ಸಾಲ! ದೊಳಗೆ ಹೊರಗೆ ಬರುವಿಕೆ
ಲೊಯಿಸ್ ಮತ್ತು ರಿಕ್ ಮದುವೆಯಾಗಿ ಒಂದು ವರ್ಷವಾಗಿದೆ. ಅನೇಕ ಯುವ ದಂಪತಿಗಳೋಪಾದಿ, ಒಮ್ಮೆಯೇ ಎಲ್ಲವೂ ಅವರ ಹತ್ತಿರ ಇರಬೇಕೆಂದು ಅವರು ಬಯಸಿದರು—ಮತ್ತು ಅದು ಬಹಳ ಸುಲಭ! ಪ್ರತಿ ತಿಂಗಳು ಟೀವೀಗೆ ತೆರಬೇಕಾದದ್ದು ಸುಮಾರು ರೂ.900, ಮತ್ತು ಅದಕ್ಕೆ ಒಂದು ವಿಸಿಅರ್ ಕೂಡಿಸಿದರೆ ಸುಮಾರು ರೂ.1400, ಅಷ್ಟೇ. ಹೊಸ ಪೀಠೋಪಕರಣಗಳು ಸ್ವಲ್ಪ ಕಷ್ಟ—ಪ್ರತಿ ತಿಂಗಳು ಸುಮಾರು ರೂ.5200 ತೆರಬೇಕಿತ್ತು. ವಾಸ್ತವದಲ್ಲಿ, ಇದರಲ್ಲಿ ಇತರ ವಸ್ತ್ರ ಅಲಂಕಾರ ಮತ್ತು ಹಾಸುಕಂಬಳಿ ಸೇರಿರಲಿಲ್ಲ, ಇದರಿಂದ ತೆರಬೇಕಾದ ಹಣ ಸುಮಾರು ರೂ.800 ಇನ್ನಷ್ಟು ಹೆಚ್ಚಿಸಿತು. ಆದರೆ ಹಣ ಸಹಾಯ ಮಾಡುವ ಕಂಪೆನಿಯು ಬಹಳಷ್ಟು ಸಹಕಾರ ತೋರಿಸಿತ್ತು.
ಇತರ ಸಾಮಗ್ರಿಗಳು ಕೂಡಾ ಸ್ವಲ್ಪ ಸುಲಭವಾಗಿಯೇ ಬಂದವು, ಯಾಕಂದರೆ ಅಂಗಡಿಯು ಉದ್ದರಿ (ಕ್ರೆಡಿಟ್) ಕಾರ್ಡುಗಳನ್ನು ಸ್ವೀಕರಿಸಿತು. ಆ ರೀತಿಯಲ್ಲಿ ಮಾಸಿಕ ತೆರುವಿಕೆಯು ಸ್ವಯಂ ಆಗಿ ಮಾಡಲ್ಪಡುತ್ತಿದ್ದವು ಮತ್ತು ಇದರಿಂದ ಅವರು ಸಾಲಕ್ಕಾಗಿ ಅರ್ಜಿ ಹಾಕಲಿಲ್ಲ. ಒಂದು ವೇಳೆ ರಿಕ್ ಯೋಜಿಸಿದಂತೆ ಅವನ ಸ್ಫೋರ್ಟ್ ಕಾರಿನ ಹಣವನ್ನು ತೆರುವುದು ಅವನ ಮದುವೆಯ ಮೊದಲೇ ಮುಗಿಸಿದ್ದರೆ, ಇದು ಸುಲಭವಾಗುತ್ತಿತ್ತು. ಆದರೆ ಅದನ್ನು ಅವನು ನಿಭಾಯಿಸಲು ಹೇಗೋ ಶಕ್ತನಾಗಲಿಲ್ಲ.
ರಿಕ್ ಅದನ್ನು ಈ ರೀತಿ ಹೇಳುತ್ತಾನೆ: “ಮದುವೆಯು ಒಂದು ಮಹತ್ತಾದ ಸಂಗತಿ ಎಂದು ನಾನು ಎಣಿಸಿದೆ, ಆದರೆ ನಮಗಿರುವ ಸಾಲದ ಕುರಿತು ನಾನು ಎಷ್ಟು ಚಿಂತೆ ಮಾಡುತ್ತೇನೆಂದರೆ ಅದೇನೂ ಕೇವಲ ಹಾಸ್ಯದ ಸಂಗತಿಯಲ್ಲ.” ಲೊಯಿಸ್ ಸಮ್ಮತಿಸುತ್ತಾ, ಕೂಡಿಸಿದ್ದು: “ಸಾಲದ ಒಳಗೆ ಬರುವುದು ಬಹಳ ಸುಲಭವೇ. ಆದರೆ ನಾವು ಎಂದಾದರೂ, ಹೌದು ಎಂದಾದರೂ ಸಾಲದ ಹೊರಗೆ ಬರುತ್ತೇವೆಯೇ?”
