“ಸಮತೆಯಿಲ್ಲದ ನೊಗ ಹೊತ್ತವರಾಗಬೇಡಿರಿ”
ಇಲ್ಲಿ ಚಿತ್ರಿಸಲ್ಪಟ್ಟಿರುವ ಎರಡು ಎತ್ತುಗಳಿಗೆ ಅಪರಿಮಿತ ಬಲವಿದೆ; ಭಾರವಾದ ಹೊರೆಗಳನ್ನು ಸುಲಭವಾಗಿ ಎಳೆಯುವಂತೆ ಇದು ಅವುಗಳಿಗೆ ಸಾಧ್ಯಮಾಡುತ್ತದೆ. ಆದರೆ ಎತ್ತುಗಳಲ್ಲಿ ಒಂದರ ಬದಲಿಗೆ ಒಂದು ಕತ್ತೆಯನ್ನಿಡಲಾಗುತ್ತದೆಂದು ಊಹಿಸಿರಿ. ಒಂದು ಎತ್ತಿಗಿಂತ ಒಂದು ಕತ್ತೆಯು ಚಿಕ್ಕದೂ, ದುರ್ಬಲವೂ ಆಗಿರುವುದರಿಂದ, ಈ ಅಸಮತೆಯ ನೇಗಿಲಿನಲ್ಲಿ ತಮ್ಮನ್ನು ಹಿಡಿದಿಡುವ ಎಳೆಪಟ್ಟಿಗಳನ್ನು ಒದೆಯುವ ಮೂಲಕ ಅದು ಪ್ರತಿಭಟಿಸಬಹುದು. ಹೀಗಿರುವುದರಿಂದ, ಸಕಾರಣದಿಂದಲೇ, ಇಸ್ರಾಯೇಲಿಗೆ ದೇವರ ನಿಯಮವು ತಿಳಿಸಿದ್ದು: “ಎತ್ತನ್ನೂ ಕತ್ತೆಯನ್ನೂ ಜೊತೆಮಾಡಿ ನೇಗಿಲಿಗೆ ಕಟ್ಟಬಾರದು.”—ಧರ್ಮೋಪದೇಶಕಾಂಡ 22:10.
ಮನುಷ್ಯರ ಕುರಿತಾಗಿ ಅಪೊಸ್ತಲ ಪೌಲನು ತದ್ರೀತಿಯ ಒಂದು ವಿಷಯವನ್ನು ಬರೆದನು. ಅವನು ಹೇಳಿದ್ದು: “ಅವಿಶ್ವಾಸಿಗಳೊಂದಿಗೆ ಸಮತೆಯಿಲ್ಲದ ನೊಗ ಹೊತ್ತವರಾಗಬೇಡಿರಿ.” (2 ಕೊರಿಂಥ 6:14, NW) ಒಬ್ಬ ವಿವಾಹ ಸಂಗಾತಿಯನ್ನು ಆರಿಸುವಾಗ ಇದನ್ನು ವಿಶೇಷವಾಗಿ ಮನಸ್ಸಿನಲ್ಲಿಡತಕ್ಕದ್ದು. ಮದುವೆಯು ಒಂದು ಚಿರಸ್ಥಾಯಿ ಸಾಂಗತ್ಯವಾಗಿದೆ, ಯಾಕಂದರೆ ಯೇಸು ಹೇಳಿದ್ದು: “ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.” (ಮತ್ತಾಯ 19:6) ಒಬ್ಬ ವಿವಾಹಿತ ದಂಪತಿಗಳು, ನಂಬಿಕೆಗಳು, ಸೂತ್ರಗಳು ಮತ್ತು ಗುರಿಗಳನ್ನು ಹಂಚಿಕೊಳ್ಳದಿರುವಾಗ ತುಂಬಾ ಹೃದಯವೇದನೆಯು ಪರಿಣಮಿಸುತ್ತದೆ. ಆದುದರಿಂದ, “ಕರ್ತನಲ್ಲಿ ಮಾತ್ರವೇ” ವಿವಾಹವಾಗುವ ಬೈಬಲಿನ ಪ್ರಬೋಧನೆಯನ್ನು ಅನುಸರಿಸುವುದು ಸಮಂಜಸವೇ ಆಗಿದೆ. (1 ಕೊರಿಂಥ 7:39, NW) ನಿಮ್ಮ ಧಾರ್ಮಿಕ ನಂಬಿಕೆಯಲ್ಲಿ ಪಾಲಿಗರಾಗದ ಇನ್ನೊಬ್ಬರೊಂದಿಗೆ ವಿವಾಹವಾಗುವುದು, ಒಂದು ಎತ್ತಿನೊಂದಿಗೆ ಕತ್ತೆಯನ್ನು ಜೋಡಿಸುವುದಕ್ಕಿಂತ ಹೆಚ್ಚು ದೊಡ್ಡದಾದ ಸಮಸ್ಯೆಯನ್ನು ಪ್ರಸ್ತುತಪಡಿಸುವುದು.
