ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 11/15 ಪು. 4-7
  • ಒಂದು ಉತ್ತಮ ಜೀವನ—ಶೀಘ್ರದಲ್ಲೇ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಂದು ಉತ್ತಮ ಜೀವನ—ಶೀಘ್ರದಲ್ಲೇ!
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಒಂದು ಉತ್ತಮ ಜೀವನ—ಯಾವಾಗ?
  • ಒಂದು ಉತ್ತಮ ಜೀವನ—ಹೇಗೆ?
  • ನೀವು ಮಾಡಬೇಕಾದ ಸಂಗತಿ
  • ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೊ?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೇವರ ಉದ್ದೇಶವು ಬೇಗನೆ ಕೈಗೂಡಲಿದೆ
    ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?
  • ಪರದೈಸ್‌ ಯಾವಾಗ ಬರುವುದು?
    ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
  • “ಪರದೈಸಲ್ಲಿ ಸಿಗೋಣ!”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಇನ್ನಷ್ಟು
ಕಾವಲಿನಬುರುಜು—1995
w95 11/15 ಪು. 4-7

ಒಂದು ಉತ್ತಮ ಜೀವನ—ಶೀಘ್ರದಲ್ಲೇ!

ಯಾರ ಭವಿಷ್ಯನುಡಿಗಳು ಬಹುಮಟ್ಟಿಗೆ ಯಾವಾಗಲೂ ಸತ್ಯವಾಗುತ್ತವೊ, ಆ ಒಬ್ಬ ಹವಾಮಾನ ಮುನ್‌ಸೂಚಕನ ಕುರಿತಾಗಿ ಊಹಿಸಿಕೊಳ್ಳಿರಿ. ಮರುದಿನ ಮಳೆಬರುವುದೆಂದು ಅವನು ಸಂಜೆಯ ವಾರ್ತೆಯಲ್ಲಿ ಭವಿಷ್ಯನುಡಿದರೆ, ಮರುದಿನ ಬೆಳಗ್ಗೆ ನೀವು ಮನೆಯಿಂದ ಹೊರಡುವಾಗ ನಿಮ್ಮ ಕೊಡೆಯನ್ನು ನಿಮ್ಮ ಜೊತೆ ಕೊಂಡೊಯ್ಯಲು ನೀವು ಹಿಂಜರಿಯುವುದಿಲ್ಲ. ಅವನ ಗತ ಚರಿತ್ರೆಯು ನಿಮ್ಮ ಭರವಸೆಯನ್ನು ಗಳಿಸಿದೆ. ಅವನು ಹೇಳುವ ಪ್ರಕಾರ ನೀವು ಕ್ರಿಯೆಕೈಗೊಳ್ಳುತ್ತೀರಿ.

ಈಗ, ಒಂದು ಪ್ರಮೋದವನ ಭೂಮಿಯ ಮೇಲೆ ಒಂದು ಉತ್ತಮ ಜೀವನದ ಕುರಿತಾದ ಯೆಹೋವನ ವಾಗ್ದಾನವು ಎಷ್ಟು ಭರವಸಾರ್ಹವಾಗಿದೆ? ಒಳ್ಳೇದು, ಆತನ ಗತ ಚರಿತ್ರೆಯು ಏನನ್ನು ಸೂಚಿಸುತ್ತದೆ? ಬೈಬಲ್‌ ಪ್ರವಾದನೆಗಳ ನೆರವೇರಿಕೆಯು ಯೆಹೋವನ ಚರಿತ್ರೆಯನ್ನು ಸ್ಪಷ್ಟವಾಗಿಗಿ ಸ್ಥಾಪಿಸುತ್ತದೆ. ಆತನು ವಿಫಲವಾಗದ ನಿಷ್ಕೃಷ್ಟತೆ ಮತ್ತು ಸತ್ಯತೆಯ ಒಬ್ಬ ದೇವರಾಗಿದ್ದಾನೆ. (ಯೆಹೋಶುವ 23:14; ಯೆಶಾಯ 55:11) ಯೆಹೋವ ದೇವರ ವಾಗ್ದಾನಗಳು ಎಷ್ಟು ಭರವಸಾರ್ಹವಾಗಿವೆಯೆಂದರೆ, ಆತನು ವಾಗ್ದಾನಿಸಲ್ಪಟ್ಟ ಭವಿಷ್ಯತ್ತಿನ ಘಟನೆಗಳ ಕುರಿತಾಗಿ ಅವು ಈಗಾಗಲೇ ಸಂಭವಿಸಿವೆಯೊ ಎಂಬಂತೆ ಮಾತಾಡುತ್ತಾನೆ. ಉದಾಹರಣೆಗಾಗಿ, ಯಾವುದರಲ್ಲಿ ಮರಣ ಮತ್ತು ಶೋಕವು ಇರದೋ, ಆ ಒಂದು ಹೊಸ ಲೋಕದ ವಾಗ್ದಾನವನ್ನು ಹಿಂಬಾಲಿಸಿ, ನಾವು ಓದುವುದು: “ಅವು [ವಾಗ್ದಾನಿಸಲ್ಪಟ್ಟ ಆಶೀರ್ವಾದಗಳು] ಸಂಭವಿಸಿವೆ!” ಬೇರೆ ಮಾತುಗಳಲ್ಲಿ ಹೇಳುವುದಾದರೆ, “ಅವು ಒಂದು ವಾಸ್ತವಾಂಶವಾಗಿವೆ!”—ಪ್ರಕಟನೆ 21:5, 6, NW ಪಾದಟಿಪ್ಪಣಿ ಸಹ ನೋಡಿ.

