ಬೈಬಲ್ ಇತಿಹಾಸ ಎಷ್ಟು ನಿಷ್ಕೃಷ್ಟವಾಗಿದೆ?
“ನಾನು ಸುಳ್ಳನ್ನಲ್ಲ, ಸತ್ಯವನ್ನೇ ನುಡಿಯುತ್ತಿದ್ದೇನೆ,” ಎಂದನು ಒಬ್ಬ ಬೈಬಲ್ ಲೇಖಕನು ತನ್ನ ಯುವ ಮಿತ್ರನಿಗೆ ಪತ್ರದಲ್ಲಿ. (1 ತಿಮೊಥೆಯ 2:7, NW) ಪೌಲನ ಪತ್ರಗಳಲ್ಲಿ ಇಂಥ ಹೇಳಿಕೆಗಳು ಬೈಬಲ್ ವಿಮರ್ಶಕರಿಗೆ ಒಂದು ಪಂಥಾಹ್ವಾನವನ್ನು ನೀಡುತ್ತವೆ.a ಪೌಲನ ಪತ್ರಗಳು ಬರೆಯಲ್ಪಟ್ಟು 1,900 ವರುಷಗಳಿಗಿಂತಲೂ ಹೆಚ್ಚು ಕಾಲ ದಾಟಿರುತ್ತವೆ. ಆ ಎಲ್ಲಾ ಕಾಲದ ಅನಂತರ, ಅವನ ಪತ್ರಗಳ ಅನಿಷ್ಕೃಷ್ಟತೆಯ ಒಂದೇ ಒಂದು ವಿಷಯವನ್ನು ಯಾರೊಬ್ಬನೂ ಪ್ರಸ್ತಾಪಿಸಿದ್ದೂ ಇಲ್ಲ ಮತ್ತು ಯಶಸ್ವಿಯಾಗಿ ರುಜುಪಡಿಸಿದ್ದೂ ಇಲ್ಲ.
ಬೈಬಲ್ ಲೇಖಕನಾದ ಲೂಕನು ಸಹ ನಿಷ್ಕೃಷ್ಟತೆಗಾಗಿ ಚಿಂತೆಯನ್ನು ವ್ಯಕ್ತಪಡಿಸಿದ್ದನು. ಯೇಸುವಿನ ಜೀವನ ಮತ್ತು ಶುಶ್ರೂಷೆಯ ವೃತ್ತಾಂತವನ್ನು ಅವನು ದಾಖಲೆಮಾಡಿದನು, ಅಪೊಸ್ತಲರ ಕೃತ್ಯಗಳು ಎಂಬ ಹೆಸರಿನ ಅವನ ವೃತ್ತಾಂತದಿಂದ ಅದು ಹಿಂಬಾಲಿಸಿಯದೆ. “ನಾನು ಬುಡದಿಂದ ಎಲ್ಲವನ್ನೂ ಚೆನ್ನಾಗಿ ವಿಚಾರಿಸಿ” ದೆನು ಎಂದು ಬರೆದನು ಲೂಕನು.—ಲೂಕ 1:3.
