂತೆ ನಿರ್ಬಂಧಿಸುತ್ತಾ, ಅವರನ್ನು ಧರ್ಮಭ್ರಷ್ಟರಾಗಿ ಮಾಡಲು ಪ್ರಯತ್ನಿಸಿತ್ತು. ನಾಲ್ಕನೆಯ ಶಾಸನವು ಇನ್ನೂ ಮುಂದರಿದು, ಕ್ರೈಸ್ತತ್ವವನ್ನು ಪ್ರತಿಪಾದಿಸುವುದು ಯಾವನಿಗಾದರೂ ಒಂದು ವಧಾರ್ಹವಾದ ಅಪರಾಧವನ್ನಾಗಿ ಮಾಡಿತು.
ಕ್ರೂರತ್ವದ ಅಲೆಯ ಫಲಿತಾಂಶವಾಗಿ ಟ್ರಾಡಿಟೋರೆಸ್ (“ಶರಣಾಗತರಾದವರು” ಎಂದರ್ಥ) ಎಂಬ ಬರೆಹಾಕಿದ ಒಂದು ವರ್ಗವನ್ನು ಉತ್ಪಾದಿಸಿತು. ಇವರು ತಮ್ಮ ಶಾಸ್ತ್ರಗ್ರಂಥದ ಪ್ರತಿಗಳನ್ನು ಒಪ್ಪಿಸಿಬಿಟ್ಟ ಮೂಲಕ ಜೀವವನ್ನುಳಿಸಿಕೊಳ್ಳಲು ಪ್ರಯತ್ನಿಸಿ ದೇವರಿಗೆ ಮತ್ತು ಕ್ರಿಸ್ತನಿಗೆ ದ್ರೋಹವೆಸಗಿದವರು ಎಂದು ಹೇಳಲಾಯಿತು. ಇತಿಹಾಸಕಾರ ವಿಲ್ ಡುರಾಂಟ್ಗೆ ಅನುಸಾರವಾಗಿ, “ಸಾವಿರಾರು ಮಂದಿ ಕ್ರೈಸ್ತರು ಧರ್ಮ ತ್ಯಜಿಸಿದರು. . . ಆದರೆ ಹಿಂಸಿಸಲ್ಪಟ್ಟವರಲ್ಲಿ ಹೆಚ್ಚಿನವರು ದೃಢವಾಗಿ ನಿಂತರು; ಮತ್ತು ಚಿತ್ರಹಿಂಸೆಯ ಕೆಳಗೆ ಧೀರ ನಿಷ್ಠೆಯ ದೃಶ್ಯವು ಅಥವಾ ವರದಿಯು ನಿರ್ಬಲರ ನಂಬಿಕೆಯನ್ನು ಬಲಗೊಳಿಸಿತು ಮತ್ತು ಬೆನ್ನಟ್ಟಲ್ಪಟ್ಟ ಸಭೆಗಳಿಗೆ ಹೊಸ ಸದಸ್ಯರನ್ನು ಗಳಿಸಿತು.” ಫ್ರಿಗ್ಯ, ಕಪ್ಪದೋಕ್ಯ, ಮೆಸಪೊಟೇಮ್ಯ, ಫೊನೀಶಿಯ, ಈಜಿಪ್ಟ್ ಮತ್ತು ರೋಮನ್ ಸಾಮ್ರಾಜ್ಯದ ಇತರ ಹೆಚ್ಚಿನ ಭಾಗಗಳ ಕ್ರೈಸ್ತರು ಧರ್ಮಬಲಿಯಾದರು.