ಹೌದು, ಯೆಹೋವನ ಗತ ವಾಗ್ದಾನಗಳ ನೆರವೇರಿಕೆಯು, ಮಾನವ ಕುಲಕ್ಕಾಗಿ ಒಂದು ಉತ್ತಮ ಜೀವಿತದ ಕುರಿತಾದ ಆತನ ವಾಗ್ದಾನದ ವಾಸ್ತವಿಕತೆಯಲ್ಲಿ ನಮಗೆ ಭರವಸೆಯನ್ನು ಕೊಡುತ್ತದೆ. ಆದರೆ ಈ ಉತ್ತಮ ಜೀವನವು ಯಾವಾಗ ಬರುವುದು?

ಒಂದು ಉತ್ತಮ ಜೀವನ—ಯಾವಾಗ?

ಒಂದು ಹೆಚ್ಚು ಉತ್ತಮ ಜೀವನವು ಬೇಗನೆ ಬರಲಿದೆ! ಪ್ರಮೋದವನವು ಒಂದು ಉತ್ತಮ ಜೀವನವನ್ನು ಒಳತರುವ ಮುಂಚೆ, ಭೂಮಿಯ ಮೇಲೆ ಅನೇಕ ಕೆಟ್ಟ ಸಂಗತಿಗಳು ಸಂಭವಿಸುವವೆಂದು ಬೈಬಲು ಹೇಳುವುದರಿಂದ ನಾವು ಅದರ ಕುರಿತಾಗಿ ನಿಶ್ಚಿತರಾಗಿರಬಲ್ಲೆವು. ಆ ಕೆಟ್ಟ ಸಂಗತಿಗಳು ಈಗ ಸಂಭವಿಸುತ್ತಿವೆ.

ಉದಾಹರಣೆಗಾಗಿ, ಭಾರಿ ಯುದ್ಧಗಳು ಇರುವವು ಎಂದು ಯೇಸು ಕ್ರಿಸ್ತನು ಮುಂತಿಳಿಸಿದನು. ಆತನಂದದ್ದು: “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.” (ಮತ್ತಾಯ 24:7) ಈ ಪ್ರವಾದನೆಯು ಸತ್ಯವಾಗಿ ಪರಿಣಮಿಸಿದೆ. 1914ರಿಂದ 1945ರ ವರ್ಷಗಳ ಸಮಯದಲ್ಲಿ ಎರಡು ಜಾಗತಿಕ ಯುದ್ಧಗಳು ನಡೆದವು, ಮತ್ತು ಜನಾಂಗಗಳು ಒಂದು ಇನ್ನೊಂದರೊಂದಿಗೆ ಹೋರಾಡಿರುವ ಇತರ ಅಸಂಖ್ಯಾತ ಯುದ್ಧಗಳಿಂದ ಅವು ಹಿಂಬಾಲಿಸಲ್ಪಟ್ಟಿವೆ. “ಒಂದು ಸರಾಸರಿ ವಾರ್ಷಿಕ ಮಟ್ಟದ ಮೇಲೆ, ಈ ಅವಧಿಯಲ್ಲಿನ [IIನೇ ಜಾಗತಿಕ ಯುದ್ಧದಂದಿನಿಂದ] ಯುದ್ಧ ಮರಣಗಳ ಸಂಖ್ಯೆಯು, 19ನೇ ಶತಮಾನದಲ್ಲಿನ ಮರಣಗಳಿಗಿಂತ ಇಮ್ಮಡಿಯಾಗಿದ್ದು, 18ನೇ ಶತಮಾನದಲ್ಲಿನ ಮರಣಗಳಿಗಿಂತ ಏಳು ಪಟ್ಟು ಹೆಚ್ಚಾಗಿರುತ್ತದೆ.”—ವರ್ಲ್ಡ್‌ ಮಿಲಿಟರಿ ಆ್ಯಂಡ್‌ ಸೋಷಲ್‌ ಎಕ್ಸ್‌ಪೆಂಡಿಚರ್ಸ್‌ 1993.