ಈ ಗೋಳುಕರೆಯ ಪ್ರಶ್ನೆಯ ಉಭಯ ಸಂಕಟವು ಲೋಕದ ಹೆಚ್ಚಿನ ದೇಶಗಳಲ್ಲಿರುವ ಲಕ್ಷಗಟ್ಟಲೆ ಕುಟುಂಬಗಳಿಂದ ಎದುರಿಸಲ್ಪಟ್ಟಿದೆ. ಒಂದು ದೊಡ್ಡ ಮೊತ್ತದ, ಕೆಲವೊಮ್ಮೆ ತಮ್ಮಿಂದ ನಿಭಾಯಿಸಲು ಅಸಾಧ್ಯವಾದ ಸಾಲದ ಹೊರೆಯನ್ನು ಹೊತ್ತುಕೊಳ್ಳದೇ ತಮ್ಮ ಜೀವಿತಗಳ ನಿರ್ವಹಣೆ ಮಾಡುವ ವ್ಯಕ್ತಿಗಳು ಖಂಡಿತವಾಗಿಯೂ ವಿರಳವೇ ಸೈ.
ಸಾಲದ ಒಳಗೆ ಬರುವುದು
ಒಬ್ಬನು ಸಾಲದೊಳಗೆ ಬರುವುದಾದರೂ ಹೇಗೆ? ಸರಳವೇ! ಅದು ಜೀವನದ ಮಾರ್ಗವಾಗಿರುತ್ತದೆ. ಸರಕಾರಗಳು, ಬಹು—ರಾಷ್ಟ್ರೀಯ ಸಂಸ್ಥೆಗಳು, ಚಿಕ್ಕ ಉದ್ದಿಮೆಗಳು, ಕುಟುಂಬಗಳು ಮತ್ತು ವ್ಯಕ್ತಿಗಳು ಸಾಲ ಪಡೆಯುವುದು ಒಂದು ಸಾಮಾನ್ಯ ಸಂಗತಿಯೆಂದು ಎಣಿಸುತ್ತಾರೆ.
ಪ್ರತಿಷ್ಠೆಯು ಕೆಲವೊಮ್ಮೆ ಸಾಲವನ್ನು ಉಂಟು ಮಾಡುತ್ತದೆ. ಸಾಲವು ಬಿಗುಪುತನಕ್ಕೆ ನಡಿಸುತ್ತದೆ. ಬಿಗುಪುತನವು ಇನ್ನಿತರ ಕಷ್ಟಗಳಿಗೆ ನಡಿಸುತ್ತದೆ. ಆದುದರಿಂದ ಸಾಲಾಭಿಮುಖವಾಗಿರುವ ಲೋಕವೊಂದರಲ್ಲಿ ಒಬ್ಬನು ಹೇಗೆ ಜೀವಿಸ ಸಾಧ್ಯವಿದೆ, ಅದರೂ ಅದೇ ಸಮಯದಲ್ಲಿ ಸಾಲದಿಂದ ಹೊರಗೆ ಹೇಗೆ ಉಳಿಯ ಬಹುದು?
ಪ್ರಾಯಶಃ ಕಲಿಯಬೇಕಾದ ಒಂದು ಸರಳ ಮೊದಲ ಪಾಠ ಏನಂದರೆ ಮಾರಾಟದ ನಿರೋಧವೇ. ಸಾಲಗಳನ್ನು ಕೊಡುವ ಭಿತ್ತಿಪತ್ರಗಳಿಂದ ಧಾಳಿಗೊಳಗಾಗದೇ ಒಬ್ಬನು ಹೆಚ್ಚಿನ ಹಣ ಸಹಾಯ ಮಾಡುವ ಸಂಸ್ಥೆಗಳ ಬಾಗಲನ್ನು ಪ್ರವೇಶಿಸಲಾರನು. ಉದ್ದರಿ ಕಾರ್ಡುಗಳು ಬಹಳ ಸುಲಭವಾಗಿ ದೊರಕುತ್ತವೆ. ಸಾಲ ಕೊಡುವ ಸುಲಿಗೆಗಾರರಿಂದ ಹಿಡಿದು ಆದರಣೀಯವಾದ ಬ್ಯಾಂಕ್ ಸಂಸ್ಥೆಗಳು ಸಹಿತವಾಗಿ ಹಣವನ್ನು ಮಾರುವ ವ್ಯವಹಾರಗಳಲ್ಲಿ ತೊಡಗಿರುವ ಯಶಸ್ವೀಯಾದ, ಆಕ್ರಮಣಕಾರೀ ಲಕ್ಷಾಂತರ ವ್ಯಕ್ತಿಗಳಿದ್ದಾರೆ. ಅವರಿಗೆ ಹಣ ಒಂದು ವಸ್ತು—ಕಿರಾಣಿ ಸಾಮಾನಿನಂತೆ—ಮತ್ತು ಅವರ ಕೆಲಸ, ಅದನ್ನವರು ನಿಮಗೆ ಮಾರುವುದು. ಬೇಡ ಎಂದು ಹೇಳಲು ಕಲಿಯಿರಿ.
