ನಾನು ಸ್ವಾಭಿಮಾನವನ್ನು ನುಂಗಿಕೊಂಡು ಸಂತೋಷವನ್ನು ಕಂಡುಕೊಂಡೆನು
ನಾನು 1970 ರಲ್ಲಿ, 23 ವರ್ಷ ವಯಸ್ಸಿನವಳೂ ಹೆಬ್ಬಯಕೆಯವಳೂ ಆಗಿದ್ದೆ. ನನ್ನ ಕೆಲಸದ ಸ್ಥಳವಾದ ಇಟೆಲಿಯ ಇವ್ರೆಯಲ್ಲಿನ ಒಂದು ಮೋಟಾರುಕಾರ್ ಕ್ಲಬ್ನಲ್ಲಿ, ನಾನು ಮುಖ್ಯ ಕ್ಲಾರ್ಕ್ ಆಗಿ ಮಾಡಲ್ಪಟ್ಟಿದ್ದೆ. ದೊಡ್ಡ ಜನವಾಗಬೇಕೆಂಬ ನಿರ್ಧಾರ ಮಾಡಿದ್ದೆ ನಾನು. ಆದರೂ ನಾನು ಅತಿ ಖಿನ್ನಳೂ ನಿರಾಶೆಗೊಂಡವಳೂ ಆಗಿದ್ದೆ. ಏಕೆ?
ನನ್ನ ಗಂಡನು ತನ್ನ ಹೆಚ್ಚಿನ ಸಮಯವನ್ನು ಬಾರ್ಗಳಲ್ಲಿ ತನ್ನ ಮಿತ್ರರೊಂದಿಗೆ ಇಸ್ಪೀಟಾಟದಲ್ಲಿ ಕಳೆಯುತ್ತಿದ್ದನು ಮತ್ತು ಹೆಚ್ಚಿನ ಕುಟುಂಬ ಜವಾಬ್ದಾರಿಕೆಗಳನ್ನು ನಾನೇ ಹೊರುವಂತೆ ಬಿಟ್ಟಿದ್ದನು. ನಮ್ಮ ಸಂಬಂಧವು ಕಯ್ಷಿಸಲು ತೊಡಗಿತು. ಅತ್ಯಂತ ಚಿಕ್ಕ ವಿಷಯಗಳಲ್ಲೂ ನಾವು ಜಗಳವಾಡಿದೆವು. ಫಲಿತಾಂಶವಾಗಿ, ನನ್ನ ಮನಸ್ಸು ನಕಾರಾತ್ಮಕ ವಿಷಯಗಳಿಂದ ತುಂಬತೊಡಗಿತು.
‘ಯಾರೂ ನಿಜವಾಗಿ ನಿನ್ನಲ್ಲಿ ಆಸಕ್ತರಿಲ್ಲ’ ಎಂದನ್ನುತ್ತಿದ್ದೆ ನಾನು. ‘ನಿನ್ನ ಸ್ಥಾನದ ದುರುಪಯೋಗ ಮಾಡಲು ಮಾತ್ರವೇ ಅವರು ಬಯಸುತ್ತಾರೆ.’ ನಾನು ನನ್ನಲ್ಲಿ ಹೇಳುತ್ತಿದ್ದದ್ದು: ‘ದೇವರು ಇರಲು ಸಾಧ್ಯವಿಲ್ಲ ಯಾಕಂದರೆ ಆತನು ಇದ್ದದ್ದಾದರೆ, ಇಷ್ಟು ಕಷ್ಟಾನುಭವಗಳನ್ನು ಮತ್ತು ದುಷ್ಟತನವನ್ನು ಆತನು ಅನುಮತಿಸತ್ತಿರಲಿಲ್ಲ. ಜೀವವು ಮರಣದೆಡೆಗಿನ ಒಂದು ಓಟವಲ್ಲದೆ ಬೇರೇನೂ ಅಲ್ಲ.’ ವಿಷಯವು ಹೀಗೇಕೆ ಇತ್ತೆಂದು ನಾನು ತಿಳಿಯಲಾರದೆ ಇದ್ದೆನು.