ಧಾರ್ಮಿಕ ನಂಬಿಕೆಯಲ್ಲಿನ ವ್ಯತ್ಯಾಸವು, ಒಬ್ಬ ದಂಪತಿಗಳು ಸಮತೆಯಿಲ್ಲದ ನೊಗಹೊತ್ತವರಾಗುವಂತೆ ಮಾಡಸಾಧ್ಯವಿರುವ ಅಂಶಗಳಲ್ಲಿ ಕೇವಲ ಒಂದಾಗಿದೆ. ಭಾವೀ ಸಂಗಾತಿಗಳು—ಒಂದೇ ನಂಬಿಕೆಯವರೂ—ಹೀಗೆ ಕೇಳಿಕೊಳ್ಳುವುದು ಹಿತಕರ, ‘ನಾವು ಒಂದೇ ರೀತಿಯ ಗುರಿಗಳನ್ನು ಹಂಚಿಕೊಳ್ಳುತ್ತೇವೊ? ನಾವು ಎಲ್ಲಿ ಜೀವಿಸುವೆವು? ಆಯವ್ಯಯವನ್ನು ಯಾರು ನಿರ್ವಹಿಸುವರು? ನಾವಿಬ್ಬರೂ ಕೆಲಸಕ್ಕೆ ಹೋಗುವೆವೊ? ನಾವು ಒಂದು ಕುಟುಂಬವನ್ನು ಹೊಂದುವೆವೊ? ನಮ್ಮ ವಿವಾಹ ಸಂಬಂಧವನ್ನು ದಯೆ ಮತ್ತು ಪರಿಗಣನೆಯು ನಡೆಸುವುದೊ?’
ಸ್ವಲ್ಪ ಮಟ್ಟಿಗೆ, ಅಂತಹ ವಾದಾಂಶಗಳು ಚರ್ಚಿಸಲ್ಪಡುವ ವಿಧವು, ಒಂದು ನೇಗಿಲು ಸಮತೆಯದ್ದಾಗಿರುವುದೋ ಸಮತೆಯಿಲ್ಲದ್ದಾಗಿರುವುದೋ ಎಂಬುದನ್ನು ಸೂಚಿಸಬಲ್ಲದು. ನಿಶ್ಚಯವಾಗಿಯೂ, ಯಾರೇ ಇಬ್ಬರು ವ್ಯಕ್ತಿಗಳು ಸಂಪೂರ್ಣವಾಗಿ ಅನುರೂಪವಾಗಿರುವುದಿಲ್ಲ. ಆದಾಗಲೂ, ಸಾಮಾನ್ಯವಾಗಿ, ಪ್ರಣಯಾಸಕ್ತವಾಗಿರುವ ಒಂದು ಜೊತೆಯು, ಸಮಸ್ಯೆಗಳನ್ನು ಜೊತೆಯಾಗಿ ಎದುರಿಸಿ, ಬಗೆಹರಿಸಸಾಧ್ಯವಿರುವದಾದರೆ ಮತ್ತು ಅವರು ಒಬ್ಬರೊಡನೊಬ್ಬರು ಸರಾಗವಾಗಿ ಸಂಸರ್ಗ ಮಾಡಲು ಸಾಧ್ಯವಿರುವಲ್ಲಿ, ಅವರು ಸಮತೆಯಿಲ್ಲದ ನೊಗ ಹೊತ್ತವರಾಗಲಾರರು ಎಂಬುದು ಸಂಭವನೀಯ.