“ಬೆಳಕು ವಾಹಕರು” ಜಿಲ್ಲಾ ಅಧಿವೇಶನಗಳಲ್ಲಿ ಹೇರಳವಾದ ಆಶೀರ್ವಾದಗಳು
ಸಾಧಾರಣ 2,700 ವರ್ಷಗಳ ಹಿಂದೆ, ಪ್ರವಾದಿ ಯೆಶಾಯನು ಬರೆದದ್ದು: “ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ.” (ಯೆಶಾಯ 60:2) ಆ ಮಾತುಗಳು ಎಷ್ಟೊಂದು ನಿಜವಾಗಿ ಪರಿಣಮಿಸಿವೆ! ಆದಾಗ್ಯೂ, ನಿರೀಕ್ಷೆ ಇದೆ, ಯಾಕಂದರೆ ಯೆಹೋವನು ಬೆಳಕು ಪ್ರಕಾಶಿಸಲ್ಪಡುವಂತೆ ಮಾಡಿರುತ್ತಾನೆ. ಕಳೆದ ವರ್ಷ, ದೇವರ ಬೆಳಕನ್ನು ಪ್ರೀತಿಸುವವರು “ಬೆಳಕು ವಾಹಕರು” ಜಿಲ್ಲಾ ಅಧಿವೇಶನಗಳಿಗೆ ಹಾಜರಾಗಲು ಉತ್ಸಾಹಪೂರ್ವಕವಾಗಿ ಆಮಂತ್ರಿಸಲ್ಪಟ್ಟರು.
ಉತ್ತರ ಅಮೆರಿಕದಲ್ಲಿ ಜೂನ್ನಲ್ಲಿ ಅಧಿವೇಶನದ ಕಾರ್ಯಕ್ರಮವನ್ನು ಪ್ರಥಮವಾಗಿ ನಿರೂಪಿಸಲಾಯಿತು. ಅನಂತರ ಹಿಂಬಾಲಿಸಿದ ತಿಂಗಳುಗಳಲ್ಲಿ, ಪೂರ್ವ ಮತ್ತು ಪಶ್ಚಿಮ ಯೂರೋಪ್, ಮಧ್ಯ ಮತ್ತು ದಕ್ಷಿಣ ಅಮೆರಿಕ, ಆಫ್ರಿಕ, ಏಷಿಯಾ, ಮತ್ತು ಸಮುದ್ರಗಳ ಚಿಕ್ಕ ದ್ವೀಪಗಳಲ್ಲಿ ಅದು ನಿರೂಪಿಸಲ್ಪಟ್ಟಿತು. ಹಾಜರಾದವರ ಸಂಖ್ಯೆಯು ಲಕ್ಷಗಟ್ಟಲೆಯಾಗಿತ್ತು. ಮತ್ತು ಅವರು ಎಂಥ ಒಂದು ಆತ್ಮಿಕ ಔತಣದಲ್ಲಿ ಆನಂದಿಸಿದರು!
“ಸುಸ್ವಾಗತ, ಬೆಳಕು ವಾಹಕರಾದ ನಿಮಗೆಲ್ಲರಿಗೆ!”
ಹೆಚ್ಚಿನ ಸ್ಥಳಗಳಲ್ಲಿ ಅಧಿವೇಶನವು ಶುಕ್ರವಾರದಿಂದಾರಂಭಿಸಿತು ಮತ್ತು ಭಾನುವಾರ ಮಧ್ಯಾಹ್ನದ ಮೇಲೆ ಮುಗಿಯಿತು. ಅಧಿವೇಶನಗಾರರು ಶುಕ್ರವಾರ ಬೆಳಿಗ್ಗೆ ಅವರ ಆಸನಗಳಲ್ಲಿ ಉಪಸ್ಥಿತರಾದ ಮೇಲೆ, ಈ ಅಂತ್ಯ ದಿನಗಳಲ್ಲಿ ಯೆಹೋವನ ಬೆಳಕು ಹೆಚ್ಚೆಚ್ಚು ಉಜ್ವಲವಾಗಿ ಪ್ರಕಾಶಿಸಲ್ಪಡುವ ವಿಧಾನದ ಚುಟುಕಾದ ಮೇಲ್ನೋಟವನ್ನು ಕೇಳಲು ಅವರಿಗೆ ಆನಂದವಾಯಿತು. ಅನಂತರ ಅಧಿವೇಶನದ ಅಧ್ಯಕ್ಷರು ವೇದಿಕೆಗೆ ಬಂದು ಮಾತಾಡಿದರು. ನಿಜ ಕ್ರೈಸ್ತರು ಬೆಳಕು ವಾಹಕರಾಗಿರಲೇಬೇಕೆಂದು ಅವರು ಒತ್ತಿಹೇಳಿದರು ಮತ್ತು ಬೆಚ್ಚಗೆಯಿಂದ ಅಂದದ್ದು: “ಸುಸ್ವಾಗತ, ಬೆಳಕು ವಾಹಕರಾದ ನಿಮಗೆಲ್ಲರಿಗೆ!” ಅಧಿವೇಶನದ ಕಾರ್ಯಕ್ರಮವು ಪ್ರತಿನಿಧಿಗಳಿಗೆ ಯೆಹೋವನ ಬೆಳಕನ್ನು ಪ್ರತಿಫಲಿಸುತ್ತಾ ಮುಂದುವರಿಯುವಂತೆ ಸಹಾಯ ಮಾಡಲಿಕ್ಕಿತ್ತು.
ಮುಖ್ಯ ಭಾಷಣವು ಇಡೀ ಅಧಿವೇಶನಕ್ಕೆ ಬಣ್ಣವನ್ನಿತಿತ್ತು. ಹಿಂದೆ ಏದೆನ್ ತೋಟದಲ್ಲಿಯೇ ಮಾನವಜಾತಿಯ ಜ್ಯೋತಿಗಳು ನಂದಿದ್ದವೆಂದು ಈ ಭಾಷಣಕರ್ತರು ಅಧಿವೇಶನಗಾರರಿಗೆ ನೆನಪು ಕೊಟ್ಟರು. ಅಂದಿನಿಂದ, ಸೈತಾನನು ಮಾನವರನ್ನು ಸತ್ಯದ ಬೆಳಕಿಗೆ ಕುರುಡರನ್ನಾಗಿ ಮಾಡಿದ್ದಾನೆ. (2 ಕೊರಿಂಥ 4:4) ಆದರೂ, ಯೇಸುವು “ಜನಾಂಗಗಳ ಬೆಳಕಾಗಿ” ಬಂದನು. (ಯೆಶಾಯ 42:1-6) ಆತನು ಧಾರ್ಮಿಕ ಸುಳ್ಳುಗಳನ್ನು ಹೊರಗೆಡಹಿದನು, ಕತ್ತಲೆಗೆ ಸಂಬಂಧಪಟ್ಟ ಕುಕೃತ್ಯಗಳನ್ನು ಗುರುತಿಸಿದನು, ಯೆಹೋವನ ಸಾರ್ವಭೌಮತೆಯನ್ನು ಎತ್ತಿಹಿಡಿದನು, ಮತ್ತು ರಾಜ್ಯದ ಶುಭವಾರ್ತೆಯನ್ನು ಸಾರಿದನು. ಯೇಸುವಿನ ಶಿಷ್ಯರು ಅದನ್ನೇ ಮಾಡಿದರು—ಮತ್ತು ಇನ್ನೂ ಮಾಡುತ್ತಾ ಇದ್ದಾರೆ! (ಮತ್ತಾಯ 28:19, 20) ಭಾಷಣಕರ್ತರು ಕಲಕುವ ರೀತಿಯಲ್ಲಿ ಹೇಳಿದ್ದು: ‘ಯೇಸುವಿನಂತೆ ನಾವೂ, ಬೆಳಕು ವಾಹಕರಾಗಬಲ್ಲೆವು. ನಮ್ಮ ದಿನಗಳಲ್ಲಿ ಇದಕ್ಕಿಂತ ಹೆಚ್ಚು ಮಹತ್ವದ ಕೆಲಸವೇ ಇಲ್ಲ. ಮತ್ತು ಹೆಚ್ಚು ಮಹಾ ಸುಯೋಗವೇ ಇಲ್ಲ.’