ಒಂದು ಬದಲಾವಣೆಯ ಆರಂಭ
ಒಂದು ದಿನ, 1977 ರಲ್ಲಿ, ಇಬ್ಬರು ಯೆಹೋವನ ಸಾಕ್ಷಿಗಳು ನಮ್ಮ ಮನೆ ಬಾಗಲನ್ನು ತಟ್ಟಿದರು. ನನ್ನ ಗಂಡ ಸಾನ್ಕಾರ್ಲೊ ಅವರನ್ನು ಒಳಗೆ ಆಮಂತ್ರಿಸಿದನು ಮತ್ತು ಅವರು ಮಾತಾಡುವುದಕ್ಕಾಗಿ ವಾಸದ ಕೊಠಡಿಗೆ ಹೋದರು. ಅವರನ್ನು ತನ್ನಂತೆ ವಿಕಾಸವಾದಿಗಳಾಗಿ ಮಾಡುವ ಹೇತು ಅವನದ್ದಾಗಿತ್ತು, ಆದರೆ ಅವರೇ ಅವನ ಯೋಚನೆಯನ್ನು ಬದಲಾಯಿಸಿ ಬಿಟ್ಟರು!
ಬೇಗನೇ ಸಾನ್ಕ್ಲಾರೊ ಸಹ ತನ್ನ ಜೀವನದಲ್ಲಿ ಬದಲಾವಣೆ ಮಾಡ ತೊಡಗಿದನು. ನನಗೆ ಮತ್ತು ನಮ್ಮ ಮಗಳಿಗೆ ಹೆಚ್ಚು ಸಮಯ ಮತ್ತು ಗಮನವನ್ನು ಮೀಸಲಾಗಿಡುತ್ತಾ, ಅವನು ಹೆಚ್ಚು ತಾಳ್ಮೆಯುಳ್ಳವನಾದನು. ತಾನು ಕಲಿತ ವಿಷಯಗಳ ಕುರಿತು ಅವನು ನನಗೆ ತಿಳಿಸ ಪ್ರಯತ್ನಿಸಿದನು, ಆದರೆ ನಿಷ್ಠುರ ಮಾತಿನಿಂದ ನಾನು ಸಂಭಾಷಣೆಯನ್ನು ನಿರ್ವಿಕಾರವಾಗಿ ಕೊನೆಗೊಳಿಸುತ್ತಿದ್ದೆ.
ತದನಂತರ ಒಂದು ದಿನ ಸಾಕ್ಷಿಗಳು ಬಂದಾಗ, ನಾನು ಕೂತು, ನಿಜವಾಗಿಯೂ ಕಿವಿಗೊಟ್ಟೆನು. ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಕುರಿತು ಮತ್ತು ದೇವರ ರಾಜ್ಯದ ಕುರಿತು, ಪರದೈಸ ಭೂಮಿ, ಮತ್ತು ಮೃತರ ಪುನರುತ್ಥಾನದ ಕುರಿತು ಅವರು ಮಾತಾಡಿದರು. ನಾನು ಸ್ತಬ್ಧಳಾಗಿ ಹೋದೆ! ಮುಂದಿನ ಮೂರು ರಾತ್ರಿ ನಾನು ಮಲಗಲಿಲ್ಲ! ನಾನು ಹೆಚ್ಚನ್ನು ತಿಳಿಯ ಬಯಸಿದ್ದೆ, ಆದರೆ ನನ್ನ ಗಂಡನಿಗೆ ಪ್ರಶ್ನೆಗಳನ್ನು ಕೇಳುವದರಿಂದ ಸ್ವಾಭಿಮಾನವು ನನ್ನನ್ನು ತಡೆಯಿತು. ಅನಂತರ ಒಂದು ದಿನ ಅವನು ಗಡುಸಿನಿಂದ ಹೇಳಿದ್ದು: “ಇವತ್ತು ನೀನು ಕೇಳಿಯೇ ಕೇಳುವಿ. ನಿನ್ನೆಲ್ಲಾ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರಗಳಿವೆ.” ಅನಂತರ ಅವನು ನನಗೆ ಬೈಬಲ್ ಸತ್ಯಗಳನ್ನು ಕೇವಲ ಹೊಯ್ಯುತ್ತಲೇ ಹೋದನು.
