ನಿಮ್ಮ ಪವಿತ್ರ ಸೇವೆಯನ್ನು ಗಣ್ಯಮಾಡಿರಿ
ಯಾವುದೇ ಸಾರ್ಥಕ ಲಕ್ಷ್ಯವನ್ನು ಸಾಧಿಸಲಿಕ್ಕಾಗಿ ತ್ಯಾಗಗಳನ್ನು ಮಾಡಲು ನಾವು ಸಿದ್ಧರಾಗಿರಬೇಕು. ಒಬ್ಬ ವೈದ್ಯನಾಗಲು, ಹಲವಾರು ವರ್ಷಗಳ ಅಧ್ಯಯನ ಮತ್ತು ದೃಢಸಂಕಲ್ಪ, ಅಷ್ಟೇ ಅಲ್ಲದೆ ಹಣ ಬೇಕಾಗಿದೆ. ಪರಿಪೂರ್ಣತೆಯ ಬಿಡದ ಬೆನ್ನಟ್ಟುವಿಕೆಯಲ್ಲಿ ಒಬ್ಬ ಸಫಲ ಮಲನ್ಲು ಪ್ರಗತಿಪರವಾಗಿ ಅಧಿಕ ಕಠಿನವಾದ ನಿಯತಕ್ರಮಗಳ ಮೇಲೆ ಕೆಲಸಮಾಡುತ್ತಾ, ತನ್ನ ಯೌವನದ ಹೆಚ್ಚಿನ ಭಾಗವನ್ನು ಕಳೆದಿದ್ದಾನೆ. ಒಬ್ಬ ಕುಶಲ ಪಿಯಾನೊ ವಾದ್ಯಗಾರನು ಅದೇ ರೀತಿಯಲ್ಲಿ ಸಮರ್ಪಿತ ಅಭ್ಯಾಸದ ವರ್ಷಗಳ ಕಡೆಗೆ ಮನಸ್ಸನ್ನು ತಿರುಗಿಸಬಲ್ಲನು.
ಹಾಗಿದ್ದರೂ, ಸಲ್ಲಿಸಬೇಕಾಗಿರುವ ಯಾವುದೇ ಬೆಲೆಗೆ ಅತಿ ಹೆಚ್ಚಾಗಿ ಪ್ರತಿಫಲಗಳನ್ನು ತರುವ ಒಂದು ಲಕ್ಷ್ಯವಿದೆ. ಅದು ಯಾವುದು? ಅದು, ಸರ್ವೂನ್ನತನಾದ ಯೆಹೋವ ದೇವರ ಒಬ್ಬ ಸೇವಕನಾಗಿರುವ ಸುಯೋಗವೇ. ಸಮಯ, ಹಣ, ಯಾ ಶಕ್ತಿಯ ಸಂಬಂಧದಲ್ಲಿ ನಾವು ಮಾಡುವ ತ್ಯಾಗಗಳು ಎಂಥದಾಗಿದ್ದರೂ, ನಮ್ಮ ಸೃಷ್ಟಿಕರ್ತನಿಗೆ ಪವಿತ್ರ ಸೇವೆಯನ್ನು ಸಲ್ಲಿಸುವ ಸುಯೋಗವು ಹೋಲಿಕೆಯನ್ನು ಮೀರುವ ಪ್ರತಿಫಲಗಳನ್ನು ತರುತ್ತದೆ. ಅಪೊಸ್ತಲ ಪೌಲನ ಮಾತುಗಳು ಸತ್ಯವಾಗಿವೆ: “ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು; ಅದಕ್ಕೆ ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು.” (1 ತಿಮೊಥೆಯ 4:8) ಅದು ಹೇಗೆ ಸತ್ಯವಾಗಿದೆ ಎಂದು ನಾವು ನೋಡೋಣ.
