ಭಯವು ಲೋಕವನ್ನು ಬಿಗಿಯಾಗಿ ಹಿಡಿಯುತ್ತದೆ
ಒಂದು ದೈತ್ಯಾಕಾರದ ಕಾರ್ ಬಾಂಬ್ ಸ್ಫೋಟನೆಯು ಫೆಬ್ರವರಿ 26, 1993 ರಂದು, ನ್ಯೂ ಯಾರ್ಕ್ ನಗರದಲ್ಲಿರುವ 110 ಅಂತಸ್ತಿನ ಲೋಕ ವ್ಯಾಪಾರ ಕೇಂದ್ರವನ್ನು ಓಲಾಡಿಸಿತು. ಸಾವಿರಾರು ಕಾರ್ಮಿಕರು ನಿಂತುಹೋದ ಮೇಲೆತ್ತಿಗೆಗಳಲ್ಲಿ ಸಿಕ್ಕಿಕೊಂಡಿದ್ದರು ಇಲ್ಲವೆ ಅವರು ಹೊಗೆಯಿಂದ ತುಂಬಿದ್ದ ಮೆಟ್ಟಲುಗಳಿಂದ ಓಡುತ್ತಾ ಇಳಿಯಬೇಕಾಗಿತ್ತು. ಈ ಹಿಂಸಾತ್ಮಕ ಲೋಕದಲ್ಲಿ ಇಂದು ಹಬ್ಬಿರುವ ಭಯವನ್ನು ಅವರು ಅನುಭವಿಸಿದರು.
ಅಯರ್ಲೆಂಡ್ ಮತ್ತು ಲೆಬನಾನ್ಗಳಂತಹ ದೇಶಗಳಲ್ಲಿ ಸಾಮಾನ್ಯ ವಿಷಯಗಳಾಗಿರುವ ಬಾಂಬ್ಗಳ ಮೂಲಕ ಅನೇಕ ರಾಷ್ಟ್ರಗಳಲ್ಲಿನ ಜನರು ದಿಗಿಲುಗೊಳಿಸಲ್ಪಟ್ಟಿದ್ದಾರೆ. ಯಾಕೆ, 13 ಬಾಂಬ್ಗಳು ಕೇವಲ ಒಂದೇ ದಿನದಲ್ಲಿ—ಮಾರ್ಚ್ 12, 1993 ರಂದು—ಭಾರತದ ಮುಂಬಯಿಯಲ್ಲಿ, ಸುಮಾರು 200 ಜನರನ್ನು ಕೊಲ್ಲುತ್ತಾ, ಸ್ಫೋಟಗೊಂಡವು! ವೀಕ್ಷಕನೊಬ್ಬನು ಹೇಳಿದ್ದು: “ಇಡೀ ಮುಂಬಯಿಯಲ್ಲಿ ತೀವ್ರವಾದ ಭಯವಿದೆ.” ನ್ಯೂಸ್ವೀಕ್ ಎಂಬ ಪತ್ರಿಕೆಗನುಸಾರ, ಒಂದು ಕಾರ್ ಬಾಂಬಿನ “ಅತಿ ಸಾಮಾನ್ಯ ಸಂಭವವು ಅದನ್ನು ಅಧಿಕ ಭಯಭರಿತವಾಗಿ ಮಾಡುತ್ತದೆ.”
ನ್ಯೂಕ್ಲಿಯರ್ ಭಯವು ಮುಂದುವರಿಯುತ್ತದೆ
ನ್ಯೂಕ್ಲಿಯರ್ ರಿಆ್ಯಕ್ಟರ್ಗಳು ಬಾಂಬ್ಗಳಿಗೆ ಸುಲಭಭೇದ್ಯವಾಗಿವೆ ಎಂಬ ಭಯವಿದೆ. ಅಣುಶಕ್ತಿ ಕೇಂದ್ರದ ಮೇಲೊಂದು ಯಶಸ್ವಿಕರವಾದ ಆಕ್ರಮಣವು, ಅಗಣಿತ ನಷ್ಟ ಹಾಗೂ ಕಷ್ಟಾನುಭವವನ್ನು ಉಂಟುಮಾಡಬಲ್ಲದು. ಅಮೆರಿಕದಲ್ಲಿರುವ ತ್ರೀ ಮೈಲ್ ಐಲೆಂಡ್ ಅಣುಶಕ್ತಿ ಕೇಂದ್ರದ ಭದ್ರತಾ ದ್ವಾರದ ಮೂಲಕ ತನ್ನ ಕಾರನ್ನು ರಭಸದಿಂದ ಓಡಿಸಿದ ಒಬ್ಬ ಮನುಷ್ಯನ ಪ್ರಯತ್ನವು, ಈ ಭಯಕ್ಕೆ ನಂಬಲರ್ಹತೆಯನ್ನು ಕೊಟ್ಟಿತು.