ಆ ಹಿಂಸೆಯ ಸಮಯದಲ್ಲಿ ಸಾವಿರಾರು ಮಂದಿ ಕ್ರೈಸ್ತರು ನಾಶವಾದರು ಎಂಬದಾಗಿ ಚರ್ಚ್ ಇತಿಹಾಸಕಾರ ಕೈಸರೇಯದ ಯುಸೀಬಿಯಸನು ಅಭಿಪ್ರಯಿಸಿದ್ದಾನೆ. ಇನ್ನೊಂದು ಕಡೆ, ಡಿಕ್ಲೈನ್ ಆ್ಯಂಡ್ ಫಾಲ್ ಆಫ್ ದ ರೋಮನ್ ಎಂಪಯ್ರ್ ನ ಗ್ರಂಥಕರ್ತ ಎಡರ್ಡ್ವ್ ಗಿಬ್ಬನ್, ಎರಡು ಸಾವಿರಕ್ಕಿಂತಲೂ ಕಡಿಮೆಯ ಒಂದು ಅಂಕಿಯನ್ನು ತಿಳಿಸುತ್ತಾನೆ. “ಗಿಬ್ಬನ್ ಈ ಕಥೆಗಳಲ್ಲಿ ಹೆಚ್ಚಿನವನ್ನು, ಹುತಾತ್ಮರನ್ನು ಮಹಿಮೆಪಡಿಸಲು ಮತ್ತು ನಂಬಿಗಸ್ತರ ಆತ್ಮೋನ್ನತಿ ಮಾಡಲು ಪಟ್ಟುಹಿಡಿದು ಬಹಳವಾಗಿ ಬಣ್ಣಕೊಟ್ಟ ಕ್ರೈಸ್ತ ಮೂಲಗಳಿಂದ ಬಂದ ವಿವರಣೆಗಳಾಗಿ ಭಾವಿಸುತ್ತಾನೆ,” ಎಂದು ವಿವರಿಸುತ್ತಾನೆ ಒಬ್ಬ ಲೇಖಕನು. ಅವನು ಮತ್ತೂ ಅಂದದ್ದು “ಕೆಲವೇ ಮರಣಗಳನ್ನು ‘ಸಮೂಹಗಳಾಗಿ’ ಸುಲಭವಾಗಿಯೇ ಪರಿವರ್ತಿಸಬಲ್ಲ, ಅಪೇಕ್ಷಿಸದ ಧರ್ಮಬಲಿಗಳು ಮತ್ತು ಬುದ್ಧಿಪೂರ್ವಕ ಉದ್ರೇಕದಿಂದಾಗಿ ಉಂಟಾದ ಧರ್ಮಬಲಿಗಳ ನಡುವಣ ಬೇಧವನ್ನು ಮಾಡದ, ಮತ್ತು ಮಲ್ಲರಂಗದಲ್ಲಿ ಕಾಡು ಮೃಗಗಳು ಬೇರೆಲ್ಲಾ ಪಾತಕಿಗಳನ್ನು ಕ್ರೂರವಾಗಿ ಸಿಗಿದುಹಾಕಿದಾಗ ಕ್ರೈಸ್ತರನ್ನು ಮಾತ್ರ ಸ್ಪರ್ಶಿಸುವುದರಿಂದ ‘ಅಲೌಕಿಕ ಶಕ್ತಿ’ ಅವುಗಳನ್ನು ಹೇಗೆ ತಡೆಯಿತು ಎಂದು ವಿವರಿಸಬಲ್ಲ ಲೇಖಕರಲ್ಲಿ ಅತಿಶಯೋಕ್ತಿಯು ಸಂದೇಹವಿಲ್ಲದ್ದು. ಆದರೆ ಕಲ್ಪನಾಕಥೆಗೆ ಒಂದು ಮಿತಿಯನ್ನು ಬಿಟ್ಟುಕೊಟ್ಟರೂ, ಯಾವುದು ಉಳಿದಿರುತ್ತದೋ ಅದು ಸಾಕಷ್ಟು ಭೀಕರವೇ ಸರಿ.” ನಿಶ್ಚಯವಾಗಿಯೂ ಒಂದು ಅತ್ಯಂತ ಕ್ರೂರ ಹಿಂಸೆಯು, ಚಿತ್ರಹಿಂಸೆಯ ಸಲಕರಣೆಗಳಿಂದ, ದಹಿಸುವಿಕೆ, ಚರ್ಮಸುಲಿಯುವಿಕೆಯಿಂದ ನಡಿಸಲ್ಪಟ್ಟಿತ್ತು ಮತ್ತು ಯಾತನೆಗಾಗಿ ಚಿಮುಟಗಳು ಬಳಸಲ್ಪಟ್ಟವು.