ದೇವರ ಕುರಿತು ನಾವು ಮೊದಲು ಕಲಿಯುವಾಗ
ಸುವಾರ್ತೆಗೆ ಅನುಕೂಲಕರವಾಗಿ ಪ್ರತಿಕ್ರಿಯಿಸುವ ಮತ್ತು ಬೈಬಲನ್ನು ಅಭ್ಯಸಿಸಲು ತೊಡಗುವ ಅನೇಕರು ಬಹುಶಃ ತಮ್ಮ ಜೀವಿತಗಳಲ್ಲಿ ಫಲಿಸುವ ಬದಲಾವಣೆಗಳ ಮಟ್ಟವನ್ನು ಗ್ರಹಿಸುವುದಿಲ್ಲ. ಮೊದಲು, ಈಗ ಅವನು ದೇವರಿಗೆ ಅಗೌರವವನ್ನು ಸೂಚಿಸುವ ವಿಷಯಗಳೆಂದು ಗ್ರಹಿಸುವ ಬೆನ್ನಟ್ಟುವಿಕೆಗಳಲ್ಲಿ ಅವರೊಂದಿಗೆ ಇನ್ನು ಮುಂದೆ ಯಾಕೆ ಸಹಕರಿಸುವುದಿಲ್ಲವೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಕೆಲವು ಗೆಳೆಯರನ್ನು ಈ ಹೊಸ ಬೈಬಲ್ ವಿದ್ಯಾರ್ಥಿಯು ಕಳೆದುಕೊಳ್ಳಬಹುದು. (1 ಪೇತ್ರ 4:4) ಕೆಲವರು ಕುಟುಂಬದ ವಿರೋಧವನ್ನು ಅನುಭವಿಸಬಹುದು ಮತ್ತು ತಾವು ಪ್ರೀತಿಸುವಂತಹ ಜನರು ಯೆಹೋವನಿಗಾಗಿ ಇಷ್ಟವಿಲ್ಲದಿರುವಿಕೆಯನ್ನು, ದ್ವೇಷವನ್ನು ಸಹ ಪ್ರದರ್ಶಿಸುವುದನ್ನು ನೋಡಿ ಸಂಕಟಪಡಬಹುದು. (ಮತ್ತಾಯ 10:36) ತೆರಲು ಅದೊಂದು ಕಷ್ಟಕರ ಬೆಲೆಯಾಗಿರಬಲ್ಲದು.
ಕೆಲಸದ ಸ್ಥಳದಲ್ಲಿ ಯಾ ಶಾಲೆಯಲ್ಲಿ ಸಹ ತೆರಲು ಒಂದು ಬೆಲೆ ಇರುವುದು. ಹೊಸ ಬೈಬಲ್ ವಿದ್ಯಾರ್ಥಿಯು ಸಕಾಲದಲ್ಲಿ ಲೌಕಿಕ ಗೋಷ್ಠಿಗಳಲ್ಲಿ ಮತ್ತು ಇತರ ಆಚರಣೆಗಳಲ್ಲಿ ಭಾಗವಹಿಸುವುದನ್ನು ಕ್ರಮೇಣ ನಿಲ್ಲಿಸುವನು. ಅವನು ಇನ್ನು ಮುಂದೆ ತನ್ನ ಕೆಲಸದ ಸಂಗಾತಿಗಳ ಯಾ ಶಾಲಾ ಸಂಗಾತಿಗಳ ಅಶುದ್ಧ ಮಾತನ್ನು ಕೇಳನು, ಅಲ್ಲದೆ ಅವರೊಂದಿಗೆ ಅಶ್ಲೀಲ ಹಾಸ್ಯಗಳ ವಿನಿಮಯಮಾಡನು. ಬದಲಿಗೆ, ಎಫೆಸ 5:3, 4 ರಲ್ಲಿ ಕಂಡುಕೊಳ್ಳಲ್ಪಡುವ ಬುದ್ಧಿವಾದವನ್ನು ಅವನು ಕಾರ್ಯರೂಪಕ್ಕೆ ಹಾಕಲು ಪ್ರಯತ್ನಿಸುವನು: “ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು. ಹೊಲಸು ಮಾತು ಹುಚ್ಚು ಮಾತು ಕುಚೋದ್ಯ ಮಾತು ಇವು ಬೇಡ, ಅಯುಕ್ತವಾಗಿವೆ; ಇವುಗಳನ್ನು ಬಿಟ್ಟು ದೇವರಿಗೆ ಉಪಕಾರಸ್ತುತಿಮಾಡುವದು ಉತ್ತಮ.”