ಸಾಲದ ವ್ಯವಸ್ಥಾಪನೆ
ಆದಾಯಕ್ಕನುಸಾರ ಸ್ವೀಕಾರ್ಹವಾದ ಸಾಲದ ಅನುಪಾತವನ್ನು ವಿವರಿಸುವ ಅನೇಕ ಸಿದ್ಧಾಂತಗಳು ಇವೆ. ಆದರೆ ಅವುಗಳು ಎಷ್ಟು ಭಿನ್ನವಾಗಿರುತ್ತವೆಂದರೆ, ಅನೇಕವುಗಳಿಗೆ ಇರುವ ಅರ್ಥ ಕೊಂಚವೇ. ಉದಾಹರಣೆಗೆ, ಕೆಲವು ಆರ್ಥಿಕ ತಜ್ಞರು, ಕುಟುಂಬವೊಂದು ತನ್ನ ಎಲ್ಲಾ ಆದಾಯದ 30 ಪ್ರತಿಶತವನ್ನು ತೃಪ್ತಿಕರವಾಗಿ ಆಶ್ರಯಕ್ಕಾಗಿ ಮುಡುಪಾಗಿಡ ಬಹುದು ಎಂದು ಭಾವಿಸುತ್ತಾರೆ. ಇದು ಅಡವಿನ ಸಾಲ ಇಲ್ಲವೇ ಬಾಡಿಗೆ ತೆರಲು ಇರುತ್ತದೆ. ಆದಾಗ್ಯೂ, ಈ ಸಿದ್ಧಾಂತ ಕಡು ಬಡವರಾಗಿರುವವರಿಗೆ ಕಾರ್ಯಸಾಧಕವಾಗಿಲಿಕ್ಕಿಲ್ಲ. ಸಾಲ ನಿಯಂತ್ರಣದ ಸಮಗ್ರ ಸಮಸ್ಯೆಯನ್ನು ವ್ಯಕ್ತಿಗತ ನೆಲೆಯಲ್ಲಿ ಪರಿಗಣಿಸುವುದು ಉತ್ತಮ.
ಕೆಲವೊಂದು ಸಾಲಗಳು ಸ್ವೀಕಾರ್ಹವಾಗಿರಬಹುದು, ಆದರೆ ಇದು ವಿವೇಚನೆ ಮತ್ತು ಜಾಗರೂಕತೆಯ ವ್ಯವಸ್ಥಾಪನೆಯನ್ನು ಕೇಳಿ ಕೊಳ್ಳುತ್ತದೆ. ಉದಾಹರಣೆಗೆ, ಸಾಲವನ್ನು ಮಾಡದೇ ಹೆಚ್ಚಿನ ಜನರು ಮನೆಯೊಂದನ್ನು ಖರೀದಿಸಲು ಸಾಧ್ಯವಿಲ್ಲ. ಒಂದು ಮನೆಯನ್ನು ನಗದು ಹಣ ಕೊಟ್ಟು ತೆಗೆದು ಕೊಳ್ಳುವ ತನಕ, ಅಷ್ಟನ್ನು ಕೂಡಿಸಲು, ಕುಟುಂಬವೊಂದು ಬಾಡಿಗೆಯ ವಸತಿಯೊಂದರಲ್ಲಿ ನಿಲ್ಲ ತಕ್ಕದ್ದು ಎಂದೆಣಿಸುವುದು ಅವಾಸ್ತವಿಕವಾಗಿರ ಬಹುದು. ಅದು ಎಂದಿಗೂ ಪ್ರಾಯಶಃ ಆಗಲಿಕ್ಕಿಲ್ಲ. ಬದಲಿಗೆ, ಅವರು ತೆರುವ ಬಾಡಿಗೆಯ ಹಣವನ್ನು ಮನೆಯೊಂದರ ಅಡವಿನ ಸಾಲವನ್ನು ಸಂದಾಯಿಸಲು ಬಳಸಬಹುದು ಎಂದು ಪರಿವಾರವೊಂದು ಭಾವಿಸ ಬಹುದು. ಈ ಯೋಜನೆಗೆ ಹಲವಾರು ವರ್ಷಗಳು ತಗಲ ಬಹುದಾದರೂ, ಇದು ಅಧಿಕ ವ್ಯಾವಹಾರಿಕವೆಂದು ಅವರು ತೀರ್ಮಾನಿಸ ಬಹುದು;