ರೋಗದ ಹರಡುವಿಕೆಯು, ಪ್ರಮೋದವನದಲ್ಲಿ ಒಂದು ಉತ್ತಮ ಜೀವನದ ಸಮೀಪಿಸುವಿಕೆಯ ಮತ್ತೊಂದು ಸಾಕ್ಷ್ಯವಾಗಿದೆ. ‘ಅಲ್ಲಲ್ಲಿ ಉಪದ್ರವಗಳು [“ಅಂಟುರೋಗಗಳು,” NW] ಬರುವವು’ ಎಂದು ಯೇಸು ಮುಂತಿಳಿಸಿದ್ದನು. (ಲೂಕ 21:11) ಈ ಪ್ರವಾದನೆಯು ನಿಜವಾಗಿ ಪರಿಣಮಿಸಿದೆಯೋ? ಹೌದು. ಪ್ರಥಮ ಜಾಗತಿಕ ಯುದ್ಧದ ನಂತರ, ಸ್ಪ್ಯಾನಿಷ್‌ ಫ್ಲೂ ಎರಡು ಕೋಟಿಗಿಂತ ಹೆಚ್ಚು ಜನರನ್ನು ಕೊಂದಿತು. ಅಂದಿನಿಂದ, ಕ್ಯಾನ್ಸರ್‌, ಹೃದ್ರೋಗ, ಮಲೇರಿಯಾ, ಏಯ್ಡ್ಸ್‌, ಮತ್ತು ಇತರ ಅಸ್ವಸ್ಥತೆಗಳು ಲಕ್ಷಗಟ್ಟಲೆ ಜನರನ್ನು ಕೊಂದಿವೆ. ವರ್ಧಿಷ್ಣು ದೇಶಗಳಲ್ಲಿ, ಕಲುಷಿತಗೊಂಡ ನೀರಿನಿಂದ ಫಲಿಸುವ ರೋಗಗಳು (ಅತಿಬೇಧಿ ಮತ್ತು ಕರುಳಿನ ಜಂತುವಿನ ಸೋಂಕು ಸೇರಿ) ಪ್ರತಿ ವರ್ಷ ಲಕ್ಷಗಟ್ಟಲೆ ಜೀವಗಳನ್ನು ಬಲಿತೆಗೆದುಕೊಳ್ಳುತ್ತವೆ.

ಯೇಸು ಮತ್ತೂ ಹೇಳಿದ್ದು: “ಬರಗಳು ಬರುವವು.” (ಮತ್ತಾಯ 24:7) ಹಿಂದಿನ ಲೇಖನದಲ್ಲಿ ಗಮನಿಸಲ್ಪಟ್ಟಂತೆ, ಲೋಕದ ಬಡವರಿಗೆ ತಿನ್ನಲು ಸಾಕಷ್ಟಿರುವುದಿಲ್ಲ. ಬೇಗನೇ ಬರಲಿರುವ ಪ್ರಮೋದವನದಲ್ಲಿ ಒಂದು ಹೆಚ್ಚು ಉತ್ತಮ ಜೀವನದ ಸಾಕ್ಷ್ಯದ ಇನ್ನೊಂದು ಭಾಗವು ಇದಾಗಿರುತ್ತದೆ.

“ಮಹಾಭೂಕಂಪಗಳಾಗುವವು,” ಎಂದು ಯೇಸು ಹೇಳಿದನು. (ಲೂಕ 21:11) ಇದು ಕೂಡ ನಮ್ಮ ಸಮಯದಲ್ಲಿ ನಿಜವಾಗಿದೆ. 1914ರಿಂದ ಧ್ವಂಸಕಾರಿ ಭೂಕಂಪಗಳಿಂದಾದ ವಿನಾಶವು ಸಾವಿರಾರು ಜೀವಗಳನ್ನು ಬಲಿತೆಗೆದುಕೊಂಡಿದೆ.