ಇಂತಹ ಬದಲಾವಣೆಗಳು ಬೈಬಲ್ ವಿದ್ಯಾರ್ಥಿಯನ್ನು ಒಬ್ಬ ಹೊರಗಿನವನಾಗಿ ಮಾಡಬಹುದು. ವಿಶೇಷವಾಗಿ ಶಾಲೆಯಲ್ಲಿರುವ ಒಬ್ಬ ಯುವಕನಿಗೆ ಅದು ಕಠಿನವಾಗಿರಬಲ್ಲದು. ಒಂದು ರಜೆಯ ಅನಂತರ ಇನ್ನೊಂದನ್ನು ಅಷ್ಟೇ ಅಲ್ಲದೆ ದೇವ ವಿರುದ್ಧವಾದ ವಿಕಾಸವಾದದಂತಹ ಬೋಧನೆಗಳನ್ನು ಮತ್ತು ಸಮೂಹದೊಂದಿಗೆ ಜೊತೆಯಾಗಿ ಹೋಗುವ ಸತತವಾದ ಒತ್ತಡವನ್ನು ಎದುರಿಸುತ್ತಾ, ಯುವ ಕ್ರೈಸ್ತರು ನಂಬಿಕೆಗಾಗಿ ಸತತವಾದ ಹೋರಾಟವನ್ನು ಹೋರಾಡಬೇಕು. ದೇವರ ಮಾರ್ಗಗಳನ್ನು ಅನುಸರಿಸುವುದು ಅವರನ್ನು ಭಿನ್ನರನ್ನಾಗಿ ಮಾಡುವುದು ಮತ್ತು ವರ್ಗದ ಸಂಗಾತಿಗಳಿಂದ ಹಾಗೂ ಶಿಕ್ಷಕರಿಂದ ಅಪಹಾಸ್ಯದಲ್ಲಿ ಪರಿಣಮಿಸಬಹುದು. ಇದನ್ನು ವಿಶೇಷವಾಗಿ ಸೂಕ್ಷ್ಮವಾದ ಹದಿವಯಸ್ಕ ವರ್ಷಗಳಲ್ಲಿ ಸ್ವೀಕರಿಸುವುದು ಕಠಿನವಾಗಿದೆ, ಆದರೆ ದೇವರ ಅನುಗ್ರಹವು ತೆರಬೇಕಾದ ಯಾವುದೇ ಬೆಲೆಗೆ ಅರ್ಹವಾಗಿದೆ!
ಅವು ನಿಜವಾಗಲೂ ತ್ಯಾಗಗಳೊ?
ತ್ಯಾಗಗಳಾಗಿ ಮೊದಲು ತೋರುವ ಇತರ ವಿಷಯಗಳು ಆಶೀರ್ವಾದಗಳಾಗಿ ಪರಿಣಮಿಸುತ್ತವೆ. ಕೆಲವರು ತಂಬಾಕು ಹವ್ಯಾಸವನ್ನು ಬಿಟ್ಟುಬಿಡಬೇಕಾಗಿದೆ. (2 ಕೊರಿಂಥ 7:1) ಇದೊಂದು ಹೋರಾಟವಾಗಿರಬಲ್ಲದು, ಆದರೆ ಆ ಅಸಹ್ಯಕರವಾದ ದುಶ್ಚಟವು ಅಂತಿಮವಾಗಿ ಜಯಿಸಲ್ಪಟ್ಟಾಗ ಅದು ಎಂತಹ ಒಂದು ಆಶೀರ್ವಾದವಾಗಿದೆ! ಇತರ ಅಮಲೌಷಧಗಳಿಗೆ ಯಾ ಮದ್ಯಪಾನಕ್ಕಿರುವ ವ್ಯಸನವನ್ನು ಜಯಿಸುವುದರ ಕುರಿತು ಇದೇ ವಿಷಯವನ್ನು ಹೇಳಸಾಧ್ಯವಿದೆ. ಇಂತಹ ನಾಶಕಾರಕ ಹವ್ಯಾಸಗಳಿಲ್ಲದೆ ಜೀವಿತವು ಎಷ್ಟೊಂದು ಉತ್ತಮವಾಗಿದೆ! ಇತರರು ತಮ್ಮ ಮದುವೆಯ ವ್ಯವಹಾರಗಳನ್ನು ಕ್ರಮಕ್ಕೆ ತರಬೇಕಾಗಿದೆ. ಮದುವೆಯ ಪ್ರಯೋಜನವಿಲ್ಲದೆ ಒಟ್ಟಿಗೆ ಜೀವಿಸುತ್ತಿರುವವರು ಮದುವೆಯಾಗಬೇಕು ಇಲ್ಲವೆ ಒಟ್ಟಿಗೆ ಜೀವಿಸುವುದನ್ನು ನಿಲ್ಲಿಸಬೇಕು. (ಇಬ್ರಿಯ 13:4) ಹಲವಾರು ಹೆಂಡತಿಯರೊಂದಿಗೆ ಜೀವಿಸುತ್ತಿರುವವರು ತಮ್ಮ ಯೌವನದ ಹೆಂಡತಿಯನ್ನು ಮಾತ್ರ ಉಳಿಸಿಕೊಳ್ಳಬೇಕು. (ಜ್ಞಾನೋಕ್ತಿ 5:18) ಇಂತಹ ಹೊಂದಾಣಿಕೆಗಳು ತ್ಯಾಗವನ್ನು ಒಳಗೊಂಡಿವೆ, ಆದರೆ ಅವು ಮನೆಗೆ ಶಾಂತಿಯನ್ನು ತರುತ್ತವೆ.
