ಒಂದು ಉತ್ತಮ ಜೀವನವು ವಾಗ್ದಾನಿಸಲ್ಪಟ್ಟಿದೆ
ಜೀವನವನ್ನು ಕಷ್ಟಕರವನ್ನಾಗಿ ಮಾಡುವಂತಹ ಸಮಸ್ಯೆಗಳಿಂದ ನೀವು ಮುಕ್ತಾರಾಗಿರಲು ಇಷ್ಟಪಡುವಿರೋ? ಎಲ್ಲಿ ಜೀವನವು, ಈ ಪತ್ರಿಕೆಯ ಮುಂದಿನ ಮತ್ತು ಹಿಂದಿನ ಆವರಣಗಳಲ್ಲಿ ವರ್ಣಿಸಲ್ಪಟ್ಟಂತಹ ದೃಶ್ಯದಲ್ಲಿರುವಷ್ಟು ಉಲ್ಲಾಸಮಯವಾಗಿರುವುದೊ, ಆ ಒಂದು ಲೋಕದಲ್ಲಿ ನೀವು ಜೀವಿಸಲು ಬಯಸುತ್ತೀರೋ? ಆ ಚಿತ್ರವನ್ನು ಸರಿಯಾಗಿ ನೋಡಿರಿ. ಜನರಿಗೆ ತಿನ್ನಲು ಬೇಕಾದಷ್ಟಿದೆ. ಅವರು ಆ ರುಚಿಕರ ಆಹಾರವನ್ನು ನಿಜವಾಗಿಯೂ ಅನುಭೋಗಿಸುವರು. ಪ್ರತಿಯೊಬ್ಬರೂ ಸಂತೋಷದಿಂದಿದ್ದಾರೆ. ವಿಭಿನ್ನ ಜಾತಿಗಳ ಜನರು ಒಬ್ಬರು ಇನ್ನೊಬ್ಬರೊಂದಿಗೆ ಶಾಂತಿಯಿಂದಿದ್ದಾರೆ. ಪ್ರಾಣಿಗಳೂ ಸಮಾಧಾನದಿಂದಿವೆ! ಯಾವನೂ ಜಗಳವಾಡುತ್ತಿಲ್ಲ. ಯಾವನೂ ಬಡವನಾಗಿಲ್ಲ. ಯಾವನೂ ಅಸ್ವಸ್ಥನಾಗಿಲ್ಲ. ಸೊಗಸಾದ ಪರಿಸರಗಳು, ಅಂದವಾದ ಮರಗಳು ಮತ್ತು ಶುದ್ಧ, ಸ್ವಚ್ಛ ನೀರು ಅಲ್ಲಿದೆ. ಎಂತಹ ಒಂದು ಅತ್ಯುತ್ಕೃಷವ್ಟಾದ ಸನ್ನಿವೇಶ!
ಈ ಭೂಮಿಯು ಎಂದಾದರೂ ಹಾಗಿರುವುದೋ? ಹೌದು, ಅದು ಒಂದು ಪ್ರಮೋದವನವಾಗಲಿರುವುದು. (ಲೂಕ 23:43) ಭೂಮಿಯನ್ನು ಸೃಷ್ಟಿಸಿದ ದೇವರು, ಮಾನವರು ಒಂದು ಪ್ರಮೋದವನ ಭೂಮಿಯ ಮೇಲೆ ಒಂದು ಉತ್ತಮ ಜೀವನವನ್ನು ಅನುಭವಿಸಬೇಕೆಂದು ಉದ್ದೇಶಿಸಿದ್ದಾನೆ. ಮತ್ತು ನೀವು ಅಲ್ಲಿರಸಾಧ್ಯವಿದೆ!
ಯಾವ ಜೀವನವನ್ನು ನೀವು ಇಷ್ಟಪಡುವಿರಿ?
ಭವಿಷ್ಯತ್ತಿನ ಭೂಪ್ರಮೋದವನವು ನಾವು ಈಗ ಜೀವಿಸುತ್ತಿರುವ ಲೋಕದಿಂದ ಹೇಗೆ ಭಿನ್ನವಾಗಿರುವುದು? ಪ್ರಸ್ತುತದಲ್ಲಿ, ಪ್ರತಿ ದಿನ 100 ಕೋಟಿಗಿಂತಲೂ ಹೆಚ್ಚು ಜನರು ಹಸಿವೆಯಿಂದಿರುತ್ತಾರೆ. ಆದರೆ ಭೂಮಿಗಾಗಿ ದೇವರು ಉದ್ದೇಶಿಸಿರುವ ಪ್ರಮೋದವನದಲ್ಲಿ, ಎಲ್ಲರಿಗೂ ತಿನ್ನಲು ಬೇಕಾದುಷ್ಟಿರುವುದು. ಬೈಬಲ್ ವಾಗ್ದಾನಿಸುವುದು: “ಸೇನಾಧೀಶ್ವರನಾದ ಯೆಹೋವನು . . . ಸಾರವತಾದ್ತ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಆಣಿಮಾಡುವನು.” (ಯೆಶಾಯ 25:6) ಆಹಾರದ ಅಭಾವವಿರದು, ಯಾಕಂದರೆ ಬೈಬಲ್ ಹೇಳುವುದು: “ಭೂಮಿಯ ಮೇಲೆ ಹೇರಳವಾಗಿ ಧಾನ್ಯವು ದೊರೆಯುವುದು; ಬೆಟ್ಟಗಳ ಮೇಲೆಲ್ಲಾ ಬೆಳೆಯು ತುಂಬಿ ಹರಿಯುವುದು.”—ಕೀರ್ತನೆ 72:16, NW.