“ಕಡೇ ದಿವಸ”ಗಳು ಜನರಲ್ಲಿ ಒಂದು ಬದಲಾವಣೆಯಿಂದ ಗುರುತಿಸಲ್ಪಡುವವೆಂದು ಬೈಬಲು ಮುಂದೆ ತಿಳಿಸುತ್ತದೆ. ಅವರು “ಸ್ವಾರ್ಥಚಿಂತಕರೂ ಹಣದಾಸೆಯವರೂ” ಆಗಿರುವರು ಮತ್ತು ಮಕ್ಕಳು “ಹೆತ್ತವರಿಗೆ ಅವಿಧೇಯ”ರಾಗಿರುವರು. ಸಾಮಾನ್ಯವಾಗಿ ಜನರು “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವ”ರಾಗಿರುವರು. (2 ತಿಮೊಥೆಯ 3:1-5) ಈ ವರ್ಣನೆಯನ್ನು ಅನೇಕರು ಹೋಲುತ್ತಾರೆಂದು ನೀವು ಒಪ್ಪುವುದಿಲ್ಲವೋ?

ಹೆಚ್ಚೆಚ್ಚು ಜನರು ಕೆಟ್ಟ ಸಂಗತಿಗಳನ್ನು ಆಚರಿಸಿದಂತೆ, ನಿಯಮರಾಹಿತ್ಯದಲ್ಲಿ ಒಂದು ವೃದ್ಧಿಯಿರುತ್ತದೆ. ಇದೂ ಮುಂತಿಳಿಸಲ್ಪಟ್ಟಿತು. ಮತ್ತಾಯ 24:12ಕ್ಕನುಸಾರವಾಗಿ, ಯೇಸು ‘ಅಧರ್ಮದ ಹೆಚ್ಚಾಗುವಿಕೆಯ’ ಕುರಿತಾಗಿ ಮಾತಾಡಿದನು. ವರ್ಷಗಳ ಹಿಂದೆ ಇದ್ದದ್ದಕ್ಕಿಂತಲೂ ಈಗ ಪಾತಕವು ಹೆಚ್ಚು ಕೆಟ್ಟದ್ದಾಗಿದೆಯೆಂದು ನೀವು ಪ್ರಾಯಶಃ ಒಪ್ಪುವಿರಿ. ಎಲ್ಲಾ ಕಡೆಗಳಲ್ಲಿಯೂ ಜನರು, ತಾವು ಯಾವುದೋ ರೀತಿಯಲ್ಲಿ ಕದಿಯಲ್ಪಡುವೆವು, ಮೋಸಮಾಡಲ್ಪಡುವೆವು, ಅಥವಾ ಹಾನಿಮಾಡಲ್ಪಡುವೆವು ಎಂಬ ಭಯದಿಂದಿದ್ದಾರೆ.

ಯುದ್ಧಗಳು, ವ್ಯಾಪಕವಾದ ರೋಗ, ಆಹಾರದ ಅಭಾವಗಳು, ಭೂಕಂಪಗಳು, ಹೆಚ್ಚುತ್ತಿರುವ ಪಾತಕ, ಮತ್ತು ಮಾನವ ಸಂಬಂಧಗಳಲ್ಲಿ ಕೆಟ್ಟದಾದ್ದ ಬದಲಾವಣೆ—ಇವೆಲ್ಲವೂ ಬೈಬಲು ಮುಂತಿಳಿಸಿದಂತೆಯೇ ಇಂದು ವ್ಯಕ್ತವಾಗಿವೆ. ‘ಆದರೆ ಈ ಎಲ್ಲಾ ಸಂಗತಿಗಳು ಮಾನವ ಇತಿಹಾಸದಾದ್ಯಂತ ಸಂಭವಿಸಿಲ್ಲವೇ? ನಮ್ಮ ದಿನದ ಕುರಿತಾಗಿ ಏನು ಭಿನ್ನವಾಗಿದೆ?’ ಎಂದು ನೀವು ಕೇಳಬಹುದು.

ಇಂದು ಏನು ಸಂಭವಿಸುತ್ತಿದೆಯೊ ಅದರ ಕುರಿತಾಗಿ ಅತಿಶಯವಾಗಿ ಪ್ರಾಮುಖ್ಯವಾಗಿರುವ ಕೆಲವು ಅಂಶಗಳಿವೆ. ಆಹಾರದ ಅಭಾವಗಳಂತೆ, ಯಾವುದೇ ಒಂದು ವೈಶಿಷ್ಟ್ಯವು ತಾನೇ, ನಾವು ಅಂತ್ಯದ ಸಮಯದಲ್ಲಿ ಜೀವಿಸುತ್ತಿದ್ದೇವೆ ಮತ್ತು ಒಂದು ಉತ್ತಮ ಜೀವನವು ಸಮೀಪವಿದೆಯೆಂಬ ರುಜುವಾತಾಗಿರುವುದೆಂದು ಬೈಬಲ್‌ ಹೇಳುವುದಿಲ್ಲ. ಅಂತ್ಯದ ಕುರಿತಾದ ಬೈಬಲ್‌ ಪ್ರವಾದನೆಗಳು ದೈವಭಕ್ತಿಯಿಲ್ಲದ ಒಂದು ಸಂತತಿಯ ಮೇಲೆ ನೇರವೇರಲಿದ್ದವು.—ಮತ್ತಾಯ 24:34-39; ಲೂಕ 17:26, 27.