ಬಹುಮಾನಗಳ ಕುರಿತು ಯೋಚಿಸಿರಿ
ನಿಶ್ಚಯವಾಗಿಯೂ, ಯೆಹೋವನ ನಿಯಮಗಳಿಗೆ ವಿಧೇಯನಾಗುವ ಯಾವನಾದರೂ ನಿಜವಾಗಿಯೂ ಪ್ರಯೋಜನ ಪಡೆಯುತ್ತಾನೆ. ತನ್ನ ಜೀವಿತದಲ್ಲಿ ಮೊದಲ ಬಾರಿಗೆ, ಬೈಬಲ್ ವಿದ್ಯಾರ್ಥಿಯು ತನ್ನ ಸೃಷ್ಟಿಕರ್ತನನ್ನು, ಯೆಹೋವ ಎಂಬ ಆತನ ಹೆಸರಿನಿಂದ ಸಂಬೋಧಿಸಲು ತೊಡಗುತ್ತಾನೆ. (ಕೀರ್ತನೆ 83:18) ಯೆಹೋವನು ಮಾಡಿರುವ ಮತ್ತು ಮಾನವಜಾತಿಗಾಗಿ ಇನ್ನೂ ಮಾಡಲಿರುವ ಅದ್ಭುತಕರವಾದ ವಿಷಯಗಳ ಕುರಿತು ವಿದ್ಯಾರ್ಥಿಯು ಕಲಿತಂತೆ, ಅವನು ಯೆಹೋವನನ್ನು ಪ್ರೀತಿಸತೊಡಗುತ್ತಾನೆ. ಸತ್ತವರ ಭಯ ಸಾಮಾನ್ಯವಾಗಿರುವ ದೇಶಗಳಲ್ಲಿ, ಸತ್ತವರು ಒಂದು ಪುನರುತ್ಥಾನವನ್ನು ಎದುರುನೋಡುತ್ತಾ, ನಿದ್ರಾವಸ್ಥೆಯಲ್ಲಿದ್ದಾರೆಂದು ತಿಳಿಯುತ್ತಾ ಈ ಮೂಢನಂಬಿಕೆಯ ಭಯವನ್ನು ಅವನು ಕಳೆದುಕೊಳ್ಳುತ್ತಾನೆ. (ಪ್ರಸಂಗಿ 9:5, 10) ಮತ್ತು ಯೆಹೋವನು ಜನರನ್ನು ನಿತ್ಯವಾಗಿ ನರಕದಲ್ಲಿ ಹಿಂಸಿಸುವುದಿಲ್ಲವೆಂದು ಗ್ರಹಿಸುವುದು ಎಂತಹ ಉಪಶಮನವಾಗಿದೆ! ಹೌದು, ಸತ್ಯವು ನಿಜವಾಗಿಯೂ ಅವನನ್ನು ಸ್ವತಂತ್ರನನ್ನಾಗಿ ಮಾಡುತ್ತದೆ.—ಯೋಹಾನ 8:32.
ವಿದ್ಯಾರ್ಥಿಯು ತನ್ನ ಜೀವಿತವನ್ನು ಯೆಹೋವನ ಮಟ್ಟಗಳಿಗೆ ಹೆಚ್ಚೆಚ್ಚಾಗಿ ಸರಿಹೊಂದಿಸಿಕೊಂಡಂತೆ, ಒಂದು ಶುದ್ಧವಾದ ಮನಸ್ಸಾಕ್ಷಿಯನ್ನು ಮತ್ತು ಸ್ವಗೌರವವನ್ನು ಅವನು ಪಡೆಯುತ್ತಾನೆ. ಒಬ್ಬ ಸತ್ಯ ಕ್ರೈಸ್ತನಂತೆ ಜೀವಿಸಲು ಕಲಿಯುವುದು ತನ್ನ ಕುಟುಂಬಕ್ಕಾಗಿ ಉತ್ತಮವಾಗಿ ಕಾಳಜಿವಹಿಸುವಂತೆ ಅವನಿಗೆ ಸಹಾಯಮಾಡುವುದು, ಇದು ಮಹಾ ತೃಪ್ತಿಯನ್ನು ಮತ್ತು ಆನಂದವನ್ನು ತರುತ್ತದೆ. ತದನಂತರ ರಾಜ್ಯ ಸಭಾಗೃಹದಲ್ಲಿ ಕೂಟಗಳನ್ನು ಹಾಜರಾಗುವ ಸುಯೋಗವಿದೆ. ಎಂತಹ ಹರ್ಷದಾಯಕ ಅನುಭವ! ದೇವರ ಜನರನ್ನು ಗುರುತಿಸಬೇಕೆಂದು ಬೈಬಲ್ ಹೇಳುವ ಅನುರಾಗದ ಪ್ರೀತಿಯನ್ನು ನಿಜವಾಗಿಯೂ ಆಚರಿಸುವ ಜನರು ಇಲ್ಲಿದ್ದಾರೆ. (ಕೀರ್ತನೆ 133:1; ಯೋಹಾನ 13:35) ಅವರು “ದೇವರ ಮಹತ್ತುಗಳ ವಿಷಯವಾಗಿ” ಮಾತಾಡಿದಂತೆ, ಅವರ ಮಾತು ಶುದ್ಧವಾಗಿಯೂ ಭಕ್ತಿವೃದ್ಧಿಮಾಡುವಂಥದ್ದೂ ಆಗಿದೆ. (ಅ. ಕೃತ್ಯಗಳು 2:11) ಹೌದು, “ಸಹೋದರರ ಇಡೀ ಬಳಗದ” ಸಂಪರ್ಕದಲ್ಲಿ ಬರುವುದು ಸಂತೋಷದ ಒಂದು ಮೂಲವಾಗಿದೆ. (1 ಪೇತ್ರ 2:17, NW) ಇಂತಹ ಉತ್ತಮ ಸಾಹಚರ್ಯವು “ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿರುವ ನೂತನ ಸ್ವಭಾವವನ್ನು ಧರಿಸಿಕೊಳ್ಳು” ವಂತೆ, ಬೈಬಲ್ ವಿದ್ಯಾರ್ಥಿಯನ್ನು ಸಹಾಯಿಸುತ್ತದೆ.—ಎಫೆಸ 4:24, NW.