ಅಧಿವೇಶನದ ಮೊದಲ ಭಾಗವು ಸಮಾಪ್ತಿಗೊಳ್ಳುತ್ತಿರುವಾಗಲೇ ಆಶ್ಚರ್ಯವೊಂದಿತ್ತು. ಅಧಿವೇಶನದ ಅಧ್ಯಕ್ಷರು ವೇದಿಕೆಗೆ ಮರಳಿ ಬಂದರು ಮತ್ತು ನಾಲ್ಕು ಹೊಸ ಕಿರುಹೊತ್ತಗೆಗಳ ಶ್ರೇಣಿಯ ಮೊದಲನೆಯದರ್ದ ಬಿಡುಗಡೆಯನ್ನು ಪ್ರಕಟಿಸಿದರು. ಈ ಬೆಳವಣಿಗೆಯನ್ನು ಉತ್ಸುಕತೆಯ ಕರತಾಡನ ಸ್ವಾಗತಿಸಿತು, ಮತ್ತು ಹಾಜರಿದ್ದ ಪ್ರತಿಯೊಬ್ಬ ಪ್ರತಿನಿಧಿಗೆ ಕಿರುಹೊತ್ತಗೆಗಳ ಒಂದು ಪ್ರತಿಯು ದೊರಕುವಂತೆ ಮಾಡಲಾಯಿತು.
ಶುಕ್ರವಾರ ಮಧ್ಯಾಹ್ನದ ಮೇಲೆ, ಅಧಿವೇಶನದ ಕಾರ್ಯಕ್ರಮವು ಬೆಳಕು ವಾಹಕರಾಗಿರುವ ಕ್ರೈಸ್ತರಿಗಾಗಿ ಬುನಾದಿ ಸಲಹೆಗೆ ಇಳಿಯಿತು. ಮೊದಲ ಎರಡು ಭಾಷಣಗಳು ಲೋಕದ ಕತ್ತಲಿನ ಮೂಲಕ ಕಳಂಕಿತರಾಗುವುದನ್ನು ತಪ್ಪಿಸುವುದು ಹೇಗೆ ಎಂಬದರ ಮೇಲೆ ಉತ್ತಮ ಬುದ್ಧಿವಾದವನ್ನು ಒದಗಿಸಿತು. ಸೈತಾನನು ಬೆಳಕಿನ ಒಬ್ಬ ದೂತನಾಗಿ ಕಾಣಬರಬಹುದಾಗಿರುವಾಗ, ಲೋಕದ ಅಶುದ್ಧ ವಿಷಯಗಳು ನಮ್ಮನ್ನು ವಂಚಿಸದಂತೆ ಆತ್ಮಿಕ ಹೊರನೋಟವನ್ನು ಕಾಪಾಡಿಕೊಳ್ಳುವುದು ಪ್ರಾಮುಖ್ಯ. (2 ಕೊರಿಂಥ 11:14) ಪೌಲನು ಸಲಹೆ ಇತ್ತದ್ದು: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” (ರೋಮಾಪುರ 12:2) ಕ್ರೈಸ್ತನ ಮಾರ್ಪಡುವಿಕೆಯು ಮುಂದುವರಿಯುತ್ತಾ ಇರುವ ಒಂದು ಕಾರ್ಯಗತಿ ಎಂಬುದನ್ನು ಅಧಿವೇಶನದ ಪ್ರತಿನಿಧಿಗಳು ಕೇಳಿದರು. ದೇವರ ವಾಕ್ಯದ ಅಧ್ಯಯನ ಮಾಡುವಾಗ ಮತ್ತು ಕಲಿತದ್ದನ್ನು ಅನ್ವಯಿಸುವಾಗ ನಮ್ಮ ಮನಸ್ಸುಗಳು ಸತತವಾಗಿ ಶುದ್ಧಗೊಳ್ಳುತ್ತವೆ ಮತ್ತು ರೂಪಿಸಲ್ಪಡುತ್ತವೆ. ಹೀಗೆ, ನಾವು ಹೆಚ್ಚೆಚ್ಚಾಗಿ “ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದ” ಯೇಸುವಿನಂತಾಗುವೆವು.—ಯೋಹಾನ 1:14.
ಯುವ ಬೆಳಕು ವಾಹಕರು
ಶುಕ್ರವಾರದ ಅಪರಾಹ್ಣದ ಎರಡನೇ ಭಾಗವನ್ನು ಯುವಜನರಿಗೆ ಉದ್ದೇಶಿಸಲಾಗಿತ್ತು. ಮೊದಲ ಭಾಷಣ (“ಯುವಜನರೇ—ನೀವೇನನ್ನು ಬೆನ್ನಟ್ಟುತ್ತೀರಿ?”) ನಂಬಿಗಸತ್ತೆಗೆ ಒಳ್ಳೇ ಮಾದರಿಯಾಗಿದ್ದಂಥ ಯುವ ಕ್ರೈಸ್ತರಿಗೆ ಪ್ರಶಂಸೆಯನ್ನಿತಿತ್ತು. ಆದರೆ ಅವರು ಸೈತಾನನ ನಿರ್ದಿಷ್ಟ ಗುರಿಹಲಗೆಯಾಗಿರುತ್ತಾರೆಂದು ಅದು ಅವರಿಗೆ ನೆನಪು ಹುಟ್ಟಿಸಿತು. ಒಳ್ಳೇ ತರಬೇತಿ ಹೊಂದಿದ ಕ್ರೀಡಾಪಟುವಿಗೆ ಕೂಡ ತರಪೇತುಗಾರನ ಅಗತ್ಯವಿದೆ. ಅದೇ ರೀತಿಯಲ್ಲಿ, ಯುವ ಜನರು ಬೆಳಕಿನಲ್ಲಿ ನಡೆಯುತ್ತಾ ಇರಬೇಕಾಗಿರುವಲ್ಲಿ ಅವರಿಗೆ ಅವರ ಹೆತ್ತವರ ಮತ್ತು ಸಭೆಯ ಸಹಾಯದ ಅಗತ್ಯವಿದೆ.