ಇನ್ನೂ ಹೆಚ್ಚಾಗಿ, ವಿಶೇಷವಾಗಿ ಆಹಾರದ ಅಭಾವಗಳು ಮತ್ತು ವ್ಯಾಪಕವಾದ ರೋಗಗಳ ಕುರಿತಾದ ಯೇಸುವಿನ ಪ್ರವಾದನೆಯ ಕೆಲವು ವೈಶಿಷ್ಟ್ಯಗಳು ಇಂದು ನಿಜವಾಗಿ ಪರಿಣಮಿಸುತ್ತಿರುವುದು ಬಹುಮಟ್ಟಿಗೆ ಅಸಾಮಾನ್ಯವಾಗಿದೆ. ಯಾಕೆ? ಯಾಕಂದರೆ ಹಿಂದೆಂದೂ ವೈಜ್ಞಾನಿಕ ಸಾಧನೆಗಳು ಇಷ್ಟೊಂದು ಮಹತ್ತಾಗಿರಲಿಲ್ಲ. ವೈದ್ಯಕೀಯ ಜ್ಞಾನ ಮತ್ತು ಚಿಕಿತ್ಸೆಯ ವಿಧಾನಗಳು ಹಿಂದೆಂದೂ ಇಷ್ಟೊಂದು ಮುಂದುವರಿದಿರಲಿಲ್ಲ ಅಥವಾ ವ್ಯಾಪಕವಾಗಿರಲಿಲ್ಲ. ಇಂತಹ ಒಂದು ಸಮಯದಲ್ಲಿ ರೋಗ ಮತ್ತು ಬರಗಾಲವು ಉತ್ತಮವಾಗದೆ, ಹೆಚ್ಚು ಕೆಡುವುದೆಂದು ಕೇವಲ ದೇವರು ತನ್ನ ವಾಕ್ಯವಾದ ಬೈಬಲಿನಲ್ಲಿ ಮುಂತಿಳಿಸಸಾಧ್ಯವಿತ್ತು.

ಅಂತ್ಯದ ಸಮಯ, ಅಥವಾ “ಕಡೇ ದಿವಸಗಳ” ಕುರಿತಾದ ಎಲ್ಲಾ ಬೈಬಲ್‌ ಪ್ರವಾದನೆಗಳು ನಿಜವಾಗುತ್ತಿರುವುದರಿಂದ, ನಾವು ಯಾವ ತೀರ್ಮಾನಕ್ಕೆ ಬರಸಾಧ್ಯವಿದೆ? ಒಂದು ಉತ್ತಮ ಜೀವನವು ಸಮೀಪವಿದೆ ಎಂಬ ತೀರ್ಮಾನಕ್ಕೇ! ಆದರೆ ಅದು ಹೇಗೆ ಬರಲಿರುವುದು?

ಒಂದು ಉತ್ತಮ ಜೀವನ—ಹೇಗೆ?

ಮಾನವರು ಪ್ರಮೋದವನವನ್ನು ತರಬಲ್ಲರೆಂದು ನೀವು ನೆನಸುತ್ತೀರೊ? ಇತಿಹಾಸದಾದ್ಯಂತ, ಈ ದಿನದ ವರೆಗೆ ಅನೇಕ ವಿಧಗಳ ಮಾನವ ಸರಕಾರಗಳು ಬಂದಿವೆ. ಕೆಲವು, ಜನರ ಅಗತ್ಯಗಳನ್ನು ತೃಪ್ತಿಪಡಿಸಲು ತುಂಬಾ ಕಠಿನವಾಗಿ ಪ್ರಯತ್ನಿಸಿವೆ. ಆದರೂ, ಅನೇಕ ಸಮಸ್ಯೆಗಳು ಹೆಚ್ಚು ಕೆಡುತ್ತಾ ಇವೆ. ಶ್ರೀಮಂತ ರಾಷ್ಟ್ರಗಳಲ್ಲೂ, ಬಡ ದೇಶಗಳಲ್ಲೂ, ಸರಕಾರಗಳು ಅಮಲೌಷಧದ ದುರುಪಯೋಗ, ನ್ಯೂನ ವಸತಿ, ಬಡತನ, ಪಾತಕ, ನಿರುದ್ಯೋಗ ಮತ್ತು ಯುದ್ಧಾಚರಣೆಯೊಂದಿಗೆ ಹೆಣಗಾಡುತ್ತವೆ.