ನಿಷ್ಕೃಷ್ಟತೆಯ ಸಾಕ್ಷ್ಯಗಳು
ಇತಿಹಾಸಕಾರನೋಪಾದಿ ಲೂಕನ ನಿಷ್ಕ್ರಷತ್ಟೆಯನ್ನು 19 ನೆಯ ಶತಮಾನದ ವಿಮರ್ಶಕರು ಪಂಥಾಹ್ವಾನಿಸಿದರು. ಅದಲ್ಲದೆ, ಅಪೊಸ್ತಲರ ಕೃತ್ಯಗಳ ಇತಿಹಾಸವು ಎರಡನೆಯ ಶತಕದ ಮಧ್ಯಕಾಲದಲ್ಲಿ ಕಲ್ಪಿಸಲ್ಪಟ್ಟಿತು ಎಂದವರು ವಾದಿಸಿದರು. ಇದನ್ನು ನಂಬಿದವನೊಬ್ಬನು ಬ್ರಿಟಿಷ್ ಪ್ರಾಚೀನ ಶೋಧಕ ಸರ್ ವಿಲಿಯಂ ಮಿಚ್ಚೆಲ್ ರ್ಯಾಮ್ಸೆ. ಆದರೆ ಲೂಕನಿಂದ ತಿಳಿಸಲ್ಪಟ್ಟ ಸ್ಥಳಗಳನ್ನು ಮತ್ತು ಹೆಸರುಗಳನ್ನು ಸಂಶೋಧಿಸಿದ ಬಳಿಕ, ಅವನು ಒಪ್ಪಿಕೊಂಡದ್ದು: “ವಿವಿಧ ವಿವರಣೆಗಳಲ್ಲಿ ಕಥನವು ಒಂದು ಆಶ್ಚರ್ಯಕರ ಸತ್ಯತೆಯೆಂಬದಾಗಿ ನನಗೆ ಕ್ರಮೇಣ ಮನದಟ್ಟಾಯಿತು.”
ರ್ಯಾಮ್ಸೆ ಮೇಲಿನದನ್ನು ಬರೆದಾಗ, ಲೂಕನ ನಿಷ್ಕೃಷ್ಟತೆಯ ಕುರಿತ ಒಂದು ಪ್ರಶ್ನೆಯು ಇತ್ಯರ್ಥವಾಗದೆ ಉಳಿದಿತ್ತು. ಅದು ಸಮೀಪ ಸಂಬಂಧದ ಊರುಗಳಾದ ಐಕೋನ್ಯ, ಲುಸ್ತ್ರ ಮತ್ತು ದೆರ್ಬೆಯ ಕುರಿತಾಗಿತ್ತು. ಲುಸ್ತ್ರ ಮತ್ತು ದೆರ್ಬೆಗಳಿಂದ ಐಕೋನ್ಯ ಪ್ರತ್ಯೇಕವೆಂದು ಲೂಕನು ಸೂಚಿಸಿದ್ದನು, ಅವನ್ನು “ಲುಕವೋನ್ಯದಲ್ಲಿದ್ದ . . . ಊರುಗಳು” ಎಂದು ಅವನು ವರ್ಣಿಸಿದ್ದನು. (ಅ. ಕೃತ್ಯಗಳು 14:6) ಆದರೂ, ಒಡಗೂಡಿರುವ ನಕ್ಷೆಯು ತೋರಿಸುವ ಮೇರೆಗೆ, ದೆರ್ಬೆಗಿಂತ ಲುಸ್ತ್ರವು ಐಕೋನ್ಯಕ್ಕೆ ಹೆಚ್ಚು ಹತ್ತಿರದಲ್ಲಿತ್ತು. ಕೆಲವು ಪ್ರಾಚೀನ ಇತಿಹಾಸಗಾರರು ಐಕೋನ್ಯವನ್ನು ಲುಕವೂನ್ಯದ ಒಂದು ಬಾಗವಾಗಿ ವರ್ಣಸಿದ್ದಾರೆ; ಅದನ್ನು ಹಾಗೆಯೇ ಹೇಳದೆ ಇರದಕ್ಕಾಗಿ ವಿಮರ್ಶಕರು ಲೂಕನನ್ನು ಪಂಥಾಹ್ವಾನಕ್ಕೆ ಕರೆದರು.