ಶುಕ್ರವಾರದ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದ, ಯೆಹೋವನ ದೃಷ್ಟಿಯಲ್ಲಿ ಯಾವುದು ಸರಿಯೋ ಅದನ್ನು ಮಾಡುವುದು ಎಂಬ ಅತ್ಯುತ್ತಮ ಡ್ರಾಮದ ಮೂಲಕ ಇದನ್ನು ಒತ್ತಿ ತಿಳಿಸಲಾಯಿತು. ರಾಜ ಯೋಷೀಯನ ಉದಾಹರಣೆಯು ಮುಖ್ಯಾಂಶವಾಗಿತ್ತು. ಎಳೆಯ ಹುಡುಗನಾಗಿಯೂ, ಅವನು ಯೆಹೋವನನ್ನು ಸೇವಿಸಲು ದೃಢ ನಿರ್ಧಾರ ಮಾಡಿದ್ದನು. ಆತನ ಸುತ್ತಲೂ ಕೆಟ್ಟ ಪ್ರಭಾವಗಳಿದ್ದವು, ಆದರೆ ಮಹಾ ಯಾಜಕನಾದ ಹಿಲ್ಕೀಯನ ಮಾರ್ಗದರ್ಶನದೊಂದಿಗೆ ಮತ್ತು ದೇವರ ನಿಯಮಶಾಸ್ತ್ರಕ್ಕೆ ಅವನ ಸ್ವಂತ ಪ್ರೀತಿಯ ಕಾರಣ, ಯೋಷೀಯನು ಯೆಹೋವನ ದೃಷ್ಟಿಯಲ್ಲಿ ಯಾವುದು ಸರಿಯೋ ಅದನ್ನು ಮಾಡಿದನು. ಇಂದಿನ ಯುವ ಕ್ರೈಸ್ತರು ಅದೇ ರೀತಿಯಲ್ಲಿ ಕ್ರಿಯೆಗೈಯುವಂತಾಗಲಿ.
ಬೆಳಕು ಪ್ರಕಾಶಿಸಲಿ
ರಾತ್ರಿಯ ವಿಶ್ರಾಂತಿಯ ಬಳಿಕ, ಪ್ರತಿನಿಧಿಗಳು ಮುಂದಿನ ಭಕ್ತಿವೃದ್ಧಿಗೊಳಿಸುವ ಶಾಸ್ತ್ರೀಯ ಸಲಹೆಗಳಿಗಾಗಿ ತಯಾರಾಗಿ ಶನಿವಾರ ಬೆಳಿಗ್ಗೆ ಅಧಿವೇಶನಕ್ಕೆ ಬಂದರು. ಅವರಿಗೆ ನಿರಾಶೆಯಾಗಲಿಲ್ಲ. ದಿನದ ವಚನದ ಚರ್ಚೆಯನ್ನನುಸರಿಸಿ, ಕ್ರೈಸ್ತನು ತನ್ನ ಬೆಳಕನ್ನು ಪ್ರಕಾಶಿಸಲು ಬಿಡುವ ವಿವಿಧ ವಿಧಾನಗಳನ್ನು ಎತ್ತಿ ತೋರಿಸುವ ಭಾಷಣ ಮಾಲೆಯೊಂದಿಗೆ ಕಾರ್ಯಕ್ರಮವು ಮುಂದುವರಿಯಿತು. (ಮತ್ತಾಯ 5:14-16) ಸಾರುವುದು ಒಂದು ಪ್ರಮುಖ ವಿಧಾನ, ಮತ್ತು ಒಳ್ಳೇ ನಡತೆಯು ಕೂಡ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆ. ಭಾಷಣ ಕರ್ತನು ಹೇಳಿದಂತೆ: “ಸಾರುವುದು ಇತರರಿಗೆ ನಾವೇನನ್ನು ನಂಬುತ್ತೇವೊ ಅದನ್ನು ಹೇಳುತ್ತದೆ, ಆದರೆ ಪ್ರೀತಿಯನ್ನು ಆಚರಿಸುವುದು ಅದನ್ನು ಪ್ರತ್ಯಕ್ಷಾಭಿನಯಿಸುತ್ತದೆ.”
ಸಾರುವಿಕೆಯ ಒಂದು ಪ್ರಮುಖ ಸಾಧನವನ್ನು—ಕಿರುಹೊತ್ತಗೆ—ಅಧಿವೇಶನಗಾರರ ಗಮನಕ್ಕೆ ತರಲಾಯಿತು. ಹಿಂದಿನ ದಿನದ ಪ್ರಕಟನೆಯು ಮನಸ್ಸಿನಲ್ಲಿ ಇನ್ನೂ ಹಸಿಯಾಗಿರುವುದರೊಂದಿಗೆ, ಈ ಸಣ್ಣ ಸಲಕರಣೆಗಳು ಎಷ್ಟು ಶಕ್ತಿಯುತವಾಗಿವೆ ಎಂದು ರುಜುಪಡಿಸುವ ಅನುಭವಗಳನ್ನು ಪ್ರತಿನಿಧಿಗಳು ಆಲಿಸಿದರು. ಪ್ರತಿಯೊಂದು ಸಂದರ್ಭಗಳಲ್ಲಿ ತಯಾರಾಗಿರಲು, ಎಲ್ಲಾ ಸಮಯಗಳಲ್ಲಿಯೂ ಅವರೊಂದಿಗೆ ಕಿರುಹೊತ್ತಗೆಗಳ ಸಂಗ್ರಹವಿರುವಂತೆ ಪ್ರತಿನಿಧಿಗಳು ಪ್ರೋತ್ಸಾಹಿಸಲ್ಪಟ್ಟರು.
ನಂತರ ಗಮನವನ್ನು ಬೆಳಕು ಧರಿಸುವಲ್ಲಿ ಕಷ್ಟಪಟ್ಟು ಕೆಲಸ ಮಾಡುವವರಾದ ಆ ಪೂರ್ಣ ಸಮಯದ ರಾಜ್ಯ ಘೋಷಕರಾದ ಪಯನೀಯರರ ಕಡೆಗೆ ಸೆಳೆಯಲಾಯಿತು. ಕಷ್ಟಪಟ್ಟು ಕೆಲಸ ಮಾಡುವ ನಮ್ಮ ಪಯನೀಯರರನ್ನು ನಾವೆಷ್ಟು ಗಣ್ಯಮಾಡುತ್ತೇವೆ! ಮತ್ತು ಅವರ ಸಂಖ್ಯೆಯು ಬೆಳೆಯುತ್ತಿದೆ. ಕೇವಲ ಇತ್ತೀಚೆಗೆ ಆರಾಧನೆಯ ಸ್ವಾತಂತ್ರ್ಯವು ಕೊಡಲ್ಪಟ್ಟ ದೇಶಗಳಲಿಯ್ಲು ಕೂಡ, ಪಯನೀಯರ ಪಂಕ್ತಿಗಳು ಉಕ್ಕೇರುತ್ತವೆ. ಪಯನೀಯರರು ಅವರ ಸುಯೋಗವನ್ನು ಅಮೂಲ್ಯವಾಗಿಟ್ಟುಕೊಳ್ಳುವಂತೆ ಪ್ರೋತ್ಸಾಹಿಸಲ್ಪಟ್ಟರು. ಇನ್ನೂ ಪಯನೀಯರಿಂಗ್ ಮಾಡದಿರುವವರು ಅವರ ಪರಿಸ್ಥಿತಿಗಳನ್ನು ಪರಿಗಣಿಸುವಂತೆ ಪ್ರಚೋದಿಸಲ್ಪಟ್ಟರು. ಒಂದುವೇಳೆ ಅವರು ಕೂಡ ಪೂರ್ಣ ಸಮಯದ ಸೇವೆಯಲ್ಲಿ ಅವರ ಬೆಳಕನ್ನು ಪ್ರಕಾಶಿಸುವಂತೆ ಬಿಡಲು ಅವರ ಕಾರ್ಯಾಧಿಗಳನ್ನು ಏರ್ಪಡಿಸಿಕೊಳ್ಳಬಹುದು.
