ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 9/15 ಪು. 30-31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1994
  • ಅನುರೂಪ ಮಾಹಿತಿ
  • ಸಾಲ! ದೊಳಗೆ ಹೊರಗೆ ಬರುವಿಕೆ
    ಎಚ್ಚರ!—1991
  • ದುಡ್ಡಿನ ಸಮಸ್ಯೆ ಮತ್ತು ಸಾಲಬಾಧೆಗೆ ಪರಿಹಾರ
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಸಾಲಕ್ಕೆ ಈಡಾಗುವುದು ಪ್ರಯೋಜನಕಾರಿಯಾಗಿದೆಯೋ?
    ಎಚ್ಚರ!—1995
  • ಸ್ನೇಹಿತರ ನಡುವೆ ಲೇವಾದೇವಿ
    ಎಚ್ಚರ!—1999
ಇನ್ನಷ್ಟು
ಕಾವಲಿನಬುರುಜು—1994
w94 9/15 ಪು. 30-31

ವಾಚಕರಿಂದ ಪ್ರಶ್ನೆಗಳು

ಈ ಕಠಿನ ಆರ್ಥಿಕ ಸಮಯಗಳಲ್ಲಿ, ಹೆಚ್ಚು ಹೆಚ್ಚಾಗಿ ವ್ಯಕ್ತಿಗಳು ಮತ್ತು ಕಂಪನಿಗಳು ದಿವಾಳಿತನವನ್ನು ಆಶ್ರಯಿಸುತ್ತಿದ್ದಾರೆ. ದಿವಾಳಿತನಕ್ಕಾಗಿ ಒಬ್ಬ ಕ್ರೈಸ್ತನು ಅರ್ಜಿ ಹಾಕುವುದು ಶಾಸ್ತ್ರೀಯವಾಗಿ ಯೋಗ್ಯವಾಗಿದೆಯೊ?

ನಿಶ್ಚಿತವಾಗಿ ಆಧುನಿಕವಾಗಿರಬಹುದಾದ ವಿಷಯಗಳ ಮೇಲೆ ದೇವರ ವಾಕ್ಯವು ಹೇಗೆ ಪ್ರಾಯೋಗಿಕ ಮಾರ್ಗದರ್ಶನವನ್ನು ನೀಡುತ್ತದೆ ಎಂಬ ಸೂಕ್ತವಾದ ದೃಷ್ಟಾಂತವನ್ನು, ಈ ಪ್ರಶ್ನೆಗಿರುವ ಉತ್ತರವು ಒದಗಿಸುತ್ತದೆ. ಅನೇಕ ದೇಶಗಳಲ್ಲಿ ದಿವಾಳಿತನವನ್ನು ಕ್ರಮಪಡಿಸುವ ನಿಯಮಗಳಿವೆ. ನಿಯಮಗಳು ದೇಶದಿಂದ ದೇಶಕ್ಕೆ ಭಿನ್ನವಾಗಿವೆ, ಮತ್ತು ಈ ವಿಷಯದ ಕುರಿತು ನ್ಯಾಯಬದ್ಧವಾದ ಸಲಹೆಯನ್ನು ನೀಡುವುದು ಕ್ರೈಸ್ತ ಸಭೆಯ ಜವಾಬ್ದಾರಿಯಲ್ಲ. ಆದರೆ ದಿವಾಳಿತನದ ನ್ಯಾಯಬದ್ಧ ಏರ್ಪಾಡಿನ ಸಾರಾಂಶವನ್ನು ನಾವು ಪಡೆಯೋಣ.