ಭಯೋತ್ಪಾದಕರು ಮತ್ತು ಅಧಿಕಾರಲಾಲಸೆಯಿರುವ ಆಡಳಿತಗಾರರು ಅಣ್ವಸ್ತ್ರಗಳನ್ನು ಸಂಪಾದಿಸಿಕೊಳ್ಳುವರೆಂದು ಅನೇಕರು ಭಯಪಡುತ್ತಾರೆ. ಸೋವಿಯಟ್ನ ಸಾವಿರಾರು ನಿರುದ್ಯೋಗಿ ನ್ಯೂಕ್ಲಿಯರ್ ವಿಜ್ಞಾನಿಗಳು ತಮ್ಮ ಕೌಶಲಗಳನ್ನು ಮಾರಿಕೊಳ್ಳಲು ಪ್ರಯತ್ನಿಸುವರೆಂದು ಕೆಲವರು ಭಯಭರಿತರಾಗಿದ್ದಾರೆ. ಅಲ್ಲದೆ, ಸ್ಟಾರ್ಟ್ (START) ಒಪ್ಪಂದ ಮತ್ತು ಇತರ ಒಪ್ಪಂದಗಳು ಯುದ್ಧ ತಂತ್ರದ ಅಣ್ವಸ್ತ್ರಗಳ ಭಾರಿ ಕಡಿಮೆಗೊಳಿಸುವಿಕೆಗಾಗಿ ಕರೆ ನೀಡುವುದಾದರೂ, ಇಂತಹ ಒಪ್ಪಂದಗಳ ಜಾರಿಗೊಳಿಸುವಿಕೆಯು ಅನೇಕ ವರ್ಷಗಳ ವರೆಗೂ ಪೂರ್ಣಗೊಳ್ಳಲಾರದು. ಈ ನಡುವೆ, ಯಾವುದಾದರೂ ಮತಭ್ರಾಂತ ದುರಹಂಕಾರಿಯಿಂದ ಈ ಶಸ್ತ್ರದ ಸಂಭಾವ್ಯ ಬಳಕೆಯು, ಪರ್ವತದ ಮೇಲಿಂದ ಬೆದರಿಕೆಯೊಡ್ಡುವ ಕಾರ್ಮೋಡದಂತೆ ತೂಗಾಡಬೇಕು.
ಹಿಂಸೆಯು ಭಯವನ್ನು ವರ್ಧಿಸುತ್ತದೆ
ಹಿಂಸಾತ್ಮಕ ದುಷ್ಕೃತ್ಯಗಳಲ್ಲಿ ವ್ಯಾಪಕವಾದ ಅಭಿವೃದ್ಧಿಯು ಜನರನ್ನು ತಮ್ಮ ಮನೆಗಳಲ್ಲಿ ಹಾಗೂ ರಸ್ತೆಗಳಲ್ಲಿ ಭಯಭೀತರನ್ನಾಗಿ ಮಾಡುತ್ತದೆ. ಅಂದಾಜು ಮಾಡಲಾದ 23,200 ಅಮೆರಿಕನರನ್ನು 1990 ರಲ್ಲಿ ಕೊಲಲ್ಲಾಯಿತು. ಉದಾಹರಣೆಗೆ, ಶಿಕಾಗೊ ನಗರದಲ್ಲಿ, ಕ್ರ್ಯಾಕ್ ಕೊಕೇನ್ನ ಬಳಕೆಯಲ್ಲಿ ಅಭಿವೃದ್ಧಿಯು, ಒಂದು ವರ್ಷದಲ್ಲಿ ಸುಮಾರು 700 ಕೊಲೆಗಳಿಗೆ ನೆರವು ನೀಡಿತು. ಕೆಲವು ನಗರಗಳ ನಿರ್ದಿಷ್ಟ ಪ್ರದೇಶಗಳು ಯುದ್ಧಭೂಮಿಗಳಾಗಿವೆ; ಅಲ್ಲಿ ದಾರಿಹೋಕರು—ಮಕ್ಕಳನ್ನು ಸೇರಿಸಿ—ಅಡಗ್ಡುಂಡು ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಒಂದು ಪತ್ರಿಕೆಯು ಹೇಳುವುದು: “ಮಧ್ಯಗಾತ್ರದ ನಗರಗಳಲ್ಲಿ ಹಿಂಸೆಯು ತೀವ್ರವಾಗಿ ಏರುತ್ತಿದೆ. . . . ಅಮೆರಿಕದ ಸುತ್ತಲೂ ಇರುವ ಸಮುದಾಯಗಳು, ಅಮಲೌಷಧಗಳು ಮತ್ತು ಎಳೆಯ ಪುಂಡರಿಂದ ತುಂಬಿರುವುದರಿಂದ ಯಾರೂ ರಕ್ಷಿತರಾಗಿರುವುದಿಲ್ಲ. ಪ್ರತಿ ವರ್ಷ 4 ಅಮೆರಿಕನ್ ಮನೆವಾರ್ತೆಗಳಲ್ಲಿ ಒಂದು ಮನೆವಾರ್ತೆಯು, ಹಿಂಸಾತ್ಮಕ ದುಷ್ಕೃತ್ಯವೊಂದನ್ನು ಯಾ ಕಳ್ಳತನವನ್ನು ಅನುಭವಿಸುತ್ತದೆ.”—ಯು.ಎಸ್.ನ್ಯೂಜ್ ಆ್ಯಂಡ್ ವರ್ಲ್ಡ್ ರಿಪೋರ್ಟ್, ಅಕ್ಟೋಬರ 7, 1991.