ಸಮರ್ಪಣೆಯ ಹೆಜ್ಜೆ
ವ್ಯಕ್ತಿಯೊಬ್ಬನು ಜ್ಞಾನದಲ್ಲಿ ಪ್ರಗತಿಸಿದಂತೆ, ಅವನು ಅಂತಿಮವಾಗಿ ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸುವಂತೆ ಮತ್ತು ಈ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸುವಂತೆ ದೇವರಿಗಾಗಿರುವ ಪ್ರೀತಿಯಿಂದ ಪ್ರಚೋದಿಸಲ್ಪಡುತ್ತಾನೆ. (ಮತ್ತಾಯ 28:19, 20) ಈ ಹೆಜ್ಜೆಯನ್ನು ತೆಗೆದುಕೊಳ್ಳುವ ಮೊದಲು ತನ್ನ ಶಿಷ್ಯರು ಲೆಕ್ಕಹಾಕಬೇಕೆಂಬುದು ಯೇಸುವಿನ ಸಲಹೆಯಾಗಿದೆ. (ಲೂಕ 14:28) ಒಬ್ಬ ಸಮರ್ಪಿತ ಕ್ರೈಸ್ತನು ಯೆಹೋವನ ಚಿತ್ತವನ್ನು ಪ್ರಥಮವಾಗಿಡುತ್ತಾನೆ ಮತ್ತು ಶರೀರದ ವಿಷಯಗಳನ್ನು ತ್ಯಜಿಸುತ್ತಾನೆ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. “ಶರೀರಭಾವದ ಕರ್ಮಗಳನ್ನು” ತೊರೆಯಲು ಮತ್ತು “ದೇವರಾತ್ಮನಿಂದ ಉಂಟಾಗುವ ಫಲ” ಗಳನ್ನು ಬೆಳೆಸಿಕೊಳ್ಳಲು ಅವನು ಕಷ್ಟಪಟ್ಟು ಕೆಲಸಮಾಡುತ್ತಾನೆ. (ಗಲಾತ್ಯ 5:19-24) ರೋಮಾಪುರ 12:2 ರಲ್ಲಿ ಕಂಡುಕೊಳ್ಳಲ್ಪಡುವ ಸಲಹೆಯು ಈಗ ಅವನ ಜೀವಿತದಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” ಹೀಗೆ, ಒಬ್ಬ ಸಮರ್ಪಿತ ಕ್ರೈಸ್ತನು ತನ್ನ ಜೀವಿತವನ್ನು ಉದ್ದೇಶದ ನವೀಕರಿಸಿದ ಅರ್ಥದೊಂದಿಗೆ ಜೀವಿಸುತ್ತಾನೆ.
