“ನಮಸ್ಕಾರ! ದೇವರ ಹೆಸರು ಏನೆಂದು ನೀವು ಬಲ್ಲಿರಾ?”
ಬ್ರಾಸಿಲಿನ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸ್ನಲ್ಲಿ, ಫೊರ್ಟಾಲಿಸ ನಗರದ 12 ವರ್ಷ ಪ್ರಾಯದ ಅವಳಿ ಸಹೋದರಿಯರಿಂದ ಈ ಕೆಳಗಿನ ಪತ್ರವು ಬಂತು:
“ಹಿಂದೆ 1990 ರಲ್ಲಿ ನಾವು ಐದನೆಯ ಇಯತ್ತೆಯಲ್ಲಿರುವಾಗ, ನಮ್ಮ ಶಾಲೆಯು ವಿಜ್ಞಾನ, ಕಲೆ, ಮತ್ತು ಸಾಂಸ್ಕೃತಿಕ ಉತ್ಸವವೊಂದನ್ನು ಸಂಸ್ಥಾಪಿಸಿತು. ಇತರ ವಿದ್ಯಾರ್ಥಿಗಳು ತಯಾರಿಸಲು ಯೋಜಿಸುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ನಮ್ಮ ಪ್ರಸ್ತುತಪಡಿಸುವಿಕೆಯನ್ನು ಮಾಡಲು ನಾವು ಬಯಸುತ್ತೇವೆ ಎಂದು ನಾವು ಅಧ್ಯಾಪಿಕೆಗೆ ವಿವರಿಸಿದೆವು. ಯೆಹೋವನ ಮತ್ತು ಬೈಬಲಿನ ಕುರಿತು ನಾವು ಈ ಮುಂಚೆ ಮಾತಾಡುವುದನ್ನು ಅವಳು ಕೇಳಿದರ್ದಿಂದ, ಅವಳು ಸಲಹೆಯನ್ನಿತ್ತದ್ದು: ‘ಹಾಗಾದರೆ ನಿಮ್ಮ ದೇವರ ಕುರಿತು ನೀವು ಬರೆಯಬಹುದು!’
“ಸಾಕ್ಷಿ ನೀಡಲು ಇದೊಂದು ಅವಕಾಶವೆಂದು ನಾವು ನೋಡಿದೆವು ಮತ್ತು ಯೆಹೋವನ ಹೆಸರಿನ ಮೇಲೆ ಕೇಂದ್ರೀಕರಿಸುವ ಬೈಬಲ್ ಸಾಹಿತ್ಯಗಳೊಂದಿಗೆ ಒಂದು ಪ್ರದರ್ಶನವನ್ನು ಒಟ್ಟಿಗೆ ಹಾಕಲು ತೀರ್ಮಾನಿಸಿದೆವು. ಕೀರ್ತನೆ 83:18 ರ ಮಾತುಗಳ ದೊಡ್ಡಕ್ಷರದ ಮರುಮುದ್ರಣ ತಯಾರಿಸಿದೆವು ಮತ್ತು ತೆರೆದ ಬೈಬಲಿನ ಚಿತ್ರವೊಂದಕ್ಕೆ ಅದನ್ನು ಅಂಟಿಸಿದೆವು. ಯೆಹೋವ ಎಂಬ ಹೆಸರು ಇರುವ ಬೇರೆ ಬೇರೆ ಬೈಬಲ್ ತರ್ಜುಮೆಗಳನ್ನು ಕೂಡ ಒಂದು ಮೇಜಿನ ಮೇಲೆ ಇಟ್ಟೆವು. ಅದೇ ಮೇಜಿನ ಮೇಲೆ ಬೈಬಲಿನ ತೆರತೆರದ ಸಾಹಿತ್ಯಗಳನ್ನು ನಾವು ಪ್ರದರ್ಶಿಸಿದೆವು. ಒಂದು ಜನಪ್ರಿಯ ಚಲನಚಿತ್ರದಲ್ಲಿ ಯೆಹೋವ ನಾಮವನ್ನು ಬಳಸಿದ ಒಂದು ಉದಾಹರಣೆಯನ್ನು ಸಂದರ್ಶಕರಿಗೆ ತೋರಿಸಲು, ಮೇಜಿನ ಕೊನೆಯಲ್ಲಿ ನಾವು ವಿಸಿಆರ್ ಮತ್ತು ಟೀವೀ ಸೆಟ್ ಒಂದನ್ನು ಅಳವಡಿಸಿದೆವು.