ಸರಕಾರಗಳು ವ್ಯಕ್ತಿಗಳಿಗೆ ಮತ್ತು ವ್ಯಾಪಾರಗಳಿಗೆ ದಿವಾಳಿತನವನ್ನು ಘೋಷಿಸುವಂತೆ ಅನುಮತಿಸುವ ಒಂದು ಕಾರಣವು ಏನೆಂದರೆ, ಹಣವನ್ನು ನೀಡುವವರಿಗೆ ಯಾ ಸಾಲವನ್ನು ಕೊಡುವವರಿಗೆ (ಸಾಲಿಗರು) ಅದು, ಹಣವನ್ನು ಪಡೆದುಕೊಂಡ ಯಾ ಸಾಲಗಳನ್ನು ಸ್ವೀಕರಿಸಿದ (ಸಾಲಗಾರರು) ಆದರೆ ಸಲ್ಲಿಸಬೇಕಾಗಿರುವುದನ್ನು ಕೊಡದೆ ಇರುವ ಜನರಿಂದ ಯಾ ವ್ಯಾಪಾರಗಳಿಂದ ಸ್ವಲ್ಪ ಮಟ್ಟದ ಸಂರಕ್ಷಣೆಯನ್ನು ಅದು ನೀಡುತ್ತದೆ. ಸಾಲಿಗರಿಗೆ ಉಳಿದಿರುವ ಒಂದೇ ಮಾರ್ಗವು, ಸಾಲಗಾರನನ್ನು ದಿವಾಳಿ ಸಾಲಗಾರನೆಂದು ಘೋಷಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದೇ ಆಗಿದೆಯೆಂದು ತೋರಬಹುದು. ಇದರಿಂದ ಸಾಲಗಾರನ ಸ್ವತ್ತುಗಳು, ಅನಂತರ ಸಾಲದ ಆಂಶಿಕ ಸಂದಾಯದಂತೆ ಹಂಚಲ್ಪಡಸಾಧ್ಯವಿದೆ.

ದಿವಾಳಿತನವು ಕೆಲಸಮಾಡುವ ಇನ್ನೊಂದು ವಿಧವು, ಅದು ತಮ್ಮ ಸಾಲಿಗರನ್ನು ಪ್ರಾಮಾಣಿಕವಾಗಿ ತೃಪ್ತಿಪಡಿಸಲಾಗದ ಸಾಲಗಾರರಿಗೆ ಒಂದು ರಕ್ಷಣೆಯಂತೆ ಇದೆ. ಸಾಲಗಾರನು ದಿವಾಳಿತನಕ್ಕಾಗಿ ಅರ್ಜಿ ಸಲ್ಲಿಸುವಂತೆ ಅನುಮತಿಸಲ್ಪಡಬಹುದು, ಇದರಿಂದ ಅವನ ಸಾಲಿಗರು ಅವನ ಸ್ವತ್ತುಗಳಲ್ಲಿ ಸ್ವಲ್ಪವನ್ನು ತೆಗೆದುಕೊಳ್ಳಬಲ್ಲರು. ಆದರೂ, ತನ್ನ ಮನೆಯನ್ನು ಯಾ ನಿರ್ದಿಷ್ಟವಾದ ಕನಿಷ್ಠ ಸ್ವತ್ತುಗಳನ್ನು ಉಳಿಸಿಕೊಳ್ಳುವಂತೆ ಮತ್ತು ಹಿಂದಿನ ಸಾಲಿಗರ ಮೂಲಕ ಸ್ವಾಧೀನದ ಯಾ ನಷ್ಟದ ಮುಂದುವರಿದ ಬೆದರಿಕೆಯಿಂದ ಮುಕ್ತವಾಗಿ ಜೀವನವನ್ನು ಮುಂದುವರಿಸುವಂತೆ, ನಿಯಮವು ಅವನನ್ನು ಅನುಮತಿಸಬಹುದು.

