ರಾಜ್ಯ ಘೋಷಕರು ವರದಿಮಾಡುತ್ತಾರೆ
ಪೂರ್ವ ಯೂರೋಪಿನಿಂದ ಶುಭ ವಾರ್ತೆಗಳು
ಅನೇಕ ಉತ್ತೇಜಕ ಸಂಗತಿಗಳು ಪೂರ್ವ ಯೂರೋಪಿನ ದೇವಪ್ರಭುತ್ವ ಕ್ಷೇತ್ರದಲ್ಲಿ ಸಂಭವಿಸುತ್ತಾ ಇವೆ. ಆಗಸ್ಟ್ 16-18, 1991 ರಲ್ಲಿ ಜಗ್ರೆಬ್ನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನಕ್ಕೆ 15 ದೇಶಗಳಿಂದ ಆಗಮಿಸಿದ ಅವರ ಸಹೋದರರಿಗೆ, 7,300 ಸಾಕ್ಷಿಗಳು ಹೃದಯಪೂರಿತ ಸುಸ್ವಾಗತವನ್ನು ನೀಡಿದ್ದು ಎದ್ದು ಕಾಣುವಂತಹದ್ದಾಗಿತ್ತು. ಒಟ್ಟಿಗೆ, 14,684 ಮಂದಿ ಹಾಜರಾದರು. ಅಶಾಂತಿಯಿಂದ ಅಲುಗಾಡಿಸಲ್ಪಟ್ಟ ದೇಶವೊಂದರಲ್ಲಿ ಪ್ರೀತಿ ಮತ್ತು ಐಕ್ಯತೆಯ ಅಚ್ಚರಿಗೊಳಿಸುವ ಒಂದು ಪ್ರದರ್ಶನ ಅದಾಗಿತ್ತು!
ಪೂರ್ವ ಯೂರೋಪಿನಲ್ಲಿರುವ ಸಾಕ್ಷಿಗಳು ಯೆಹೋವನ ರಾಜ್ಯದ ಶುಭವಾರ್ತೆಯನ್ನು ಇತರರಿಗೆ ತಿಳಿಸುವದರಲ್ಲಿ ಕಾರ್ಯಮಗ್ನರಾಗಿರುತ್ತಾರೆ, ಅದು ತಾನೇ, ನಿಜ ಶಾಂತಿಗಾಗಿರುವ ಒಂದೇ ನಿರೀಕ್ಷೆ ಆಗಿರುತ್ತದೆಂದು ಅವರು ತಿಳಿಯುತ್ತಾರೆ. ಅವರ ತಾಟಸ್ಥ್ಯದ ನಿಲುವನ್ನು ಕಾಪಾಡಲು ಕೆಲವು ಭಾಗಗಳಲ್ಲಿ ಅದೊಂದು ಪಂಥಾಹ್ವಾನವಾಗಿರುತ್ತದೆ. ಆದಾಗ್ಯೂ, ಜನರು ಆಗಾಗ್ಗೆ ಆಲಿಸುತ್ತಾರೆ, ಮತ್ತು ಸಾಕ್ಷಿಗಳು ಅನೇಕ ಉತ್ತಮ ಅನುಭವಗಳನ್ನು ವರದಿಮಾಡುತ್ತಾರೆ.
