ವಾಚಕರಿಂದ ಪ್ರಶ್ನೆಗಳು
ಕದ್ದ ಸಾಮಾನುಗಳನ್ನು ಖರೀದಿಸುವ ವಿಷಯವನ್ನು ಯೆಹೋವನ ಸಾಕ್ಷಿಗಳು ಹೇಗೆ ವೀಕ್ಷಿಸುತ್ತಾರೆ?
ಕದ್ದ ಸರಕುಗಳನ್ನು ಅಥವಾ ಸಾಮಾನುಗಳನ್ನು ಕೊಂಡುಕೊಳ್ಳುವುದರಲ್ಲಿ ಬುದ್ಧಿಪೂರ್ವಕವಾದ ಯಾವುದೇ ಪಾಲುಗಾರಿಕೆಯನ್ನು ಕ್ರೈಸ್ತರು ವರ್ಜಿಸುತ್ತಾರೆ.
ಕದಿಯುವುದು ಖಂಡಿತವಾಗಿಯೂ ತಪ್ಪು. ಇಸ್ರಾಯೇಲ್ಯರಿಗೆ ಕೊಟ್ಟ ದೇವರ ನಿಯಮವು ಸುಸ್ಪಷ್ಟವಾಗಿಗಿ ಹೇಳಿದ್ದು: “ಕದಿಯ ಬಾರದು.” (ವಿಮೋಚನಕಾಂಡ 20:15; ಯಾಜಕಕಾಂಡ 19:11) ಕಳ್ಳನು ಹಿಡಿಯಲ್ಪಟ್ಟರೆ, ಪರಿಸ್ಥಿತಿಗಳಿಗೆ ಹೊಂದಿಕೊಂಡು, ಇಮ್ಮಡಿ, ನಾಲ್ಕು ಮಡಿ, ಅಥವಾ ಐದು ಪಾಲಷ್ಟು ನಷ್ಟಪರಿಹಾರವನ್ನು ಕೊಡಲೇಬೇಕಿತ್ತು.
ಕ್ಷಿಪ್ರ ಲಾಭವನ್ನು ಗಳಿಸುವಂತೆ ಮತ್ತು ತಮ್ಮ ತಪ್ಪಿನ ರುಜುವಾತಿನೊಂದಿಗೆ ಸಿಕ್ಕಿಬೀಳದಂತೆ ಕಳ್ಳರು ತಾವು ಕದ್ದ ಮಾಲುಗಳನ್ನು ದಾಟಿಸಿಬಿಡಲು ಪುರಾತನ ಕಾಲದಿಂದಲೂ ಪ್ರಯತ್ನಿಸಿದ್ದಾರೆ. ಈ ಹೇತುವಿನಿಂದ ಹೆಚ್ಚಾಗಿ ಕದ್ದ ಮಾಲುಗಳನ್ನು ಅನೇಕ ಗಿರಾಕಿಗಳು ನಿರಾಕರಿಸಲು ಕಷ್ಟವಾಗಿ ತೋರುವಷ್ಟು ತಗ್ಗಿದ ಬೆಲೆಯಲ್ಲಿ ಅವರು ಮಾರುತ್ತಾರೆ. ಅಂಥ ಒಂದು ಪದ್ಧತಿಯು ವಿಮೋಚನಕಾಂಡ 22:1 ರಲ್ಲಿ ನಾವು ಓದುವ ಒಂದು ವಿಷಯದಲ್ಲಿ ಒಳಗೂಡಿದಿರ್ದಬಹುದು.: “ಒಬ್ಬನು ಎತ್ತನ್ನಾಗಲಿ ಕುರಿಯನ್ನಾಗಲಿ ಕದ್ದುಕೊಂಡು ಕೊಯಿದರೆ ಇಲ್ಲವೆ ಮಾರಿದರೆ ಅವನು ಎತ್ತಿಗೆ ಪ್ರತಿಯಾಗಿ ಐದು ಎತ್ತುಗಳನ್ನು, ಕುರಿಗೆ ಪ್ರತಿಯಾಗಿ ನಾಲ್ಕು ಕುರಿಗಳನ್ನು ಕೊಡಬೇಕು.”