ಈ ನಿಯಮಗಳು, ಹಣಕಾಸಿನ ಯಾ ವ್ಯಾಪಾರ ವ್ಯವಹಾರದಲ್ಲಿರುವ ಎರಡೂ ಪಕ್ಷಗಳಿಗೆ ಸ್ವಲ್ಪ ಮಟ್ಟಿಗೆ ರಕ್ಷಣೆಯನ್ನು ನೀಡುವ ಉದ್ದೇಶವನ್ನು ಹೊಂದಿವೆ ಎಂಬುದು ಸ್ಪಷ್ಟವಾಗಿಗಿದೆ. ಆದರೆ, ಬೈಬಲ್‌ ಯಾವ ಸಹಾಯಕಾರಿ ಸಲಹೆಯನ್ನು ನೀಡುತ್ತದೆ ಎಂಬುದನ್ನು ನಾವು ಗಮನಿಸೋಣ.

ಬೈಬಲನ್ನು ಒಬ್ಬನು ಆದ್ಯಂತವಾಗಿ ಓದುವಾಗ ಅದು ಸಾಲ ಮಾಡುವುದನ್ನು ಉತ್ತೇಜಿಸುವುದಿಲ್ಲವೆಂದು ತಿಳಿಯದೆ ಇರುವುದು ಕಷ್ಟಕರ. ಜ್ಞಾನೋಕ್ತಿ 22:7 ರಂತಹ ಎಚ್ಚರಿಕೆಗಳನ್ನು ನಾವು ಕಂಡುಕೊಳ್ಳುತ್ತೇವೆ: “ಬಲ್ಲಿದನು ಬಡವನಿಗೆ ಒಡೆಯ; ಸಾಲಗಾರನು ಸಾಲಕೊಟ್ಟವನಿಗೆ ಸೇವಕ.”

ಬಹು ದೊಡ್ಡ ಸಾಲವಿದ್ದ ಒಬ್ಬ ಸೇವಕನನ್ನು ಒಳಗೊಂಡಿರುವ ಮತ್ತಾಯ 18:23-34 ರಲ್ಲಿರುವ ಯೇಸುವಿನ ದೃಷ್ಟಾಂತವನ್ನು ಕೂಡ ಜ್ಞಾಪಿಸಿಕೊಳ್ಳಿರಿ. “ಅವನ ಒಡೆಯನು ಅವನನ್ನೂ ಅವನ ಹೆಂಡತಿಮಕ್ಕಳನ್ನೂ ಅವನ ಬದುಕೆಲ್ಲವನ್ನೂ ಮಾರಿ ಅದನ್ನು ತೀರಿಸಬೇಕೆಂದು ಅಪ್ಪಣೆಮಾಡಿದನು,” ಆದರೆ ಆಮೇಲೆ ಒಬ್ಬ ಅರಸನಾಗಿದ್ದ ಯಜಮಾನನು ಮೃದುವಾದನು ಮತ್ತು ಕರುಣೆಯನ್ನು ತೋರಿಸಿದನು. ಆ ಸೇವಕನು ತದನಂತರ ಕರುಣಾರಹಿತನಾಗಿ ಪರಿಣಮಿಸಿದಾಗ, ‘ತನಗೆ ಕೊಡಬೇಕಾದ ಎಲ್ಲವನ್ನು ತೀರಿಸುವ ತನಕ ಪೀಡಿಸುವವರ ಕೈಗೆ ಒಪ್ಪಿಸಬೇಕೆಂದು’ ರಾಜನು ಆಜ್ಞಾಪಿಸಿದನು. ನಿಸ್ಸಂಶಯವಾಗಿಯೂ, ಹಣವನ್ನು ಸಾಲವಾಗಿ ತೆಗೆದುಕೊಳ್ಳುವುದನ್ನು ತೊರೆಯುವುದೇ, ಅತ್ಯುತ್ತಮ ಮಾರ್ಗವೂ ಶಿಫಾರಸ್ಸು ಮಾಡಲಾದ ಮಾರ್ಗವೂ ಆಗಿದೆ.