ಇಂದು, ಅನೇಕರು ಗುಡಿಸಿಲುಗಳು ಮತ್ತು ಜೋಪಡಿ ಪಟ್ಟಣಗಳಲ್ಲಿ ಜೀವಿಸುತ್ತಾರೆ, ಅಥವಾ ಅವರು ತಮ್ಮ ಬಾಡಿಗೆಯನ್ನು ತೆರಲು ಹೆಣಗಾಡುತ್ತಾರೆ. ಇತರರು ಮನೆಯಿಲ್ಲದೆ, ಬೀದಿಯಲ್ಲಿ ಮಲಗುತ್ತಾರೆ. ಲೋಕಾರೋಗ್ಯ ಸಂಸ್ಥೆಗನುಸಾರ, ಲೋಕದ ಮಕ್ಕಳಲ್ಲಿ ಹತ್ತು ಕೋಟಿಯಷ್ಟು ಮಕ್ಕಳು ಮನೆರಹಿತರಾಗಿದ್ದಾರೆ. ಆದರೆ ಬರಲಿರುವ ಪ್ರಮೋದವನದಲ್ಲಿ, ತನ್ನದೆಂದು ಕರೆಯಬಹುದಾದ ಒಂದು ಮನೆ ಪ್ರತಿಯೊಬ್ಬನಿಗಿರುವುದು. ದೇವರ ವಾಕ್ಯವು ಹೇಳುವುದು: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು.”—ಯೆಶಾಯ 65:21.
ಅನೇಕರು ತಾವು ಇಷ್ಟಪಡದಂತಹ ಉದ್ಯೋಗಗಳಲ್ಲಿ ದುಡಿಯುತ್ತಾರೆ. ಅನೇಕ ಸಲ ಅವರು ದಿನಕ್ಕೆ ಅನೇಕ ತಾಸುಗಳ ವರೆಗೆ ಮತ್ತು ಕಠಿನವಾಗಿ ಕೆಲಸಮಾಡುತ್ತಾರೆ, ಆದರೆ ತುಂಬ ಕಡಿಮೆ ಸಂಪಾದಿಸುತ್ತಾರೆ. ಲೋಕದಲ್ಲಿ ಪ್ರತಿ 5 ಜನರಲ್ಲಿ ಒಬ್ಬನು, ಪ್ರತಿ ವರ್ಷ 500 ಡಾಲರುಗಳಿಗಿಂತ ಕಡಿಮೆಯಾಗಿರುವ ಆದಾಯದ ಮೇಲೆ ಜೀವಿಸುತ್ತಾನೆ. ಆದಾಗಲೂ, ಬರಲಿರುವ ಪ್ರಮೋದವನದಲ್ಲಿ ಜನರು ತಮ್ಮ ಕೆಲಸದಲ್ಲಿ ಆನಂದಿಸುವರು ಮತ್ತು ಅದರಿಂದ ಬರುವ ಒಳ್ಳೆಯ ಫಲಿತಾಂಶಗಳನ್ನು ಕಾಣುವರು. ದೇವರು ವಾಗ್ದಾನಿಸುವುದು: “ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು.”—ಯೆಶಾಯ 65:22, 23.
ಈಗ ಅಸ್ವಸ್ಥತೆ ಮತ್ತು ರೋಗವು ಎಲ್ಲೆಲ್ಲಿಯೂ ಇದೆ. ಅನೇಕರು ಕುರುಡರಾಗಿದ್ದಾರೆ. ಕೆಲವರು ಕಿವುಡರಾಗಿದ್ದಾರೆ. ಇತರರು ನಡೆಯಲಾರರು. ಆದರೆ ಪ್ರಮೋದವನದಲ್ಲಿ, ಜನರು ಅಸ್ವಸ್ಥತೆ ಮತ್ತು ರೋಗದಿಂದ ಮುಕ್ತರಾಗಿರುವರು. ಯೆಹೋವನು ಹೇಳುವುದು: “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24) ಈಗಾಗಲೇ ಅಂಗವಿಕಲರಾಗಿರುವವರಿಗಾದರೊ, ಹೃದಯೋಲ್ಲಾಸಗೊಳಿಸುವ ವಾಗ್ದಾನವು ಇದಾಗಿದೆ: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.”—ಯೆಶಾಯ 35:5, 6.
ಸದ್ಯದ ಸಮಯದಲ್ಲಿ, ಕಷ್ಟಾನುಭವ ಮತ್ತು ವೇದನೆ, ದುಃಖ ಮತ್ತು ಮರಣ ಇದೆ. ಆದರೆ ಭೂಮಿಯ ಮೇಲಿನ ಪ್ರಮೋದವನದಲ್ಲಿ, ಈ ಎಲ್ಲಾ ಸಂಗತಿಗಳು ಅಸ್ತಿತ್ವದಲ್ಲಿರವು. ಹೌದು, ಮರಣವೂ ಇಲ್ಲವಾಗುವುದು! ಬೈಬಲ್ ಹೇಳುವುದು: “ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4.
ಹಾಗಾದರೆ, ಸ್ಪಷ್ಟವಾಗಿಗಿ ಯೆಹೋವನ ವಾಗ್ದಾನಿತ ಭೂಪ್ರಮೋದವನವು ಮಾನವ ಕುಲಕ್ಕಾಗಿ ಒಂದು ಉತ್ತಮ ಜೀವಿತದ ಅರ್ಥದಲ್ಲಿರುವುದು. ಆದರೆ ಅದು ಬರುವುದೆಂದು ನಾವು ಹೇಗೆ ನಿಶ್ಚಿತರಾಗಿರಸಾಧ್ಯ? ಅದು ಯಾವಾಗ ಬರುವುದು, ಮತ್ತು ಹೇಗೆ? ನೀವು ಅಲ್ಲಿರಲು ಏನು ಮಾಡತಕ್ಕದ್ದು?