ಬಲಾತ್ಕಾರ ಸಂಭೋಗದ ಭಯವು ಹೆಂಗಸರನ್ನು ಹೆದರುವಂತೆ ಮಾಡುತ್ತದೆ. ಫ್ರಾನ್ಸ್ನಲ್ಲಿ ವರದಿಮಾಡಲಾದ ಬಲಾತ್ಕಾರ ಸಂಭೋಗಗಳು 1985 ರಿಂದ 1990ರ ವರೆಗೆ 62 ಪ್ರತಿಶತ ಏರಿದವು. ಆರು ವರ್ಷಗಳೊಳಗೆ, ಕೆನಡದಲ್ಲಿ ಲೈಂಗಿಕ ದಾಳಿಗಳು 27,000ಕ್ಕೆ ದ್ವಿಗುಣಿಸಿದವು. ಪ್ರತಿ ಏಳು ನಿಮಿಷಗಳಿಗೊಮ್ಮೆ ಸ್ತ್ರೀಯೊಬ್ಬಳ ಮೇಲೆ ಲೈಂಗಿಕ ದಾಳಿಯನ್ನು ಜರ್ಮನಿ ವರದಿಸಿತು.
ಮಕ್ಕಳು ಕೂಡ ತಮ್ಮ ಸುರಕ್ಷತೆಗಾಗಿ ಭಯಪಡುತ್ತಾರೆ. ಅಮೆರಿಕದಲ್ಲಿ, “ಮಕ್ಕಳು, ನಾಲ್ಕನೆಯ ಹಾಗೂ ಐದನೆಯ ತರಗತಿಯವರು ಕೂಡ ತಮ್ಮನ್ನು ಶಸ್ತ್ರಸನ್ನದ್ಧರಾಗಿಸಿಕೊಳ್ಳುತ್ತಿದ್ದಾರೆ, ಮತ್ತು ಶಿಕ್ಷಕರು ಹಾಗೂ ಶಾಲಾ ಅಧಿಕಾರಿಗಳು ಹೆದರುತ್ತಿದ್ದಾರೆ,” ಎಂದು ನ್ಯೂಜ್ವೀಕ್ ವರದಿಸುತ್ತದೆ. ಪರಿಸ್ಥಿತಿಯು ಎಷ್ಟು ಗಂಭೀರವಾಗಿದೆ ಎಂದರೆ, ದೊಡ್ಡ ಪಟ್ಟಣದ ಶಾಲಾ ಜಿಲ್ಲೆಗಳಲ್ಲಿ ಮುಕ್ಕಾಲು, ಲೋಹವನ್ನು ಪತ್ತೆಮಾಡುವ ಯಂತ್ರವನ್ನು ಬಳಸುತ್ತವೆ, ಆದರೆ ಕಿಟಕಿಗಳ ಮೂಲಕ ಇತರರಿಗೆ ಬಂದೂಕುಗಳನ್ನು ಸಾಗಿಸುವ ಮೂಲಕ ಈ ದೃಢಸಂಕಲ್ಪದ ಎಳೆಯರು ಯಂತ್ರಗಳಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ.
ಏಯ್ಡ್ಸ್ನ ಭಯ
ಹೆಚ್ಚು ಹೆಚ್ಚಾಗಿ ಜನರು ಏಯ್ಡ್ಸ್ ರೋಗವನ್ನು ತಗಲಿಸಿಕೊಳ್ಳುವುದರ ಕುರಿತು ಭಯಭೀತರಾಗಿದ್ದಾರೆ. ಅಮೆರಿಕದಲ್ಲಿಯೇ 2,30,000 ಕ್ಕಿಂತಲೂ ಅಧಿಕ ಕೇಸುಗಳು ಆಗಿಹೋಗಿವೆ. ಹದಿನೈದರಿಂದ 24 ವರ್ಷ ಪ್ರಾಯದವರೊಳಗೆ ಏಯ್ಡ್ಸ್ ರೋಗವು ಮರಣದ ಆರನೆಯ ಮುಖ್ಯ ಕಾರಣವಾಗಿದೆ. “ಇನ್ನು ಅಧಿಕ ವ್ಯಾಪಕವಾದ ಅನಾರೋಗ್ಯಗಳ ಭಯ ಹುಟ್ಟಿಸುವ ಪ್ರತೀಕ್ಷೆಯನ್ನು ಭವಿಷ್ಯವು ಎತ್ತಿಹಿಡಿಯುತ್ತದೆ,” ಎಂದು ನ್ಯೂಜ್ವೀಕ್ ಹೇಳುತ್ತದೆ.