ಒಂದು ನಗರದಲ್ಲಿ, 16 ವರ್ಷ ಪ್ರಾಯದ ಹುಡುಗಿಯು ಆ ನಗರದಲ್ಲಿರುವ ಒಬ್ಬಳೇ ಯೆಹೋವನ ಸಾಕ್ಷಿಯಿಂದ ಸುವಾರ್ತೆಯನ್ನು ಕೇಳಿದಳು. ಒಂದು ಕ್ರಮದ ಬೈಬಲ್ ಅಧ್ಯಯನವು ಆರಂಭಿಸಲ್ಪಟ್ಟಿತು, ಮತ್ತು ಸತ್ಯದ ಕಡೆಗಿನ ಅವಳ ಗಣ್ಯತೆಯು ಬೆಳೆಯಿತು. ಅವಳು ಕಲಿತಂಥ ಅದ್ಭುತಕರ ವಿಷಯಗಳನ್ನು ಇತರರಿಗೆ ತಿಳಿಸುವ ಅತ್ಯಾಶೆಯಿದವ್ದಳಾಗಿ, ಅವಳ ಶಾಲಾಸಂಗಾತಿಗಳೊಂದಿಗೆ ಮಾತಾಡಲು ಪ್ರಯತ್ನಿಸಿದಳು, ಆದರೆ ವಿರೋಧ ಮತ್ತು ಕುಚೋದ್ಯಕ್ಕೆ ಒಳಗಾದಳು. ಒಬ್ಬ ಶಾಲಾಸಂಗಾತಿಯಾದರೋ ವಿಶೇಷವಾಗಿ ಅವಳನ್ನು ವಿರೋಧಿಸಿದಳು, ಆದರೆ ಅವಳ ತಾಳ್ಮೆಯಿಂದಾಗಿ ಅಚ್ಚರಿಪಟಳ್ಟು ಮತ್ತು ಪ್ರಭಾವಿತಳಾದಳು, ಯಾಕಂದರೆ ಎಲ್ಲಾ ರೀತಿಯ ಅವಮಾನಗಳ ಎದುರಿನಲ್ಲಿಯೂ ಎಳೆಯ ಬೈಬಲ್ ವಿದ್ಯಾರ್ಥಿಯು ಸಿಟ್ಟಾಗಲಿಲ್ಲ. ತದನಂತರ, ಈ ಹುಡುಗಿಗೆ ಇನ್ನಷ್ಟು ಸಮಗ್ರವಾಗಿ ಸಾಕ್ಷಿಯನ್ನು ನೀಡಲಾಯಿತು, ಮತ್ತು ತನ್ನ ಮನೋಭಾವವು ತಪ್ಪೆಂದು ಅವಳು ಅರಿತಳು. ಅವಳೊಂದಿಗೆ ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು, ಮತ್ತು ಅನಂತರ ಮೊದಲನೆಯ ಬೈಬಲ್ ವಿದ್ಯಾರ್ಥಿ ಮತ್ತು ಅವಳ ಹೊಸ ಸಂಗಾತಿಯು, ಅವರ ಹೆತ್ತವರ, ಅಧ್ಯಾಪಕನ, ಮತ್ತು ಅವರ ಶಾಲಾಸಂಗಾತಿಗಳಿಂದ ವಿರೋಧವಿದ್ದಾಗ್ಯೂ, ಅವರ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿದರು.
ಅವರ ಸಾಕ್ಷಿನೀಡುವಿಕೆಯ ಫಲಿತಾಂಶವಾಗಿ, ಇನ್ನೊಬ್ಬ ಶಾಲಾಸಂಗಾತಿಯು ಸತ್ಯವನ್ನು ಸ್ವೀಕರಿಸಿದಳು. ಈಗ ಅವರ ತರಗತಿಯಲ್ಲಿ ಮೂವರು ಇದ್ದರು, ಮತ್ತು ಇತರರಿಗೆ ಸಹಾಯ ಮಾಡುವ ಇಚ್ಛೆಯಲ್ಲಿ, ಮತ್ತು ಅವರೊಳಗೆ ಪ್ರೀತಿಯನ್ನು ತೋರಿಸುವದರಲ್ಲಿ ಈ ಮೂವರೂ ಒಳ್ಳೆಯ ಒಂದು ದೃಷ್ಟಾಂತವಾಗಿದ್ದರು. ತದನಂತರ ಇನ್ನೊಬ್ಬ ಹುಡುಗಿಯು ಅವರೊಡನೆ ಜತೆಗೂಡಿದಳು.