ಈ ಸಮಸ್ಯೆಗಳಲ್ಲಿ ಕೆಲವನ್ನು ಸರಕಾರಗಳು ಬಗೆಹರಿಸಲು ಸಾಧ್ಯವಿರುವುದಾದರೂ, ಅನಾರೋಗ್ಯದಿಂದ ಅವರು ಎಂದೂ ಸಂಪೂರ್ಣ ಸ್ವಾತಂತ್ರ್ಯವನ್ನು ಒದಗಿಸಲು ಸಾಧ್ಯವಿಲ್ಲ; ಇಲ್ಲವೇ ಅವರು ವೃದ್ಧಾಪ್ಯ ಮತ್ತು ಮರಣಕ್ಕೂ ಒಂದು ಅಂತ್ಯವನ್ನು ಹಾಕಸಾಧ್ಯವಿಲ್ಲ. ಸ್ಪಷ್ಟವಾಗಿಗಿ, ಮಾನವರು ಈ ಭೂಮಿಗೆ ಎಂದೂ ಪ್ರಮೋದವನವನ್ನು ತರಲಾರರು.

ಬೈಬಲ್‌ ವಿವೇಕಯುತವಾಗಿ ಹೇಳುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡಶಕ್ತನಲ್ಲ.” ಹಾಗಾದರೆ ನಾವು ನಮ್ಮ ಭರವಸೆಯನ್ನು ಯಾರಲ್ಲಿ ಇಡಬೇಕು? ಬೈಬಲ್‌ ಉತ್ತರಿಸುವುದು: “ಯಾವನಿಗೆ ಯಾಕೋಬನ ದೇವರು ಸಹಾಯಕನೋ ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು.” (ಕೀರ್ತನೆ 146:3, 5) ನಾವು ನಮ್ಮ ನಿರೀಕ್ಷೆಯನ್ನು ಯೆಹೋವ ದೇವರಲ್ಲಿ ಇಡುವಲ್ಲಿ, ನಾವೆಂದೂ ನಿರಾಶರಾಗೆವು.

ಭೂಮಿ, ಸೂರ್ಯ ಮತ್ತು ನಕ್ಷತ್ರಗಳನ್ನು ಸೃಷ್ಟಿಸಲು ಬೇಕಾದ ವಿವೇಕ ಮತ್ತು ಶಕಿಯ್ತಿರುವವನು, ನಿಶ್ಚಯವಾಗಿ ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ಮಾಡಲೂ ಸಾಧ್ಯವಿದೆ. ಒಂದು ಉತ್ತಮ ಜೀವನವನ್ನು ಅನುಭೋಗಿಸುವಂತೆ ಅವನು ಮಾನವರನ್ನು ಶಕ್ತರನ್ನಾಗಿ ಮಾಡಬಲ್ಲನು. ಯೆಹೋವ ದೇವರು, ಮಾಡಲು ಉದ್ದೇಶಿಸುವ ಯಾವುದೇ ಸಂಗತಿಯನ್ನು ಪೂರೈಸಬಲ್ಲನು ಮತ್ತು ಪೂರೈಸುವನು. ಆತನ ವಾಕ್ಯವು ಹೇಳುವುದು: “ದೇವರಿಂದ ಬರುವ ಯಾವ ಮಾತಾದರೂ ನಿಷ್ಫಲವಾಗುವದಿಲ್ಲ.” (ಲೂಕ 1:37) ಆದರೆ ದೇವರು ಒಂದು ಉತ್ತಮ ಜೀವನವನ್ನು ಹೇಗೆ ತರುವನು?