ಆದರೆ, ಅವನು ಪಡೆಯುವ ಸಂಗತಿಗಳನ್ನು ಪರಿಗಣಿಸಿರಿ. ಒಂದು ವಿಷಯವೇನೆಂದರೆ, ಅವನೀಗ ವಿಶ್ವದ ಸೃಷ್ಟಿಕರ್ತನೊಂದಿಗೆ ಒಂದು ವೈಯಕ್ತಿಕ ಸಂಬಂಧದಲ್ಲಿದ್ದಾನೆ. ದೇವರ ಮಿತ್ರನಾಗಿರುವ ದೃಷ್ಟಿಯಿಂದ ಅವನು ನೀತಿವಂತನೆಂದು ಘೋಷಿಸಲ್ಪಟ್ಟಿದ್ದಾನೆ! (ಯಾಕೋಬ 2:23) ಹೆಚ್ಚಿನ ಆಳವಾದ ಅರ್ಥದೊಂದಿಗೆ, ಅವನು ದೇವರನ್ನು “ಪರಲೋಕದಲ್ಲಿರುವ ನಮ್ಮ ತಂದೆಯೇ” ಎಂಬುದಾಗಿ ಸಂಬೋಧಿಸುತ್ತಾನೆ. (ಮತ್ತಾಯ 6:9) ಜೀವಿತಕ್ಕೆ ನಿಜವಾಗಿಯೂ ಒಂದು ಉದ್ದೇಶವಿದೆಯೆಂದು ಮತ್ತು ಅವನು ತನ್ನ ಜೀವಿತವನ್ನು ಆ ಉದ್ದೇಶದೊಂದಿಗೆ ಹೊಂದಾಣಿಕೆಯಲ್ಲಿ ಜೀವಿಸುತ್ತಿದ್ದಾನೆಂದು ಅರಿಯುವುದು ಹೊಸದಾಗಿ ಸಮರ್ಪಿಸಿಕೊಂಡ ವ್ಯಕ್ತಿಗೆ ಇನ್ನೊಂದು ಆಶೀರ್ವಾದವಾಗಿದೆ. (ಪ್ರಸಂಗಿ 12:13) ಯೇಸುವಿನ ನಾಯಕತ್ವವನ್ನು ಅನುಸರಿಸುತ್ತಾ, ನಂಬಿಗಸ್ತನಾಗಿ ಉಳಿಯುವ ಮೂಲಕ ಸೈತಾನನನ್ನು ಒಬ್ಬ ಸುಳ್ಳುಗಾರನೆಂದು ಅವನು ಸಿದ್ಧಪಡಿಸಬಲ್ಲನು. ಯೆಹೋವನ ಹೃದಯಕ್ಕೆ ಅದು ಎಂತಹ ಆನಂದವನ್ನು ತರುತ್ತದೆ!—ಜ್ಞಾನೋಕ್ತಿ 27:11.
ಕ್ರೈಸ್ತನೊಬ್ಬನು ನಂಬಿಗಸ್ತಿಕೆಯ ಪಥದಲ್ಲಿ ತಾಳಿಕೊಂಡಂತೆ, ಇನ್ನೂ ಹೆಚ್ಚಿನ ತ್ಯಾಗಗಳನ್ನು ಮಾಡಲಿಕ್ಕಿದೆ ಎಂಬುದು ಖಂಡಿತ. ದೇವರ ವಾಕ್ಯದ ಅರ್ಥಪೂರ್ಣ ವೈಯಕ್ತಿಕ ಹಾಗೂ ಸಭಾ ಅಭ್ಯಾಸದಲ್ಲಿ ತೊಡಗಲು ಸಮಯವು ಬೇಕಾಗಿದೆ. (ಕೀರ್ತನೆ 1:1-3; ಇಬ್ರಿಯ 10:25) ಕ್ಷೇತ್ರ ಶುಶ್ರೂಷೆಗಾಗಿ ಸಮಯವು ಇತರ ಚಟುವಟಿಕೆಗಳಿಂದ ಕೊಂಡುಕೊಳ್ಳಲ್ಪಡಬೇಕು. (ಎಫೆಸ 5:16) ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಲು ಮತ್ತು ಅವರ ಸಮ್ಮೇಳನಗಳಿಗೆ ಹಾಗೂ ಅಧಿವೇಶನಗಳಿಗೆ ಪ್ರಯಾಣಿಸಲು ಸಹ ಸಮಯ ಮತ್ತು ಪ್ರಯತ್ನವು ಅವಶ್ಯವಾಗಿವೆ. ಅದು, ರಾಜ್ಯ ಸಭಾಗೃಹವನ್ನು ಮತ್ತು ಲೋಕವ್ಯಾಪಕ ಸಾರುವ ಕಾರ್ಯವನ್ನು ಬೆಂಬಲಿಸಲಿಕ್ಕಾಗಿ ಹಣ ಒದಗಿಸುವುದರಲ್ಲಿ ಭಾಗವಹಿಸಲು ಸ್ವತ್ಯಾಗವನ್ನು ಕೇಳಿಕೊಳ್ಳಬಹುದು. ಹಾಗಿದ್ದರೂ, ಲಕ್ಷಾಂತರ ಕ್ರೈಸ್ತರು ಸಾಕ್ಷಿಹೇಳುವಂತೆ, ಇಂತಹ ವಿಷಯಗಳಲ್ಲಿ ಮನಃಪೂರ್ವಕವಾಗಿ ಭಾಗವಹಿಸುವುದು ಸಂತೋಷವನ್ನು ತರುತ್ತದೆ. ಯೇಸು ಹೇಳಿದ್ದು: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.”—ಅ. ಕೃತ್ಯಗಳು 20:35.