ಪ್ರಾಚೀನ ಇಸ್ರಾಯೇಲಿನಲ್ಲಿದ್ದ ದೇವರ ಸೇವಕರಿಗೆ ವ್ಯಾಪಾರ ವ್ಯವಹಾರಗಳು ಇದ್ದವು, ಮತ್ತು ಕೆಲವೊಮ್ಮೆ ಹಣ ತೆಗೆದುಕೊಳ್ಳುವುದು ಮತ್ತು ನೀಡುವುದು ಸಂಭವಿಸಿತು. ಅವರು ಏನನ್ನು ಮಾಡುವಂತೆ ಯೆಹೋವನು ಉಪದೇಶಿಸಿದನು? ವ್ಯಕ್ತಿಯೊಬ್ಬನು ಒಂದು ವ್ಯಾಪಾರದೊಳಗೆ ಪ್ರವೇಶಿಸಲು ಯಾ ಅದನ್ನು ವಿಸ್ತರಿಸಲು ಹಣವನ್ನು ಸಾಲವಾಗಿ ತೆಗೆದುಕೊಳ್ಳಲು ಬಯಸುವಲ್ಲಿ, ಹೀಬ್ರು ವ್ಯಕ್ತಿಯು ಬಡ್ಡಿಯನ್ನು ವಿಧಿಸುವುದು, ನ್ಯಾಯಬದ್ಧವೂ ಸಾಮಾನ್ಯವೂ ಆಗಿತ್ತು. ಹಾಗಿದ್ದರೂ, ಬಡತನದಲ್ಲಿರುವ ಒಬ್ಬ ಇಸ್ರಾಯೇಲ್ಯನಿಗೆ ಸಾಲವನ್ನು ನೀಡುವಾಗ, ನಿಸ್ವಾರ್ಥಿಗಳಾಗಿರಬೇಕೆಂದು ದೇವರು ತನ್ನ ಜನರನ್ನು ಪ್ರೋತ್ಸಾಹಿಸಿದನು; ಬಡ್ಡಿಯನ್ನು ವಿಧಿಸುವ ಮೂಲಕ ಒಂದು ಪ್ರತಿಕೂಲ ಸನ್ನಿವೇಶದಿಂದ ಅವರು ಲಾಭವನ್ನು ಪಡೆಯಬಾರದಿತ್ತು. (ವಿಮೋಚನಕಾಂಡ 22:25) ಧರ್ಮೋಪದೇಶಕಾಂಡ 15:7, 8 ಹೇಳುವುದು: “ಯಾವ ಊರಲ್ಲಿಯಾದರೂ ಸ್ವದೇಶದವನಾದ ಬಡವನು ಇದ್ದರೆ ನೀವು ಆ ಬಡ ಸಹೋದರನಿಗೆ ಮನಸ್ಸನ್ನು ಕಠಿಣಮಾಡಿಕೊಂಡು ಅವನಿಗೆ ಸಹಾಯಮಾಡದೆ ಇರಬಾರದು. ನೀವು ಕೈದೆರೆದು ಅವನ ಅವಸರಕ್ಕೆ ಬೇಕಾದದ್ದನ್ನು ಕೊಟ್ಟು ಸಹಾಯ ಮಾಡಬೇಕು.”

ಸಾಲಿಗರು ಒಬ್ಬ ಸಾಲಗಾರನಿಂದ—ಕುಟುಂಬದ ಸಾಣಿಕಲ್ಲು ಯಾ ರಾತ್ರಿಯಲ್ಲಿ ವ್ಯಕ್ತಿಯನ್ನು ಬೆಚ್ಚಗೆಡಲು ಬೇಕಾದ ಒಂದು ವಸ್ತ್ರವನ್ನು—ಇಂತಹ ಜೀವಿತದ ಆವಶ್ಯಕತೆಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಿರಲಿಲ್ಲವೆಂದು ನಿಗದಿಮಾಡಿದ ಕಟ್ಟಳೆಗಳಲ್ಲಿ, ತದ್ರೀತಿಯ ದಯೆ ಯಾ ಪರಿಗಣನೆ ಪ್ರತಿಬಿಂಬಿಸಲಾಗಿತ್ತು.—ಧರ್ಮೋಪದೇಶಕಾಂಡ 24:6, 10-13; ಯೆಹೆಜ್ಕೇಲ 18:5-9.