ಡೈಯಕೀಶ್ಲನ್ನ ಬದಲಿಗೆ ಗೆಲೀರಿಯಸನೇ ಹಿಂಸೆಯ ಪ್ರೇರೇಪಕನು ಎಂದು ಕೆಲವು ಅಧಿಕಾರಿಗಳ ವೀಕ್ಷಣೆಯಾಗಿದೆ. “ಈ ಲೋಕದ್ದಲ್ಲದ ರಾಜ್ಯದ ಜೀವವನ್ನು ಜಜ್ಜಿಬಿಡಲು ವಿಧರ್ಮಿ ಲೋಕಾಧಿಕಾರದ ಅತ್ಯುಚ್ಛ ಪ್ರಯತ್ನವು ಅದರ ನಿಜ ಪ್ರೇರೇಪಕನಾದ ಗೆಲೀರಿಯಸನನ್ನು ಬಿಟ್ಟು ಡೈಯಕೀಶ್ಲನ್ನ ಹೆಸರನ್ನು ಹೊತ್ತಿರುವುದು ಒಂದು ಆಳವಾದ ನೈತಿಕ ಭಾವಾರ್ಥದ ಹೊರತಲ್ಲ,” ಎಂಬದಾಗಿ ಪ್ರೊಫೆಸರ್ ವಿಲ್ಯಂ ಬ್ರೈಟ್, ದಿ ಏಜ್ ಆಫ್ ದ ಫಾದರ್ಸ್ ನಲ್ಲಿ ವಾದಿಸಿದ್ದಾನೆ. ಲೇಖಕ ಸೀವ್ಟನ್ ವಿಲ್ಯಮ್ಸ್ ಪ್ರತಿಪಾದಿಸುವಂತೆ, ಚತುರ್ಥಾಂಶಾಧಿಪತ್ಯದಲ್ಲೂ ಡೈಯಕೀಶ್ಲನ್ನ ಸ್ವಾಧೀನದಲ್ಲಿ ಅತ್ಯುಚ್ಛ ಅಧಿಕಾರವಿತ್ತು: “304 ರ ತನಕ ಸಾಮ್ರಾಜ್ಯದ ಪ್ರತಿಯೊಂದು ದೊಡ್ಡ ರಾಜನೀತಿಯ ಮೇಲೆ ಡೈಯಕೀಶ್ಲನ್ಗೆ ಪೂರ್ಣಾಧಿಕಾರವಿತ್ತೆಂಬದಕ್ಕೆ, ಮತ್ತು ಆ ವರ್ಷದ ವರೆಗಿನ ಹಿಂಸೆಗಾಗಿ ದೊಡ್ಡ ಜವಾಬ್ದಾರಿಕೆ ಅವನದ್ದೇ ಎಂಬದಕ್ಕೆ ಯಾವ ಸಂದೇಹವೂ ಇಲ್ಲ.” ಡೈಯಕೀಶ್ಲನ್ ಅಸ್ವಸ್ಥ ಬಿದ್ದನು ಮತ್ತು ಕಟ್ಟಕಡೆಗೆ ಸಾ.ಶ. 305 ರಲ್ಲಿ ಅಧಿಕಾರ ಬಿಟ್ಟುಕೊಟ್ಟನು. ತದನಂತರ ಸುಮಾರು ಆರು ವರ್ಷದ ತನಕ ಮುಂದರಿಯುತ್ತಾ ಹೋದ ಹಿಂಸೆಯು, ಕ್ರೈಸ್ತತ್ವಕ್ಕೆ ಸಂಬಂಧಿಸಿದ ಯಾವುದೇ ವಿಷಯಕ್ಕೆ ಗೆಲೀರಿಯಸನ ಕಡು ದ್ವೇಷವನ್ನು ಪ್ರತಿಬಿಂಬಿಸಿತು.
ನಾಲ್ಕನೆಯ ಶತಮಾನದ ಕ್ರೈಸ್ತತ್ವ
ನಾಲ್ಕನೆಯ ಶತಮಾನದ ಆರಂಭದ ಈ ಭೀಕರ ಘಟನೆಗಳು, ಅಪೊಸ್ತಲರಾದ ಪೇತ್ರ ಮತ್ತು ಪೌಲರಿಂದ ಹಾಗೂ ಇತರ ಪ್ರೇರಿತ ಬೈಬಲ್ ಲೇಖಕರಿಂದ ಏನು ಮುಂತಿಳಿಸಲ್ಪಟ್ಟಿತ್ತೋ ಅದನ್ನು ದೃಢಪಡಿಸುತ್ತವೆ. ಮುಂತಿಳಿಸಲ್ಪಟ್ಟ “ಅಧರ್ಮ ಸ್ವರೂಪನು,” ಅಂದರೆ ಕ್ರೈಸ್ತರೆನಿಸಿಕೊಳ್ಳುವವರನ್ನು ಆಳುವ ವೈದಿಕ ವರ್ಗವು, ಡೈಯಕೀಶ್ಲನ್ನ ರಾಜ ಶಾಸನಗಳಲ್ಲಿ ವಿಶೇಷವಾಗಿ ಎರಡನೆಯದ್ದು ದೃಢಪಡಿಸುವ ಪ್ರಕಾರ, ಆವಾಗಲೇ ಭದ್ರವಾಗಿ ಒಳಹೊಕ್ಕಿತ್ತು. (2 ಥೆಸಲೊನೀಕ 2:3, 4; ಅ.