ಬೆಳಕು ವಾಹಕರಾಗಿರುವುದು ಅನೇಕ ಬಾರಿ ತ್ಯಾಗಗಳನ್ನು ಒಳಗೊಂಡಿರುತ್ತದೆ, ಮತ್ತು “ಸ್ವ-ತ್ಯಾಗದ ಆತ್ಮದೊಟ್ಟಿಗೆ ಯೆಹೋವನನ್ನು ಸೇವಿಸುವುದು” ಎಂಬ ಮುಂದಿನ ಭಾಷಣದಲ್ಲಿ, ಇದನ್ನು ಎತ್ತಿ ಹೇಳಲಾಯಿತು. ಪೌಲನು ಬೇಡಿಕೊಂಡದ್ದು: “ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ.” (ರೋಮಾಪುರ 12:1) ಹಿಂಸೆಯನ್ನು ತಾಳಿಕೊಂಡಿರುವವರ ಮೂಲಕ ಸ್ವ-ತ್ಯಾಗದ ಆತ್ಮವು ಪ್ರದರ್ಶಿಸಲ್ಪಟ್ಟಿದೆ. ಪಯನೀಯರರು ಪೂರ್ಣ ಸಮಯದ ಸೇವೆಯಲ್ಲಿ ಉಳಿಯುವಲ್ಲಿ ಪ್ರತಿ ದಿನ ತ್ಯಾಗಗಳನ್ನು ಮಾಡುತ್ತಾರೆ. ಕಾರ್ಯತಃ, ಎಲ್ಲಾ ನಿಜ ಕ್ರೈಸ್ತರು, ಈ ಲೋಕದ ಸ್ವಾರ್ಥಪರ, ಪ್ರಾಪಂಚಿಕ ಬೆನ್ನಟ್ಟುವಿಕೆಗಳ ಬದಲಿಗೆ ಯೆಹೋವನ ಸೇವೆಯಲ್ಲಿ ತಮ್ಮನ್ನೇ ಒಳಗೂಡಿಸಿಕೊಳ್ಳುವುದರ ಮೂಲಕ, ತ್ಯಾಗಗಳನ್ನು ಮಾಡುತ್ತಾರೆ. ಅಂಥಾ ಒಂದು ಮಾರ್ಗವು ಯೆಹೋವನಿಂದ ಹೇರಳ ಆಶೀರ್ವಾದಗಳನ್ನು ಫಲಿಸುತ್ತದೆ.
ಆ ಭಾಷಣವು ಅದನ್ನನುಸರಿಸಿದ—ದೀಕ್ಷಾಸ್ನಾನದ ಭಾಷಣಕ್ಕೆ—ತಕ್ಕ ಪೀಠಿಕೆಯಾಯಿತು. “ಬೆಳಕು ವಾಹಕರು” ಜಿಲ್ಲಾ ಅಧಿವೇಶನದಲ್ಲಿ ದೀಕ್ಷಾಸ್ನಾನ ಹೊಂದಿದವರು ಖಂಡಿತವಾಗಿಯೂ ಈ ಭಾಷಣವನ್ನು ಮರೆಯಲಿಕ್ಕಿಲ್ಲ. ಅವರ ದೀಕ್ಷಾಸ್ನಾನವು ಯಾವಾಗಲು ಅವರ ಜೀವಿತದ ಮುಖ್ಯಾಂಶವಾಗಿರುವುದು. ಅವರು 30 ವರ್ಷ ಪ್ರಾಯದಲ್ಲಿ ದೀಕ್ಷಾಸ್ನಾನ ಹೊಂದಿದ, ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸುತ್ತಿದ್ದಾರೆಂದು ಅವರಿಗೆ ನೆನಪು ಹುಟ್ಟಿಸಲಾಯಿತು. ಅದಲ್ಲದೆ, ಅವರು ತಮ್ಮಲ್ಲಿರುವ “ಕತ್ತಲೆಗೆ ಅನುಗುಣವಾದ ಕೃತ್ಯಗಳನ್ನು” ಬಿಟ್ಟಿರುತ್ತಾರೆ ಮತ್ತು “ಯೆಹೋವನ (NW) ಸೇವೆ ಮಾಡುವ” ನಿರ್ಣಯವನ್ನು ಮಾಡಿರುತ್ತಾರೆಂದು ನೆನಪಿಗೆ ತಂದುಕೊಳ್ಳಲು ದೀಕ್ಷಾಸ್ನಾನದ ಅಭ್ಯರ್ಥಿಗಳು ಸಂತೋಷಪಟ್ಟರು. (ರೋಮಾಪುರ 12:11; 13:12) ಸಂತೋಷ ಭರಿತರಾಗಿ ಅವರು ಅಧಿವೇಶನದ ಸಮೂಹದ ಮುಂದೆ ನಿಂತರು ಮತ್ತು ದೀಕ್ಷಾಸ್ನಾನಕ್ಕೆ ಹೋಗುವ ಮುಂಚೆ ಒಂದು ಕೇಳಬರುವ ಬಹಿರಂಗ ಘೋಷಣೆಯನ್ನು ಮಾಡಿದರು. (ರೋಮಾಪುರ 10:10) “ಬೆಳಕು ವಾಹಕರು” ಜಿಲ್ಲಾ ಅಧಿವೇಶನದಲ್ಲಿ ನೀರಿನ ದೀಕ್ಷಾಸ್ನಾನವನ್ನು ಪಡಕೊಳ್ಳುವುದರ ಮೂಲಕ ಯಾರು ಯೆಹೋವನಿಗೆ ಅವರ ಸಮರ್ಪಣೆಯನ್ನು ಸೂಚಿಸಿದ್ದರೊ ಅವರೆಲ್ಲರ ಮೇಲೆ ಆತನ ಆಶೀರ್ವಾದವನ್ನು ನಾವು ಬೇಡುತ್ತೇವೆ.