ಅವರ ಮಹಾ ನ್ಯಾಯಧೀಶ ಹಾಗೂ ಧರ್ಮವಿಧಾಯಕನಿಂದ ಬಂದ ಈ ಪ್ರೀತಿಪರ ನಿಯಮಗಳ ಆತ್ಮವನ್ನು ಎಲ್ಲ ಯೆಹೂದ್ಯರು ಸ್ವೀಕರಿಸಲಿಲ್ಲ ಮತ್ತು ಅನ್ವಯಿಸಲಿಲ್ಲ ಎಂಬುದು ಸ್ಪಷ್ಟ. (ಯೆಶಾಯ 33:22) ಕೆಲವು ದುರಾಶೆಯ ಯೆಹೂದ್ಯರು ತಮ್ಮ ಸಹೋದರರ ಕಡೆಗೆ ಬಹಳ ಕಠೋರವಾಗಿ ವರ್ತಿಸಿದರು. ಇಂದು ಕೂಡ, ಕೆಲವು ಸಾಲಿಗರು, ಯಾವುದೋ ಮುಂಗಾಣದ ಘಟನೆಯನ್ನು ಅವನು ಅನುಭವಿಸಿದ್ದರಿಂದ, ಆ ಸಮಯದಲ್ಲಿ ಸಂದಾಯವನ್ನು ಮಾಡಲು ಅಶಕ್ತನಾಗಿದ್ದ ಒಬ್ಬ ಪ್ರಾಮಾಣಿಕ ಕ್ರೈಸ್ತನ ಕಡೆಗೂ, ಕಠೋರವಾಗಿಯೂ ತಮ್ಮ ಬೇಡಿಕೆಗಳಲ್ಲಿ ಅವಿವೇಚನೆಯುಳ್ಳವರಾಗಿಯೂ ಇರಬಹುದು. (ಪ್ರಸಂಗಿ 9:11) ತನ್ನನ್ನು ರಕ್ಷಿಸಿಕೊಳ್ಳಬೇಕೆಂದು ಭಾವಿಸಿದ ಒಂದು ಸನ್ನಿವೇಶದೊಳಗೆ ಇಂತಹ ಒಬ್ಬ ಸಾಲಗಾರನನ್ನು ಲೌಕಿಕ ಸಾಲಿಗರು, ಅವರ ಬಗ್ಗದ, ತಗಾದೆ ಮಾಡುವ ಒತ್ತಡದಿಂದ ನಿರ್ಬಂಧಿಸಬಹುದು. ಹೇಗೆ? ಕೆಲವು ವಿದ್ಯಮಾನಗಳಲ್ಲಿ ಸಾಲಿಗರು ಗುರುತಿಸುವ ಏಕೈಕ ವಿಷಯವು, ದಿವಾಳಿತನದ ನ್ಯಾಯಬದ್ಧ ಹೆಜ್ಜೆಯಾಗಿರುತ್ತದೆ. ಆದುದರಿಂದ, ತನ್ನ ಸಾಲಗಳ ವಿಷಯದಲ್ಲಿ ದುರಾಶೆ ಉಳ್ಳವನು ಯಾ ನಿರ್ಲಕ್ಷತೆಯುಳ್ಳವನು ಆಗಿರದಿದ್ದ ಒಬ್ಬ ಕ್ರೈಸ್ತನು, ದಿವಾಳಿತನಕ್ಕಾಗಿ ಅರ್ಜಿ ಸಲ್ಲಿಸುವುದನ್ನು ಆಶ್ರಯಿಸಬಹುದು.