ಕೃತ್ಯಗಳು 20:29, 30; 2 ಪೇತ್ರ 2:12) ನಾಲ್ಕನೆಯ ಶತಮಾನದೊಳಗೆ, ಧರ್ಮಭ್ರಷ್ಟ ಪದ್ಧತಿಗಳು ಆವಾಗಲೇ ಸರ್ವ ಸಾಮಾನ್ಯವಾಗಿದ್ದವು. ರೋಮನ್ ಸೇನೆಯ ಸದಸ್ಯರಾಗಿದ್ದವರಲ್ಲಿ ಕ್ರೈಸ್ತರೆನಿಸಿಕೊಳ್ಳುವವರ ಒಂದು ಅನಿರ್ದಿಷ್ಟ ದೊಡ್ಡ ಸಂಖ್ಯೆಯಿತ್ತು. ಅಪೊಸ್ತಲರಿಂದ ದೊರೆತ “ಸ್ವಸ್ಥ ಬೋಧನಾವಾಕ್ಯಗಳ ಮಾದರಿಗೆ” ನಂಬಿಗಸ್ತರಾಗಿದ್ದ ಯಾವ ಕ್ರೈಸ್ತರಾದರೂ ಆಗ ಇರಲಿಲ್ಲವೇ?—2 ತಿಮೊಥೆಯ 1:13.
ಯುಸೀಬಿಯಸ್ನು ಹಿಂಸೆಗೆ ಗುರಿಯಾದ ಕೆಲವರ ಹೆಸರುಗಳನ್ನು ತಿಳಿಸುತ್ತಾನೆ, ಅವರಿಗಾದ ಹಿಂಸೆಯ, ಕಷ್ಟಾನುಭವದ ಮತ್ತು ಕೊನೆಯದಾಗಿ ಧರ್ಮಬಲಿಯ ಸುಸ್ಪಷ್ಟ ವರ್ಣನೆಯನ್ನು ಸಹ ಮಾಡಿದ್ದಾನೆ. ಈ ಎಲ್ಲಾ ಹುತಾತ್ಮರು ಆ ಸಮಯದಲ್ಲಿ ದೊರೆಯುತ್ತಿದ್ದ ಪ್ರಕಟಿತ ಸತ್ಯಕ್ಕೆ ಸಮಗ್ರತೆಯಲ್ಲಿ ಸತ್ತರೋ ಇಲ್ಲವೋ ಎಂಬದನ್ನು ಪ್ರಸ್ತುತ ನಾವು ತಿಳಿಯಶಕ್ತರಿಲ್ಲ. ಪಂಥಾಭಿಮಾನ, ಅನೈತಿಕತೆ ಮತ್ತು ಯಾವುದೇ ರೀತಿಯ ಒಪ್ಪಂದ ಮಾಡುವಿಕೆಯನ್ನು ವರ್ಜಿಸುವಂತೆ ಯೇಸು ಕೊಟ್ಟ ಎಚ್ಚರಿಕೆಯನ್ನು ಕೆಲವರು ಹೃದಯಕ್ಕೆ ತಕ್ಕೊಂಡಿದ್ದರೆಂಬದಕ್ಕೆ ಸಂದೇಹವಿಲ್ಲ. (ಪ್ರಕಟನೆ 2:15, 16, 20-23; 3:1-3) ಪಾರಾಗಿ ಉಳಿದ ಕೆಲವು ನಂಬಿಗಸ್ತರು ಚಾರಿತ್ರಿಕ ನೋಟದಿಂದ ಮರೆಯಾಗಿದ್ದರೆಂಬದು ವ್ಯಕ್ತ. (ಮತ್ತಾಯ 13:24-30) ನಿಶ್ಚಯವಾಗಿಯೂ, ಬಹಿರಂಗ ಕ್ರೈಸ್ತ ಆರಾಧನೆಯನ್ನು ಅದುಮಿಹಿಡಿಯಲು ಎಷ್ಟೊಂದು ಸಾಫಲ್ಯಯುಕ್ತ ಕ್ರಮಗಳನ್ನು ಕೈಕೊಳ್ಳಲಾಗಿತ್ತೆಂದರೆ ಆ ಕಾಲದ ಒಂದು ಸ್ಪ್ಯಾನಿಷ್ ಸ್ಮಾರಕವು, ‘ಕ್ರಿಸ್ತನ ಮೂಢ ಭಕ್ತಿಯನ್ನು ರದ್ದು’ ಮಾಡಿದಕ್ಕಾಗಿ ಡೈಯಕೀಶ್ಲನ್ಗೆ ಜಯಕಾರವೆತ್ತಿದೆ. ಆದಾಗ್ಯೂ, ಕ್ರೈಸ್ತತ್ವದ ಮೇಲೆ ಡೈಯಕೀಶ್ಲನ್ನ ಆಕ್ರಮಣದ ಮುಖ್ಯ ಭಾಗವಾದ, ಶಾಸ್ತ್ರಗ್ರಂಥಗಳ ಪ್ರತಿಗಳನ್ನು ವಶಪಡಿಸುವಿಕೆ ಮತ್ತು ಸುಟ್ಟು ಹಾಕುವಿಕೆಯು, ದೇವರ ವಾಕ್ಯವನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸುವುದರಲ್ಲಿ ವೈಫಲ್ಯಗೊಂಡಿತು.—1 ಪೇತ್ರ 1:25.