ಸಮಯದೊಟ್ಟಿಗೆ ಮನೆಯ ಮೌಲ್ಯವು ಏರುವುದನ್ನು ಹೆಚ್ಚಿನಾಂಶ ನಾವು ಗಮನಿಸುವಾಗ, ಮಾಸಿಕ ಬಾಡಿಗೆಯ ಹಣಕ್ಕಿಂತಲೂ ಅಡವಿನ ತೆರುವಿಕೆಯು ಹೆಚ್ಚಾಗ ಬಹುದು, ಆದರೂ ಮನೆಯ ಮೌಲ್ಯದಲ್ಲಿ ಅದರ ವಿರುದ್ಧ ತೆರ ಬೇಕಾಗಿರುವ ಅಡವಿನ ಹಣ ಕಳೆದರೆ, ಆಗ ಒಂದು ಬಂಡವಾಳ ಸ್ವತ್ತನ್ನು ಅವರು ಸೃಷ್ಟಿಸುವುದರಿಂದ ಕುಟುಂಬವು ಒಳ್ಳೆಯದನ್ನು ಮಾಡುತ್ತಿರ ಬಹುದು, ಒಂದು ಸಮಂಜಸವಾದ ದರದಲ್ಲಿ, ನಿಭಾಯಿಸಲು ಶಕ್ಯವಾದ ಸಲುವಳಿಯೊಂದಿಗೆ ಮನೆ-ಅಡವು ಸಾಲವು ಒಂದು ಸ್ವೀಕಾರ್ಹವಾದ ಸಾಲವಾಗಿರ ಬಹುದು. ಅದೇ ರೀತಿ ಇತರ ದೊಡ್ಡ ಮೊತ್ತದ ಆವಶ್ಯಕ ಕೌಟುಂಬಿಕ ಖರೀದಿಗಳ ಕುರಿತೂ ಹೇಳ ಬಹುದು.
ಕೆಲವು ಸಾಲಗಳು ಖಂಡಿತವಾಗಿಯೂ ಅಸ್ವೀಕಾರ್ಹವಾದದ್ದಾಗಿರಬಹುದು. ಸಾಲ ವ್ಯವಸ್ಥಾಪನೆಯಲ್ಲಿ ಅವುಗಳನ್ನು ನಿರಾಕರಿಸುವ ಸಾಮರ್ಥ್ಯವೂ ಸೇರಿದೆ. ಪ್ರಾಯಶಃ ಅತ್ಯುತ್ತಮ ನಿಯಮವು: ನಿಮಗೆ ಆವಶ್ಯಕವಿಲ್ಲದ್ದು ಮತ್ತು ಅಸಾಮರ್ಥ್ಯವಾದದ್ದು ಖರೀದಿಸ ಬೇಡಿರಿ. ಮನಸ್ಸಿನ ಪ್ರಚೋದನೆಯ ಖರೀದಿಸುವಿಕೆಯನ್ನು ಹೋಗಲಾಡಿಸಿರಿ. ಯಾವುದೇ ಒಂದು ಅರ್ಧ ಕ್ರಯಕ್ಕೆ ಸಿಕ್ಕುವುದಾದರೂ, ನೀವು ಅಸಮರ್ಥರಿರುವುದಾದರೆ, ಅದು ನಿಮಗೆ ಅಗ್ಗದ್ದಲ್ಲ. ಸುಖಭೋಗ ವಸ್ತುಗಳಿಗಾಗಿ ಸಾಲ ಮಾಡಬೇಡಿರಿ. ನೀವು ಹೋಗುವ ಮುಂಚೆ ಕೊಡಲು ಸಾಧ್ಯವಿಲ್ಲದಿರುವುದಾದರೆ ರಜಾಪ್ರಯಾಣಗಳನ್ನು ಮಾಡ ಬೇಡಿರಿ. ನೀವೇನು ಖರೀದಿಸುತ್ತೀರೋ, ಬೇಗನೇ ಯಾ ತಡವಾಗಿ ತೆರಲಿಕ್ಕಿದೆ. ನಗದು ಹಣದ ಬದಲು ಉದ್ದರಿ ಕಾರ್ಡುಗಳನ್ನು ಕೊಂಡೊಯ್ಯುವುದು ಪ್ರಯೋಜನಕಾರೀ, ಆದರೆ ಹಣವನ್ನು ಸಾಲವಾಗಿ ತೆಗೆದು ಕೊಳ್ಳುವಾಗ ಅವು ತುಂಬಾ ದುಬಾರಿಯ ಅರ್ಥದಲ್ಲಿರುತ್ತವೆ.