ವಿಷಯದ ಇನ್ನೊಂದು ಪಕ್ಕದ ಕುರಿತೂ ನಾವು ಎಚ್ಚರವುಳ್ಳವರಾಗಿರಬೇಕು. ತಾನು ಏನನ್ನು ಯಾ ಎಷ್ಟನ್ನು ವ್ಯಯಿಸಿದೆನು ಎಂಬ ವಿಷಯದಲ್ಲಿ ಸ್ವನಿಯಂತ್ರಣವನ್ನು ಬಳಸದೆ ಇದ್ದ ಸರಳ ಕಾರಣದಿಂದ ಯಾ ತನ್ನ ವ್ಯಾಪಾರದಲ್ಲಿ ಯುಕ್ತವಾದ ದೂರ ದೃಷ್ಟಿಯನ್ನು ಉಪಯೋಗಿಸದೆ ಇದರ್ದಿಂದ, ಒಬ್ಬ ಕ್ರೈಸ್ತನು ಸಾಲದಲ್ಲಿರಬಹುದು. ಸಾಲದ ಕುರಿತು ಅವನು ಕೇವಲ ಅಚಿಂತಿತನಾಗಿದ್ದು, ಹೀಗೆ ಇತರರನ್ನು ತನ್ನ ನ್ಯೂನ ನಿರ್ಣಯದಿಂದ ನೋಯಿಸುತ್ತಾ, ದಿವಾಳಿತನದ ಮುಖಾಂತರ ಪರಿಹಾರವನ್ನು ಬೇಗನೆ ಹುಡುಕಬೇಕೊ? ಬೈಬಲ್‌ ಹಣಕಾಸಿನ ಅಂತಹ ಬೇಜವಾಬ್ದಾರಿಯನ್ನು ಮೆಚ್ಚುವುದಿಲ್ಲ. ಅವನ ಹೌದು ಹೌದೆಂಬ ಅರ್ಥವನ್ನು ಕೊಡುವಂತೆ ಅದು ದೇವರ ಸೇವಕನನ್ನು ಪ್ರೇರೇಪಿಸುತ್ತದೆ. (ಮತ್ತಾಯ 5:37) ಒಂದು ಬುರುಜನ್ನು ಕಟ್ಟಲು ತೊಡಗುವ ಮೊದಲು ವೆಚ್ಚವನ್ನು ಲೆಕ್ಕಿಸುವುದರ ಕುರಿತಾದ ಯೇಸುವಿನ ಹೇಳಿಕೆಗಳನ್ನೂ ಜ್ಞಾಪಿಸಿಕೊಳ್ಳಿರಿ. (ಲೂಕ 14:28-30) ಅದರೊಂದಿಗೆ ಹೊಂದಾಣಿಕೆಯಲ್ಲಿ, ಒಬ್ಬ ಕ್ರೈಸ್ತನು ಹಣಕಾಸಿನ ಒಂದು ಸಾಲವನ್ನು ತೆಗೆದುಕೊಳ್ಳುವ ಮುಂಚೆ, ಆಗಬಲ್ಲ ಅಹಿತವಾದ ಪರಿಣಾಮಗಳನ್ನು ಆಲೋಚನಾಸಕ್ತನಾಗಿ ಪರಿಗಣಿಸಬೇಕು. ಒಮ್ಮೆ ಅವನು ಒಂದು ಸಾಲವನ್ನು ಸ್ವೀಕರಿಸುವಲ್ಲಿ, ಹಣವನ್ನು ತಾನು ಸಲ್ಲಿಸಬೇಕಾದ ವ್ಯಕ್ತಿಗಳಿಗೆ ಯಾ ಕಂಪನಿಗಳಿಗೆ ಹಿಂದಿರುಗಿ ಕೊಡುವ ತನ್ನ ಜವಾಬ್ದಾರಿಯನ್ನು ಅವನು ಅರ್ಥಮಾಡಿಕೊಳ್ಳಬೇಕು. ಇತರ ಅನೇಕರು ಒಬ್ಬ ಕ್ರೈಸ್ತನನ್ನು ಬೇಜವಾಬ್ದಾರನು ಯಾ ಅವಿಶ್ವಾಸಪಾತ್ರನೆಂದು ಗ್ರಹಿಸುವಲ್ಲಿ, ಅವನು ಶ್ರಮಿಸಿದ್ದಂತಹ ಒಳ್ಳೆಯ ಸತ್ಕೀರ್ತಿಯನ್ನು ಅವನು ಕೆಡಿಸಿಕೊಂಡಿರಬಹುದು ಮತ್ತು ಹೀಗೆ ಇನ್ನು ಮುಂದೆ ಹೊರಗಿನವರಿಂದ ಒಳ್ಳೆಯ ಸಾಕ್ಷ್ಯವನ್ನು ಹೊಂದದೆ ಇರಬಹುದು.—1 ತಿಮೊಥೆಯ 3:2, 7.