ಶನಿವಾರ ಮಧ್ಯಾಹ್ನದ ಅನಂತರದ ಸಮಯವು ಮುಚ್ಚುಮರೆ ಇಲ್ಲದ ಎಚ್ಚರಿಕೆಗಳ ಸಮಯವಾಗಿತ್ತು. ಇವುಗಳು “ಲೋಭದ ಉರುಲುಗಳನ್ನು ತೊರೆಯಿರಿ,” “ನಿಮ್ಮ ಸದಾಚಾರವನ್ನು ಯಾರಾದರೂ ಕೆಡಿಸುತ್ತಿದ್ದಾರೊ?” ಮತ್ತು “ಪ್ರತಿಯೊಂದು ವಿಧದ ವಿಗ್ರಹಾರಾಧನೆಯ ವಿರುದ್ಧ ಕಾಪಾಡಿಕೊಳ್ಳಿರಿ” ಎಂಬ ಭಾಷಣಗಳ ರೂಪದಲ್ಲಿ ಬಂದವು. ಈ ಮೂರು ಭಾಷಣಗಳು ಕ್ರೈಸ್ತನನ್ನು ಬಲಹೀನಗೊಳಿಸಲು ಸೈತಾನನ ಮೂಲಕ ಉಪಯೋಗಿಸಲ್ಪಡುವ ಕೆಲವು ಯುಕ್ತಿಗಳನ್ನು ಗುರುತಿಸಿದವು. ಇಸ್ಕರಿಯೋತ ಯೂದನು ಒಬ್ಬ ಅಪೊಸ್ತಲನಾಗಿದ್ದನು, ಆದರೆ ಆತನು ಹಣಕ್ಕೋಸ್ಕರ ಯೇಸುವನ್ನು ಹಿಡಿದುಕೊಟ್ಟನು. ಯುವ ಸಮುವೇಲನು ಯೆಹೋವನ ಆರಾಧನೆಯ ಜನಾಂಗಿಕ ಕೇಂದ್ರದಲ್ಲಿಯೇ ಬೆಳೆದಿದ್ದನು, ಆದರೆ ಆತನು ತಪ್ಪಿಸಿಕೊಳ್ಳಲಾಗದ ರೀತಿಯಲ್ಲಿ ಅತಿ ಕೆಟ್ಟ ಸಹವಾಸಕ್ಕೆ ಒಡ್ಡಲ್ಪಟ್ಟವನಾಗಿದ್ದನು. (1 ಸಮುವೇಲ 2:12, 18-20) ವಿಗ್ರಹಾರಾಧನೆಯು ಲೈಂಗಿಕ ಅನೈತಿಕತೆ ಮತ್ತು ದುರಾಶೆಯಂಥ ವಿಷಯಗಳನ್ನು ಒಳಗೊಂಡಿರಬಲ್ಲದು. (ಎಫೆಸ 5:5; ಕೊಲೊಸ್ಸೆ 3:5) ಹೌದು, ಲೋಭ, ದುಸ್ಸಹವಾಸಗಳು, ಮತ್ತು ಮೂರ್ತಿಪೂಜೆಗಳು ಅಪಾಯಕಾರಿಗಳಾಗಿವೆ ಮತ್ತು ಅವುಗಳನ್ನು ತೊರೆಯಲೇ ಬೇಕು.
ಅನಂತರ ಅಧಿವೇಶನ ಕಾರ್ಯಕ್ರಮವು ಮಾಹಿತಿಯನ್ನು ಬದಲಾಯಿಸಿತು. ಮುಂದಿನ ಭಾಷಣವು ಕೆಲವು ಅಭಿರುಚಿಕರ ಬೈಬಲ್ ಪ್ರಶ್ನೆಗಳನ್ನೆಬ್ಬಿಸಿತು ಮತ್ತು ಅವುಗಳನ್ನು ಉತ್ತರಿಸಿತು. ಉದಾಹರಣೆಗಾಗಿ, ಮಹಾ ಸಂಕಟದ ಮುಂಚೆ ಸತ್ಯವನ್ನು ಸ್ವೀಕರಿಸದೆ, ಸಾಯುವ ಜನರಿಗೆ ಪುನರುತ್ಥಾನವಾಗುವುದೇ ಎಂಬುದನ್ನು ನೀವು ಉತ್ತರಿಸಬಲ್ಲಿರೊ? ಸರಿಯಾದ ಮದುವೆ ಜೋಡಿ ದೊರಕದೇ ಇದ್ದಾಗ ಕ್ರೈಸ್ತನೊಬ್ಬನು ಯಾ ಕ್ರೈಸ್ತಳೊಬ್ಬಳು ಏನು ಮಾಡಬಲ್ಲರು? ಬೈಬಲ್ ಜ್ಞಾನವನ್ನು ಆಳಗೊಳಿಸಲು, ನಿರ್ದಿಷ್ಟವಾಗಿ “ವಾಚಕರಿಂದ ಪ್ರಶ್ನೆಗಳು” ಎಂಬ ಮೇಲ್ಬರಹದ ಕೆಳಗೆ, ವಾಚ್ಟವರ್ ಪಬ್ಲಿಕೇಶನ್ಸ್ ಇಂಡೆಕ್ಸ್ನ ಪೂರ್ಣ ಉಪಯೋಗ ಮಾಡುವಂತೆ, ಪ್ರತಿನಿಧಿಗಳು ಪ್ರೋತ್ಸಾಹಿಸಲ್ಪಟ್ಟರು.
ಕ್ರಿಸ್ತನ ಸಾನ್ನಿಧ್ಯ ಮತ್ತು ಪ್ರತ್ಯಕ್ಷತೆ
ಶನಿವಾರದ ಕಾರ್ಯಕ್ರಮದ ಸಮಾಪ್ತಿ ಭಾಗವು “ಕ್ರಿಸ್ತನ ಸಾನ್ನಿಧ್ಯ ಮತ್ತು ಪ್ರತ್ಯಕ್ಷತೆಯ ಮೇಲೆ ಬೆಳಕು ಹರಿಸುವುದು” ಎಂಬ ಬಿರುದುಳ್ಳ ಭಾಷಣ ಮಾಲೆಯೊಂದಿಗೆ ಪ್ರವಾದನೆಗೆ ತಿರುಗಿತು. ಯೇಸು ಕ್ರಿಸ್ತನ ಸಾನ್ನಿಧ್ಯವನ್ನು ರುಜುಪಡಿಸುವ “ಸೂಚನೆಯ” ಭಾಗಗಳು ಪುನರ್ವಿಮರ್ಶಿಸಲಾದುವು. (ಮತ್ತಾಯ 24:3) ಎರಡನೇ ಭಾಗದಲ್ಲಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಅಧುನಿಕ ದಿನದ ಕಾರ್ಯಗಳನ್ನು ಚರ್ಚಿಸಲಾಯಿತು. (ಮತ್ತಾಯ 24:45-47) ಆಳು ವರ್ಗವು 1919 ರಿಂದ ನಂಬಿಕೆಯಿಂದ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸದ ಮುಂದಾಳುತ್ವವನ್ನು ವಹಿಸಿದೆ ಎಂದು ತೋರಿಸಿ ಕೊಡಲಾಯಿತು. ಅನಂತರ ಯೆಹೋವನ ಬೆಳಕನ್ನು ಪ್ರತಿಫಲಿಸುವಲ್ಲಿ ಅಭಿಷಿಕ್ತ ಕ್ರೈಸ್ತರೊಂದಿಗೆ ಭಾಗಿಯಾಗಲು ಒಂದು ಮಹಾ ಸಮೂಹವನ್ನು ಎಲ್ಲಾ ಜನಾಂಗಗಳಿಂದ ಒಟ್ಟುಗೂಡಿಸಲಾಯಿತು. ಭಾಷಣಕರ್ತರು ಸಮಾಪ್ತಿಗೊಳಿಸಿದ್ದು: “ನಂಬಿಗಸ್ತ ಮತ್ತು ವಿವೇಕಿ ಆಳು ವರ್ಗಕ್ಕೆ ಎಲ್ಲರೂ ಆಸಕ್ತಿಯಿಂದ ಬೆಂಬಲಕೊಡುವವರಾಗಲಿ. ಇದನ್ನು ಮಾಡುವುದರ ಮೂಲಕ ಮಾತ್ರ ಒಂದು ದಿನ ಬಹು ಬೇಗನೇ ಎಲ್ಲಾ ಕುರಿಗಳಂಥವರು ಸಂತೋಷದ ಈ ಮಾತುಗಳನ್ನು ಕೇಳ ಶಕ್ತರಾಗುವರು: ‘ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ.’”—ಮತ್ತಾಯ 25:34.