ಯೆಹೋವನ ಕೆಲಸವನ್ನು ಬೆಂಬಲಿಸುವುದರ ಬಹುಮಾನಗಳು, ತ್ಯಾಗಗಳನ್ನು ಪ್ರಾಧಾನ್ಯದಲ್ಲಿ ಅತಿಯಾಗಿ ಮೀರಿಸುತ್ತವೆ. ನಾವು ಪ್ರೌಢತೆಯಲ್ಲಿ ಬೆಳೆದಂತೆ, ನಮ್ಮ ಶುಶ್ರೂಷೆಯು ಅಧಿಕ ಫಲಪ್ರದವೂ ಆನಂದದಾಯಕವೂ ಆಗುತ್ತದೆ. ನಿಶ್ಚಯವಾಗಿಯೂ, ಯಾರಿಗಾದರೂ ಬೈಬಲ್ ಸತ್ಯವನ್ನು ಕಲಿಸುವುದರಿಂದ ಮತ್ತು ಆ ವ್ಯಕ್ತಿಯು ಯೆಹೋವನ ಆರಾಧನೆಯನ್ನು ತೆಗೆದುಕೊಳ್ಳುವುದನ್ನು ನೋಡುವುದರಿಂದ ಸಿಗುವ ತೃಪ್ತಿಯನ್ನು ಬೇರೆ ಯಾವ ವಿಷಯವೂ ನೀಡಲು ಸಾಧ್ಯವಿಲ್ಲ. ಹೊಸ ಆರಾಧಕನು ಕುಟುಂಬ ಸದಸ್ಯನಾಗಿದ್ದರೆ, ಬಹುಶಃ “ಯೆಹೋವನ ಶಿಸ್ತಿನಲ್ಲಿ ಮತ್ತು ಮಾನಸಿಕ ಕ್ರಮಗೊಳಿಸುವಿಕೆಯಲ್ಲಿ” ತರಬೇತುಗೊಳಿಸಲ್ಪಟ್ಟಿರುವ ಒಂದು ಮಗುವಾಗಿದ್ದರೆ, ಅದು ವಿಶೇಷ ಆನಂದವನ್ನು ತರುತ್ತದೆ. (ಎಫೆಸ 6:4, NW) ಆತನ “ಜೊತೆಕೆಲಸದವ” ರಾಗಿರಲು ಮಾಡುವ ನಮ್ಮ ಪ್ರಯತ್ನಗಳ ಮೇಲೆ ದೇವರ ಹೇರಳವಾದ ಆಶೀರ್ವಾದಗಳನ್ನು ನಾವು ನೋಡುತ್ತೇವೆ.—1 ಕೊರಿಂಥ 3:9.
ನಂಬಿಗಸ್ತ ಸೇವೆಗಾಗಿ ಇತರ ಬಹುಮಾನಗಳು
ಈ ವಿಷಯಗಳ ವ್ಯವಸ್ಥೆಯ ಇರುವ ತನಕ ನಮಗೆ ಸಮಸ್ಯೆಗಳು ಇರುವವು, ನಿಜ. ಪ್ರಾಯಶಃ, ಪಿಶಾಚನ ಸಮಯವು ಕಡಿಮೆ ಆದಂತೆ ಸಮಸ್ಯೆಗಳು ಹೆಚ್ಚು ತೀಕ್ಷೈವಾಗುವವು. ನಾವು ಹಿಂಸೆಯನ್ನು ಅನುಭವಿಸಬೇಕಾಗಬಹುದು ಯಾ ಶೋಧನೆಯನ್ನು ತಾಳಿಕೊಳ್ಳಬೇಕಾಗಬಹುದು. ಆದರೆ ದೇವರು ನಮ್ಮೊಂದಿಗೆ ಇದ್ದಾನೆಂಬ ಜ್ಞಾನವು ನಮ್ಮನ್ನು ಸಾಂತ್ವನಗೊಳಿಸುತ್ತದೆ ಮತ್ತು ತಾಳಿಕೊಳ್ಳುವಂತೆ ನಮಗೆ ಬಲವನ್ನು ನೀಡುತ್ತದೆ. (1 ಕೊರಿಂಥ 10:13; 2 ತಿಮೊಥೆಯ 3:12) ಕೆಲವು ಜೊತೆ ಕ್ರೈಸ್ತರು ಹಲವಾರು ವರ್ಷಗಳ ಕ್ರೂರ ವರ್ತನೆಯನ್ನು ತಾಳಿಕೊಂಡಿದ್ದಾರೆ, ಆದರೆ ದೇವರಿಗಾಗಿರುವ ಅವರ ಪ್ರೀತಿಯಿಂದ ಅವರು ಬಿಡದೆ ಮುಂದುವರಿದಿದ್ದಾರೆ. ವಿಭಿನ್ನ ರೀತಿಯ ಕಷ್ಟಗಳನ್ನು ಯಶಸ್ವಿಕರವಾಗಿ ತಾಳಿಕೊಳ್ಳುವವರಿಗೆ, ಚಾವಟಿಯಿಂದ ಹೊಡೆದು ತದನಂತರ ಬಿಡುಗಡೆ ಮಾಡಿದ ಅಪೊಸ್ತಲರಂತೆ ಅನಿಸುತ್ತದೆ. ಅಪೊಸ್ತಲ ಕೃತ್ಯಗಳು 5:41 ಹೇಳುವುದು: “ಅಪೊಸ್ತಲರು ತಾವು ಆ ಹೆಸರಿನ ನಿಮಿತ್ತವಾಗಿ ಅವಮಾನಪಡುವದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಿಸುತ್ತಾ ಹಿರೀಸಭೆಯ ಎದುರಿನಿಂದ ಹೊರಟು” ಹೋದರು.