ಸಾಲದಿಂದ ಹೊರಗೆ ಬರುವಿಕೆ
ಸಾಲದ ವ್ಯವಸ್ಥಾಪನೆಯ ಮೇಲಿನ ಹಿತವಾದ ತಮಗೆ ಬಹಳ ತಡವಾಯಿತು ಎಂದು ಕೆಲವರು ಭಾವಿಸಬಹುದು. ‘ನಾನೀಗಲೇ ತೆರ ಬೇಕಾದ ಬಿಲ್ಲುಗಳ ಮತ್ತು ಕಟ್ಟುಪಾಡಿನ ಭಾರೀ ಕುಸಿತದಡೀ ಬಿದ್ದಿದ್ದೇನೆ. ನಾನು ಅದರಿಂದ ಹೇಗೆ ಹೊರಗೆ ಬರಲಿ?’ ಆದರೆ ಅದನ್ನು ಆರಂಭಿಸಲು ಎಂದಿಗೂ ತಡವಾಗಿರುವುದಿಲ್ಲ.
ಒಂದು ಹೆಸರುವಾಸಿ ಬ್ಯಾಂಕ್‌ನೊಂದಿಗೆ ಒಂದು ಕ್ರಿಯಾತ್ಮಕ ಸಂಬಂಧವನ್ನು ಸ್ಥಾಪಿಸುವುದು ಇದರ ಮೊದಲ ಹೆಜ್ಜೆಯಾಗಿದೆ. ನಿಮಗೆ ಸಾಲ ಪಡೆಯಲೇ ಬೇಕಾದರೆ ಇಲ್ಲಿ ನಿಮಗೆ ಅತಿ ಯೋಗ್ಯವಾದ ಬಡ್ಡಿ ದರದಲ್ಲಿ ಸಿಗಬಹುದು. ನಿಮ್ಮ ಬ್ಯಾಂಕ್ ಸಾಲವೊಂದನ್ನು ನಿರಾಕರಿಸುವುದಾದರೆ, ಅದು ನಿಮಗೊಂದು ಪ್ರಾಯಶಃ ಒಳಿತನ್ನೇ ಮಾಡುತ್ತಿರಬಹುದು. ನೆನಪಿನಲ್ಲಿಡಿರಿ, ಹಣವನ್ನು ಕೊಡುವುದು ವ್ಯವಹಾರದ ಒಂದು ಭಾಗ ಮತ್ತು ಅದನ್ನು ನಿಮಗೆ ಕೊಡುವುದು ಸಮಂಜಸವೆಂದು ಎಣಿಸಲ್ಪಟ್ಟರೆ ನಿಮಗೆ ಕೊಡುವರು.