ಯೆಹೋವನು ಯಾವ ರೀತಿಯ ವ್ಯಕ್ತಿಯನ್ನು ಸ್ವಾಗತಿಸುತ್ತಾನೆ ಎಂಬುದರ ಕುರಿತು ಕೀರ್ತನೆ 15:4 ನಮಗೆ ಏನು ಹೇಳುತ್ತದೆ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ನಾವು ಓದುವುದು: “ಅವನು [ದೇವರು ಮೆಚ್ಚುವಾತನು] ನಷ್ಟವಾದರೂ ಪ್ರಮಾಣತಪ್ಪದವನೂ ಆಗಿರಬೇಕು.” ಹೌದು, ಕ್ರೈಸ್ತರು ತಮ್ಮನ್ನು ಇತರರು ಹೇಗೆ ನೋಡಿಕೊಳ್ಳಬೇಕೆಂದು ಬಯಸುತ್ತಾರೊ ಹಾಗೆಯೇ ತಮ್ಮ ಸಾಲಿಗರನ್ನು ನೋಡಿಕೊಳ್ಳಬೇಕೆಂದು ದೇವರು ಅಪೇಕ್ಷಿಸುತ್ತಾನೆ.—ಮತ್ತಾಯ 7:12.

ಹಾಗಾದರೆ, ಸಾರಾಂಶದಲ್ಲಿ, ಒಂದು ವಿಪರೀತವಾದ ಸನ್ನಿವೇಶದಲ್ಲಿ ಕ್ರೈಸ್ತನೊಬ್ಬನು ಕೈಸರನ ದಿವಾಳಿತನದ ನಿಯಮಗಳ ಮೂಲಕ ನೀಡಲ್ಪಟ್ಟಿರುವ ರಕ್ಷಣೆಯನ್ನು ತನಗಾಗಿ ದೊರಕಿಸಿಕೊಳ್ಳಬಹುದಾದ ಸಾಧ್ಯತೆಯನ್ನು ಬೈಬಲ್‌ ತಳ್ಳಿಹಾಕುವುದಿಲ್ಲ. ಆದರೂ, ಕ್ರೈಸ್ತರು ಪ್ರಾಮಾಣಿಕತೆ ಹಾಗೂ ವಿಶ್ವಾಸಾರ್ಹತೆಯ ವಿಷಯದಲ್ಲಿ ಅಸಾಧಾರಣವಾಗಿರಬೇಕು. ಹೀಗೆ, ತಮ್ಮ ಹಣಕಾಸಿನ ಹಂಗುಗಳನ್ನು ಪೂರೈಸುವ ತಮ್ಮ ಯಥಾರ್ಥವಾದ ಬಯಕೆಯಲ್ಲಿ ಅವರು ಆದರ್ಶಪ್ರಾಯರಾಗಿರಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