ಕೊನೆಯ ಭಾಷಣಕರ್ತರು ಯೇಸು ಕ್ರಿಸ್ತನ ಪ್ರತ್ಯಕ್ಷತೆಯ ಅರ್ಥ ಮತ್ತು ಪರಿಣಾಮಗಳ ಅರ್ಥವನ್ನು ಚರ್ಚಿಸಿದರು. (1 ಕೊರಿಂಥ 1:7) ಆ ಪ್ರತ್ಯಕ್ಷತೆಯು ಎಂಥ ಒಂದು ಅನುಭವವಾಗಲಿರುವುದು! ಮಹಾ ಬಾಬೆಲು ನಾಶಗೊಳ್ಳುವುದು. ಸೈತಾನನ ಲೋಕ ಮತ್ತು ಯೇಸು ಮತ್ತು ಆತನ ದೂತರ ನಡುವಿನ ಮಹಾ ಯುದ್ಧವು ಈ ವ್ಯವಸ್ಥೆಯ ನಾಶದಲ್ಲಿ ಅಂತ್ಯವಾಗುವುದು. ಕೊನೆಗೆ, ಸೈತಾನನು ಬಂಧನದಲ್ಲಿ ಹಾಕಲ್ಪಡುವನು ಮತ್ತು ಕ್ರಿಯಾಹೀನನಾಗಿ ಮಾಡಲ್ಪಡುವನು. ಆದರೆ ಸ್ವರ್ಗದಲ್ಲಿ ಕುರಿಮರಿಯ ಮದುವೆಯೊಂದಿಗೆ ಮತ್ತು ಹೊಸ ಭೂಮಿಯ ಹುಟ್ಟಿಸುವಿಕೆಯೊಂದಿಗೆ ದೇವರ ಜನರಿಗೆ ಪರಿಹಾರವಿರುವುದು. ಡಸ್ ಗಾಡ್ ರಿಅಲಿ ಕೇರ್ ಅಬೌಟ್ ಅಸ್? ಎಂಬ ಬ್ರೊಶರನ್ನು ಬಿಡುಗಡೆ ಮಾಡುವುದರ ಮೂಲಕ ಭಾಷಣಕರ್ತರು ತಮ್ಮ ಸಭಿಕರನ್ನು ಸಂತೋಷಗೊಳಿಸಿದರು. ನಮ್ಮ ಚಿಂತಿಸುವ ಸೃಷ್ಟಿಕರ್ತನ ಮತ್ತು ನಮಗಾಗಿ ಆತನ ಉದ್ದೇಶಗಳ ಕುರಿತು ತಿಳಿಯಲಪೇಕ್ಷಿಸುವ ದೀನ ವ್ಯಕ್ತಿಗಳಿಗೆ ಎಷ್ಟು ಉತ್ತಮವಾದ ಒಂದು ಸಹಾಯಕವು ಅದಾಗಿರುವುದು!
ಕ್ರೈಸ್ತ ಮನೆವಾರ್ತೆಗಳು
ಭಾನುವಾರ, ಅಧಿವೇಶನದ ಕೊನೆಯ ದಿನ, ಈಗ ಆಗಮಿಸಿತು. ಆದಾಗ್ಯೂ, ಬಹಳಷ್ಟು ಇನ್ನೂ ನಿರೂಪಿಸಲಿಕ್ಕಿತ್ತು. ದಿನದ ವಚನವನ್ನು ಚರ್ಚಿಸಿದ ನಂತರ, “ಕ್ರೈಸ್ತ ಮನೆವಾರ್ತೆಯಲ್ಲಿ ಒಬ್ಬರನ್ನೊಬ್ಬರು ಪರಾಮರಿಸುವುದು” ಎಂಬ ಭಾಷಣಮಾಲೆಯೊಂದಿಗೆ ಕ್ರೈಸ್ತ ಕುಟುಂಬಕ್ಕೆ ಗಮನವನ್ನು ಕೊಡಲಾಯಿತು. ಮೊದಲನೇ ಭಾಗವು ಯಶಸ್ವಿಯಾದ ಕ್ರೈಸ್ತ ಕುಟುಂಬವನ್ನು ಪಡೆಯುವ ರಹಸ್ಯವನ್ನು ಅರಿಯಲು ಅಧಿವೇಶನಗಾರರಿಗೆ ಸಹಾಯ ಮಾಡಿತು. ಎರಡನೇ ಭಾಗವು ಕೂಟದ ಹಾಜರಿ, ಕ್ಷೇತ್ರ ಸೇವೆ, ಕುಟುಂಬ ಅಧ್ಯಯನ, ಯಾ ವಿನೋದ, ಇವುಗಳಲ್ಲಿ ಯಾವುದೇ ಒಳಗೂಡಿರಲಿ, ವಿಷಯಗಳನ್ನು ಒಟ್ಟಾಗಿ ಮಾಡುವಂತೆ ಕುಟುಂಬಗಳನ್ನು ಉತ್ತೇಜಿಸಿತು. ಮತ್ತು ಭಾಷಣ ಮಾಲೆಯ ಮೂರನೇ ಭಾಗವು ವಯಸ್ಸಾದವರನ್ನು ಪರಾಮರಿಸುವ ಅವರ ಸುಯೋಗ ಮತ್ತು ಜವಾಬ್ದಾರಿಯನ್ನು ಪ್ರತಿನಿಧಿಗಳಿಗೆ ನೆನಪು ಹುಟ್ಟಿಸಿತು. “ನಮ್ಮ ವಯಸ್ಸಾದ ಸಹೋದರ ಮತ್ತು ಸಹೋದರಿಯರು ಸಭೆಗೆ ಒಂದು ಆಸ್ತಿಯಾಗಿದ್ದಾರೆ,” ಎಂದು ಭಾಷಣಕರ್ತರಂದರು. ನಾವು ಅವರ ಅನುಭವವನ್ನು ಅಮೂಲ್ಯವಾಗಿಡೋಣ ಮತ್ತು ಅವರ ಸಮಗ್ರತೆಯನ್ನು ಅನುಕರಿಸೋಣ.