ತನ್ನ ರಾಜ್ಯದ ಮೂಲಕ ಯೆಹೋವನು ಮಾನವ ಕುಲಕ್ಕಾಗಿ ಹೆಚ್ಚು ಉತ್ತಮವಾದ ಒಂದು ಜೀವನವನ್ನು ತರುವನು. ಮತ್ತು ದೇವರ ರಾಜ್ಯವು ಏನಾಗಿದೆ? ಅದು, ಒಬ್ಬ ದೇವ-ನೇಮಿತ ಅಧಿಕಾರಿಯು—ಯೇಸು ಕ್ರಿಸ್ತನು—ಇರುವ ಒಂದು ನಿಜ ಸರಕಾರವಾಗಿದೆ. ದೇವರ ರಾಜ್ಯವು ಸ್ವರ್ಗದಲ್ಲಿದೆ, ಆದರೆ ಅದು ಬೇಗನೇ ಪ್ರಮೋದವನ ಭೂಮಿಯ ನಿವಾಸಿಗಳಿಗೆ ಅದ್ಭುತಕರ ಆಶೀರ್ವಾದಗಳನ್ನೂ ಹೆಚ್ಚು ಉತ್ತಮವಾದ ಒಂದು ಜೀವನವನ್ನೂ ತರಲಿರುವುದು.—ಯೆಶಾಯ 9:6, 7.

ಮತ್ತಾಯ 6:9-13ರಲ್ಲಿ ಕಂಡುಬರುವ ಯೇಸುವಿನ ಮಾದರಿ ಪ್ರಾರ್ಥನೆಯೊಂದಿಗೆ ನೀವು ಈಗಾಗಲೇ ಪರಿಚಿತರಾಗಿರಬಹುದು. ದೇವರಿಗೆ ಬೇಡುವ ಆ ಪ್ರಾರ್ಥನೆಯ ಒಂದು ಭಾಗವು ಹೇಳುವುದು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” ಆ ಪ್ರಾರ್ಥನೆಗೆ ಹೊಂದಿಕೆಯಲ್ಲಿ, ಭೂಮಿಗಾಗಿರುವ ಯೆಹೋವ ದೇವರ ಉದ್ದೇಶವನ್ನು ನೆರವೇರಿಸಲು ದೇವರ ರಾಜ್ಯವು ‘ಬರುವುದು.’ ಮತ್ತು ಈ ಭೂಮಿಯು ಒಂದು ಪ್ರಮೋದವನವಾಗಬೇಕೆಂಬುದು ಆತನ ಉದ್ದೇಶವಾಗಿದೆ.

ಒಂದು ಕೊನೆಯ ಪ್ರಶ್ನೆ ಏಳುತ್ತದೆ: ಬರಲಿರುವ ಪ್ರಮೋದವನದಲ್ಲಿ ಒಂದು ಉತ್ತಮ ಜೀವನವನ್ನು ಅನುಭೋಗಿಸಲು ನೀವು ಏನು ಮಾಡತಕ್ಕದ್ದು?

ನೀವು ಮಾಡಬೇಕಾದ ಸಂಗತಿ

ತನ್ನ ಚಿತ್ತವನ್ನು ಮಾಡುವವರೆಲ್ಲರಿಗೆ ಯೆಹೋವ ದೇವರು ಪ್ರೀತಿಯಿಂದ, ಪ್ರಮೋದವನದಲ್ಲಿ ಒಂದು ಉತ್ತಮ ಜೀವನದ ಪ್ರತೀಕ್ಷೆಯನ್ನು ನೀಡುತ್ತಾನೆ. ಬೈಬಲ್‌ ನಮಗನ್ನುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ಆದರೆ ದೇವರ ದೃಷ್ಟಿಯಲ್ಲಿ ಯಾವುದು ಒಬ್ಬ ವ್ಯಕ್ತಿಯನ್ನು ನೀತಿವಂತನನ್ನಾಗಿ ಮಾಡುತ್ತದೆ?

ಯೆಹೋವನನ್ನು ಮೆಚ್ಚಿಸಲಿಕ್ಕಾಗಿ, ನಾವೇನು ಮಾಡಬೇಕೆಂದು ಆತನು ಬಯಸುತ್ತಾನೋ, ಅದರ ಕುರಿತಾಗಿ ನಾವು ಹೆಚ್ಚನ್ನು ಕಲಿಯುವ ಅಗತ್ಯವಿದೆ. ದೇವರ ಕುರಿತಾದ ಜ್ಞಾನವನ್ನು ನಾವು ತೆಗೆದುಕೊಂಡು, ಅದನ್ನು ನಮ್ಮ ಜೀವಿತದಲ್ಲಿ ಅನ್ವಯಿಸುವಲ್ಲಿ, ನಾವು ಸದಾಕಾಲ ಜೀವಿಸಬಲ್ಲೆವು. ದೇವರಿಗೆ ಮಾಡಿದ ಪ್ರಾರ್ಥನೆಯಲ್ಲಿ, ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.