“ಉತ್ಸವದ ಸಮಯದಲ್ಲಿ, ನಮ್ಮ ಮೇಜಿನ ಬಳಿ ವ್ಯಕ್ತಿಯೊಬ್ಬನು ಬಂದಾಗ, ನಾವು ಹೀಗೆ ಹೇಳುತ್ತಿದ್ದೆವು: ‘ನಮಸ್ಕಾರ! ದೇವರ ಹೆಸರು ಏನೆಂದು ನೀವು ಬಲ್ಲಿರಾ?’ ಪ್ರತಿಕ್ರಿಯಿಸಲು ಸಂದರ್ಶಕನಿಗೆ ಸಂದರ್ಭವನ್ನಿತ್ತಾದ ನಂತರ, ನಾವು ಮುಂದರಿಸಿದ್ದು: ‘ಇಲ್ಲಿ ನೋಡಿ! ಅವನ ಹೆಸರು ಯೆಹೋವ ಎಂದು’—ಜೊವೊ ಫರೇರಾ ಡಿ ಆಲ್ಮೇಡ, ದ ಜೆರೂಸಲೇಮ್ ಬೈಬಲ್, ಮತ್ತು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಅಂತಹ ಭಿನ್ನವಾದ ಬೈಬಲುಗಳಲ್ಲಿ ಆ ಹೆಸರನ್ನು ತೋರಿಸುತ್ತಾ—‘ಅನೇಕ ಬೈಬಲ್ ತರ್ಜುಮೆಗಳು ತೋರಿಸುತ್ತವೆ’. ಅನಂತರ ದೇವರ ಹೆಸರು ಯೆಹೋವ ಎಂದು ಚಲನಚಿತ್ರದ ಮುಖ್ಯ ಪಾತ್ರದಾರಿಯು ಎದ್ದುಕಾಣುವಂತೆ ಮಾಡುವ ದೃಶ್ಯವನ್ನು ನಾವು ನುಡಿಸಿದೆವು. ಜನರು ಆಸಕ್ತಿಯನ್ನು ತೋರಿಸಿದಾಗ, ಹೆಚ್ಚಿನ ವಿವರಗಳುಳ್ಳ ಒಂದು ಪತ್ರಿಕೆ ಯಾ ಕಿರುಹೊತ್ತಗೆಯನ್ನು ನಾವು ಅವರಿಗೆ ಕೊಟ್ಟೆವು.
“ನಮ್ಮ ಮೇಜಿನ ಬಳಿ ಬಂದ ಯುವಕರಲ್ಲೊಬ್ಬನು ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸ್ರ್ಸ್ ದೇಟ್ ವರ್ಕ್ ಪುಸ್ತಕಕ್ಕಾಗಿ ವಿಚಾರಿಸಿದನು. ನಮ್ಮ ಅಧ್ಯಾಪಿಕೆಯು ನಿಮ್ಮ ಕುಟುಂಬಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕವನ್ನು ಪರೀಕ್ಷಿಸಿದಳು ಮತ್ತು ಉದ್ಗರಿಸಿದ್ದು: ‘ಅಬ್ಬಾ! ಎಂತಹ ಒಂದು ಆಸಕ್ತಕರ ಪುಸ್ತಕ!’ ಆ ಉತ್ಸವದ ಅಂತ್ಯದೊಳಗೆ, ನಾವು 7 ಪುಸ್ತಕಗಳನ್ನು, 18 ಕಿರುಹೊತ್ತಗೆಗಳನ್ನು ಮತ್ತು 67 ಪತ್ರಿಕೆಗಳನ್ನು ನೀಡಿದ್ದೆವು. ಉತ್ಸವದಲ್ಲಿ ನಮಗೆ ಮೂರನೆಯ ಬಹುಮಾನ ದೊರಕಿತು. ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ, ಯೆಹೋವ ಎಂಬ ದೈವಿಕ ನಾಮವನ್ನು ತಿಳಿಯಪಡಿಸುವ ಸುಯೋಗದಲ್ಲಿ ನಾವು ಅತ್ಯಾನಂದ ಪಟ್ಟೆವು.”