ಅಂಥ ನಿಯಮಗಳಲ್ಲಿರುವ ತೊಡಕುಗಳನ್ನು ಅರಿತುಕೊಂಡು ರಬ್ಬಿ ಏಬ್ರಹಾಮ್ ಚಿಲ್ ಬರೆದದ್ದು: “ಆ ಮಾಲು ಕದ್ದದ್ದಾಗಿ ಅಂಗೀಕರಿಸಲ್ಪಡದೆ ಇದ್ದರೂ ಸಹ, ಕದ್ದ ಮಾಲನ್ನು ಖರೀದಿಸುವುದಾಗಲಿ ಸ್ವೀಕರಿಸುವುದಾಗಲಿ ನಿಷೇಧಿಸಲ್ಪಟ್ಟಿದೆ. ಆದುದರಿಂದ ಒಬ್ಬ ಕುರುಬನಿಂದ ಒಂದು ಆಡನ್ನು ಒಬ್ಬನು ಕೊಳ್ಳಬಾರದು ಯಾಕೆಂದರೆ ಪ್ರಾಯಶಃ ಆ ಕುರುಬನು ತನ್ನ ಧನಿಗೆ ಗೊತ್ತಿಲ್ಲದಂತೆ ಅದನ್ನು ಮಾರುತ್ತಿರಬಹುದು ಮತ್ತು ಆ ಹಣವನ್ನು ಇಟ್ಟುಕೊಳ್ಳಲು ಯೋಚಿಸಿರಬಹುದು.”—ದಿ ಮಿಟ್ಸ್‌ವೊಟ್—ದಿ ಕಮಾಂಡ್‌ಮೆಂಟ್ಸ್ ಆ್ಯಂಡ್ ದೇರ್ ರ್ಯಾಷನೇಲಿ.
ಧನಿಯ ಹಣವನ್ನು ಇಟ್ಟುಕೊಳ್ಳುವ ಮೂಲಕ ಕಾರ್ಯತಃ ಕದ್ದ ಆಡನ್ನು ಮಾರಿದಂತೆ ತೋರುವ ಕೇವಲ ಸಂಶಯ ಮಾತ್ರದಿಂದಾಗಿ ‘ಕುರುಬನಿಂದ ಆಡನ್ನು ಖರೀದಿಸುವುದನ್ನು’ ದೇವರ ವಾಕ್ಯವು ವಾಸ್ತವದಲ್ಲಿ ನಿಷೇಧಿಸುವುದಿಲ್ಲ. ಆದರೆ, ಪ್ರಶ್ನೆಯ ಇನ್ನೊಂದು ಕಡೆ, ಮಾರಾಟಗಾರನು ಅದರ ಮಾಲಕನಲ್ಲ ಅಥವಾ ಅದು ಕದ್ದ ಮಾಲಾಗಿರಬಹುದು ಎಂಬದು ಸ್ಪಷ್ಟವಾಗಿಗಿ ತೋರಿಬರುವಾಗ, (ಆಡು ಅಥವಾ ಬೇರೆ ಯಾವುದೇ ವಸ್ತುವಿನ) ಖರೀದಿಗೆ ಯೆಹೋವನ ಸೇವಕರು ಬುದ್ಧಿಪೂರ್ವಕವಾಗಿ ಭಾಗಿಗಳಾಗಬಾರದು. ದೇವರು ಖಾಸಗಿ ಸೊತ್ತುಗಳನ್ನು ಮಾನ್ಯಮಾಡುತ್ತಾನೆಂದು ದೇವರ ವಾಕ್ಯ ತೋರಿಸುತ್ತದೆ, ಆದರೆ ಒಬ್ಬ ಕಳ್ಳನು ಅದರ ಒಡೆಯನಿಂದ ಅವನ ವಸ್ತುಗಳನ್ನು ಅಪಹರಿಸುತ್ತಾನೆ. ಕದ್ದ ಮಾಲು ಎಂದು ತಿಳಿಯಲ್ಪಟ್ಟದ್ದನ್ನು ಖರೀದಿಸುವ ಒಬ್ಬನು ಅಂಥ ಕಳ್ಳನಾಗಿರದೆ ಇರಬಹುದು, ಅದರೆ ಅವನ ಖರೀದಿಯು ಅದರ ಒಡೆಯನಿಗೆ ಅವನ ಸರಕು ಎಂದಾದರೂ ಹಿಂದೆ ಸಿಗುವ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ.—ಜ್ಞಾನೋಕ್ತಿ 16:19; 1 ಥೆಸಲೋನಿಕ 4:6 ಹೋಲಿಸಿರಿ.