ಯೆಹೋವ ದೇವರು ಮತ್ತು ಯೇಸು ಕ್ರಿಸ್ತನ ಕುರಿತಾಗಿ ನಮಗೆ ತಿಳಿಸುವಂತಹ ಪುಸ್ತಕವು, ದೇವರ ವಾಕ್ಯವಾದ ಬೈಬಲ್‌ ಆಗಿದೆ. ಅದು ಯೆಹೋವನ ಅತ್ಯಮೂಲ್ಯ ಕೊಡುಗೆಗಳಲ್ಲಿ ಒಂದಾಗಿದೆ. ಬೈಬಲ್‌, ತನ್ನ ಮಕ್ಕಳಿಗೆ ಒಬ್ಬ ಪ್ರೀತಿಯ ತಂದೆಯಿಂದ ಬರುವ ಒಂದು ಪತ್ರದಂತಿದೆ. ಮಾನವ ಕುಲಕ್ಕಾಗಿ ಒಂದು ಉತ್ತಮ ಜೀವನವನ್ನು ತರುವ ದೇವರ ವಾಗ್ದಾನದ ಕುರಿತಾಗಿ ಅದು ನಮಗೆ ತಿಳಿಸುತ್ತದೆ ಮತ್ತು ನಾವು ಅದನ್ನು ಹೇಗೆ ಗಳಿಸಬಹುದೆಂಬುದನ್ನು ಅದು ನಮಗೆ ತೋರಿಸುತ್ತದೆ. ದೇವರು ಗತಕಾಲದಲ್ಲಿ ಏನನ್ನು ಮಾಡಿದ್ದಾನೆ ಮತ್ತು ಭವಿಷ್ಯತ್ತಿನಲ್ಲಿ ಅವನು ಏನು ಮಾಡುವನು ಎಂಬುದನ್ನು ಬೈಬಲ್‌ ನಮಗೆ ತಿಳಿಯಪಡಿಸುತ್ತದೆ. ಇಂದು ನಮ್ಮ ಸಮಸ್ಯೆಗಳೊಂದಿಗೆ ನಾವು ಸಾಫಲ್ಯಯುಕ್ತವಾಗಿ ವ್ಯವಹರಿಸುವ ವಿಧದ ಕುರಿತಾಗಿ ಅದು ನಮಗೆ ವ್ಯಾವಹಾರಿಕ ಸಲಹೆಯನ್ನೂ ಕೊಡುತ್ತದೆ. ಖಂಡಿತವಾಗಿಯೂ, ಈ ತೊಂದರೆಭರಿತ ಲೋಕದಲ್ಲೂ ಸ್ವಲ್ಪ ಮಟ್ಟಿಗಿನ ಸಂತೋಷವನ್ನು ನಾವು ಕಂಡುಕೊಳ್ಳುವ ವಿಧವನ್ನು ದೇವರ ವಾಕ್ಯವು ನಮಗೆ ಕಲಿಸುತ್ತದೆ.—2 ತಿಮೊಥೆಯ 3:16, 17.

ಯೆಹೋವನ ಸಾಕ್ಷಿಗಳು ನಿಮಗಾಗಿ ಒಂದು ಉಚಿತ ಮನೆ ಬೈಬಲಭ್ಯಾಸವನ್ನು ಸಂತೋಷದಿಂದ ಏರ್ಪಡಿಸುವರು. ಹತ್ತಿರದ ಭವಿಷ್ಯತ್ತಿನಲ್ಲಿ ಒಂದು ಹೆಚ್ಚು ಉತ್ತಮವಾದ ಜೀವನದ ಪ್ರತೀಕ್ಷೆಯೊಂದಿಗೆ, ಈಗ ಒಂದು ಹೆಚ್ಚು ಸಂತೋಷದ ಜೀವನವನ್ನು ನೀವು ಹೊಂದಸಾಧ್ಯವಿರುವ ವಿಧದ ಕುರಿತಾಗಿ ಕಲಿಯಿರಿ.

[ಪುಟ 5 ರಲ್ಲಿರುವ ಚಿತ್ರ]

ಒಂದು ಉತ್ತಮ ಜೀವನವು ನಿಕಟವಿದೆಯೆಂದು ಬೈಬಲ್‌ ಪ್ರವಾದನೆಗಳು ಸೂಚಿಸುತ್ತವೆ

[ಪುಟ 7 ರಲ್ಲಿರುವ ಚಿತ್ರ]

ದೇವರ ರಾಜ್ಯವು ಮಾನವ ಕುಲಕ್ಕಾಗಿ ಒಂದು ಉತ್ತಮ ಜೀವನವನ್ನು ಒಳತರುವುದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