ಏಯ್ಡ್ಸ್ನಿಂದ ಮರಣವು ಹೆಚ್ಚಾಗಿ ನೃತ್ಯ, ನಾಟಕ, ಚಲನಚಿತ್ರಗಳು, ಸಂಗೀತ, ಫ್ಯಾಶನ್, ಟೆಲಿವಿಷನ್, ಕಲೆ, ಮತ್ತು ಮುಂತಾದ ಕ್ಷೇತ್ರಗಳಲ್ಲಿರುವ ಜನರೊಳಗೆ ಸಾಧಾರಣವಾಗಿದೆ. ಪತ್ರಿಕೋದ್ಯೋಗ, ಕಲೆ, ಮತ್ತು ಮನೋರಂಜನೆಯ ಕ್ಷೇತ್ರಗಳಲ್ಲಿ, ಇಪ್ಪತ್ತೈದರಿಂದ 44ರ ವಯೋಮಿತಿಯಲ್ಲಿರುವ ಪ್ಯಾರಿಸ್ನಲ್ಲಿ ಜೀವಿಸುತ್ತಿರುವ ಪುರುಷರ ಮರಣಗಳಲ್ಲಿ 60 ಪ್ರತಿಶತವು ಏಯ್ಡ್ಸ್ನಿಂದ ಆಗಿತ್ತೆಂದು ಒಂದು ವರದಿಯು ಹೇಳಿತು. ಲೋಕವ್ಯಾಪಕವಾಗಿ 80 ಲಕ್ಷದಿಂದ 100 ಲಕ್ಷ ಜನರು ಏಚ್ಐವಿ ರೋಗಾಣುವಿನಿಂದ ಸೋಂಕಿತರಾಗಿದ್ದಾರೆಂದು ಡಬ್ಲ್ಯೂಏಚ್ಒ (ಲೋಕ ಆರೋಗ್ಯ ಸಂಸ್ಥೆ) ವರದಿಸುತ್ತದೆ. ಡಬ್ಲ್ಯೂಏಚ್ಒನ ಒಬ್ಬ ನಿರ್ದೇಶಕರಾದ ಡಾ. ಮೈಕಲ್ ಮರ್ಸನ್, ಹೇಳುವುದು: “ಭೂಮಂಡಲದ ಸುತ್ತಲೂ ಏಚ್ಐವಿ ಸೋಂಕಿನ ಪ್ರಮಾಣವು ತೀವ್ರವಾಗಿ ಕೆಡುತ್ತಿದೆ—ವಿಶೇಷವಾಗಿ ವಿಕಾಸಶೀಲ ದೇಶಗಳಲ್ಲಿ—ಎಂಬುದು ಈಗ ಸ್ಪಷ್ಟವಾಗಿಗಿದೆ.”
ಪರಿಸರದ ಮತ್ತು ಇನ್ನಿತರ ಭಯಗಳು ಕೂಡ ಇವೆ ಎಂಬುದು ನಿಶ್ಚಯ. ಆದರೂ, ಭಯವು ಲೋಕವನ್ನು ಬಿಗಿಯಾಗಿ ಹಿಡಿಯುತ್ತದೆ ಎಂಬುದನ್ನು ಮೊದಲು ಹೇಳಿದ ವರದಿಗಳೇ ಸ್ಪಷ್ಟಮಾಡುತ್ತವೆ. ಇದರ ಕುರಿತು ವಿಶೇಷವಾಗಿ ಮಹತ್ವವುಳ್ಳದ್ದೇನಾದರೂ ಇದೆಯೆ? ಭಯದಿಂದ ಸ್ವಾತಂತ್ರ್ಯವನ್ನು ಅನುಭವಿಸಲು ನಾವು ಎಂದಾದರೂ ನಿರೀಕ್ಷಿಸಬಲ್ಲೆವೊ?
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover photos: Left: Tom Haley/Sipa Press; Bottom: Malanca/Sipa Press
[ಪುಟ 3 ರಲ್ಲಿರುವ ಚಿತ್ರ ಕೃಪೆ]
Bob Strong/Sipa Press