ಖರೀದಿಸುವವರು—ಗ್ರಹಿಣಿಯರಾಗಲಿ ಅಥವಾ ಕಂಪೆನಿಯ ಖರೀದಿ ಏಜಂಟರುಗಳಾಗಲಿ, ಸರಕುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸ ಬಯಸುತ್ತಾರೆಂಬದನ್ನು ನಾವೆಲ್ಲರೂ ತಿಳುಕೊಳ್ಳಬಲ್ಲೆವು. ಲೋಕದ ಎಲ್ಲಾ ಕಡೆಯಲ್ಲಿರುವ ಸ್ತ್ರೀಯರು ಬೆಲೆಕಡಿಮೆಯ ಮಾರುವಿಕೆಗಳಿಗಾಗಿ ನೋಡುತ್ತಾರೆ, ಬೆಲೆಗಳು ಇಳಿಯುವ ಸಮಯವು ಬರುವ ತನಕ ತಮ್ಮ ಖರೀದಿಗಳನ್ನು ವಿಳಂಬಿಸಲು ಪ್ರಯತ್ನಿಸುತ್ತಾರೆ, ಅಥವಾ ಒಟ್ಟುಗಟ್ಟಳೆಯ ಮಾರ್ಕೆಟುಗಳಲ್ಲಿ ಅಥವಾ ಕಡಿಮೆ ವೆಚ್ಚವಿರುವ ಮತ್ತು ಹೀಗೆ ಮಿತವಾದ ಬೆಲೆಗಳಲ್ಲಿ ಖರೀದಿಸುತ್ತಾರೆ. (ಜ್ಞಾನೋಕ್ತಿ 31:14) ಆದರೂ, ಅಗ್ಗ ಬೆಲೆಯನ್ನು ಪಡೆಯುವ ಅಂಥ ಅಭಿರುಚಿಗೆ ನೈತಿಕ ಸೀಮಿತಗಳಿರಬೇಕು. ನೆಹೆಮೀಯನ ದಿನದಲ್ಲಿ ನಿಷ್ಠೆಯುಳ್ಳ ಜನರು, ಅವರಿಗೆ ಆ ದಿನಗಳಲ್ಲಿ ಒಳ್ಳೆಯ ರಿಯಾಯಿತಿ ದೊರೆಯಬಹುದಾಗಿದ್ದರೂ, ಸಬ್ಬತಿನಲ್ಲಿ ಖರೀದಿಗಳನ್ನು ಮಾಡಲು ನಿರಾಕರಿಸಿದ್ದರು. (ನೆಹೆಮೀಯ 10:31; ಆಮೋಸ 8:4-6 ಹೋಲಿಸಿರಿ.) ಕ್ರೈಸ್ತರ ವಿಷಯವಾಗಿಯೂ ಅದೇ ರೀತಿ ಇದೆ. ಕಳ್ಳತನದ ಕುರಿತಾದ ಅವರ ತಿರಸ್ಕಾರವು, ಕದ್ದಿರಬಹುದಾದ ಅಗ್ಗ ಬೆಲೆಯ ವಸ್ತುಗಳನ್ನು ಖರೀದಿಸುವ ಯಾವುದೇ ಶೋಧನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಿರ್ದಿಷ್ಟ ಮಾರಾಟಗಾರರು ಕಳ್ಳ ಮಾಲುಗಳಲ್ಲಿ ವ್ಯವಹಾರ ನಡಿಸುತ್ತಾರೆಂಬದು ಸಾಮಾನ್ಯವಾಗಿ ತಿಳಿದದೆ. ಅಥವಾ ಗುಪ್ತ ರೀತಿಯಲ್ಲಿ ತಿಳಿಸುವ ಒಂದು ಬೆಲೆಯು ಎಷ್ಟು ಅಸಾಮಾನ್ಯವಾಗಿ ಅಗವ್ಗಾಗಿರಬಹುದೆಂದರೆ, ಆ ಮಾಲು ಅನ್ಯಾಯದಿಂದ ಪಡಕೊಂಡದ್ದೆಂದು ಯಾವನೇ ಸಾಮಾನ್ಯ ವ್ಯಕ್ತಿಯು ತೀರ್ಮಾನಿಸಬಲ್ಲನು. ದೇಶದ ನಿಯಮವು ಸಹ ಅಂಥ ಸಮಂಜಸತೆಯ ಅಗತ್ಯವನ್ನು ಅಂಗೀಕರಿಸಬಹುದು. ವ್ಯವಹಾರ ಧರ್ಮ ಶಾಸ್ತ್ರದ ಒಂದು ಸಂಪುಟವು ಹೇಳುವುದು:
“ತಪ್ಪು ಪರಿಜ್ಞಾನದ ಆವಶ್ಯಕತೆಗೆ ಮಾಲನ್ನು ಕದ್ದವರು ಯಾರು ಮತ್ತು ಯಾರಿಂದ ಅದನ್ನು ಕದಿಯಲಾಗಿದೆ, ಅಥವಾ ಯಾವಾಗ ಮತ್ತು ಎಲ್ಲಿ ಕದಿಯಲ್ಪಟ್ಟಿತು, ಅಥವಾ ಯಾವ ಪರಿಸ್ಥಿತಿಗಳ ಕೆಳಗೆ ಅದು ಕದಿಯಲ್ಪಟ್ಟಿತು ಎಂಬದು ಅಪರಾಧಿಗೆ ತಿಳಿಯಬೇಕಾದ ಅಗತ್ಯವಿಲ್ಲ, ಅದು ಕದ್ದ ಮಾಲು ಎಂದು ಅವನಿಗೆ ತಿಳಿದಿರುವುದಷ್ಟೇ ಸಾಕು. . . . ಅದು ಕಳ್ಳ ಮಾಲೆಂದು ಸಾಮಾನ್ಯ ತಿಳುವಳಿಕೆ ಮತ್ತು ಜಾಗ್ರತೆ ಇರುವ ವ್ಯಕ್ತಿಯನ್ನು ತೃಪ್ತಿಗೊಳಿಸುವಂಥ ಪರಿಸ್ಥಿತಿಗಳ ಕೆಳಗೆ ಪ್ರತಿವಾದಿಯು ಆ ಮಾಲನ್ನು ಪಡೆದುಕೊಂಡ ನಿಜತ್ವದ ಮೇಲೆ, ತಪ್ಪು ಪರಿಜ್ಞಾನದ ಅಸ್ತಿತ್ವವನ್ನು ಸಮರ್ಥಿಸಬಹುದು ಎಂಬ ನೋಟವನ್ನು ಕೆಲವು ಕೋರ್ಟುಗಳು ತಕ್ಕೊಳ್ಳುತ್ತವೆ.”
ಕದ್ದ ಸಾಮಾನುಗಳನ್ನು ಕೊಂಡುಕೊಳ್ಳುವುದನ್ನು ವರ್ಜಿಸುವುದಕ್ಕೆ ಇದು ಕ್ರೈಸ್ತನಿಗೆ ಯೋಗ್ಯ ಕಾರಣವನ್ನು ಕೊಡುತ್ತದೆ. ಅಂಥ ಸರಕುಗಳನ್ನು ಖರೀದಿಸುವುದು ಅವನನ್ನು ನಿಯಮಭಂಜಕನಾಗಿ ಮಾಡಬಹುದು. ತಾವು ಅದರಿಂದ ಸುಲಭವಾಗಿ ಜಾರಿಕೊಳ್ಳಬಹುದೆಂದು ನೆನಸುವ ಅನೇಕರಿಗೆ ನಿಯಮ ಮೀರುವ ವಿಷಯವಾಗಿ ಯಾವ ಅಳುಕೂ ಇಲ್ಲ. ಆದರೆ “ಮೇಲಧಿಕಾರಿಗಳಿಗೆ ಅಧೀನರಾಗಿರ” ಬಯಸುವ ಕ್ರೈಸ್ತರ ವಿಷಯದಲ್ಲಿ ಇದು ಸತ್ಯವಲ್ಲ. ನಿಯಮ ಪಾಲನೆಯು ಅವರನ್ನು ಪಾತಕಿಗಳಾಗಿ ಶಿಕ್ಷಿಸಲ್ಪಡುವುದರಿಂದ ಕಾಪಾಡುತ್ತದೆ ಮತ್ತು ಯೆಹೋವನ ಮುಂದೆ ಶುದ್ಧ ಮನಸ್ಸಾಕ್ಷಿಯನ್ನಿಡುವಂತೆ ನೆರವಾಗುತ್ತದೆ.—ರೋಮಾಪುರ 13:1, 4, 5.
