ಒಂದು ಐಕಮತ್ಯದ ಭಾತೃತ್ವದಲ್ಲಿ ಅವರು ಸೇರುತ್ತಾರೆ
ಅದು, ಯುಕ್ರೇನ್ನ ಕೀಎವ್ ರಿಪಬ್ಲಿಕನ್ ಸ್ಟೇಡಿಯಂನಲ್ಲಿ, ಆಗಸ್ಟ್ 7, 1993ರ ದಿನವಾಗಿತ್ತು. ಉಪಸ್ಥಿತರಿದ್ದ 64,000 ಕ್ಕಿಂತಲೂ ಹೆಚ್ಚು ಮಂದಿ ಆ ಕ್ಷಣವು ಬಂದಾಗ ನಿರೀಕ್ಷಣೆಯಿಂದ ಎದುರು ನೋಡಿದರು. ಅನಂತರ, ಎರಡು ಅರ್ಥಭರಿತ ಪ್ರಶ್ನೆಗಳಿಗೆ ಉತ್ತರವಾಗಿ “ಡಾ!,” (“ಹೌದು!”) ಎಂದು ಗಟ್ಟಿಯಾಗಿ ಕೂಗಿಹೇಳಿದರು. ಈ ರೀತಿಯಲ್ಲಿ ಅವರು ತಮ್ಮ ನಂಬಿಕೆಯ ಒಂದು ಬಹಿರಂಗ ಘೋಷಣೆಯನ್ನು ಮಾಡಿದರು ಮತ್ತು ಆಮೇಲೆ ಕ್ರೀಡಾಂಗಣದ ಆರು ಕೊಳಗಳಲ್ಲೊಂದರಲ್ಲಿ ದೀಕ್ಷಾಸ್ನಾನ ಪಡೆಯುವ ಮೂಲಕ ಯೆಹೋವ ದೇವರಿಗೆ ತಮ್ಮ ಸಮರ್ಪಣೆಯನ್ನು ಸೂಚಿಸಿದರು.—ಮತ್ತಾಯ 28:19.
ಹೀಗೆ, ಯೆಹೋವನ ಸಾಕ್ಷಿಗಳ “ದೈವಿಕ ಬೋಧನೆ” ಅಂತಾರಾಷ್ಟ್ರೀಯ ಅಧಿವೇಶನದ ಈ ಮೂರನೆಯ ದಿನದಲ್ಲಿ, ಸಭಿಕರು ಒಂದು ಮಹತ್ತಾದ ಘಟನೆಯನ್ನು ಕಂಡರು: 7,402 ಮಂದಿ ದೀಕ್ಷಾಸ್ನಾನವನ್ನು ಪಡೆದು ಒಂದು ವಿಭಾಗಿತವಾದ ಚರ್ಚಿನ ಭಾಗವಾಗದೆ, ಒಂದು ಐಕಮತ್ಯದ ಲೋಕವ್ಯಾಪಕ ಕ್ರೈಸ್ತ ಸಭೆಯ ಭಾಗವಾದರು.
ನಿಜ ಕ್ರೈಸ್ತ ಐಕ್ಯದ ಕುರಿತು ನಿಮಗೆ ಹೆಚ್ಚನ್ನು ತಿಳಿಯಲು ಇಷ್ಟವಿದ್ದರೆ, ದಯವಿಟ್ಟು, Watch Tower, H-58 Old Khandala Road, Lonavla, 410 401 Mah., India, ಇವರಿಗೆ, ಅಥವಾ 2 ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ ವಿಳಾಸಕ್ಕೆ ಬರೆಯಿರಿ.