ಎರಡನೆಯದಾಗಿ, ಯಾವುದಾದರೊಂದು ಸಂಸ್ಥಾಪಿಸಲ್ಪಟ್ಟ ಕ್ರಮದಲ್ಲಿ ಸಾಲವನ್ನು ಹಿಂತಿರುಗಿಸಲು ನೀವು ಆರಂಭಿಸ ಬೇಕು. ಮುಂದಿನ 24 ತಿಂಗಳುಗಳಲ್ಲಿ ನಿಮ್ಮ ನಿರೀಕ್ಷಿತ ವೈಯಕ್ತಿಕ ನಗದು ಹಣ ಬರುವಿಕೆಯನ್ನು ಕಾಗದದ ಮೇಲೆ ನಮೂದಿಸಿರಿ. ವಾಸ್ತವಿಕತೆಯವರಾಗಿರ್ರಿ! ನಿಮಗೆ ಬರಲಿರುವ ನಿರೀಕ್ಷಿತ ಆದಾಯದ ಪ್ರತಿಯೊಂದನ್ನು ಸೇರಿಸಿರಿ. ಆನಂತರ ನೀವು ಕೊಡಬೇಕಾದದ್ದು ಎಲ್ಲಾವನ್ನು ಪಟ್ಟಿ ಮಾಡಿರಿ. ಈಗಲೇ ನೀವು ಎಣಿಸಲಾಗದಂತಹ ಸಂಗತಿಗಳಿಗೂ ಕೆಲವೊಂದನ್ನು ತೆಗೆದಿಡುವ ಏರ್ಪಾಡು ಮಾಡಿರಿ. ಸಾಲಗಳನ್ನು ಆದ್ಯತೆಯ ಕ್ರಮದಲ್ಲಿ ಪಟ್ಟಿ ಮಾಡಿರಿ. ಅನಂತರ ಪ್ರತಿಯೊಂದು ಸಾಲವು ಸ್ವಲ್ಪವಾದರೂ ಮರುಪಾವತಿ ಪಡೆಯುವಂತಹ ಒಂದು ಯೋಗ್ಯ ಹಂಚುವಿಕೆಯ ಅನುಪಾತದಲ್ಲಿ ನಿಮ್ಮ ಹಣವನ್ನು ವಿಂಗಡಿಸಿರಿ. ಪ್ರತಿಯೊಂದು ಸಾಲವನ್ನು ಕೊಟ್ಟು ತೀರಿಸುವ ಒಂದು ದಿನವನ್ನು ನಿಗದಿ ಪಡಿಸಿರಿ.
ಈ ಯೋಜನೆಯೊಟ್ಟಿಗೆ, ನಿಮ್ಮ ಖರ್ಚನ್ನು ಎಲ್ಲಿ ಕಡಿಮೆಗೊಳಿಸ ಸಾಧ್ಯವಿದೆ ಎಂದು ಪರಿಗಣಿಸಿರಿ. ಸಾಲ ಕಡಿಮೆಗೊಳಿಸುವುದು ಕೆಲವು ತ್ಯಾಗಗಳನ್ನು ಕೇಳಿಕೊಳ್ಳುತ್ತದೆ. ಅಗ್ಗ ದರದಲ್ಲಿ ಖರೀದಿಮಾಡುವುದರಿಂದ ಕಿರಾಣಿ ಸಾಮಾನುಗಳ ಬಿಲ್ಲನ್ನು ಕಡಿತಗೊಳಿಸ ಬಹುದೋ? ಊಟದ ಯೋಜನೆಯಲ್ಲಿ ಕಡಿಮೆ ಕ್ರಯದ್ದನ್ನು ಬದಲೀಯಾಗಿ ಬಳಸ ಬಹುದೋ? ರಜಾಪ್ರಯಾಣಗಳನ್ನು ಕತ್ತರಿಸ ಬಹುದೋ? ನಿಮ್ಮ ಜೀವನ ಮಟ್ಟವನ್ನು ಕೆಳಕ್ಕೆ ತರಬಹುದೇ? ಕೆಲವು ಸುಖಭೋಗ ವಸ್ತುಗಳನ್ನು ಸ್ವಲ್ಪ ಕಡಿಮೆ ಉಪಯೋಗಿಸ ಬಹುದೋ? ಕೆಲವೊಮ್ಮೆ ನಾವು ನಮ್ಮ ಕುರಿತಾಗಿಯೇ ನಿಷ್ಠುರತೆಯಿಂದ ನಡಿಸಿಕೊಳ್ಳ ಬೇಕಾದೀತು. ಕೆಲವು ನಿರ್ದಿಷ್ಟ ವೆಚ್ಚಗಳನ್ನು “ಆವಶ್ಯಕತೆ” ಅಂಕಣದಿಂದ “ಸುಖಭೋಗ ವಸ್ತುಗಳ” ಅಂಕಣಕ್ಕೆ ವರ್ಗಾಯಿಸ ಬೇಕಾದೀತು.