ದೇವರ ಸ್ನೇಹಿತನಾದ ಅಬ್ರಹಾಮನು ಮನಸ್ಸಾಕ್ಷಿಯ ವಿಷಯದಲ್ಲಿ ಒಂದು ಒಳ್ಳೇ ಮಾದರಿಯನ್ನಿಟ್ಟನು. ಅವನ ಕಾಲದಲ್ಲಿ, ನಾಲ್ವರು ಪೂರ್ವದ ಅರಸರು ಲೋಟನು ವಾಸಿಸಿದ್ದ ಸ್ಥಳದ ಅರಸರನ್ನು ಸೋಲಿಸಿ ಯುದ್ಧ ಸೂರೆಯ ರೂಪದಲ್ಲಿ ಅವರ ಅನೇಕ ಬೆಲೆಬಾಳುವ ವಸ್ತುಗಳನ್ನು ಅಪಹರಿಸಿಕೊಂಡು ಹೋದರು. ಅಬ್ರಹಾಮನು ಅವರನ್ನು ಬೆನ್ನಟ್ಟಿದನು, ಶತ್ರುಗಳನ್ನು ಸೋಲಿಸಿ, ಅವರು ಅಪಹರಿಸಿದ ಎಲ್ಲಾ ವಸ್ತುಗಳನ್ನು ಹಿಂದಕ್ಕೆ ತಂದನು. ಸೊದೋಮಿನ ಅರಸನು ಅಬ್ರಹಾಮನಿಗೆ, “ಆಸ್ತಿಯನ್ನು (ಬಹುಮಾನವಾಗಿ) ನೀನೇ ತಕ್ಕೋ” ಎಂದನು. ಅಬ್ರಹಾಮನು ಆ ವಸ್ತುಗಳನ್ನು ಅವುಗಳ ನ್ಯಾಯಬದ್ಧ ಒಡೆಯರಿಗೆ ಒಪ್ಪಿಸಿ ಅಂದದ್ದು: “ನಿನ್ನದರಲ್ಲಿ ಯಾವದನ್ನೂ ತೆಗೆದುಕೊಳ್ಳುವದಿಲ್ಲ. . . .ಅಬ್ರಹಾಮನು ನನ್ನ ಸೊತ್ತಿನಿಂದಲೇ ಐಶ್ವರ್ಯವಂತನಾದನೆಂದು ಹೇಳಿಕೊಳ್ಳುವದಕ್ಕೆ ನಿನಗೆ ಆಸ್ಪದವಾಗಬಾರದು.”—ಆದಿಕಾಂಡ 14:1-24.
ಕದ್ದ ಸರಕುಗಳ ಮೂಲಕ ಶಕ್ಯವಾಗಬಹುದಾದ ಯಾವುದೇ ಆರ್ಥಿಕ ಲಾಭದಲ್ಲಿ ಕ್ರೈಸ್ತರಿಗೆ ಅಭಿರುಚಿ ಇಲ್ಲ. ಯೆರೆಮೀಯನು ಬರೆದದ್ದು: “ಆಸ್ತಿಪಾಸ್ತಿಗಳನ್ನು ಅನ್ಯಾಯವಾಗಿ ಸಂಪಾದಿಸಿಕೊಂಡವನು ತನ್ನದಲ್ಲದ ಮರಿಗಳನ್ನು ಕೂಡಿಸಿಕೊಳ್ಳುವ ಕೌಜುಗ ಹಕ್ಕಿಗೆ ಸಮಾನನು.” (ಯೆರೆಮೀಯ 17:11) ಹೀಗೆ ಕದ್ದ ಮಾಲಿನ ಕುರಿತ ಕೈಸರನ ನಿಯಮಗಳನ್ನು ಮುರಿಯದಿರುವ ಮೂಲಕ ವಿವೇಕ ತೋರಿಸುವುದಲ್ಲದೆ, ಕಳ್ಳತನದ ಅನ್ಯಾಯದೊಂದಿಗೆ ಯಾವ ರೀತಿಯಲ್ಲಾದರೂ ಜತೆಗೂಡುವುದಕ್ಕೆ ನಿರಾಕರಿಸುವ ಮೂಲಕ ದೇವರ ನ್ಯಾಯವನ್ನು ಎತ್ತಿಹಿಡಿಯಲು ಕ್ರೈಸ್ತರು ಬಯಸುತ್ತಾರೆ. ದಾವೀದನು ಯುಕ್ತವಾಗಿಯೇ ಬರೆದದ್ದು: “ದುಷ್ಟರ ಮಹಾ ಸಮೃದ್ಧಿಗಿಂತಲೂ ನೀತಿವಂತನ ಬಡತನವೇ ಲೇಸು.”—ಕೀರ್ತನೆ 37:16.