ಕ್ರೈಸ್ತತ್ವವನ್ನು ಪೂರ್ಣವಾಗಿ ಅಳಿಸಿಬಿಡುವುದರಲ್ಲಿ ಯಶಸ್ವಿಯಾಗದರ್ದಿಂದ, ಲೋಕಾಧಿಪತಿಯಾದ ಪಿಶಾಚ ಸೈತಾನನು, ಸಾ.ಶ. 306 ರಿಂದ 337 ರ ತನಕ ರಾಜ್ಯವಾಳಿದ ಸಾಮ್ರಾಟ ಕಾನ್ಸ್ಟೆಂಟಿನ್ ಮೂಲಕ ತನ್ನ ತಂತ್ರೋಪಾಯಗಳನ್ನು ಮುಂದರಿಸಿದನು. (ಯೋಹಾನ 12:31; 16:11; ಎಫೆಸ 6:11, NW ಪಾದಟಿಪ್ಪಣಿ) ವಿಧರ್ಮಿ ಕಾನ್ಸ್ಟೆಂಟಿನ್ ಕ್ರೈಸ್ತರನ್ನು ಹೋರಾಡಲಿಲ್ಲ. ಬದಲಿಗೆ ವಿಧರ್ಮಿ ಮತ್ತು ಕ್ರೈಸ್ತ ನಂಬಿಕೆಗಳನ್ನು ಒಂದು ಹೊಸ ರಾಜ್ಯ ಧರ್ಮವಾಗಿ ಬೆಸೆಯುವುದನ್ನು ಅನುಕೂಲ್ಯವಾಗಿ ಕಂಡನು.
ನಮಗೆಲ್ಲರಿಗೂ ಎಂಥ ಒಂದು ಎಚ್ಚರಿಕೆಯಿದು! ಕ್ರೂರ ಹಿಂಸೆಯನ್ನು ನಾವು ಎದುರಿಸುವಾಗ, ಯಾವುದೇ ತಾತ್ಕಾಲಿಕ ದೈಹಿಕ ಪರಿಹಾರಕ್ಕಾಗಿ ಒಪ್ಪಂದವನ್ನು ಮಾಡದಂತೆ ಯೆಹೋವನ ಚಿತ್ತಕ್ಕಾಗಿರುವ ನಮ್ಮ ಪ್ರೀತಿಯು ನಮಗೆ ಸಹಾಯ ಮಾಡುವುದು. (1 ಪೇತ್ರ 5:9) ತದ್ರೀತಿಯಲ್ಲಿ, ಒಂದು ಶಾಂತಿಯುಕ್ತ ಕಾಲಾವಧಿಯು ನಮ್ಮ ಕ್ರೈಸ್ತ ಚೈತನ್ಯವನ್ನು ಇಂಗಿಸುವಂತೆ ನಾವು ಬಿಟ್ಟುಕೊಡಲಾರೆವು. (ಇಬ್ರಿಯ 2:1; 3:12, 13) ಬೈಬಲ್ ತತ್ವಗಳಿಗೆ ಕಟ್ಟುನಿಟ್ಟಿನ ಅವಲಂಬನೆಯು, ತನ್ನ ಜನರನ್ನು ವಿಮೋಚಿಸ ಶಕ್ತನಾದ ಯೆಹೋವ ದೇವರಿಗೆ ನಮ್ಮನ್ನು ನಿಷ್ಠರಾಗಿ ಉಳಿಯುವಂತೆ ಮಾಡುವುದು.—ಕೀರ್ತನೆ 18:25, 48.
[ಪುಟ 28 ರಲ್ಲಿರುವ ಚಿತ್ರ ಕೃಪೆ]
Musei Capitolini, Roma