ನಿರ್ಮಾಣಿಕನಾದ ದೇವರ ಹೆಸರು ಯೆಹೋವನೆಂತಲೂ, ಆತನ ಪ್ರಧಾನ ಗುಣವು ಪ್ರೀತಿಯೆಂತಲೂ, ನಾವು ನಿತ್ಯ ಜೀವವನ್ನು ಪಡೆಯಲಾಗುವಂತೆ ಆತನು ತನ್ನ ಮಗನನ್ನು ಪ್ರಾಯಶ್ಚಿತವ್ತಾಗಿ ಕಳುಹಿಸಿದನೆಂದೂ, ಮತ್ತು ಹರ್ಮಗೆದ್ದೋನಿನಲ್ಲಿ ದುಷ್ಟರ ನಾಶನದ ನಂತರ, ಯೇಸು ಕ್ರಿಸ್ತನು ತನ್ನ ಸಾವಿರ ವರ್ಷದ ಆಳಿಕೆಯಲ್ಲಿ ಮೃತರನ್ನು ಪುನರುತ್ಥಾನ ಮಾಡುವನೆಂತಲೂ ಸಾನ್ಕಾರ್ಲೊ ನನಗೆ ಹೇಳಿದನು. ಪುನರುತ್ಥಾನಗೊಂಡವರು ಮಾನಸಿಕ ಮತ್ತು ಶಾರೀರಿಕ ಪರಿಪೂರ್ಣತೆಗೆ ಬೆಳೆಯುವರೆಂದೂ ಮತ್ತು ಭೂಮಿಯ ಮೇಲೆ ಪರದೈಸದಲ್ಲಿ ಸದಾ ಜೀವಿಸುವ ಸಂದರ್ಭವು ಅವರಿಗಿರುವುದೆಂದೂ ಅವನು ತಿಳಿಸಿದನು.
ಮರುದಿನ ನಾನು ನನ್ನ ಗಂಡನೊಂದಿಗೆ ಮೊತ್ತಮೊದಲನೆಯ ಸಾರಿ ರಾಜ್ಯ ಸಭಾಗೃಹಕ್ಕೆ ಹೋದೆನು. ತದನಂತರ ನಾನು ಅವನಿಗಂದದ್ದು: “ಈ ಜನರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ನಾನು ಇಲ್ಲಿಗೆ ಬರುವುದನ್ನು ಮುಂದರಿಸಲು ಬಯಸುತ್ತೇನೆ ಯಾಕಂದರೆ ಇವರು ನಿಜವಾಗಿಯೂ ಸಂತೋಷಿತರು.” ನಾನು ಕ್ರಮವಾಗಿ ಕೂಟಗಳನ್ನು ಹಾಜರಾಗ ತೊಡಗಿದೆನು, ಮತ್ತು ನನ್ನೊಂದಿಗೆ ಒಂದು ಬೈಬಲ್ ಅಧ್ಯಯನವು ಆರಂಭಿಸಲ್ಪಟ್ಟಿತು. ನಾನು ಕಲಿಯುತ್ತಿದ್ದ ವಿಷಯಗಳ ಕುರಿತು ನಾನು ಬಹಳವಾಗಿ ಯೋಚಿಸಿದೆನು ಮತ್ತು ದೇವರ ನಿಜ ಜನರನ್ನು ಕಂಡುಕೊಂಡ ಖಾತರಿಯು ಬೇಗನೇ ನನಗಾಯಿತು. ನನ್ನ ಗಂಡ ಮತ್ತು ನಾನು 1979 ರಲ್ಲಿ ಸ್ನಾನ ಪಡಕೊಂಡ ಮೂಲಕ ಯೆಹೋವನಿಗೆ ನಮ್ಮ ಸಮರ್ಪಣೆಯನ್ನು ಸೂಚಿಸಿದೆವು.