ಅನಂತರ “ಸ್ವಸ್ಥಚಿತ್ತ” ಎಂಬ ಹೇಳಿಕೆಯನ್ನು ಪರೀಕ್ಷಿಸಲಾಯಿತು. (1 ಪೇತ್ರ 4:7) ಸ್ವಸ್ಥಚಿತ್ತರಾಗಿರುವವನು ಸಮತೂಕದ, ಗ್ರಹಿಕೆಯುಳ್ಳ, ವಿವೇಚನಾ ಶಕ್ತಿಯುಳ್ಳ, ದೀನ, ಮತ್ತು ಯುಕ್ತತೆಯುಳ್ಳವನಾಗಿರುತ್ತಾನೆ. ಆತನು ಸರಿ ಮತ್ತು ತಪ್ಪು, ಸತ್ಯ ಮತ್ತು ಸುಳ್ಳು ಇವುಗಳ ನಡುವೆ ವ್ಯತ್ಯಾಸವನ್ನು ಗುರುತಿಸುವನು. ಇದಲ್ಲದೆ, ಅವನು ಒಳ್ಳೇ ಆತ್ಮಿಕ ಆರೋಗ್ಯವನ್ನು ಕಾಪಾಡಲು ಶ್ರಮಿಸುವನು.
ಭಾನುವಾರ ಬೆಳಗ್ಗಿನ ಕಾರ್ಯಕ್ರಮದ ಕೊನೇ ಭಾಷಣವು ದೇವರಿಗೆ ಮತ್ತು ಕ್ರಿಸ್ತನಿಗೆ ನಮ್ಮ ವಿಧೇಯತೆಯನ್ನು ಚರ್ಚಿಸಿತು. “ಯೆಹೋವ ದೇವರಿಗೆ ಮತ್ತು ಆತನ ಮಗ, ಯೇಸು ಕ್ರಿಸ್ತನಿಗೆ, ನಿಷ್ಠೆಯ ಅಧೀನತೆಯಿಂದಿರುವ ಪ್ರಾಮುಖ್ಯತೆಯನ್ನು, ಅತಿ ಒತ್ತಿ ಹೇಳಬೇಕಾಗಿರುವುದಿಲ್ಲ,” ಎಂದು ಭಾಷಣಕರ್ತರಂದರು. ನಮ್ಮ ಜೀವಿತದ ಪ್ರತಿಯೊಂದು ಭಾಗದಲ್ಲಿ ಇದು ಹೇಗೆ ಪ್ರಭಾವ ಬೀರುತ್ತದೆ ಎಂದವರು ತೋರಿಸಿಕೊಡುತ್ತಾ ಹೋದರು. ನಾವು ಅಧೀನತೆಯಲ್ಲಿ ಉಳಿಯುವಂತೆ ಯಾವುದು ಸಹಾಯ ಮಾಡುವುದು? ನಾಲ್ಕು ಗುಣಗಳು: ಪ್ರೀತಿ, ದೇವ ಭಯ, ನಂಬಿಕೆ, ಮತ್ತು ತಗ್ಗಿದ ಮನೋಭಾವ.
ಭಾನುವಾರ ಅಪರಾಹ್ಣ
ಹಠಾತ್ತನೆ, ಅದು ಭಾನುವಾರ ಅಪರಾಹ್ಣವಾಗಿತ್ತು ಮತ್ತು ಅಧಿವೇಶನದ ಕೊನೇ ಭಾಗದ ಸಮಯವಾಗಿತ್ತು. ಅನೇಕರಿಗೆ, ಅಧಿವೇಶನವು ಈಗಾಗಲೇ ಆರಂಭವಾದಂತಿತ್ತು, ಆದರೆ ಆಗಲೆ ಅದು ಸಮಾಪ್ತಿಯನ್ನು ಸಮೀಪಿಸುತ್ತಿತ್ತು.
ಸಾರ್ವಜನಿಕ ಭಾಷಣದ ಶೀರ್ಷಿಕೆ “ಲೋಕದ ಬೆಳಕನ್ನು ಅನುಸರಿಸಿರಿ” ಎಂದಾಗಿತ್ತು. ಜೀವವನ್ನು ಕಾಪಾಡುವಲ್ಲಿ ದೈಹಿಕ ಬೆಳಕಿನ ಪಾತ್ರದ ಒಂದು ಆಕರ್ಷಕ ವಿವರಣೆಯಿಂದ ಹಾಜರಿರುವವರನ್ನು ಸತ್ಕರಿಸಲಾಯಿತು. ಅನಂತರ ಭಾಷಣಕರ್ತರು ಆತ್ಮಿಕ ಬೆಳಕಿನ ಮಹಾ ಪ್ರಾಮುಖ್ಯತೆಯನ್ನು ತೋರಿಸಿದರು. ದೈಹಿಕ ಬೆಳಕು ನಮ್ಮನ್ನು ಕೆಲವೇ ದಶಮಾನಗಳಷ್ಟು ಜೀವಂತವಿಡುತ್ತದೆ, ಆದರೆ ಆತ್ಮಿಕ ಬೆಳಕು ನಮ್ಮನ್ನು ನಿತ್ಯ ನಿರಂತರಕ್ಕೂ ಜೀವಿಸುವಂತೆ ಮಾಡಬಲ್ಲದು. ಭಾಷಣದ ಒಂದು ಮುಖ್ಯಾಂಶವು, ಎಲ್ಲಿ ಯೇಸುವು ಲೋಕದ ಬೆಳಕು ಎಂದು ಗುರುತಿಸಲ್ಪಟ್ಟಿದ್ದಾನೋ ಆ ಯೋಹಾನ 1:1-16 ರ ಒಂದು ವಚನವನ್ನನುಸರಿಸಿ ಇನ್ನೊಂದು ವಚನದ ಚರ್ಚೆ ಆಗಿತ್ತು. ಇಂದು, ಈ ದುಷ್ಟ ವ್ಯವಸ್ಥೆಯ ಕೊನೇ ವರ್ಷಗಳಲ್ಲಿ, ಈ ಪಾತ್ರದಲ್ಲಿ ಯೇಸುವನ್ನು ಅನುಸರಿಸುವುದು ಎಂದಿಗಿಂತಲೂ ಹೆಚ್ಚು ತುರ್ತಿನದ್ದಾಗಿರುತ್ತದೆ.