ಅನಂತರ 1910 ರಲ್ಲಿ, ಆ ಶಹರದ ಭಾಷೆಯು ಲುಕವೋನ್ಯ ಅಲ್ಲ, ಫ್ರಿಗ್ಯನ್ ಎಂಬದನ್ನು ತೋರಿಸಿದ ಒಂದು ಲಿಖಿತ ಸ್ಮಾರಕವನ್ನು ಐಕೋನ್ಯದ ಅವಶೇಷಗಳಲ್ಲಿ ರ್ಯಾಮ್ಸೆ ಕಂಡುಹಿಡಿದನು. “ಐಕೋನ್ಯ ಮತ್ತು ಅದರ ಪರಿಸರಗಳಿಂದ ಪಡೆದ ಹಲವಾರು ಬೇರೆ ಸ್ಮಾರಕ ಲೇಖನಗಳು ಆ ಶಹರವನ್ನು ಜಾತೀಯವಾಗಿ ಫ್ರಿಗ್ಯನ್ ಎಂದು ವರ್ಣಿಸ ಸಾಧ್ಯವಿದೆಂಬ ವಾಸ್ತವಾಂಶವನ್ನು ಬಲಗೊಳಿಸುತ್ತದೆ,” ಎನ್ನುತ್ತಾರೆ ಡಾ. ಮೆರಲ್ ಎನ್ನರ್, ತಮ್ಮ ಪುಸ್ತಕವಾದ ಆರ್ಕಿಯಾಲಜಿ ಆ್ಯಂಡ್ ದ ನ್ಯೂ ಟೆಸ್ಟಮೆಂಟ್ ನಲ್ಲಿ. ಪೌಲನ ದಿನಗಳ ಐಕೋನ್ಯವು ಸಂಸ್ಕೃತಿಯಲ್ಲಿ ಫ್ರಿಗ್ಯನ್ ಆಗಿತ್ತು ಮತ್ತು ಎಲ್ಲಿ ಜನರು “ಲುಕವೋನ್ಯ ಭಾಷೆಯಲ್ಲಿ” ಮಾತಾಡುತ್ತಿದ್ದರೋ ಆ “ಲುಕವೋನ್ಯದಲ್ಲಿದ್ದ . . . ಊರು” ಗಳಿಂದ ಪ್ರತ್ಯೇಕವಾಗಿತ್ತು ನಿಶ್ಚಯ.—ಅ. ಕೃತ್ಯಗಳು 14:6, 11.
ಥೆಸಲೊನಿಕ ಶಹರದ ಅಧಿಪತಿಗಳಿಗಾಗಿ ಲೂಕನು “ಪಾಲಿಟಾರ್ಕ್ಸ್” (ಅಧಿಕಾರಿಗಳು) ಎಂಬ ಶಬ್ದವನ್ನು ಪ್ರಯೋಗಿಸಿದ್ದನ್ನು ಸಹ ಬೈಬಲ್ ವಿಮರ್ಶಕರು ವಾದಿಸಿದ್ದಾರೆ. (ಅ. ಕೃತ್ಯಗಳು 17:6, ಪಾದಟಿಪ್ಪಣಿ, NW) ಈ ಹೇಳಿಕೆಯು ಗ್ರೀಕ್ ಸಾಹಿತ್ಯದಲ್ಲಿ ಅಜ್ಞಾತವಾಗಿತ್ತು. ಅನಂತರ, ಪುರಾತನ ಪಟ್ಟಣದಲ್ಲಿ ಕಂಡುಬಂದ ಒಂದು ಕಮಾನಿನಲ್ಲಿ ನಗರಾಧಿಪತಿಗಳ ಹೆಸರುಗಳು—ಲೂಕನು ಪ್ರಯೋಗಿಸಿದ ಅದೇ ಪದವಾದ—“ಪಾಲಿಟಾರ್ಕ್ಸ್” (ಅಧಿಕಾರಿಗಳು) ಎಂದು ವರ್ಣಿಸಿದ್ದಾಗಿ ಅಡಕವಾಗಿತ್ತು. “ಲೂಕನ ನಿಷ್ಕೃಷ್ಟತೆಯು ಆ ಶಬ್ದ ಪ್ರಯೋಗದಿಂದ ಸತ್ಯ ಸಮರ್ಥಿಸಲ್ಪಟ್ಟಿದೆ,” ಎಂದು ವಿವರಿಸುತ್ತಾನೆ ಡಬ್ಲ್ಯೂ. ಇ. ವೈನ್ ತನ್ನ ಎಕ್ಸ್ಪೊಸಿಟರಿ ಡಿಕ್ಷನರಿ ಆಫ್ ಓಲ್ಡ್ ಆ್ಯಂಡ್ ನ್ಯೂ ಟೆಸ್ಟಮೆಂಟ್ ವರ್ಡ್ಸ್ ನಲ್ಲಿ.