ಈಗ ಶಾಲೆಯ ಪ್ರಾಂಗಣದಲ್ಲಿರುವ ಬೆಂಚಿನ ಮೇಲೆ ನಾಲ್ವರು ಕುಳಿತು, ಬೈಬಲನ್ನು ಒಟ್ಟಿಗೆ ಅಭ್ಯಾಸಿಸುತ್ತಿದ್ದರು. ಮತ್ತು ಅನೇಕರಿಗೆ ಆಶ್ಚರ್ಯವಾಗುವಂತೆ, ಅವರ ಸಂಖ್ಯೆಯು ಬೆಳೆಯಿತು. ತರಗತಿಯ ಇನ್ನೊಬ್ಬ ಹುಡುಗಿಯು ಅವರ ಉತ್ತಮ ನಡತೆಯ ಕುರಿತಾಗಿ ಆಸಕ್ತಿ ತಳೆದು, ಬೈಬಲ್ ಅಧ್ಯಯನದಲ್ಲಿ ಜತೆಗೂಡಲು ನಿರ್ಧರಿಸಿದಳು. ಇತರರೂ ಹಾಗೆಯೇ ಮಾಡುವಂತೆ, ವಿದ್ಯಾರ್ಥಿಗಳನ್ನೂ ಅಧ್ಯಾಪಕರುಗಳನ್ನೂ ಹೀಗೆ ಇತರರನ್ನು ಆಮಂತ್ರಿಸುವದನ್ನು ಈ ಐವರು ಮುಂದರಿಸಿದರು. ಅಷ್ಟಾದರೂ, ಅವರ ಹೆತ್ತವರಿಂದ ಈ ಹುಡುಗಿಯರು ಮಹಾ ಒತ್ತಡದ ಅನುಭವವನ್ನು ಪಡೆಯುವದು ಮುಂದರಿಯಿತು. ಅವರ ಸಾಹಿತ್ಯಗಳನ್ನು ನಾಶಗೊಳಿಸುವದರ ಮೂಲಕ ಮತ್ತು ಅವರನ್ನು ಕೆಟ್ಟದ್ದಾಗಿ ಉಪಚರಿಸುವದರ ಮೂಲಕ ಅವರ ಬೈಬಲ್ ಅಭ್ಯಾಸವನ್ನು ಹುಡುಗಿಯರು ನಿಲ್ಲಿಸುವಂತೆ ಬಲಾತ್ಕರಿಸಲು ಹೆತ್ತವರು ಕಠಿಣವಾಗಿ ಪ್ರಯತ್ನಿಸಿದರು.
ಆಸಕ್ತಿಯ ಒಬ್ಬ ಎಳೆಯ ವ್ಯಕ್ತಿಯೊಂದಿಗೆ ಮಾತ್ರವೇ ಆರಂಭಗೊಂಡ ಈ ಸಾಕ್ಷಿ ನೀಡುವಿಕೆಯ ಫಲಿತಾಂಶವೇನಾಯಿತು? ಹುಡುಗಿಯರಲ್ಲಿ ಒಬ್ಬಳು 1990 ರ ಜಿಲ್ಲಾ ಅಧಿವೇಶನದಲ್ಲಿ, ಮತ್ತು ಉಳಿದ ನಾಲ್ವರು 1991 ರ ವಸಂತ ಋತುವಿನಲ್ಲಿ ಸರ್ಕಿಟ್ ಸಮ್ಮೇಳನವೊಂದರಲ್ಲಿ ದೀಕ್ಷಾಸ್ನಾನ ಪಡೆದರು. ಮಹಾ ಆನಂದಕ್ಕೆ ಇದೊಂದು ಕಾರಣವಾಗಿತ್ತು! ಇಂದು, ಈ ಐವರೂ ಹುಡುಗಿಯರು ಕ್ರಮದ ಪ್ರಯನೀಯರರಾಗಿ ಸೇವೆ ಸಲ್ಲಿಸುತ್ತಿದ್ದಾರೆ! ಯಾವ ನಗರದಲ್ಲಿ ಇದು ಸಂಭವಿಸಿತೋ, ಅಲ್ಲಿ ಈಗ 11 ಪ್ರಚಾರಕರು ಇದ್ದು, ಅವರಲ್ಲಿ 8 ಜನರು ಪಯನೀಯರ್ ಸೇವೆಯಲ್ಲಿರುತ್ತಾರೆ.
ಪೂರ್ವ ಯೂರೋಪಿನಲ್ಲಿರುವ ಅವನ ಸಾಕ್ಷಿಗಳನ್ನು ಯೆಹೋವನು ಪೋಷಿಸುತ್ತಿದ್ದಾನೆ ಮತ್ತು ಆಶೀರ್ವದಿಸುತ್ತಾನೆ. ಲೋಕದ ಈ ಭಾಗದಲ್ಲಿ ಪ್ರಾಮಾಣಿಕ ಹೃದಯದವರ ನಡುವೆ ಅಭಿವೃದ್ಧಿಗಾಗಿ ಬಹಳ ಸಂಭಾವ್ಯತೆ ಇದೆಯೆಂಬದು ಸ್ಪಷ್ಟವಾಗಿಗುತ್ತದೆ.