ಪೂರ್ಣ ಸಮಯದ ಸೇವೆ
ಆ ವರ್ಷದಲ್ಲಿ ಅನಂತರ ನಡೆದ ಒಂದು ಸರ್ಕಿಟ್ ಸಮ್ಮೇಲನದಲ್ಲಿ, ಪೂರ್ಣ ಸಮಯದ ಸಾರುವಿಕೆಯನ್ನು ಉತ್ತೇಜಿಸಿದ ಒಂದು ಭಾಷಣವು ಕೊಡಲ್ಪಟ್ಟಿತು. ಆ ಸೇವೆಯನ್ನು ತಕ್ಕೊಳ್ಳಲು ನಾನು ಪ್ರೇರೇಪಿಸಲ್ಪಟ್ಟೆನು ಮತ್ತು ಆ ಕುರಿತು ಯೆಹೋವನಿಗೆ ಪ್ರಾರ್ಥನೆ ಮಾಡಿದೆನು. ಆದರೆ ನಾನು ಗರ್ಭಿಣಿಯಾದೆನು, ಮತ್ತು ನನ್ನ ಯೋಜನೆಗಳು ತಡೆಯಲ್ಪಟ್ಟವು. ಮುಂದಿನ ನಾಲ್ಕು ವರ್ಷಗಳಲ್ಲಿ ನಮಗೆ ಮೂವರು ಮಕ್ಕಳಾದರು. ಅವರಲ್ಲಿ ಇಬ್ಬರು, ಬೇರೆ ಬೇರೆ ಸಂದರ್ಭಗಳಲ್ಲಿ, ಜೀವ-ಹಾನಿಯ ಭೀತಿಯಿದ್ದ ಶಾರೀರಿಕ ವ್ಯಂಗತೆಗಳನ್ನು ವಿಕಸಿಸಿಕೊಂಡರು. ಆದರೆ ಕೃತಜ್ಞತಾಪೂರ್ಣವಾಗಿ, ಪ್ರತಿ ಸಂದರ್ಭದಲ್ಲಿ, ಅವರು ಪೂರ್ಣವಾಗಿ ಗುಣಹೊಂದಿದರು.
ಪೂರ್ಣ ಸಮಯದ ಸೇವೆಗಾಗಿ ನನ್ನ ಯೋಜನೆಯನ್ನು ಇನ್ನು ಮುಂದಕ್ಕೆ ಹಾಕಲು ಸಾಧ್ಯವಿಲ್ಲವೆಂದು ನಾನೀಗ ಭಾವಿಸಿದೆ. ಪತ್ನಿ ಮತ್ತು ತಾಯಿಯೋಪಾದಿ ನನ್ನ ಜವಾಬ್ದಾರಿಕೆಗಳ ಮೇಲೆ ಒಳ್ಳೇ ಗಮನವಿಡಲು ನಾನು ನನ್ನ ಐಹಿಕ ಕೆಲಸವನ್ನು ಬಿಟ್ಟುಬಿಟ್ಟೆನು. ನನ್ನ ಗಂಡ ಮತ್ತು ನಾನು ಏಕ ಆದಾಯದಲ್ಲಿ ಜೀವನೋಪಾಯ ನಡಿಸಲು ಯೋಜನೆ ಮಾಡಿದೆವು, ಇದು ಅನಾವಶ್ಯಕವಾದ ಎಲ್ಲವನ್ನು ಬಿಟ್ಟುಕೊಡುವ ಅರ್ಥದಲ್ಲಿತ್ತು. ಆದರೂ, ಯೆಹೋವನು ನಮ್ಮನ್ನು ಹೇರಳವಾಗಿ ಆಶೀರ್ವದಿಸಿದನು, ಬಡತನಕ್ಕೆ ಅಥವಾ ಕೊರತೆಗೆ ನಮ್ಮನ್ನೆಂದೂ ಬಿಟ್ಟುಕೊಡಲಿಲ್ಲ.