ಲೂಕನ ಸಮುದ್ರ ಸಂಚಾರ
ಅಪೊಸ್ತಲರ ಕೃತ್ಯಗಳು 27 ನೆಯ ಅಧ್ಯಾಯದಲ್ಲಿ ವರ್ಣಿಸಲಾದ ಹಡಗು ಒಡೆತದ ವಿವರಗಳನ್ನು ನೌಕಾ ತಜ್ಞರು ಪರೀಕ್ಷಿಸಿದ್ದಾರೆ. ಲೂಕನಿಗೆ ಅನುಸಾರವಾಗಿ, ಅವನು ಮತ್ತು ಪೌಲನು ಪಯಣಿಸಿದ ದೊಡ್ಡ ಹಡಗವು ಕೌಡವೆಂಬ ಚಿಕ್ಕ ದ್ವೀಪದ ಹತ್ತಿರ ಈಶಾನ್ಯಾಭಿಮುಖವಾಗಿ ಬೀಸಿದ ಚಂಡಮಾರುತಕ್ಕೆ ಸಿಕ್ಕಿಕೊಂಡಿತು, ಮತ್ತು ಆಫ್ರಿಕದ ಉತ್ತರ ಕರಾವಳಿಯಾಚಿನ ಅಪಾಯಕರ ಮರಳದಂಡೆಗಳಿಗೆ ತಳ್ಳಲ್ಪಡುತ್ತೇವೆಂದು ನಾವಿಕರು ಹೆದರಿದರು. (ಅ. ಕೃತ್ಯಗಳು 27:14, 17, ಪಾದಟಿಪ್ಪಣಿ, NW) ನೈಪುಣ್ಯಯುಕ್ತ ನೌಕಾಚಲನೆಯಿಂದಾಗಿ ಆಫ್ರಿಕದಿಂದ ದೂರಕ್ಕೆ ಪಶ್ಚಿಮಾಭಿಮುಖ ಪಥದಲ್ಲಿ ಹಡಗವನ್ನು ನಡಿಸಲು ಅವರು ಶಕ್ತರಾದರು. ಬಿರುಗಾಳಿಯು ಒಂದೇ ಸವನೆ ಬೀಸುತ್ತಾ ಇತ್ತು, ಕಟ್ಟಕಡೆಗೆ ಹಡಗವು ಸುಮಾರು 870 ಕಿಲೊಮೀಟರ್ ದೂರವನ್ನು ಆವರಿಸಿಯಾದ ಮೇಲೆ, ಮಾಲ್ಟ ದ್ವೀಪ ದಡಗಳ ಸಮೀಪ ನೆಲಹತ್ತಿತು. ಬಿರುಗಾಳಿಯ ನಡುವೆ ಪಯಣಿಸುವ ಒಂದು ದೊಡ್ಡ ಹಡಗಿಗೆ ಅಷ್ಟು ದೂರ ನಡಿಸಲ್ಪಡಲು 13 ಕ್ಕಿಂತಲೂ ಹೆಚ್ಚು ದಿನಗಳು ಬೇಕೆಂಬದಾಗಿ ನೌಕಾ ತಜ್ಞರು ಗೊತ್ತು ಮಾಡಿದ್ದಾರೆ. ಅವರ ಎಣಿಕೆಗಳು, ಹಡಗ ಒಡೆತವು 14 ನೆಯ ದಿನದಲ್ಲಿ ಸಂಭವಿಸಿತ್ತೆಂದು ಹೇಳುವ ಲೂಕನ ವೃತ್ತಾಂತವನ್ನು ಒಪ್ಪುತ್ತವೆ. (ಅ. ಕೃತ್ಯಗಳು 27:27, 33, 39, 41) ಲೂಕನ ಸಮುದ್ರ ಸಂಚಾರದ ಎಲ್ಲಾ ವಿವರಗಳನ್ನು ಪರೀಕೆಮ್ಷಾಡಿದ ನಂತರ, ನೌಕಾ ವಿಹಾರಿ ಜೇಮ್ಸ್ ಸ್ಥಿತ್ ತೀರ್ಮಾನಿಸಿದ್ದು: “ಅದು ಒಂದು ವಾಸ್ತವ ಫಟನೆಗಳ ವರ್ಣನೆಯು, ಅವುಗಳಲ್ಲಿ ವೈಯಕ್ತಿಕವಾಗಿ ಒಳಗೂಡಿದ್ದ ಒಬ್ಬನಿಂದ ಬರೆಯಲ್ಪಟ್ಟದ್ದಾಗಿದೆ. . . . ಅದರ ಎಲ್ಲಾ ಭಾಗಗಳಲ್ಲಿ ಅಷ್ಟು ಹೊಂದಿಕೆಯಾದ ಒಂದು ಸಮುದ್ರ ಸಂಚಾರದ ವರ್ಣನೆಯನ್ನು, ನಾವಿಕನಾಗಿರದ ಯಾವನೇ ಒಬ್ಬನು, ಪ್ರತ್ಯಕ್ಷ ಅವಲೋಕನೆಯಿಂದ ಹೊರತು ಬರೆಯಲು ಸಾಧ್ಯವಿಲ್ಲ.”
ಅಂಥ ಕಂಡುಹಿಡಿಯುವಿಕೆಗಳ ಕಾರಣ, ಕೆಲವು ವೇದಶಾಸ್ತ್ರಜ್ಞರು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥವನ್ನು ನಿಷ್ಕೃಷ್ಟ ಇತಿಹಾಸವಾಗಿ ಸಮರ್ಥಿಸುವುದಕ್ಕೆ ಇಚ್ಛಿಸಿದ್ದಾರೆ. ಆದರೆ ಹೀಬ್ರು ಶಾಸ್ತ್ರಗ್ರಂಥದಲ್ಲಿ ಕಂಡುಬರುವ ಅತಿ ಪ್ರಾರಂಭದ ಇತಿಹಾಸದ ಕುರಿತೇನು? ಅನೇಕ ವೈದಿಕರು ಆಧುನಿಕ ತತ್ವಜ್ಞಾನಕ್ಕೆ ಒಳಗಾಗಿದ್ದಾರೆ ಮತ್ತು ಅದರಲ್ಲಿ ದಂತಕಥೆ ಅಡಕವಾಗಿದೆಂದು ಘೋಷಿಸುತ್ತಾರೆ. ಆದರೂ, ವಿಮರ್ಶಕರ ಪೇಚಾಟಕ್ಕೆ ಕೂಡಿಸಿ, ಬೈಬಲಿನ ಆರಂಭದ ಇತಿಹಾಸದ ಹಲವಾರು ವಿವರಗಳು ಸಹ ಸತ್ಯವೆಂದು ದೃಢೀಕರಿಸಲ್ಪಟ್ಟಿವೆ. ದೃಷ್ಟಾಂತಕ್ಕಾಗಿ, ಒಮ್ಮೆ-ಮರೆತುಬಿಡಲ್ಪಟ್ಟ ಅಶ್ಶೂರ್ಯ ಸಾಮ್ರಾಜ್ಯವನ್ನು ಗಮನಕ್ಕೆ ತನ್ನಿರಿ.
[ಅಧ್ಯಯನ ಪ್ರಶ್ನೆಗಳು]
a ರೋಮಾಪುರ 9:1; 2 ಕೊರಿಂಥ 11:31; ಗಲಾತ್ಯ 1:20 ನ್ನೂ ನೋಡಿರಿ.
[ಪುಟ 3ರಲ್ಲಿರುವಚಿತ್ರ]
(For fully formatted text, see publication)
ಫ್ರಿಗ್ಯ
ಲುಕವೋನ್ಯ
ಐಕೋನ್ಯ
ಲುಸ್ತ್ರ
ದೆರ್ಬೆ
ಭೂಮಧ್ಯ ಸಮುದ್ರ
ಸೈಪ್ರಸ್