ಈಗಲೂ ಸಹ ತಾಳ್ಮೆಗಾಗಿರುವ ಬಹುಮಾನವು ತ್ಯಾಗವನ್ನು ಪ್ರಾಧಾನ್ಯದಲ್ಲಿ ಅತಿಯಾಗಿ ಮೀರಿಸುತ್ತದೆ. ಆದರೆ, ದೈವಿಕ ಭಕ್ತಿಯು “ಈಗಿನ ಜೀವಿತದ” ಮಾತ್ರವಲ್ಲ “ಬರುವಂತಹ ಜೀವಿತದ” ಕುರಿತೂ “ವಾಗ್ದಾನವನ್ನು ಹೊಂದಿದೆ” ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. (1 ತಿಮೊಥೆಯ 4:8) ತಾಳಿಕೊಳ್ಳುವವನ ಪ್ರತೀಕ್ಷೆಗಳು ಎಷ್ಟು ಮಹತ್ತರವಾದವುಗಳು! ನೀವು ನಂಬಿಗಸ್ತರಾಗಿ ಇರುವುದಾದರೆ, ಈ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಗುರುತಿಸುವ ಮಹಾ ಸಂಕಟವನ್ನು ನೀವು ಪಾರಾಗುವಿರಿ. ಅಥವಾ ಆ ಹೊಸ ಯುಗಾರಂಭದ ಘಟನೆಯ ಮೊದಲು ನೀವು ಮರಣ ಹೊಂದುವುದಾದರೆ, ಹಿಂಬಾಲಿಸಿ ಬರುವ ಹೊಸ ಲೋಕದೊಳಗೆ ನೀವು ಪುನರುತ್ಥಾನಗೊಳಿಸಲ್ಪಡುವಿರಿ. (ದಾನಿಯೇಲ 12:1; ಯೋಹಾನ 11:23-25) “ಯೆಹೋವನ ಸಹಾಯದಿಂದ, ನಾನದನ್ನು ಸಾಧಿಸಿದೆ!”, ಎಂಬುದಾಗಿ ನೀವು ಹೇಳಶಕ್ತರಾದಾಗ, ನಿಮಗಾಗುವ ಅತ್ಯಾನಂದದ ಅನಿಸಿಕೆಯ ಕುರಿತು ಯೋಚಿಸಿರಿ. “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವ” ಆ ಭೂಮಿಯಲ್ಲಿ ಒಂದು ಭಾಗವನ್ನು ಪಡೆಯುವುದು ಎಷ್ಟು ರೋಮಾಂಚಕಾರಿಯಾಗಿರುವುದು.—ಯೆಶಾಯ 11:9.
ಹೌದು, ದೇವರನ್ನು ಸೇವಿಸಲು ಸ್ವಲ್ಪ ಬೆಲೆ ತಗುಲುತ್ತದೆ. ಆದರೆ ಬಹಮಾನಗಳೊಂದಿಗೆ ಹೋಲಿಸುವಾಗ, ಬೆಲೆಯು ಕನಿಷ್ಠವಾಗಿದೆ. (ಫಿಲಿಪ್ಪಿ 3:7, 8) ದೇವರು ತನ್ನ ಸೇವಕರಿಗಾಗಿ ಈಗ ಮಾಡಿರುವ ಮತ್ತು ಭವಿಷ್ಯತ್ತಿನಲ್ಲಿ ಮಾಡಲಿರುವ ಎಲ್ಲಾ ವಿಷಯಗಳ ನೋಟದಲ್ಲಿ, ನಾವು ಕೀರ್ತನೆಗಾರನ ಮಾತುಗಳನ್ನು ಪ್ರತಿಧ್ವನಿಸುತ್ತೇವೆ: “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?”—ಕೀರ್ತನೆ 116:12.