ಆಗ 15 ವಯಸ್ಸಿನ ಮತ್ತು ಆವಾಗಲೇ ದೀಕ್ಷಾಸ್ನಾನ ಹೊಂದಿದ್ದ ನನ್ನ ಮಗಳು, 1984 ರಲ್ಲಿ, ಪಯನೀಯರಳಾಗಿ ಪೂರ್ಣ ಸಮಯದ ಸೇವೆಯನ್ನು ಆರಂಭಿಸಿದಳು. ಅದೇ ಸಮಯದಲ್ಲಿ, ನನ್ನ ಗಂಡನು ಒಬ್ಬ ಹಿರಿಯನಾಗಿ ನೇಮಿಸಲ್ಪಟ್ಟನು. ಮತ್ತು ನಾನು? ನಾನಿನ್ನೂ ಪಯನೀಯರಳಾಗ ಶಕ್ತಳಲ್ಲವೆಂಬ ಭಾವನೆಯಿಂದ, ಸಾರುವ ಕಾರ್ಯದಲ್ಲಿ ತಿಂಗಳಿಗೆ 30 ತಾಸುಗಳ ಗುರಿಯನ್ನು ನಾನಿಟ್ಟೆನು. ನಾನದನ್ನು ಮುಟ್ಟಿದೆನು ಮತ್ತು ನನ್ನಲ್ಲೇ ಅಂದುಕೊಂಡದ್ದು: ‘ಶಾಭಾಸ್! ನೀನು ಬಹಳಷ್ಟನ್ನು ಮಾಡುತ್ತಿರುವಿ.’
ಆದರೆ ಪುನೊಮ್ಮೆ ಸ್ವಾಭಿಮಾನವು ನನ್ನ ಸಮಸ್ಯೆಯಾಗಿ ಪರಿಣಮಿಸಿತು. (ಜ್ಞಾನೋಕ್ತಿ 16:18) ನಾವೆಷ್ಟು ಒಳ್ಳೇದಾಗಿ ಮಾಡುತ್ತಿದ್ದೇನೆ ಮತ್ತು ಇನ್ನು ಹೆಚ್ಚೇನೂ ಆತ್ಮಿಕ ಪ್ರಗತಿ ಮಾಡುವ ಅಗತ್ಯ ನನಗಿಲ್ಲವೆಂದು ಯೋಚಿಸ ತೊಡಗಿದೆನು. ನನ್ನ ಆತ್ಮಿಕತೆಯು ಕ್ಷೀಣಿಸುತ್ತಾ ಬಂತು, ನಾನು ಗಳಿಸಿದ್ದ ಒಳ್ಳೇ ಗುಣಗಳನ್ನು ಸಹ ನಾನು ಕಳಕೊಳ್ಳ ತೊಡಗಿದೆನು. ಆಗ ನನಗೆ ಅಗತ್ಯವಿದ್ದ ಶಿಸ್ತು ದೊರಕಿತು.