ಒಮ್ಮೆ ನಿಮ್ಮ ಯೋಜನೆಯು ಕಾಗದದ ಮೇಲೆ ಬರೆದಾದ ಮೇಲೆ, ಅದನ್ನು ನಿಮ್ಮ ಬ್ಯಾಂಕಿನ ಸಾಲದ ಅಧಿಕಾರಿಯೊಡನೆ ಚರ್ಚಿಸಿರಿ. ನೀವು ನಿಜವಾಗಿ ಕಾರ್ಯಮಾಡಲು ಇಚ್ಛಿಸಿದ್ದೀರಿ ಎಂದು ಅವನು ನೋಡುವುದರಿಂದ ಅವನು ಪ್ರಭಾವಿತನಾಗುವನು. ಯೋಜನೆಯನ್ನು ಇನ್ನಷ್ಟು ಪ್ರಗತಿಮಾಡುವುದು ಹೇಗೆ ಎಂದೂ ಅವನು ನಿಮಗೆ ತೋರಿಸ ಶಕ್ತನಾಗಬಹುದು. ಅವನು ಒಂದು ಋಣ ಸಮುಚ್ಛಯ ಸಾಲವೊಂದನ್ನು ಕೂಡಾ ಸೂಚಿಸಬಹುದು. ಹಾಗಿರುವುದಾದರೆ, ಬಡ್ಡಿ ದರವನ್ನೂ, ಸಮುಚ್ಛಯ ಸಾಲ ಹಿಂತಿರುಗಿಸಲು ಇರುವ ಸಮಯಾವಧಿಯನ್ನು ಖಚಿತ ಮಾಡಿಕೊಳ್ಳಿರಿ. ಸಾಮಾನ್ಯವಾಗಿ ದೀರ್ಘ ಅವಧಿಯ ತನಕ ಚಿಕ್ಕ ಮೊತ್ತದ ಮರುಪಾವತಿ ಮಾಡುವ ಅರ್ಥದಲ್ಲಿರುತ್ತದೆ. ಆದರೆ ಸಮುಚ್ಛಯ ಸಾಲದಿಂದ ಹೆಚ್ಚು ಹಣ ಪಡೆದು ಬಳಸುವಂತಹ ಶೋಧನೆಗೆ ಬೀಳದಿರ್ರಿ.
ಸಂಸರ್ಗವಿಡಿರಿ!
ಯಾವುದೇ ಸಾಲ—ಕಡಿತ ಕಾರ್ಯಕ್ರಮವು ಯಶಸ್ವೀಯಾಗ ಬೇಕಾದರೆ ಸಂಸರ್ಗವಿಡುವುದು ಅಗತ್ಯ. ಯಾರಿಗೆ ನೀವು ಹಣ ಕೊಡಲಿಕ್ಕಿದೆಯೋ ಅವರಲ್ಲಿ ಪ್ರತಿಯೊಬ್ಬನನ್ನು ಸಂದರ್ಶಿಸಿರಿ ಇಲ್ಲವೇ ಟೆಲಿಪೋನ್ ಮಾಡಿರಿ. ನಿಮ್ಮ ಯೋಜನೆಯನ್ನು ತೋರಿಸುವುದರಿಂದ ಸಹಾಯವಾಗುವುದಾದರೆ, ಅದನ್ನು ಅವರಿಗೆ ತೋರಿಸಿರಿ. ಕಡಿಮೆ ಪಕ್ಷ ಅವರೊಡನೆ ಮಾತಾಡಿರಿ. ನೀವೇನು ಮಾಡಲಿದ್ದೀರಿ ತಿಳಿಯಲು ಅವರು ಬಯಸುತ್ತಾರೆಂಬುದನ್ನು ನೆನಪಿನಲ್ಲಿಡಿರಿ. ಅವರಿಗೆ ತಿಳಿಸುತ್ತಾ ಇರ್ರಿ. ಯಾವನೇ ಸಾಲ ಕೊಟ್ಟವನು ಸಹಿಸದೇ ಇರುವ ಒಂದು ಸಂಗತಿ ಅಂದರೆ ಮೌನ. ಮೌನವನ್ನು ಸಾಲ ಹಿಂತಿರುಗಿಸಲು ಇರುವ ಉಪೇಕ್ಷೆ ಯಾ ನಿರಾಕರಣೆ ಎಂದು ಅರ್ಥೈಸಬಹುದು. ಏನು ಸಂಭವಿಸುತ್ತಾ ಇದೆ ಎಂದು ಕೇವಲ ವಿವರಿಸಲು ಯಾರೇ ಅಷ್ಟೊಂದು ತಾಪತ್ರಯ ತೆಗೆದು ಕೊಳ್ಳದೇ ಇದ್ದುದರಿಂದ ಅನೇಕ ಸಾಲ ಕೊಟ್ಟವರು ಹಣ ವಸೂಲಿ ಮಾಡಲು ಮೊಕದ್ದಮೆಯನ್ನು ಆರಂಭಿಸಿರುತ್ತಾರೆ.