ಆ ವಾರಕ್ಕಾಗಿ ನೇಮಿತವಾಗಿದ್ದ ಕಾವಲಿನಬುರುಜು ಅಧ್ಯಯನದ ವಿಷಯದ ಸಾರಾಂಶದ ನಂತರ, ಸಮಾಪ್ತಿ ಭಾಷಣದ ಸಮಯವದಾಗಿತ್ತು. ಸಂತೋಷಕರವಾಗಿ, ಮುಂದಿನ ದಿನಗಳಲ್ಲಿ ಮುನ್ನೋಡಲು ಅನೇಕ ವಿಷಯಗಳು ಇರುವವೆಂದು ಭಾಷಣಕರ್ತರು ತೋರಿಸಿಕೊಟ್ಟರು. ಉದಾಹರಣೆಗಾಗಿ, ಡುಯಿಂಗ್ ಗಾಡ್ಸ್ ವಿಲ್ಲ್ ವಿತ್ ಸೀಲ್ ಎಂಬ ಡ್ರಾಮಾದ ಒಂದು ಹೊಸ ಆಡಿಯೊಕ್ಯಾಸೆಟನ್ನು ಅವರು ಪ್ರಕಟಿಸಿದರು. ಮತ್ತು ಅಷ್ಟು ಮಾತ್ರವಲ್ಲ. ದ ಬೈಬಲ್—ಎ ಬುಕ್ ಒಫ್ ಫ್ಯಾಕ್ಟ್ ಆ್ಯಂಡ್ ಪ್ರಾಫೆಸಿ ಎಂಬ ಮೇಲಿಷ್ವಯದ ವಿಡಿಯೊಕ್ಯಾಸೆಟುಗಳ ಒಂದು ಹೊಸ ಸರಣಿಯು ಇರುವುದು, ಈ ವಿಷಯದ ಮೇಲೆ ದ ಬೈಬಲ್—ಆ್ಯಕ್ಯುರೆಟ್ ಹಿಸ್ಟರಿ, ರಿಲೈಎಬಲ್ ಪ್ರಾಫೆಸಿ ಮೊದಲನೆಯದು.
ಕೊನೆಯದಾಗಿ, ಆಫ್ರಿಕ, ಏಷಿಯ, ಯೂರೋಪ್, ಮತ್ತು ದಕ್ಷಿಣ ಅಮೆರಿಕಗಳಲ್ಲಿ ವಿಶೇಷ ಅಂತಾರಾಷ್ಟ್ರೀಯ ಒಟ್ಟುಗೂಡುವಿಕೆಗಳನ್ನು ಸೇರಿಸಿ, ನಾಲ್ಕು ದಿನದ ಜಿಲ್ಲಾ ಅಧಿವೇಶನಗಳು 1993 ರಲ್ಲಿ ಇರುವವೆಂದು ಭಾಷಣಕರ್ತರು ಅಂದರು. “ಬೆಳಕು ವಾಹಕರು” ಜಿಲ್ಲಾ ಅಧಿವೇಶನವು ಮುಕ್ತಾಯವಾಗುತ್ತಿದ್ದರೂ, ಪ್ರತಿನಿಧಿಗಳು ಮುಂದಿನ ವರ್ಷಕ್ಕಾಗಿ ಯೋಜನೆಗಳನ್ನು ಆರಂಭಿಸಬಹುದಾಗಿತ್ತು.
ಅನಂತರ ಅಧಿವೇಶನದ ಪ್ರತಿನಿಧಿಗಳಿಗೆ ಮನೆಗೆ ತೆರಳುವ ಸಮಯವದಾಗಿತ್ತು. ನಿಜಕ್ಕೂ, ಅವರು ಈ ಕಾರ್ಗತ್ತಲು ತುಂಬಿದ ಲೋಕದಲ್ಲಿ ಬೆಳಕನ್ನು ಪ್ರತಿಫಲಿಸುತ್ತಾ ಇರಲು ಎಂದಿಗಿಂತಲೂ ಹೆಚ್ಚು ದೃಢನಿರ್ಧಾರವುಳ್ಳವರಾಗಿದ್ದರು. ಮೂರು ದಿನಗಳ ಉತ್ತಮ ಆತ್ಮಿಕ ವಿಷಯಗಳಿಂದ ತುಂಬಿದ ಅನಂತರ, ಸಮಾಪ್ತಿ ಭಾಷಣದಲ್ಲಿ ಉಲ್ಲೇಖಿಸಲಾದ ಕೊನೆಯ ಶಾಸ್ತ್ರವಚನವು ಮಹಾ ಅರ್ಥವನ್ನು ತಕ್ಕೊಂಡಿತು: “ಯೆಹೋವನೇ ದೇವರು; ಆತನು ನಮಗೆ ಪ್ರಕಾಶವನ್ನು ಅನುಗ್ರಹಿಸಿದ್ದಾನೆ. . . . ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾದದ್ದು.”—ಕೀರ್ತನೆ 118:27, 29.
[ಪುಟ 15 ರಲ್ಲಿರುವ ಚಿತ್ರ]
ರಷ್ಯಾ ಭಾಷೆಯಲ್ಲಿ ಅಧಿವೇಶನದ ಕಾರ್ಯಕ್ರಮ ಪಟ್ಟಿ
[ಪುಟ 16,17 ರಲ್ಲಿರುವಚಿತ್ರಗಳು]
ಆಡಳಿತಾ ಮಂಡಳಿಯ ಸದಸ್ಯರು ಅನೇಕ ಅಧಿವೇಶನಗಳಲ್ಲಿ ಮಾತಾಡಿದರು
ರಷ್ಯಾದ ಸೆಯಿಂಟ್ ಪೀಟರ್ಸ್ಬರ್ಗ್ನಲ್ಲಿ ಒಟ್ಟುಸೇರಿದವರಲ್ಲಿ ಜಪಾನೀಯ ಪ್ರತಿನಿಧಿಗಳಿದ್ದರು
ಕಲಕುವ ಡ್ರಾಮವು ಯೆಹೋವನ ದೃಷ್ಟಿಯಲ್ಲಿ ಯಾವುದು ಸರಿಯೋ ಅದನ್ನು ಮಾಡುವ ಅಗತ್ಯವನ್ನು ಒತ್ತಿ ಹೇಳಿತು
ಹೊಸ ಬೆಳಕು ವಾಹಕರು ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ದೀಕ್ಷಾಸ್ನಾನದ ಮೂಲಕ ಸೂಚಿಸಿದರು
ಸೆಯಿಂಟ್ ಪೀಟರ್ಸ್ಬರ್ಗ್ನಲ್ಲಿ ಕಾರ್ಯಕ್ರಮದಲ್ಲಿ ಮಗ್ನವಾಗಿರುವ ಅಧಿವೇಶನಗಾರರು
[ಪುಟ 18 ರಲ್ಲಿರುವ ಚಿತ್ರ]
ಪ್ರತಿನಿಧಿಗಳು “ಡಸ್ ಗಾಡ್ ರಿಅಲಿ ಕೇರ್ ಅಬೌಟ್ ಅಸ್?” ಎಂಬ ಹೊಸ ಬ್ರೊಶರನ್ನು ಪಡೆಯಲು ರೋಮಾಂಚನಗೊಂಡರು