ಇಬ್ಬರು ಸಂಚಾರ ಸೇವಕರು ಮತ್ತು ಅವರ ಪತ್ನಿಯರು, 1985 ರಲ್ಲಿ ನಮ್ಮ ಸಭೆಗೆ ತಮ್ಮ ಕಾಲಾವಧಿಯ ಸಂದರ್ಶನ ಮಾಡಿದಾಗ, ನಮ್ಮ ಮನೆಯಲ್ಲಿ ಅತಿಥಿಗಳಾಗಿ ಉಳಿದರು. ಈ ನಮ್ರರಾದ, ಸ್ವತ್ಯಾಗವುಳ್ಳ ಕ್ರೈಸ್ತರನ್ನು ಅವಲೋಕಿಸುವಲ್ಲಿ ನಿಜವಾಗಿ ವಿಷಯಗಳ ಕುರಿತು ನನ್ನನ್ನು ಧ್ಯಾನಿಸುವಂತೆ ಮಾಡಿತು. ವಾಚ್ ಟವರ್ ಸೊಸೈಟಿಯ ಪ್ರಕಾಶನಗಳನ್ನುಪಯೋಗಿಸಿ, ನಾನು ದೀನತೆಯ ವಿಷಯದ ಮೇಲೆ ಸಂಶೋಧನೆ ಮಾಡಿದೆ. ಪಾಪಪೂರ್ಣ ಮಾನವರಾದ ನಮ್ಮೊಂದಿಗೆ ತನ್ನ ವ್ಯವಹಾರಗಳಲ್ಲಿ ಯೆಹೋವನು ತೋರಿಸುವ ಮಹಾ ದೈನ್ಯತೆಯ ಕುರಿತು ನಾನು ಯೋಚಿಸಿದೆ. (ಕೀರ್ತನೆ 18:35) ನನ್ನ ಯೋಚನೆಯನ್ನು ಬದಲಾಯಿಸಲೇಬೇಕೆಂಬದು ನನಗೆ ತಿಳಿಯಿತು.
ಯೆಹೋವನನ್ನು ಆತನು ನನ್ನಿಂದ ಬಯಸುವ ಪ್ರಕಾರ ಸೇವಿಸುವಂತೆ ಮತ್ತು ಆತನ ಮಹಿಮೆಗಾಗಿ ನನ್ನಲ್ಲಿರುವ ವರಗಳನ್ನು ಉಪಯೋಗಿಸುವಂತೆ ದೀನತೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡಬೇಕೆಂದು ನಾನು ಅತನಿಗೆ ಮೊರೆಯಿಟ್ಟೆನು. ಪಯನೀಯರ ಸೇವೆಗಾಗಿ ಒಂದು ಅರ್ಜಿಯನ್ನು ತುಂಬಿಸಿದೆನು ಮತ್ತು ಮಾರ್ಚ್, 1989 ರಲ್ಲಿ ಪೂರ್ಣ ಸಮಯದ ಸೇವೆಯಲ್ಲಿ ಆತನನ್ನು ಸೇವಿಸ ತೊಡಗಿದೆನು.
ನಾನು ನಿಜವಾಗಿಯೂ ಸಂತೋಷಿತಳು ಎಂದು ನಾನೀಗ ಹೇಳಬಲ್ಲೆನು ಮತ್ತು ನನ್ನ ಸಂತೋಷಕ್ಕೆ ನೆರವಾದದ್ದು ನನ್ನ ಸ್ವಾಭಿಮಾನವನ್ನು ನುಂಗಿಕೊಂಡದ್ದೇ ಆಗಿದೆ. ಜೀವಿಸಲು ಒಂದು ನಿಜ ಕಾರಣವನ್ನು ನಾನು ಕಂಡುಕೊಂಡೆನು—ಅದೇನಂದರೆ ಸತ್ಯದೇವರಾದ ಯೆಹೋವನು ಯಾರು ಆತನನ್ನು ಹುಡುಕುತ್ತಾರೋ ಅವರಿಗೆ ದೂರವಾದವನಲ್ಲ ಎಂದು ತಿಳಿಯುವಂತೆ ಅಗತ್ಯವಿರುವವರಿಗೆ ಸಹಾಯ ಮಾಡುವುದೇ.—ವೇರ ಬ್ರ್ಯಾಂಡೋಲಿನಿ ಯಿಂದ ಹೇಳಲ್ಪಟ್ಟದ್ದು.
[Picture of Vera Brandolini on page 26]