ನೀವು ದಿವಾಳಿತನವನ್ನು ಪರಿಗಣಿಸ ಬೇಕೋ? ಕೆಲವೊಂದು ದೇಶಗಳಲ್ಲಿ ಕಾನೂನಿಗನುಸಾರವಾಗಿ ಎಲ್ಲಾ ಜನರು ಅಂತಹ ಏರ್ಪಾಡಿನ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ, ಆದರೂ ಅದನ್ನು ಹಗುರವಾಗಿ ತೆಗೆದು ಕೊಳ್ಳ ಬಾರದು. ಸಾಲವು ಒಂದು ಕಟ್ಟುಪಾಡಾಗಿದೆ. ನೈತಿಕ ಹಂಗುಗಳು ಅದರಲ್ಲಿ ಒಳಗೂಡಿವೆ. ದಿವಾಳಿತನವು ಕಿರುದೆರೆಗಳೋಪಾದಿ ಇತರರಿಗೆ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ನಿಮ್ಮ ದಾಖಲೆಯ ಒಂದು ಕಲೆಯಾಗಿ ಯಾವಾಗಲೂ ಉಳಿಯುತ್ತದೆ.
ಹಳೆಯ ಶೈಲಿಯ ‘ಹೋಗುತ್ತಿರುವಾಗಲೇ ಸಾಲ ತೀರಿಸುತ್ತಾ ಹೋಗಿ’ ಎಂಬ ಒಂದು ಕಲ್ಪನೆಯಲ್ಲಿ ಯಾವುದೇ ತಪ್ಪಿಲ್ಲ. ಖಂಡಿತವಾಗಿಯೂ, ಸಾಧ್ಯವಿರುವುದಾದರೆ, ಮೊದಲ ಹಂತದಲ್ಲಿಯೇ, ಸಾಲದ ಒಳಗೆ ಸಿಲುಕದಂತೆ ನೋಡಿ ಕೊಳ್ಳುವುದೇ ಅತಿ ವಿವೇಕದ ಮಾರ್ಗವಾಗಿದೆ. ಸಾಲವು ಮಾರಕವಾದ ಕಳ್ಳುಸುಬಿನಂತಿದ್ದು, ನಿಮ್ಮನ್ನು ಅದು ದಹಿಸುತ್ತದೆ. ರಿಕ್ ಮತ್ತು ಲೊಯಿಸ್ ಅದರಿಂದ ಕಬಳಿಸಲ್ಪಡುವಂತೆ ಸ್ವತಃ ತಮ್ಮನ್ನು ಒಡ್ಡಿಕೊಂಡರು. ಅವರು ಬದಲಾವಣೆಗಳನ್ನು ಮಾಡಬೇಕಿತ್ತು, ಆದರೆ ಅವರ ಸಾಲಗಳಿಂದ ಹೊರಗೆ ಬರಲು ಹೆಜ್ಜೆಹೆಜ್ಜೆಯಾಗಿ ಅವರು ಮೇಲಕ್ಕೆ ಬರಬೇಕಾಗಿತ್ತು.
ನೀವು ಒಂದು ವಾಸ್ತವಿಕ ಭೂಕುಸಿತದ ಕೆಳಗೆ ಹೂತಿಡಲ್ಪಟ್ಟರೆ, ನಿಮಗಿರುವ ಯಾವುದೇ ಚಲನೆಯಿಂದ ನೀವು ಸ್ವತಃ ಹೊರ ಬರಲು ಅಗೆಯಲಾರಂಭಿಸುವಿರಿ. ಅದು ನಿಧಾನವಾಗಿರ ಬಹುದು, ಆದರೆ ಅದು ಕಾರ್ಯವೆಸಗುತ್ತದೆ! ಅದನ್ನು ಮಾಡಲು ಎಷ್ಟೇ ಸಮಯ ತೆಗೆದುಕೊಳ್ಳಲಿ, ಯಾ ಅದನ್ನು ಮಾಡಲು ಎಷ್ಟೇ ಕಷ್ಟವಾಗಲಿ, ಸಾಲದಿಂದ ಹೊರಗೆ ಬರುವಿಕೆಯು ಮೌಲ್ಯತೆಯದ್ದಾಗಿದೆ. (g90 2/8)
[ಪುಟ 23 ರಲ್ಲಿರುವಚಿತ್ರ]
ಅಧಿಕತಮ ಸಾಲದೊಳಗೆ ಮುಳುಗುವುದೆಂದರೆ ಕಳ್ಳುಸುಬಿನಲ್ಲಿ ಕಬಳಿಸಲ್ಪಡುವುದಕ್ಕೆ ಸಮಾನವಾಗಿದೆ